ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/07/2020

By blogger on ಬುಧವಾರ, ಜುಲೈ 15, 2020




                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/07/2020 
                                                                                                              
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 95/2020 ಕಲಂ 363, 114 ಸಂ 34 ಐಪಿಸಿ : ಇಂದು ದಿನಾಂಕ 15/07/2020 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾಧಿದಾರನಾದ ಶೀ ಮೋಹನ ತಂದೆ ಜೈರಾಮ ರಾಠೋಡ ಸಾಃ ಅಶೋಕ ನಗರ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಕಾಂಟ್ರ್ಯಾಕ್ಟರ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನನಗೆ ಇಬ್ಬರೂ ಹೆಣ್ಣು ಮಕ್ಕಳು ಮತ್ತು ಒಬ್ಬನು ಗಂಡು ಮಗ ಒಟ್ಟು ಮೂರು ಜನ ಮಕ್ಕಳು ಇರುತ್ತಾರೆ, ನನ್ನ ಮೊದಲನೇ ಮಗಳಾದ ಅಂಜು ರಾಠೋಡ ಇವಳು ಯಾದಗಿರಿಯಲ್ಲಿರುವ ಹುಲಗೆಪ್ಪ ಪ್ರಾಥಮಿಕ ಶಾಲೆಯಲ್ಲಿ 6 ನೇ ಕ್ಲಾಸ್ ತರಗತಿಯಲ್ಲಿ ಓದುತ್ತಾಳೆ, ಕೋಚಿಂಗ ಸಲುವಾಗಿ ಕಲಬುಗರ್ಿಯಲ್ಲಿಯಿರುವ ನಯಾ-ದಯಾ ಕೋಚಿಂಗ್ ಸೆಂಟರದಲ್ಲಿ ಕೋಚಿಂಗ್ ಕ್ಲಾಸಿಗೆ ಹೋಗುತ್ತಿದ್ದಳು, ಅವಳಿಗೆ 13 ವರ್ಷ ವಯಸ್ಸು ಆಗಿರುತ್ತದೆ, ಈಗ ಕೋರೋನಾದಿಂದ ಲಾಕ್ ಡೌನ್ ಆದ ಪ್ರಯುಕ್ತ ನಮ್ಮ ತಾಂಡಾಕ್ಕೆ ಬಂದಿದ್ದಳು, 
     ಹೀಗಿರುವಾಗ ನಿನ್ನೆ ದಿನಾಂಕ 14/07/2020 ರಂದು ಸಾಯಂಕಾಲದ ಸುಮಾರಿಗೆ ನಾನು, ನನ್ನ ಹೆಂಡತಿ ಸೋನಿಬಾಯಿ ಗಂಡ ಮೋಹನ ರಾಠೋಡ, ನನ್ನ ತಂದೆ ಜೈರಾಮ ತಂದೆ ಸುಭಾಸ ರಾಠೋಡ, ನನ್ನ ತಾಯಿ ಸಕ್ರಿಬಾಯಿ ಗಂಡ ಜೈರಾಮ ರಾಠೋಡ ಎಲ್ಲರೂ ನಮ್ಮ ಮನೆಯಲ್ಲಿರುವಾಗ ನನ್ನ ಮಗಳು ಅಂಜು ರಾಠೋಡ ಮತ್ತು ನನ್ನ ಮಗ ಭೋಜು ರಾಠೋಡ ಇಬ್ಬರೂ ಕೂಡಿಕೊಂಡು ಮುಂಡರಗಿ ಗ್ರಾಮದ ಗೇಟ ಹತ್ತಿರ ಇರುವ ಬಳಿ ಅಂಗಡಿಗೆ ಹೋಗಿ ಬಳೆಗಳನ್ನು ಹಾಕಿಕೊಂಡು ಬರುತ್ತೆವೆ ಅಂತಾ ಹೇಳಿ ಹೋದರು, ಸ್ವಲ್ಪ ಸಮಯದ ನಂತರ ನನ್ನ ಮಗ ಭೋಜು ರಾಠೋಡ ಇತನು ಅಳುತ್ತಾ ಮನೆಗೆ ಬಂದು ತಿಳಿಸಿದ್ದೆನೆಂದರೆ ನಾನು ಮತ್ತು ಅಕ್ಕ ಇಬ್ಬರೂ ಮುಂಡರಗಿ ಗ್ರಾಮಕ್ಕೆ ಹೋಗಿ ಅಲ್ಲಿ ಬಳೆ ಅಂಗಡಿ ಹತ್ತಿರ ನಿಂತಾಗ ನಮ್ಮ ತಾಂಡಾದ ರಾಜು ತಂದೆ ಶಂಕರ ಪವ್ಹಾರ ಇತನು ಮೋಟಾರ ಸೈಕಲ್ ಮೇಲೆ ನಮ್ಮ ಹತ್ತಿರ ಬಂದು ನನ್ನ ಅಕ್ಕಳಾದ ಅಂಜು ರಾಠೋಡ ಇವಳಿಗೆ ನೀನು ನನ್ನ ಜೋತೆಗೆ ಬಾ ನಾನು ಮತ್ತು ನೀನು ಬೇರೆ ಕಡೆಗೆ ಹೋಗಿ ಮದುವೆಯಾಗೋಣ ಅಂತಾ ಅವಳಿಗೆ ಅಂದು ಅವಳ ಕೈಹಿಡಿದು ಎಳೆದಾಡುತ್ತಿದ್ದನು, ಆಗ ನನ್ನ ಅಕ್ಕ ಅಂಜು ಇವಳು ನಾನು ನಿನ್ನ ಜೋತೆಗೆ ಬರುವದಿಲ್ಲ, ನನ್ನ ಕೈ ಬಿಡು