ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/07/2020

By blogger on ಶುಕ್ರವಾರ, ಜುಲೈ 17, 2020
                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/07/2020 
                                                                                                               
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 27/2020  ಕಲಂ 279,  337, 338, 304(ಎ) ಐಪಿಸಿ : ಇಂದು ದಿನಾಂಕ 17/07/2020 ರಂದು  11-30 ಎ.ಎಂ.ದ ಸುಮಾರಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಆರ್.ಟಿ.ಎ/ಎಮ್.ಎಲ್.ಸಿ ತಿಳಿಸಿದ್ದು, ಆಸ್ಪತ್ರೆಗೆ ಬೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ವಿಚಾರಣೆ ನಂತರ ಗಾಯಾಳು ಹೇಳಿಕೆ ಕೊಡದ ಸ್ಥಿತಿಯಲ್ಲಿರದ ಕಾರಣ ಆಸ್ಪತ್ರೆಯಲ್ಲಿ ಹಾಜರಿದ್ದ ಗಾಯಾಳುವಿನ ಪತ್ನಿ  ಶ್ರೀಮತಿ  ನೀಲಿಬಾಯಿ ಗಂಡ ಅಮರೇಶ್ವರ ರಾಠೋಡ  ವಯ;40 ವರ್ಷ, ಜಾ;ಲಂಬಾಣಿ,  ಉ;ಹೊಲಮನಿ ಕೆಲಸ, ಸಾ;ಕ್ಯಾಸಪ್ಪನಳ್ಳಿ ತಾಂಡ ತಾಜಿ;ಯಾದಗಿರಿ ರವರು ಘಟನೆಯ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 11-45 ಎ.ಎಂ. ದಿಂದ 12-45 ಪಿ.ಎಂ.ದ ವರಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಹೊಲಮನಿ ಕೆಲಸ ಮಾಡಿಕೊಂಡು  ನನ್ನ ಕುಟುಂಬದೊಂದಿಗೆ ಉಪಜೀವಿಸುತ್ತೇನೆ.  ಇಂದು ದಿನಾಂಕ 17/07/2020 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನನ್ನ ಗಂಡ ಮತ್ತು ನನ್ನ ಕಿರಿಮಗನಾದ ಶಶಿಧರ ವಯ;22 ವರ್ಷ, ಇಬ್ಬರು ಸೇರಿಕೊಂಡು ಯಾದಗಿರಿಗೆ ಹೋಗಿ ಬರುತ್ತೇವೆಂದು ನಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಡಬ್ಲ್ಯು-4116 ನೇದ್ದನ್ನು ತೆಗೆದುಕೊಂಡು ಹೋಗಿದ್ದು ಮೊಟಾರು ಸೈಕಲನ್ನು ನನ್ನ ಮಗನೇ ಚಾಲನೆ ಮಾಡಿಕೊಂಡು ನನ್ನ ಗಂಡನಿಗೆ ಹಿಂಬದಿ ಸೀಟಿನಲ್ಲಿ ಕೂಡಿಸಿಕೊಂಡು ಹೋಗಿದ್ದು ಇರುತ್ತದೆ.   ಹೀಗಿದ್ದು ಸ್ವಲ್ಪ ಸಮಯದ ನಂತರ ನಾನು ಮತ್ತು ನನ್ನ ಹಿರಿಮಗ ಧರ್ಮರಾಜ ಮನೆಯಲ್ಲಿದ್ದಾಗ ಸಮಯ ಅಂದಾಜು 10-45 ಎ.