ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/07/2020

By blogger on ಬುಧವಾರ, ಜುಲೈ 15, 2020
ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/07/2020 
                                                                                                               

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 26/2020  ಕಲಂ 279,  337 ಐಪಿಸಿ : ಇಂದು  ದಿನಾಂಕ 13/07/2020 ರಂದು ರಾತ್ರಿ ಸಮಯ 10-30 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಈಶಪ್ಪ ತಂದೆ ಭೀಮರಾಯ ಗುಂಜನೂರು ವಯ;25 ವರ್ಷ, ಉ;ಗೌಂಡಿ ಕೆಲಸ, ಜಾ; ಬೇಡರು, ಸಾ;ಬೊಮ್ಮನಳ್ಳಿ, ತಾ;ಚಿತ್ತಾಪುರ ಇವರು ಠಾಣೆಗೆ ಖುದ್ದಾಗಿ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿಯನ್ನು ನೀಡಿದ್ದರ ಸಾರಾಂಶವೇನೆಂದರೆ ಇಂದು ದಿನಾಂಕ 13/07/2020 ರಂದು ಬೆಳಿಗ್ಗೆ ನನ್ನ ವಯಕ್ತಿಕ ಕೆಲಸದ ನಿಮಿತ್ಯ ನನ್ನ ಸ್ನೇಹಿತನಾದ ಮೀರಾರೆಡ್ಡಿ ತಂದೆ ಹೇಮರೆಡ್ಡಿ ಹತ್ತಿಕುಣಿ ಸಾ;ಬೊಮ್ಮನಳ್ಳಿ ಇವರಿಗೆ ನನ್ನ ಸಂಗಡ ಕರೆದುಕೊಂಡು ಅವರ ಮೋಟಾರು ಸೈಕಲ್ ನಂಬರ ಕೆಎ-56, ಎಚ್-2365 ನೇದ್ದರ ಮೇಲೆ ನಮ್ಮೂರಿನಿಂದ ಯಾದಗಿರಿಗೆ ಬಂದಿದ್ದೆವು. ಯಾದಗಿರಿಗೆ ಬಂದು ನಮ್ಮ ಕೆಲಸ ಮುಗಿಸಿಕೊಂಡು ಮರಳಿ ಯಾದಗಿರಿಯಿಂದ ನಮ್ಮೂರಿಗೆ ಹೋಗುತ್ತಿದ್ದಾಗ ಮೋಟಾರು ಸೈಕಲನ್ನು ಮೀರಾರೆಡ್ಡಿ ಈತನೇ ನಡೆಸಿಕೊಂಡು ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಮುದ್ನಾಳ ಪೆಟ್ರೋಲ್ ಬಂಕ್ ಹತ್ತಿರ ನಮ್ಮ ಹಿಂದಿನಿಂದ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ಹಿಂದನಿಂದ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ನಾವಿಬ್ಬರು ಮೊಟಾರು ಸೈಕಲ್ ಮೇಲಿಂದ ರಸ್ತೆಯ ಮೇಲೆ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ಬಲಗೈ ಮೊಣಕೈಗೆ, ಮುಂಗೈಗೆ, ಭುಜಕ್ಕೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಇರುತ್ತವೆ ಎದ್ದು ನೋಡಲು ಮೀರಾರೆಡ್ಡಿ ಈತನಿಗೆ ಕೂಡ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಇರುತ್ತದೆ. ನಮಗೆ ಅಪಘಾತಪಡಿಸಿದ ವಾಹನವು ಬುಲೆರೋ ಗೂಡ್ಸ್ ವಾಹನವಿದ್ದು ಅದರ ನಂಬರ ಕೆಎ-33, ಎ-7776 ಅಂತಾ ಇರುತ್ತದೆ ಅದರ ಚಾಲಕನು ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂದೆ ನಿಂಗಪ್ಪ ದುಪ್ಪಲ್ಲಿ  ಸಾ;ಉಳ್ಳೆಸೂಗುರು ಅಂತಾ ತಿಳಿಸಿರುತ್ತಾನೆ. ಈ ಅಪಘಾತವು ಇಂದು ದಿನಾಂಕ 13/07/2020 ರಂದು ಸಾಯಂಕಾಲ 4-30 ಪಿ.ಎಂ.ಕ್ಕೆ ಜರುಗಿದ್ದು ಇರುತ್ತದೆ. ಈ ಘಟನೆ ಬಗ್ಗೆ ನನ್ನ ಅಣ್ಣನಾದ ಶರಣರೆಡ್ಡಿ ತಂದೆ ಅಮೀನರೆಡ್ಡಿ ಹತ್ತಿಕುಣಿ ಇವರಿಗೆ ಪೋನ್ ಮಾಡಿ ಘಟನೆಯ ಸ್ಥಳಕ್ಕೆ ಬರಲು ತಿಳಿಸಿರುತ್ತೇನೆ. ಸ್ವಲ್ಪ ಸಮಯದ ನಂತರ ನನ್ನ ಅಣ್ಣ ಶರಣರೆಡ್ಡಿ ಇವರು ತಮ್ಮ ಸಂಗಡ ವೈಜನಾಥರೆಡ್ಡಿ ತಂದೆ ಸಿದ್ದಣ್ಣಗೌಡ ಇವರಿಗೆ ಕರೆದುಕೊಂಡು ಬಂದಿರುತ್ತಾರೆ. ನಮಗೆ ಅಪಘಾತಪಡಿಸಿದ ವಾಹನದ ಚಾಲಕನು ಅಪಘಾತದಲ್ಲಿ ಆದ ಗಾಯಗಳ ಚಿಕಿತ್ಸೆಯ ವೆಚ್ಚವನ್ನು ಕೊಡುತ್ತೇನೆ ಅಂತಾ ನಮಗೆ ತಿಳಿಸಿ ಇಲ್ಲಿಯವರೆಗೆ ಕೊಡದ ಕಾರಣ ನಾವು ತಡವಾಗಿ ಠಾಣೆಗೆ ಬಂದು ಈ ದೂರನ್ನು ಸಲ್ಲಿಸುತ್ತಿದ್ದು ನಮಗೆ ಅಪಘಾತ ಪಡಿಸಿದ ಬುಲೇರೋ ವಾಹನ ನಂಬರ ಕೆಎ-33, ಎ-7776 ನೇದ್ದರ ಚಾಲಕ ರಮೇಶ ಈತನ ಮೇಲೆ ಕಾನೂನಿನ ಮುಂದಿನ ಕ್ರಮ ಜರುಗಿಸಿರಿ ಅಂತಾ ದೂರು ಅಜರ್ಿ ಇರುತ್ತದೆ ಮತ್ತು ನಮಗೆ ರಸ್ತೆ ಅಪಘಾತದಲ್ಲಾದ ಗಾಯದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳಿಸಿಕೊಡಬೇಕೆಂದು ಮಾನ್ಯರವರಲ್ಲಿ ವಿನಂತಿ ನೀಡಿದ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.26/2020 ಕಲಂ 279, 337 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 79/2020. ಕಲಂ: ಮನುಷ್ಯ ಕಾಣೆಯಾದ ಬಗ್ಗೆ : ಇಂದು ದಿನಾಂಕ: 14/07/2020 ರಂದು 04-00 ಪಿಎಮ್ ಕ್ಕೆ ನಾನು ನವೀನಕುಮಾರ ಕುಮಾರ ತಂದೆ ಮಲ್ಲಿಕಾಜರ್ುನ ಪೋಲಿಸ ಪಾಟೀಲ್,ವ.28, ಜಾ.ಲಿಂಗಾಯತ,ಉ:ಒಕ್ಕಲುತನ ಸಾ.ಕೊಡಾಲ ಗ್ರಾಮ ತಾ.ವಡಗೇರಾ.ಜಿ.