ನಾನು ನಮ್ಮ ಮನೆಗೆ ಹೋಗುತ್ತೆನೆ ಅಂತಾ ಅವನಿಗೆ ಅಂದಳು, ಆಗ ರಾಜು ತಂದೆ ಶಂಕರ ರಾಠೋಡ ಇತನು ನನ್ನ ಅಕ್ಕ ಅಂಜು ಇವಳನ್ನು ಬಲಾತ್ಕಾರದಿಂದ ಅವಳ ಕೈ ಹಿಡಿದು ಎಳೆದುಕೊಂಡು ಅವನ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಯಾದಗಿರಿ ಕಡೆಗೆ ಹೋಗಿರುತ್ತಾನೆ, ಅವನ ಮೋಟಾರ ಸೈಕಲ್ ನಂಬರ ಗೋತ್ತಿರುವದಿಲ್ಲ, ಆಗ ಸಮಯ ಸಾಯಂಕಾಲ 5-30 ಗಂಟೆಗೆ ಆಗಿತ್ತು ಅಂತಾ ಹೇಳಿದನು, ಆಗ ನಾನು ಮತ್ತು ನನ್ನ ಮಾವಂದಿರಾದ ಹುನ್ಯಾ ತಂದೆ ಟೋಪ್ಯಾ ರಾಠೋಡ, ಜೈರಾಮ ತಂದೆ ಟೋಪ್ಯಾ ರಾಠೋಡ ಮೂವರೂ ಕೂಡಿಕೊಂಡು ಮುಂಡರಗಿ, ಯಾದಗಿರಿ ನಗರದಲ್ಲಿ, ಮುದ್ನಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದೆವು ಮತ್ತು ನಮ್ಮ ಬೀಗರ, ನೆಂಟರಲ್ಲಿ ಪೋನ ಮಾಡಿ ವಿಚಾರಿಸಿದೆವು ಆದರು ಕೂಡಾ ನನ್ನ ಮಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ, ನನ್ನ ಮಗಳನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗುವದಕ್ಕೆ ರಾಜು ರಾಠೋಡ ಇತನಿಗೆ ನಮ್ಮ ತಾಂಡಾದ ದೇನು ತಂದೆ ನೂರ್ಯಾ ರಾಠೋಡ, ಚಂದರ ತಂದೆ ರಾಮಜ್ಯಾ ರಾಠೋಡ ಮತ್ತು ಮಹೇಶ ತಂದೆ ಭೋಜ್ಯಾ ಜಾಧವ ಇವರೆಲ್ಲರೂ ಕೂಡಿ ಅವನಿಗೆ ಪ್ರಚೋದನೆ ನೀಡಿರುತ್ತಾರೆ, ನನ್ನ ಮಗಳನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಕೂಡಾ ಸಿಗದ ಕಾರಣ ತಡವಾಗಿ ಇಂದು ದಿನಾಂಕ 15/07/2020 ರಂದು ಬೆಳಿಗ್ಗೆ 11-30 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದು, ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 95/2020 ಕಲಂ 363, 114 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.19/2020 ಕಲಂ: 174 ಸಿ.ಆರ್.ಪಿ.ಸಿ : ನಿನ್ನೆ ದಿನಾಂಕ 14.07.2020 ರಂದು ರಾತ್ರಿ ಮನೆಯಲ್ಲಿ ಊಟ ಮಾಡಿದ ನಂತರ ಫಿರ್ಯಾದಿ ಮತ್ತು ಮೃತ ಇಬ್ಬರು ತಮ್ಮ ಗುಟ್ಟ ಹೊಲದಲ್ಲಿ ಕಾಡು ಪ್ರಾಣಿಗಳಿಂದ ಎಸರು ಬೆಳೆಯನ್ನು ಕಾಯಲು ಹೋಗಿ ಅಲ್ಲಿ ರಾತ್ರಿ ಮಲಗಿದ್ದಾಗ ಇಂದು ದಿನಾಂಕ 15.07.2020 ರಂದು ಬೆಳಿಗ್ಗೆ 5:30 ಗಂಟೆಗೆ ಮೃತನ ಎಡ ಕಿವಿಯ ಮೇಲ್ಬಾಗದಲ್ಲಿ ಆಕಸ್ಮಿಕವಾಗಿ ಹಾವು ಕಚ್ಚಿದ್ದು ಫಿರ್ಯಾದಿಯು ಹಾವನ್ನ ಹೊಡೆದು ತನ್ನ ಮಗ ಗೋವಿಂದನ್ನು ಚಿಕಿತ್ಸೆ ಕುರಿತು ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದು ಆ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್. ನಂಬರ 19/2020 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.

ಕೊಡೇಕಲ್  ಪೊಲೀಸ ಠಾಣೆ ಗುನ್ನೆ ನಂ:- 07/2020 ಕಲಂ: 107 ಸಿಆರ್ಪಿಸಿ : :-ನಾನು ಬಾಷುಮಿಯಾ ಪಿಎಸ್ಐಕೊಡೆಕಲ್ಲ ಪೊಲೀಸ್ ಠಾಣೆ ಸರಕಾರದ ಪರವಾಗಿ ಕೊಡುವ ಪಿಯರ್ಾದಿ ಏನೆಂದರೆ, ನಾನು ಇಂದು ದಿ:15.07.2020 ರಂದು ಕಕ್ಕೇರಾ ಉಪ ಠಾಣೆಗೆ ಬೇಟಿ ನೀಡಿ ನಂತರ ಉಪ ಠಾಣೆಯ ಸಿಬ್ಬಂದಿಯವರಾದ ಪ್ರಭುಗೌಡ ಹೆಚ್ಸಿ-120, ಸಿದ್ರಾಮಪ್ಪ ಪಿಸಿ-210, ಬಸೆಟ್ಟೆಪ್ಪ ಪಿಸಿ-110 ರವರೊಂದಿಗೆ ಮಂಜಲಾಪೂರ ಕಕ್ಕೇರಾಕ್ಕೆ 2:00 ಪಿಎಮ್ ಸುಮಾರಿಗೆ ಬೇಟಿ ನೀಡಿದಾಗ ಮಂಜಲಾಪೂರ  ಗ್ರಾಮದ ಭಾತ್ಮಿದಾರರಿಂದ ಮಾಹಿತಿ ತಿಳಿದುಬಂದಿದ್ದೇನೆಂದರೆ, ಮಂಜಲಾಪೂರ ಗ್ರಾಮದಲ್ಲಿ ದೇವಪ್ಪ ತಾಯಿ ಪರಮವ್ವ ಹೊಸಮನಿ ವ:48 ವರ್ಷ ಜಾ: ಮಾದಿಗ ಉ: ಕೂಲಿಕೆಲಸ ಸಾ:ಮಂಜಲಾಪೂರ ಕಕ್ಕೇರಾ ತಾ: ಸುರಪೂರ ತಮ್ಮ ಓಣಿಗೆ  ತಮ್ಮ ಕೇರಿಯ ಪಕ್ಕದ ನೀರಿನ ಟಾಕಿಯಿಂದ ಈ ಮೊದಲು ಗ್ರಾಮ ಪಂಚಾಯತಿ ವತಿಯಿಂದ ತಮ್ಮ ಓಣಿಗೆ ನೀರಿನ ಸರಭರಾಜು ಮಾಡಿದ್ದು. ಅದೇ ಗ್ರಾಮದ ಪ್ರತಿವಾಧಿಗಳು ಪರಶುರಾಮ ತಂದೆ ಭೀಮಣ್ಣ ಮಾದರ ಇತರರು ನೀರು ತೆಗೆದುಕೊಳ್ಳಲು ತಕರಾರು ಮಾಡುತ್ತಿದ್ದರಿಂದ. ವಾದಿಯು ಪುರಸಭೆ ಕಕ್ಕೇರಾ ರವರಿಗೆ ನಮ್ಮ ಕೇರಿಗೆ ನೀರಿನ ಟಾಕಿಯಿಂದ ನೀರು ಸರಬುರಾಜು ಮಾಡುವಂತೆ ವಿನಂತಿಸಿಕೊಂಡಿದ್ದು. ಅದರಂತೆ ಪುರಸಭೆಯವರು ನೀರಿನ ಟಾಕಿಯಿಂದ ನಮ್ಮ ಕೇರಿಗೆ ನೀರು ಸರಬುರಾಜು ಮಾಡಲು ದಿನಾಂಕ:26.06.2020  ಕೆಲಸ ಪ್ರಾರಂಭಿಸಿದ್ದು ಇದಕ್ಕೆ ಪರಶುರಾಮ ತಂದೆ ಬೀಮಣ್ಣ ಮಾದರ ಹಾಗೂ ಅವರ ಮನೆಯವರು ತಕರಾರು ಮಾಡಿ ಕೆಲಸ  ಬಂದ್ ಮಾಡಿಸಿದ್ದು. ಆಗ ವಾದಿಯು ಅವರಿಗೆ ಈಗಾಗಲೇ ಇರುವ ಸೌಲಬ್ಯದಿಂದ ನಮಗೆ ನೀರು ಬಿಡುತ್ತಿಲ್ಲಾ. ಅಲ್ಲದೇ ನಾವು ಪುರಸಭೆ ರವರಿಂದ ಮಾಡಿಸಿಕೊಳ್ಳುವ ಕೆಲಸವನ್ನು ಬಂದ್ ಮಾಡಿಸಿದ್ದು. ಈಗೆ ಮಾಡಿದರೆ ಹೇಗೆ ಅಂತ ಕೇಳಿದ್ದಕ್ಕೆ ವಾದಿಗಳ ಮೇಲೆ ಪ್ರತಿವಾದಿ ಪರಶುರಾಮ ಮತ್ತು ಅವರ ಮನೆಯವರು ದಿನಾಂಕ 26.06.2020 ರಂದು 5:15 ಪಿಎಮಕ್ಕೆ  ಅವಾಚ್ಯ ಶಬ್ದಗಳಿಂದ ಬೈದು  ಹೊಡೆ-ಬಡೆ ಮಾಡಿ ಗಾಯ ಪಡಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಠಾಣೆಯಲ್ಲಿ ಗುನ್ನೆ ನಂ:51/2020 143, 147, 148, 341, 323,  324, 504, 506, ಖ/ಘ 149 ಕಅ   ಪ್ರಕರಣ ದಾಖಲಿಸಿದ್ದು. ಇದರಿಂದ ಪ್ರತಿವಾದಿಗಳಾದ 1) ಪರಶುರಾಮ ತಂದೆ ಭೀಮಣ್ಣ @ ಭೀಮಪ್ಪ ಮಾದರ ವ;37 ವರ್ಷ ಜಾ: ಮಾದರ ಉ: ಕೂಲಿಕೆಲಸ ಸಾ: ಮಂಜಲಾಪೂರ ಕಕ್ಕೇರಾ ತಾ: ಸುರಪೂರ  2) ನಿಂಗಪ್ಪ ತಂದೆ ಪರಮಣ್ಣ ಮಾದರ ವ:48 ವರ್ಷ ಜಾ: ಮಾದರ ಉ: ಕೂಲಿಕೆಲಸ ಸಾ: ಮಂಜಲಾಪೂರ ಕಕ್ಕೇರಾ ತಾ: ಸುರಪೂರ 3) ನಿಂಗಪ್ಪ @ ಲಿಂಗರಾಜ ತಂದೆ ಶಾಂತಪ್ಪ ಮಾದರ ವ;27 ವರ್ಷ ಜಾ: ಮಾದರ ಉ: ಕೂಲಿಕೆಲಸ ಸಾ: ಮಂಜಲಾಪೂರ ಕಕ್ಕೇರಾ ತಾ: ಸುರಪೂರ 4) ಹುಲಗಪ್ಪ ತಂದೆ ಪರಮಣ್ಣ ಮಾದರ ವ:56 ವರ್ಷ ಜಾ: ಮಾದರ ಉ: ಕೂಲಿಕೆಲಸ ಸಾ: ಮಂಜಲಾಪೂರ ಕಕ್ಕೇರಾ ತಾ: ಸುರಪುರ 5) ಬಸಪ್ಪ @ ಬಸವರಾಜ ತಂದೆ ಶಾಂತಪ್ಪ ಮಾದರ ವ:29 ವರ್ಷ ಜಾ: ಮಾದರ ಉ: ಗೌಂಡಿ ಕೆಲಸ ಸಾ: ಮಂಜಲಾಪೂರ ಕಕ್ಕೇರಾ ತಾ: ಸುರಪೂರ 6) ಸೋಮಣ್ಣ @ ಸೋಮನಾಥ ತಂದೆ ಭೀಮಣ್ಣ ಮಾದರ ವ:27 ವರ್ಷ ಜಾ: ಮಾದರ ಉ: ಗೌಂಡಿಕೆಲಸ ಸಾ: ಮಂಜಲಾಪೂರ ಕಕ್ಕೇರಾ ತಾ: ಸುರಪೂರ 7) ಬೂಮಣ್ಣ ತಂದೆ ರಾಮಣ್ಣ ಮಾದರ ವ:30 ವರ್ಷ ಜಾ: ಮಾದರ ಉ:ಕೂಲಿಕೆಲಸ ಸಾ: ಮಂಜಲಾಪೂರ ಕಕ್ಕೇರಾ ತಾ: ಸುರಪುರ  ಇವರುಗಳು  ಮಧ್ಯ ಅವರವರಲ್ಲಿ ಭಾರಿ ವೈಮನಸ್ಸು ಉಂಟಾಗಿದ್ದು. ಸದರಿ ಎರಡೂ ಪಾಟರ್ಿಯವರು ಈ ವಿಷಯದಲ್ಲಿ ಯಾವ ವೇಳೆಯಲ್ಲಿ ತಮ್ಮ ತಮ್ಮಲ್ಲಿ  ಹೊಡೆಬಡೆ ಮಾಡಿಕೊಂಡು ತಮ್ಮ ಪ್ರಾಣ ಹಾನಿ ಮಾಡಿಕೊಳ್ಳುವದಾಗಲಿ ಅಥವಾ ಗ್ರಾಮದಲ್ಲಿ ಯಾವುದೇ ಸಮಯದಲ್ಲಿ ಸಾರ್ವಜನಿಕ ಶಾಂತತಾ ಭಂಗ ಹಾಗು ವಿಷಮ ವಾತಾವರಣ ಉಂಟು ಮಾಡುವ ಸಂಭವ ಇದ್ದ ಬಗ್ಗೆ ತಿಳಿದುಬಂದಿದ್ದರಿಂದ ಮತ್ತು ಸಾರ್ವಜನಿಕ ಆಸ್ತಿಗಾಗಲಿ ಪ್ರಾಣಕ್ಕಾಗಿ ಹಾನಿಯನ್ನುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿ ಪ್ರತಿವಾದಿಗಳಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧಗಳನ್ನು ತಡೆಗಟ್ಟುವ ದೃಷ್ಠಿಯಿಂದ ಪ್ರತಿವಾದಿ ಜನರ ಮೇಲೆ ಮುಂಜಾಗೃತ ಕ್ರಮ ಜರುಗಿಸುವದು ಅವಶ್ಯಕತೆ ಕಂಡುಬಂದಿದ್ದರಿಂದ 5:00 ಪಿಎಮ್ ಕ್ಕೆ ಠಾಣೆಗೆ ಬಂದು ಸರಕಾರದ ಪರವಾಗಿ ಫಿಯರ್ಾದಿಯಾಗಿ 
       ಸದರಿ ಪ್ರತಿವಾದಿಗಳಿಂದ ಶಾಂತರೀತಿಯಿಂದ ಇರುವಂತೆ ಅವರ ಕಡೆಯಿಂದ ಕಲಂ:116 (2) ಸಿಆರ್ಪಿಸಿ ಪ್ರಕಾರ ಇಂಟೇರಿಯಂ ಬಾಂಡ್ ಪಡೆದುಕೊಳ್ಳಲು ಮಾನ್ಯರವರಲ್ಲಿ ವಿನಂತಿ.

ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 08/2020 ಕಲಂ: 107 ಸಿಆರ್ಪಿಸಿ : ನಾನು ಬಾಷುಮಿಯಾ ಪಿಎಸ್ಐಕೊಡೆಕಲ್ಲ ಪೊಲೀಸ್ ಠಾಣೆ ಸರಕಾರದ ಪರವಾಗಿ ಕೊಡುವ ಪಿಯರ್ಾದಿ ಏನೆಂದರೆ, ನಾನು ಇಂದು ದಿ:15.07.2020 ರಂದು ಕಕ್ಕೇರಾ ಉಪ ಠಾಣೆಗೆ ಬೇಟಿ ನೀಡಿ ನಂತರ ಉಪ ಠಾಣೆಯ ಸಿಬ್ಬಂದಿಯವರಾದ ಪ್ರಭುಗೌಡ ಹೆಚ್ಸಿ-120, ಸಿದ್ರಾಮಪ್ಪ ಪಿಸಿ-210, ಬಸೆಟ್ಟೆಪ್ಪ ಪಿಸಿ-110 ರವರೊಂದಿಗೆ ಮಂಜಲಾಪೂರ ಕಕ್ಕೇರಾಕ್ಕೆ 2:30 ಪಿಎಮ್ ಸುಮಾರಿಗೆ ಬೇಟಿ ನೀಡಿದಾಗ ಮಂಜಲಾಪೂರ  ಗ್ರಾಮದ ಭಾತ್ಮಿದಾರರಿಂದ ಮಾಹಿತಿ ತಿಳಿದುಬಂದಿದ್ದೇನೆಂದರೆ, ಮಂಜಲಾಪೂರ ಗ್ರಾಮದಲ್ಲಿ ಪರಶುರಾಮ ತಂದೆ ಭೀಮಣ್ಣ @ ಭೀಮಪ್ಪ ಮಾದರ ವ;37 ವರ್ಷ ಜಾ: ಮಾದರ ಉ: ಕೂಲಿಕೆಲಸ ಸಾ: ಮಂಜಲಾಪೂರ ಕಕ್ಕೇರಾ ತಾ: ಸುರಪೂರ  ನಮ್ಮ ಹರಿಜನಕೇರಿ ಪಕ್ಕದ ನೀರಿನ ಟಾಕಿಯಿಂದ ಈ ಮೊದಲು ಗ್ರಾಮ ಪಂಚಾಯತಿ ವತಿಯಿಂದ ನಮ್ಮ ಓಣಿಗೆ ನಾವು ನೀರಿನ ಸರಭರಾಜು ಮಾಡಿಸಿದ್ದು.. ಪ್ರತಿವಾದಿ ದೇವಪ್ಪ ತಾಯಿ ಪರಮವ್ವ ಮಾದರ ಹಾಗೂ ಅವರ ಮನೆಯವರು ಮತ್ತು ಕೆಲವು ಜನರು ಮೊದಲು ತಮ್ಮ ಮನೆಗಳಿಗೆ ನೀರು ತೆಗೆದುಕೊಳ್ಳುತ್ತಿದ್ದು. ಈಗ ಕೆಲವು ದಿನಗಳಿಂದ ನೀರು ತೆಗೆದುಕೊಳ್ಳಲಾರದೆ ಪೈಪುಗಳನ್ನು ಮನೆಯ ಮುಂದೆ ರಾಡಿಯಾಗುತ್ತದೆ ಅಂತ ಕಿತ್ತು ಹಾಕಿದ್ದು. ವಾದಿಯು ಅವರು ಕಿತ್ತು ಹಾಕಿದ ಪೈಪುಗಳನ್ನು ಪುನಃ ರಿಪೇರಿ ಮಾಡಿಕೊಂಡು ತಮ್ಮ ಮನೆಗಳಿಗೆ ನೀರು ತೆಗೆದುಕೊಳ್ಳುತ್ತಿದ್ದು. ನಿನ್ನೆಯ ದಿನ ಪುರಸಭೆಯವರು ಅದೇ ಟಾಕಿಯಿಂದ  ಪ್ರತಿವಾದಿಗಳ ಕೇರಿಗೆ ಪೈಪ್ ಹಾಕಲು ಬಂದಿದ್ದು. ವಾದಿಯು ಅವರಿಗೆ 2 ಇಂಚಿನ ಪೈಪ್ ಹಾಕಿ ಕೇರಿ ತುಂಬ 3-4 ನಲ್ಲಿಗಳನ್ನು ಬಿಡುವಂತೆ ತಿಳಸಿದ್ದು. ಅದಕ್ಕೆ ವಾದಿಯು ಪುರಸಭೆಯಿಂದ ನಾನು ಹೇಳಿ ನೀರಿನ ಸರಬುರಾಜು ಮಾಡಿಸುತ್ತಿದ್ದು. ಸೂಳೆ ಮಕ್ಕಳೆ ನನ್ನ ಮನಸ್ಸಿಗೆ ಬಂದ ಹಾಗೆ ಮಾಡಿಸುತ್ತೇನೆ ನನಗೆ ಬೇಕಾದಲ್ಲಿ ನಲ್ಲಿ ಬಿಡಿಸಿಕೊಳ್ಳುತ್ತೇನೆ ಕೇಳಲಿಕ್ಕೆ ನೀವ್ಯಾರ ಎಲೇ ಸೂಳೆ ಮಕ್ಕಳೆ ಅಂತ ಏನು ಎದರುವಾದಿಸದೇ  ವಾದಿಗಳ ಮೇಲೆ ಪ್ರತಿವಾದಿ ದೇವಪ್ಪ ತಾಯಿ ಪರಮವ್ವ ಹೊಸಮನಿ  ಮತ್ತು ಅವರ ಮನೆಯವರು ದಿನಾಂಕ 26.06.2020 ರಂದು 4:30 ಪಿಎಮಕ್ಕೆ  ಅವಾಚ್ಯ ಶಬ್ದಗಳಿಂದ ಬೈದು   ಚಪ್ಪಲಿಯಿಂದ ಹೊಡೆ-ಬಡೆ ಮಾಡಿ ಗಾಯ ಪಡಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಠಾಣೆಯಲ್ಲಿ ಗುನ್ನೆ ನಂ:52/2020 143, 147, 148, 341, 323,  324, 355, 504, 506, ಖ/ಘ 149 ಕಅ   ಪ್ರಕರಣ ದಾಖಲಿಸಿದ್ದು. ಇದರಿಂದ ಪ್ರತಿವಾದಿಗಳಾದ 1) ದೇವಪ್ಪ ತಾಯಿ ಪರಮವ್ವ ಹೊಸಮನಿ ವ:40 ವರ್ಷ ಜಾ: ಮಾದರ ಉ: ಕೂಲಿಕೆಲಸ 2) ನಂದಪ್ಪ ತಾಯಿ ಪರಮವ್ವ ಹೊಸಮನಿ ವ:42 ವರ್ಷ ಉ: ಕೂಲಿಕೆಲಸ ಜಾ: ಮಾದರ 3) ಹಣಮಂತ @ ಹಣಮಪ್ಪ ತಂದೆ ಭೀಮಣ್ಣ @ ಭೀಮಪ್ಪ ಹೈಯಾಳದವರ್ ವ:52 ವರ್ಷ ಜಾ: ಮಾದರ ಉ: ಕೂಲಿಕೆಲಸ  4) ಹೈಯಾಳಪ್ಪ ತಂದೆ ಹಣಮಂತ ಹೈಯಾಳದವರ್ ವ:22 ವರ್ಷ ಜಾ:ಮಾದರ ಉ: ಕೂಲಿಕೆಲಸ 5) ನಿಂಗರಾಜ ತಂದೇ ಶಂಬಪ್ಪ ಹೈಯಾಳ:ದವರ್ ವ:28 ವರ್ಷ ಜಾ: ಮಾದರ ಉ: ಕೂಲಿಕೆಲಸ 6) ಪರಶುರಾಮ ತಂದೆ ಸಂಗಪ್ಪ ಹೊಸಮನಿ ವ;30 ವರ್ಷ ಜಾ: ಮಾದರ ಉ: ಕೂಲಿಕೆಲಸ  ಸಾ: ಎಲ್ಲರೂ ಮಂಜಲಾಪುರ ಕಕ್ಕೇರಾ ತಾ: ಸುರಪುರ ಇವರುಗಳು  ಮಧ್ಯ ಅವರವರಲ್ಲಿ ಭಾರಿ ವೈಮನಸ್ಸು ಉಂಟಾಗಿದ್ದು. ಸದರಿ ಎರಡೂ ಪಾಟರ್ಿಯವರು ಈ ವಿಷಯದಲ್ಲಿ ಯಾವ ವೇಳೆಯಲ್ಲಿ ತಮ್ಮ ತಮ್ಮಲ್ಲಿ  ಹೊಡೆಬಡೆ ಮಾಡಿಕೊಂಡು ತಮ್ಮ ಪ್ರಾಣ ಹಾನಿ ಮಾಡಿಕೊಳ್ಳುವದಾಗಲಿ ಅಥವಾ ಗ್ರಾಮದಲ್ಲಿ ಯಾವುದೇ ಸಮಯದಲ್ಲಿ ಸಾರ್ವಜನಿಕ ಶಾಂತತಾ ಭಂಗ ಹಾಗು ವಿಷಮ ವಾತಾವರಣ ಉಂಟು ಮಾಡುವ ಸಂಭವ ಇದ್ದ ಬಗ್ಗೆ ತಿಳಿದುಬಂದಿದ್ದರಿಂದ ಮತ್ತು ಸಾರ್ವಜನಿಕ ಆಸ್ತಿಗಾಗಲಿ ಪ್ರಾಣಕ್ಕಾಗಿ ಹಾನಿಯನ್ನುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿ ಪ್ರತಿವಾದಿಗಳಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧಗಳನ್ನು ತಡೆಗಟ್ಟುವ ದೃಷ್ಠಿಯಿಂದ ಪ್ರತಿವಾದಿ ಜನರ ಮೇಲೆ ಮುಂಜಾಗೃತ ಕ್ರಮ ಜರುಗಿಸುವದು ಅವಶ್ಯಕತೆ ಕಂಡುಬಂದಿದ್ದರಿಂದ 6:30 ಪಿಎಮ್ ಕ್ಕೆ ಠಾಣೆಗೆ ಬಂದು ಸರಕಾರದ ಪರವಾಗಿ ಫಿಯರ್ಾದಿಯಾಗಿ ಠಾಣಾ ಪಿ.ಎ.ಆರ್ ನಂ:08/2020 ಕಲಂ:107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡಿದ್ದು ಇರುತ್ತದೆ
