ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/08/2020

By blogger on ಗುರುವಾರ, ಆಗಸ್ಟ್ 13, 2020

 



                                    ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/08/2020 

                                                                                                                                

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 66/2020 ಕಲಂ 78(3) ಕೆ.ಪಿ ಆ್ಯಕ್ಟ್ 1963 : ಇಂದು ದಿನಾಂಕ;11/08/2020 ರಂದು 5-45 ಪಿಎಮ್ ಕ್ಕೆ ಶ್ರೀ ಕೃಷ್ಣ ಸುಬೇದಾರ  ಪಿ.ಎಸ್.ಐ(ಅ.ವಿ) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.11/08/2020 ರಂದು 2-00 ಪಿಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ  ವಾಲ್ಮೀಕಿ ನಗರ ಏರಿಯಾದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬನು ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.66/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 78/2020 279, 304(ಎ) ಐಪಿಸಿ ಸಂ. 187 ಐ.ಎಮ್.ವ್ಹಿಕಾಯೆ : ದಿನಾಂಕ:11/08/2020 ರಂದುಮದ್ಯಾಹ್ನ 01.30ಗಂಟೆಯ ಸುಮಾರಿಗೆ ಮೃತನುತನ್ನಸೈಕಲ್ ಮೇಲೆ ತನ್ನ ಗೆಳೆಯನಾದ ಲಕ್ಷ್ಮಣತಂದೆ ಶಿವಪ್ಪ ಹೂವಿನಹಳ್ಳಿ ಸಾ:ಕಾಮನಟಗಿಈತನಿಗೆ ಕೂಡಿಸಿಕೊಂಡು ಬಲಶೆಟ್ಟಿಹಾಳದಿಂದ ಕಾಮನಟಗಿಕಡೆಗೆಯಮನೂರಪ್ಪಗುಡಿಯ ಸಮೀಪ ರಸ್ತೆಯ ಮೇಲೆ ಹೊರಟಾಗಕಾಮನಟಗಿಕಡೆಯಿಂದ ಬಲಶೆಟ್ಟಿಹಾಳ ಕಡೆಗೆ ಲಾರಿ ನಂ: ಕೆಎ-39-7803 ನೇದ್ದರ ಚಾಲಕನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದುಅದೇ ವೇಗದಲ್ಲಿ ಮೃತನು ಹೊರಟ ಸೈಕಲ್ಗೆಜೋರಾಗಿಡಿಕ್ಕಿಕೊಟ್ಟಿದ್ದರಿಂದ ಮೃತನು ಲಾರಿ ಬಲಗಡೆ ಹಿಂದಿನ ಗಾಲಿಗೆ ಸಿಕ್ಕು ತಲೆಯ ಮೇಲೆ & ಬೆನ್ನಿನ ಮೇಲೆ ಲಾರಿ ಗಾಲಿ ಹೋಗಿ ತಲೆಗೆ& ಬೆನ್ನಿಗೆ ಹೊಟ್ಟೆಗೆ&ಎಡಗೈಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆರೋಪಿತನು ಲಾರಿಯನ್ನುಅಲ್ಲಿಯೇ ಬಿಟ್ಟು ಓಡಿ ಹೋದ ಬಗ್ಗೆ ಅಪರಾಧ


ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 28/2020 ಕಲಂ: 107 ಸಿ.ಆರ್.ಪಿ.ಸಿ : ಇಂದು ದಿನಾಂಕಃ 11/08/2020 ರಂದು 6-30 ಪಿ.ಎಮ್ ಕ್ಕೆ ಶ್ರೀ ಭಾಗಣ್ಣ, ಎ.ಎಸ್.ಐ  ಸುರಪೂರ ಪೊಲೀಸ ಠಾಣೆ ರವರು ಠಾಣೆಗೆ ಬಂದು ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ಹಳ್ಳಿ ಭೇಟಿ ಕುರಿತು 4-15 ಪಿ.ಎಮ್ ಕ್ಕೆ ರತ್ತಾಳ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ಗಸ್ತು ಮಾಡಿ ಪ್ರಮುಖ ನಾಗರೀಕ ಸಮೀತಿ ಸದಸ್ಯರಿಗೆ ಹಾಗು ಪೊಲೀಸ್ ಬಾತ್ಮಿದಾರರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೆನೆಂದರೆ, ರತ್ತಾಳ ಗ್ರಾಮದ ಸಿಮಾಂತರದಲ್ಲಿರುವ ಹೊಲ ಸವರ್ೆ ನಂಬರ 48/1 2 ಎಕರೆ 2 ಗುಂಟೆ ಜಮೀನಿನ ಸಂಬಂಧ ರತ್ತಾಳ ಗ್ರಾಮದ ಹಣಮಂತ ತಂದೆ ರಗಪ್ಪ ವಾರಿ ಹಾಗು ಅಯ್ಯಮ್ಮ ಗಂಡ ಯಲ್ಲಪ್ಪ ತೇಲಗರ ಇವರ ಮದ್ಯೆ ತಕರಾರು ನಡೆದಿದ್ದು, ಸದರಿ ಜಮೀನ ಸಂಬಂಧ ಎರಡು ಪಾಟರ್ಿಯವರ ಮದ್ಯೆ ಗಾಢವಾದ ದ್ವೇಷ ಬೆಳೆದು ಪರಸ್ಪರ ನಾ ಮೇಲು, ತಾ ಮೇಲು ಅನ್ನುತ್ತ ಗ್ರಾಮದಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ 1) ಹಣಮಂತ ತಂದೆ ರಗಪ್ಪ ವಾರಿ ವಯಃ 60 ವರ್ಷ ಜಾತಿಃ ಗೊಲ್ಲ ಉಃ ಕುರಿಕಾಯುವದು ಹಾಗು 2) ಸೋಮಯ್ಯ ತಂದೆ ಭೀಮರಾಯ ವಾರಿ ವಯಃ 70 ವರ್ಷ ಜಾತಿಃ ಗೊಲ್ಲ ಉಃ ಒಕ್ಕಲುತನ 3) ನಿಂಗಪ್ಪ ತಂದೆ ಹಣಮಂತ ವಾರಿ ವಯಃ 35 ವರ್ಷ ಜಾತಿಃ ಗೊಲ್ಲ ಉಃ ಕುರಿ ಕಾಯುವದು, 4) ತಿಮ್ಮಯ್ಯ ತಂದೆ ಭೀಮರಾಯ ದೊಡ್ಡಮನಿ ವಯಃ 35 ವರ್ಷ ಜಾತಿಃ ಗೊಲ್ಲ ಉಃ ಒಕ್ಕಲುತನ, ಎಲ್ಲರೂ ಸಾ: ರತ್ತಾಳ ತಾ: ಸುರಪೂರ ಜಿಲ್ಲೆ: ಯಾದಗಿರಿ ಇವರೆಲ್ಲರೂ ಅಯ್ಯಮ್ಮ ಗಂಡ ಯಲ್ಲಪ್ಪ ತೇಲಗರ ಹಾಗು ಅವರ ಕುಟುಂಬದವರಿಗೆ ಹೊಡೆಬಡೆ ಮಾಡಿ ಗ್ರಾಮದಲ್ಲಿ ಕಾನೂನು ಸೂವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಹಾಗು ಗ್ರಾಮದಲ್ಲಿ ಜೀವಹಾನಿ, ಆಸ್ತಿಪಾಸ್ತಿ ಹಾನಿಯಾಗುವ ಸಾದ್ಯತೆ ಕಂಡು ಬಂದಿರುತ್ತದೆ. ಆದ್ದರಿಂದ 6-30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ವರದಿ ನೀಡಿದ್ದು, ಸದರಿ 4 ಜನರ ವಿರುದ್ದ ಸೂಕ್ತ ಮುಂಜಾಗೃತಾ ಕ್ರಮ ಕೈಕೊಳ್ಳಬೇಕು ಅಂತ ವರದಿ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್ ನಂಬರ 28/2020 ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.   



ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.22/2020 ಕಲಂ: 174 ಸಿ.ಆರ್.ಪಿ.ಸಿ : ಮೃತನಿಗೆ ಸುಮಾರಿಗೆ 3 ವರ್ಷಗಳ ಹಿಂದೆ ಪ್ರೇಮಾ ಎಂಬಾಕೆಯೊಂದಿಗೆ ಮದುವೆಯಾಗಿದ್ದು ದಾಂಪತ್ಯ ಜೀವನದಲ್ಲಿ ಹೇಮಾ ಎಂಬ 1 ವರ್ಷ ಮಗಳಿರುತ್ತಾಳೆ. ದಿನಾಂಕ 17.07.2020 ರಂದು ಮೃತ ಮತ್ತು ಆತನ ಹೆಂಡತಿ ಪ್ರೇಮಾ ಇವರು ಪ್ರೇಮಾಳ ಸಂಬಂದಿಕ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮೃತನ ಹೆಂಡತಿಯು ಬೆರಯವನೊಂದಿಗೆ ಹೋಗಿದ್ದು ಅದೇ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮರಳಿ ತಮ್ಮ ಮನೆಗೆ ಬಂದು ವಿಷಯವನ್ನು ತನ್ನ ತಾಯಿಗೆ ತಿಳಿಸಿರುತ್ತಾನೆ. ನಂತರ ಇಂದು ದಿನಾಂಕ 11.08.2020 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ಮನೆಯಲ್ಲಿ ತನ್ನ ತಾಯಿ ಮತ್ತು ತಂಗಿ, ತಮ್ಮ ಇವರು ಹೊಲಕ್ಕೆ ಹೋಗಿದ್ದನ್ನು ನೋಡಿಕೊಂಡು ಕ್ರೀಮಿನಾಶಕ ಔಷದಿಯನ್ನು ಸೇವನೆ ಮಾಡಿರುವುದನ್ನು ಕಂಡು ಅಕ್ಕ-ಪಕ್ಕದವರು ಆತನಿಗೆ ಚಿಕಿತ್ಸೆ ಕುರಿತು ಗುರುಮಠಕಲ್ಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 1:30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದ ಇರುತ್ತದೆ ಅಂತಾ ಫಿರ್ಯಾದಿದಾರಳಿ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 22/2020 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 12/2020 ಕಲಂ. 174 ಸಿಆರ್ಪಿಸಿ : ಇಂದು ದಿನಾಂಕ: 11-08-2020 ಬೆಳಿಗ್ಗೆ 10-00 ಗಂಟೆಗೆ ಪಿಯರ್ಾದಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೇನೆಂದರೆ ನಾನು ಈ ಮೇಲಿನ ಹೆಸರು ವಿಳಾಸದ ನೀವಾಸಿಯಾಗಿದ್ದು ನಮ್ಮ ಕುಟುಂಬದೊಂದಿಗೆ ಉಪ ಜೀವನ ಮಾಡಿಕೊಂಡು ಇರುತ್ತೇನೆ ನನಗೆ 1) ಮಲ್ಲಮ್ಮ 2) ಪಾಪಮ್ಮ 3) ಮಂಜುನಾಥ 4) ಮೇಘನಾ 5) ಸಂತೋಷ  ಅಂತಾ ಮಕ್ಕಳಿರುತ್ತಾರೆ, ದಿನಾಂಕ: 10-08-2020 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ನನ್ನ ಹೆಂಡತಿ ಲಕ್ಷ್ಮೀ ಮತ್ತು ನನ್ನ ಮಕ್ಕಳಾದ ಪಾಪಮ್ಮ, ಮಂಜುನಾಥ, ಸಂತೋಷ ಎಲ್ಲರೂ ಕೂಡಿ ಹೊಲಕ್ಕೆ ಹೋಗಿ ಹತ್ತಿ ಹೊಲದಲ್ಲಿ ಕಸ ತೆಗೆಯುತ್ತಿದ್ದೆವು, ಸಾಯಂಕಾಲ 04-00 ಗಂಟೆಗೆ ನಮ್ಮ ಹೊಲದಲ್ಲಿ ನಾನು ನನ್ನ ಹೆಂಡತಿ ಹೊಲದಲ್ಲಿ ಕಸ ತೆಗೆಯುತ್ತಿರುವಾಗ ನನ್ನ ಮಗ ಸಂತೋಷ ಈತನು ನಾವು ತೆಗೆದ ಕಸವನ್ನು ಡೊಣಕ್ಕೆ ಎತ್ತಿ ಹಾಕುತಿದ್ದನು ನನ್ನ ಮಗ ಸಂತೋಷ ಈತನು ಕಸವನ್ನು ಎತ್ತಿ ತನ್ನ ಹೆಗಲೆ ಮೇಲೆ ಹಾಕಿಕೊಂಡು ದೊಣಕ್ಕೆ ಹಾಕಬೇಕು ಅಂತಾ ಕಸವನ್ನು ಎಗಲೆ ಮೇಲೆ ಹಾಕಿಕೊಂಡು ಡೋಣಕ್ಕೆ ಹೋಗುವ ಸಮಯದಲ್ಲಿ ಒಮ್ಮಲೇ ಎಗಲ ಮೇಲಿಂದ ಕಸವನ್ನು ಬಿಸಾಕಿ ಅಪ್ಪಾ ನನಗೆ ಏನ ಕಡಿತು ಅಂತಾ ಚೀರಿದಾಗ ಆಗ ನಾನು ಮತ್ತು ನನ್ನ ಹೆಂಡತಿ ಹೋಗಿ ನೋಡಲಾಗಿ ಕಸದಿಂದ ಹಾವು ಹೋಗುತ್ತಿತ್ತು ನನ್ನ ಮಗನಿಗೆ ನೋಡಲಾಗಿ ಬಲ ಕುತ್ತಿಗೆಗೆ ಹಾವು ಕಡಿದ ಗಾಯವಾಗಿ ರಕ್ತ ಬರುತಿತ್ತು ಆಗ ನಾನು ಮತ್ತು ನನ್ನ ಹೆಂಡತಿ ನನ್ನ ಮಗ ಸಂತೋಷನಿಗೆ ಮನೆಗೆ ಕರೆದುಕೊಂಡು ಬಂದು ಖಾಸಗಿ ಔಷದಿ ಕುಡಿಸಿದೆವು ಸ್ವಲ್ಪ ಸಮಯದ ನಂತರ ನನ್ನ ಮಗನಿಗೆ ಆರಾಮ ಆಯಿತು ಆಗ ನಾವು  ನನ್ನ  ಮಗನಿಗೆ ಆರಾಮ ಆಗಿದೆ ಅಂತಾ ಸುಮ್ಮನಿದ್ದೆವು.

    ದಿನಾಂಕ: 11-08-2020 ರಂದು ಬೆಳಿಗ್ಗೆ 05-00 ಗಂಟೆಗೆ ನನ್ನ ಮಗ ಸಂತೊಷ ಈತನು ನನಗೆ ಯಾಕೋ ಸುಸ್ತಾಗುತ್ತಿದೆ ಅಂತಾ ಹೇಳಿದಾಗ ಆಗ ನಾನು ನನ್ನ ಹೆಂಡತಿ ಕೂಡಿ ನನ್ನ ಮಗ ಸಂತೋಷನಿಗೆ  ಒಂದು ಆಟೋದಲ್ಲಿ ಯಾದಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ ನನ್ನ ಮಗ ಸಂತೋಷ ತಂದೆ ದೇವಪ್ಪ ವ|| 14 ವರ್ಷ ಜಾ|| ಕುರಬರ ಸಾ|| ಸೈದಾಪೂರ ಈತನು ಇಂದು ಬೆಳಿಗ್ಗೆ 06-00 ಗಂಟೆಗೆ ಹಾವು ಕಚ್ಚಿದ್ದರಿಂದ ಮೃತಪಟ್ಟಿರುತ್ತಾನೆ

   ಕಾರಣ ನನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲ ನನ್ನ ಮಗನಿಗೆ ಹಾವು ಕಚ್ಚಿದ್ದರಿಂದ ಮೃತಪಟ್ಟಿರುತ್ತಾನೆ ತಾವು ಮುಂದಿನ ಕಾನೂನು ಕ್ರಮ ಜರುಗಿಸಬೇಕಂತಾ ಮಾನ್ಯರವರಲ್ಲಿ ವಿನಂತಿ ಅಂತಾ ಪಿಯರ್ಾದಿ ಸಾರಾಂಶ ಇರುತ್ತದೆ.



ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 93/2020 ಕಲಂ: 379 ಐಪಿಸಿ  : ಇಂದು ದಿನಾಂಕ: 11/08/2020 ರಂದು 12:45 ಪಿಎಮ್ಕ್ಕೆ ನಾನು ಅಬ್ದಲ್ ಸಾಬ ತಂದೆ ಮಹ್ಮದಸಾಬ ಹೇಮಂಟಿ, ವ:55, ಜಾ:ಮುಸ್ಲಿಂ ಉ:ಕುರಿ ಕಾಯುವ ಕೆಲಸ, ಸಾ:ತುಮಕೂರು. ಆದ ನಾನು ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೆನೆಂದರೆ, ನಾನು ಹೆಂಡತಿ ಮಕ್ಕಳೋಂದಿಗೆ ಒಕ್ಕಲುತನದ ಜೊತೆಗೆ ಕುರಿಗಳನ್ನು ಸಾಕಿಕೊಂಡು ವಾಸವಾಗಿರುತ್ತೇನೆ. ನನ್ನ ಹತ್ತಿರ 20 ಕುರಿಗಳು ಇದ್ದವು ಹೀಗೆ ಸುಮಾರು 6 ತಿಂಗಳುಗಳ ಹಿಂದೆ 20 ಕುರಿ ಮರಿಗಳನ್ನು ತಂದು ಒಟ್ಟು 40 ಕುರಿಗಳನ್ನು ಸಾಗಾಣಿಕೆ ಮಾಡಿಕೊಂಡಿದ್ದೇನು. ಹೀಗಿದ್ದು ದಿನಾಂಕ:09/08/2020 ರಂದು ಸಂಜೆ 07:00 ಗಂಟೆ ಸುಮಾರಿಗೆ ಕುರಿ ಮರಿಗಳನ್ನು ಮೇಯಿಸಿಕೊಂಡು ಬಂದು ನಮ್ಮ ಮನೆಯ ಹತ್ತಿರವಿರುವ ಕುರಿ ಹಟ್ಟಿಯಲ್ಲಿ ಕುರಿಗಳನ್ನು ಹಾಕಿ ರ್ರಾತಿ ಊಟ ಮಾಡಿ 10 ಗಂಟೆ ಸುಮಾರಿಗೆ ಹೆಂಡತಿ ಮಕ್ಕಳೊಂದಿಗೆ ಹಟ್ಟಿಯ ಹತ್ತಿರ ಮಲಗಿಕೊಂಡೇನು. ರ್ರಾತಿ ಸುಮಾರು 12 ಗಂಟೆ ಸುಮಾರಿಗೆ ಮಳೆಯು  ಬರುತ್ತಿದ್ದರಿಂದ ಎಲ್ಲಾರೂ ಮನೆಯ ಒಳಗೆ ಹೋಗಿ ಮಲಗಿಕೊಂಡೆವು. ನಾನು ದಿನಾಂಕ:10/08/2020 ರಂದು ಮುಂಜಾನೆ 6:00 ಗಂಟೆ ಸುಮಾರಿಗೆ ಎದ್ದು ಮನೆಯ ಬಾಗಿಲು ತೆಗೆಯಬೇಕು ಅಂತಾ ಬಾಗಿಲು ಜಗ್ಗಿದ್ದರೆ, ಬಾಗಿಲು ಬಾರದ ಕಾರಣ ನಮ್ಮ ಮನೆಯ ಹತ್ತಿರವಿರುವ ಶಂಕ್ರಪ್ಪ ಯೇಸೆಗಾರ ಇತನನ್ನು ಕೂಗಿ ಕರೆದು ಯಾಕೆ? ನಮ್ಮ ಮನೆಯ ಬಾಗಿಲು ತೆಗೆಯತ್ತಿಲ್ಲ ಬಂದು ನೋಡು ಅಂತ ಹೇಳಿದಕ್ಕೆ ಆತನು ಮನೆಯ ಬಾಗಿಲನ್ನು ಯಾರೋ ಕೊಂಡಿ(ಚಿಲಕ) ಹಾಕಿಕೊಂಡು ಹೋಗಿರುತ್ತಾರೆ ಅಂತ ಚಿಲಕ ತೆಗೆದು ನಾನು, ನನ್ನ ಹೆಂಡತಿಯಾದ ರಹೆಮತ್ ಬೀ  ಮಗನಾದ ಬಾಷಾಸಾಬ ಮತ್ತು ಶಂಕ್ರಪ್ಪ ಎಲ್ಲರೂ ಸೇರಿ ಯಾಕೋ ಹಟ್ಟಿಯಲ್ಲಿ ಕುರಿಗಳು ಕಾಣಿಸದೇ ಇದ್ದರಿಂದ  ಹತ್ತಿರ ಹೋಗಿ ನೋಡಿ ಎಣಿಸಿದಾಗ 40 ಕುರಿಗಳಲ್ಲಿ 20 ಕುರಿಮರಿಗಳು ಅಂದಾಜು ಕಿಮ್ಮತ್ತು 49,000/- ರೂ ಕಿಮ್ಮತಿನ ಕುರಿಮರಿಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನವನ್ನು ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ಇತರರು