ಎಂ.ಕ್ಕೆ ನಮಗೆ ನಮ್ಮ ಸಂಬಂಧಿ ರಮೇಶ ತಂದೆ ತಾವರು ಚವ್ಹಾಣ ಸಾ;ಕ್ಯಾಸಪ್ಪನಳ್ಳಿ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಮತ್ತು ನಮ್ಮ ತಾಂಡಾದ ರಮೇಶ ತಂದೆ ರಾಮು ರಾಠೋಡ ಇಬ್ಬರು ಸೇರಿಕೊಂಡು ನಮ್ಮ ಮೋಟಾರು ಸೈಕಲ್ ಮೇಲೆ ಯಾದಗಿರಿಗೆ ಹೋಗುತ್ತಿದ್ದಾಗ ಮಾರ್ಗ ಮದ್ಯೆ ಆರ್ಯಭಟ್ಟ ಶಾಲೆ ಹತ್ತಿರ ನಾವಿಬ್ಬರು ನೋಡು ನೋಡುತ್ತಿದ್ದಂತೆ ನಮ್ಮ ಮುಂದೆ ಯಾದಗಿರಿ ಕಡೆಗೆ ನಿಮ್ಮ ಮೋಟಾರು ಸೈಕಲ್ ಮೇಲೆ ಹೊರಟಿದ್ದ ನಿಮ್ಮ ಮಗ ಶಶಿಧರ ಹಾಗೂ ನಿನ್ನ ಗಂಡನ ಮೋಟಾರು ಸೈಕಲ್ ನೇದ್ದಕ್ಕೆ ಯಾದಗಿರಿ ಕಡೆಯಿಂದ ವಾಡಿ ಕಡೆಗೆ ಬರುತ್ತಿದ್ದ ಒಂದು ಟಾಟಾ ಏಸ್ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನೇರವಾಗಿ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಕೊಟ್ಟಾಗ ಡಿಕ್ಕಿಕೊಟ್ಟ ರಭಸಕ್ಕೆ ಮೊಟಾರು ಸೈಕಲ್ ಮೇಲಿಂದ ನಿನ್ನ ಮಗ ಶಶಿಧರ ಮತ್ತು ನಿನ್ನ ಗಂಡ ಇಬ್ಬರು ಸಿಡಿದು ಬಿದ್ದಾಗ ನಾವಿಬ್ಬರು ಮೋಟಾರು ಸೈಕಲ್ ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಸದರಿ ಅಪಗಾತದಲ್ಲಿ ನಿನ್ನ ಮಗ ಶಶಿಧರ ಈತನಿಗೆ ಹಣೆಗೆ, ತಲೆಗೆ ಭಾರೀ ಗುಪ್ತಗಾಯ ಮತ್ತು ಅಲ್ಲಲ್ಲಿ ರಕ್ತಗಾಯವಾಗಿ ಘಟನಾ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ನಿನ್ನ ಗಂಡನಿಗೆ ನೋಡಲು ಆತನ ಎರಡು ಕೈಗಳಿಗೆ ಒಳಪೆಟ್ಟಾಗಿ ಮುರಿದಿದ್ದು ಇರುತ್ತವೆ ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಈ ಘಟನೆಯು ಇಂದು ದಿನಾಂಕ 17/07/2020 ರಂದು 10-30 ಎ.ಎಂ.ಕ್ಕೆ  ವಾಡಿ-ಯಾದಗಿರಿ ಮುಖ್ಯ ರಸ್ತೆಯ ಆರ್ಯಭಟ್ಟ ಶಾಲೆಯ ಹತ್ತಿರ ಜರುಗಿದ್ದು ನಿಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಡಬ್ಲ್ಯು-4116 ನೇದ್ದು ಹಾಗೂ ಅಪಘಾತ ಪಡಿಸಿದ ವಾಹನದ ಟಾಟಾ ಏಸ್ ನಂಬರ ಕೆಎ-33, ಎ-9815 ನೇದ್ದು ಇರುತ್ತದೆ. ಅಪಘಾತಪಡಿಸಿದ ವಾಹನದ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಿದ್ದು ಆತನ ಹೆಸರು ಸಂತೋಷ ತಂದೆ ರಾಮು ರಾಠೋಡ ಸಾ;ಮುದ್ನಾಳ ಸಣ್ಣ ತಾಂಡ ಅಂತಾ ತಿಳಿಸಿರುತ್ತಾನೆ. ನಾವುಗಳು ಕೂಡಲೇ ಒಂದು ಖಾಸಗಿ ಆಟೋದಲ್ಲಿ ಇವರಿಗೆ ಕರೆದುಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋಗುತ್ತಿದ್ದು ನೀವು ಕೂಡಲೇ ಬರಬೇಕು ಅಂದಾಗ ನಮಗೆ ಗಾಬರಿಯಾಗಿ ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಗಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮತ್ತು ನನ್ನ ಮಗ ಶಶಿಧರ ಈತನಿಗೆ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿದ್ದು ರಸ್ತೆ ಅಪಘಾತದಲ್ಲಿ ಆಗಿದ್ದ ಗಾಯಗಳ ಭಾಧೆಯಿಂದ ಮೃತಪಟ್ಟಿದ್ದು ನಿಜ ಇರುತ್ತದೆ. ನನಗೆ ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇದ್ದು ನಾನು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ನನ್ನ ಮಗನ ಮೃತದೇಹವನ್ನು ಗುತರ್ಿಸಿರುತ್ತೇನೆ.  ಹೀಗಿದ್ದು  ಇಂದು ದಿನಾಂಕ  17/07/2020  ರಂದು ಬೆಳಿಗ್ಗೆ 10-30 ಎ.ಎಂ. ದ ಸುಮಾರಿಗೆ ಯಾದಗಿರಿ-ವಾಡಿ  ಮುಖ್ಯ ರಸ್ತೆ ಮೇಲೆ ಬರುವ ಆರ್ಯಭಟ್ಟ ಶಾಲೆ  ಹತ್ತಿರ ಟಾಟಾ ಏಸ್ ವಾಹನ ನಂ. ಕೆಎ-33, ಎ-9815 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನನ್ನ ಮಗ ಮತ್ತು ಗಂಡನು ಹೋಗುತ್ತಿದ್ದ ಮೋಟಾರು ಸೈಕಲ್ ನಂ.  ಕೆಎ-33, ಡಬ್ಲ್ಯು-4116 ನೇದ್ದಕ್ಕೆ ಡಿಕ್ಕಿಕೊಟ್ಟು ಅಪಘಾತಪಡಿಸಿದ ವಾಹನ ಚಾಲಕನ ಮೇಲೆ ಮುಂದಿನ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 01 ;00 ಪಿ,ಎಂ ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 27/2020 ಕಲಂ 279, 337, 338, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 09/2020 174 ಸಿ.ಆರ್.ಪಿ.ಸಿ : ದಿನಾಂಕ:14/07/2020 ರಂದು ಮದ್ಯಾಹ್ನ ಊಟ ಮಾಡಿದ ನಂತರ ಮಲ್ಲಿಕಾಜರ್ುನ @ ಮಲ್ಲಪ್ಪ ಈತನು ಮನೆಯಿಂದ ಹೊರಗಡೆ ಬಂದು ಮನೆ ಮುಂದೆ ಇರುವ ಬೇವಿನ ಮರದ ಟೊಂಗೆಯನ್ನು ಜಂಪ ಮಾಡಿ ಕಿಳಲು ಹೋಗಿ ಆಕಸ್ಮಿಕವಾಗಿ ಆಯ ತಪ್ಪಿ ಕೆಳಗಡೆ ಬಿದ್ದಾಗ ಎಡ ಮೊಳಕಾಲಿಗೆ ಭಾರಿ ಗಾಯವಾಗಿದ್ದು, ತಾನೇ ತನ್ನ ತಂದೆಗೆ ಫೋನ ಮಾಡಿ ನಾನು ಬಿದ್ದಿರುತ್ತೇನೆ ಎಂದು ಹೇಳಿದಾಗ ಆತನು ಬಂದು ಉಪಚಾರ ಕುರಿತು ಶಹಾಪೂರ ಮತ್ತು ಯಾದಗಿರಿಯ ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿ, ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ರೀಮ್ಸ್ ಬೋಧಕ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರ ಪಡೆಯುತ್ತಾ ಇಂದು ದಿನಾಂಕ: 17/07/2020 ರಂದು 2 ಪಿಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಘಟನೆ ಆಕಸ್ಮಿಕ ಸಂಭವಿಸಿದ್ದು, ಯಾರ ಮೇಲೆ ಯಾವುದೇ ಫಿರ್ಯಾಧಿ ಸಂಶಯ ಇರುವುದಿಲ್ಲ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 09/2020 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 82/2020  32, 34 ಕೆ.ಇ ಆ್ಯಕ್ಟ್  : ಇಂದು ದಿನಾಂಕ: 17/07/2020 ರಂದು 05.30 ಪಿಎಮ್ ಕ್ಕೆ ಶ್ರೀ. ಸೋಮಲಿಂಗ ಒಡೆಯರ ಪಿಎಸ್.ಐ ಗೋಗಿ ಪೊಲೀಸ ಠಾಣೆ. ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ, ಶಹಾಪುರ-ಚಾಮನಾಳ ಮೇನ್ ರೋಡಿನ ರಬ್ಬನಳ್ಳಿ ಸಿಮೆಯಲ್ಲಿ ಶ್ರೀಭಾಗ್ಯವಂತಿ ದಾಬಾದ ಹಿಂದೆ 03.10 ಪಿಎಂ ಕ್ಕೆ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟ ಮಾರುತ್ತಿರುವ ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರೋಂದಿಗೆ  ದಾಳಿ ಮಾಡಿದ್ದು ದಾಳಿಯಲ್ಲಿ ಆರೋಪಿತನು ಪರಾರಿ ಆಗಿ ತಪ್ಪಿಸಿಕೊಂಡು ಮದ್ಯವನ್ನು, ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿ ಮುದ್ದೆಮಾಲನ್ನು ಜಪ್ತಿ ಪಡಿಸಿಕೊಂಡಿದ್ದು, ಜಪ್ತಿಪಡಿಕೊಂಡ ಮುದ್ದೇಮಾಲು, ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಕುರಿತು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 82/2020 ಕಲಂ, 32, 34 ಕೆ.ಇ ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 192/2020 ಕಲಂ 32, 34, 38 ಕೆ.ಇ ಆಕ್ಟ : ಇಂದು ದಿನಾಂಕ 17/07/2020  ರಂದು ಸಾಯಂಕಾಲ 17-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ವೆಂಕಟೇಶ್ ಪೊಲೀಸ್ ಉಪ-ಅಧೀಕ್ಷಕರು ಸುರಪೂರ ಉಪವಿಭಾಗ ಸುರಪೂರ ರವರು ಒಬ್ಬ ವ್ಯಕ್ತಿಯೊಂದಿಗೆ ಠಾಣೇಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ಮುಂಜಾನೆ 17/07/2020 ರಂದು