       ಸದರಿ ಪ್ರತಿವಾದಿಗಳಿಂದ ಶಾಂತರೀತಿಯಿಂದ ಇರುವಂತೆ ಅವರ ಕಡೆಯಿಂದ ಕಲಂ:116 (2) ಸಿಆರ್ಪಿಸಿ ಪ್ರಕಾರ ಇಂಟೇರಿಯಂ ಬಾಂಡ್ ಪಡೆದುಕೊಳ್ಳಲು ಮಾನ್ಯರವರಲ್ಲಿ ವಿನಂತಿ.

ಕೆಂಭಾವಿ  ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 14/2020 ಕಲಂ: 107 ಸಿಆರ್ಪಿಸಿ : ಮಾನ್ಯರವರಲ್ಲಿ ನಾನು ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ ಠಾಣೆ ಇದ್ದು ತಮ್ಮಲ್ಲಿ ವರದಿಯನ್ನು ಸಲ್ಲಿಸುವುದೆನೆಂದರೆ ಇಂದು ದಿನಾಂಕ 15.07.2020 ರಂದು 12 ಪಿ.ಎಮ್ಕ್ಕೆ ಹಳ್ಳಿಬೇಟಿ ಕುರಿತು ಮುದನೂರ ಗ್ರಾಮಕ್ಕೆ ಬೇಟಿ ನೀಡಿದಾಗ  ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನಂದರೆ, ಮುದನೂರ ಸೀಮಾಂತರದ ಹೊಲ ಸವರ್ೆ ನಂಬರ 07 ನೇದ್ದರ ಉಳಿಮೆಯ ವಿಷಯದಲ್ಲಿ ತಕರಾರು ಆಗಿ ಎರಡು ಪಾಟರ್ಿ ಜನರ ಮದ್ಯಭಾರೀ ವೈಮನಸ್ಸು ಬೆಳೆದು  ಒಂದನೇಯ ಪಾಟರ್ಿಯ 1] ಮಲ್ಲರಡ್ಡಿ ತಂದೆ ಮಹಾದೇವಪ್ಪ ಬಳವಾಟ ವ|| 45 ಜಾ|| ಹಿಂದೂರಡ್ಡಿ ಉ|| ಒಕ್ಕಲುತನ 2] ಪ್ರಭಾಕರರಡ್ಡಿ ತಂದೆ ಮಹಾದೇವಪ್ಪ ಬಳವಾಟ ವ|| 40 ಜಾ|| ಹಿಂದೂ ರಡ್ಡಿ ಸಾ|| ಇಬ್ಬರೂ ಮುದನೂರ ಹಾಗು 2ನೇ ಪಾಟರ್ೀಯ 1) ಮಡಿವಾಳಪ್ಪಗೌಡ ತಂದೆ ರಾಮಪ್ಪ ಬಳವಾಟ ವ|| 65 ಜಾ|| ರಡ್ಡಿ ಉ|| ಒಕ್ಕಲುತನ ಸಾ|| ಮುದನೂರ ಇದ್ದು ಸುಮಾರು ದಿನಗಳಿಂದ ಹೊಲ ಸವರ್ೆ 07 ನೇದ್ದರ ಉಳಿಮೆ ಮಾಡುವ ವಿಷಯದಲ್ಲಿ  ಎರಡು ಪಾಟರ್ಿಗಳಾಗಿ ಎರಡು ಪಾಟರ್ಿ ಜನರ ಮದ್ಯ ಭಾರೀ ಗಲಾಟೆಗಳಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಹಾಗು ಜೀವ ಹಾನಿಯಾಗುವ ಸಂಭವ ಕಂಡು ಬಂದಿದ್ದರಿಂದ ಮರಳಿ ಠಾಣೆಗೆ 1.00 ಪಿ ಎಮ್ ಕ್ಕೆ ಬಂದು ಸದರ ಎರಡು ಪಾಟರ್ಿ ಜನರ ವಿರುದ್ದ ಮುಂಜಾಗ್ರಾತ ಕ್ರಮವಾಗಿ ಠಾಣಾ ಪಿಎಆರ್ ನಂಬರ 14/2020 ಕಲಂ 107 ಸಿಆರ್ಪಿಸಿ ನೇದ್ದರಲ್ಲಿ ಕ್ರಮ ಜರಗಿಸಿದ್ದು ಕಾರಣ ಸದರ ಎರಡು ಪಾಟರ್ಿ ಜನರನ್ನು ಕರೆಯಿಸಿ ಗ್ರಾಮದಲ್ಲಿ  ಒಳ್ಳೆಯ ನಡತೆಯಿಂದ ಇರುವಂತೆ ಕಲಂ 111 ಸಿಆರ್ಪಿಸಿ ಅಡಿಯಲ್ಲಿ ಇಂಟೇರಿಯಂ ಬಾಂಡ ಬರೆಯಿಸಿಕೊಳ್ಳಲು  ಮಾನ್ಯರವರಲ್ಲಿ ವಿನಂತಿ ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 115/2020 ಕಲಂ: 143.147.342.323,324.504.506 ಸಂ 149 : ಇಂದು ದಿನಾಂಕ: 15/07/2020 ರಂದು 7:45 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ರವಿಚಂದ್ರ ತಂದೆ ಬಸಪ್ಪ ವಡಗೇರಿ ವ:30 ವರ್ಷ, ಜಾ:ಪ.