ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/08/2020

By blogger on ಗುರುವಾರ, ಆಗಸ್ಟ್ 6, 2020


 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/08/2020 

ಯಾದಗಿರ  ಪೊಲೀಸ ಠಾಣೆ ಗುನ್ನೆ ನಂ:- 64/2020 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ;06/08/2020 ರಂದು 3-45 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್. ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.06/08/2020 ರಂದು 2-30 ಪಿಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ  ಹನುಮಾನ ನಗರದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬನು ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.64/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಮಹಿಳಾ ಪೊಲೀಸ ಠಾಣೆ ಗುನ್ನೆ ನಂ:- 22/2020 ಕಲಂ:  ಮಹಿಳೆ ಕಾಣೆಯಾದ ಬಗ್ಗೆ : ಇಂದು ದಿನಾಂಕ:06.08.2020 ರಂದು ಮದ್ಯಾಹ್ನ 2.30 ಗಂಟೆಗೆ ಪಿರ್ಯಾಧಿ ಶ್ರೀ ನಾಗರಾಜ ತಂದೆ ರಂಗಪ್ಪ ಕಂಬಾರ ವಯಾ-40 ವರ್ಷ ಸಾ- ಅನ್ನೂರು (ಬಿ) ಸೈದಾಪೂರ ತಾ- ಯಾದಗಿರಿ ಇವರು ಯಾದಗಿರಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಏನೇಂದರೆ ನನ್ನ ಮಗಳು ನಿರ್ಮಲಾ ವಯಾ-20 ಇವಳು ಯಾದಗಿರಿಯ ಸಿದ್ದಲಿಂಗೇಶ್ವರ ಕಾಲೇಜಿನಲ್ಲಿ ಬಿಎಸ್ಸಿ 3 ನೇ ಸೇಮೆಸ್ಟರಿಯಲ್ಲಿ ಓದುತ್ತಿದ್ದು, ದಿನಾಂಕ:  01.08.2020 ರಂದು ತನ್ನ ಗೆಳತಿ ಶ್ರುತಿ  ಈಕೆಯೊಂದಿಗೆ ಯಾದಗಿರಿಗೆ ಹೋಗಿ ಕಾಲೇಜಿಗೆ ಪುಸ್ತಕಗಳು ಕೊಟ್ಟ ಬರುತ್ತೇನೆಂದು ಹೇಳಿ ಹೋಗಿದ್ದು, ರಾತ್ರಿ ಆಗಿದ್ದರಿಂದ ಯಾದಗಿರಿಯ ತನ್ನ ಗೆಳತಿ ತ್ರಿವೇಣಿ ಇವರ ಮನೆಯಲ್ಲಿ ವಸತಿ ಮಾಡಿದ್ದು , ನಾಳೆ ಊರಿಗೆ ಬರುವುದಾಗಿ ನಮಗೆ ಪೋನ್ ಮಾಡಿ ವಿಷಯ ತಿಳಿಸಿರುತ್ತಾಳೆ. ದಿನಾಂಕ:  02.08.2020 ರಂದು ಬೆಳಿಗ್ಗೆ 8. ಎಎಂ ದಿಂದ 8.30 ಎ.ಎಂದ ಅವಧಿಯಲ್ಲಿ ತನ್ನ ಗೆಳತಿ ಮನೆಯಿಂದ ಊರಿಗೆ ಬರುವುದಾಗಿ ಹೇಳಿ ಯಾದಗಿರಿಯಿಂದ ಹೊರಟವಳು ಮರಳಿ ಊರಿಗೆ ಬರದೇ ಕಾಣೆಯಾಗಿದ್ದು ನನ್ನ ಮಗಳನ್ನು ದಿನಾಂಕ:  01.08.2020 ರಿಂದ ಇಲ್ಲಿಯವರಗೆ ಹುಡಕಾಡಲಾಗಿ ಸಿಕ್ಕಿರುವುದಿಲ್ಲಾ ಕಾಣೆಯಾದ ನನ್ನ ಮಗಳು ನಿರ್ಮಲಾ ಇವಳನ್ನು   ಪತ್ತೆ ಮಾಡಿಕೊಡಬೇಕು ಅಂತ ಕೊಟ್ಟ ದೂರಿನ ಮೇಲಿಂದ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:  22/2020 ಕಲಂ: ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.


ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 33/2020  ಕಲಂ 279,338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 06/08/2020 ರಂದು  2-15 ಪಿ.ಎಂ.ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮೇಲೆ ಬರುವ ಯಾದಗಿರಿಯ ಇಂಪಿರಿಯಲ್ ಗಾರ್ಡನ್ ಹತ್ತಿರ ಈ ಕೇಸಿನ ಗಾಯಾಳು ಹಣಮಂತ ಈತನು ನಡೆಸಿಕೊಂಡು ಹೊರಟಿದ್ದ ಮೋಟಾರು ಸೈಕಲ್ ನಂ.ಕೆಎ-33, ಎಚ್-8166 ನೇದ್ದಕ್ಕೆ ಆರೋಪಿತನು ತನ್ನ ಜೆಸಿಬಿ ನಂ. ಕೆಎ-33, ಎ-4981 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಗಾಯಾಳುವಿಗೆ ಎಡಗಾಲಿನ ಮೊಣಕಾಲು ಕೆಳಗೆ ಭಾರೀ ರಕ್ತಗಾಯವಾಗಿ ಮುರಿದಿದ್ದು ಇರುತ್ತದೆ. ಅಪಘಾತದ ನಂತರ ಜೆಸಿಬಿ ವಾಹನದ ಚಾಲಕನು ಘಟನಾ ಸ್ಥಳದಿಂದ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 33/2020 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್  ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 87/2020 279, 338, ಐಪಿಸಿ : ಇಂದು ದಿನಾಂಕ: 06/08/2020 ರಂದು 07.30 ಎಎಂ ಕ್ಕೆ ಅಜರ್ಿದಾರ ಶ್ರೀ. ಅಂಬು ತಂದೆ ಮುನ್ನು ಪವಾರ ವಯಾ:48 ವರ್ಷ ಉ: ಒಕ್ಕಲುತನ ಜಾ: ಲಂಬಾನಿ ಸಾ: ನಾಗನಟಗಿ ಭೀಮಲಾ ನಾಯ್ಕ ತಾಂಡಾ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿ ನೀಡಿದ್ದು, ಅದರ ಸಾರಂಶ ಏನಂದರೆ, ನನ್ನ ಮಗನಾದ ಕುಮಾರ ತಂದೆ ಅಂಬು