ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/07/2020

By blogger on ಭಾನುವಾರ, ಜುಲೈ 19, 2020




                          ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/07/2020 
                                                                                                               
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 28/2020  ಕಲಂ 279,  337, 338 ಐಪಿಸಿ  ಸಂ. 187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 18/07/2020 ರಂದು ಬೆಳಿಗ್ಗೆ 10 ಎ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಅಲ್ಲಿಪುರ ಕ್ರಾಸ್ ಹತ್ತಿರ ಈ ಕೇಸಿನ ಗಾಯಾಳುಗಳು ತಮ್ಮ ಮೋಟಾರು ಸೈಕಲ್  ನಂ.ಕೆಎ-32, ಇ.ಎಲ್-8077 ನೇದ್ದರ ಮೇಲೆ ಯಾದಗಿರಿಗೆ ಬರುತ್ತಿರುವಾಗ  ಟಿಪ್ಪರ್ ಲಾರಿ ನಂ.ಕೆಎ-33, ಬಿ-0860 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಮೊಟಾರು ಸೈಕಲ್ ನೆದ್ದಕ್ಕೆ ಹಿಂದಿನಿಂದ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಮೋಟಾರು ಸೈಕಲ್ ಮೇಲಿದ್ದ ಮೂರು ಜನರಿಗೆ ಬಾರೀ ರಕ್ತಗಾಯ ಮತ್ತು ಗುಪ್ತಗಾಯ, ಸಾದಾಗಾಯಗಳಾಗಿದ್ದು ಆರೋಪಿತನು ಅಪಘಾತಪಡಿಸಿದ ನಂತರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಆತನ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 83/2020 ಕಲಂ: 78(3) ಕೆ.ಪಿ.ಆಕ್ಟ್ : ಇಂದು ದಿನಾಂಕ: 18/07/2020 ರಂದು 1-50 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 18/07/2020 ರಂದು ಸಮಯ ಬೆಳಗ್ಗೆ 11-30 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ಪ್ರಕಾಶ ಹೆಚ.ಸಿ 18, ಶ್ರೀ ನಾಗರಾಜ ಪಿಸಿ 357  ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೇನಂದರೆ ಉಳ್ಳೆಸೂಗೂರು ಗ್ರಾಮದ ದ್ಯಾಮವ್ವನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಅವರಿಗೆ ದಾಳಿ ವಿಷಯ ತಿಳಿಸಿ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ವಡಗೇರಾ ಠಾಣೆಯಿಂದ ಸಮಯ 11-40 ಎಎಮ್ ಕ್ಕೆ ಹೊರಟು ಸಮಯ 12-15 ಪಿಎಮ್ ಸುಮಾರಿಗೆ ಉಳ್ಳೆಸೂಗೂರು ಗ್ರಾಮದ ಪಂಚಾಯತ ಕಾರ್ಯಲಯದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ದ್ಯಾವಮ್ಮ ಗುಡಿಯನ್ನು ಮರೆಯಾಗಿ ನಿಂತು ನೋಡಲಾಗಿ ಗುಡಿ ಮುಂದೆ ಒಬ್ಬ ವ್ಯಕ್ತಿಯು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿಗಳ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 12-20 ಪಿಎಮ್ ಸುಮಾರಿಗೆ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಚಂದಾಸಾಬ ತಂದೆ ಉಸ್ಮಾನಸಾಬ ಮಣಗಾರ, ವ:32, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ತಾ:ವಡಗೇರಾ ಅಂತಾ ತಿಳಿಸಿದನು. ಸದರಿಯವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂದಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 2500/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 2500/- ರೂ. ಮುದ್ದೇಮಾಲನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಾಬಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ಘಟನೆ ಸ್ಥಳವು ದ್ಯಾವಮ್ಮ ಗುಡಿ ಮುಂದೆ ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿತರು ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು ಇಂದು ದಿನಾಂಕ: 18/07/2020 ರಂದು 6-30 ಪಿಎಮ್ ಕ್ಕೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 83/2020 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 193/2020. ಕಲಂ 279, 338 ಐ.ಪಿ.ಸಿ : ದಿನಾಂಕ: 07-07-2020 ರಂದು ಸಾಯಂಕಾಲ 7:30 ಗಂಟೆ ಸುಮಾರಿಗೆ ಶಹಾಪುರ ಮೋರಟಗಿ ಹೊಟೇಲ ಮುಂದೆ ರಸ್ತೆಯ ಮೇಲೆ ಆರೋಪಿತನು ತನ್ನ ಟ್ರ್ಯಾಕ್ಟರ ನಂ. ಕೆ.ಎ.33 ಟಿ.ಎ.6065 ನೇದ್ದನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ನಿಂತ ಫಿರ್ಯಾದಿ ಮತ್ತು ಇನ್ನೊಬ್ಬ ಗಾಯಾಳು ಸಂಗಪ್ಪ ತಂದೆ ಬಸಣ್ಣ ಕೋರಬಾರ ಇವರಿಗೆ ಡಿಕ್ಕಿ ಪಡಿಸಿ ರವರು ಕೆಳಗೆ ಬೀಳಿಸಿ ಭಾರೀ  ಗಾಯ ಮಾಡಿದ್ದು ಇರುತ್ತದೆ ಆಸ್ಪತ್ರೆಗೆ ತೋರಿಸಿಕೊಂಡು ಇಮದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ಅಂತಾ ಇತ್ಯಾದಿ ಇದ್ದ  ಫಿರ್ಯದಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ.193/2020 ಕಲಂ. 279, 338 ಐ.ಪಿ.ಪಿ.  ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.                                                                                                                                                  

