ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/08/2020

By blogger on ಶುಕ್ರವಾರ, ಆಗಸ್ಟ್ 7, 2020

 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/08/2020 

                                                                                                                                

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 21/2019 ಕಲಂ: 107 ಸಿ.ಆರ್.ಪಿ.ಸಿ :      ಮಾನ್ಯರವರವರಲ್ಲಿ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ ನಾನು ಭಾಗಣ್ಣ ಎ.ಎಸ್.ಐ ಸುರಪುರ ಪೊಲೀಸ್ ಠಾಣೆ, ಹಾಗೂ ಠಾಣೆಯ ಬಸವರಾಜ ಸಿಪಿಸಿ-180 ಇಬ್ಬರು ಕೂಡಿಕೊಂಡು ಇಂದು ದಿನಾಂಕ: 07-08-2020 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ಹಳ್ಳಿಭೇಟಿ ಕುರಿತು ಠಾಣೆಯಿಂದ ಹೊರಟು ದೇವಿಕೇರಿ ಗ್ರಾಮಕ್ಕೆ 9:30 ಎ.ಎಂ. ಕ್ಕೆ ಬೇಟಿ ನಿಡಿದ ಸಮಯದಲ್ಲಿ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿ ಏನೆಂದರೆ ಸುರಪೂರ ಪೊಲೀಸ್ ಠಾಣೆಯ ಗುನ್ನೇ ನಂಬರ 161/2020 ಕಲಂ.302, 109, ಸಂ. 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಸದರಿ ವಿಷಯವಾಗಿ ದೇವಿಕೇರಿ ಗ್ರಾಮದ ಮೇಲೆ ನಮೂದಿಸಿದ ಒಂದನೇ ಪಾಟರ್ಿ ಹಾಗೂ ಎರಡೇ ಪಾಟರ್ಿ ಇವರ ನಡುವೆ ತಮ್ಮ ತಮ್ಮಲ್ಲಿ ವೈಷ್ಯಮ್ಯ ಮಾಡಿಕೊಂಡು ಗ್ರಾಮದಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದು, ಸದರಿಯವರಿಗೆ ಹೀಗೆ ಬಿಟ್ಟರೆ ಇಂದಿಲ್ಲಾ ನಾಳೆ ಒಬ್ಬರಿಗೋಬ್ಬರು ಹೊಡೆದಾಟ ಬಡೆದಾಟ ಮಾಡಿಕೊಂಡು ಪ್ರಾಣ ಹಾನಿ ಮಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡುವ ಸಂಬವ ಹೆಚ್ಚಾಗಿರುತ್ತದೆ ಅಂತಾ ತಿಳಿದು ಬಂದ ಮಾಹಿತಿ ಮೇರೆಗೆ  ಸಾರ್ವಜನಿಕ ಶಾಂತತಾ ಕಾಪಾಡುವ ದೃಷ್ಟಿಯಿಂದ ಠಾಣೆಗೆ ಬಂದು ಮುಂಜಾಗ್ರತಾ ಕ್ರಮವಾಗಿ ಸದರಿಯವರ ವಿರುದ್ಧ ಠಾಣಾ ಪಿ.ಎ.ಆರ್ ನಂಬರ 21/2020 ಕಲಂ:107 ಸಿಆರ್ಪಿಸಿ ನೇದ್ದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 22/2020 ಕಲಂ. 107 ಸಿಆರ್ಪಿಸಿ : ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಹಣಮಂತ್ರಾಯ ಎ.ಎಸ್.ಐ  ಶೋರಾಪೂರ ಪೊಲೀಸ ಠಾಣೆ ಆದ ನಾನು ಸರಕಾರಿ ತಪರ್ೆ ಫಿರ್ಯಾದಿ ಬರೆದುಕೊಡುವುದೇನೆಂದರೆ, ಇಂದು ದಿನಾಂಕ: 07/08/2020 ರಂದು ಮಂಜಾನೆ ಸುಮಾರಿಗೆ ಠಾಣೆಯ ಸಿಬ್ಬಂಧಿಯಾದ ಶ್ರೀ ರವಿಕುಮಾರ ಸಿಪಿಸಿ-376 ರವರನ್ನು ಸಂಗಡ ಕರೆದುಕೊಂಡು ಪೆಟ್ರೋಲಿಂಗ ಕುರಿತು ರಂಗಮಪೇಟ್, ದಿವಳಗುಡ್ಡ, ಹಸನಾಪುರ, ವೆಂಕಟಪ್ಪ ನಾಯಕ್ ಸರ್ಕಲ್ ಮತ್ತು ತಿಮ್ಮಾಪುರ ಏರಿಯಾಕ್ಕೆ 11 ಎ.ಎಂ ಕ್ಕೆ ಬೇಟಿ ನಿಡಿದಾಗ ತಿಳಿದು ಬಂದ ಮಾಹಿತಿ ಏನೆಂದರೆ ಗ್ರಾಮದ ವಡ್ಡರ ಜನಾಂಗದವರ ನಡುವೆ ದಿನಾಂಕ:09/06/2020 ರಂದು 4:30 ಪಿ.ಎಂ ಸುಮಾರಿಗೆ ಹಳೇ ವೈಶಮ್ಯದಿಂದ ಒಬ್ಬರಿಗೊಬ್ಬರು ಗುಂಪು ಕಟ್ಟಿಕೊಂಡು ಜಗಳ ಮಾಡಿಕೊಂಡು ಎರಡು ಪಾಟರ್ಿಗಳ ಮೇಲೆ ಗುನ್ನೆ ಪ್ರತಿಗುನ್ನೆ ಜರಗಿದ್ದು ಅಂದಿನಿಂದ ಎರಡು ಪಾಟರ್ಿಯವರು ತಮ್ಮ ತಮ್ಮಲ್ಲಿ ವೈಮನಸ್ಸು ಮಾಡಿಕೊಂಡು ಒಂದು ಕೈ ನೊಡೆ ಬಿಡೋಣ ಅಂತಾ ಊರಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದು ಸದರಿಯವರನ್ನು ಹೀಗೆ ಬಿಟ್ಟರೆ ಇಂದಿಲ್ಲ ನಾಳೆ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟುಮಾಡುವ ಸಾಧ್ಯತೆ ಇರುವ ಬಗ್ಗೆ ಕಂಡು ಬಂದಿದ್ದರಿಂದ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮರಳಿ ಠಾಣೆಗೆ ಬಂದು ಎರಡು ಪಾಟರ್ಿಯವರ ಠಾಣೆಗೆ ಬಂದು ಮುಂಜಾಗ್ರತಾ ಕ್ರಮವಾಗಿ ಸದರಿಯವರ ವಿರುದ್ಧ ಠಾಣಾ ಪಿ.ಎ.ಆರ್ ನಂಬರ 22/2020 ಕಲಂ:107 ಸಿಆರ್ಪಿಸಿ ನೇದ್ದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 23/2019 ಕಲಂ: 107 ಸಿ.ಆರ್.ಪಿ.ಸಿ : ಮಾನ್ಯರವರವರಲ್ಲಿ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ ನಾನು ಶಾಮಸುಂದರ ಎ.ಎಸ್.ಐ. ಸುರಪುರ ಪೊಲೀಸ್ ಠಾಣೆ, ಇಂದು ದಿನಾಂಕ: 07-08-2020 ರಂದು ಮದ್ಯಾಹ್ನ 1 ಪಿ.ಎಂ. ಸುಮಾರಿಗೆ ಹಳ್ಳಿಭೇಟಿ ಕುರಿತು ಠಾಣೆಯಿಂದ ಹೊರಟು ದೇವತ್ಕಲ್ ಗ್ರಾಮಕ್ಕೆ 2 ಪಿ.ಎಂ. ಕ್ಕೆ ಬೇಟಿ ನಿಡಿದ ಸಮಯದಲ್ಲಿ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿ ಏನೆಂದರೆ ದೇವತ್ಕಲ ಗ್ರಾಮದಲ್ಲಿ ಮೇಲೆ ನಮೂದಿಸಿದ ಎದುದಾರರಾರು ಹಾಗೂ ಗ್ರಾಮದ ಬಸಪ್ಪ ತಂದೆ ಚನ್ನಬಸಪ್ಪ ಛಲವಾದಿ ಇವರ ನಡುವೆ ಹೊಲ ಸವರ್ೇ ನಂಬರ 89/ಆ/ಎ ನೇದ್ದರ ವಿಷಯವಾಗಿ ಗುಂಪುಕಟ್ಟಿಕೊಂಡು ತಮ್ಮ ತಮ್ಮಲ್ಲಿ ವೈಷ್ಯಮ್ಯ ಮಾಡಿಕೊಂಡು ಗ್ರಾಮದಲ್ಲಿ ತಿರುಗಾಡುತ್ತಿದ್ದು, ಸದರಿಯವರಿಗೆ ಹೀಗೆ ಬಿಟ್ಟರೆ ಇಂದಿಲ್ಲಾ ನಾಳೆ ಒಬ್ಬರಿಗೋಬ್ಬರು ಹೊಡೆದಾಟ ಬಡೆದಾಟ ಮಾಡಿಕೊಂಡು ಆಸ್ತಿ ಪಾಸ್ತಿ ಹಾನಿ ಮಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡುವ ಸಂಬವ ಹೆಚ್ಚಾಗಿರುತ್ತದೆ  ಅಂತಾ ತಿಳಿದು ಬಂದ ಮಾಹಿತಿ ಮೇರೆಗೆ  ಸಾರ್ವಜನಿಕ ಶಾಂತತಾ ಕಾಪಾಡುವ ದೃಷ್ಟಿಯಿಂದ ಠಾಣೆಗೆ ಬಂದು ಮುಂಜಾಗ್ರತಾ ಕ್ರಮವಾಗಿ ಸದರಿಯವರ ವಿರುದ್ಧ ಠಾಣಾ ಪಿ.ಎ.ಆರ್ ನಂಬರ 23/2020 ಕಲಂ:107 ಸಿಆರ್ಪಿಸಿ ನೇದ್ದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಕಾರಣ ಮಾನ್ಯರವರು ಸದರಿ ಎದುರುದಾರರನ್ನು ಕರೆಯಿಸಿ ಅವರಿಂದ ಕಲಂ: 116 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಇಂಟೇರಿಯಮ್ ಬಾಂಡ ಬರೆಯಿಸಿಕೊಳ್ಳಲು ವಿನಂತಿ.  


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 102/2020 ಕಲಂ. 279, 338 ಐಪಿಸಿ : ದಿನಾಂಕ. 06-08-2020 ರಂದು ಎಮ್.ಎಲ್.ಸಿ ಮಾಹಿತಿ ಬಂದ ಮೇರಗೆ ಹೈದ್ರಾಬಾದನ ಉಸ್ಮಾನಿಯಾ ಆಸ್ಪತ್ರೆಗೆ ಭೇಟಿ ಮಾಡಿ ಗಾಯಾಳು ಮನ್ಸೂರ ಈತನು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲದ ಬಗ್ಗೆ ವೈದ್ಯರು ಅಭಿಪ್ರಾಯ ನೀಡಿದ್ದರಿಂದ ಗಾಯಾಳುವಿನ ಪತ್ನಿ ಸೂಗಮ್ಮ ಇವರ ಹೇಳಿಕೆ ಪಡೆದಿದ್ದು, ಸಾರಾಂಶವೇನೆಂದರೆ, ದಿನಾಂಕ.05-08-2020 ರಂದು ರಾತ್ರಿ 8-00 ಗಂಟೆಗೆೆ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮಹೇಂದ್ರ ಕಂಪನಿಯ ಟ್ಯಾಕ್ಟರ ನಂ. ಎಪಿ-22 ಎಕ್ಷ-4741 ಮತ್ತು ಟ್ರಾಲಿ ನಂ. ಎಪಿ-22 ಎಕ್ಷ-4740 ರಲ್ಲಿ ಮನೆಗೆ ಬರುತ್ತಿದ್ದಾಗ ಮನ್ಸೂರ ಈತನು ಸದರಿ ಟ್ಯಾಕ್ಟರ ಟ್ರಾಲಿಯಲ್ಲಿ ನಿಂತಿದ್ದು ಟ್ಯಾಕ್ಟರ ಚಲಾಯಿಸುತ್ತಿದ್ದ ಅಜರ್ುನಪ್ಪ ಟ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುಕೊಂಡು ಬರುತ್ತಿದ್ದಾಗ ಸಣ್ಣಸಂಬರ ಗ್ರಾಮದ ಹರಿಜನ ಕೇರಿಯ ಹತ್ತಿರ ರೋಡಿನ ಪಕ್ಕದಲ್ಲಿದ್ದ ಬೇವಿನ ಮರದ ಕೊಂಬೆ ಟ್ಯಾಕ್ಟರ ಟ್ರಾಲಿಯಲ್ಲಿ ನಿಂತಿದ್ದ ಫಿಯರ್ಾದಿ ಗಂಡ ಮನ್ಸೂರನಿಗೆ ಎಡಕಿವಿಗೆ ಜೋರಾಗಿ ಬಡಿದಿದ್ದರಿಂದ ಮನ್ಸೂರ ಈತನು ಟ್ಯಾಕ್ಟರದಿಂದ ಕೆಳಗೆ ಬಿದ್ದಿದ್ದು, ತಲೆಗೆ ಭಾರಿ ಒಳಪೆಟ್ಟಾಗಿ, ಎಡಕಿವಿಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತಬಂದಿದ್ದು ಇನ್ನೂ ಪ್ರಜ್ಞೆ ಬಂದಿರುವದಿಲ್ಲ. ಸದರಿ ಟ್ಯಾಕ್ಟರ ಚಾಲಕನ ಮೇಲೆ ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 218/2020. ಕಲಂ 78 (3) ಕೆ.ಪಿ.ಆಕ್ಟ :    ಆರೋಪಿತನು ದಿನಾಂಕ: 07-08-2020 ರಂದು 12:30 ಪಿ.ಎಮ್.ಕ್ಕೆ ಶಹಾಪುರ ನಗರದ ಮಮದಾಪುರ ಕಾಲೋನಿಯ ದಗರ್ಾದ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 1070/- ರೂ. ನಗದು ಹಣ , ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಅನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 218/2020 ಕಲಂ.78 (3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಇಸಿಕೊಂಡು ತನಿಖೆ ಕೈಗೊಂಡೆಎನು.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 90/2020 ಕಲಂ: 143, 147, 504, 341, 324, 323 ಸಂ 149 ಐಪಿಸಿ : ಇಂದು ದಿನಾಂಕ: 07/08/2020 ರಂದು 6-15 ಪಿಎಮಕ್ಕೆ ಶ್ರೀಮತಿ ದೇವಿಂದ್ರಮ್ಮ ಗಂಡ ಹಣಮಗೌಡ ನೀಲಾನೋರ, ವ:34, ಜಾ:ಕಬ್ಬಲಿಗ, ಉ:ಮನೆಕೆಲಸ ಸಾ:ಹಂಚನಾಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಗಂಡ ಮಕ್ಕಳೊಂದಿಗೆ ಮನೆಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮಗೆ ಮತ್ತು ನಮ್ಮ ಜಾತಿಯ ಗಜಪ್ಪ ತಂದೆ ದ್ಯಾವಪ್ಪನಿಗೆ ಈ ಹಿಂದೆ ಕ್ಷುಲ್ಲಕ್ಕ ವಿಷಯಕ್ಕೆ ತಕರಾರು ಆಗಿದ್ದು, ಆಗಿನಿಂದ ಗಜಪ್ಪ ಮತ್ತು ಸಂಗಡಿಗರು ನಮ್ಮ ಮೇಲೆ ದ್ವೇಷ ಬೆಳೆಸಿಕೊಂಡಿದ್ದು, ಸಮಯ ಸಿಕ್ಕಾಗ ನನ್ನ ಗಂಡ ಮತ್ತು ಮೈದುನದವರಿಗೆ ಹೊಡೆಯಬೇಕೆಂದು ಕಾಯುತ್ತಾ ಕುಳಿತುಕೊಂಡಿದ್ದರು. ಹೀಗಿದ್ದು ನಿನ್ನೆ ದಿನಾಂಕ: 06/08/2020 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಗಂಡನು ನಮ್ಮ ಮನೆಯಿಂದ ಸ್ವಲ್ಪ ದೂರ ಇರುವ ಕೆನಾಲ ಮೆಟ್ಟಿಲ ಮೇಲೆ ಕುಳಿತುಕೊಂಡಾಗ ನಾನು ನನ್ನ ಗಂಡನಿಗೆ ಮನೆಗೆ ಬಾ ಎಂದು ಕರೆದೆನು. ಆಗ ನನ್ನ ಗಂಡನು ನನಗೆ ಬರುತ್ತೇನೆ ನೀನು ನಡೆಯಲೇ ಸೂಳೆ ಎಂದು ಅಂದನು. ಅಷ್ಟಕ್ಕೆ ಅಲ್ಲಿಯೇ ಪಾನ ಡಬ್ಬಿ ಅಂಗಡಿ ಇಟ್ಟಿರುವ ಸದರಿ ಗಜಪ್ಪನ ಅಕ್ಕಳಾದ ಭೀಮವ್ವ ತಂದೆ ದ್ಯಾವಪ್ಪ ಇವಳು ನನ್ನ ಗಂಡನಿಗೆ ನೀನು ನಿನ್ನ ಹೆಂಡತಿ ಮೇಲೆ ಹಾಕಿ ನನಗೆ ಬೈದಿರುವಿ ಬಾಡಕೋ ಎಂದು ನನ್ನ ಗಂಡನೊಂದಿಗೆ ಜಗಳ ತೆಗೆದಾಗ ನನ್ನ ಗಂಡನು ನಾನು ನಿನಗೆ ಅಂದಿಲ್ಲ ನನ್ನ ಹೆಂಡತಿಗೆ ಅಂದಿರುತ್ತೇನೆ ಅಂತಾ ಹೇಳಿ ಎದ್ದು ನಮ್ಮ ಮನೆಗೆ ಬರುತ್ತಿದ್ದವನಿಗೆ 1) ಗಜಪ್ಪ ತಂದೆ ದ್ಯಾವಪ್ಪ ಹಳೆ ಪೊಲೀಸ ಗೌಡ್ರು, 2) ಶರಣಪ್ಪ ತಂದೆ ಮಲ್ಲಪ್ಪ ಜೇರಬಂಡಿ, 3) ದೇವಮ್ಮ ಗಂಡ ಶರಣಪ್ಪ ಜೇರಬಂಡಿ, 4) ಭೀಮವ್ವ ತಂದೆ ದ್ಯಾವಪ್ಪ ಹಳೆ ಪೊಲೀಸ್ ಗೌಡ್ರು, 5) ಸಂತೋಷ ತಂದೆ ಶೀವಪ್ಪ ಹಳೆ ಪೊಲೀಸ ಗೌಡ್ರು, 6) ದೇವಿಂದ್ರಮ್ಮ ಗಂಡ ಹಣಮಂತ್ರಾಯ ಹಳೆ ಪೊಲೀಸ ಗೌಡ್ರು ಎಲ್ಲರೂ ಸಾ:ಹಂಚನಾಳ ಇವರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಬಂದವರೆ ನಮ್ಮ ಮನೆ ನನ್ನ ಗಂಡನಿಗೆ ತಡೆದು ನಿಲ್ಲಿಸಿ, ಭೀಮವ್ವ ಮತ್ತು ದೇವಮ್ಮ ಹಿಡಿದುಕೊಂಡಾಗ ಗಜಪ್ಪನು ಅಲ್ಲಿಯೇ ಬಿದ್ದ ಹಿಡಿಗಲ್ಲಿನಿಂದ ಎಡಮೊಳಕಾಲಿಗೆ ಹೊಡೆದು ಒಳಪೆಟ್ಟು ಮಾಡಿದನು. ಬಲ ಮೊಳಕಾಲಿಗೂ ಹೊಡೆದು ರಕ್ತಗಾಯ ಮಾಡಿದನು. ಶರಣಪ್ಪನು ಹಿಡಿಗಲ್ಲನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ನನ್ನ ಗಂಡನ ಎದೆಗೆ ಎರಡು ಮೂರು ಸಲ ಗುದ್ದಿ ಒಳಪೆಟ್ಟು ಮಾಡಿದನು. ಬಿಡಿಸಲು ಬಂದ ನನ್ನ ಮೈದುನ ಶಂಕ್ರೆಪ್ಪಗೌಡನಿಗೆ ಗಜಪ್ಪ ಹಿಡಿಗಲ್ಲು ಬಿಸಿ, ಎಡ ಮೊಳಕಾಲಿಗೆ ಹೊಡೆದು ರಕ್ತಗಾಯ ಮಾಡಿದನು. ಬಿಡಿಸಲು ಬಂದ ಇನ್ನೊಬ್ಬ ಮೈದುನ ಸಿದ್ದಲಿಂಗಪ್ಪನಿಗೆ ಶರಣಪ್ಪನು ಅದೇ ಹಿಡಿಗಲ್ಲಿನಿಂದ ಎಡ ಮೊಳಕಾಲಿಗೆ ಹೊಡೆದು ರಕ್ತಗಾಯ ಮಾಡಿದನು ಮತ್ತು ಕೈ ಮುಷ್ಟಿ ಮಾಡಿ ಬಾಯಿಗೆ ಗುದ್ದಿದ್ದರಿಂದ ಎರಡು ತುಟಿಗಳಿಗೆ ರಕ್ತಗಾಯ ಮಾಡಿದನು. ಆಗ ಜಗಳವನ್ನು ಬಸವರಾಜ ತಂದೆ ದ್ಯಾವಪ್ಪ ಹರಿಜನ ಈತನು ಬಂದು ಬಿಡಿಸಿರುತ್ತಾನೆ. ಇನ್ನುಳಿದವರು ಅಂಜಿ ಬಿಡಿಸಲು ಬಂದಿರುವುದಿಲ್ಲ. ಕಾರಣ ಹಳೆ ದ್ವೇಷದಿಂದ ನನ್ನ ಗಂಡ ಮತ್ತು ಮೈದುನರಿಗೆ ಹೊಡೆಬಡೆ ಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನನ್ನ ಗಂಡ ಮತ್ತು ಮೈದುನರಿಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಹೋಗಿ ತೋರಿಸಿ, ಈಗ ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 90/2020 ಕಲಂ: 143, 147, 504, 341, 324, 323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

