ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/08/2020

By blogger on ಮಂಗಳವಾರ, ಆಗಸ್ಟ್ 4, 2020


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/08/2020 
                                                                                                                                
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 101 /2020 ಕಲಂ: 427, 447, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ 03-08-2020 ರಂದು 10 ಎ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರಿ ನರಸಪ್ಪಾ ತಂದೆ ಭೀಮರಾಯ ಚಂಚವಾರ ವಯಾ:42 ಉ:ಒಕ್ಕಲುತನ ಜಾ:ಬೇಡರ ಸಾ:ಬಾಚವಾರ ತಾ:ಜಿ:ಯಾದಗಿರಿ ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆಯನ್ನು ಸಲ್ಲಿಸಿದ್ದು ಎನೆಂದರೆ ನಮ್ಮೂರ ಗ್ರಾಮದ ಸೀಮೆಯಲ್ಲಿ ನನ್ನ ಸ್ವಂತ ಹೋಲವಿದ್ದು ಅದರ ಸವರ್ೇ ನಂಬರ 60 ಇರುತ್ತದೆ. ಅದರ ವಿಸ್ತಿರ್ಣ 4 ಎಕರೆ ಇರುತ್ತದೆ. ಈ ಹೋಲ ನಮ್ಮ ಹಿರಿಯರಿಂದ ಬಂದ ಆಸ್ತಿಯಾಗಿರುತ್ತದೆ. ಈ ವರ್ಷ ಹೋಲದಲ್ಲಿ ಹೆಸರು ಬಿತ್ತಿದ್ದು ಹೋಲದಲ್ಲಿ ಹೆಸರು ಬೆಳೆಯಿತ್ತು. ನಮ್ಮ ಹೋಲದ ಪಕ್ಕದಲ್ಲಿ ಅಂದರೆ ನಮ್ಮ ಹೋಲಕ್ಕೆ ಹೊಂದಿಕೊಂಡು ನಮ್ಮ ಊರಿನ ಕುರುಬ ಸಮಾಜದ ರಾಕೇಶ ಎಂಬುವವರ ಹೋಲವಿದ್ದು ಅವರು ಕಲಬುರಗರ್ಿಯಲ್ಲಿಯೇ ವಾಸವಾಗಿರುತ್ತಾರೆ. ಅವರು ಕಲಬುರಗಿಯಲ್ಲಿ ಇರುವುದರಿಂದ ಅವರು ತಮ್ಮ ಹೋಲವನ್ನು ಬೇರೆಯವರಿಗೆ ಪಾಲಿನ ಹಾಗೇ ಹಚ್ಚುತ್ತಾ ಬಂದಿರುತ್ತಾರೆ. ಈ ವರ್ಷ ಸದರಿ ಹೋಲವು ನಮ್ಮ ಗ್ರಾಮದವರೇ ಆದ  ಮತ್ತು ನಮ್ಮ ಸಮಾಜದ 1) ಸಣ್ಣತಿಮ್ಮಣ್ಣಾ ತಂದೆ ಚಂದಪ್ಪಾ ಡೊಂಕನೋರ 2) ಬಸವರಾಜ ತಂದೆ ಹಣಮಂತ್ರಾಯ ಕವಾಲ್ದಾರ ಮತ್ತು 3) ಯಲ್ಲಪ್ಪಾ ತಂದೆ ಹಣಮಂತ ಹುಡೇದ ಈ ಮೂರು ಜನರಿಗೆ ಪಾಲಿನ ಹಾಗೇ ಹಚ್ಚಿದ್ದು ಇರುತ್ತದೆ.  ಈಗ 2-3 ತಿಂಗಳಿಂದ ಆ ಮೂರು ಜನರು ತಾವು ಪಾಲಿಗೆ ಮಾಡಿದ ಹೋಲದಲ್ಲಿ ಸಾಗುವಳಿ ಮಾಡುವಾಗ ನಮ್ಮ ಮ್ಯಾರಿಯನ್ನು ಹೊಡೆದು ನಮ್ಮ ಹೋಲದಲ್ಲಿ ಒತ್ತುವರಿ ಮಾಡಿದ್ದು ಈ ಸಂಬಂಧವಾಗಿ ನನ್ನ ಅವರು ಜೊತೆಯಲ್ಲಿ ಜಗಳಾ ಮಾಡಿಕೊಂಡಿದ್ದರು. ಆವಾಗಿನಿಂದ ನಾವು ಮತ್ತು ಅವರು ಮಾತಾಡುತ್ತಿರಲಿಲ್ಲಾ.
