ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/07/2020

By blogger on ಮಂಗಳವಾರ, ಜುಲೈ 21, 2020




                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/07/2020 
                                                                                                                                
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 93/2020 ಕಲಂ. 279,337,338 304(ಎ) ಐಪಿಸಿ : ದಿನಾಂಕ. 08-07-2020 ರಂದು ರಾಯಚೂರ ಬಾಲಂಕು ಆಸ್ಪತ್ರೆಯಿಂದ ಎಮ್.ಎಲ್.ಸಿ ಪಡೆದು  ಪಡೆದು ಮರಳಿ ಠಾಣೆಗೆ ಸಾಯಂಕಾಲ 06-30 ಗಂಟೆಗೆ ಬಂದು ಪಿಯರ್ಾಧಿ ಹಾಜರಪಡಿಸಿದ ಸಾರಾಂಶವೇನೆಂದರೆ, ದಿನಾಂಕ: 08-07-2020 ರಂದು ಬೆಳಿಗ್ಗೆ 8-35 ಎ.ಎಮ್ ಸುಮಾರಿಗೆ ಫಿಯರ್ಾದಿ ಮತ್ತು ರಂಗಪ್ಪ ಇಬ್ಬರೂ ಸೇರಿ ಹಿರೋ ಹೋಂಡಾ ಬೈಕ ನಂ. ಕೆಎ-36 ಇ.ಕೆ-7900 ನೇದ್ದರ ಮೇಲೆ ಬೆಳಗುಂದಿ ಗ್ರಾಮದಿಂದ ಹೊಲದ ಕಡೆಗೆ ಹೊರಟಾಗ ಸೈದಾಪೂರ ಕಡೆಯಿಂದ ಬಂದ  ಮಹೇಶ ತಂದೆ ನಾಗಪ್ಪ ನಲ್ಲಿ ವಯ|| 20 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಕಡೆಚೂರ ಪಲ್ಸ್ರರ್ ಬೈಕ ನಂ. ಕೆ.ಎ-33 ಎಕ್ಷ-1006 ನೇದ್ದರ ಚಾಲಕ ಇಬ್ಬರೂ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿದ್ದು, ಅಪಘಾತದಲ್ಲಿ  ಫಿಯರ್ಾದಿಗೆ ಬಾಯಿಗೆ ಮತ್ತು ಕಣ್ಣಿಗೆ ರಕ್ತಗಾಯ  ಮತ್ತು ರಂಗಪ್ಪನಿಗೆ ಎಡ ಮೋಳಕಾಲು ಮುರಿದಂತೆ ಮತ್ತು ಬಲಕಿವಿಗೆ ರಕ್ತಗಾಯವಾಗಿದ್ದು. ಮಹೆಶನಿಗೆ ತಲೆಯ ಮುಂದಿನ ಭಾಗಕ್ಕೆ ರಕ್ತಗಾಯ ಮತ್ತು ಮೂಗಿಗೆ ರಕ್ತಗಾಯ ಮತ್ತು ಸಾಬಮ್ಮ ಈಕೆಗೆ ಮೋಳಕಾಲಿಗೆ ರಕ್ತಗಾಯ ತಲೆಗೆ ಗುಪ್ತಗಾಯವಾಗಿದ್ದು ಇರುತ್ತದೆ ಅಂತಾ ಪಿಯಾದರ್ಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ 
ಅಪಘಾತದಲ್ಲಿ ಗಾಯಗೊಂಡ  ರಂಗಪ್ಪ ತಂದೆ ಸಿದ್ದಪ್ಪ ನಾಯಕ ವ|| 35 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಬೆಳಗುಂದಿ ಈತನು ದಿನಾಂಕ: 21-07-2020 ರಂದು ಕಲಬುರಗಿಯ ಸನ್ ರೈಜ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ 


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 98/2020, ಕಲಂ, 143,147,323.,504.506. ಸಂಗಡ 149  ಐ ಪಿ ಸಿ   : ನಾನು ಸದಾಶಿವರೆಡ್ಡಿ ತಂದೆ ಬಸವರಾಜಪ್ಪ ಭಾಗಮ್ಮನೋರ ವ|| 33 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಗೌಡಗೇರಾ ತಾ|| ಜಿ|| ಯಾದಗಿರಿ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ಪಿಯರ್ಾಧಿ. ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿಯಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪ ಜೀವನ ಮಾಡಿಕೊಂಡಿರುತ್ತೇನೆ. ನಾವು ಅಣ್ಣತಮ್ಮಂದಿರು ಬೇರೆ ಬೇರೆ ಯಾಗಿದ್ದು ನನ್ನ ಪಾಲಿಗೆ ನಮ್ಮೂರಿನ ಹೊಲ ಸವರ್ೆ ನಂಬರ 181 ರಲ್ಲಿ ಪಾಲಿಗೆ ಹೊಲ ಬಂದಿರುತ್ತದೆ. ಅದನ್ನು ನಾನು ಈಗ ಹತ್ತಿ ಬೀಜ ಹಾಕಿರುತ್ತೇವೆ. 
     ಇಂದು ದಿನಾಂಕ: 21-07-2020 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋಗಿ ಹತ್ತಿ ಹೊಲದಲ್ಲಿ ಕೆಲಸ ಮಾಡುವಾಗ ಮದ್ಯಾಹ್ನ 12-30 ಗಂಟೆಗೆ ನಮ್ಮ ಅಣ್ಣ, ರವಿಂದ್ರ, ವ|| 48 ವರ್ಷ ಅಣ್ಣನ ಹೆಂಡತಿ ಮೀನಾಕ್ಷಿ ವ|| 40 ವರ್ಷ ಮತ್ತು ಮಕ್ಕಳಾದ 1) ಗೌರಮ್ಮ ತಂದೆ ರವೀಂದ್ರ ಭಾಗಮ್ಮನೋರ ವ|| 25 ವರ್ಷ 2) ಮಲ್ಲಮ್ಮ ತಂದೆ ರವೀಂದ್ರ ಭಾಗಮ್ಮನೋರ ವ|| 22 ವರ್ಷ 3) ರಮೇಶ ತಂದೆ ರವೀಂದ್ರ ಭಾಗಮ್ಮನೋರ ವ|| 20 ವರ್ಷ 4) ಭಾಗ್ಯಶ್ರಿ ತಂದೆ ರವೀಂದ್ರ ಭಾಗಮ್ಮನೋರ 5) ಅನೀತಾ ತಂದೆ ರವೀಂದ್ರ ಭಾಗಮ್ಮನೋರ 6) ಆನಂದ ತಂದೆ ರವೀಂದ್ರ ಭಾಗಮ್ಮನೋರ ಇವರೆಲ್ಲರೂ ಕೂಡಿಕೊಂಡು ಬಂದು ನನ್ನ ಪಾಲಿಗೆ ಬಂದಿರುವ ಹೋಲದಲ್ಲಿ ಬಂದು ಹತ್ತಿ ಹೋಲದಲ್ಲಿ ಕಸ ತೆಗೆಯುತ್ತಿರುವಾಗ ಅವರಿಗೆ ನಮ್ಮ ಹೋಲದಲ್ಲಿ ಯಾಕೆ ಕಸ ತೆಗೆಯುತ್ತಿರಿ ಅಂತಾ ಕೇಳಿದಕ್ಕೆ ಅವರು ನನಗೆ ಏ ಭೋಸಡಿ ಮಗನೇ ನೀನು ಇಷ್ಟು ದಿನ ಮಾಡಿದಿರಿ ಈಗ ನಾನು ಮಾಡುತ್ತೆನೆ ಸೂಳೆ ಮಗನೇ ಎಂದು ನನ್ನ ಅಣ್ಣನಾದ ರವೀಂದ್ರ ರವರು ಕೈಯಿಂದ ಕಪಾಳಕ್ಕೆ, ಕಾಲಿನಿಂದ ಎದೆಗೆ ಒದ್ದನು ಆಗ ನನ್ನ ಅಣ್ಣನ ಹೆಂಡತಿ ಮತ್ತು ಮಕ್ಕಳು ಬಂದು ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ, ಕಾಲಿನಿಂದ ಎದೆಗೆ, ಮುಖಕ್ಕೆ, ಬೇನ್ನಿಗೆ ಎಲ್ಲರೂ ಮನ ಬಂದತ್ತೆ ಹೋಡೆದು ಕೇಳಕ್ಕೆ ಬಿಳಿಸಿದರು ಆಗ ರವೀಂದ್ರ ಮತ್ತು ಆತನ ಮಕ್ಕಳು ಈ ಸೂಳೆ ಮಗಂದು ಬಹಳ ಸೊಕ್ಕು ಆಗಿದೆ ಈ ಸೂಳೆ ಮಗನಿಗೆ ಇವತ್ತು ಸುಮ್ಮನೆ ಬಿಡಬೇಡಿರಿ ಇವತ್ತು ಒಂದು ಜೀವ ಖಲಾಸ ಮಾಡಿರಿ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಆಗ ನಾನು ಅಂಜಿ ಹೋಗುತ್ತಿರುವಾಗ ರವೀಂದ್ರ ಈತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ ಇನ್ನೊಂದು ಸಲ ಹೋಲದ ತಂಟೆಗೆ ಬಂದರೆ ನಿನ್ನ ಜೀವ ಖಲಾಸ ಮಾಡುತ್ತೆನೆ ಮಗನೇ ಅಂತಾ ಜೀವದ ಬೇದರಿಕೆ ಹಾಕಿದ್ದು ಜಗಳ ಮಾಡುವದನ್ನು ನೋಡಿ ನನ್ನ ಪಕ್ಕದ ಹೋಲದವರಾದ ಕಳಸಯ್ಯ ತಂದೆ ಬಸವರಾಜ ದಂಡಪ್ಪನೋರ ವ|| 34 ವರ್ಷ ಜಾ|| ಬೇಡರು ಉ|| ಒಕ್ಕಲುತನ ಮತ್ತು ಮಲ್ಲಯ್ಯ ತಂದೆ ಯಂಕಣ್ಣ ಅಂಬಣ್ಣೋರ ವ|| 28 ವರ್ಷ ಜಾ|| ಬೇಡರು ಇಬ್ಬರು ಗೌಡಗೇರಾ ಗ್ರಾಮದವರು ಇವರು ಜಗಳವನ್ನು ನೋಡಿ ಬಿಡಿಸಿಕೊಂಡರು.
 ಕಾರಣ ನನಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಅಡ್ಡ ಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಪಿಯರ್ಾಧಿ ಇರುತ್ತದೆ.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 97/2020, ಕಲಂ, 143,147, 148, 323.324,354,504.506. ಸಂಗಡ 149  ಐ ಪಿ ಸಿ  : ಇಂದು ದಿನಾಂಕ: 21-07-2020 ರಾತ್ರಿ 07-30 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 21-07-2020 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ನನ್ನ ಮಕ್ಕಳು ಕೂಡಿ  ನಮ್ಮ ಪಾಲಿಗೆ ಬಂದಿರುವ ಹೊಲಕ್ಕೆ ಹೋಗಿ ಹತ್ತಿ ಹೊಲದಲ್ಲಿ ಕಸ ತೆಗೆಯುತ್ತಿರುವಾಗ ಆರೋಪಿತರೆಲ್ಲರೂ ಸೇರಿಕೊಂಡು ಕೈಯಲ್ಲಿ ಕೊಡಲಿ ಮತ್ತು ಕಟ್ಟಿಗೆಯ ಬಡಿಗೆಗಳನ್ನು ಹಿಡಿದುಕೊಂಡು ಬಂದು ನಮ್ಮ ಪಾಲಿಗೆ ಬಂದ ಹೊಲದಲ್ಲಿ ಬಂದು ಗಳೆ ಹೊಡೆಯುತ್ತಿರುವಾಗ ಆಗ ನಾನು ನಮ್ಮ ಪಾಲಿಗೆ ಬಂದ ಹೊಲದಲ್ಲಿ ಯಾಕೆ ಗಳೆ ಹೊಡೆಯುತ್ತಿರಿ ಅಂತಾ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಸೇರಿ ಕೈಯಿಂದ ಮತ್ತು ಕಟ್ಟಿಗೆಯ ಬಡಿಗೆಗಳಿಂದ ಹೊಡೆ ಬಡೆ ಮಾಡಿ ಕೂದಲೂ ಹಿಡಿದು ಎಳದಾಡಿ ಕುಪ್ಪಸ ಹಿಡಿದು ಜಗ್ಗಿ ಅವಮಾನ ಮಾಡಿ ನಿನ್ನ ಗಂಡನಿಗೆ ಸಿಕ್ಕಲಿ ಕಡಿಯುತ್ತೇವೆ ಮಕ್ಕಳೆ ಅಂತಾ  ಬೈದು ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿ.ಎ.