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 194/2020.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ :    ಇಂದು ದಿನಾಂಕ 18/07/2020 ರಂದು 15-00 ಗಂಟೆಗೆ ಶ್ರೀ ಸಿದ್ದೇಶ್ವರ ಪಿ.ಎಸ್.ಐ. ( ಕಾ.ಸೂ-2) ಸಾಹೇಬರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ: 18/07/2020 ರಂದು 13-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಮಾಹಿತಿ ಬಂದಿದ್ದೆನೆಂದರೆ, ಸಗರ (ಬಿ) ಗ್ರಾಮದಲ್ಲಿ ಕಡಗುಡ ಮಠದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಮೇರೆಗೆ, ಠಾಣೆಯಲ್ಲಿ ಹಾಜರಿದ್ದ ಸಂಗನಬಸವ ಹೆಚ್.ಸಿ.02. ಬೀಮನಗೌಡ ಪಿ.ಸಿ.202. ಇವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಹೇಳಿ ಭೀಮನಗೌಡ ಪಿ.ಸಿ.202. ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದೆ ಶಿವಣ್ಣ ಅಂಗಡಿ ವ|| 30 ಜಾ|| ಲಿಂಗಾಯತ ಉ|| ಕೂಲಿ ಸಾ|| ಸಗರ (ಬಿ) 2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 50 ಉ|| ಕೂಲಿ ಕೆಲಸ ಜಾ|| ಪ.ಜಾತಿ ಸಾ|| ದೇವಿನಗರ ಶಹಾಪೂರ ಇವರಿಗೆ ಕರೆದುಕೊಂಡು ಬಂದು 13-20 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.   ಮಾನ್ಯ ಡಿವೈ,ಎಸ್,ಪಿ, ಸಾಹೇಬರು ಸುರಪೂರ, ಪಿ.ಐ.ಸಾಹೇಬರು ಶಹಾಪೂರ, ರವರ ಮಾರ್ಗದರ್ಶನದಲ್ಲಿ ದಾಳಿಕುರಿತು ನಾನು ಮತ್ತು ಪಂಚರು, ಸಿಬ್ಬಂದಿ ಜನರು, ಎಲ್ಲರು ಕೂಡಿ ಒಂದು ಕಾಸಗಿ ಜೀಪ ನೇದ್ದರಲ್ಲಿ ಕುಳಿತುಕೊಂಡು 13-30 ಗಂಟೆಗೆ ಠಾಣೆಯಿಂದ ಹೋರಟೆವು. ನೇರವಾಗಿ 14-00 ಗಂಟೆಗೆ ಕಡಗುಡ ಮಠದ ಹತ್ತಿರ ಸ್ವಲ್ಪ ದುರದಲ್ಲಿ ಹೋಗಿ ಜೀಪನಿಲ್ಲಿಸಿ ಎಲ್ಲರು ಜೀಪಿನಿಂದ ಇಳಿದು ನಡೆದುಕೊಂಡು ಓಣಿಯಲ್ಲಿ ಹೋಗಿ ಮನೆಗಳ ಗೋಡೆಯ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ, ಒಬ್ಬ ವ್ಯೆಕ್ತಿ ರಸ್ತೆಯ ಪಕ್ಕದಲ್ಲಿ ತನ್ನ ಮನೆಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 14-20 ಗಂಟೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಮದ್ಯ ಕುಡಿಯಲು ಅನುಕುಲ ಮಾಡಿಕೊಟ್ಟಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು. ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಬಾಪೂಗೌಡ ತಂದೆ ನಿಂಗಣ್ಣ ವಿರುಪಾಪೂರ ವ|| 20 ಜಾ|| ಗಾಣಿಗ ಉ|| ಕೂಲಿ ಸಾ|| ಸಗರ (ಬಿ) ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಸಗರ ಗ್ರಾಮದಲ್ಲಿ ತನ್ನ ಮನೆಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು. ನಾನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 1] 90 ಎಂ.ಎಲ್.