       ಹೀಗಿದ್ದು ದಿನಾಂಕ 01-08-2020 ರಂದು ಬೆಳಗ್ಗೆ ನಾನು ನನ್ನ ಖಾಸಗಿ ಕೆಲಸದ ನಿಮೀತ್ಯ ಯಾದಗಿರಿಗೆ ಬಂದಿದ್ದೇನು. ನನ್ನ ಹೆಂಡತಿಯಾದ ಹಣಮಂತಿ ನಮ್ಮ ಹೋಲದ ಕಡೆಗೆ ಹೋಗಿದ್ದಳು ಮಧ್ಯಾಹ್ನ 1-15 ಗಂಟೆ ಸುಮಾರಿಗೆ ನನ್ನ ಹೆಂಡತಿ ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ತಾನು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:101/2020 ಕಲಂ 427, 447, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು ಹೋಲದಲ್ಲಿ ಕೆಲಸ ಮಾಡುತ್ತಿದ್ದಾಗ ಕುರುಬರ ಹೋಲ ಪಾಲಿಗೆ ಮಾಡಿದ ನಮ್ಮ ಗ್ರಾಮದ ಈ ಮೊದಲೇ ನಮ್ಮ ಜೋತೆಯಲ್ಲಿ ತಕರಾರು ಮಾಡಿಕೊಂಡ 1) ಸಣ್ಣತಿಮ್ಮಣ್ಣಾ ತಂದೆ ಚಂದಪ್ಪಾ ಡೊಂಕನೋರ 2) ಬಸವರಾಜ ತಂದೆ ಹಣಮಂತ್ರಾಯ ಕವಾಲ್ದಾರ ಮತ್ತು 3) ಯಲ್ಲಪ್ಪಾ ತಂದೆ ಹಣಮಂತ ಹುಡೇದ ಈ ಮೂರು ಟ್ರ್ಯಾಕ್ಟರ ಸಹಾಯದಿಂದ ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನಮ್ಮ ಹೋಲದಲ್ಲಿದ್ದ ಹೆಸರು ಬೇಳೆಯನ್ನು ಟ್ರ್ಯಾಕ್ಟರ ಮುಖಾಂತರ ಹಾಳು ಮಾಡುತ್ತಿದ್ದಾರೆ ಅಂತಾ ತಿಳಿಸಿದಾಗ ನಾನು ಕೂಡಲೇ ಯಾದಗಿರಿಯಿಂದ ನಮ್ಮ ಹೋಲಕ್ಕೆ ಹೋಗಿ ನೋಡುವಷ್ಟರಲ್ಲಿ ಅವರು ಸುಮಾರು ಒಂದು ಎಕರೆದಷ್ಟು ಹೆಸರು ಬೇಳಯನ್ನು ಹಾಳು ಮಾಡಿದ್ದರು. ಅಷ್ಟರಲ್ಲಿ ನಮ್ಮ ಪಕ್ಕದ ಹೋಲದ ನಾಗೇಂದ್ರ ತಂದೆ ಭೀಮರಾಯ ಚಾಮನಳ್ಳಿ ಕೂಡಾ ಅಲ್ಲಿಗೇ ಬಂದಿದ್ದು ಆಗ ನಾನು ಅವರಿಗೆ ಯಾಕೇ ನಮ್ಮ ಹೋದಲ್ಲಿದ್ದ ಬೇಳೆ ಹಾಳು ಮಾಡಿದ್ದಿರಿ ಅಂತಾ ಕೇಳಿದಾಗ ಅವರು ರಂಡಿ ಮಗನೇ ಇನ್ನೂ ಬಿಟ್ಟಿದ್ದಿವಿ ಇಲ್ಲಾಂದ್ರ ಪೂತರ್ಿ ಹಾಳು ಮಾಡುತ್ತಿದ್ವಿ ಸುಮ್ಮನೇ ನಮ್ಮ ತಂಟೆಗೆ ಬರಬೇಡ ಬಂದರೇ ನಿನಗೆ ಇಲ್ಲಿಯೇ ಖಲಾಸ ಮಾಡುತ್ತೆವೆ ಅಂತಾ ನನಗೆ ಜೀವದ ಭಯ ಹಾಕಿ ಹೋದರು. ಸದರಿ ಟ್ರ್ಯಾಕ್ಟರ ಸಣ್ಣತಿಮ್ಮಣ್ಣಾ ತಂದೆ ಚಂದಪ್ಪಾ ಡೊಂಕನೋರ ಇತನದೇ ಇದ್ದು ಅದರ ನಂಬರ ನನಗೆ ಗೊತ್ತಿಲ್ಲಾ. ಈ ರೀತಿಯಾಗಿ ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನಮ್ಮ ಹೋಲದಲ್ಲಿದ್ದ ಹೆಸರು ಬೇಳೆಯನ್ನು ನಾಶ ಮಾಡಿದ್ದು ಕೇಳಿದರೇ ಅವಾಚ್ವಾಗಿ ಬೈದು ಜೀವದ ಭಯ ಹಾಕಿದ  ಮೇಲ್ಕಂಡ 3  ಜನರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:101/2020 ಕಲಂ 427, 447, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

UÀÄgÀ«ÄoÀPÀ¯ï ¥ÉưøÀ oÁuÉ UÀÄ£Éß £ÀA:- ¦JDgï £ÀA 09/2020 PÀ®A 107 ¹.Dgï.¦.¹. :    ಇಂದು ದಿನಾಂಕ. 03.08.2020 ರಂದು ಹಳ್ಳಿಗಳ್ಳಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಮುಂಜಾನೆ  10 ಗಂಟೆಯ ಸುಮಾರಿಗೆ ಅರಕೇರಾ ಕೆ ಗ್ರಾಮ ಕ್ಕೆ ಬೇಟಿ ನೀಡಿದಾಗ ಅರಕೇರಾ ಕೆ ಗ್ರಾಮದ ಮುಖ್ಯ ರಸ್ತೆಯ ಮೇಲೆ ಅರಕೇರಾ ಕೆ. ಗ್ರಾಮದ ಬಸ್ ನಿಲ್ದಾಣದ ಹತ್ತಿರ ಈ ಮೊದಲೇ ಹತ್ತಿರ ಡಾ|| ಬಿ.ಆರ್. ಅಂಬೇಡ್ಕರ್, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮತ್ತು ರಕ್ಷಣ ವೇದಿಗೆ ಆಟೋ ಸ್ಟಂಡ್ ಹೆಸರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಾಮ ಪಲಕಗಳನ್ನು ಆಳವಡಿಸಿದ್ದು, ಅವುಗಳ ಜೊತೆಗೆ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಹೆಸರಿನ ಭಾವಚಿತ್ರರುವ ನಾಮಪಲಕಗಳನ್ನು ಆಳವಿಡಿಸಿದ್ದು ಇರುತ್ತದೆ.
      ಈ ನಾಮಪಲಕಗಳ ವಿಷಯದಲ್ಲಿ ಡಾ|| ಬಿ.ಆರ್. ಅಂಬೇಡ್ಕರ ನಾಮಪಲಕದ ತಾಲೂಕ ಸಂಘಟನಾ ಸಂಚಾಲಕರಾದ ಮಲ್ಲಪ್ಪ ಬಿ ಉರಸುಲ್ ಮತ್ತು ಆತನ ಸಂಘಡಿಗರೆಲ್ಲರು ಊರಲ್ಲಿ ಶ್ರೀ ಅಂಬಿಗರ ಚೌಡಯ್ಯ ನಾಮಪಲಕವನ್ನು ನಮ್ಮ ಡಾ||ಬಿ.ಆರ್. ಅಂಬೇಡ್ಕರ್ ನಾಮಫಲಕದಲ್ಲಿ ಪಕ್ಕದಲ್ಲಿ ಹಾಕಿದ್ದಾರೆ ಅಂದಾಡಿಕೊಳ್ಳುತ್ತ ಊರಲ್ಲಿ ತಿರುಗಾಡುತಿದ್ದು ಇರುತ್ತದೆ. ಅದೇ ರೀತಿ ಶ್ರೀ ಅಂಬಿಗರ ಚೌಡಯ್ಯ ನಾಮಪಲಕವನ್ನು ಸಂಘಧ ಅಧ್ಯಕ್ಷ್ಯರಾದ ಸಾಬಣ್ಣ ತಂದೆ ರಾಮಣ್ಣ ಇವರು ಹಾಗೂ ಇವರ ಸಂಗಡಿಗರು ನಾವು ಬಸ್ ನಿಲ್ದಾಣದ ಹತ್ತಿರ ಶ್ರೀ ಅಂಬಿಗರ ಚೌಡಯ್ಯ ನಾಮಫಲಕ ಹಾಕಿವಿ ಅಂತಾ ಊರಲ್ಲಿ  ಅಂದಾಡಿಕೊಳ್ಳುತ್ತ ಊರಲ್ಲಿ ತಿರುಗಾಡುತಿದ್ದು ಇರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಮುಂದಿನ ದಿನಗಳಲ್ಲಿ ಸದರಿ ಡಾ||ಬಿ.ಆರ್. ಅಂಬೇಡ್ಕರ್ ನಾಮಫಲಕ ಮತ್ತು ಅಂಬಿಗರ ಚೌಡಯ್ಯ ನಾಮಪಲಕದ ವಿಷಯಗಳಲ್ಲಿ ಮುಂದಿನ ದಿನಗಳಲ್ಲಿ ಎರಡು ಜನರ ನಡುವೆ ಕೋಮು ಗಲಭೆಯುಂಟಾಗಿ ಸಾರ್ವಜನಿಕ ಶಾಂತತೆ ಭಂಗ ಉಂಟಾಗುವದಲ್ಲದೆ ಎರಡು ಪಾರ್ಟಿಯ ಜನರು ಪರಸ್ಪರ ಹೊಡೆದಾಡಿ, ಪ್ರಾಣ ಆಸ್ತಿ, ಪಾಸ್ತಿ ಹಾನಿಯುಂಟಾಗುವ ಸಾಧ್ಯತೆಗಳು ಇರುವುದರಿಂದ ಶ್ರೀ ಅಂಬಿಗರ ಚೌಡಯ್ಯ ನಾಮಪಲಕಕ್ಕೆ ಸಂಬಂಧಿಸಿದ ಎರಡನೇಯ ಪಾರ್ಟಿಯ ಮೇಲ್ಕಂಡ 12 ಜನರ ಮೇಲೆ ಮುಂಜಾಗ್ರತೆ ಕ್ರಮ ಕುರಿತು ಪಿ..ಆರ್ ದಾಖಲಿಸಿಕೊಂಡಿದ್ದು ಇರುತ್ತದೆ.
 
 
UÀÄgÀ«ÄoÀPÀ¯ï ¥ÉưøÀ oÁuÉ UÀÄ£Éß £ÀA:- ¦JDgï £ÀA 10/2020 PÀ®A 107 ¹.Dgï.¦.¹. :    ಇಂದು ದಿನಾಂಕ. 03.08.2020 ರಂದು ಹಳ್ಳಿಗಳ್ಳಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಅರಕೇರಾ ಕೆ ಗ್ರಾಮ ಕ್ಕೆ ಬೇಟಿ ನೀಡಿದಾಗ ಅರಕೇರಾ ಕೆ ಗ್ರಾಮದ ಮುಖ್ಯ ರಸ್ತೆಯ ಮೇಲೆ ಅರಕೇರಾ ಕೆ. ಗ್ರಾಮದ ಬಸ್ ನಿಲ್ದಾಣದ ಹತ್ತಿರ ಈ ಮೊದಲೇ ಹತ್ತಿರ ಡಾ|| ಬಿ.ಆರ್. ಅಂಬೇಡ್ಕರ್, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮತ್ತು ರಕ್ಷಣ ವೇದಿಗೆ ಆಟೋ ಸ್ಟಂಡ್ ಹೆಸರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಾಮ ಪಲಕಗಳನ್ನು ಆಳವಡಿಸಿದ್ದು, ಅವುಗಳ ಜೊತೆಗೆ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಹೆಸರಿನ ಭಾವಚಿತ್ರರುವ ನಾಮಪಲಕಗಳನ್ನು ಆಳವಿಡಿಸಿದ್ದು ಇರುತ್ತದೆ.