ಯಾದಗಿರಿ. ಸಲ್ಲಿಸುತ್ತೀರುವ ದೂರು ಅಜರ್ಿಯೆನೇಂದರೆ, ನನ್ನ ತಂದೆ ಮಲ್ಲಿಕಾಜರ್ುನ, ತಾಯಿ  ಮಂಜುಳಾದೇವಿ(ಗಿರಿಜಮ್ಮ) ವಾಸವಾಗಿದ್ದು ನಮ್ಮ ಕುಂಟುಬಕ್ಕೆ ಸದರಿ ಗ್ರಾಮದಲ್ಲಿ ಜಮೀನುಗಳು ಇರುತ್ತೇವೆ, ನಮ್ಮ ಜಮೀನಿನ ಸವರ್ೇ ನಂ: 26.28 ಬ್ಯಾಡನ ಮಡಿ ಎನ್ನುವುದು ನದಿ ದಂಡಗೆ ಹೋಂದಿಕೊಂಡಿದ್ದು ಅದರಲ್ಲಿ ನಾವು ಭತ್ತದ ಬೇಳೆಯನ್ನು ಬೇಳೆಯತ್ತಿದ್ದವು. ನಾನು ಹಾಗೂ ನಮ್ಮ ತಂದೆ ಸ್ವಂತ ವ್ಯವಸಾಯ ಮಾಡಿಕೊಂಡು ಉಪಜೀವನ ಮಾಡುತ್ತಿರುತ್ತೇವೆ.ಹೀಗೆ ದಿನಾಂಕ: 01/07/2020 ರಂದು ಬೆಳಿಗ್ಗೆ ನಮ್ಮ ತಂದೆಯವರಾದ ಶ್ರೀಮಲ್ಲಿಕಾಜರ್ುನ ತಂದೆ ಶಂಕ್ರಪ್ಪಗೌಡ ಪೊಲೀಸ್ ಪಾಟೀಲ್, ವ-64, ಉ-ಒಕ್ಕಲುತನ, ಜಾ-ಲಿಂಗಾಯತ, ಸಾ: ಕೋಡಲ, ತಾ: ವಡಗೇರಾ ಮನೆಯಿಂದ ಹೊರಟು ನದಿ ದಂಡೆಯಲ್ಲಿರುವ ನಮ್ಮ ಜಮೀನಿನಲ್ಲಿ ಭತ್ತ ನಾಟಿ ಮಾಡುವ ಸಂಬಂಧ ಹೊಲ ನೋಡಿಕೊಂಡು ಬರಲು ಹೋಗಿರುತ್ತಾರೆ. ಸುಮಾರು ಮದ್ಯಾಹ್ನ 02:00 ಗಂಟೆಯವರೆಗೆ ನಮ್ಮ ತಂದೆ ಸದರಿ ಜಮೀನಿನಲ್ಲಿ ಇದ್ದರು ಆ ಸಮಯದಲ್ಲಿ ನಾನು ನಮ್ಮ ತಂದೆಗೆ ಫೋನ್ ಮಾಡಿದಾಗ ಜಮೀನಿನಲ್ಲಿ ಇರುವುದಾಗಿ ಹೇಳಿರುತ್ತಾರೆ. ಅದೇ ದಿನ ಪುನಃ ಮದ್ಯಾಹ್ನ 03:00 ಗಂಟೆಯ ಸುಮಾರಿಗೆ ನಮ್ಮ ತಂದೆಗೆ ಸುಮಾರು ಸಲ ಫೊನ್ ಮಾಡಿದರೆ ಕಾಲ್ ರಿಸೀವ್ ಮಾಡಲಿಲ್ಲ. ಗಾಬರಿಯಾದ ನಾನು ನಮ್ಮ ತಂದೆಯನ್ನು ನೋಡಿಕೊಂಡು ಬರಲು ನದಿ ದಂಡೆಯಲ್ಲಿರುವ ನಮ್ಮ ಜಮೀನಿಗೆ ಹೋದಾಗ ನಮ್ಮ ತಂದೆ ಜಮೀನಿನಲ್ಲಿ ಕಾಣಲಿಲ್ಲ. ನಂತರ ಸುತ್ತಮುತ್ತಲಿನ ಜಮೀನಿನಲ್ಲಿ ಹೋಗಿರಬಹುದೆಂದು ಹುಡುಕಾಡಿದೆ ಅವರು ಎಲ್ಲಿಯೂ ಕಾಣಲಿಲ್ಲ ನಾನು ನಮ್ಮ ಜಮೀನಿನ ಕೆಳಗೆ ನದಿ ದಂಡೆಯಲ್ಲಿ ಹೋದಾಗ ಅಲ್ಲಿ ನಮ್ಮ ತಂದೆಯ ಚಪ್ಪಲಿ, ಅಂಗಿ, ಬನಿಯನ್ ಹಾಗೂ ಅವರು ಕಟ್ಟಿಕೊಳ್ಳುತ್ತಿರುವ ಲುಂಗಿ ಕಂಡು ಬಂದವು. ಅವುಗಳನ್ನು ತೆಗೆದುನೋಡಿದಾಗ ಅವರ ಮೊಬೈಲ್ ಫೊನ್ ಅವರ ಅಂಗಿಯಲ್ಲಿತ್ತು (ನಮ್ಮ ತಂದೆಯವರ ಫೋನ್ ನಂ:9901270356), ಗಾಬರಿಯಾದ ನಾನು ಸದರಿ ವಿಷಯವನ್ನು ನಮ್ಮ ಕುಟುಂಬದವರಿಗೆ ತಿಳಿಸಿ ಅವರ ಜೊತೆ ಇದರ ಬಗ್ಗೆ ವಿಚಾರಿಸಿದೆ. ನಮ್ಮ ತಂದೆ ಆ ದಿನ ಜಮೀನಿಗೆ ಹೋಗಿದ್ದು ಮತ್ತು ನದಿ ದಡದಲ್ಲಿ ಅವರ ಚಪ್ಪಲಿ ಬಟ್ಟೆಗಳು ಕಂಡು ಬಂದಿದ್ದು ಅನುಮಾನಾಸ್ಪದ ರೀತಿಯಲ್ಲಿ ನಮ್ಮ ತಂದೆಯು ಕಾಣೆಯಾಗಿದ್ದರ ಬಗ್ಗೆ ಕಂಡು ಬಂದಿದ್ದು ಅವರು ಮರಳಿ ಬರಬಹುದು ಎಂದು ಕೊಂಡು ದಿನಾಂಕ; 02/07/2020 