ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/07/2020

By blogger on ಗುರುವಾರ, ಜುಲೈ 30, 2020

                                      ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/07/2020 
                                                                                                                                
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 62/2020 ಕಲಂ; 342,504,506, ??.149ಐಪಿಸಿ : ಇಂದು ದಿನಾಂಕ.30/07/2020 ರಂದು 6-30 ಪಿಎಂಕ್ಕೆ ಶ್ರೀ ಲಕ್ಷ್ಮಣ ತಂ. ಮಲ್ಲಯ್ಯ ಮೇದಾರ  ಸಾಃ ಆಶನಾಳ ತಾಃಜಿಃಯಾದಗಿರಿ ಇತನು ಠಾಣೆಗೆ ಹಾಜರಾಗಿ ಒಂದು ದೂರನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ,  ನಾನು  ಬಿ.ಜೆ.ಪಿ. ಪಕ್ಷದ ಕಾರ್ಯಕರ್ತ ಸಾಃ ಆಶನಾಳ ತಾಃಜಿಃಯಾದಗಿರಿ ಈ ಮೂಲಕ ನಾನು ದೂರು ನೀಡುವುದೆನೆಂದರೆ, ಬಾರಿ ಮಳೆಯಿಂದ ನಮ್ಮೂರಲ್ಲಿಯ ರೋಡ ಒಡೆದು ಹೋಗಿದ್ದು ಈ ಬಗ್ಗೆ ದಿನಾಂಕ.23/074/2020 ರಂದು ಗುರುಮಿಠಕಲ್ ಶಾಸಕರ ಮಗನಾದ ಶರಣಗೌಡ ತಂದೆ ನಾಗಣ್ಣಗೌಡ ಕಂದಕೂರ ರವರು ಆಶನಾಳ ಗ್ರಾಮಕ್ಕೆ ಸ್ಥಳಕ್ಕೆ ಬಂದು ನೋಡಿ ಹೋಗಿದ್ದು ಶರಣಗೌಡ ಕಂದಕೂರ ರವರು ಸ್ಥಳಕ್ಕೆ ಬಂದು ಹೋಗಿದ್ದರಿಂದ, ಸ್ಥಳಕ್ಕೆ ಬಂದು ಹೋದ ಬಗ್ಗೆ ಜೆ.ಡಿ.ಎಸ್.ಕಾರ್ಯಕರ್ತರು ಫೆಸಬುಕನಲ್ಲಿ ಭಾವಚಿತ್ರಗಳನ್ನು ಬಿಟ್ಟಿದ್ದು ಅದಕ್ಕೆ ನಾನು ಬಿ.ಜೆ.ಪಿ ಕಾರ್ಯಕರ್ತನಾಗಿದ್ದರಿಂದ ನಾನು ಕೂಡಾ ಪೇಸ್ಬುಕನಲ್ಲಿ ಜೆ.ಡಿ.ಎಸ್.ಕಾರ್ಯಕರ್ತರು ಹಾಕಿದ ಬಾವಚಿತ್ರದ ಕಾಮೆಂಟಗೆ '' ಅಣ್ಣ ಕೆಲಸ ಮಾಡಿ ತೋರಿಸಿ'' ಅಂತಾ ಮತ್ತು '' ಶಾಸಕರು ಕಾಣೆಯಾಗಿದ್ದಾರೆ '' ಅಂತಾ ಕಾಮೆಂಟ ಮಾಡಿದ್ದರಿಂದ ನನ್ನ ಮೆಸೆಜ್ಗಳನ್ನು ನೋಡಿ ದಿನಾಂಕ.26/07/2020 ರಂದು 11-00 ಎಎಂ ಸುಮಾರಿಗೆ ನಾನು ಯಾದಗಿರಿಗೆ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರ ಪಾಟರ್ಿಮಿಟಿಂಗ ಕುರಿತು ಜಿಲ್ಲಾ ಬಿ.