      ಈ ನಾಮಪಲಕಗಳ ವಿಷಯದಲ್ಲಿ ಡಾ||ಬಿ.ಆರ್. ಅಂಬೇಡ್ಕರ ನಾಮಪಲಕದ ತಾಲೂಕ ಸಂಘಟನಾ ಸಂಚಾಲಕರಾದ ಮಲ್ಲಪ್ಪ ಬಿ ಉರಸುಲ್ ಮತ್ತು ಆತನ ಸಂಘಡಿಗರೆಲ್ಲರು ಊರಲ್ಲಿ ಶ್ರೀ ಅಂಬಿಗರ ಚೌಡಯ್ಯ ನಾಮಪಲಕವನ್ನು ನಮ್ಮ ಡಾ||ಬಿ.ಆರ್. ಅಂಬೇಡ್ಕರ್ ನಾಮಫಲಕದಲ್ಲಿ ಪಕ್ಕದಲ್ಲಿ ಹಾಕಿದ್ದಾರೆ ಅಂದಾಡಿಕೊಳ್ಳುತ್ತ ಊರಲ್ಲಿ ತಿರುಗಾಡುತಿದ್ದು ಇರುತ್ತದೆ. ಅದೇ ರೀತಿ ಶ್ರೀ ಅಂಬಿಗರ ಚೌಡಯ್ಯ ನಾಮಪಲಕವನ್ನು ಸಂಘಧ ಅಧ್ಯಕ್ಷ್ಯರಾದ ಸಾಬಣ್ಣ ತಂದೆ ರಾಮಣ್ಣ ಇವರು ಹಾಗೂ ಇವರ ಸಂಗಡಿಗರು ನಾವು ಬಸ್ ನಿಲ್ದಾಣದ ಹತ್ತಿರ ಶ್ರೀ ಅಂಬಿಗರ ಚೌಡಯ್ಯ ನಾಮಫಲಕ ಹಾಕಿವಿ ಅಂತಾ ಊರಲ್ಲಿ  ಅಂದಾಡಿಕೊಳ್ಳುತ್ತ ಊರಲ್ಲಿ ತಿರುಗಾಡುತಿದ್ದು ಇರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಮುಂದಿನ ದಿನಗಳಲ್ಲಿ ಸದರಿ ಡಾ||ಬಿ.ಆರ್. ಅಂಬೇಡ್ಕರ್ ನಾಮಫಲಕ ಮತ್ತು ಅಂಬಿಗರ ಚೌಡಯ್ಯ ನಾಮಪಲಕದ ವಿಷಯಗಳಲ್ಲಿ ಮುಂದಿನ ದಿನಗಳಲ್ಲಿ ಎರಡು ಜನರ ನಡುವೆ ಕೋಮು ಗಲಭೆಯುಂಟಾಗಿ ಸಾರ್ವಜನಿಕ ಶಾಂತತೆ ಭಂಗ ಉಂಟಾಗುವದಲ್ಲದೆ ಎರಡು ಪಾರ್ಟಿಯ ಜನರು ಪರಸ್ಪರ ಹೊಡೆದಾಡಿ, ಪ್ರಾಣ ಆಸ್ತಿ, ಪಾಸ್ತಿ ಹಾನಿಯುಂಟಾಗುವ ಸಾಧ್ಯತೆಗಳು ಇರುವುದರಿಂದ ಡಾ||ಬಿ.ಆರ್. ಅಂಬೇಡ್ಕರ ನಾಮಪಲಕಕ್ಕೆ ಸಂಬಂಧಿಸಿದ ಮೊದಲನೇಯ ಪಾರ್ಟಿಯ ಮೇಲ್ಕಂಡ 12 ಜನರ ಮೇಲೆ ಮುಂಜಾಗ್ರತೆ ಕ್ರಮ ಕುರಿತು ಪಿ..ಆರ್ ದಾಖಲಿಸಿಕೊಂಡಿದ್ದು ಇರುತ್ತದೆ.
 
 
UÀÄgÀ«ÄoÀPÀ¯ï ¥ÉưøÀ oÁuÉ UÀÄ£Éß £ÀA:- ¦JDgï £ÀA. 11/2020 PÀ®A 107 ¹.Dgï.¦.¹. : ಇಂದು ದಿನಾಂಕ. 03.08.2020 ರಂದು ಹಳ್ಳಿಗಳ್ಳಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಅರಕೇರಾ ಕೆ ಗ್ರಾಮ ಕ್ಕೆ ಬೇಟಿ ನೀಡಿದಾಗ ಅರಕೇರಾ ಕೆ ಗ್ರಾಮದ ಮುಖ್ಯ ರಸ್ತೆಯ ಮೇಲೆ ಅರಕೇರಾ ಕೆ. ಗ್ರಾಮದ ಬಸ್ ನಿಲ್ದಾಣದ ಹತ್ತಿರ ಈ ಮೊದಲೇ ಹತ್ತಿರ ಡಾ|| ಬಿ.ಆರ್. ಅಂಬೇಡ್ಕರ್, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮತ್ತು ರಕ್ಷಣ ವೇದಿಗೆ ಆಟೋ ಸ್ಟಂಡ್ ಹೆಸರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಾಮ ಪಲಕಗಳನ್ನು ಆಳವಡಿಸಿದ್ದು, ಅವುಗಳ ಜೊತೆಗೆ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಹೆಸರಿನ ಭಾವಚಿತ್ರರುವ ನಾಮಪಲಕಗಳನ್ನು ಆಳವಿಡಿಸಿದ್ದು ಇರುತ್ತದೆ.