      

ನಾರಾಯಣಪೂರ  ಪೊಲೀಸ ಠಾಣೆ ಗುನ್ನೆ ನಂ:- 58/2020 ಕಲಂ: 87 ಕೆ.ಪಿ ಯಾಕ್ಟ್ : ದಿನಾಂಕ: 01/08/2020 ರಂದು 6:30 ಪಿ.ಎಂ. ಕ್ಕೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ: 01/08/2020 ರಂದು 3:00 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಹಗರಟಗಿ ಗ್ರಾಮದಲ್ಲಿನ ಶ್ರೀ ಧರ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಿ ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ನೀಡುವಂತೆ ಪತ್ರ ಬರೆದು ವಿನಂತಿಸಿಕೊಂಡಿದ್ದು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರು ಸದರಿ ಇಸ್ಪೀಟ್ ಜೂಜಾಟ ಆಡುವವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಪರವಾನಿಗೆ ನೀಡಿದ್ದು ಕಾರಣ ನಿಮಗೆ ಎಪ್ ಐ ಆರ್ ದಾಖಲಿಸಲು ಸೂಚಿಸಿಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 58/2020 ಕಲಂ 87, ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 

        ನಂತರ ಮಾನ್ಯ ಪಿ.ಎಸ್.ಐ ಸಾಹೇಬರು 10:15 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 6 ಜನ ಆರೋಪಿತರು ನಗದು ಹಣ 9500/- ರೂ, 52 ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. 

ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 

1) ರವಿ ತಂದೆ ಯಮನಪ್ಪ ಚಲುವಾದಿ ವ|| 40 ವರ್ಷ ಜಾ|| ಹಿಂದೂ ಚಲುವಾದಿ ಉ|| ಕೂಲಿ ಕೆಲಸ ಸಾ|| ಹಗರಟಗಿ 

2) ಪರಮಾನಂದ ತಂದೆ ಭೀಮಣ್ಣ ಹಕ್ಕೇರಿ ವ|| 26ವರ್ಷ ಜಾ|| ಹಿಂದೂ ಬೇಡರ ಉ|| ಕೂಲಿ ಕೆಲಸ ಸಾ|| ಹಗರಟಗಿ 

3) ಸಂತೋಷ ತಂದೆ ಶಿವಪ್ಪ ಮಸ್ಕನಾಳ ವ|| 30ವರ್ಷ ಜಾ|| ಹಿಂದೂ ನೇಕಾರ ಉ|| ಚಾಲಕ ಸಾ|| ಹಗರಟಗಿ 

4) ವಿರೇಶ ತಂದೆ ಬಸಣ್ಣ ಕುಂಬಾರ ವ|| 24ವರ್ಷ ಜಾ|| ಹಿಂದೂ ಕುಂಬಾರ ಉ|| ಚಾಲಕ ಸಾ|| ಹಗರಟಗಿ 

5) ಧರ್ಮಣ್ಣ ತಂದೆ ಹನುಮಂತ್ರಾಯ ತಳವಾರ ವ|| 33ವರ್ಷ ಜಾ|| ಹಿಂದೂ ಬೇಡರ ಉ|| ಕೂಲಿ ಕೆಲಸ ಸಾ||ಹಗರಟಗಿ 

6) ಮಲ್ಲಿಕಾಜರ್ುನ ತಂದೆ ಅಮರಪ್ಪ ಏರುಂಡಿ ವ|| 30ವರ್ಷ ಜಾ|| ಹಿಂದೂ ಗಾಣಿಗ ಉ|| ಚಾಲಕ ಸಾ|| ಹಗರಟಗಿ


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 104/2020, ಕಲಂ, 323.354,504.506. ಸಂಗಡ 34 ಐ ಪಿ ಸಿ  : ದಿನಾಂಕ: 06-08-2020 ರಾತ್ರಿ 07-00 ಗಂಟೆಗೆ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್ ಎಲ್ ಸಿ ಇದೆ ಅಂತಾ ಪೊನ ಮೂಲಕ ತಿಳಿಸಿದ ಮೇರೆಗೆ ನಾನು ದಿನಾಂಕ: 07-08-2020 ರಂದು ಬೆಳಿಗ್ಗೆ ಎಮ್ ಎಲ್ ಸಿ ಕುರಿತು ಸರಕಾರಿ ಆಸ್ಪತ್ರೆ ಯಾದಗಿರಿಗೆ ಬೆಟಿ ನೀಡಿ ಅಲ್ಲಿ ಗಾಯಾಳುವನ್ನು ವಿಚಾರಿಸಿ ಹೇಳಿಕೆ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 06-08-2020 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ನನ್ನ ಮಕ್ಕಳು ಕೂಡಿ  ನಮ್ಮ ಪಾಲಿಗೆ ಬಂದಿರುವ ಹೊಲಕ್ಕೆ ಹೋಗಿ ತೋಗರಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿತರೆಲ್ಲರೂ ಸೇರಿಕೊಂಡು ಬಂದು ಅವಾಚ್ಯವಾಗಿ ರಂಡಿ ಬೋಸಡಿ ಅಂತಾ ಬೈದು ಎರಡು ಕೈಹಿಸಿದು ನೆಲಕ್ಕೆ ಬಿಳಿಸಿ ಸಿರೆಯ ಸೇರಗನ್ನು ಹಿಡಿದು ಎಳದಾಡಿ ಅವಮಾನ ಮಾಡಿ ಇನ್ನೊಂದು ಸಕ ಹೊಲದ ತಂಟೆಗೆ ಬಂದರೆ ನಿನಗೆ ಮತ್ತು ನಿನ್ನ ಮಕ್ಕಳೀಗೆ ಜೀವ ಸಹಿತಿ ಬಿಡುವದಿಲ್ಲ ಅಂತಾ  ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.