ನ ಒಟ್ಟು 20 ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೇಟ್ ಇದ್ದು ಒಂದು ಪಾಕೇಟ್ನ ಕಿಮ್ಮತ್ತು 35.13 ರೂ ಅಂತಾ ಇದ್ದು, ಒಟ್ಟು 20 ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೇಟ್ಗಳ ಕಿಮ್ಮತ್ತು 702.6 ರೂ ಗಳಾಗುತ್ತಿದ್ದು, 2] ಒಂದು ಬೀಳಿಬಣ್ಣದ ಪ್ಲಾಸ್ಟಿಕ್ ಚೀಲಾ ಅ:ಕಿ: 00=00 ರೂ 3] 2 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ: 00=00 ರೂ 4] ಮದ್ಯ ಕುಡಿಯಲು ಉಪಯೋಗಿಸಿದ 90 ಎಂ.ಎಲ್.ನ 2 ಖಾಲಿ ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೇಟ್ ಇದ್ದವು. ಅ:ಕಿ:00=00 ರೂ, ಒಟ್ಟು 20 ಮದ್ಯದ ಪಾಕೇಟ್ಗಳಲ್ಲಿ 90 ಎಂ.ಎಲ್.ನ 1 ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೇಟ್ನ್ನು ಪಂಚರ ಸಮಕ್ಷಮದಲ್ಲಿ ಎಫ್.ಎಸ್.ಎಲ್ ಪರೀಕ್ಷೆ  ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 14-30 ಗಂಟೆಯಿಂದ 15-30 ಗಂಟೆಯವರೆಗೆೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 16-00 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 17-00  ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 194/2020 ಕಲಂ 15(ಎ) 32( 3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 195/2020  ಕಲಂ 15 (ಎ) 32 (3) ಕೆ.ಇ ಆಕ್ಟ : ಇಂದು ದಿನಾಂಕ 18/07/2020  ರಂದು ಸಾಯಂಕಾಲ 17-30  ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ  ಚಂದ್ರಕಾಂತ ಪಿ.ಎಸ್.ಐ ಕಾಸು  ಶಹಾಪೂರ ಪೊಲೀಸ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ 14-30 ಗಂಟೆಗೆ ಫಿರ್ಯಾದಿಯವರಿಗೆ ಹತ್ತಿಗೂಡುರ ಗ್ರಾಮದ ದೇವದುರ್ಗ ಕ್ರಾಸ್ ಹತ್ತಿರವಿರುವ  ವಿಜಯ ಆಗ್ರೋ ಟ್ರೇಡರ್ಸ ಪಕ್ಕದ ಒಂದು ದಾಬಾದ  ಹಿಂದುಗಡೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ  ಅಕ್ರಮವಾಗಿ  ಮದ್ಯ ಕುಡಿಯಲು ಅನಕೂಲ ಮಾಡಿಕೊಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಫಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ 90 ಎಮ್.ಎಲ್.ನ 25 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಮದ್ಯದ ಪಾಕೇಟಗಳು ಅಂ.ಕಿ 878=00 ರೂಪಾಯಿ 25 ಪೈಸೆ. 3 ಪ್ಲಾಸ್ಟೀಕ್ ಗ್ಲಾಸ್ ಸಾರ್ವಜನಿಕರು ಮದ್ಯ ಕುಡಿಯಲು ಉಪಯೋಗಿಸಿದ್ದು, ಅಂ.ಕಿ 00-00, 90 ಎಮ್.ಎಲ್.ನ 2 ಖಾಲಿ ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ  ಪಾಕೇಟ್ ಸಾರ್ವಜನಿಕರು ಕುಡಿದು ಉಪಯೋಗಿಸಿದ್ದು ಅಂ.ಕಿ 00-00 ನೇದ್ದವುಗಳ ಪೈಕಿ ಒಂದು 90 ಎಮ್.ಎಲ್.