ಕೂಡಿ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಕಾನೂನು ಕ್ರಮ ಜರುಗಿಸಿ ನಮ್ಮ ಕಳುವಾದ ಕುರಿಮರಿಗಳನ್ನು ಪತ್ತೆ ಹಚ್ಚಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:93/2020 ಕಲಂ:379 ಐಪಿಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 94/2020 ಕಲಂ: 78(3) ಕೆ.ಪಿ.ಆಕ್ಟ್ : ಇಂದು ದಿನಾಂಕ: 11/08/2020 ರಂದು 04:00 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ದಿನಾಂಕ:11/08/2020 ರಂದು ಸಮಯ ಮಧ್ಯಾಹ್ನ 01:00 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ಪ್ರಕಾಶ ಹೆಚ.ಸಿ 18, ಶ್ರೀ ಸಾಯಬಣ್ಣ ಹೆಚ್.ಸಿ 102 ಮತ್ತು ಶ್ರೀ ರಾಜಶೇಖರ ಪಾಟೀಲ ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೇನಂದರೆ ಕ್ಯಾತ್ನಾಳ ಗ್ರಾಮದ ಗಂಗಮ್ಮ ಸಾಹುಕಾತರ್ಿ ಹೊಟೇಲ್ ಸಮೀಪದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಅವರಿಗೆ ದಾಳಿ ವಿಷಯ ತಿಳಿಸಿ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೊರಟು ಸಮಯ ಮದ್ಯಾಹ್ನ 02:15 ಗಂಟೆ ಸುಮಾರಿಗೆ ಕ್ಯಾತ್ನಾಳ ಗ್ರಾಮದ ಗಂಗಮ್ಮ ಸಾಹುಕಾತರ್ಿ ಹೊಟೇಲ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಹೊಟೇಲ್ ಹತ್ತಿರ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 02:30 ಪಿಎಮ್ಕ್ಕೆ ನಾನು ಮತ್ತು ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ನಾಗರಾಜ ತಂದೆ ಸಿದ್ದಣ್ಣ ಒಕ್ರಾಣಿ, ವ:27, ಜಾ:ಲಿಂಗಾಯತ, ಉ:ಕೂಲಿ ಸಾ:ಕ್ಯಾತನಾಳ ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 550/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 550/- ರೂ. ಮುದ್ದೇಮಾಲನ್ನು ನಾವು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಮ್ಮ ತಾಬಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಸದರಿಯವನಿಗೆ ಮಟ್ಕಾ ನಂಬರಗಳನ್ನು ಬರೆದ ಚೀಟಿ ಮತ್ತು ಹಣ ಯಾರಿಗೆ ಕೊಡುತ್ತಿ ಎಂದು ಕೇಳಿದಾಗ ಮಲ್ಲಪ್ಪ  ಯಾದಗಿರಿ ಎಂಬ ಬುಕ್ಕಿಗೆ ಕೊಡುವುದಾಗಿ ಹೇಳಿರುತ್ತಾನೆ. ಸದರಿ ಘಟನೆ ಸ್ಥಳವು ಗಂಗಮ್ಮ ಸಾಹುಕಾತರ್ಿ ಹೊಟೇಲ್ ಹತ್ತಿರ ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ.ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು ಇಂದು ದಿನಾಂಕ: 11/08/2020 ರಂದು 03:30 ಪಿಎಮ್ ಕ್ಕೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 94/2020 ಕಲಂ:78(3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


      

ಕೊಡೇಕಲ್  ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ: 11/2020 ಕಲಂ 174 ಸಿ ಆರ್ ಪಿ ಸಿ : ಇಂದು ದಿನಾಂಕ:11.08.2020 ರಂದು 7:00 ಎಎಮ್ ಕ್ಕೆ ಪಿರ್ಯಾಧಿ ಮಲ್ಲನಗೌಡ ತಂದೆ ಸೋಮನಗೌಡ ಜಕರೆಡ್ಡಿ ವ:45 ವರ್ಷ ಉ: ಒಕ್ಕಲುತನ ಜಾ: ಹಿಂದು ರೆಡ್ಡಿ ಸಾ: ರಾಜನಕೊಳೂರು ತಾ: ಹುಣಸಗಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಅಜರ್ಿಯನ್ನು ಹಾಜರಡಿಸಿದ  ಪಿರ್ಯಾಧಿ ಅಜರ್ಿಯ ಸಾರಾಂಶವೆನಂದರೆ ನನಗೆ ಬಸಲಿಂಗಮ್ಮ ಅಂತ ಅಕ್ಕ  ಶಾಂತಮ್ಮ ಮತ್ತು ಈರಮ್ಮ ಅಂತ ಇಬ್ಬರೂ ತಂಗಿಯರಿದ್ದು. ಎಲ್ಲರೂ ಮದುವೆ ಮಾಡಿ ಕೊಟ್ಟಿದ್ದು ನನ್ನ ಅಕ್ಕನಾದ ಬಸಲಿಂಗಮ್ಮಳು ಅಂಗವೈಕಲ್ಯ ಹೊಂದಿದ್ದು ಇವಳಿಗೆ  ಈಗ 20 ವರ್ಷಗಳ ಹಿಂದೆ ಚಿಂಚೋಳಿಯ ಗುತ್ತಣ್ಣ ತಂದೆ ಮಲ್ಲನಗೌಡ ಮಾಲಿ ಪಾಟೀಲ್  ಇತನೊಂದನಿಗೆ ಮದುವೆ ಮಾಡಿ ಕೊಟ್ಟಿದ್ದು. ಮದುವೆ ಮಾಡಿಕೊಟ್ಟ 2-3 ವರ್ಷದಲ್ಲಿ ನನ್ನ ಅಕ್ಕನ ಗಂಡನು ಸತ್ತಿದ್ದು. ನನ್ನ ಅಕ್ಕನಿಗೆ ಮಕ್ಕಳಿಲ್ಲದ ಕಾರಣ ಅವಳನ್ನು ಕರೆದುಕೊಂಡು ನನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದು ಇರುತ್ತದೆ. ನಾವು ನಿನ್ನೆ ದಿನ ರಾತ್ರಿ  8:00 ಮನೆಯಲ್ಲಿದಾಗ ನನ್ನ ಅಕ್ಕನು ತಂಬಿಗೆ ತೆಗೆದುಕೊಂಡು ಸಂಡಾಸಕ್ಕೆ ಹೋಗಿದ್ದು ಇರುತ್ತದೆ.