ಆರ್. ನಂ 29/2020. ಕಲಂ 107 ಸಿ.ಆರ್.ಪಿ.ಸಿ. : ಇಂದು ದಿನಾಂಕ: 21-07-2020 ರಂದು ಸಗರ ಗ್ರಾಮಕ್ಕೆ ಬೇಟಿ  ಗ್ರಾಮದಲ್ಲಿ  2:00 ಪಿ.ಎಮ್.ಕ್ಕೆ ಪೆಟ್ರೋಲಿಂಗದಲ್ಲಿದ್ದಾಗ ಸಗರ ಗ್ರಾಮದ ಸಗರ ದಿಂದ ಶಾರದಳ್ಳಿ ಗೆ ಹೋಗುವ ರಸ್ತೆಯ ಎರಡೂ ಕಡೆಗಳಲ್ಲಿ ಒಂದು ಕಡೆ ವಾಲ್ಮಿಕಿ ಗುರುಗಳ ಫೋಟೋವುಳ್ಳ ಬೋರ್ಡ ಇನ್ನೋದು ಕಡೆ ಡಾ|| ಬಿ.ಆರ್ ಅಂಬೇಡ್ಕರ ರವರ ಫೋಟೋವುಳ್ಳ ಬೋರ್ಡ ಇದ್ದು ಸದರಿ ರಸ್ತೆ ನಿಮರ್ಾಣದ ಕೆಲಸದಲ್ಲಿ ವಾಲ್ಮಿಕಿ ಜನಾಂಗದವರು ಸದರಿ  ಮಹಷರ್ಿ ವಾಲ್ಮಿಕಿಯ ಬೋರ್ಡನ್ನು ತೆರವುಗೊಳಿಸಿದ್ದು ಈಗ ರಸ್ತೆಯ ಮದ್ಯದಲ್ಲಿ ಸ್ಥಾಪನೆ ಮಾಡಬೇಕೆಂದು ಓಡಾಡುತ್ತಿದ್ದಾರೆ. ಆದರೆ ಪರಿಶಿಷ್ಟ ವರ್ಗದ ಜನರು ಅದಕ್ಕೆ ವಿರೋಧ ವ್ಯಕ್ತ ಮಾಡುತ್ತಿದ್ದು ಇರುತ್ತದೆ ಆದ್ದರಿಂದ  ಸದರಿ ಸ್ಥಳದಲ್ಲಿ ಎರಡೂ ಜನಾಂಗದ ನಡುವೆ ಘರ್ಷಣೆ ಉಂಟಾಗಿ ತಮ್ಮ ತಮ್ಮ  ಆಸ್ತಿ ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿದ್ದು ಕಂಡು ಬಂದಿದ್ದರಿಂದ ಎದರುದಾರರ ವಿರುದ್ದ ಕಲಂ.107 107 ಸಿ.ಆರ.ಪಿ.ಸಿ.ಅಡಿಯಲ್ಲಿ ಮುಂಜಾಗೃತ ಕ್ರಮ ಜರುಗಿಸಲಾಗಿದೆ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿ.ಎ.ಆರ್. ನಂ 30/2020. ಕಲಂ 107 ಸಿ.ಆರ್.ಪಿ.ಸಿ. : ಇಂದು ದಿನಾಂಕ: 21-07-2020 ರಂದು ಸಗರ ಗ್ರಾಮಕ್ಕೆ ಬೇಟಿ  ಗ್ರಾಮದಲ್ಲಿ  12:00 ಪಿ.ಎಮ್.ಕ್ಕೆ ಪೆಟ್ರೋಲಿಂಗದಲ್ಲಿದ್ದಾಗ ಸಗರ ಗ್ರಾಮದ ಸಗರ ದಿಂದ ಶಾರದಳ್ಳಿ ಗೆ ಹೋಗುವ ರಸ್ತೆಯ ಎರಡೂ ಕಡೆಗಳಲ್ಲಿ ಒಂದು ಕಡೆ ವಾಲ್ಮಿಕಿ ಗುರುಗಳ ಫೋಟೋವುಳ್ಳ ಬೋರ್ಡ ಇನ್ನೋದು ಕಡೆ ಡಾ|| ಬಿ.ಆರ್ ಅಂಬೇಡ್ಕರ ರವರ ಫೋಟೋವುಳ್ಳ ಬೋರ್ಡ ಇದ್ದು ಸದರಿ ರಸ್ತೆ ನಿಮರ್ಾಣದ ಕೆಲಸದಲ್ಲಿ ವಾಲ್ಮಿಕಿ ಜನಾಂಗದವರು ಸದರಿ  ಮಹಷರ್ಿ ವಾಲ್ಮಿಕಿಯ ಬೋರ್ಡನ್ನು ತೆರವುಗೊಳಿಸಿದ್ದು ಈಗ ರಸ್ತೆಯ ಮದ್ಯದಲ್ಲಿ ಸ್ಥಾಪನೆ ಮಾಡಬೇಕೆಂದು ಓಡಾಡುತ್ತಿದ್ದಾರೆ. ಆದರೆ ಪರಿಶಿಷ್ಟ ವರ್ಗದ ಜನರು ಅದಕ್ಕೆ ವಿರೋಧ ವ್ಯಕ್ತ ಮಾಡುತ್ತಿದ್ದು ಇರುತ್ತದೆ ಆದ್ದರಿಂದ  ಸದರಿ ಸ್ಥಳದಲ್ಲಿ ಎರಡೂ ಜನಾಂಗದ ನಡುವೆ ಘರ್ಷಣೆ ಉಂಟಾಗಿ ತಮ್ಮ ತಮ್ಮ  ಆಸ್ತಿ ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿದ್ದು ಕಂಡು ಬಂದಿದ್ದರಿಂದ ಎದರುದಾರರ ವಿರುದ್ದ ಕಲಂ. 107 ಸಿ.ಆರ.ಪಿ.ಸಿ.ಅಡಿಯಲ್ಲಿ ಮುಂಜಾಗೃತ ಕ್ರಮ ಜರುಗಿಸಲಾಗಿದೆ

ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 201/2020.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ : ಇಂದು ದಿನಾಂಕ 21/07/2020 ರಂದು 19-30 ಗಂಟೆಗೆ ಶ್ರೀ ಸಿದ್ದೇಶ್ವರ ಪಿ.ಎಸ್.ಐ. ( ಕಾ.ಸೂ-2) ಸಾಹೇಬರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ: 21/07/2020 ರಂದು 16-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಮಾಹಿತಿ ಬಂದಿದ್ದೆನೆಂದರೆ, ಶಹಾಪೂರ ನಗರದ ಹಳಿಪೇಠ ರಾಘವೇಂದ್ರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಮೇರೆಗೆ, ಠಾಣೆಯಲ್ಲಿ ಹಾಜರಿದ್ದ ಬಾಬು ಹೆಚ್.ಸಿ.162.ಗೋಕುಲ್ ಹುಸೇನ ಪಿ.ಇ.172. ಇವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಹೇಳಿ ಗೋಕುಲ್ ಹುಸೇನ್ ಪಿ.ಸಿ.172. ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಸಂತೋಷ ತಂದೆ ಮರೆಪ್ಪ ಮ್ಯಾಗಿನಮನಿ ವ|| 22 ಜಾ|| ಮಾದಿಗ ಉ|| ಕೂಲಿ ಸಾ|| ಸಿದ್ದಾರುಡ ಮಠದ ಹತ್ತಿರ ಭೀ,ಗುಡಿ 2] ದೇವರಾಜ ತಂದೆ ಗೋವಿಂದಪ್ಪ ನಾಯ್ಕೊಡಿ ವ|| 20 ಜಾ|| ಕಬ್ಬಲಿಗ ಉ|| ಕೂಲಿ ಸಾ|| ರಾಘವೆಂದ್ರ ಗುಡಿ ಹತ್ತಿರ ಹಳಿಪೇಠ ಶಹಾಪೂರ ಇವರಿಗೆ ಕರೆದುಕೊಂಡು ಬಂದು 16-20 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. 
           ಮಾನ್ಯ ಡಿವೈ,ಎಸ್,ಪಿ, ಸಾಹೇಬರು ಸುರಪೂರ, ಪಿ.ಐ.ಸಾಹೇಬರು ಶಹಾಪೂರ, ರವರ ಮಾರ್ಗದರ್ಶನದಲ್ಲಿ ದಾಳಿಕುರಿತು ನಾನು ಮತ್ತು ಪಂಚರು, ಸಿಬ್ಬಂದಿ ಜನರು, ಎಲ್ಲರು ಕೂಡಿ ಒಂದು ಕಾಸಗಿ ಜೀಪ ನೇದ್ದರಲ್ಲಿ ಕುಳಿತುಕೊಂಡು 16-25 ಗಂಟೆಗೆ ಠಾಣೆಯಿಂದ ಹೋರಟೆವು. ನೇರವಾಗಿ 16-40 ಗಂಟೆಗೆ ಶಹಾಪೂರ ನಗರದ ಹಳಿಪೇಠ ರಾಘವೇಂದ್ರ ಗುಡಿಯ ಹತ್ತಿರ ಸ್ವಲ್ಪ ದುರದಲ್ಲಿ ಹೋಗಿ ಜೀಪನಿಲ್ಲಿಸಿ ಎಲ್ಲರು ಜೀಪಿನಿಂದ ಇಳಿದು ನಡೆದುಕೊಂಡು ಓಣಿಯಲ್ಲಿ ಹೋಗಿ ಮನೆಗಳ ಗೋಡೆಯ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ, ಒಬ್ಬ ವ್ಯೆಕ್ತಿ ರಸ್ತೆಯ ಪಕ್ಕದಲ್ಲಿ ತನ್ನ ಮನೆಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 16-50 ಗಂಟೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಮದ್ಯ ಕುಡಿಯಲು ಅನುಕುಲ ಮಾಡಿಕೊಟ್ಟಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು. ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮೌನೇಶ ತಂದೆ ಅಂಬಣ್ಣ ನಾಯ್ಕೊಡಿ ವ|| 28 ಜಾ|| ಕಬ್ಬಲಿಗ ಉ|| ಕೂಲಿ ಸಾ|| ರಾಘವೆಂದ್ರಗುಡಿಯ ಹತ್ತಿರ ಹಳಿಪೇಠ ಶಹಾಪೂರ ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಶಹಾಪೂರ ನಗರದ ಹಳಿಪೇಠದ ತನ್ನ ಮನೆಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು. ನಾನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 1] 90 ಎಂ.ಎಲ್.ನ ಒಟ್ಟು 18 ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೇಟ್ ಇದ್ದು ಒಂದು ಪಾಕೇಟ್ನ ಕಿಮ್ಮತ್ತು 35.13 ರೂ ಅಂತಾ ಇದ್ದು, ಒಟ್ಟು 18 ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೇಟ್ಗಳ ಕಿಮ್ಮತ್ತು 632-34 ರೂ ಗಳಾಗುತ್ತಿದ್ದು, 2] 2 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ: 00=00 ರೂ 3] ಮದ್ಯ ಕುಡಿಯಲು ಉಪಯೋಗಿಸಿದ 90 ಎಂ.ಎಲ್.ನ 2 ಖಾಲಿ ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೇಟ್ ಇದ್ದವು. ಅ:ಕಿ:00=00 ರೂ, ಒಟ್ಟು 18 ಮದ್ಯದ ಪಾಕೇಟ್ಗಳಲ್ಲಿ 90 ಎಂ.ಎಲ್.ನ 1 ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೇಟ್ನ್ನು ಪಂಚರ ಸಮಕ್ಷಮದಲ್ಲಿ ಎಫ್.ಎಸ್.ಎಲ್ ಪರೀಕ್ಷೆ  ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 17-00 ಗಂಟೆಯಿಂದ 18-00 ಗಂಟೆಯವರೆಗೆೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 18-30 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 19-30 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 201/2020 ಕಲಂ 15(ಎ) 32( 3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.



ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 202/2020  ಕಲಂ 15 (ಎ) 32 (3) ಕೆ.ಇ ಆಕ್ಟ : ಇಂದು ದಿನಾಂಕ 21/07/2020  ರಂದು ರಾತ್ರಿ 21-45  ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ  ಚಂದ್ರಕಾಂತ ಪಿ.ಎಸ್.ಐ ಕಾಸು  ಶಹಾಪೂರ ಪೊಲೀಸ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ಸಾಯಂಕಾಲ 19-00 ಗಂಟೆಗೆ ಫಿರ್ಯಾದಿಯವರಿಗೆ ಶಹಾಪೂರ ನಗರದ ಸ್ವಾಗತ್ ಬಾರ್  ಹಿಂದುಗಡೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ  ಅಕ್ರಮವಾಗಿ  ಮದ್ಯ ಕುಡಿಯಲು ಅನಕೂಲ ಮಾಡಿಕೊಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ, ಸದರಿ ಫಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿ ಸಂಜಯಕುಮಾರ ತಂದೆ ಶರಣಯ್ಯ ಗುತ್ತೆದಾರ ವಯ 21 ವರ್ಷ ಜಾತಿ ಈಳಗೇರ ಉಃ ಕೂಲಿ ಕೆಲಸ ಸಾಃ ಜವಳಗಾ ತಾಃ ಜೇವಗರ್ಿ ಹಾಲಿವಸತಿ ದೇವಿನಗರ ಶಹಾಪೂರ ಈತನಿಂದ 90 ಎಮ್.ಎಲ್.ನ 25 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಮದ್ಯದ ಪಾಕೇಟಗಳು ಅಂ.ಕಿ 878=00 ರೂಪಾಯಿ 25 ಪೈಸೆ. 3 ಪ್ಲಾಸ್ಟೀಕ್ ಗ್ಲಾಸ್ ಸಾರ್ವಜನಿಕರು ಮದ್ಯ ಕುಡಿಯಲು ಉಪಯೋಗಿಸಿದ್ದು, ಅಂ.ಕಿ 00-00, 90 ಎಮ್.ಎಲ್.ನ 2 ಖಾಲಿ ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ  ಪಾಕೇಟ್ ಸಾರ್ವಜನಿಕರು ಕುಡಿದು ಉಪಯೋಗಿಸಿದ್ದು ಅಂ.ಕಿ 00-00 ನೇದ್ದವುಗಳ ಪೈಕಿ ಒಂದು 90 ಎಮ್.ಎಲ್.ನ ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಮದ್ಯ ತುಂಬಿದ ಪಾಕೇಟನ್ನು ಪಂಚರ ಸಮಕ್ಷಮದಲ್ಲಿ ತಜ್ಞರ ಪರೀಕ್ಷೆಗಾಗಿ ಕಳುಹಿಸುವ  ಸಲುವಾಗಿ ಒಂದು  ಬಿಳಿ ಬಟ್ಟೆಯ ಚೀಲದಲ್ಲಿ  ಹಾಕಿ ಹೊಲೆದು ಅದರ  ಮೇಲೆ ಠಾಣೆಯ ಇಂಗ್ಲೀಷ ಅಕ್ಷರದ ಖಊಕ ಅಂತ  ಮಾದರಿ ಮುದ್ರೆ ಹಾಕಿ ಪಂಚರ ಸಮಕ್ಷಮದಲ್ಲಿ  ರಾತ್ರಿ 20-00 ಗಂಟೆಯಿಂದ 21-00  ಗಂಟೆಯವರೆಗೆ ಬಿದಿಯ ಲೈಟಿನ ಬೆಳಕಿನಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 202/2020 ಕಲಂ 15(ಎ) 32(3) ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತದೆ.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 172/2020 ಕಲಂ: 78 () ಕೆ.ಪಿ. ಕಾಯ್ದೆ   : ಇಂದು ದಿನಾಂಕ: 21/07/2020 ರಂದು 5:30 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ ಪಿಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:21/07/2020 ರಂದು 2 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಗೋನಾಲ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಹೇಶ ಸಿಪಿಸಿ-129 ಮತ್ತು 3) ಜೀಪ್ ಚಾಲಕ ಶ್ರೀ ಮಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಶಮರ್ುದಿನ್ ತಂದೆ ಅಬ್ದುಲ್ ಸಾಹೇಬ ಚೌದ್ರಿ ವ|| 55 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಸಾ|| ದೇವರಗೋನಾಲ 2) ಶ್ರೀ ಈಶ್ವರಪ್ಪ ತಂದೆ ಭೀಮಣ್ಣ ಕಮತಗಿ ವ|| 41  ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ದೇವರಗೋನಾಲ ಇವರನ್ನು 2:30 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 2:45 ಎ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 3:15 ಪಿ.ಎಮ್ ಕ್ಕೆ ದೇವರಗೋನಾಲ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 3:20 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಿಂಗಪ್ಪ ತಂದೆ ಮುದಕಪ್ಪ ಬಂಟನೂರ ವ|| 53 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ದೇವರಗೋನಾಲ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 550=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 3:20 ಪಿ.ಎಮ್ ದಿಂದ 4:20 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 86/2020 ಕಲಂ 32(3), 15(ಎ) ಕೆ.ಇ ಎಕ್ಟ್ : ದಿನಾಂಕ: 21/07/2020 ರಂದು 8.15  ಪಿ.ಎಮ್ ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಹೋತಪೇಟ ಗ್ರಾಮದ ತನ್ನ ಕಿರಾಣಿ ಅಂಗಡಿಯ ಮುಂದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಧ್ಯ ಕುಡಿಯಲು ಅನುಕೂಲ ಮಾಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿ ಆರೋಪಿತನಿಂದ ಸಿಕ್ಕ ಅಂದಾಜು 922.88/- ರೂ ಕಿಮ್ಮತ್ತಿನ 2.160 ಲೀ. ಮದ್ಯವನ್ನು ಜಪ್ತಿಪಡಿಸಿಕೊಂಡು ಪಿ.ಎಸ್.ಐ ರವರು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಆದೇಶಿಸಿದ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ ಬಗ್ಗೆ.

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 29/2020  ಕಲಂ 279, 338, 304(ಎ) ಐಪಿಸಿ : ಇಂದು ದಿನಾಂಕ 22/07/2020 ರಂದು ಮದ್ಯರಾತ್ರಿ 12-30 ಎ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮೇಲೆ ಬರುವ ಮುಂಡರಗಿ ಗ್ರಾಮದ  ಹತ್ತಿರ ಈ ಕೇಸಿನ ಮೃತ ಸವಾರ ಸಿದ್ರಾಮರೆಡ್ಡಿ ಮತ್ತು ಗಾಯಾಳು ಮಹಮದ್ ಯೂನುಸ್ ಇಬ್ಬರು ಕೂಡಿಕೊಂಡು ಮುಂಡರಗಿ ಗ್ರಾಮದ ಕಡೆಯಿಂದ ಯಾದಗಿರಿಗೆ ಬರುವಾಗ ಮೋಟಾರು ಸೈಕಲನ್ನು ಮೃತ ಸಿದ್ರಾಮರೆಡ್ಡಿ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ರಸ್ತೆಯ ಮೇಲೆ ಹೊರಟಿದ್ದ ಎಮ್ಮೆಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಮೃತ ಸವಾರನಿಗೆ ತಲೆಯ ಹಿಂಭಾಗಕ್ಕೆ ಭಾರೀ ಗುಪ್ತಗಾಯ, ಮುಖಕ್ಕೆ, ಹಣೆಗೆ ರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ಗಾಯಗಳಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಹಿಂಬದಿ ಸವಾರ ಮಹಮದ್ ಯೂನುಸ್ ಈತನಿಗೆ ಎದೆಗೆ ಭಾರೀ ಗುಪ್ತಗಾಯ, ಎಡಗೈ ಮುಂಗೈಗೆ ಹತ್ತಿರ ಮುರಿದಿದ್ದು, ಹಣೆಗೆ, ಮುಖಕ್ಕೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆಗೆ ಗುನ್ನೆ ನಂ.29/2020 ಕಲಂ 279, 338, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!