ನ ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಮದ್ಯ ತುಂಬಿದ ಪಾಕೇಟನ್ನು ಪಂಚರ ಸಮಕ್ಷಮದಲ್ಲಿ ತಜ್ಞರ ಪರೀಕ್ಷೆಗಾಗಿ ಕಳುಹಿಸುವ  ಸಲುವಾಗಿ ಒಂದು  ಬಿಳಿ ಬಟ್ಟೆಯ ಚೀಲದಲ್ಲಿ  ಹಾಕಿ ಹೊಲೆದು ಅದರ  ಮೇಲೆ ಠಾಣೆಯ ಇಂಗ್ಲೀಷ ಅಕ್ಷರದ ಖಊಕ ಅಂತ  ಮಾದರಿ ಮುದ್ರೆ ಹಾಕಿ ಪಂಚರ ಸಮಕ್ಷಮದಲ್ಲಿ  15-40 ಗಂಟೆಯಿಂದ 16-40  ಗಂಟೆಯವರೆಗೆ  ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 195/2020 ಕಲಂ 15(ಎ) 32(3) ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತದೆ.

ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 196/2020 ಕಲಂ 15(ಂ) 32,(3)  ಕೆ.ಇ ಆಕ್ಟ : ಇಂದು ದಿನಾಂಕ 18-07-2020 ರಂದು 6:00 ಪಿ.ಎಮ್.ಕ್ಕೆ ಆರೋಪಿತನು ತನ್ನ  ಹೊಟೇಲದಲ್ಲಿ  ಯಾವುದೇ ಪರವಾನಿಗೆ ಇಲ್ಲದೇ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟುದ್ದು ಆಗ ಮಾಹಿತಿ ಆಧಾರದ  ಮೇಲೆ ಫಿರ್ಯಾದಿದಾರರು ಪಂಚರ ಸಮಕ್ಷಮದಲ್ಲಿ ಆತನಿಂದ ಒಟ್ಟು 910 ರೂ. ಮೌಲ್ಯದ 90 ಎಮ್.ಎಲ್.ನ 26 ಮದ್ಯದ ಪಾಕೇಟುಗಳನ್ನು ವಶಪಡಿಸಿಕೊಡು ಕ್ರಮ ಜರುಗಿಸು ಸೂಚಿಸಿ ಹಾಜರು ಪಡಿಸಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 196/2020 ಕಲಂ 15(ಂ),32,(3)  ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 64/2020 78 (3) ಕೆ.ಪಿ ಯಾಕ್ಟ : 18/07/2020 ರಂದು 11.00 ಪಿ.ಎಮ್ ಕ್ಕೆ, ಶ್ರೀ. ಎನ್.ವೈಗುಂಡುರಾವ್ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ವಜ್ಜಲ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಮಟಕಾ ಬರೆದುಕೊಳ್ಳುವನ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:64/2020 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
ನಂತರ ಮಾನ್ಯ ಪಿಎಸ್ಐ ಸಾಹೇಬರು 13.10 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ& ನಗದು ಹಣ 785/- ರೂ.ಗಳು ಒಂದು ಮಟಕಾ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತನ ಹೆಸರು ಬಸವರಾಜ ತಂದೆ ಗುರಣ್ಣ

ಹುಣಸಗಿ  ಪೊಲೀಸ ಠಾಣೆ ಗುನ್ನೆ ನಂ:- 65/2020 143,323, 324, 341,504, 506, 354 ಸಂಗಡ 149 ಐಪಿಸಿ : 18/07/2020ರಂದು 10.30 ಗಂಟೆಗೆ ಮಾನ್ಯ ವೈದ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಹುಣಸಗಿ ರವರು ಠಾಣೆಗೆ ಪೋನ್ ಮಾಡಿ ತಿಳಿಸಿದ್ದೇನೆಂದರೇ, ಬೈಲಾಪೂರ ಗ್ರಾಮದ 2 ಜನರು ಜಗಳದಲ್ಲಿ ಗಾಯ  ಹೊಂದಿ ಆಸ್ಪತ್ರೆಗೆ ಬಂದು ಸೇರಿಕೆ ಯಾದ ಬಗ್ಗೆ ಎಮ್.ಎಲ್.ಸಿ ತಿಳಿಸಿದ್ದು, ಆಸ್ಪತ್ರೆತಗೆ ಹೋಗಿ ಗಾಯಾಳು ಪಿಯರ್ಾದಿ ಶ್ರೀ .