 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 65/2020 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ;07/08/2020 ರಂದು 3-15 ಪಿಎಮ್ ಕ್ಕೆ ಶ್ರೀ ಕೃಷ್ಣ ಸುಬೇದಾರ  ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.07/08/2020 ರಂದು 12-45 ಪಿಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ  ಗಚ್ಚಿಬೌಡಿ ಏರಿಯಾದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬನು ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.65/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 102/2020 ಕಲಂ 341, 323, 427, 504, 506(2) ಸಂ 34 ಐಪಿಸಿ : ಇಂದು ದಿನಾಂಕ 07/08/2020 ರಂದು ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ಫಿರ್ಯಾಧಿಯು ತಾನು ಒತ್ತಿ ಹಾಕಿಕೊಂಡ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ್ದನು, ಆ ಸಮಯದಲ್ಲಿ ಆರೋಪಿತರಾದ 1)ನರಸಪ್ಪ ತಂದೆ ಭೀಮರಾಯ ಚಂಚೇರ 2)ರಮೇಶ ತಂದೆ ದೇವಿಂದ್ರಪ್ಪ ಚಾಮನಳ್ಳಿ 3)ಮಂಜುನಾಥ ತಂದೆ ಗೋಪಾಲ ಅಜರ್ುಣೋರ ಮತ್ತು 4)ನಾಗೇಂದ್ರ ತಂದೆ ಭೀಮರಾಯ ಚಾಮನಳ್ಳಿ ಇವರೆಲ್ಲರೂ ಕೂಡಿಕೊಂಡು ಬಂದು ಫಿರ್ಯಾಧಿ ಜೊತೆಗೆ ಜಗಳ ತೆಗೆದು ಅವಾಚ್ಯವಾಗಿ, ಬೈದು, ಕೈಯಿಂದ ಹೊಡೆದು, ಕೈಯಲಲಿ ಕೊಡಲಿ ಹಿಡಿದುಕೊಂಡು ಜೀವದ ಭಯ ಹಾಕಿದ್ದು, ಮತ್ತು ಹೊಲದಲ್ಲಿ ಹಾಕಿದ ವಿಧ್ಯುತ್ ವಾಯರ ಹರಿದಿರುತ್ತಾರೆ, ಬೊರವೆಲ್ ಸ್ಟ್ರಾಟರ ಡಬ್ಬಿ, ನೀರಿನ ಪೈಪಗಳು ಇವುಗಳ ಮೇಲೆ ಕಲ್ಲುಗಳು ಎತ್ತಿ ಹಾಕಿ ಒಡೆದು ನಾಶಪಡಿಸಿರುತ್ತಾರೆ, ಅಂದಾಜ 30,000/ರೂ ಯಷ್ಟು ಲೂಕ್ಸಾನ ಮಾಡಿರುತ್ತಾರೆ, ಅಂತಾ ಪ್ರಕರಣ ದಾಖಲು ಆಗಿರುತ್ತದೆ.ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 74/2020  279 337 338 ಐಪಿಸಿ : ದಿನಾಂಕ:07/08/2020 ರಂದುಹುಣಸಗಿ ಸರಕಾರಿ ದವಾಖಾನೆಯಿಂದಾ 16.20 ಗಂಟೆಗೆ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರಗೆ ಬೇಟಿ ಕೊಟ್ಟು ಗಾಯಳುಶ್ರೀ. ಸಾಬಣ್ಣ ತಂದೆ ನಿಂಗಣ್ಣ ಕೊಳಿಹಾಳ ವಯ-35 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಹುಣಸಗಿ ತಾ:ಹುಣಸಗಿಜಿ:ಯಾದಗಿರ ಈತನಿಗೆ ವಿಚಾರಿಸಲು ತಾನು ತನ್ನ ಹೆಂಡತಿಯೊಂದಿಗೆ ಹೊಲಕ್ಕೆ ಹೋಗಿ ಕವಳಿ ನಾಟಿ ಹೊಲದಲ್ಲಿ ಸದಿ ತೆಗೆದು ನಂತರ ಮನೆಗೆ ಹೋಗಲು ತನ್ನ ಮೋಟಾರ್ ಸೈಕಲ್ ನಂ: ಕೆಎ-36 ಆರ್-9228 ನೇದ್ದರ ಮೇಲೆ ಹೊಲದಿಂದ ಮುಖ್ಯ ರಸ್ತೆಗೆ ಬಂದು ಕುಪ್ಪಿ ಕ್ರಾಸ್ ದಾಟಿ ಬಸವರಾಜ ಮಲಗಲದಿನ್ನಿ ಹೊಲದ ಹತ್ತಿರ ಹೊರಟಾಗ, ಆರೋಪಿತನು ತನ್ನ ಮೋಟಾರ್ ಸೈಕಲ್ ನಂ:ಕೆಎ-33ಇಎ-1058 ನೇದ್ದನ್ನು ತಾಳಿಕೋಟಿ ಕಡೆಯಿಂದ ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲ್ಗೆ ಡಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿ & ಫಿರ್ಯಾದಿ ಹೆಂಡತಿ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಭಾರಿ & ಸಾದಾ ರಕ್ತಗಾಯಗಳಾಗಿದ್ದು, ಅಲ್ಲದೆ ಆರೋಪಿತನು & ಅವನ ಹಿಂದೆ ಕುಳಿತವನು ಸಹ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಅವರಿಗೂ ಸಹ ಸಾದಾ ರಕ್ತಗಾಯಗಳಾಗಿವೆ ಅಂತಾ ಇತ್ಯಾದಿ ಹೇಳಿಕೆ ದೂರು ಕೊಟ್ಟಿದ್ದು ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ.    