ಪವಾರ ವಯಾ: 21 ವರ್ಷ ಉ: ಗೌಂಡಿ ಕೆಲಸ ಈತನು ಪ್ರತಿ ನಿತ್ಯದಂತೆ ದಿನಾಂಕ: 01/08/2020 ರಂದು ಬೆಳಗಿನ ಸಮಯದಲ್ಲಿ ತನ್ನ ಗೆಳೆಯನಾದ ದಶರಥ ತಂದೆ ಗುರುನಾಥ ರಾಠೊಡ ವಯಾ:20 ವರ್ಷ ಉ: ಗೌಂಡಿ ಕೆಲಸ ಸಾ: ನಾಗನಟಗಿ ದಾಮಲುನಾಯ್ಕ ತಾಂಡಾ ಈತನೊಂದಿಗೆ ಮೋಟಾರ್ ಸೈಕಲ್ ನಂ: ಕೆಎ-33-ಎಸ್-4038 ನೇದ್ದರ ಮೇಲೆ ಬೂದನೂರ ಗ್ರಾಮಕ್ಕೆ ಹೋಗಿದ್ದರು, ನಂತರ ಸಾಯಂಕಾಲ ಕೆಲಸ ಮುಗಿಸಿ ಮರಳಿ ನಮ್ಮ ತಾಂಡಾಕ್ಕೆ ಬರುವ ಕುರಿತು ನಮ್ಮ ಮಗನು ದಶರಥ ತಂದೆ ಗುರುನಾಥ ರಾಠೊಡ ಈತನ ಹಿಂದೆ ಕುಳಿತು ಸದರಿ ಮೋಟಾರ್ ಸೈಕಲ್ ನಂ: ಕೆಎ-33-ಎಸ್-4038 ನೇದ್ದರ ಮೇಲೆ ಬರುತ್ತಿದ್ದಾಗ, ಬೂದನೂರ ಕಕ್ಕಸಗೇರಾ ಮದ್ಯದಲ್ಲಿನ ರೋಡಿನಲ್ಲಿ ಬೂದನೂರ ದಿಂದ ಅಂದಾಜು 01 ಕೀ.ಮೀ ಅಂತರದಲ್ಲಿ ಇರುವ ಹಳ್ಳದ ದಿಬ್ಬಿ ಹತ್ತಿರ ರೋಡಿನಲ್ಲಿ ಬರುತ್ತಿದ್ದಾಗ, ಅಂದಾಜು ಸಮಯ 07.00 ಪಿಎಂ ಸುಮಾರಿಗೆ ಕಕ್ಕಸಗೇರಾ ಕಡೆಯಿಂದ ಒಂದು ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಲಕ್ಷತನದಿಂದ ನಡೆಸಿಕೊಂಡು ಎದುರಿನಿಂದ ಬಂದು ನನ್ನ ಮಗನು ಹಿಂದೆ ಕುಳಿತು ಹೊರಟಿದ್ದ ದಶರಥ ಈತನು ನಡೆಸುತ್ತಿದ್ದ ಮೋಟಾರ್ ಸೈಕಲಕ್ಕೆ ಡಿಕ್ಕಿ ಪಡೆಸಿದ್ದು, ಪರಿಣಾಮ ಇಬ್ಬರು ಕೆಳಗೆ ಬಿದ್ದಿದ್ದು, ನನ್ನ ಮಗನಾದ ಕುಮಾರ ಈತನಿಗೆ ಬಲಗಾಲಿನ ಮೋಳಕಾಲಿಗೆ ಬಾರಿ ರಕ್ತಗಾಯ ಆಗಿದ್ದು, ಬಲಗೈ ಬೆರಳುಗಳಿಗೆ ರಕ್ತಗಾಯ ಆಗಿದ್ದು, ಇರುತ್ತದೆ. ಮೋಟಾರ್ ಸೈಕಲ್ ನಡೆಸುತ್ತಿದ್ದ ದಶರಥ ತಂದೆ ಗುರುನಾಥ ರಾಠೊಡ ಈತನಿಗೆ ಬಲಗಾಲಿನ ಮೋಳಕಾಲ ಕೆಳಗೆ ಭಾರಿ ರಕ್ತಗಾಯ ಆಗಿದ್ದು, ಬಲಗಡೆಯ ಬುಜಕ್ಕೆ ಬಾರಿ ಪೆಟ್ಟಾಗಿದ್ದು, ಬಲಗಣ್ಣಿಗೆ ಮತ್ತು ತಲೆಗೆ ಭಾರಿ ರಕ್ತಗಾಯಗಳಾಗಿದ್ದು, ಎಡಗೈಗೆ ತರಚಿದ ಗಾಯವಾಗಿರುತ್ತದೆ. ಅಪಘಾತ ಮಾಡಿದ ಟ್ರ್ಯಾಕ್ಟರ ನಂ: ಕೆಎ-33-ಟಿಬಿ-1804 ಇದ್ದು, ಅದರ ಚಾಲಕನ ಹೆಸರು ಬಾಲರಾಜ ತಂದೆ ಶರಣಪ್ಪ ಸಾ: ಬೂದನೂರ ಅಂತಾ ಇರುತ್ತದೆ. ಅಂತಾ ನಮ್ಮ ಮಗನ ಹಿಂದೆಯೇ ಗೌಂಡಿ ಕೆಲಸಕ್ಕೆ ಹೋಗಿ ಮರಳಿ ಬರುತ್ತಿದ್ದ, ಖೇಮು ತಂದೆ ರೆಡ್ಡಿ ರಾಠೋಡ ಮತ್ತು ಕಿಶನ ತಂದೆ ಹೀರೂ ಜಾಧವ ಇಬ್ಬರು ಸಾ: ನಾಗನಟಗಿ ದಾಮಲುನಾಯ್ಕ ತಾಂಡಾ ಇವರುಗಳು ಘಟನೆಯನ್ನು ನೋಡಿ ನಮ್ಮ ಮಗನಿಗೆ ಮತ್ತು ದಶರಥ ಇಬ್ಬರೀಗೂ ಎಬ್ಬಸಿ ನನಗೆ ವಿಷಯ ತಿಳಿಸಿದ್ದು, ಆಗ ನಾನು ಮತ್ತು ಗುರುನಾಥ ತಂದೆ ಮುನ್ನುನಾಯ್ಕ ರಾಠೋಡ ಇಬ್ಬರು ಸ್ಥಳಕ್ಕೆ ಹೋಗಿ ನೋಡಿದೆವು, ನನ್ನ ಮಗನಾದ ಕುಮಾರ ಮತ್ತು ಅವನ ಗೆಳೆಯನಾದ ದಶರಥ ರಾಠೊಡ ಇಬ್ಬರಿಗೂ ಭಾರಿ ಗಾಯಗಳಾಗಿದ್ದವು, ಅಪಘಾತ ಮಾಡಿದ ಟ್ರ್ಯಾಕ್ಟರ ನಂ: ಕೆಎ-33-ಟಿಬಿ-1804  ಅಂತಾ ಇತ್ತು, ನಾವು ನನ್ನ ಮಗನಿಗೆ ಮತ್ತು ದಶರಥ ಇಬ್ಬರೀಗೂ ಕೂಡಲೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಲಬುರಗಿಗೆ ಹೋಗಿ ಉಪಚಾರಕ್ಕೆ ಸೇರಿಕೆ ಮಾಡಿರುತ್ತೇವೆ, ನಮಗೆ ಕಾನೂನಿನ ತಿಳುವಳಿಕೆ ಇಲ್ಲದ್ದರಿಂದ ನಾವು ನಮ್ಮ ಮಕ್ಕಳಿಗೆ ಉಪಚಾರ ಮಾಡಿಸಲು ಆಸ್ಪತ್ರೆಯಲ್ಲಿ ಇದ್ದು, ತಡವಾಗಿ ಇಂದು ದಿನಾಂಕ: 06/08/2020 ರಂದು 07.30 ಪಿಎಂ ಕ್ಕೆ  ಠಾಣೆಗೆ ಬಂದು ಈ ಅಜರ್ಿ ನೀಡಿರುತ್ತೇವೆ.    