ಜಾತಿ(ಹೊಲೆಯ) ಉ: ಖಾಸಗಿ ಕೆಲಸ ಸಾ||ಬೊಮ್ಮನಳ್ಳಿ ತಾ||ಸುರಪೂರ ರವರು ಠಾಣೆಗೆ ಹಾಜರಾಗಿ ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನೆಂದರೆ ಇಂದು ದಿನಾಂಕ 15/07/2020 ರಂದು ಬೆಳಿಗ್ಗೆ 10.00 ಗಂಟೆಗೆ ವಯಕ್ತಿಕ ಕೆಲಸದ ನಿಮಿತ್ಯವಾಗಿ ಕೆಂಭಾವಿಗೆ ಬಂದಿದ್ದು, ಕೆಲಸ ಮುಗಿಸಿ ವಾಪಸ್ಸು ಊರಿಗೆ ಹೋಗುವ ಕುರಿತು ಸಾಯಾಂಕಾಲ 6.00 ಗಂಟೆಗೆ ಕೆ.ಬಿ.ಎನ್ ಸುಪರ ಮಾಕರ್ೆಟ ಹತ್ತಿರ ನಾನು ಗೋಪಾಲ ತಂದೆ ಮರೆಪ್ಪ ಕಟ್ಟಿಮನಿ ಸಾ: ವಂದಗನೂರ ಇಬ್ಬರೂ ಕೂಡಿ ಮಾತನಾಡುತ್ತಾ ನಿಂತಾಗ ನಮ್ಮ ಸಮಾಜದವರಾದ 1) ಲಾಲಪ್ಪ ಹೊಸಮನಿ 2) ಸುರೇಶ ಮಾಳಳ್ಳಿಕರ 3) ಅಶೋಕ ಹದನೂರ 4) ಗುತ್ತಪ್ಪ ಬೊಮ್ಮನಳ್ಳಿ 5) ಮಲ್ಲು ಮಲ್ಲಾ(ಕಾರ ಚಾಲಕ) 6) ಸಚಿನ ತಂದೆ ಶೇಖಪ್ಪ ಬಂಡಿ ಇವರೆಲ್ಲರೂ ಕೂಡಿ ನನ್ನ ಹತ್ತಿರ ಬಂದವರೇ ರವಿ ನಿನ್ನ ಹತ್ತಿರ ಕೆಲಸ ಇದೆ ಬಾ ಅಂತಾ ಅಂದಾಗ ನನ್ನ ಹತ್ತಿರ ನಿವ್ಮ್ಮದು ಏನು ಕೆಲಸ ಅಂತಾ ಅಂದಾಗ ನಿನ್ನ ಹತ್ತಿರ ಮಾತನಾಡುವದಿದೆ ಅಂತಾ ನನಗು ಹಾಗೂ ಗೋಪಾಲ ಕಟ್ಟಿಮನಿ ಇಬ್ಬರನ್ನು ನಮ್ಮ ಕಾರಿನಲ್ಲಿ ಕೂಡಿಸಿಕೊಂಡು ಕಾಡಾ ಕ್ಯಾಂಪಿನಲ್ಲಿರುವ ಗುತ್ತಪ್ಪ ಬೊಮ್ಮನಳ್ಳಿ ಇವರ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಕೂಡಿ ಹಾಕಿ,  ಎಲ್ಲರೂ ಕೂಡಿ ಎಲೇ ರವಿ ಸೂಳೆ ಮಗನೆ ನೀನು ನಮ್ಮ ಕಾರು ಬಾಡಿಗೆ ತೆಗೆದುಕೊಂಡು 15 ದಿವಸಗಳ ವರೆಗೆ ಹೋಗಿದ್ದಿಯಾ, ಅದರ 40,000/- ರೂ ಬಾಡಿಗೆ ಕೊಡಬೇಕು, ಅಲ್ಲಿಯವರೆಗೆ ನಿನಗೆ ಇಲ್ಲಿಂದ ಬಿಡುವುದಿಲ್ಲ ಅನ್ನುತ್ತಾ ಸೂಳೆ ಮಕ್ಕಳೆ ನಿಮಗೆ ಬಹಾಳ ಸೊಕ್ಕು ಬಂದಿದೆ ಅಂತಾ ಅವಾಚ್ಯವಾಗಿ ಬ್ಶೆದು ಅವರ ಪೈಕಿ ಲಾಲಪ್ಪ ಹೊಸಮನಿ ಈತನು ನನಗೆ ಬಲಕೈ ಮುಷ್ಠಿಯಿಂದ ಎಡಪಕ್ಕಡಿಗೆ, ಹೊಟ್ಟೆಗೆ, ಮತ್ತು ತಲೆಗೆ ಹೊಡೆದು ಗುಪ್ತಗಾಯ ಪಡಿಸಿದನು. ಉಳಿದವರು ಸಹ ಈ ಸೂಳೆ ಮಗನದು ಬಹಾಳ ಆಗಿದೆ ಅಂತಾ ಕೈಯಿಂದ ಹೊಡೆ ಬಡೆ ಮಾಡುತ್ತಾ ಪಕ್ಕದಲ್ಲಿದ್ದ ಗೊಪಾಲ ಕಟ್ಟಿಮನಿ ಈತನಿಗೂ ಸಹ ಎಲ್ಲರೂ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿರುತ್ತಾರೆ. ನಂತರ ಗುತ್ತಪ್ಪ ಈತನು ತಮ್ಮ ಮನೆಯಲ್ಲಿದ್ದ ಕಾರಾ ಕುಟ್ಟುವ ಕಲ್ಲಿನ ಗುಂಡಿನಿಂದ ನನ್ನ ತಲೆಗೆ ಗುದ್ದಿ ಗುಪ್ತಗಾಯ ಪಡಿಸಿರುತ್ತಾನೆ. ನಂತರ ನಾವಿಬ್ಬರೂ ಜೋರಾಗಿ ಚಿರಾಡುತ್ತಿರುವಾಗ ಸದರಿಯವರು ನಮಗೆ ಹೊಡೆಯುವದನ್ನು ಬಿಟ್ಟು ಮಕ್ಕಳೇ ನಮ್ಮ ಕಾರಿನ ಬಾಡಿಗೆ ಕೊಟ್ಟರೆ ಸರಿ ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿ ಹೋದರು. ಕಾರಣ ಸದರಿ ಮೇಲ್ಕಾಣಿಸಿದ 6 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿ ಕೊಡಬೇಕು ಅಂತಾ ಈ ವಿನಂತಿ ಅಜರ್ಿ ಕೊಟ್ಟ ಪಿರ್ಯಾದಿ ಅಜರ್ಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:115/2020 ಕಲಂ: 143, 147, 342, 323, 324, 504, 506 ಸಂ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 116/2020 ಕಲಂ: 341.323.504.506 ಸಂ 34 ಐಪಿಸಿ : ಇಂದು ದಿನಾಂಕ: 15/07/2020 ರಂದು 9.30 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಲ್ಲಿಕಾಜರ್ುನ ತಂದೆ ಶಿವಪ್ಪ ತುಂಬಿಗಿ ವ: 21 ವರ್ಷ, ಜಾ:ಪ.ಜಾತಿ(ಹೊಲೆಯ) ಉ: ಕಾರ ಚಾಲಕ ಸಾ|| ಮಲ್ಲಾ(ಬಿ) ತಾ||ಸುರಪೂರ ರವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ ನಮ್ಮ ಸಮಾಜದ ಗುತ್ತಪ್ಪ ತಂದೆ ಬಸಪ್ಪ ಬೊಮ್ಮನಳ್ಳಿ ಹಾಗೂ ರವಿಚಂದ್ರ ತಂದೆ ಬಸಪ್ಪ ವಡಗೇರಿ ಈ ಎರಡು ಜನರು ನಮ್ಮ ಕಾರನ್ನು 15 ದಿನಗಳವರೆಗೆ ಬಾಡಿಗೆ ತೆಗೆದುಕೊಂಡು ಹೋಗಿ ಸದರಿ ಬಾಡಿಗೆ ಹಣ 22,000/- ರೂ ನನಗೆ ಬರಬೇಕಾಗಿದ್ದು ಸದರಿ ಹಣ ಕೇಳಿದರೆ ನಾಳೆ, ನಾಡದ್ದು ಕೊಡುತ್ತೇನೆ ಅಂತಾ ಅನ್ನುತ್ತಿದ್ದರು. ಹೀಗಿದ್ದು ಇಂದು ದಿನಾಂಕ 15/07/2020 ರಂದು ಸಾಯಾಂಕಾಲ 6.00 ಗಂಟೆಗೆ ಗುತ್ತಪ್ಪ ಬೊಮ್ಮನಳ್ಳಿ ಇವರ ಮನೆಗೆ ಹೋಗಿದ್ದು ಅಲ್ಲಿ ರವಿಚಂದ್ರ ವಡಗೇರಿ ಹಾಗೂ ಗೋಪಾಲ ಕಟ್ಟಿಮನಿ ಇವರು ಇದ್ದು, ಆಗ ನಾನು ನನ್ನ ಕಾರಿನ 22,000/- ರೂಪಾಯಿ ಬಾಡಿಗೆ ಹಣ ಕೊಡು ಅಂತಾ ಕೇಳಿದಾಗ ರವಿಚಂದ್ರ ತಂದೆ ಬಸಪ್ಪ ವಡಗೇರಿ ಹಾಗು ಗೋಪಾಲ ತಂದೆ ಮರೆಪ್ಪ ಕಟ್ಟಿಮನಿ ಇವರಿಬ್ಬರು ಸೇರಿ ನನಗೆ ಏನಲೇ ಸೂಳೆ ಮಗನೆ ನಮ್ಮ ಹತ್ತಿರ ಹಣ ಇರುವದಿಲ್ಲ ನಂತರ ಕೊಡುತ್ತೇವೆ ಅಂತಾ ಅಂದಾಗ ನಾನು ನನ್ನ ಕಾರು ತೆಗೆದುಕೊಂಡು ಹೊರಟಾಗ ಮತ್ತೇ ಸದರಿ ಎರಡು ಜನರು ಬಂದವರೆ ಕಾರ ತಡೆದು ನಿಲ್ಲಿಸಿ ಕಾರಿನಿಂದ ನನ್ನನ್ನು ಹೊರಗೆ ಎಳೆದು ಮಗನೆ ಹಣ ಕೇಳಲು ಮನೆಯವರೆಗ ಬರುತ್ತಿಯಾ ಸೂಳೆ ಎಷ್ಟು ಸೊಕ್ಕು ಇರಬೇಕು ನಿನಗೆ ಅಂತಾ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆ ಬಡೆ ಮಾಡುತ್ತಿದ್ದಾಗ ಅಲ್ಲೇ ಇದ್ದ ಅಶೋಕ ತಂದೆ ಶರಣಪ್ಪ ನಾಟೆಕಾರ ಸಾ: ಹದನೂರ ಹಾಗೂ ಸುರೇಶ ಮಾಳಳ್ಳಿಕರ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರು ನನಗೆ ಹೊಡೆಯುವದನ್ನು ಬಿಟ್ಟು ಮಗನೇ ಇನ್ನೊಮ್ಮೆ ಕಾರಿನ ಬಾಡಿಗೆ ಹಣ ಕೇಳಿದರೆ  ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿ ಹೋದರು. ಕಾರಣ ಸದರಿ ಮೇಲ್ಕಾಣಿಸಿದ ಎರಡು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೆಕು ಅಂತಾ ಕೊಟ್ಟ ಅಜರ್ಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:116/2020 ಕಲಂ: 341,323,504,506 ಸಂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!