ಜೆ.ಪಿ.ಕಾಯರ್ಾಲಯಕ್ಕೆ ಬಂದಾಗ ಆಗ ನನ್ನ ಗೆಳೆಯನಾದ ಬಿರೇಶ ಚಿರತೆನೊರ ಈತನು ನನಗೆ ಪೋನ ಮಾಡಿ ನಿನ್ನ ಹತ್ತಿರ ಮಾತನಾಡಬೇಕು ನಾನು ಕೋರ್ಟ ಹತ್ತಿರ ನಿಂತಿದ್ದೇನೆ ಬರುವಂತೆ ತಿಳಿಸಿದ್ದರಿಂದ ನಾನು ಪಾಟರ್ಿ ಮಿಟಿಂಗ ಅರ್ದಕ್ಕೆ ಬಿಟ್ಟು ನಾನು ಮತ್ತು ನನ್ನ ಗೆಳೆಯನಾದ ಖತಾಲಪ್ಪ ನಾಯ್ಕೋಡಿ ಚಿಂತನಳ್ಳಿ ಕೂಡಿ 11-10 ಎಎಂಕ್ಕೆ ಕೋರ್ಟ ಹತ್ತಿರ ಹೋದಾಗ ಅಲ್ಲಿ ಬೀರೇಶ ಚಿರತಕನೊರ ಮತ್ತು ಅತನೊಂದಿಗೆ ಇನ್ನೂ ಇಬ್ಬರೂ ಆತನ ಗೆಳೆಯರು ನಿಂತಿದ್ದು ಭಿರೇಶ ಇತನು ನನಗೆ ತಾಲೂಕಾ ಪಂಚಾಯತ ಆಫೀಸ್ ಹತ್ತಿರ ಹೋಗೋಣ ಅಲ್ಲೆ ಮಾತಾಡೋಣ ಅಂತಾ ತಾಲೂಕ ಪಂಚಾಯತ ಕಾಯರ್ಾಲಯ ಹತ್ತಿರ ಬಂದೆವು ಆಗ ಅಲ್ಲೀ ಇನ್ನೂ ಮೂರು ಜನರು ಇದ್ದು ಅವರು ನನಗೆ ಪರಿಚಯ ಇರುವುದಿಲ್ಲಾ. ಆಗ ಅದೇ ವೇಳೆಗೆ ಅನೀಲ ಹೆಡಗಿಮದ್ರಿ ಇತನು ಬಂದು ಶರಣಗೌಡ ಕಂದಕೂರ ಇತನಿಗೆ ಪೋನ ಮಾಡಿ ಅಣ್ಣ ಲಕ್ಷ್ಮಣ ಇತನಿಗೆ ಕರೆದುಕೊಂಡು ಬಂದಿದ್ದೇವೆ ಬನ್ನಿ ಅಂತಾ ತಿಳಿಸಿದ್ದರಿಂದ ಶರಣಗೌಡ ಕಂದಕೂರವರು ತಾಲೂಕಾ ಪಂಚಾಯತಿ ಹತ್ತಿರ ಬಂದು ನನಗೆ ಅಲ್ಲೆ ಇದ್ದ ಗುರುಮಿಠಕಲ್ ಕ್ಷೇತ್ರದ ಶಾಸಕರ ಸಕರ್ಾರಿ ಕಛೇರಿಗೆ ನನಗೆ ಕರೆದುಕೊಂಡು ಬರುವಂತೆ ಹೇಳಿದಾಗ ನನಗೆ ಗುರುಮಿಠಕಲ್ ಕ್ಷೇತ್ರದ ಶಾಸಕರ ಸಕರ್ಾರಿ ಕಛೇರಿಗೆ ಕರೆದುಕೊಂಡು ಹೋದರು ನಂತರ ಅಲ್ಲಿ ಶರಣಗಡ ಕಂದಕೂರ, ಅನೀಲ ಹೆಡಗಿಮದ್ರಿ ಇವರು ನನಗೆ ಕಛೆರಿಯಲ್ಲಿ ಕೂಡಿ ಹಾಕಿ ನನಗೆ  ಏ ಮಗನೇ ನಮ್ಮ ಬಗ್ಗೆ ಪೇಸ್ಬುಕ್ನಲ್ಲಿ ಕಾಮೇಂಟ ಮಾಡತಿ ಅಂತಾ ಅವಾಚ್ಯವಾಗಿ ಬೈದು ಇನ್ನೂಂದು ಸಲ ಹೀಗೆ ಮಾಡಿದರೇ ನಿನಗೆ ಜೀವ ಸಹಿತ ಬಿಡಿವುದಿಲ್ಲ ಮಗನೇ ಅಂತಾ ಜೀವದ ಬೆದರಿಕೆ ಹಾಕಿದ್ದು ಅನೀಲ ಹೆಡಗಿಮದ್ರಿ ಇತನು ನಿನಗೆ ಖಲಾಸ ಮಾಡಿ ಕರೆದುಕೊಂಡು ಬರಬೇಕಂತ ಮಾಡಿದ್ವಿ ಮಗನೆ ಅಂತಾ  ಜೀವದ ಬೆದರಿಕೆ ಹಾಕಿದನು. ನಂತರ ನಾನು ಹೇಗೋ ಅಲ್ಲಿಂದ ಹೊರಗಡೆ ಬಂದು ಈ ವಿಷಯದ ಬಗ್ಗೆ ನನ್ನ ಸಂಗಡ ಬಂದಿದ್ದ ಖತಲಾಪ್ಪ ನಾಯ್ಕೋಡಿ ಇತನಿಗೆ ಮತ್ತು ಶರಣು ಯಲ್ಹೇರಿ, ಅಬ್ದುಲ ರಿಯಾಜ ತಂ. ಫೈಜುದ್ದಿನ್  ರವರಿಗೆ ನಡೆದ ವಿಷಯ ತಿಳಿಸಿದ್ದು ಇರುತ್ತದೆ. ಸದರಿ ಘಟನೆ ದಿನಾಂಕ.26/07/2020 ರಂದು 11-30 ಎಎಂ ಸುಮಾರಿಗೆ  ಬೀರೆಶ ಚಿರತೆನೂರ ಮತ್ತು ಈತರರು  ಕೂಡಿಕೊಂಡು ನನ್ನ ಹತ್ತಿರ ಮಾತನಾಡಬೇಕೆಂದು ನನಗೆ ಕರೆದುಕೊಂಡು ಹೋಗಿ ಶರಣಗೌಡ ಕಂದಕೂರ ಮತ್ತು ಅನೀಲ ಹೆಡಗಿಮದ್ರಿ ಇವರ ಹತ್ತಿರ ಬಿಟ್ಟಿದ್ದು ಆಗ ನನಗೆ ಬೈದು, ಜೀವದ ಬೆದರಿಕೆ ಹಾಕಿದ್ದು  ಈ ಬಗ್ಗೆ ನಾನು ನಮ್ಮ ಕಾಯರ್ಾಕರ್ತರಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.62/2020 ಕಲಂ. 342, 504, 506 ಸಂ. 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 89/2020 ಕಲಂ 379 ಐ ದಿನಾಂಕ:29/07/2020 ರಂದು 9 ಎ.ಎಮ್. ದಿಂದ 11 ಎ.ಎಮ್. ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಯು.ಕೆ.ಪಿ. ಕ್ಯಾಂಟೀನ್ ಹತ್ತಿರ ಯುಕೆಪಿ ಕ್ಯಾಂಪ್ ಭೀ.ಗುಡಿಯಲ್ಲಿ ಮೇಯುತ್ತಿದ್ದ ಫಿಯರ್ಾದಿಯ 2 ಆಡುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಕಳುವಾದ 2 ಆಡುಗಳ ಅಂದಾಜು ಕಿಮ್ಮತ್ತು 20,000=00 (ಇಪ್ಪತ್ತು ಸಾವಿರ) ರೂ ಆಗಬಹುದು. ಕಾರಣ ಕಳುವಾದ 2 ಆಡುಗಳನ್ನು ಪತ್ತೆ ಮಾಡಿ ಕಳ್ಳರ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಲಿಖಿತ ಫಿಯರ್ಾದಿ ಅಜರ್ಿ ಇರುತ್ತದೆ.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 183/2020 ಕಲಂ 323,307,504,506 ಸಂ.34 ಐಪಿಸಿ : ಇಂದು ದಿನಾಂಕ:30/07/2020ರಂದು4-30 ಪಿ.ಎಂ. ಕ್ಕೆ ಠಾಣೆಯ ಎಸ್.ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಅಮರಪ್ಪ ತಂದೆ ಸಂಗಪ್ಪ ಕುಂಬಾರ ವಯಾ:52 ವರ್ಷ ಉ:ಒಕ್ಕಲುತನ ಜಾತಿ:ಕುಂಬಾರ ಸಾ: ಈಚನಾಳ ತಾ:ಲಿಂಗಸೂರ ಜಿಲ್ಲಾ:ರಾಯುಚೂರ ಇವರು ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿ ನೀಡಿದ್ದು ಸಾರಾಂಶವೆನೆಂದರೆ, ನನ್ನ ಎರಡನೆಯ ಮಗಳಾದ ಆದಮ್ಮ@ ಪಾರ್ವತಿ ಇವಳನ್ನು ಕನ್ನಳ್ಳಿ ಗ್ರಾಮದ ಮಲ್ಲಪ್ಪ ತಂದೆ ಬಸಪ್ಪ ಪ್ಯಾಟಿ ಈತನೊಂದಿಗೆ ಸುಮಾರು 8 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಮಗಳಾದ ಪಾರ್ವತಿ ಇವಳಿಗೆ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಸದರಿ ನನ್ನ ಮಗಳು ಗಂಡ ಇಬ್ಬರು ಅನ್ಯೊನ್ಯವಾಗಿರುತ್ತಾರೆ. ನಮ್ಮ ಅಳಿಯನಾದ ಮಲ್ಲಪ್ಪ ಹಾಗೂ ಅವರ ತಮ್ಮ ಚಂದ್ರಶೇಖರ ಇಬ್ಬರ ನಡುವೆ ಹೊಲದ ಪಾಲೀನ ಸಲುವಾಗಿ ಸುಮಾರು ಎರಡು ತಿಂಗಳಿಂದ ಇಬ್ಬರಲ್ಲಿ ತಕರಾರು ನಡೆದಿದ್ದು ಇರುತ್ತದೆ. ಹೀಗಿರುವಾಗ ಮೊನ್ನೆ ದಿನಾಂಕ:28-07-2020 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು ನಮ್ಮೂರಲ್ಲಿದ್ದಾಗ ಕನ್ನಳ್ಳಿ ಗ್ರಾಮದ ಹೊಲದಿಂದ ನಮ್ಮ ಅಳಿಯನಾದ ಮಲ್ಲಪ್ಪ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ದಿನಾಂಕ: 28-07-2020 ರಂದುನಾನು ಬೆಳಿಗ್ಗೆ ಸುಮಾರಿಗೆ ಹೊಲಕ್ಕೆ ಹೋಗಿ ನನ್ನ ಪಾಲಿಗೆ ಬಿಟ್ಟ 5 ಎಕರೆ ಜಮೀನಿನಲ್ಲಿ ನಾನು ಹೋಗಿ ದಾರಿ ಮಾಡುತ್ತಿರುವಾಗ ತಮ್ಮ ಚಂದ್ರಶೇಖರ ಈತನು ಹೊಲದಲ್ಲಿ ದಾರಿ ಮಾಡಬೇಡ ಅಂತಾ ತಕರಾರು ಮಾಡಿದ್ದರಿಂದ ನಾನು ಕೆಲಸ ಮಾಡುವದನ್ನು ನಿಲ್ಲಿಸಿ ಹೊಲದಲ್ಲಿದ್ದೆನು. ಆಗ ಅದೆ ದಿನ ಸಾಯಂಕಾಲ 5 ಗಂಟೆ ಸುಮಾರಿಗೆ ನನ್ನ ತಮ್ಮನಾದ ಚಂದ್ರಶೇಖರ ತಂದೆ ಬಸಪ್ಪ ಪ್ಯಾಟಿ ಹಾಗೂ ನಮ್ಮ ತಂದೆಯಾದ ಬಸಪ್ಪ ಪ್ಯಾಟಿ ಇಬ್ಬರು ತಮ್ಮ ಟ್ಯಾಕ್ಟರ ನಂಬರ ಕೆಎ-33 ಟಿಎ-9455 ತಂದು ಅವರ ಹೊಲದಲ್ಲಿ ಟಿಲ್ಲರ ಹೊಡೆಯಲು ಪ್ರಾರಂಬಿಸಿದಾಗ ನಾನು ಅವರ ಹತ್ತಿರ ಹೋಗಿ ನನ್ನ ನಿಮ್ಮ ಮಧ್ಯ ಇರುವ ಹೊಲದ ತಕರಾರು ಇತ್ಯರ್ಥವಾಗುವರೆಗೂ ನೀವು ನಿಮ್ಮ ಹೊಲದಲ್ಲಿ ಟಿಲ್ಲರ ಹೊಡೆಯಬೇಡರಿ ಅಂತಾ ಹೇಳಿದಾಗ ನನ್ನ ತಂದೆ ಬಸಪ್ಪ ಪ್ಯಾಟಿಇ ತನು ನನಗೆ ಕಾಲಿನಿಂದ ಒದ್ದನು ತಮ್ಮನಾ ದಚಂದ್ರಶೇಖರ ಇತನು ಎಲೇ ಸೂಳೆ ಮಗನೆ ನಿಂದು ಸೋಕ್ಕು ಬಹಳ ಆಗಿದೆ ಅಂತಾ ಟ್ಯಾಕ್ಟರ ಟಿಲ್ಲರದಿಂದ ಕೊಲೆ ಮಾಡುವ ಉದ್ದೇಶದಿಂದ ನನ್ನ ಕಾಲುಗಳಿಗೆ ಗುದ್ದಿಭಾರಿ ರಕ್ತಗಾಯಗೋಳಿಸಿ ಇವತ್ತು ಉಳದಿ ಮಗನೆ ಇನ್ನೊಮ್ಮೆ ಸಿಕ್ಕರೆ ನಿನ್ನ ಖಲಾಸ ಮಾಡದೆ ಬಿಡುವದಿಲ್ಲ ಅಂತಾ ಟ್ಯಾಕ್ಟರ ತಗೆದುಕೊಂಡು ಹೊರಟು ಹೊದರು ಆಗ ಅಲ್ಲೆ ಹೊಗುತ್ತಿದ್ದ ಸಿದ್ರಾಮಪ್ಪ ತಂದೆ ಶರಣಪ್ಪ ಕುಂಬಾರ, ಈರಪ್ಪ ತಂದೆ ನಿಂಗಪ್ಪ ಕುಂಬಾರ ಇಬ್ಬರು ನನಗೆ ಗಾಯಗೊಂಡಿದ್ದನ್ನು ನೋಡಿ ನನ್ನನ್ನು ಅವರ ಎತ್ತಿನ ಬಂಡಿಯಲ್ಲಿ ಹಾಕಿಕೊಂಡು ಕನ್ನಳ್ಳಿಗೆ ಕರೆದುಕೊಂಡು ಬಂದ್ದಿರುತ್ತಾರೆ ಬೇಗ ಬನ್ನಿರಿ ಅಂತಾ ಪೋನ ಮಾಡಿ ನನಗೆ ವಿಷಯ ತಿಳಿಸಿದಾಗ ನಮ್ಮೂರಿಂದ ನಾನು ನನ್ನ ತಮ್ಮನಾದ ಆದ್ಪಪ ತಂದೆ ಸಂಗಪ್ಪ ಕುಂಬಾರ, ನಮ್ಮ ಸಣ್ಣ ಅಳಿಯನಾದ ಬಸಪ್ಪ ತಂದೆ ಅಮರಪ್ಪ ಕುಂಬಾರ, ಮೂವರು ಕನ್ನಳಿ ಗ್ರಾಮಕ್ಕೆ ಬಂದು ಗಾಯಗೊಂಡ ನಮ್ಮ ಅಳಿಯನನ್ನು ನೋಡಲು ಮೇಲೆ ಹೇಳಿದಂತೆ ಗಾಯಗಳಾಗಿದ್ದವು. ನಂತರ ಗಾಯಗೊಂಡ ಅಳಿಯ ಮಲ್ಲಪ್ಪನ್ನು ಎಲ್ಲರೂ ಕೂಡಿ108 ಅಂಬುಲೇನ್ಸ ಮುಖಾಂತರ ಸರಕಾರಿ ಆಸ್ಪತ್ರೆಗೆ ಸುರಪೂರಕ್ಕೆ ಕರೆತಂದು ಉಪಚಾರ ಮಾಡಿಸಿ ಹೆಚ್ಚಿನ ಉಪಚಾರ ಕುರಿತು ಲಿಂಗಸೂರ ಸರಕಾರಿ ಆಸ್ಪತ್ರೆಗೆ ತೋರಿಸಿ ಅಲ್ಲಿಯ ವೈಧ್ಯಾಧಿಕಾರಿಗಳ ಸಲಹೇ ಮೇರೆಗೆ ಹೆಚ್ಚಿನ ಉಪಚಾರಕುರಿತು ಬಾಗಲಕೋಟ ಕೇರೂರ ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ನನ್ನ ಅಳಿಯ ಮಲ್ಲಪ್ಪ ಈತನಿಗೆ ಅವರ ತಂದೆಯಾದ ಬಸಪ್ಪ ಪ್ಯಾಟಿಇತನು ಕಾಲಿನಿಂದ ಒದ್ದು ಹಾಗೂ ಅವರ ತಮ್ಮನಾದ ಚಂದ್ರಶೇಖರ ಇತನು ಅಳಿಯ ಮಲ್ಲಪ್ಪನ ಕಾಲುಗಳಿಗೆ ಟ್ಯಾಕ್ಟರ ಟಿಲ್ಲರಿಂದ ಗುದ್ದಿ ಭಾರಿಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ ಇಬ್ಬರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿ.                                                            ಸಹಿ/-


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 57/2020 ಕಲಂ: 87 ಕೆ.ಪಿ ಯಾಕ್ಟ್ : ದಿನಾಂಕ: 30/07/2020 ರಂದು 1:00 ಪಿ.ಎಂ ಕ್ಕೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ: 30/07/2020 ರಂದು ಬೆಳಿಗ್ಗೆ 9:30 ಎ.ಎಂ ಕ್ಕೆ ಠಾಣೆಯಲ್ಲಿದ್ದಾಗ ಸಣ್ಣಚಾಪಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಿಂದಿನ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಿ ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ನೀಡುವಂತೆ ಪತ್ರ ಬರೆದು ವಿನಂತಿಸಿಕೊಂಡಿದ್ದು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರು ಸದರಿ ಇಸ್ಪೀಟ್ ಜೂಜಾಟ ಆಡುವವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಪರವಾನಿಗೆ ನೀಡಿದ್ದು ಕಾರಣ ನಿಮಗೆ ಎಪ್ ಐ ಆರ್ ದಾಖಲಿಸಲು ಸೂಚಿಸಿಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 57/2020 ಕಲಂ 87, ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 
        ನಂತರ ಮಾನ್ಯ ಪಿ.ಎಸ್.ಐ ಸಾಹೇಬರು 4:00 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 4 ಜನ ಆರೋಪಿತರು ನಗದು ಹಣ 3500/- ರೂ, 52 ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. 
ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ಪ್ರೇಮನಾಥ ತಂದೆ ಶಿವಪ್ಪ ಪವ್ಹಾರ ವ|| 24ವರ್ಷ ಜಾ|| ಹಿಂದೂ ಲಂಬಾಣಿ ಉ|| ಚಾಲಕ ಸಾ|| ದೊಡ್ಡಚಾಪಿ ತಾಂಡಾ 
2) ವಿಕ್ರಮ ತಂದೆ ಸೂರಪ್ಪ ಪವ್ಹಾರ ವ|| 25ವರ್ಷ ಜಾ|| ಹಿಂದೂ ಲಂಬಾಣಿ ಉ|| ಕೂಲಿ ಕೆಲಸ ಸಾ|| ದೊಡ್ಡಚಾಪಿ ತಾಂಡಾ 
3) ಶಶಿಕುಮಾರ ತಂದೆ ಗೋವಿಂದ ಜಾದವ ವ|| 25ವರ್ಷ ಉ|| ಕೂಲಿ ಕೆಲಸ ಜಾ|| ಹಿಂದೂ ಲಂಬಾಣಿ ಸಾ||ಸಣ್ಣಚಾಪಿ ತಾಂಡಾ 
4) ಮಂಜುನಾಥ ತಂದೆ ಕಸ್ತರೆಪ್ಪ ರಾಠೋಡ ವ|| 27ವರ್ಷ ಜಾ|| ಕೂಲಿ ಕೆಲಸ ಜಾ|| ಹಿಂದೂ ಲಂಬಾಣಿ ಸಾ||ದೊಡ್ಡಚಾಪಿ ತಾಂಡಾಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 98/2020 ಕಲಂ 341, 504, 506 ಸಂ 34 ಐಪಿಸಿ : ಇಂದು ದಿನಾಂಕ 30/07/2020 ರಂದು ರಾತ್ರಿ 9-45 ಗಂಟೆಗೆ ಫಿರ್ಯಾಧಿದಾರರಾದ ಕಿಶನ್ ತಂದೆ ಮನ್ನು ರಾಠೋಡ ಸಾಃ ಕುರುಕುಂಬಳ ತಾಂಡಾ ಇವರು ಠಾಣೆಗೆ ಬಂದು ಒಂದು ಕಂಪ್ಯೂಟರದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರಪಡಿಸಿದ್ದೆನೆಂದರೆ ನಾನು ಕಿಶನ್ ತಂದೆ ಮನ್ನು ರಾಠೋಡ ವಯಾಃ 27 ವರ್ಷ  ಸಾಃ ಕುರುಕುಂಬಳ ತಾಂಡಾ ತಾಃಜಿಃ ಯಾದಗಿರಿ ಇದ್ದು, ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ದಿನಾಂಕ 23/07/2020 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಯಾದಗಿರಿಯ ಹೈದ್ರಾಬಾದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಆಶನಾಳ ಗ್ರಾಮದಿಂದ ಆಶನಾಳ ಗೇಟ್/ಬಸ್ ನಿಲ್ದಾಣದವರೆಗೆ ಸದರಿ ರಸ್ತೆ ಭಾರಿ ಮಳೆಯಿಂದ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ಅದನ್ನು ನಮ್ಮ ಗುರುಮಿಟಕಲ್ ಮತ ಕ್ಷೇತ್ರದ ಶಾಸಕರ ಗಮನಕ್ಕೆ ತರುವುದಾಗಿ ಅವರ ಮನೆಗೆ ಹೋಗಿದ್ದೆ, ಅವರ ಮನೆಯಲ್ಲಿ ಶಾಸಕರು ಇಲ್ಲದ್ದರಿಂದ ಅವರ ಮಗನಾದ ಶ್ರೀ ಶರಣಗೌಡ ಕಂದಕೂರ ಅವರಿಗೆ ಮಾಹಿತಿ ನೀಡಿದ್ದು, 
            ನಂತರ ಶರಣಗೌಡರು ಸ್ಥಳದ ಪರಿಶೀಲನೆಗಾಗಿ ಅವರೊಂದಿಗೆ ನಾನು ಮತ್ತು ಅನೇಕ ಜನರು ಹೋಗಿರುತ್ತೆವೆ, ಸಾಯಂಕಾಲ 6-00 ಗಂಟೆಯವರೆಗೂ ಶರಣಗೌಡರು ನಮ್ಮೊಂಧಿಗೆ ಇದ್ದು ಸ್ಥಳದ ಪರಿಶೀಲನೆ ಮಾಡಿ ಹೋಗಿರುತ್ತಾರೆ, ಈ ವಿಷಯವನ್ನು ತಿಳಿದು ಉದ್ದೇಶಪೂರ್ವಕವಾಗಿ ಸಾಯಬಣ್ಣ ತಂದೆ ಚನ್ನಪ್ಪ ಸಾಃ ಬೊರಬಂಡಾ ಮತ್ತು ನಾಗರತ್ನ ಗಂಡ ರವಿ ಕುಪ್ಪಿ ಸಾಃ ಯಲ್ಹೇರಿ, ಸಧ್ಯ ಸ್ಥಳ ಯಾದಗಿರಿ ಇವರಿಬ್ಬರೂ ದಿನಾಂಕ 28/07/2020 ರಂದು ಸಾಯಂಕಾಲ 