           ಕಾರಣ ನಮ್ಮ ಮಗನಾದ ಕುಮಾರ ಮತ್ತು ಅವನ ಗೆಳೆಯನಾದ ದಶರಥ ರಾಠೋಡ ಇವರು ಕುಳಿತು ಬರುತ್ತಿದ್ದ ಮೋಟಾರ್ ಸೈಕಲಕ್ಕೆ ಅಪಘಾತ ಮಾಡಿದ ಟ್ರ್ಯಾಕ್ಟರ ನಂ: ಕೆಎ-33-ಟಿಬಿ-1804, ನೆದ್ದರ ಚಾಲಕ ಬಾಲರಾಜ ತಂದೆ ಶರಣಪ್ಪ ಸಾ: ಬೂದನೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 87/2020 ಕಲಂ, 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ಕೊಡೇಕಲ್  ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ: 10/2020 ಕಲಂ:174 ಸಿ ಆರ್ ಪಿ ಸಿ : ಇಂದು ದಿನಾಂಕ:06.08.2020 ಬೆಳಿಗ್ಗೆ 6:00 ಗಂಟೆಯ  ಪಿರ್ಯಾಧಿ ಶ್ರೀಮತಿ. ಲಕ್ಷ್ಮೀಬಾಯಿ ಗಂಡ ಹಣಮಂತ್ರಾಯ ಯಳಗುಂದಿ ವ: 35 ವರ್ಷ ಜಾ: ಬೇಡರ ಉ: ಮನೆಕೆಲಸ ಸಾ: ರಾಜನಕೊಳೂರು  ತಾ: ಹುಣಸಗಿ ಇವರು ಠಾಣೆಗೆ  ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಅಜರ್ಿಯನ್ನು ಹಾಜರ ಪಡಿಸಿದ್ದು. ಸಾರಾಂಶವೆನೆಂದರೆ ನನ್ನ ಗಂಡನಾದ ಹಣಮಂತ್ರಾಯನಿಗೆ ಬೀಮಣ್ಣ ತಂದೆ ಸೋಮಣ್ಣ ಎಂಬ ಅಣ್ಣನಿದ್ದು ಇವರಿಬ್ಬರೂ ಬೇರೆ-ಬೇರೆಯಾಗಿ ಜೀವಿಸುತ್ತಿದ್ದು. ನನ್ನ ಗಂಡನಾದ ಹಣಮಂತ್ರಾಯನಿಗೆ ಇಬ್ಬರೂ ಹೆಂಡತಿಯರಿದ್ದು.ಅದರಲ್ಲಿ ಮೊದಲನೇಯವಳು ನಾನಾಗಿದ್ದು(ಲಕ್ಷ್ಮೀಬಾಯಿ ಗಂಡ ಹಣಮಂತ್ರಾಯ ಯಳಗುಂದಿ) ಎರಡನೇಯ ಹೆಂಡತಿಯಾದ ದ್ಯಾಮವ್ವ ಗಂಡ ಹಣಮಂತ್ರಾಯ ಯಳಗುಂದಿ ಇವಳಿಗೆ ಇಬ್ಬರೂ ಹೆಣ್ಣು ಮಕ್ಕಳಿದ್ದು   ನನಗೆ  ಸಂಜೀವ ಮತ್ತು ಸಂಪತ್ತು ಅಂತ ಇಬ್ಬರೂ ಮಕ್ಕಳಿದ್ದು. ನಾನು ನನ್ನ ಗಂಡನಾದ ಹಣಮಂತ್ರಾಯ ಇಬ್ಬರೂ  ನಮ್ಮ ರಾಜನಕೊಳೂರು ಸೀಮಾಂತರದ ಜಮೀನು ಸವರ್ೇ ನಂ:323/ಆ ರಲ್ಲಿ 4 ಎಕರೆ 20 ಗುಂಟೆ ಜಮೀನಿನಲ್ಲಿ  ಒಕ್ಕಲುತನ ಮಾಡಿಕೊಂಡು ಜೀವಿಸುತ್ತಿದ್ದು. ನನ್ನ ಗಂಡನು ಈ ಜಮೀನಿನ ಮೇಲೆ ಈಗ 8-10 ವರ್ಷಗಳ ಹಿಂದೆ ರಾಜನಕೊಳೂರು ಕೆ.ಜಿ.ಬಿ ಬ್ಯಾಂಕಿನಲ್ಲಿ 50,000/- ಸಾಲ ಪಡೆದಿದ್ದು. ಈ ಸಾಲವು ನಮ್ಮ ಜಮೀನಿನ ಬೆಳೆಗಳು ಸರಿಯಾಗಿ ಬರೆದೆ ಇದ್ದ ಕಾರಣ ಈ ಸಾಲ ಹಾಗೆಯೇ ಉಳಿದಿದ್ದು. ಮತ್ತು  ಹೊಲಕ್ಕೆ ಹಾಗೂ ಸಂಸಾರಕ್ಕಾಗಿ ಗ್ರಾಮದ ಜನರ ಹತ್ತಿರ ಕೈಗಾಡ ಸಾಲ 1,50,000/ ರೂ ಮಾಡಿದ್ದು ಇದ್ದು. ಈ ಸಾಲವನ್ನು ಹೇಗೆ ತೀರಿಸಬೇಕು ಅಂತ ನನ್ನ ಗಂಡನು ಚಿಂತೆ ಮಾಡುತ್ತಾ ಆಗಾಗ ನನಗೆ ಹೇಳುತ್ತಿದ್ದು. ನಾನು ಏಕೆ ಚಿಂತೆ ಮಾಡುತ್ತಿ ಹೇಗಾದರೂ ದುಡಿದು ಮುಟ್ಟಿಸಿದರೆ ಆಯಿತು ಅಂತ ನನ್ನ ಗಂಡನಿಗೆ ಹೇಳಿದ್ದು. ಆದರೆ ನನ್ನ  ಗಂಡನು ಈ ಸಾಲದ ಬಗ್ಗೆ ಚಿಂತೆ ಮಾಡುತ್ತಾ ತನ್ನ ಮನಸ್ಸಿನಲ್ಲಿ ಕೊರಗುತ್ತಿದ್ದನು. 

   ಹೀಗಿರುವಾಗ ನಿನ್ನೆ ದಿನಾಂಕ:05.08.2020 ರಂದು 4:10 ಪಿಎಮ್ ಸುಮಾರಿಗೆ  ನಾನು ನನ್ನ ಮನೆಯಲ್ಲಿದ್ದಾಗ  ನನ್ನ ಗಂಡನ ಅಣ್ಣನ ಮಗ ರಮೇಶ ತಂದೆ ಭೀಮಣ್ಣ ಇತನು ಪೋನ್ ಮಾಡಿ ನನಗೆ ತಿಳಿಸಿದ್ದೆನೆಂದರೆ ನಾನು ಮತ್ತು ಸಂಗಣ್ಣ ತಂದೆ ಕಂಠೆಪ್ಪ ಐದುಬಾಯಿ ಇಬ್ಬರೂ ಕೂಡಿ ನಮ್ಮ ಗ್ರಾಮದಲ್ಲಿ ಗ್ರಾಮ ಪಂಚಾಯತ ಹತ್ತಿರ ಕಾಲುವೆಯ ಹತ್ತಿರ 4:00 ಪಿಎಮ್ ಕ್ಕೆ ನಡೆದುಕೊಂಡು ಬರುತ್ತಿರುವಾಗ ನನ್ನ ಕಾಕನಾದ ಹಣಮಂತ್ರಾಯ ಇತನು ಒಮ್ಮಲೇ ಕಾಲುವೆಯಲ್ಲಿ ಜಿಗಿದ್ದಿದ್ದು. ನಾವಿಬ್ಬರು ಗಾಬರಿಯಾಗಿ ಬಂದು ನೋಡುವಷ್ಟರಲ್ಲಿ ಕಾಲುವೆಯಲ್ಲಿ ಹರಿದುಕೊಂಡು ಹೋಗಿದ್ದು ನಾವು ಇತರರು ಕೂಡಿ ಕಾಲವೆ ನೀರಿನಲ್ಲಿ ಹುಡುತ್ತಿದ್ದಾಗಿ ತಿಳಿಸಿದ್ದು. ನಾನು  ನನ್ನ ಗಂಡನ ಅಣ್ಣ ಭೀಮಣ್ಣ ತಂದೆ ಸೋಮಣ್ಣ ಯಳಗುಂದಿ, ನನ್ನ ತಾಯಿ ದೇವಮ್ಮ ಗಂಡ ಹಣಮಂತ್ರಾಯ ಕವಳಿಕಂಟಿ,  ನಮ್ಮೂರಿನ ತಿರುಪತಿ ತಂದೆ ರಂಗಪ್ಪ ದೊರಿ ಇವರನ್ನು ಕರೆದುಕೊಂಡು ನಮ್ಮೂರ ನಡುವೆ ಹರಿಯುತ್ತಿರು ಕಾಲೆವೆಯ ಹತ್ತಿರ ಹೋಗಿ ನೋಡಲಾಗಿ ನನ್ನ ಗಂಡನ ಅಣ್ಣನ ಮಕ್ಕಳಾದ ರಮೇಶ, ಸೋಮಣ್ಣ, ನಮ್ಮ ಸಂಬಂಧಿ ಸಗರೆಪ್ಪ ತಂದೆ ನಿಂಗಪ್ಪ ಐದುಬಾಯಿ, ಬಸವರಾಜ ತಂದೆ ಹಣಮಂತ್ರಾಯ ಕಡದರಾಳ ಇತರರು ಹುಡುಕಾಡುತ್ತಿದ್ದು. ನಾವು ಕಾಲುವೆ ಡಂಡೆಯ ಮೇಲೆ ನಿಂತು ನೋಡುತ್ತಿದ್ದು ನಮ್ಮ ಊರ ಹತ್ತಿರ ಇರುವ ಬೋರಕಾ ಕಂಪನಿ ಕಡೆಗೆ ಹೋಗುವ ಹೆಚ್ಬಿಸಿ ಕಾಲುವೆಯ ಗೇಟಿನ ಹತ್ತಿರ  ಸುಮಾರು 11:30 ಪಿಎಮ್ ಕ್ಕೆ  ನನ್ನ ಗಂಡನ ಶವವು ಸಿಕ್ಕಿದ್ದು. ಅವರೆಲ್ಲರೂ ಕೂಡಿ ನನ್ನ ಗಂಡನ ಶವವನ್ನು ಕಾಲುವೆಯ ನೀರಿನಿಂದು ತೆಗೆದು ಅಲ್ಲಿಯೇ ಪಕ್ಕದಲ್ಲಿ ಹಾಕಿದ್ದು ನನ್ನ ಗಂಡನಾದ ಹಣಮಂತ್ರಾಯ ತಂದೆ ಸೋಮಣ್ಣ ಯಳಗುಂದಿ ಇತನಿಗೆ ನೋಡಲಾಗಿ ಹಣೆಯ ಮೇಲೆ ಸ್ವಲ್ಪ ತರೆಚಿದ ರಕ್ತಗಾಯವಾಗಿದ್ದು ಕಂಡು ಬಂದಿರುತ್ತದೆ. ನನ್ನ ಗಂಡನಿಗೆ ವ:45 ವರ್ಷ ಉ:ಒಕ್ಕಲುತನ ಜಾ:ಬೇಡರ ಸಾ: ರಾಜನಕೊಳುರು  ಇತನ ಮರಣದಲ್ಲಿ ಯಾವುದೇ ಸಂಶಯ ಇರುವದಿಲ್ಲಾ. ರಾತ್ರಿಯಾಗಿದ್ದರಿಂದ ನನ್ನ ಸಂಬಂದಿಕರೊಂದಿಗೆ ವಿಚಾರ ಮಾಡಿಕೊಂಡು ದೂರು ನೀಡಲು  ತಡವಾಗಿರುತ್ತದೆ. ಗಂಡನು ತಾನು ಬ್ಯಾಂಕಿನಲ್ಲಿ ಮತ್ತು ಕೈಗಾಡ ಮಾಡಿದ ಒಟ್ಟು 2,00000/- ರೂ ಸಾಲದ ಬಾದೆಯಿಂದ ಮನಸ್ಸಿಗೆ ಬೇಸರ ಮಾಡಿಕೊಂಡು ಕಾಲುವೆಯ ನೀರಿನಲ್ಲಿ ಜಿಗಿದ್ದು ಮೃತಪಟ್ಟಿದ್ದು ತಾವು ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತ ವಗೈರೆ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:10/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 20/2019 ಕಲಂ: 107 ಸಿ.ಆರ್.ಪಿ.ಸಿ : ಮಾನ್ಯರವರವರಲ್ಲಿ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ ನಾನು ಶಾಮಸುಂದರ ಎ.ಎಸ್.ಐ. ಸುರಪುರ ಪೊಲೀಸ್ ಠಾಣೆ, ಇಂದು ದಿನಾಂಕ: 06-08-2020 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ಹಳ್ಳಿಭೇಟಿ ಕುರಿತು ಠಾಣೆಯಿಂದ ಹೊರಟು ದೇವತ್ಕಲ್ ಗ್ರಾಮಕ್ಕೆ 9:30 ಎ.ಎಂ. ಕ್ಕೆ ಬೇಟಿ ನಿಡಿದ ಸಮಯದಲ್ಲಿ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿ ಏನೆಂದರೆ ದೇವತ್ಕಲ ಗ್ರಾಮದಲ್ಲಿ ಮೇಲೆ ನಮೂದಿಸಿದ ಎದುದಾರರಾರು ಹಾಗೂ ಗ್ರಾಮದ ಪರಮಪ್ಪ ತಂದೆ ಬಸಪ್ಪ ಕಟ್ಟಿಮನಿ ಇವರ ನಡುವೆ ಹೊಲ ಸವರ್ೇ ನಂಬರ 89/ಆ/ಎ ನೇದ್ದರ ವಿಷಯವಾಗಿ ಗುಂಪುಕಟ್ಟಿಕೊಂಡು ತಮ್ಮ ತಮ್ಮಲ್ಲಿ ವೈಷ್ಯಮ್ಯ ಮಾಡಿಕೊಂಡು ಗ್ರಾಮದಲ್ಲಿ ತಿರುಗಾಡುತ್ತಿದ್ದು, ಸದರಿಯವರಿಗೆ ಹೀಗೆ ಬಿಟ್ಟರೆ ಇಂದಿಲ್ಲಾ ನಾಳೆ ಒಬ್ಬರಿಗೋಬ್ಬರು ಹೊಡೆದಾಟ ಬಡೆದಾಟ ಮಾಡಿಕೊಂಡು ಆಸ್ತಿ ಪಾಸ್ತಿ ಹಾನಿ ಮಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡುವ ಸಂಬವ ಹೆಚ್ಚಾಗಿರುತ್ತದೆ  ಅಂತಾ ತಿಳಿದು ಬಂದ ಮಾಹಿತಿ ಮೇರೆಗೆ  ಸಾರ್ವಜನಿಕ ಶಾಂತತಾ ಕಾಪಾಡುವ ದೃಷ್ಟಿಯಿಂದ ಠಾಣೆಗೆ ಬಂದು ಮುಂಜಾಗ್ರತಾ ಕ್ರಮವಾಗಿ ಸದರಿಯವರ ವಿರುದ್ಧ ಠಾಣಾ ಪಿ.ಎ.ಆರ್ ನಂಬರ 20/2020 ಕಲಂ:107 ಸಿಆರ್ಪಿಸಿ ನೇದ್ದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಕಾರಣ ಮಾನ್ಯರವರು ಸದರಿ ಎದುರುದಾರರನ್ನು ಕರೆಯಿಸಿ ಅವರಿಂದ ಕಲಂ: 116 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಇಂಟೇರಿಯಮ್ ಬಾಂಡ ಬರೆಯಿಸಿಕೊಳ್ಳಲು ವಿನಂತಿ.       



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!