      ಈ ನಾಮಫಲಕಗಳ ವಿಷಯದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನಾಮಫಲಕ ಸಂಘದ ಪದದಧಿಕಾರಿಗಳು ಊರಲ್ಲಿ ನಾವು  ಅರಕೇರಾ ಕೆ ಗ್ರಾಮದ ಬಸ ನಿಲ್ದಾಣದ ಹತ್ತಿರ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನಾಮಫಲಕ ಇಟ್ಟಿವಿ ಅಂತಾ ಯಾರು ಎನಮಾತರ ಮಡಕೊಳ್ಳಿ ಅಂತಾ ಊರಲ್ಲಿ ಅಂದಾಡಿಕೊಳ್ಳುತ್ತ ಊರಲ್ಲಿ ತಿರುಗಾಡುತಿದ್ದು ಇರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಮುಂದಿನ ದಿನಗಳಲ್ಲಿ  ಅರಕೇರಾ ಕೆ ಗ್ರಾಮದ ಹತ್ತಿರ ನಾಮ ಪಲಕಗಳು ಆಳವಿಡಸಿದ ವಿಷಯಕ್ಕೆ ಸಂಭಂಧಿಸಿದಂತೆ ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಭಂಗ ಉಂಟಾಗುವದಲ್ಲದೆ ನಾಮ ಫಲಕಗಳು ಹಚ್ಚಿದ ಜನಾಂಗದವರು ಹೊಡೆದಾಡಿ, ಪ್ರಾಣ ಆಸ್ತಿ, ಪಾಸ್ತಿ ಹಾನಿಯುಂಟಾಗುವ ಸಾಧ್ಯತೆಗಳು ಇರುವುದರಿಂದ ಶ್ರೀ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನಾಮಫಲಕ ಕಡೆಯ ಮೇಲ್ಕಂಡ 09 ಜನರ ಮೇಲೆ ಮುಂಜಾಗ್ರತೆ ಕ್ರಮ ಕುರಿತು ಪಿ..ಆರ್ ದಾಖಲಿಸಿಕೊಂಡಿದ್ದು ಇರುತ್ತದೆ.
      
UÀÄgÀ«ÄoÀPÀ¯ï  ¥ÉưøÀ oÁuÉ UÀÄ£Éß £ÀA:- ¦JDgï £ÀA 12/2020 PÀ®A 107 ¹.Dgï.¦.¹. :    ಇಂದು ದಿನಾಂಕ. 03.08.2020 ರಂದು ಹಳ್ಳಿಗಳ್ಳಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಅರಕೇರಾ ಕೆ ಗ್ರಾಮ ಕ್ಕೆ ಬೇಟಿ ನೀಡಿದಾಗ ಅರಕೇರಾ ಕೆ ಗ್ರಾಮದ ಮುಖ್ಯ ರಸ್ತೆಯ ಮೇಲೆ ಅರಕೇರಾ ಕೆ. ಗ್ರಾಮದ ಬಸ್ ನಿಲ್ದಾಣದ ಹತ್ತಿರ ಈ ಮೊದಲೇ ಹತ್ತಿರ ಡಾ|| ಬಿ.ಆರ್. ಅಂಬೇಡ್ಕರ್, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮತ್ತು ರಕ್ಷಣ ವೇದಿಗೆ ಆಟೋ ಸ್ಟಂಡ್ ಹೆಸರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಾಮ ಪಲಕಗಳನ್ನು ಆಳವಡಿಸಿದ್ದು, ಅವುಗಳ ಜೊತೆಗೆ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಹೆಸರಿನ ಭಾವಚಿತ್ರರುವ ನಾಮಪಲಕಗಳನ್ನು ಆಳವಿಡಿಸಿದ್ದು ಇರುತ್ತದೆ.
      ಈ ನಾಮಫಲಕಗಳ ವಿಷಯದಲ್ಲಿ ಕರ್ನಾಟಕ ರಕ್ಷಣ ವೇದಿಕೆ ನಾಮಫಲಕ ಸಂಘದ ಪದಾಧಿಕಾರಿ ಅರಕೇರಾ ಕೆಗ್ರಾಮದ ಬಸ ನಿಲ್ದಾಣದ ಹತ್ತಿರ ಕರ್ನಾಟಕ ರಕ್ಷಣ ವೇದಿಕೆ ನಾಮಫಲಕ ಇಟ್ಟಿವಿ ಅಂತಾ ಯಾರು ಎನಮಾಡತರ ನಮಗೆ ಊರಲ್ಲಿ ಅಂತಾ ಗ್ರಾಮದಲ್ಲಿ ಅಂದಾಡಿಕೊಳ್ಳುತ್ತ ತಿರುಗಾಡುತಿದ್ದು ಇರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಮುಂದಿನ ದಿನಗಳಲ್ಲಿ  ಅರಕೇರಾ ಕೆ ಗ್ರಾಮದ ಹತ್ತಿರ ನಾಮ ಪಲಕಗಳು ಆಳವಿಡಸಿದ ವಿಷಯಕ್ಕೆ ಸಂಭಂಧಿಸಿದಂತೆ ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಭಂಗ ಉಂಟಾಗುವದಲ್ಲದೆ ನಾಮ ಫಲಕಗಳು ಹಚ್ಚಿದ ಜನಾಂಗದವರು ಹೊಡೆದಾಡಿ, ಪ್ರಾಣ ಆಸ್ತಿ, ಪಾಸ್ತಿ ಹಾನಿಯುಂಟಾಗುವ ಸಾಧ್ಯತೆಗಳು ಇರುವುದರಿಂದ ಕರ್ನಾಟಕ ರಕ್ಷಣ ವೇದಿಕೆ ನಾಮಫಲಕ ಸಂಘದ ಮೇಲ್ಕಂಡ 08 ಜನರ ಮೇಲೆ ಮುಂಜಾಗ್ರತೆ ಕ್ರಮ ಕುರಿತು ಪಿ..ಆರ್ ದಾಖಲಿಸಿಕೊಂಡಿದ್ದು ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:-. 