6-00 ಗಂಟೆಗೆ ಸುಮಾರಿಗೆ ಯಾದಗಿರಿಯಿಂದ-ಗುರುಮಿಟಕಲ್ ಕಡೆಗೆ ಹೋಗುತ್ತಿರುವಾಗ ನಾನು ನಮ್ಮೂರಿನ ಹತ್ತಿರ ಇರುವ ಆಶನಾಳ ಗೇಟ್/ಬಸ್ ನಿಲ್ದಾಣ ಸ್ಥಳದಲ್ಲಿ ನಿಂತಿದ್ದನು  ನೋಡಿ ಸಾಯಬಣ್ಣ ತಂದೆ ಚನ್ನಪ್ಪ ಬೊರಬಂಡ ಇತನು ನನ್ನನ್ನು ಕರೆದು ಲೇ ಸೂಳೇ ಮಗನೇ ನೀನು ನಾಗಣ್ಣಗೌಡರ ಮಗನಾದ ಶರಣಗೌಡರಿಗೆ ಸ್ಥಳ ಪರಿಶೀಲನೆ ಮಾಡಲಿಕ್ಕೆ ಯಾಕೆ ಕರೆದೆ ಎಂದು ಅವಾಚ್ಯವಾಗಿ ಬೈಯ್ಯುತ್ತಿದ್ದನು, ಆಗ ನಾನು ಅಲ್ಲಿಂದ ನನ್ನ ತಾಂಡಾಕ್ಕೆ ಹೋಗಬೇಕು ಅಂತಾ ಹೋಗುವಾಗ ಸಾಯಬಣ್ಣ ತಂದೆ ಚನ್ನಪ್ಪ ಬೊರಬಂಡಾ ಮತ್ತು ನಾಗರತ್ನ ಗಂಡ ರವಿ ಕುಪ್ಪಿ ಇವರಿಬ್ಬರೂ ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಇವನಿಗೆ ಜೀವ ಸಹಿತ ಬಿಡಬಾರದು ಅಂತಾ ಜೀವದ ಭಯ ಹಾಕುತ್ತಿದ್ದರು, ಆಗ ಅದೇ ಸಮಯಕ್ಕೆ ಸುಭಾಸ ತಂದೆ ಧಮರ್ಾ ಪವ್ಹಾರ ಸಾಃ ಆಶನಾಳ ತಾಂಡಾ ಮತ್ತು ಪಿ.ಶಾಂತಕುಮಾರ ತಂದೆ ಶಿವಶರಣಪ್ಪ ಪಸಪೂಲ್ ಸಾಃ ಕೊಟಗೇರಾ ಇವರು ಬಂದು ಜಗಳ ನೋಡಿ ಬಿಡಿಸಿರುತ್ತಾರೆ, 
           ನಂತರ ನಾನು ನಮ್ಮ ತಾಂಡಾಕ್ಕೆ ಹೋಗಿ ಈ ಘಟನೆಯ ಬಗ್ಗೆ ನಮ್ಮ ತಾಂಡಾದ ಹಿರಿಯರಾದ ಚಂದ್ರಕಾಂತ ತಂದೆ ಹಣಮಂತ ರಾಠೋಡ ವಯಾಃ 52 ವರ್ಷ ಮತ್ತು ವಾಲು ತಂದೆ ತೇಜ್ಯಾ ರಾಠೋಡ ವಯಾಃ 58 ವರ್ಷ ಸಾಃ ಇಬ್ಬರೂ ಕುರುಕುಂಬಳ ತಾಂಡಾ ಇವರಿಗೆ ವಿಚಾರಣೆ ಮಾಡಿ ತಡವಾಗಿ ಇಂದು ದಿನಾಂಕ 30/07/2020 ರಂದು ರಾತ್ರಿ 9-45 ಗಂಟೆಗೆ ಠಾಣೆಗೆ ಬಂದು ದೂರನ್ನು ಕೊಡಲು ತಡವಾಗಿರುತ್ತದೆ, ಆದರೆ ವಿಳಂಬಕ್ಕೆ ಯಾವುದೇ ದುರುದ್ದೇಶ ಹೊಂದಿರುವದಿಲ್ಲ, ಆದ್ದರಿಂದ ತಾವು ಅವರ ಮೇಲೆ ಕಾನೂನು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿ ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 98/2020 ಕಲಂ 341, 504, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,   

 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!