ಮುಂಜಾನೆ  11-45 ಗಂಟೆಗೆ ಫಿರ್ಯಾದಿಯವರು ಮತ್ತು  ಸಿಬ್ಬಂದಿಯವರು ಕೂಡಿ ಸರಕಾರಿ ಜೀಪ್ ನಂ ಕೆಎ-33-ಜಿ-0253 ನೇದ್ದರಲ್ಲಿ ಶಹಾಪೂರ ನಗರದ ವಾಲ್ಮೀಕಿ ಚೌಕ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಶಹಾಪೂರ ನಗರದ ವೈಷ್ಣವಿ ಲಾಡ್ಜನ ಒಂದು ರೂಮನಲ್ಲಿ ಮದ್ಯ ಸಂಗ್ರಹಿಸಿಕೊಂಡು ಅಕ್ರಮವಾಗಿ ಮಾರಾಟ  ಮಾಡುತಿದ್ದ ಬಗ್ಗೆ ಮಾಹಿತಿ ಬಂದಿದ್ದು ಖಚಿತ ಪಡಿಸಿಕೊಂಡು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರದ ಮೂಲಕ ವಿನಂತಿಸಿಕೊಂಡು, ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮದ್ಯಾಹ್ನ 13-10 ಫಿಯರ್ಾದಿಯವರು ತಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ಜೀಪ್ ನಂ ಕೆಎ-33-ಜಿ-0253 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ಮದ್ಯಾಹ್ನ 13-15 ಗಂಟೆಗೆ ನಿಗಾ ಮಾಡುತ್ತಾ ನಿಂತಿದ್ದಾಗ ರೂಮ ವೈಷ್ಣವ ಲಾಡ್ಜನ ರೂಮ ನಂ 106 ನೇದ್ದರಿಂದ ಒಬ್ಬ ವ್ಯಕ್ತಿ ಮದ್ಯದ ಬಾಟಲಗಳನ್ನು ತಂದು ಮಾರಾಟ ಮಾಡುತಿದ್ದನು. ಸದರಿಯವರು ಮದ್ಯ ಮಾರಾಟ ಮಾಡುತಿದ್ದ ಬಗ್ಗೆ ಖಚಿತ  ಪಡಿಸಿಕೊಂಡು ದಾಳಿ ಮಾಡಿದ್ದು, ಸದರಿ ರೂಮಿನಿಂದ ಇಬ್ಬರೂ ವ್ಯಕ್ತಿಗಳು ಓಡಿ ಹೋಗಿದ್ದು ಒಬ್ಬ ವ್ಯಕ್ತಿ ಸಿಕ್ಕಿದ್ದು, ಸದರಿಯವನ  ಹೆಸರು ವಿಳಾಸ ವಿಚಾರಿಸಲು ಉದಯಶೆಟ್ಟಿ ತಂದೆ ಶಂಕಯ್ಯಶೆಟ್ಟಿ ವಯ 39 ವರ್ಷ ಜಾತಿ ಬಂಟರ ಉಃ ಶಹಾಪೂರದ ವೈಷ್ಣವಿ ಲಾಡ್ಜನ ಮ್ಯಾನೇಜರ್ ಸಾಃ ಬ್ರಂಬ್ರ ಬೆಟ್ಟು ಸೇದಿಮನಿ ತಾಃ ಕುಂದಾಪೂರ ಜಿಃ ಉಡುಪಿ ಹಾಲಿವಸತಿ ವೆಷ್ಣವಿ ಲಾಡ್ಜ ಶಹಾಪೂರ ಅಂತ ಹೇಳಿದ್ದು, ಸದರಿಯವನಿಗೆ ರೂಮನಲ್ಲಿ ಮದ್ಯ ಸಂಗ್ರಹಿಸಿಕೊಂಡು ಮಾರಾಟ ಮಾಡಲು ಪರವಾನಿಗೆ ಪತ್ರ ಹಾಜರ ಪಡಿಸಲು ಹೇಳಿದಾಗ ಯಾವುದೇ ದಾಖಲಾತಿ ಹಾಜರ ಪಡಿಸಿರುವುದಿಲ್ಲ. ಸದರಿ ವ್ಯಕ್ತಿ ಮತ್ತು ಓಡಿ ಹೋದ  ಪ್ರಭಾಕರಶೆಟ್ಟಿ ತಂದೆ ರಾಮಯ್ಯ ಶೆಟ್ಟಿ ವಯ 45 ವರ್ಷ ಜಾತಿ ಬಂಟರ ಉಃ ವ್ಯಾಪಾರ ಸಾಃ ಉಪ್ಪುಂದಾ ತಾಃ ಕುಂದಾಪೂರ ಜಿಃ ಉಡುಪಿ ಹಾಲಿವಸತಿ ವೆಷ್ಣವಿ ಲಾಡ್ಜ ಶಹಾಪೂರ.  3) ಮೋಹನಶೆಟ್ಟಿ ತಂದೆ ಸದಾಶಿವಶೆಟ್ಟಿ ವಯ 32 ವರ್ಷ ಜಾತಿ ಬಂಟರ ಉಃ ವ್ಯಾಪಾರ ಸಾಃ ಉಪ್ಪುಂದಾ ತಾಃ ಕುಂದಾಪೂರ ಜಿಃ ಉಡುಪಿ ಹಾಲಿವಸತಿ ವೆಷ್ಣವಿ ಲಾಡ್ಜ ಶಹಾಪೂರ. ಎಲ್ಲರೂ ಕೂಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ಬಗ್ಗೆ ದೃಡಪಟ್ಟಿದ್ದರಿಂದ ಪಂಚರ ಸಮಕ್ಷಮದಲ್ಲಿ 176469=00 ಮೌಲ್ಯದ ಮದ್ಯವನ್ನು ಮದ್ಯಾಹ್ನ 13-30 ಗಂಟೆಯಿಂದ ಸಾಯಂಕಾಲ 16=00 ಗಂಟೆಯ ಅವಧಿಯಲ್ಲಿ ಜಪ್ತಿ ಪಡಿಸಿಕೊಂಡಿರುತ್ತದೆ. ಜಪ್ತಿಪಡಿಸಿಕೊಂಡ ಮುದ್ದೆಮಾಲಿನ  ಪೈಕಿ  ಮ್ಯಾಕಡವಲ್ ಮದ್ಯದಲ್ಲಿ 750 ಎಮ್.ಎಲ್.ನ 4 ಬಾಟಲ್ಗಳು  ಮತ್ತು ಉಳಿದ ಮದ್ಯದಿಂದ ಎಲ್ಲಾ ಒಂದೊಂದು ಮಾದರಿಯ ಬಾಟಲ್ ಮತ್ತು ಪಾಕೇಟಗಳನ್ನು ಪರೀಕ್ಷೆ ಕುರಿತು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದು ಪ್ರತ್ಯಕವಾಗಿ ಬಿಳೆ ಅರಿವೆಯ ಚೀಲದಲ್ಲಿ ಹಾಕಿ ಹೊಲೆದು ಅದರ ಮೇಲೆ ಶಹಾಪೂರ ಠಾಣೆಯ ಇಂಗ್ಲೀಷ ಅಕ್ಷರದ ಖಊಕ  ಮಾದರಿ ಶಿಲ್ ಹಾಕಿ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ವಶಕ್ಕೆ ಪಡೆದುಕೊಂಡು  ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 192/2020 ಕಲಂ 32, 34, 38(ಎ) ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 20/2020 ಕಲಂ: 174 ಸಿ.ಆರ್.ಪಿ.ಸಿ : ಇಂದು ದಿನಾಂಕ 17.07.2020 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಮೃತನು ತನ್ನ ಹೆಂಡತಿ ಫಿರ್ಯಾದಿದಾರಳಿಗೆ ಕಾಲು ಮಡಿದು ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೊರಗೆ ಹೋಗಿದ್ದು, ದಾರಿಯಲ್ಲಿದ್ದ  ಮನೆಯ ಹತ್ತಿರದ ಲೈಟಿನ ಕಂಬಕ್ಕೆ ಮುಟ್ಟಿದಾಗ ಆ ಕಂಬದಲ್ಲಿ ಆಕಸ್ಮಿಕವಾಗಿ ವಿದ್ಯೂತ್ ಪ್ರವಾಹವಾಗಿ ಅಪಘಡ ಸಂಭವಿಸಿದ್ದರಿಂದ ಬಲಗೈ ಹೆಬ್ಬೆರಳಿನ ಮೇಲೆ ಮತ್ತು ಎಡಗೈ ಉಂಗುರಬೇರಳಿನ ಒಳಭಾಗದಲ್ಲಿ ಮೇಲೆ ಚರ್ಮ ಸುಟ್ಟ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಅದನ್ನು ನೋಡಿದ ಮೃತನ ಹೆಂಡತಿ ಹಾಗೂ ಇತರರು ಕೂಡಿಕೊಂಡು ಗುರುಮಠಕಲ್ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಶವವನ್ನಿಟ್ಟಿ ನಂತರ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್. ನಂಬರ 20/2020 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!