   ಹೀಗಿದ್ದು ನಿನ್ನೆ ದಿನಾಂಕ:10.08.2020 ರಂದು ರಾತ್ರಿ 8:30 ಸುಮಾರಿಗೆ  ನಾನು, ನನ್ನ ಹೆಂಡತಿ ಮಲ್ಲಮ್ಮ, ನನ್ನ ತಾಯಿ ಕಾಂತಮ್ಮ ಮನೆಯಲ್ಲಿದ್ದಾಗ ನಮ್ಮೂರ ರೆಡ್ಡಿ ತಂದೆ ಭೀಮನಗೌಡ ಸೂಗೂರು ಇತನ ಪೋನ್ ಮಾಡಿ ತಿಳಿಸಿದ್ದೆನೆಂದರೆ ನಾನು ನನ್ನ ಮನೆಗೆ ಹೋಗುತ್ತಿರುವಾಗ. ಸಿದ್ದಮ್ಮ ಕುಂಬಾರ ರವರ ಮನೆಯ ಹತ್ತಿರ ಹರಿಯುತ್ತಿರುವ ನಾರಾಯಣಪೂರ ಎಡದಂಡೆ ಕಾಲುವೆಯಲ್ಲಿ ನಿಮ್ಮ ಅಕ್ಕ ಬಸಲಿಂಗಮ್ಮ ಇವಳು ಕಾಲು ತೊಳಯಲು ಕಾಲುವೆ ನೀರಿನಲ್ಲಿ ಇಳಿದಾಗ ಕಾಲು ಜಾರಿ ಕಾಲುವೆ ನೀರಿನಲ್ಲಿ ಹರಿದುಕೊಂಡು ಹೋದಳು ಅಂತ ತಿಳಿಸಿದ್ದು. ನಾವು ಗಾಬರಿಯಾಗಿ ಸಿದ್ದಮ್ಮ ಕುಂಬಾರ ರವರ ಮನೆಯ ಹತ್ತಿರ ಬಂದು ನೋಡಲಾಗಿ  ಅಲ್ಲಿ ಗೌಡಪ್ಪಗೌಡ ತಂದೆ ಸಿದ್ದನಗೌಡ ಜಕರೆಡ್ಡಿ, ದೇವನಗೌಡ ತಂದೆ ನಿಂಗನಗೌಡ ಕೊಂಡಗೋಳಿ, ಮಲಕನಗೌಡ ತಂದೆ ಬಸನಗೌಡ ವಠಾರ ಇವರೆಲ್ಲರೂ ಇದ್ದು.  ನಾವೆಲ್ಲರೂ ಕೂಡಿ ನನ್ನ ಅಕ್ಕ ಬಸಲಿಂಗಮ್ಮನನ್ನು ಕಾಲುವೆ ನೀರಿನಲ್ಲಿ ಹುಡುಕಾಡಲಾಗಿ ಸಿಗಲಿಲ್ಲಾ. ಮತ್ತೆ  ಈ ದಿವಸ ನಾವೆಲ್ಲರೂ ಹುಡುಕಾಡಲಾಗಿ ಬೆಳಿಗ್ಗೆ  6:00 ಗಂಟೆಯ ಸುಮಾರಿಗೆ ನಮ್ಮೂರ ಬೋರೋಕಾ ಕಂಪನಿಯ ಹೆಚ್ಬಿಸಿ ಕಾಲುವೆ ಮೇನ್ ಗೇಟ್ ಹತ್ತಿರ ನನ್ನ ಅಕ್ಕ ಬಸಲಿಂಗಮ್ಮ ಇವಳ ಶವ ಸಿಕ್ಕಿದ್ದು. ನಾವೆಲ್ಲರೂ ಕೂಡಿ ನನ್ನ ಅಕ್ಕನ ಶವವನ್ನು ಕಾಲುವೆಯ ನೀರಿನಿಂದ ಹೊರಗೆ ತೆಗೆದು ಕಾಲುವೆ ಹೆಚ್ಬಿಸಿ ಗೇಟಿನ ಪಕ್ಕದಲ್ಲಿರು ಸೀಮೆಂಟ್ ನಿಂದ ಮಾಡಿದ  ದಾರಿಯ ಮೇಲೆ ಹಾಕಿದ್ದು. ನನ್ನ ಅಕ್ಕನು ನಿನ್ನೆ ದಿನ 8:30 ಗಂಟೆಯ ಸುಮಾರಿಗೆ ಸಂಡಾಸಕ್ಕೆ ಹೋಗಿ ಕಾಲುವೆ ನೀರಿನಲ್ಲಿ ಕಾಲು ತೊಳೆಯಲು ಹೋದಾಗ ಕಾಲು ಜಾರಿ ನೀರಿನಲ್ಲಿ ಬಿದ್ದು. ಈಜು ಬಾರದ ಕಾರಣ ಹರಿದುಕೊಂಡು ಹೋಗಿ  ನೀರು ಕುಡಿದು ಉಸಿರುಗಟ್ಟಿ ಸತ್ತಿದ್ದು ಇರುತ್ತದೆ.  ಈ ನನ್ನ ಅಕ್ಕನಾದ ಬಸಲಿಂಗಮ್ಮ ಗಂಡ ಗುತ್ತಣ್ಣ ಮಾಲಿಪಾಟೀಲ್ ವ:50 ವರ್ಷ ಜಾ:ಹಿಂದುರೆಡ್ಡಿ ಉ:ಮನೆಕೆಲಸ ಸಾ:ಚಿಂಚೋಳಿ ತಾ: ಶಹಾಪೂರ ಹಾ;ವ: ರಾಜನಕೊಳೂರು ತಾ;ಹುಣಸಗಿ ಇವಳ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ನನ್ನ ಅಕ್ಕನ ಶವವು ಬೋರೂಕಾ ಕಂಪನಿ ಮೇನ್ ಗೇಟ್ ಪಕ್ಕದ ಸಿಮೇಂಟಿನಿಂದ ಮಾಡಿದ ದಾರಿಯ ಮೇಲೆ ಇದ್ದು ತಾವು ಬಂದು ಮುಂದಿನ ಕ್ರಮ ಜರುಗಿಸಲು ಪಿರ್ಯಾಧಿ ಅಜರ್ಿಯ ಸಾರಾಂಶದ ಮೆಲಿಂದ ಠಾಣೆ ಯುಡಿಆರ್ ನಂ:11/2020 ಕಲಂ 174 ಸಿಆರ್ಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!