ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/07/2020

By blogger on ಸೋಮವಾರ, ಜುಲೈ 13, 2020




                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/07/2020 
                                                                                                               

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 50/2020  ಕಲಂ:, 323, 324, 504, 506, ಸಂಗಡ 34 ಐಪಿಸಿ: ಇಂದು ದಿನಾಂಕ 13/07/2020 ರಂದು 5:00 ಪಿ.ಎಂ ಕ್ಕೆ ಪಿಯರ್ಾದಿ ಶ್ರೀ ಮಲ್ಲೇಶಪ್ಪಗೌಡ ತಂದೆ ಮಲ್ಲಿಕಾಜರ್ುನಗೌಡ ಪಾಟೀಲ್ ವಯಸ್ಸು:28 ಉದ್ಯೋಗ:ಒಕ್ಕಲುತನ ಜಾತಿ: ಹಿಂದೂ ಲಿಂಗಾಯಿತ ಸಾ:ಎಣ್ಣೇವಡಗೇರಾ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪುಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಸದರಿ ಪಿಯರ್ಾದಿಯ ಅಜರ್ಿಯ ಸಾರಾಂಶವೆನೆಂದರೆ ನಮ್ಮ ತಂದೆಯವರಿಗೆ ನಾನು ಹಾಗೂ ನಮ್ಮ ಅಣ್ಣ ಸಿದ್ದನಗೌಡ ತಂದೆ ಮಲ್ಲಿಕಾಜರ್ುನಗೌಡ ಅಂತಾ ಇಬ್ಬರು ಗಂಡು ಮಕ್ಕಳಿದ್ದು ಇಬ್ಬರು ಬೇರೆಬೇರೆ ಇರುತ್ತೇವೆ. ನಮ್ಮ ತಂದೆಯವರ ಹೆಸರಿನಲ್ಲಿ ಯಣ್ಣಿವಡಗೇರಾ ಸೀಮಾಂತರದಲ್ಲಿ ಸವರ್ೆ ನಂ 130/1 ಹಾಗೂ 130/2 ರಲ್ಲಿ 50 ಎಕರೆ ಜಮೀನು  ಇದ್ದು ಈ ಜಮೀನನ ಪಾಲುವಾಟನಿ ವಿಷಯದಲ್ಲಿ ನನಗೆ ಹಾಗೂ ನನ್ನ ಅಣ್ಣನಿಗೆ ಈಗ ಸುಮಾರು 4 ವರ್ಷಗಳಿಂದ ತಕರಾರು ಇದ್ದು ಈ ಜಮೀನು ಸುಮಾರು 4 ವರ್ಷಗಳಿಂದ ಬೀಳು ಬಿದ್ದಿರುತ್ತವೆ. ನಾನು ನಮ್ಮ ಅಣ್ಣನಿಗೆ ಹೊಲ ಪಾಲು ಮಾಡಿಕೊಂಡು ಎಂದರೆ ಹೊಲ ಪಾಲು ವಾಟನಿ ಕೊಡದೆ ಇದ್ದು ನಾನು ನಮ್ಮ ಊರಿನ ಹಿರಿಯರಿಗೆ ಕರೆಯಿಸಿ ನ್ಯಾಯ ಪಂಚಾಯಿತಿ ಮಾಡಿಸಿದ್ದು ನಮ್ಮ ಊರಿನ ಹಿರಿಯರು ಹೊಲ ನಿಮ್ಮ ನಿಮ್ಮ ಹೆಸರಿಗೆ ಹಾಗುವ ತನಕ ಇಬ್ಬರು ಸ್ವಲ್ಪ ಸ್ವಲ್ಪ ಬಿತ್ತಿಕೊಂಡು ಬೇಳೆಯಿರಿ ಅಂತಾ ಹೇಳಿದ್ದರು. ಅದರ ಪ್ರಕಾರ ನಾನು ನಮ್ಮ ಹೊಲವನ್ನು ಇಂದು ದಿನಾಂಕ 13/07/2020 ರಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ನಮ್ಮೂರಿನ ಗದ್ದೆಪ್ಪ ತಂದೆ ಬಸಪ್ಪ ತೆಗ್ಗಿನಮನಿ ಹಾಗೂ ಮಾಳಪ್ಪ ತಂದೆ ಸಾಯಬಣ್ಣ ಧರೆಣ್ಣನವರ ರವರ ಟ್ರಾಕ್ಟರಗಳನ್ನು ತಗೆದುಕೊಂಡು ನಮ್ಮ ಹೊಲಗಳನ್ನು  ಗಳೆ ಹೊಡೆಯುವ ಸಲುವಾಗಿ ನಮ್ಮ ಹೊಲ ಸವರ್ೆ ನಂ 130/1 ರಲ್ಲಿ ಗಳೆಹೊಡೆಸುತ್ತಿದ್ದಾಗ ಇಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನಮ್ಮ ಅಣ್ಣ ಸಿದ್ದನಗೌಡ ತಂದೆ ಮಲ್ಲಿಕಾಜರ್ುನಗೌಡ ಪಾಟೀಲ ಹಾಗೂ ಅವರ ಸಂಬಂದಿ ಮಾವನಾದ ಸಾಹೇಬಗೌಡ ಬಿ ಪಾಟೀಲ ಇಬ್ಬರು ಕೂಡಿಕೊಂಡು ನಾನು ಗಳೆಹೊಡಿಸುವಲ್ಲಿಗೆ ಬಂದು ಅವರಲ್ಲಿಯ ನಮ್ಮ ಅಣ್ಣ ಸಿದ್ದನಗೌಡನು ನನಗೆ ಬೋಸುಡಿ ಮಗನೇ ಹೊಲ ಗಳೆ ಹೊಡೆಯಬೇಡ ಅಂದರೆ ಯಾಕ ಗಳೆ ಹೊಡೆಸುತ್ತಿದ್ದಿಯಾ ಅಂತಾ ನನಗೆ ಅವಾಚ್ಯವಾಗಿ ಬೈದನು. ನಾನು ನನ್ನ ಪಾಲಿನ ಹೊಲ ಗಳೆ ಹೊಡೆದಿದ್ದೆನೆ ನಿನ್ನ ಪಾಲಿನ ಹೊಲ ನಿನಗೆ  ಬಿಟ್ಟಿದ್ದೆನೆ ಅಂತಾ ಅಂದಾಗ ನನ್ನ ಅಣ್ಣ ಸಿದ್ದನಗೌಡ ಬೋಸುಡಿ ಮಗನೆ ಗಳೆ ಹೊಡಿಬೇಡ ಅಂತಾ ಅಂದರೂನು ಹೊಲದಲ್ಲಿ ಗಳೆ ಹೊಡೆದು ಈಗ ಮತ್ತೆ ನನಗೆ ಎದುರು ಮಾತಾಡುತ್ತಿಯಾ ಅಂತಾ ಅಂದು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ನೆಲಕ್ಕೆ ಕೆಡುವಿ ನನ್ನ ಡುಬ್ಬಕ್ಕೆ ಒದಿಯಲಾರಂಬಿಸಿದನು ನಾನು ಅವನಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಎಡಗಡೆಯ ಹಣೆಯ ಮೇಲೆ ತಲೆಗೆ ಬಲವಾಗಿ ಹೊಡೆದು ರಕ್ತಗಾಯಪಡಿಸಿದನು, ಅವನ ಜೊತೆಗೆ ಬಂದಿದ್ದ ಅವನ ಮಾವನಾದ ಸಾಹೇಬಗೌಡ ಬಿ ಪಾಟೀಲ ಈತನು ನನಗೆ ಬೋಸುಡಿ ಮಗನೇ ನಿನ್ನ ಸೊಕ್ಕು ಬಹಳ ಆಗಿದೆ ಹೊಲ ಗಳೆಹೊಡಿಬೇಡ ಅಂತಾ ಅಂದರು ಗಳೆ ಹೊಡೆಯುತ್ತಿಯಾ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು ಆಗ ನಾನು ಚೀರಾಡುತ್ತಿದ್ದಾಗ ನಮ್ಮ ಹೊಲದಲ್ಲಿ ಗಳೆ ಹೊಡೆಯಲು ಬಂದಿದ್ದ ಗದ್ದೆಪ್ಪ ತಂದೆ ಬಸಪ್ಪ ತೆಗ್ಗಿನಮನಿ ಹಾಗೂ ಮಾಳಪ್ಪ ತಂದೆ ಸಾಯಬಣ್ಣ ಧರೆಣ್ಣನವರ ಇವರುಗಳು ಬಂದು ಜಗಳವನ್ನು ಬಿಡಿಸಿದರು ಹೋಗುವಾಗ ನಮ್ಮ ಅಣ್ಣ ಸಿದ್ದನಗೌಡ ಹಾಗೂ ಅವರ ಮಾವ ಸಾಹೆಬಗೌಡ ಅವರು ನನಗೆ ಮಗನೇ ಇವತ್ತು ಇವರು ಬಂದು ಬಿಡಿಸಿಕೊಂಡರು ಅಂತ ನಿನ್ನ ಜೀವ ಉಳಿದಿದೆ. ಇಲ್ಲದಿದ್ದರೆ ನಿನ್ನನ್ನು ಇಲ್ಲಿಯ ಕಲಾಸ ಮಾಡಿಬಿಡುತ್ತಿದ್ದೆವು ಅಂತ ನನಗೆ ಜೀವದ ಬೆದರಿಕೆ ಹಾಕಿ ಹೋದರು. ಕಾರಣ ಮಾನ್ಯರು ಇವರ ಮೇಲೆ ಕೇಸ್ ಮಾಡಬೇಕೆಂದು ಫಿಯರ್ಾಧಿ ಅಜರ್ಿ ಕೊಟ್ಟಿರುತ್ತೇನೆ.
ಅಂತಾ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 50/2020 ಕಲಂ 323,324,504,506, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 117/2020 ಕಲಂ 279, 337, 338 ಐಪಿಸಿ : ಇಂದು ದಿನಾಂಕ 13.07.2020 ರಂದು ಮಧ್ಯಾಹ್ನ 3:20 ಗಂಟೆಗೆ ಆರೋಪಿತನು ತನ್ನ ಟಂ ಟಂ ನಂಬರ ಕೆಎ-32-ಸಿ-0113 ನೇದರಲ್ಲಿ ಫಿರ್ಯಾದಿ ಮತ್ತು ಈ ಮೇಲ್ಕಂಡ ಗಾಯಾಳುದಾರರನ್ನು ಕೂಡಿಕೊಂಡು ಬುರಗಪಲ್ಲಿ ಗ್ರಾಮಕ್ಕೆ ಹೊಗುತ್ತಿದ್ದಾಗ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಂಕು-ಡೊಂಕಾಗಿ ಚಲಾಯಿಸಿಕೊಂಡು ಹೋಗಿ ನಿಂತ್ರಿಸಲು ಸಾಧ್ಯವಾಗದೇ ಒಮ್ಮಿಂದೊಮ್ಮೆಲೆ ಕಟ್ ಹೊಡೆದಿದ್ದರ ಫಲವಾಗಿ ಟಂ ಟಂ ವಾಹನವು ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಗಾಯಾಳುದಾರರಿಗೆ ಭಾರಿ ಮತ್ತು ಸಾಧಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಳಾಗಿದ್ದು ಆ ಬಗ್ಗೆ ಫಿರ್ಯಾದಿಯು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ:117/2020 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಕೆಂಭಾವಿ  ಪೊಲೀಸ ಠಾಣೆ ಗುನ್ನೆ ನಂ:- 113/2020 ಕಲಂ 341,323,504,506 ಸಂಗಡ 34 ಐ.ಪಿ.ಸಿ : ಇಂದು ದಿನಾಂಕ 13.07.2020 ರಂದು ಶ್ರೀ ಬಸವರಾಜ ತಂದೆ ಶರಣಪ್ಪ ಸದಬ ವ|| 39 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಪತ್ತೆಪೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೆನೆಂದರೆ ನಮ್ಮೂರ ಪಕ್ಕಕ್ಕೆ ನಮ್ಮೂರ ಮಲ್ಲನಗೌಡ ತಂದೆ ಶಂಕರಗೌಡ ಪಾಟೀಲ ಇವರ ಹೊಲ ಸವರ್ೆ ನಂಬರ 16/1, 12 ಎಕರೆ 24 ಗುಂಟೆ ಹೊಲ ಇರುತ್ತದೆ. 
             ಹೀಗಿದ್ದು ನಿನ್ನೆ ದಿನಾಂಕ 12/07/2020 ರಂದು 1.35 ಪಿ.ಎಮ್ ಸುಮಾರಿಗೆ ಸದರಿ ಹೊಲಕ್ಕೆ 1) ಮಲ್ಲನಗೌಡ ತಂದೆ ಶಂಕರಗೌಡ ಪಾಟೀಲ 2) ಶರಣಗೌಡ ತಂದೆ ಶಂಕರಗೌಡ ಪಾಟೀಲ 3) ಶಿವನಗೌಡ ತಂದೆ ಶಂಕರಗೌಡ ಪಾಟೀಲ ಮತ್ತು 4) ಶಂಕರಗೌಡ ತಂದೆ ಈರಣ್ಣಗೌಡ ಪಾಟೀಲ ಎಲ್ಲರೂ ಸಾ: ಪತ್ತೆಪೂರ ಹಾ;ವ: ಕೆಂಭಾವಿ ಇವರೆಲ್ಲರು ತಮ್ಮ ಹೊಲದ ಬಾಂದರಿಗೆ ತಂತಿಬೇಲಿ ಹಾಕುತ್ತಾ ರೋಡಿನ ಮೇಲೆ ಹಾಕುತ್ತಿದ್ದಾಗ ನಾನು ಯಾಕೆ ರೋಡಿನ ಮೇಲೆ ತಂತಿಬೇಲಿ ಹಾಕುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಎಲ್ಲರೂ ನನಗೆ ಎಲಾ ಸೂಳೆ ಮಗನೆ ನಮ್ಮ ಹೊಲದ ರಸ್ತೆ ಇದೆ ಇದು ಅದಕೆ ನೀನೆನು ಕೇಳುತ್ತಿ ಸೊಕ್ಕು ಬಹಾಳ ಆಗಿದೆ ಊರಲ್ಲಿ ನಿಂದು ಅಂತಾ ಅವಾಚ್ಯವಾಗಿ ಬೈಯುತ್ತಾ ಅವರ ಪೈಕಿ ಮಲ್ಲನಗೌಡ ತಂದೆ ಶಂಕರಗೌಡ ವತ್ತು ಈರಣಗೌಡ ತಂದೆ ಶಂಕರಗೌಡ ಪಾಟೀಲ ಇವರಿಬ್ಬರು ನನ್ನನ್ನು ತಡೆದು ನಿಲ್ಲಿಸಿ ಕೈಯಿಂದ ಕಪಾಳಕ್ಕೆ, ಬೆನ್ನಿಗೆ, ತಲೆಗೆ ಹೊಡೆಯುತ್ತಿದ್ದಾಗ ಅಲ್ಲೇ ರಸ್ತೆಯ ಮೇಲೆ ಹೊರಟಿದ್ದ ನಮ್ಮೂರ ಈರಣಗೌಡ ತಂದೆ ಬಸವಂತ್ರಾಯಗೌಡ ಪಾಟೀಲ ಮತ್ತು ಹಣಮಂತ್ರಾಯ ತಂದೆ ಅಡಿವೆಪ್ಪ ಬೈರಾಮಡಗಿ ಇವರಿಬ್ಬರು ಬಂದು ನನಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡರು. ನಂತರ ಇಬ್ಬರು ಹೊಡೆಯುವದನ್ನು ಬಿಟ್ಟು ಮಗನೆ ನಾವು ತಂತಿ ಬೇಲಿ ಎಲ್ಲಿಯಾದರೂ ಹಾಕುತ್ತೇವೆ, ಇನ್ನೊಮ್ಮೆ ಕೇಳಲು ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ಸದರಿ ಜಗಳದಲ್ಲಿ ನನಗೆ ಯಾವುದೆ ಗಾಯ ಪೆಟ್ಟು ಆಗದೆ ಇರುವದರಿಂದ ಆಸ್ಪತೆಗೆ ತೊರಿಸಿಕೊಂಡಿರುವದಿಲ್ಲ. ಈ ವಿಷಯದ ಬಗ್ಗೆ ಮನೆಯಲ್ಲಿ  ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ 4 ಜನರು ನನಗೆ ತಡೆದು ನಿಲ್ಲಿಸಿ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದು ಒಳಪೆಟ್ಟು ಪಡಿಸಿ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 113/2020 ಕಲಂ: 341,323,,504,506 ಸಂಗಡ 34 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 114/2020 ಕಲಂ: 32, 34 ಕೆ. ಇ ಯಾಕ್ಟ : ಇಂದು ದಿನಾಂಕ:-13/07/2020 ರಂದು 2.45 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ: 13/07/2020 ರಂದು 1.00 ಪಿ.ಎಮ್ಕ್ಕೆ ಮಾಹಿತಿ ಬಂದಿದ್ದೆನೆಂದರೆ ಯಡಿಯಾಪೂರ ರಸ್ತೆಯ ಮುರಕನಾಳ ಕ್ಯಾಂಪ ಡಿಸ್ಟ್ರಿಬ್ಯೂಟರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಯಾವದೇ ಲೈಸನ್ಸ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಭಾತ್ಮಿ ಬಂದ ಮೇರೆಗೆ ನಾನು ಹಾಗೂ ಸಿಬ್ಬಂದಿಯವರಾದ  1] ಭೀರಪ್ಪ ಪಿಸಿ 195 2) ಸಂಗಮೇಶ ಪಿಸಿ-244 ಹಾಗೂ ಚಂದಪ್ಪ ಪಿಸಿ-316 ರವರಿಗು ಸದರಿ ವಿಷಯ ತಿಳಿಸಿ ಭೀರಪ್ಪ ಪಿಸಿ-195 ರವರ ಮುಖಾಂತರ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 36 ಜಾ|| ಪ ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 46 ಜಾ|| ಪ ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರಿಗೆ ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33.ಜಿ/0074 ನೇದ್ದರಲ್ಲಿ ಠಾಣೆಯಿಂದ 11.15 ಪಿ.ಎಮ್ಕ್ಕೆ ಹೊರಟು 11.25 ಪಿ.ಎಮ್ಕ್ಕೆ ಸದರಿ ಮುರಕನಾಳ ಕ್ಯಾಂಪ ಡಿಸ್ಟ್ರಿಬುಟರ ಹತ್ತಿರ ಜಾಲಿ ಗಿಡದ ಪಕ್ಕದಲ್ಲಿ ಜೀಪ ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಮುರಕನಾಳ ಕ್ಯಾಂಪ ಡಿಸ್ಟ್ರಿಬುಟರ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸರಾಯಿ ಮಾರಾಟ ಮಾಡುವದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 1.30 ಪಿಎಮ್ಕ್ಕೆ ದಾಳಿ ಮಾಡಲಾಗಿ  ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ನಮ್ಮನ್ನು ನೋಡಿ ಓಡಿ ಹೋದನು. ಸದರಿವನ ಹೆಸರು ವಿಳಾಸ ವಿಚಾರಿಸಲಾಗಿ ಮಡಿವಾಳಪ್ಪ ತಂದೆ ಚಂದಪ್ಪ ಕಲಕೇರಿ ಸಾ|| ಕೆಂಭಾವಿ ಅಂತ ಗೊತ್ತಾಗಿರುತ್ತದೆ. ನಂತರ ಸದರಿ ಸ್ಥಳದಲ್ಲಿದ್ದ ಸರಾಯಿ ಪರಿಶೀಲಿಸಿ ನೋಡಲಾಗಿ 90 ಎಮ್ಎಲ್ನ 50 ಓರಿಜಿನಲ್ ಚ್ವಾಯೀಸ್ ಪೌಚಗಳು ಇದ್ದು ಒಂದು ಪೌಚಿನ ಬೆಲೆ ಬೆಲೆ 35.13 ರೂ. ಇದ್ದು ಒಟ್ಟು ಪೌಚಗಳ ಕಿಮ್ಮತ್ತು 1756.5/- ರೂ ಆಗುತ್ತಿದ್ದು, ಸದರಿ ಸರಾಯಿ ಪೌಚಗಳನ್ನು ಇಂದು ದಿನಾಂಕ 13/07/2020 ರಂದು 1.30 ಪಿಎಮ್ದಿಂದ 2.30 ಪಿಎಮ್ದವರೆಗೆ ಪಂಚರ ಸಮಕ್ಷಮ ಜಪ್ತಪಡಿಸಿಕೊಂಡು ಸದರಿ ಸರಾಯಿ ಪೌಚ್ಗಳಲ್ಲಿ ಒಂದು ಸರಾಯಿ ಪೌಚನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಪಂಚರ ಸಮಕ್ಷಮದಲ್ಲಿ ಪ್ರತೇಕವಾಗಿ ಬಿಳಿ ಬಟ್ಟೆಯಲ್ಲಿ ಹೊಲೆದು ಅದರ ಮೇಲೆ ಇಂಗ್ಲೀಷ ಅಕ್ಷರದ ಏ ಅಂತ ಶೀಲ ಮಾಡಿ ಜಪ್ತಪಡಿಸಿಕೊಂಡಿದ್ದು ಇರುತ್ತದೆ. ಈ ಮೇಲೆ ನಮೂದಿಸಿದ ಆರೋಪಿತನು ಸರಾಯಿ ಮಾರಾಟ ಮಾಡಲು ಯಾವದೆ ಪರವಾನಿಗೆ ಪತ್ರ [ಲೈಸನ್ಸ] ಇಲ್ಲದೇ ಮಾರಾಟ ಮಾಡುತ್ತಿದ್ದಾಗ ಓಡಿ ಹೋದ ಆರೋಪಿತನ ಮೇಲೆ ಹಾಗೂ ಮುದ್ದೆಮಾಲು ಸಮೇತ 2.45 ಪಿ.ಎಂಕ್ಕೆ ಠಾಣೆಗೆ ಬಂದು ಓಡಿ ಹೋದ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಈ ಮೂಲಕ  ಆದೇಶಿಸಿದ ಮೇರೆಗೆ ಠಾಣೆ ಗುನ್ನೆ ನಂ 114/2020 ಕಲಂ 32,34 ಕೆ.ಇ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 57/2020 ಕಲಂ. ಮನುಷ್ಯಕಾಣೆ : ಇಂದು ದಿನಾಂಕ; 13/07/2020 ರಂದು 12-45 ಪಿಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀ ವಿನೋದಕುಮಾರ ತಂದೆ ಮೋಹನರೆಡ್ಡಿ ಪೊಲೀಸ ಪಾಟೀಲ ವ;30 ಜಾ; ಲಿಂಗಾಯತ  ಉ; ಒಕ್ಕಲುತನ ಸಾ; ಎಲ್ಹೇರಿ ತಾ; ಗುರುಮಿಠಕಲ್ ಹಾ.ವ; ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆ-ತಾಯಿಯವರಿಗೆ ನಾವು ಇಬ್ಬರು ಗಂಡು ಮಕ್ಕಳಿದ್ದು ನಾನು ಮತ್ತು ನಮ್ಮ ತಮ್ಮ ವಿಜಯ ಪಾಟೀಲ ತಂದೆ ಮೋಹನರೆಡ್ಡಿ ಪೊಲೀಸ ಪಾಟೀಲ ವ;28 ಜಾ; ಲಿಂಗಾಯತ ಉ; ಸಿನಿಯರ ಸೂಪರವೈಜರ  ಸಾ; ಎಲ್ಹೇರಿ ತಾ; ಗುರುಮಿಠಕಲ್ ಹಾ.ವ; ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ ಇದ್ದು ಹಿಗೇ 3 ವರ್ಷಗಳಿಂದ ನಾವು ಕುಟುಂಬ ಸಮೇತರಾಗಿ ಉಪಜೀವನ ಸಾಗಿಸಲು ಯಾದಗಿರಿಗೆ ಬಂದು ಯಾದಗಿರಿಯ ಮಾತಾಮಾಣಿಕೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿರುತ್ತೇವೆ. ಹಿಗೀದ್ದು ನನ್ನ ತಮ್ಮ ವಿಜಯ ಪಾಟೀಲ ಈತನು ಮಳಖೇಡದಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯಲ್ಲಿ ಸಿನಿಯರ ಸೂಪರವೈಸರ ಅಂತಾ ಕಳೆದ ಒಂದು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದು 3 ತಿಂಗಳ ಹಿಂದೆ ತನ್ನ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದನು. ಹಿಗೀದ್ದು ದಿನಾಂಕ; 04/07/2020 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ನಮ್ಮ ತಂದೆ ಮೋಹನರೆಡ್ಡಿ ಹಾಗೂ ತಾಯಿ ದೇವಿಂದ್ರಮ್ಮ ಮನೆಯಲ್ಲಿರುವಾಗ ನನ್ನ ತಮ್ಮ ವಿಜಯ ಪಾಟೀಲ ಈತನು ನಮಗೆ ತಿಳಿಸಿದ್ದೆನೆಂದರೆ, ವಿಜಯಪುರದಲ್ಲಿರುವ ತನ್ನ ಗೇಳೆಯ ಪ್ರವೀಣ ತಂದೆ ಅಶೋಕ ನಾಟೇಕಾರ ಈತನಿಗೆ ಬೆಳಗಾವಿಯಲ್ಲಿ ಕೆಲಸವಿದ್ದು ಇಬ್ಬರೂ ಕೂಡಿಕೊಂಡು ಹೋಗಿ ಬರೋಣಾ ಬಾ ಅಂತಾ ನನಗೆ ಕರೆದಿದ್ದು ಆದ ಕಾರಣ ನಾನು ವಿಜಯಪುರಕ್ಕೆ ಹೋಗಿ ಅಲ್ಲಿಂದ ಪ್ರವೀಣ ಹಾಗೂ ನಾನು ಇಬ್ಬರು ಕೂಡಿಕೊಂಡು ಬೆಳಗಾವಿಗೆ ಹೋಗಿ ಬರುತ್ತೇವೆ ಅಂತಾ ಹೇಳಿ ಮನೆಯಿಂದ ಬ್ಯಾಗಿನಲ್ಲಿ ತನ್ನ ಬಟ್ಟೆಯನ್ನು ಇಟ್ಟುಕೊಂಡು ನನಗೆ  ಯಾದಗಿರಿಯ ಭ್ರಷ್ಟಾಚಾರ ನಿಗ್ರಹ ದಳ ಕಛೇರಿಯ ಹತ್ತಿರ ಬಿಡು ಅಲ್ಲಿಂದ ನಾನು ಮತ್ತು ಶ್ರೀ ರಾಜಶೇಖರ ಬಿರಾದಾರ ಪಿ.ಐ ಎ.ಸಿ.ಬಿ ರವರೊಂದಿಗೆ ವಿಜಯಪುರಕ್ಕೆ ಹೋಗುತ್ತೇನೆ ಅಂತಾ ಹೇಳಿದಾಗ ನಾನು ಅವನಿಗೆ  ಮೋಟಾರ ಸೈಕಲ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಹತ್ತಿರ ಬಿಟ್ಟು ಮನೆಗೆ ಹೋದೆನು. ನಂತರ ದಿನಾಂಕ; 05/07/2020 ರಂದು ನನ್ನ ತಮ್ಮನ ಮೊಬೈಲ ನಂ.7676901091 ನೇದ್ದಕ್ಕೆ ಫೋನ ಮಾಡಲು ಅವನ ಮೊಬೈಲ ಸ್ವೀಚ ಆಫ್ ಬರುತ್ತಿತ್ತು ತುಂಬಾ ಸಲ ಫೋನ ಮಾಡಿದ್ದು ಆದರೆ ಫೋನ ಸ್ವೀಚ ಆಫ ಬರುತ್ತಿತ್ತು. ಆಗ ನಾವು ದಿನಾಂಕ; 07/07/2020 ರಂದು 10-30 ಎಎಮ್ ಸುಮಾರಿಗೆ ನಾವು ಶ್ರೀ ರಾಜಶೇಖರ ಬಿರಾದಾರ ಪಿ.ಐ ಎ.ಸಿ.ಬಿ ರವರಿಗೆ ಫೋನ ಮಾಡಿ ನನ್ನ ತಮ್ಮನ ಫೋನ ಸ್ವೀಚ ಆಫ್ ಬರುತ್ತಿದೆ ಅವನು ಎಲ್ಲಿದ್ದಾನೆ ಅಂತಾ ತಿಳಿಯುತ್ತಿಲ್ಲ ಅಂತಾ ಅಂದಾಗ ಅವರು ವಿಜಯ ಪಾಟೀಲ ಈತನು ವಿಜಯಪುರದ ಲಲಿತ ಮಹಲ್ ಲಾಡ್ಜದಲ್ಲಿ ವಾಸವಿರುತ್ತಾನೆ ಅಂತಾ ತಿಳಿಸಿದರು. ಆದರೆ ವಿಜಯ ಪಾಟೀಲ ಈತನ ಮೊಬೈಲ ಸ್ವೀಚ ಆಫ್ ಬರುತ್ತಿದ್ದು ನಮಗೆ ಭಯ ಆಗಿ ನಾನು ಮತ್ತು ನಮ್ಮ ದೊಡ್ಡಮ್ಮನ ಮಗನಾದ ಅಮೀನರೆಡ್ಡಿ ತಂದೆ ಶರಣರೆಡ್ಡಿ ಇಬ್ಬರೂ ಕೂಡಿಕೊಂಡು ದಿನಾಂಕ; 08/07/2020 ರಂದು ವಿಜಯಪುರಕ್ಕೆ ಹೋಗಿ ಲಲಿತ ಮಹಲ್ ಲಾಡ್ಜದಲ್ಲಿ ನಮ್ಮ ತಮ್ಮನ ಬಗ್ಗೆ ವಿಚಾರಿಸಲು ಅವರು ಮಾಹಿತಿ ನೀಡಿದ್ದೆನೆಂದರೆ, ವಿಜಯ ಪಾಟೀಲ ಮತ್ತು ಪ್ರವೀಣ ನಾಟೇಕಾರ ಇವರು  ದಿನಾಂಕ;04/07/2020 ರಂದು 10-30 ಪಿಎಮ್ ಕ್ಕೆ ಲಾಡ್ಜ ಬುಕ ಮಾಡಿಕೊಂಡು ದಿನಾಂಕ;06/07/2020 ರಂದು ರಾತ್ರಿ 8-40 ಗಂಟೆ ಸುಮಾರಿಗೆ ಲಾಡ್ಜದಿಂದ ಚೆಕ್ ಔಟ್ ಆಗಿ ಹೋಗಿದ್ದು ಲಾಡ್ಜ ಪ್ರವೀಣ ನಾಟೇಕಾರ  ಈತನ ಹೆಸರಿನಲ್ಲಿ ಬುಕ ಮಾಡಿರುತ್ತಾರೆ ಅಂತಾ ಮಾಹಿತಿ ತಿಳಿಸಿದರು. ನಂತರ ನಾವು ವಿಜಯಪುರದ ಪ್ರವೀಣ ಈತನ ಮನೆಗೆ ಹೋಗಿ ವಿಚಾರಿಸಲು ಅವರು ದಿನಾಂಕ; 06/07/2020 ರಂದು 9-00 ಪಿಎಮ್ ಸುಮಾರಿಗೆ ಪ್ರವೀಣ ಈತನು ಮನೆಗೆ ಬಂದು ಬೆಳಗಾವಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾನೆ ಅಂತಾ ತಿಳಿಸಿದರು. ನಂತರ ನಾವು ನನ್ನ ತಮ್ಮ ವಿಜಯ ಪಾಟೀಲ ಹಾಗೂ ಪ್ರವೀಣ ನಾಟೇಕಾರ ಈತನ ಮೊಬೈಲಗೆ ಕರೆ ಮಾಡಲು ಇಬ್ಬರ ಮೊಬೈಲ ಸ್ವೀಚ ಆಫ್ ಬರುತ್ತಿತ್ತು. ನನ್ನ ತಮ್ಮ ವಿಜಯ ಪಾಟೀಲ ಈತನು ಬೆಳಗಾವಿಯಲ್ಲಿ ಪ್ರವೀಣ ಈತನ ಕೆಲಸವಿದ್ದು ಇಬ್ಬರು ಕೂಡಿಕೊಂಢು ಹೋಗಿ ಬರುತ್ತೇವೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬರದೇ ಕಾಣೆಯಾಗಿರುತ್ತಾನೆ. ಆದ್ದರಿಂದ ಎಲ್ಲಾಕಡೆ ವಿಚಾರಿಸಿ ಹುಡುಕಾಡಲಾಗಿ ನನ್ನ ತಮ್ಮ ವಿಜಯ ಪಾಟೀಲ ಈತನು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುತ್ತಿದ್ದು  ಕಾಣೆಯಾದ ನನ್ನ ತಮ್ಮನ ಚಹರೆ ಪಟ್ಟಿ :- ಸಾದ ಕಪ್ಪು ಬಣ್ಣ, ದುಂಡನೆಯ ಮುಖ,  ಎತ್ತರ 5 ಪೀಟ್ 6 ಇಂಚು ಎತ್ತರ, ಸಧೃಢವಾದ ಮೈಕಟ್ಟು, ಮೈಮೇಲೆ ಬಿಳಿಬಣ್ಣದ ಚಕ್ಸಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ನನ್ನ ತಮ್ಮ ವಿಜಯ ಪಾಟೀಲ ತಂದೆ ಮೋಹನರೆಡ್ಡಿ ಪೊಲೀಸ ಪಾಟೀಲ ಈತನು ಬೆಳಗಾವಿಯಲ್ಲಿ ಪ್ರವೀಣ ಈತನ ಕೆಲಸವಿದ್ದು ಇಬ್ಬರು ಕೂಡಿಕೊಂಢು ಹೋಗಿ ಬರುತ್ತೇವೆ ಅಂತಾ ಹೇಳಿ ಮನೆಯಿಂದ ಹೋಗಿದ್ದು ಇಲ್ಲಿಯವರೆಗೆ ಬರದೇ ಕಾಣೆಯಾಗಿದ್ದು, ಕಾಣೆಯಾದ ನನ್ನ ತಮ್ಮನನ್ನು ಪತ್ತೆ  ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.57/2020 ಕಲಂ. ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 26/2020  ಕಲಂ 279,  337 ಐಪಿಸಿ : ಇಂದು  ದಿನಾಂಕ 13/07/2020 ರಂದು ರಾತ್ರಿ ಸಮಯ 10-30 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಈಶಪ್ಪ ತಂದೆ ಭೀಮರಾಯ ಗುಂಜನೂರು ವಯ;25 ವರ್ಷ, ಉ;ಗೌಂಡಿ ಕೆಲಸ, ಜಾ; ಬೇಡರು, ಸಾ;ಬೊಮ್ಮನಳ್ಳಿ, ತಾ;ಚಿತ್ತಾಪುರ ಇವರು ