ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/07/2020
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 84/2020 ಕಲಂ: 279,337,338 ಐಪಿಸಿ : ಇಂದು ದಿನಾಂಕ: 19/07/2020 ರಂದು 7-30 ಪಿಎಮ್ ಕ್ಕೆ ಶ್ರೀ ಹೊನ್ನಪ್ಪ ತಂದೆ ರಾಯಪ್ಪ ಗೊಬ್ಬರ ಸಾ:ಚಟ್ನಳ್ಳಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನಮಗ ರಾಮು ವ:18 ವರ್ಷ ಈತನು ಈಗ್ಗೆ ಸುಮಾರು 15-20 ದಿವಸಗಳಿಂದ ಲಾಡ್ಲಾಪೂರ ಗ್ರಾಮದ ನಾಗಪ್ಪ ಲಾರಿ ಡ್ರೈವರನೊಂದಿಗೆ ಲಾರಿ ಕ್ಲೀನರ ಕೆಲಸ ಮಾಡಿಕೊಂಡಿರುತ್ತಾನೆ. ಈ ದಿವಸ ದಿನಾಂಕ: 19/07/2020 ರಂದು ನನ್ನ ಮಗ ರಾಮು ಲಾರಿ ಮೇಲೆ ಕ್ಲೀನರ ಕೆಲಸಕ್ಕೆ ಸುರಪೂರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದನು. ಮದ್ಯಾಹ್ನ 2-30 ಗಂಟೆ ಸುಮಾರಿಗೆ ನಾಗಪ್ಪ ನನಗೆ ಫೊನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ರಾಮು ಇಬ್ಬರೂ ಸುರಪೂರದಲ್ಲಿ ಅಕ್ಕಿ ಲೋಡ ಮಾಡಿಕೊಂಡು ನಾನು ಲಾರಿ ಚಲಾಯಿಸಿಕೊಂಡು ಬಂದಿದ್ದು, ರಾಮು ನನ್ನ ಮೋಟರ್ ಸೈಕಲ್ ಬಜಾಜ್ ಪ್ಲಾಟಿನಾ ನಂ. ಕೆಎ 32 ಇವ್ಹಿ 5528 ನೇದ್ದನ್ನು ಚಲಾಯಿಸಿಕೊಂಡು ಬರುತ್ತಿದ್ದು, ಮನಗನಾಳ ಹತ್ತಿಮಿಲ್ ಹತ್ತಿರ ಪರಶುರಾಮ ಎಂಬುವನು ಡ್ರಾಪ ಕೇಳಿದ್ದರಿಂದ ಅವನಿಗೆ ಬೈಕಿನಲ್ಲಿ ಕೂಡಿಸಿಕೊಂಡು ಹೊರಟಿದ್ದು, ಯಾದಗಿರಿ-ಶಹಾಪೂರ ಮೇನ ರೋಡ ನಾಯ್ಕಲ್ ಗ್ರಾಮದ ಚಟ್ನಳ್ಳಿ ಕ್ರಾಸ ಹತ್ತಿರ ನಾನು ಮುಂದೆ ಹೋಗುತ್ತಿದ್ದೇನು. ನನ್ನ ಹಿಂದುಗಡೆ ಯಾವುದೋ ಒಂದು ಲಾರಿ ಬರುತ್ತಿತ್ತು. ಅದರ ಹಿಂದೆ ರಾಮು ಬೈಕ ಚಲಾಯಿಸಿಕೊಂಡು ಬರುತ್ತಿದ್ದನು. ರೋಡ ಹಂಪ್ಸನಲ್ಲಿ ರಾಮುನ ಮುಂದೆ ಇದ್ದ ಲಾರಿ ರೋಡ ಹಂಪ್ಸ ದಾಟಿದ ಮೇಲೆ ರಾಮುನು ಮೋಟರ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೇ ರೋಡ ಹಂಪ್ಸ ಮತ್ತು ಲಾರಿಯನ್ನು ನೋಡಿ ತನ್ನ ಬೈಕನ ಬ್ರೇಕ್ ಒತ್ತಿ ಹಿಡಿದಿದ್ದರಿಂದ ಬೈಕ ಅವನ ನಿಯಂತ್ರಣ ತಪ್ಪಿ ಸ್ಕಿಡ್ಡ ಆಗಿ ಬಿದ್ದು ಗಾಯಗೊಂಡಿರುತ್ತಾನೆ. ಅಪಘಾತವಾದಾಗ ಸಮಯ 2 ಪಿಎಮ್ ಆಗಿತ್ತು. ಅವರಿಗೆ ಉಪಚಾರ ಕುರಿತು ಯಾದಗಿರಿ ಜಿಜಿಹೆಚ್ ಗೆ ತಂದಿರುತ್ತೇನೆ ಎಂದು ಹೇಳಿದನು. ಆಗ ನಾನು ಆಸ್ಪತ್ರೆಗೆ ಹೋಗಿ ನೋಡಿದ್ದು, ನನ್ನ ಮಗನಿಗೆ ಗದ್ದದ ಕೆಳಗೆ ಗಾಯ, ಗಲ್ಲದ ಮೇಲೆ ಎಡಗಡೆ ಗಾಯ ಮತ್ತು ಅಲ್ಲಲ್ಲಿ ಭಾರಿ ಒಳಪೆಟ್ಟುಗಳಾಗಿ ಪ್ರಜ್ಞೆ ತಪ್ಪಿದ್ದನು. ಪರಶುರಾಮನಿಗೆ ಕೆಳ ತುಟಿ ಒಡೆದಿದ್ದು, ಎಡ ಮೊಣಕೈಗೆ ಗಾಯವಾಗಿರುತ್ತದೆ. ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿರುತ್ತಾರೆ. ನನ್ನ ಮಗನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕಳುಹಿಸಿ, ನಾನು ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ. ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 84/2020 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ,ಆರ್ ನಂ: 09/2020 ಕಲಂ 174 ಸಿ ಆರ್ ಪಿ ಸಿ : ಇಂದು ದಿನಾಂಕ:19.07.2020 ಬೆಳಿಗ್ಗೆ 6:15 ಗಂಟೆಯ ಪಿರ್ಯಾಧಿ ಶ್ರೀ. ದೇವಪ್ಪ ತಂದೆ ಹುಲಗಪ್ಪ ದೇವರಮನಿ ವ;38 ವರ್ಷ ಜಾ:ಹಿಂದೂ ಬೇಡರ ಉ: ಒಕ್ಕಲುತನ ಸಾ: ರಾಜವಾಳ ತಾ: ಹುಣಸಗಿ ಇವರು ಠಾಣೆಗೆ ಹಾಜರಾಗಿ ಹೇಳಿ ಗಣಕಯಂತ್ರದಲ್ಲಿ ಹೇಳಿ ಗಣಕೀಕರಿಸಿದ ಹೇಳಿಕೆಯ ಸಾರಾಂಶವೆನೆಂದರೆ ನಾವು ನಮ್ಮ ತಂದೆ-ತಾಯಿಗೆ 7 ಜನ ಗಂಡು ಮಕ್ಕಳಿದ್ದು. ನಾವೆಲ್ಲರೂ ಬೇರೆ-ಬೇರೆಯಾಗಿದ್ದು ಅಣ್ಣ ಶೇಖರಪ್ಪ, ಬಸಣ್ಣ ಮತ್ತು ನಾವು ಕೂಡಿಯೇ ಇದ್ದು. ನಾವು ಮೂರು ಜನ ಅಣ್ಣ ತಮ್ಮಂದಿರು ರಾಜವಾಳ ಸೀಮಾಂತರ ಹೊಲದ ಸವರ್ೇ ನಂ:26 ರಲ್ಲಿ ದೇವರಮನಿಯ ಹೊಲ ಅಂತ ಹೆಸರಿನ ಹೊಲದಲ್ಲಿ ಗುಡಿಸಲು ಹಾಕಿಕೊಂಡು ಇದ್ದು. ನನ್ನ ಅಣ್ಣ ಶೇಖಪ್ಪನಿಗೆ ಹುಲಗಪ್ಪ ಮಂಜುನಾಥ ಮತ್ತು ಶಿವರಾಜ ಅಂತ ಮೂರು ಜನ ಗಂಡು ಮಕ್ಕಳಿದ್ದು. ಅಣ್ಣ ಶೇಖಪ್ಪನ ದೊಡ್ಡ ಮಗನಾದ ಹುಲಗಪ್ಪನಿಗೆ ಈಗ 6 ವರ್ಷದ ಹಿಂದೆ ಲಿಂಗಸೂರು ತಾಲೂಕಿನ ಗುಂತಗೂಳಿಯ ಜೇಜಮ್ಮ ಇವಳೊಂದಿಗೆ ಮದುವೆ ಮಾಡಿದ್ದು. ನನ್ನ ಅಣ್ಣನ ಮಗ ಹುಲಗಪ್ಪನಿಗೆ ಪವನಕುಮಾರ ಅಂತ 4 ವರ್ಷದ ಗಂಡು ಮಗು ಮತ್ತು ಪವಿತ್ರ ಅಂತ 2 ವರ್ಷದ ಹೆಣ್ಣು ಮಗಳು ಇರುತ್ತಾರೆ.
ಹೀಗಿದ್ದು ನಮ್ಮ ರಾಜವಾಳ ಸೀಮಾಂತರದ ಹೊಲದ ಸವರ್ೇ ನಂ:26 ರಲ್ಲಿ ದೇವರಮನಿ ಅಂತ ಹೆಸರಿನ ಹೊಲದಲ್ಲಿ ನಿನ್ನೆ ದಿನಾಂಕ:18.07.2020 ರಂದು ರಾತ್ರಿ 6:30 ಗಂಟೆಯ ಸುಮಾರಿಗೆ ನಾನು, ನನ್ನ ಹೆಂಡತಿ ಪಾರ್ವತಿ, ಅಣ್ಣ ಶೇಖಪ್ಪನ ಹೆಂಡತಿ ನೀಲಮ್ಮ, ಅಣ್ಣನ ಶೇಖಪ್ಪನ ಮಗ ಹುಲಗಪ್ಪ ಮತ್ತು ಅವನ ಹೆಂಡತಿ ಜೇಜಮ್ಮ ಎಲ್ಲರೂ ಕೂಡಿ ಕೆಲಸ ಮಾಡುತ್ತಿದ್ದು. ನನ್ನ ಅಣ್ಣ ಶೇಖಪ್ಪನ ಮಗ ಹುಲಗಪ್ಪನ ಮಗನಾದ ಪವನಕುಮಾರ ತನ್ನ ತಾಯಿಯಾದ ಜೇಜಮ್ಮಳ ಹಿಂದೆ ತಿರುಗಾಡುತ್ತಿದ್ದು. ಇತನು ಚಿಟ್ಟನೇ ಚಿರಿದನು ನಾವು ಗಾಬಾರಿಯಾಗಿ ಅವನ ಹತ್ತಿರ ಹೋಗಿ ನೋಡಲಾಗಿ ಒಂದು ಹಾವು ಮುಳ್ಳು ಕಂಟಿಯ ಕಡೆಗೆ ಸಳ-ಸಳನೇ ಹೋಗಿದ್ದು, ನನ್ನ ಅಣ್ಣನ ಮೊಮ್ಮಗ ಪವನಕುಮಾರನು ತನ್ನ ಬಲಗಾಲು ಕಡೆ ಕೈ ಸೋನ್ನೆ ಮಾಡಿ ಅಳುತ್ತಿರುದನ್ನು ನೋಡಿ ಅವನ ಬಲ ಮೊಳಕಾಲು ಕೆಳಗಡೆ ಮತ್ತು ಬಲಕಾಲು ಮೀನಿನ ಕಂಡದ ಹತ್ತಿರ ಹಾವಿನ ಹಲ್ಲು ಕಚ್ಚಿದ ಗಾಯದ ಗುರುತುಗಳು ಕಂಡು ಬಂದಿದ್ದು. ನಾವೆಲ್ಲರು ನನ್ನ ಅಣ್ಣನ ಮೊಮ್ಮಗ ಪವನಕುಮಾರನನ್ನು ನಮ್ಮೂರು ರಾಜವಾಳಕ್ಕೆ ಕರೆದುಕೊಂಡು ಬಂದಿದ್ದು. ಆಗ ನನ್ನ ಅಣ್ಣನ ಮೊಮ್ಮಗ ಪವನಕುಮಾರನು ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದು. ರಾಜವಾಳದಿಂದ ನನ್ನ ಅಣ್ಣನ ಮೊಮ್ಮಗ ಪವನಕುಮಾರನನ್ನು ಒಂದು ಕಾರಿನಲ್ಲಿ ನನ್ನ ಅಣ್ಣನ ದೊಡ್ಡ ಮಗ ಹುಲಗಪ್ಪ ಮತ್ತು ಅವನ ಹೆಂಡತಿ ಜೇಜೆಮ್ಮ, ಅಣ್ಣ ಬಸಣ್ಣ, ನನ್ನ ಅಣ್ಣ ಬಸಣ್ಣನ ಹೆಂಡತಿ ಕಾಸಿಬಾಯಿ, ನಮ್ಮ ಅಣ್ಣ-ತಮ್ಮಕೀಯ ಪ್ರಭು ತಂದೆ ಹಣಮಂತ್ರಾಯ ದೇವರಮನಿ, ಹಾಗೂ ನಮ್ಮ ಸಂಬಂಧಿ ದ್ಯಾಮಣ್ಣ ತಂದೆ ದೇವಪ್ಪ ಗುಜ್ಜಲ್ ಇವರುಗಳು ಉಪಚಾರಕ್ಕಾಗಿ ಬಂಗಾರ ಹಟ್ಟಿ ಕಂಪನಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ನಂತರ ನಾನು ನಿನ್ನೆ ದಿನ ರಾತ್ರಿ 10:15 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನಮ್ಮ ಅಣ್ಣ-ತಮ್ಮಕೀಯ ಪ್ರಬು ತಂದೆ ಹಣಮಂತ್ರಾಯ ದೇವರಮನಿ ಇತನು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ '' ನಾವು ಪರನಕುಮಾರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು. ನಾವು ರಾತ್ರಿ 9:40 ಬಂಗಾರ ಹಟ್ಟಿಯ ಕಂಪನಿ ಆಸ್ಪತ್ರೆಗೆ ಒಯ್ಯುದು ಸೇರಿಕೆ ಮಾಡಿದ್ದು. ಅಲ್ಲಿಯ ವೈದ್ಯರು ಪವನಕುಮಾರ ಇತನು ಸತ್ತಿದ್ದಾಗಿ ತಿಳಿಸಿದ್ದು. ನೀನು ಈ ಬಗ್ಗೆ ಕೊಡೇಕಲ್ಲ ಪೊಲೀಸ್ ಠಾಣೆಗೆ ಹೋಗಿ ದೂರು ನೀಡು ಅಂತ ತಿಳಿಸಿದ್ದು. ನಿನ್ನೆ ದಿನ ನನ್ನ ಅಣ್ಣನ ಶೇಖಪ್ಪನ ಮೊಮ್ಮಗ ಪವನಕುಮಾರ ಇತನಿಗೆ ನಮ್ಮ ಹೊಲದಲ್ಲಿ ಹಾವು ಕಚ್ಚಿದ್ದು ಇತನಿಗೆ ಉಪಚಾರಕ್ಕಾಗಿ ಬಂಗಾರ ಹಟ್ಟಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಸದರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಮೃತಪಟ್ಟಿದ್ದು. ಈ ನನ್ನ ಅಣ್ಣನ ಮೊಮ್ಮಗ ಪವನಕುಮಾರನ ತಂದೆ ಹುಲಗಪ್ಪ ದೇವರಮನಿ ವ:4 ವರ್ಷ ಇತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲ. ನನ್ನ ಅಣ್ಣನ ಮೊಮ್ಮಗ ಪವನಕುಮಾರನ ಶವವು ಬಂಗಾರ ಹಟ್ಟಿ ಕಂಪನಿಯ ಆಸ್ಪತ್ರೆಯಲ್ಲಿದ್ದು. ನಿನ್ನೆ ದಿನ ರಾತ್ರಿಯಾಗಿದ್ದರಿಂದ ತಡವಾಗಿ ಬಂದು ಈ ದಿವಸ ಹೇಳಿಕೆ ನೀಡಿದ್ದು ತಾವು ಬಂದು ಮುಂದಿನ ಕ್ರಮ ಜರುಗಿಬೇಕು ಅಂತ ವಗೈರೆ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:09/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 197/2020.ಕಲಂ 87 ಆ್ಯಕ್ಟ : ಇಂದು ದಿನಾಂಕ: 19/07/2020 ರಂದು 22-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ ಚಂದ್ರಕಾಂತ ಪಿ.ಎಸ್.ಐ. ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ 8 ಜನ ಆರೋಪಿತರು ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ದಿನಾಂಕ 19/07/2020 ರಂದು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಇಂಡಸ್ಟೀಯಲ್ ಕಿಸ್ಮತ್ ಕೋಳಿ ಪಾರಂ ಪಕ್ಕದಲ್ಲಿ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಏಲೆಗಳ ಸಹಾಯದಿಂದ ಅಂದರ ಬಾಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ 19-45 ಗಂಟೆಗೆ ನ್ಯಾಯಾಲಯದ ಅನುಮತಿ ಪಡೆದುಕೊಂಡು ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಶಹಾಪೂರ ನಗರದ ಇಂಡಸ್ಟೀಯಲ್ ಕಿಸ್ಮತ್ ಕೋಳಿ ಪಾರಂ ಪಕ್ಕದಲ್ಲಿ ಹೋಗಿ ದಾಳಿ ಮಾಡಿದ್ದು 8 ಜನ ಆರೋಪಿತರು ಸಿಕ್ಕಿದ್ದು ಅವರ ಹತ್ತಿರ ಮತ್ತು ಕಣದಲ್ಲಿ ಹಿಗೆ ಒಟ್ಟು 10100/- ರೂ ಹಾಗೂ 52 ಇಸ್ಪೇಟ ಏಲೆಗಳು ಸಿಕ್ಕಿದ್ದು ಮುದ್ದೆಮಾಲಗಳನ್ನು ದಿನಾಂಕ 19/07/2020 ರಂದು 21-30 ಗಂಟೆಯಿಂದ 22-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ ಆರೋಪಿತರ ವಿರುದ್ದ ಠಾಣೆ ಗುನ್ನೆ ನಂ 197/2020 ಕಲಂ 87 ಕೆ.ಪಿ.,ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
Hello There!If you like this article Share with your friend using