ಕೆಂಭಾವಿ  ಪೊಲೀಸ ಠಾಣೆ ಗುನ್ನೆ ನಂ:- 124/2020 ಕಲಂ: 323,447,427.504.506 ಸಂಗಡ 34  ಐಪಿಸಿ : ಇಂದು ದಿನಾಂಕ 07/08/2020 ರಂದು ಸಾಯಾಂಕಾಲ 6.15 ಗಂಟೆಗೆ ಪಿರ್ಯಾದಿ ಶ್ರೀ ಮಹ್ಮದ ಹಾಜಿ ತಂದೆ ಲಾಲಸಾಬ ವಯಾ|| 40 ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಕೆಂಭಾವಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ  ಪಿರ್ಯಾದಿ ಸಾರಾಂಶವೆನೆಂದರೆ ಕೆಂಭಾವಿ ಸೀಮಾಂತರ ಸವರ್ೆ ನಂಬರ 597/ಪೋ2-2 ವಿಸ್ತಿರ್ಣ 2 ಎಕರೆ 30 ಗುಂಟೆ ಹೊಲ ನನ್ನ ಹೆಸರಿನಲ್ಲಿದ್ದು ಸದರಿ ಹೊಲದ ಮಾಲಿಕ, ಕಬ್ಜೆದಾರ, ಹಾಗೂ ಸಾಗುವಳಿದಾರ ನಾನೆ ಇರುತ್ತೇನೆ. ನನ್ನ ಹೊಲದ ಬಾಂದರಿನಲ್ಲಿ ಒಂದು ಪತರಾ ಶೆಡ್ ಹಾಕಿದ್ದು, ಈ ವರ್ಷ ಹೊಲದಲ್ಲಿ ತೊಗರಿ ಬೆಳೆ ಹಾಕಿರುತ್ತೇನೆ. ಸದರಿ ಬೆಳೆ 1 ತಿಂಗಳು 15 ದಿನಗಳಾಗಿರುತ್ತದೆ. ಹೀಗಿದ್ದು ದಿನಾಂಕ:- 04/08/2020 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋದಾಗ ನಮ್ಮ ಪಕ್ಕದ ಹೊಲದವರಾದ 1) ದವಲಸಾಬ ತಂದೆ ಬಾವಾಸಾಬ ಆಂದೇಲಿ 2) ಲಾಲಬೀ ಗಂಡ ದವಲಸಾಬ ಆಂದೇಲಿ 3) ಶಕುಂತಲಾ ಗಂಡ ಶರಣಬಸಪ್ಪ ಪೀರಾಪೂರ 4) ಶರಣಬಸಪ್ಪ ತಂದೆ ವಿರುಪಾಕ್ಷಪ್ಪ ಪೀರಾಪೂರ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಹೊಲದಲ್ಲಿನ ತೊಗರಿ ಬೆಳೆಯಲ್ಲಿ ಗಳೆ ಹೊಡೆದು ಬೆಳೆ ಕಿತ್ತು ಹಾಕುತ್ತಾ, ಹೊಲದ ಬಾಂದಾರಿನಲ್ಲಿದ್ದ ಪತರಾ ಶೇಡ್ ಕೂಡಾ ಕಿತ್ತು ಹಾಕುತ್ತಿದ್ದಾಗ ಅಲ್ಲಿಯೇ ಇದ್ದ ನಾನು ಹೋಗಿ ಏಕೆ ನಮ್ಮ ಹೊಲದಲ್ಲಿನ ಬೆಳೆ ಹಾಳು ಮಾಡುತ್ತಿದ್ದಿರಿ ಮತ್ತು ಪತರಾ ಶೆಡ್ ಏಕೆ ಕಿತ್ತ್ತಿ ಹಾಕಿದ್ದಿರಿ ಅಂತಾ ಕೇಳಿದಾಗ ಸದರಿಯವರೆಲ್ಲರೂ ಸೂಳೆ ಮಗನೆ ಈ ಹೊಲ ನಮಗೆ ಬರುತ್ತದೆ ಮಗನೆ ಅಂತಾ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ ಸಂಗಪ್ಪ ತಂದೆ ಬಸಲಿಂಗಪ್ಪ ಗುಡಿಮನಿ ಹಾಗು ಮಂಜೂರ ತಂದೆ ಅಬ್ದುಲ್ ರಜಾಕ  ಮತ್ತು ಮೈಬೂಬ ತಂದೆ ಸದರ್ಾರಲಿ ಹವಾಲಾರ ಇವರೆಲ್ಲರು ಬಂದು ನನಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ಮಗನೇ  ಇನ್ನೊಮ್ಮೆ  ಈ ಹೊಲದ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ಸದರಿಯವರೆಲ್ಲರು ನನ್ನ 2 ಎಕರೆ 30 ಗುಂಟೆ ಹೊಲದಲ್ಲಿನ ಸುಮಾರು 50,000=00 ರೂಗಳಷ್ಟು ಬೆಳೆ ಹಾನಿಪಡಿಸಿದ್ದಲ್ಲದೆ, 50,000=00 ರೂಗಳಷ್ಟು ಕಿವ್ಮ್ಮತ್ತಿನ ಪತರಾ ಶೆಡ್ ಕೂಡಾ ಕಿತ್ತಿ ಹಾಕಿ ಲುಕ್ಷಾನ ಮಾಡಿದ್ದು, ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ.  ಕಾರಣ ಮೇಲ್ಕಾಣಿಸಿದ ಎಲ್ಲಾ ಜನರು ನನ್ನೊಂದಿಗೆ ವಿನಾಕಾರಣ ಜಗಳ ತೆಗೆದು ಹೊಲದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ನಮ್ಮ ಹೊಲದಲ್ಲಿನ ಬೆಳೆ ಹಾಗು ಪತರಾ ಶೆಡ್ನ್ನು ಹಾಳು ಮಾಡಿ ಒಟ್ಟು ಅಂದಾಜು 1,00,000=00 ರೂಗಳಷ್ಟು ಲುಕ್ಷಾನ ಮಾಡಿದ್ದು. ಸದರಿ ಮೇಲ್ಕಾಣಿಸಿದ 4 ಜನರ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ. ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 124/2020 ಕಲ: 323,447,427,504,506 ಸಂಗಡ 34 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಗೋಗಿ  ಪೊಲೀಸ ಠಾಣೆ ಗುನ್ನೆ ನಂ:- 88/2020  447, 504, 506 ಸಂ: 34 ಐಪಿಸಿ : ಇಂದು ದಿನಾಂಕ: 07/08/2020 ರಂದು 07.10 ಪಿಎಂ ಕ್ಕೆ ಅಜರ್ಿದಾರ ಶ್ರೀ. ವಿಶ್ವನಾಥ ರೆಡ್ಡಿ ತಂದೆ ಗುರುನಾಥರೆಡ್ಡಿ ದೇವಣಗಾಂವ ವಯಾ:45 ಉ; ಒಕ್ಕಲುತನ ಜಾ: ಲಿಂಗಾಯತ ಸಾ: ಗೋಗಿ ಕೆ ತಾ: ಶಹಾಪೂರ. ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿ ನೀಡಿದ್ದು, ಅದರ ಸಾರಂಶ ಏನಂದರೆ, ಗೊಗಿ ಕೆ ಸೀಮಾಂತರದಲ್ಲಿ ಸವರ್ೇ ನಂ: 146/2 ನೇದ್ದರಲ್ಲಿ ನನ್ನ ಹೆಸರಿನಲ್ಲಿ 09 ಎಕರೆ 25 ಗುಂಟೆ ಜಮೀನು ಮತ್ತು ನನ್ನ ಅತ್ತಿಗೆಯಾದ ಜಯಮ್ಮ ಗಂಡ ಚನ್ನಾರೆಡ್ಡಿ ದೇವಣಗಾಂವ ಇವರ ಹೆಸರನಿಂದ 06. ಎಕರೆ ಜಮೀನು ಒಂದೆ ಹಾಸಿಗೆ ಇದ್ದು, ಸದರಿ ಜಮೀನಿನಲ್ಲಿ ನಾವು ಭತ್ತ ನಾಟಿ ಮಾಡಬೇಕು ಅಂತಾ ದಿನಾಂಕ: 04/8/2020 ರಂದು ಮಡಿಗಳಲ್ಲಿ ನೀರು ನಿಲ್ಲಿಸಿದ್ದೇವು, ಆದರೆ, ಸದರಿ ಹೊಲಕ್ಕೆ ಸಂಬಂದವಿಲ್ಲದ ಸಿದ್ರಾಮರೆಡ್ಡಿ ತಂದೆ ಗುರುನಾಥರೆಡ್ಡಿ ದೇವಣಗಾಂವ ವಯಾ:55 2) ಮಲ್ಲಿಕಾಜರ್ುನರೆಡ್ಡಿ ತಂದೆ ಸಿದ್ರಾಮರೆಡ್ಡಿ ದೇವಣಗಾಂವ ವಯಾ:30 ಇಬ್ಬರು ಸಾ: ಗೋಗಿ ಕೆ ಹಾ:ವ: ಶಹಾಪೂರ ಇವರುಗಳು ನಮ್ಮ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಮಡಿಗಳಲ್ಲಿ ನಿಲ್ಲಿಸಿದ್ದ ನೀರನ್ನು ಕಾಲಿ ಮಾಡಿ ದಿನಾಂಕ:05/08/2020 ರಂದು ನಮಗೆ ಬೈಯ್ದು ಹೊಗಿದ್ದರು, ನಾವು ಆದರೂ ಸುಮ್ಮನಿದ್ದು, ನಮ್ಮ ಹೊಲದಲ್ಲಿ ಮಡಿಗಳನ್ನು ಸರಿ ಪಡಿಸಿ ಭತ್ತ ನಾಟಿ ಮಾಡಲು ನೀರು ನಿಲ್ಲಿಸಿದ್ದೇವು, ಇವತ್ತು ದಿನಾಂಕ:07/08/2020 ರಂದು ಸಾಯಂಕಲ 05.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಹೊಲವನ್ನು ಲೀಜಿಗೆ(ಪಾಲಿಗೆ) ಮಾಡಿದ ಮಲ್ಲಪ್ಪ ತಂದೆ ಮರೆಪ್ಪ ಗಡ್ಡದ ಇಬ್ಬರು ಕೂಡಿ ನಮ್ಮ ಹೊಲಕ್ಕೆ ಹೋದಾಗ ಸಿದ್ರಾಮರೆಡ್ಡಿ ಮತ್ತು ಮಲ್ಲಿಕಾಜರ್ುನ ರೆಡ್ಡಿ ಇಬ್ಬರು  ಕೂಡಿ ಬಂದು ಮತ್ತೆ ನಮ್ಮ ಹೊಲದಲ್ಲಿ ಅಕ್ರಮ ಪ್ರವೆಶ ಮಾಡಿ ಮತ್ತೆ ಭತ್ತದ ಮಡಿಗಳಿಂದ ನೀರು ಖಾಲಿ ಮಾಡ ತೊಡಗಿದರು, ಆಗ ನಾನು ಮತ್ತು ಮಲ್ಲಪ್ಪ ತಂದೆ ಮರೆಪ್ಪ ಗಡ್ಡದ ಇಬ್ಬರು ಮಡಿ ಒಡೆದು ನೀರು ಯಾಕೆ ಹರಿ ಬಿಡುತ್ತೀರಿ ಎಂದು ಕೇಳಲು ಹೊದಾಗ ನನಗೆ ಅವಾಚ್ಯವಾಗಿ ಬೈಯ್ದು, ಮಗನೆ ಈ ಸಲ ಹೊಲ ನಾನು ಬಿತ್ತುತ್ತೇನೆ ಹೊಲದಲ್ಲಿ ನೀ ಕಾಲಿಟ್ಟರೆ ನಿನಗೆ ಮತ್ತು ನಿನ್ನ ಕಡೆಯಿಂದ ಬರುವವರಿಗೆ ಖಲಾಸ್ ಮಾಡುತ್ತೇವೆಂದು ಜೀವ ಭಯ ಹಾಕಿದ್ದು, ಆಗ ಮಲ್ಲಪ್ಪ ಗಡ್ಡದ ಮತ್ತು ಅಲ್ಲಿಯೇ ಹೊರಟಿದ್ದ ಮರೆಪ್ಪ ತಂದೆ ಅಯ್ಯಪ್ಪ ತಳವಾರಗೇರಿ ಇವರುಗಳು ನನಗೆ ಮನೆಗೆ ಕರೆದುಕೊಂಡು ಬಂದರು, 

    ನಮ್ಮ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ನೀರು ಹರಿಬಿಟ್ಟಿದ್ದು ಕೇಳಲು ಹೋದಾಗ ಅವಾಚ್ಯವಾಗಿ ಬೈಯ್ದು ಜೀವದ ಬೆದರಿಕೆ ಹಾಕಿದ 1) ಸಿದ್ರಾಮರೆಡ್ಡಿ ತಂದೆ ಗುರುನಾಥರೆಡ್ಡಿ ದೇವಣಗಾಂವ 2) ಮಲ್ಲಿಕಾಜರ್ುನರೆಡ್ಡಿ ತಂದೆ ಸಿದ್ರಾಮರೆಡ್ಡಿ ದೇವಣಗಾಂವ ಸಾ: ಗೋಗಿ ಕೆ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 88/2020 ಕಲಂ, 447, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!