ನಂದಪ್ಪ ತಂದೆ ಹಣಮಂತ್ರಾಯ ಬಿರಾದಾರ ವಯ-49 ವರ್ಷ, ಜಾ:ಬೇಡರ ಉ:ಒಕ್ಕಲುತನ ಸಾ:ಬೈಲಾಪೂರ ರವರಿಗೆ ವಿಚಾರಿಸಿಹೇಳಿಕೆ ಪಡೆದುಕೊಂಡಿದ್ದು, ಬೆಳಿಗ್ಗೆ 08.00 ಗಂಟೆಯ ಸುಮಾರಿಗೆ ಬೈಲಾಪೂರ ಸೀಮಾಂತರ ಸವರ್ೆ ನಂ: 64ರಲ್ಲಿಯ 20 ಗುಂಟೆ ಜಮೀನಿನಲ್ಲಿ ಫಿರ್ಯಾದಿ & ಫಿರ್ಯಾದಿ ಹೆಂಡತಿ ಆಕಳು & ಟಗರು ಮರಿಗಳು ಮೇಯಿಸುವಾಗ ಆರೋಪಿತರೆಲ್ಲರೂ ಸೇರಿ ಅಲ್ಲಿಗೆ ಹೋಗಿ ಫಿರ್ಯಾದಿಗೆ ತಡೆದು ಕೈಯಿಂದ , ಕಲ್ಲಿನಿಂದ ಹೊಡೆದಿದ್ದು ಅಲ್ಲದೆ ಕುರಿ ಕೊಯುವ ಚೂರಿಯಿಂದ ಫಿರ್ಯಾದಿಯ ಕೈಗೆ ಹೊಡೆದಿದ್ದು, & ಫಿರ್ಯಾದಿಯ ಹೆಂಡತಿ ಕುಡುಗೋಲಿನಿಮದ ಹೊಡೆದು ರಕ್ತಗಾಯ ಪಡಿಸಿದ್ದು, ಅಲ್ಲದೆ ಫಿರ್ಯಾದಿಯ ಹೆಂಡತಿಗೆ ಆರೋಪಿ ನಂ:1 ನೇದ್ದವನು ಕೂದಲು ಹಿಡಿದು ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 66/2020 323, 324, 341, 354, 504, 506 ಐಪಿಸಿ : 18/07/2020ರಂದು 11.15ಗಂಟೆಗೆ ಮಾನ್ಯ ವೈದ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಹುಣಸಗಿ ರವರು ಠಾಣೆಗೆ ಪೋನ್ ಮಾಡಿ ತಿಳಿಸಿದ್ದೇನೆಂದರೇ, ಬೈಲಾಪೂರ ಗ್ರಾಮದ 2 ಜನರು ಜಗಳದಲ್ಲಿ ಗಾಯ  ಹೊಂದಿ ಆಸ್ಪತ್ರೆಗೆ ಬಂದು ಸೇರಿಕೆ ಯಾದ ಬಗ್ಗೆ ಎಮ್.ಎಲ್.ಸಿ ತಿಳಿಸಿದ್ದು, ಆಸ್ಪತ್ರೆತಗೆ ಹೋಗಿ ಗಾಯಾಳು ಪಿಯರ್ಾದಿ ಶ್ರೀ  ಮಾನಪ್ಪ ತಂದೆ ಬಸಪ್ಪ ಬಿರಾದಾರ ವಯ-43 ವರ್ಷ, ಜಾ:ಬೇಡರ ಉ:ಒಕ್ಕಲುತನ ಸಾ:ಬೈಲಾಪೂರ ರವರಿಗೆ ವಿಚಾರಿಸಿಹೇಳಿಕೆ ಪಡೆದುಕೊಂಡಿದ್ದು, ಬೆಳಿಗ್ಗೆ 08.00 ಗಂಟೆಯ ಸುಮಾರಿಗೆ ಬೈಲಾಪೂರ ಸೀಮಾಂತರ ಸವರ್ೆ ನಂ: 64ರಲ್ಲಿಯ 20 ಗುಂಟೆ ಜಮೀನಿನಲ್ಲಿ ಫಿರ್ಯಾದಿ ಮನೆ ಕಟ್ಟಿದ್ದು, ಮನೆಯ ಮುಂದೆ ಫಿರ್ಯಾದಿಯ 2 ನೇ ಹೆಂಡತಿಯಾದ ಶಿವಮ್ಮಳೊಂದಿಗೆ ಕುಳಿತಾಗ ಆರೋಪಿತರಿಬ್ಬರೂ ಹೋಗಿ ಫೀರ್ಯಾದಿಗೆ ಹಣ ಕೊಡು ಅಂದರೆ ಕೊಡುತ್ತೇನೆ ಅಂತಾ ಕೊಟ್ಟಿಲ್ಲ, ಹೊಲವನ್ನು ನಮಗೆ ಬಿಟ್ಟು ಬಿಡು ಇಲ್ಲದಿದ್ದರೆ ನಿನಗೆ ಒಂದು ಗತಿ ಕಾಣೀಸುತ್ತೇವೆ ಅಂತಾ ಅಂದಾಗ ಫಿರ್ಯಾದಿಯು ಕೊಡು ಹಣ ಕೊಟ್ಟಿದ್ದೇನೆ. ಇನ್ನು ಎಲ್ಲಿಂದ ಹಣ ಕೊಡುವುದ ಅಂತಾ ಅಂದಾಗ ಫಿರ್ಯಾದಿಗೆ ಕಾರವನ್ನು ಆರೋಫಿತ ನಂ:2 ನೇದ್ದವಳು ಉಗ್ಗಿ ಆರೋಪಿತ ನಂ:1 ನೇದ್ದವನು ಫಿರ್ಯಾದಿಗೆ ಚಾಕುವಿನಿಂದ ಕೈಗೆ ಹೊಡೆದು ರಕ್ತಗಾಯ ಮಾಡಿದ್ದು, ಅಲ್ಲದೆ ಫಿರ್ಯಾದಿಯ ಹೆಂಡತಿಗೆ ಕೈ ಹಿಡಿದು  ತಡೆದು ತಲೆಯ ಕೂದಲು ಹಿಡಿದು ನೆಲಕ್ಕೆ ಕೆಡವಿ ಕಾಳಿನಿಂದ ಒದ್ದಿದ್ದು, ಅಲ್ಲದೆ ಗಾಯಳು ನಂ:2 ನೇದ್ದವರಿಗೆ ಆರೋಪಿ ನಂ:2 ನೇದ್ದವಳು ಕಲ್ಲಿನಿಂದ ಬಲಗಲ್ಲಕ್ಕೆ ಹೊಡೆದು ರಕ್ತಗಾಯಪಡಿಸಿದ್ದು, ಫಿರ್ಯಾದಿ & ಹೆಂಡತಿ ಚೀರಾಡಿದಾಗ ಫಿರ್ಯಾದಿಯ ಮೊದಲನೆ ಹೆಂಡತಿ & ತಮ್ಮ ಓಡಿ ಬಂದು ಬಿಡಿಸಿದ್ದು, ಆರೋಪಿತರು ಹೊಡೆಯುವದನ್ನು ಬಿಟ್ಟು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!