ರವೆಗೆ ಕಾಯ್ದು ನಂತರ ತಮ್ಮ ಕಛೇರಿಗೆ ಸದರಿ ಮೇಲೆ ಹೇಳಿದ ಮಾಹಿತಿ ನೀಡಿರುತ್ತೇನೆ. ಹಾಗೆ ತಮ್ಮ ಕಛೇರಿಯಿಂದ ಬಂದು ಸ್ಥಳ ಪರಿಶೀಲನೆ ಮಾಡಿರುತ್ತೀರಿ. ಅನುಮಾನಾಸ್ಪದವಾಗಿ ಏಕಾಏಕಿಯಾಗಿ ನಮ್ಮ ಕುಟುಂಬದಲ್ಲಿ ಯಾವುದೇ ಕಾರಣವಿರದೇ ನಮ್ಮ ತಂದೆ ಕಾಣೆಯಾಗಿರುವುದು ಅನುಮಾನಾಸ್ಪದವಾಗಿ ಕಾಣುತ್ತಿರುವುದರಿಂದ ತಾವುಗಳು ಇದರ ಬಗ್ಗೆ ಕೂಲಂಕುಷವಾಗಿ ತನಿಖೇ ಕೈಕೊಂಡು ನಮಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಕಾಣೇಯಾಗಿರುವ ನಮ್ಮ ತಂದೆಯನ್ನು ಹುಡುಕಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ನಮ್ಮ ತಂದೆಯವರ ಬಗ್ಗೆ ನಮ್ಮ ಸಂಬಂಧಿಕರ ಊರುಗಳಲ್ಲಿ ವಿಚಾರ ಮಾಡಿಕೊಂಡು ಬಂದಿದ್ದು ಹಾಗೂ ನಾನು ತುಂಬಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರಿಂದ, ಸುದಾರಿಸಿಕೊಂಡು ಬಂದು ಫಿಯರ್ಾದಿ ನೀಡುವುದಕ್ಕೆ ತಡವಾಗಿರುತ್ತದೆ ಅಂತಾ ಮಾನ್ಯರಲ್ಲಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 79/2020 ಕಲಂ:ಮನುಷ್ಯ ಕಾಣೆಯಾಗಿದ್ದಾನೆ ಐಪಿಸಿ ಅಡಿಯ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ  ಪೊಲೀಸ ಠಾಣೆ ಗುನ್ನೆ ನಂ:- 81/2020  295 ಐಪಿಸಿ : ದಿನಾಂಕ: 14/07/2020 ರಂದು 07.45 ಪಿಎಮ್ ಕ್ಕೆ ಅಜರ್ಿದಾರರಾದ ಶ್ರೀ. ಅರುಣಕುಮಾರ ತಂದೆ ಮರೆಪ್ಪ ದೊಡ್ಡಮನಿ ಜಾತಿ|| ಪ.ಜಾತಿ ವಯ|| 28 ವರ್ಷ ಉ|| ಪ್ರೇಸ್ ರಿಪೋರ್ಟರ ಸಾ|| ಸೈದಾಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಮ್ಮ ಗ್ರಾಮದ ಹರಿಜನ ಓಣಿಯಲ್ಲಿ  ಡಾ|| ಬಿ.ಆರ್.ಅಂಬೇಡ್ಕರ ಭವನ ಇರುತ್ತದೆ. ಆ ಭವನದಲ್ಲಿ ಡಾ|| ಬಿ.ಆರ್.ಅಂಬೇಡ್ಕರ ರವರ ಭಾವ ಚಿತ್ರದ ಪೋಟೊ ಇಟ್ಟಿದ್ದೇವು ದಿನಾಂಕ:14/07/2020 ರಂದು ಮದ್ಯಾಹ್ನ ಸಮಯದಲ್ಲಿ ಡಾ|| ಬಿ.ಆರ್.ಅಂಬೇಡ್ಕರ ಭವನದಲ್ಲಿದ್ದ ಭಾವ ಚಿತ್ರಕ್ಕೆ ಯಾರೋ ಕಲ್ಲಿನಿಂದ ಹೊಡೆದು ಫೋಟೊ ಹರಿದು ಅವಮಾನ ಮಾಡಿರುತ್ತಾರೆ ಅಂತಾ ಇತ್ಯಾದಿ ಓಣಿಯಲ್ಲಿ ಹರಡಿದ ಸುದ್ದಿಯ ಮೇರೆಗೆ ನಾನು ಮತ್ತು ಓಣಿಯ ರಮೇಶ ತಂದೆ ಸಿದ್ರಾಮಪ್ಪ, ಮಂಜುನಾಥ ತಂದೆ ಮಾನಪ್ಪ, ಭಿಮರಾಯ ತಂದೆ ತಿಪ್ಪಣ್ಣ, ಸಂಗಪ್ಪ ತಂದೆ ಶಿವಪ್ಪ, ಮಾಹಾಂತೇಶ ತಂದೆ ರಾಮಚಂದ್ರ, ಮಾಹಾದೇವ ತಂದೆ ಬಸಲಿಂಗಪ್ಪ, ಭಿಮರಾಯ ತಂದೆ ಸಂಗಪ್ಪ ಎಲ್ಲರೂ ಡಾ|| ಬಿ.