13/2020 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 03/08/2020 ರಂದು 01.50 ಪಿಎಮ್ ಕ್ಕೆ ಅಜರ್ಿದಾರನಾದ ಶ್ರೀಮತಿ. ವಿಜಯಲಕ್ಷ್ಮೀ ಗಂಡ ಸಿದ್ದಣ್ಣ ಪೋಲೀಸ್ ಪಾಟೀಲ ವ: 31 ಉ: ಮನೆಗೆಲಸ  ಜಾ: ಹಿಂದೂ ರೆಡ್ಡಿ ಸಾ: ಗೋಗಿ (ಕೆ) ತಾ||: ಶಹಾಪೂರ.  ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ನನ್ನ ಮದುವೆಯಾಗಿ 04 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿರುತ್ತಾರೆ, ಮನೆಯಲ್ಲಿ ನಾನು ನನ್ನ ಗಂಡ ಮತ್ತು ನನ್ನಿಬ್ಬರು ಮಕ್ಕಳಿರುತ್ತಾರೆ. ನಮ್ಮ ಅತ್ತೆ ನೀಲಮ್ಮ ಇವರು ದೊಡ್ಡಮಗನಾದ (ನಮ್ಮ ಭಾವ) ನಾಗರಡ್ಡಿ ಇವರ ಹತ್ರ ಬೆಂಗಳುರಿನಲ್ಲಿರುತ್ತಾರೆ, ನನ್ನ ಗಂಡ ಸಿದ್ದಣ್ಣ ಇವರು ಸಾಹೇಬಗೌಡ  ಮಲ್ಹಾರ ಇವರ ಹೊಲ ಲೀಜಿಗೆ ಹಾಕಿಕೊಂಡು ಒಕ್ಕಲುತನ ಮಾಡಿಕೊಂಡಿದ್ದರು, ರಕ್ಷಾ ಬಂಧನ ಹಬ್ಬದ ಕುರಿತು 2 ದಿನದ ಹಿಂದೆ ನಾನು ಯಾದಗಿರಿಗೆ ತವರುಮನೆಗೆ ಹೋಗಿದ್ದನು, 
       ಹೀಗಿದ್ದು, ಇಂದು ದಿ: 03/08/2020 ರಂದು ನನ್ನ ಸಂಬಂದಿಕರಾದ ಮಲ್ಲಣ್ಣ ತಂದೆ ಚಂದ್ರಾಮ ಮಲ್ಹಾರ ಸಾ; ಗೋಗಿ (ಕೆ) ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನಂದರೆ, ಇಂದು ಬೆಳಿಗ್ಗೆ 06.30 ಎಎಂ ಸುಮಾರಿಗೆ ತಾನು ಮತ್ತು ಸಿದ್ರಾಮರೆಡ್ಡಿ ತಂದೆ ಗುರುನಾಥರೆಡ್ಡಿ ಶಿರೆಡ್ಡಿ ಸಾ; ಗೋಗಿ ಕೆ ಇಬ್ಬರೂ ಭಿ.ಗುಡಿ-ಗೋಗಿ ರೋಡಿನಿಂದ ವಾಕಿಂಗ್ ಮುಗಿಸಿಕೊಂಡು ಮರಳಿ ಬರುವಾಗ ನಿಮ್ಮ ಗಂಡನಾದ ಸಿದ್ದನ್ಣ ತಂದೆ ಯಂಕಣಗೌಡ ಪೊಲೀಸ್ ಪಾಟೀಲ ಇವರು ತಾವು ಲೀಜಿಗೆ ಹಾಕಿಕೊಂಡ ಹೊಲದಲಿಂದ ರೋಡ ಕಡೆಗೆ ಗಾಬರಿಯಾಗಿ ಬೆವರುತ್ತಾ ಬಂದು ತನಗೆ ಎಡಗಾಲಿನ ಪಾದದ ಹೆಬ್ಬೇರಳಿನ ಸ್ವಲ್ಪ ಹಿಂದೆ ದೊಡ್ಡ ಹಾವೋಂದು ಕಡದಿರುತ್ತದೆ ಅಂತಾ ತೊದಲುತ್ತಾ ಹೇಳಿದ, ಸುಸ್ತಾಗಿದ್ದು, ನೋಡಿ ನಾನು ಮತ್ತು ಸಿದ್ರಾಮರೆಡ್ಡಿ ಇಬ್ಬರೂ ಕೂಡಿ ಸಿದ್ದಣ್ಣ ಇವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೆಕೆಂದು ಗೋಗಿ ವರೆಗೆ ಕರೆದುಕೊಂಡು ಬಂದಿದ್ದು, ಮುಂದೆ ಹೋಗಲು ವಾಹನ ವ್ಯವಸ್ಥೆ ಮಾಡಿಕೊಳ್ಳುವಷ್ಟರಲ್ಲಿ ಸಿದ್ದಣ್ಣ ಇವರು ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದರು. ಆಗ ನಾನು ನನ್ನ ತಂದೆಯವರಾದ ಸೂಗರೆಡ್ಡಿ ತಂದೆ ಸಂಗಾರೆಡ್ಡಿ ಬೆಂಡೆಬೆಂಬಳಿ ಇವರೊಂದಿಗೆ ಗೋಗಿಗೆ ಬಂದು, ನನ್ನ ಗಂಡನ ಶವವನ್ನು ನೋಡಿರುತ್ತೇವೆ. ನನ್ನ ಗಂಡನ ಎಡಗಾಲಿನ ಪಾದದ ಹೆಬ್ಬೆರಳಿನ ಸ್ವಲ್ಪ ಹಿಂದೆ ಹಾವು ಕಡೆದಂತೆ ರಕ್ತಗಾಯ ಆಗಿದ್ದು ಕಂಡು ಬಂದಿರುತ್ತದೆ. ನನ್ನ ಗಂಡನ ಸಾವಿನ ವಿಷಯದಲ್ಲಿ ಯಾರ ಮೇಲೆಯೂ ಯಾವುದೆ ರೀತಿಯ ಸಂಶಯ ಇತ್ಯಾದಿ ಇರುವದಿಲ್ಲ ತಾವು ಮುಂದಿನ ಕ್ರಮ ಕೈಕೊಳ್ಳಬೇಕು ಘಟನೆಯು ಆಕಸ್ಮಿಕವಾಗಿ ಹಾವು ಕಡೆದಿದ್ದರಿಂದ ಆಗಿದ್ದು, ನನ್ನ ಗಂಡ ಅಂದಾಜು 07.00 ಎಎಂ ಸುಮಾರಿಗೆ ಮೃತಪಟ್ಟಿರುತ್ತಾನೆ. ನನ್ನ ತಂದೆಯವರ ಜೋತೆ ಹಾಜರಿದ್ದು, ಈ ಅಜರ್ಿ ನೀಡಿದ್ದು, ಮುಮದಿನ ಕ್ರಮ ಕೈಕೊಳ್ಲಿರಿ ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ: 13/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ 12/2020  ಕಲಂ 174(ಸಿ) ಸಿಆರ್ಪಿಸಿ : ಇಂದು ದಿನಾಂಕ; 03/08/2020 ರಂದು 12.30 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಭೀಮಣ್ಣ  ತಂದೆ ಶಿವಪ್ಪ ವಾರಿ  ವಯಾ|| 45  ಜಾ|| ಕುರುಬರ  ಉ|| ಒಕ್ಕಲುತನ  ಸಾ|| ಪರಸನಳ್ಳಿ  ತಾ|| ಸುರಪೂರ ರವರು ಠಾಣಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ ಅಜರ್ಿ ಸಾರಾಂಶವೆನೆಂದರೆ ನನಗೆ ಮಲ್ಲಮ್ಮ @ ತಾಯಮ್ಮ ಹಾಗೂ ನಿಂಗಪ್ಪ ಎಂಬುವ ಎರಡು ಜನ ಮಕ್ಕಳಿದ್ದು ಹಿರಿಯ ಮಗಳಾದ ಮಲ್ಲಮ್ಮ @ ತಾಯಮ್ಮ ಇವಳಿಗೆ ನಗನೂರ ಗ್ರಾಮದ ಸಂಬಂದಿ  ಜೆಟ್ಟೆಪ್ಪ ದಿಡ್ಡಿಯವರು ಈತನಿಗೆ 1 ವರ್ಷ 3 ತಿಂಗಳ ಹಿಂದೆ ಕೊಟ್ಟು ಮದುವೆ ಮಾಡಿದ್ದು ಸದ್ಯ ಅವರಿಗೆ ಇನ್ನೂ ಮಕ್ಕಳಾಗಿರುವುದಿಲ್ಲ. ನನ್ನ ಮಗಳಿಗೆ ಮದುವೆ ಆದಾಗಿನಿಂದಲೂ ಹೊಟ್ಟೆ ನೋವು ಅಂತಾ ಆಗಾಗ ಆಸ್ಪತ್ರೆಗೆ ತೋರಿಸಿಕೊಳ್ಳುತ್ತಿದ್ದಳು. ಹೀಗಿದ್ದು ಇಂದು ದಿನಾಂಕ: 03/08/2020 ರಂದು ಬೆಳಿಗ್ಗೆ 8.30 ಗಂಟೆಗೆ ಅಳಿಯ ಜೆಟ್ಟೆಪ್ಪನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ಮಗಳು ನಾನು ನಮ್ಮ ಹೊಲಕ್ಕೆ ತೋಗರಿಗೆ ಎಣ್ಣೆ ಹೊಡೆಯಲು ಬಂದಾಗ ನಿಮ್ಮ ಮಗಳು ಹೊಟ್ಟೆ ನೋವು ತಾಳಲಾರದೆ ಕ್ರಿಮಿನಾಷಕ ಔಷದಿ ಸೇವಿಸಿದ್ದಾಳೆ ಅಂತಾ ತಿಳಿದಾಗ ನಾನು ನನ್ನ ಹೆಂಡತಿ ಇಬ್ಬರು ನಗನೂರಿಗೆ ಬಂದು ಮಗಳಿಗೆ ಉಪಚಾರ ಕುರಿತು ಶಹಾಪೂರ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಆಸ್ಪತ್ರೆಯಲ್ಲಿಯೇ ಸಾವನಪ್ಪಿರುತ್ತಾಳೆ, ಸದರಿಯವಳ ಸಾವಿನಲ್ಲಿ ಸಂಶಯವಿರುತ್ತದೆ. ಕಾರಣ ತಾವು ಬಂದು ಮುಂದಿನ ಕ್ರಕ ಕೈಕೊಳ್ಳಬೇಕು ಅಂತಾ ಅಜರ್ಿ ಕೊಟ್ಟ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 12/2020 ಕಲಂ 174(ಸಿ) ಸಿ.ಆರ್.ಪಿ.ಸಿ ನೇದ್ದರಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 214/2020. ಕಲಂ 379 ಐ.ಪಿ.ಸಿ.ಮತ್ತು ಕಲಂ.44 (1) ಕೆ.ಎಮ್.ಎಮ್.ಸಿ.ಆರ್ ರೂಲ್ : ದಿನಾಂಕ: 03-08-2020 ರಂದು 6:20 ಪಿ.ಎಮ್.ಕ್ಕೆ ಆರೋಪಿತರು ತಮ್ಮ ಟಿಪ್ಪರ ನಂಬರ ಕೆ.ಎ.20 ಟಿ.ಎಮ್.3271 ನೇದ್ದರಲ್ಲಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸರಕಾರಕ್ಕೆ ಯಾವುದೇ ತೆರಿಗೆ ತುಂಬದೇ ಅಕ್ರಮವಾಗಿ ಸಾಗಿಸುತ್ತಿದ್ದಾಗ ಫಿಯರ್ಾದಿದಾರರು ದೇವದುರ್ಗ ಕ್ರಾಸ ಹತ್ತಿರ ರಸ್ತೆಯ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಮರಳು ತುಂಬಿದ ಟಿಪ್ಪರನ್ನು ವಶಪಡಿಸಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಆಧಾರದ ಮೇಲಿಂದ  ಠಾಣೆ ಗುನ್ನೆ ನಂ.214/2020 ಕಲಂ. 379 ಐ.ಪಿ.ಸಿ. ಮತ್ತು ಕಲಂ 44(1) ಕೆ.ಎಮ್.ಎಮ್.ಸಿ.ಆರ್  ಅಡಿಯಲ್ಲಿ  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 
ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 215/2020.ಕಲಂಃ 78(3) ಕೆ.ಪಿ.ಆ್ಯಕ್ಟ : ಇಂದು ದಿನಾಂಕ 03/08/2020 ರಂದು 23-10 ಗಂಟೆಗೆ ಸ|| ತ|| ಪಿಯರ್ಾದಿ ಚಂದ್ರಕಾಂತ ಪಿ.ಎಸ್.ಐ.(ಕಾ.ಸೂ) ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ 03/08/2020 ರಂದು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಹಳಿಸಗರದ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ 21-05 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ನಾರಾಯಣ ಹೆಚ್.ಸಿ.49. ಶರಣಪ್ಪ ಹೆಚ್.ಸಿ.164. ಗೋಕುಲ್ ಹುಸೇನ್ ಪಿ.ಸಿ. 172. ಬಾಗಣ್ಣ ಪಿ.ಸಿ.194. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಗೋಕುಲ್ ಹುಸೇನ್ ಪಿ.ಸಿ 172. ರವರಿಗೆ 21-10 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 21-20 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.
       ಮೇಲಾಧಿಕಾರಿಯವರ  ಮಾರ್ಗದರ್ಶನದಲ್ಲಿ. ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಒಂದು ಖಾಸಗಿ ಜೀಪನಲ್ಲಿ ಕುಳಿತುಕೊಂಡು ದಾಳಿ ಕುರಿತು ಠಾಣೆಯಿಂದ 21-25 ಗಂಟೆಗೆ ಹೊರಟೇವು. ನೇರವಾಗಿ ಹನುಮಾನ ಗುಡಿಯ ಹತ್ತಿರ ಸ್ಪಲ್ಪ ದೂರದಲ್ಲಿ 21-35 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಜೀಪಿನಿಂದ ನಾವು ಎಲ್ಲರು ಇಳಿದು ಅಲ್ಲಿಂದ ಹನುಮಾನ ಗುಡಿಯ ಹತ್ತಿರ ನಡೆದುಕೊಂಡು ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 21-40 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ದೇವಿಂದ್ರಪ್ಪ @ ದೇವಪ್ಪ ತಂದೆ ಬಸವರಾಜ ರಾಂಪೂರ ವ|| 35 ಜಾ|| ಕಬ್ಬಲಿಗ ಉ|| ಮಟಕಾಬರೆದುಕೊಳ್ಳುವದು ಸಾ|| ಹಳಿಸಗರ ಶಹಾಪೂರ ಅಂತ ಹೇಳಿದನು. ಈತನ ಹತ್ತಿರ ನಗದು ಹಣ 2300-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಮತ್ತು 2 ಮಟಕಾ ಚೀಟಿಗಳು, ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 2300-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 21-45 ಗಂಟೆಯಿಂದ 22-45 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 22-55 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ, ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ 23-10 ಗಂಟೆಗೆ ವರದಿ  ಸಲ್ಲಿಸಿದ್ದರ ಸಾರಾಂಶದ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 215/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಭೀಗುಡಿ  ಪೊಲೀಸ ಠಾಣೆ ಗುನ್ನೆ ನಂ:- 90/2020 ಕಲಂ 323, 324, 504, 506 ಸಂಗಡ 34 ಐಪಿಸಿ : ದಿನಾಂಕ:03/08/2020 ರಂದು 5 ಪಿ.ಎಮ್. ಸುಮಾರಿಗೆ ಫಿಯರ್ಾದಿಯು ಆರೋಪಿತರಾದ ತನ್ನ ತಂದೆ, ತಾಯಿ, ತಮ್ಮನಿಗೆ ತನಗೆ ಒಂದು ಹೊಸ ಮನೆ ಕಟ್ಟಿಸಿಕೊಡುವ ವಿಷಯದಲ್ಲಿ ಕೇಳಲು ಹೋದಾಗ ಆರೋಪಿತರು ಫಿಯರ್ಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ರಾಡಿನಿಂದ ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!