ಮಹಿಳಾ ಪೊಲೀಸ ಠಾಣೆ ಗುನ್ನೆ ನಂ:- 20/2020 ಕಲಂ: ಮಹಿಳೆ ಕಾಣೆಯಾದ ಬಗ್ಗೆ ಐ.ಪಿ.ಸಿ : ಇಂದು ದಿನಾಂಕ: 01.08.2020 ರಂದು ಬೆಳಿಗ್ಗೆ 9.30 ಎ.ಎಂಕ್ಕೆ ಪಿರ್ಯಾಧಿ ಶ್ರೀನಿವಾಸ ತಂದೆ ಸುಭಾಸ ಹಲಗೇರ ವಯಾ-28 ಸಾ- ಯಾದಗಿರಿ ಇವರು ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಏನೆಂದರೆ ದಿನಾಂಕ:-24.07.2020 ರಂದು ರಾತ್ರಿ 8:00 ಗಂಟೆಗೆ ನನ್ನ ಹೆಂಡತಿ ಅಶ್ವೀನಿ ವಯಾ-25 ವರ್ಷ ಇವರು ಬಹಿದರ್ೆಸೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋದವಳು ಅರ್ಧ ಗಂಟೆಯಾದರು ಮರಳಿ ಮನೆಗೆ ಬಂದಿರಲಿಲ್ಲ. ನಂತರ ನಾನು ಮತ್ತು ನನ್ನ ಅಣ್ಣ ಸಾಬಣ್ಣ ತಂದೆ ಸುಭಾಷ್, ಚಿಕ್ಕಪ್ಪನ ಮಗನಾದ ಶಿವು ತಂದೆ ಮರೆಪ್ಪ ಕೂಡಿ ನಮ್ಮ ಓಣಿಯಲ್ಲಿ ಅಕ್ಕ ಪಕ್ಕದ ಮನೆಯವರನ್ನು ವಿಚಾರಣೆ ಮಾಡಿದ್ದು ನನ್ನ ಹೆಂಡತಿ ಬಂದಿಲ್ಲ ಎಂದು ತಿಳಿಸಿರುತ್ತಾರೆ, ಅಲ್ಲದೆ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಗಂಜ್ ಏರಿಯಾದಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಲಾಗಿ ನನ್ನ ಹೆಂಡತಿ ಸಿಕ್ಕಿರುವುದಿಲ್ಲ, ಕಾಣೆಯಾದ ನನ್ನ ಹೆಂಢತಿಯನ್ನು ಪತ್ತೆ ಮಾಡಿಕೊಡಬೇಕು ಅಂತ ಕೊಟ್ಟ ದೂರಿನ ಮೇಲಿಂದ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 20/2020 ಕಲಂ: ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 185/2020 ಕಲಂ 279, 338 ಐಪಿಸಿ : ಇಂದು ದಿನಾಂಕ:01/08/2020 ರಂದು 8:30 ಎ.ಎಂ. ಕ್ಕೆ ಠಾಣೆಯ ಎಸ್.ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಹುಸೇನಬಾಷಾ ತಂದೆ ಅಲ್ಲಾಭಕ್ಷ ಬುಂಕಲದೊಡ್ಡಿ ವಯ: 24 ವರ್ಷ ಜಾತಿ: ಮುಸ್ಲಿಂ ಉ: ಒಕ್ಕಲುತನ ಸಾ: ತಿಂಥಣಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿಯ ಸಾರಾಂಶವೆನೆಂದರೆ ದಿನಾಂಕಃ 31-07-2020 ರಂದು ಸಾಯಂಕಾಲ ನನ್ನ ಸೋದರಮಾವನಾದ ಬಡೇಸಾಬ ತಂದೆ ಬಾಷುಮಿಯಾ ಮುಲ್ಲಾ ವಯಃ 29 ವರ್ಷ ಜಾತಿಃ ಮುಸ್ಲಿಂ ಸಾ: ಗೋಡಿಹಾಳ(ಟಿ) ತಾಃ ಸುರಪೂರ ಇತನು ನಮ್ಮ ಮನೆಗೆ ಬಂದಿದ್ದು, ಇಂದು ದಿನಾಂಕ: 01-08-2020 ರಂದು ಬಕ್ರೀದ್ ಹಬ್ಬ ಇರುವದರಿಂದ ಹಬ್ಬದ ಸಲುವಾಗಿ ಹೂವುಗಳನ್ನು ಖರೀದಿಸಿಕೊಂಡು ಹೋಗಬೆಕೆಂದು ನಾನು ಮತ್ತು ನನ್ನ ಸೋದರಮಾವ ಬಡೇಸಾಬ ತಂದೆ ಬಾಷುಮಿಯಾ ಮುಲ್ಲಾ ಇಬ್ಬರೂ ಅಟೋರಿಕ್ಷಾದಲ್ಲಿ ದೇವಾಪೂರ ಕ್ರಾಸಿಗೆ ಬಂದಿದ್ದೇವು. ನಾವಿಬ್ಬರೂ ದೇವಾಪೂರ ಕ್ರಾಸಿನಲ್ಲಿ ಹೂವುಗಳನ್ನು ಖರಿದಿಸಿಕೊಂಡು ಮರಳಿ ತಿಂಥಣಿ ಗ್ರಾಮಕ್ಕೆ ಹೋಗುವ ಸಲುವಾಗಿ ಯಾವುದಾದರೂ ಅಟೋರಿಕ್ಷಾ ಅಥವಾ ಬಸ್ ಬರುವದನ್ನು ಕಾಯುತ್ತ ರಸ್ತೆಯ ಪಕ್ಕದಲ್ಲಿ ನಿಂತಿದ್ದೇವು. ಆಗ 6-10 ಎ.ಎಮ್ ಸುಮಾರಿಗೆ ಲಿಂಗಸುಗೂರ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ರಸ್ತೆಯ ಪಕ್ಕದಲ್ಲಿ ನಿಂತಿದ್ದ ನನ್ನ ಸೋದರಮಾವ ಬಡೇಸಾಬ ಇತನಿಗೆ ಡಿಕ್ಕಿಪಡಿಸಿದರಿಂದ ನನ್ನ ಮಾವನು ಸತ್ತೆನಪ್ಪೋ ಅನ್ನುತ್ತ ನೆಲದ ಮೇಲೆ ಬಿದ್ದನು. ತಕ್ಷಣ ನಾನು ಮತ್ತು ಅಪಘಾತಪಡಿಸಿದ ಕಾರ ಚಾಲಕ ಇಬ್ಬರೂ ನನ್ನ ಸೋದರಮಾವನಿಗೆ ಎಬ್ಬಿಸಿ ನೀರು ಕುಡಿಸಿ ವಿಚಾರಿಸಲಾಗಿ ತನ್ನ ಬಲಗಾಲಿನ ಮೊಣಕಾಲಿಗೆ ಹಾಗು ತಲೆಗೆ ಭಾರಿ ಒಳಪೆಟ್ಟಾಗಿದ್ದು ಎದೆಗೆ ಹಾಗು ಹಣೆಗೆ ತರಚಿದ ಗಾಯಗಳಾಗಿರುವ ಬಗ್ಗೆ ತಿಳಿಸಿರುತ್ತಾನೆ. ಅಪಘಾತ ಪಡಿಸಿದ ಕಾರ ಸ್ಥಳದಲ್ಲೆ ಇದ್ದು ಅದರ ನಂಬರ ನೋಡಲಾಗಿ ಕೆ.ಎ 34 ಎನ್ 0884 ಇದ್ದು, ಚಾಲಕನ ಹೆಸರು ವಿಚಾರಿಸಲಾಗಿ ನಾರಾಯಣಪ್ಪ ತಂದೆ ಸಿದ್ದಪ್ಪ ಸಾ: ರುಕ್ಮಾಪೂರ ತಾ: ಸುರಪೂರ ಅಂತ ತಿಳಿಸಿರುತ್ತಾನೆ. ಬಳಿಕ ನಾನು ಅದೇ ರಸ್ತೆಯಲ್ಲಿ ಹೊರಟಿದ್ದ ಒಂದು ಅಟೋರಿಕ್ಷಾದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇನೆ. ಬಳಿಕ ಆಸ್ಪತ್ರೆ ಬಡೇಸಾಬ ತಾಯಿಯಾದ ಸೋಪಮಾ ಇವರು ಬಂದು ನೋಡಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ. ಕಾರಣ ಕಾರ ನಂಬರ ಕೆ.ಎ 34 ಎನ್ 0884 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಪಕ್ಕ ನಿಂತಿದ್ದ ನನ್ನ ಸೋದರಮಾವನಿಗೆ ಅಪಘಾತ ಪಡಿಸಿರುವ ಕಾರ ಚಾಲಕನಾದ ನಾರಾಯಣಪ್ಪ ತಂದೆ ಸಿದ್ದಪ್ಪ ಸಾ: ರುಕ್ಮಾಪೂರ ತಾ: ಸುರಪೂರ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ.ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 63/2020 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ;01/08/2020 ರಂದು 7-15 ಪಿಎಮ್ ಕ್ಕೆ ಶ್ರೀ ಕೃಷ್ಣ ಸುಬೇದಾರ ಪಿ.ಎಸ್.ಐ(ಅ.ವಿ) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.01/08/2020 ರಂದು 5-15 ಪಿಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೋರ್ಟ ಎದುರುಗಡೆ ಇರುವ ಎಸ್.ಬಿ.ಐ ಬ್ಯಾಂಕ ಹತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬನು ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.63/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 58/2020 ಕಲಂ: 87 ಕೆ.ಪಿ ಯಾಕ್ಟ್ : ದಿನಾಂಕ: 01/08/2020 ರಂದು 6:30 ಪಿ.ಎಂ. ಕ್ಕೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ: 01/08/2020 ರಂದು 3:00 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಹಗರಟಗಿ ಗ್ರಾಮದಲ್ಲಿನ ಶ್ರೀ ಧರ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಿ ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ನೀಡುವಂತೆ ಪತ್ರ ಬರೆದು ವಿನಂತಿಸಿಕೊಂಡಿದ್ದು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರು ಸದರಿ ಇಸ್ಪೀಟ್ ಜೂಜಾಟ ಆಡುವವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಪರವಾನಿಗೆ ನೀಡಿದ್ದು ಕಾರಣ ನಿಮಗೆ ಎಪ್ ಐ ಆರ್ ದಾಖಲಿಸಲು ಸೂಚಿಸಿಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 58/2020 ಕಲಂ 87, ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
Hello There!If you like this article Share with your friend using