ಆರ್.ಅಂಬೇಡ್ಕರ ಭವನದೊಳಗೆ ಮದ್ಯಾಹ್ನ 3 ಗಂಟೆಗೆ ಹೋಗಿ, ಡಾ|| ಬಿ.ಆರ್.ಅಂಬೇಡ್ಕರ ಫೋಟೊಗೆ ಕಲ್ಲಿನಿಂದ ಹೊಡೆದು ಫೋಟೊ ಹರಿದು ಅವಮಾನ ಮಾಡಿದ್ದು ನೋಡಿದೆವು.ದಿನಾಂಕ:13/07/2020 ರಂದು ರಾತ್ರಿ 10 ಗಂಟೆಯಿಂದ ದಿನಾಂಕ: 14/07/2020 ರಂದು ಬೆಳಗಿನ ಸಮಯದ ಅವಧಿಯಲ್ಲಿ ಯಾರೋ ಕಿಡಿಗೇಡಿಗಳು ನಮ್ಮ ಪರಿಶಿಷ್ಟ ಜಾತಿ ಸಮುದಾಯಕ್ಕೆ ಅವಮಾನ ಮಾಡುವ ಉದ್ದೇಶದಿಂದ ಭವನದೊಳಗೆ ಹೋಗಿ ಅದರಲ್ಲಿ ಇಟ್ಟ ಡಾ|| ಬಿ.ಆರ್.ಅಂಬೇಡ್ಕರ ರವರ ಫೋಟುಗೆ ಕಲ್ಲಿನಿಂದ ಹೊಡೆದು ಫೋಟೊ ಹರಿದು ನಮ್ಮ ಸಮದಾಯಕ್ಕೆ ಅವಮಾನ ಮಾಡಿರುತ್ತಾರೆ. ಆಟ ಆಡುತ್ತಾ ಸ್ಥಳದ ಹತ್ತಿರ ಹೋಗಿದ್ದ ಅಶೋಕ ತಂದೆ ಮಲ್ಲಪ್ಪ ದೋಡ್ಡಮನಿ ಇವರು ನೋಡಿ ಊರಲ್ಲಿ ತಿಳಿಸಿದ್ದರು.ಆದ್ದರಿಂದ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಮೂಲಕ ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 81/2020 ಕಲಂ: 295, ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 166/2020 ಕಲಂ: 79, 80 ಕೆ.ಪಿ.ಕಾಯ್ದೆ : ಇಂದು ದಿನಾಂಕ14/07/2020 ರಂದು 7 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸ.ತ ಫಿರ್ಯಾದಿ ಶ್ರೀ ವೆಂಕಟೇಶ ಹೊಗಿಬಂಡಿ ಡಿ.ಎಸ್.ಪಿ ಸುರಪುರ ಉಪ-ವಿಭಾಗ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 09 ಜನ ಆರೋಪಿತರನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:14/07/2020 ರಂದು 3 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಸುರಪುರ ನಗರದ ವೆಣುಗೋಪಾಲ ಜೇವಗರ್ಿ ರವರ ಸೆಡ್ಡಿನಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮನೋಹರ ಹೆಚ್ಸಿ-105 2) ಶ್ರೀ ಸುಭಾಶ್ಚಂದ್ರ ಸಿಪಿಸಿ-174, 3) ಶ್ರೀ ಪರಮೇಶ ಸಿಪಿಸಿ-142 4) ಶ್ರೀ ಶರಣಪ್ಪ ಸಿಪಿಸಿ-224 5) ಶ್ರೀ ಬಸವರಾಜ ಸಿಪಿಸಿ-395 ಮತ್ತು 6) ಶ್ರೀ ಚಂದಪ್ಪಗೌಡ ಎಪಿಸಿ-143 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ರಂಗನಾಥ ತಂದೆ ತಿಪ್ಪಣ್ಣ ಪ್ಯಾಪಲಿ ವ|| 37 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಮ್ಯಾಗೇರಿ ಓಣಿ ಸುರಪುರ 2) ಸಂಜೀವ ತಂದೆ ಬಾಬು ದರಬಾರಿ ವ|| 32 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಗಾಂದಿ ನಗರ ಸುರಪುರ ಇವರನ್ನು 4 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 4:15 ಪಿ.ಎಮ್ ಕ್ಕೆ ಠಾಣೆಯ ಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 4:30 ಪಿ.ಎಮ್ ಕ್ಕೆ ಸುರಪುರ ನಗರದ ವೆಣುಗೋಪಾಲ ಜೇವಗರ್ಿ ರವರ ಸೆಡ್ಡಿನ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಸೆಡ್ಡಿನಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 4:45 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 09 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಮಲ್ಲಿಕಾಜರ್ುನ ತಂದೆ ಅಯ್ಯಪ್ಪ ಹುಗಾರ ವ|| 69 ವರ್ಷ ಜಾ|| ಹುಗಾರ ಉ|| ಒಕ್ಕಲುತನ ಸಾ|| ದೇವತ್ಕಲ್ ಹಾ||ವ|| ಉದ್ದಾರ ಓಣಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1500/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಸಂಗಯ್ಯ ತಂದೆ ಹಂಪಯ್ಯ ಹಿರೇಮಠ ವ|| 60 ವರ್ಷ ಜಾ|| ಜಂಗಮ ಉ|| ಒಕ್ಕಲುತನ ಸಾ|| ಬೊನಾಳ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1200/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಹಣಮಂತ ತಂದೆ ಭೀಮಣ್ಣ ಬಿಚಗತ್ತಿ ವ|| 54 ವರ್ಷ ಜಾ|| ಬೇಡರು ಉ|| ಗ್ಯಾಸ್ ಏಜೇನ್ಸಿ ಸುಪರವೈಸರ್ ಸಾ|| ಬಿಚಗತ್ತಕೇರಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1300/- ರೂಗಳು ವಶಪಡಿಸಿಕೊಳ್ಳಲಾಯಿತು. 4) ವಿನಾಯಕ ತಂದೆ ಮರೆಪ್ಪ ಬಂಡಾರಿ ವ|| 32 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಮ್ಯಾಗೇರಿ ಓಣಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1400/- ರೂಗಳು ವಶಪಡಿಸಿಕೊಳ್ಳಲಾಯಿತು.  5) ಕತ್ತಾಲಸಾಬ ತಂದೆ ಚಂದಾಸಾಬ ಗೋಗಿ ವ|| 63 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಬೋನಾಳ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1200/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಸಕ್ರೆಪ್ಪ ತಂದೆ ನಿಂಗಪ್ಪ ಬಾಗಲಿ ವ|| 54 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ದೇವರಗೋನಾಲ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1100/- ರೂಗಳು ವಶಪಡಿಸಿಕೊಳ್ಳಲಾಯಿತು. 7) ಪ್ರದೀಪ್ ತಂದೆ ರಂಗನಾಥ ಹೊಂಬಾಳ ವ|| 33 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಮ್ಯಾಗೇರಿ ಓಣಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1500/- ರೂಗಳು ವಶಪಡಿಸಿಕೊಳ್ಳಲಾಯಿತು. 8) ದಶರಥ ತಂದೆ ರಾಮಣ್ಣ ಬಿಚಗತ್ತ ವ|| 55 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಬಿಚಗತ್ತಕೇರಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1600/- ರೂಗಳು ವಶಪಡಿಸಿಕೊಳ್ಳಲಾಯಿತು. 9) ಅಪ್ಪಣ್ಣ ತಂದೆ ಚಂದ್ರಶೇಖರ ಹುಲಗೇರಿ ವ|| 40 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬೋನಾಳ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1000/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 16,600/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 28500/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಯಾವುದೇ ಪರವಾನಿಗೆ ಪಡೆದಯದೇ ಸೆಡ್ಡಿನ ಮಾಲಿಕನಾದ ವೇಣುಗೋಪಾಲ ಜೇವಗರ್ಿ ಜೂಜಾಟ ಆಡಿಸುತ್ತಿದ್ದಾನೆ ಅಂತಾ ತಿಳಿದು ಬಂದಿರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 4:45 ಪಿ.ಎಮ್ ದಿಂದ 5:45 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 9 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 166/2020 ಕಲಂ: 79, 80 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!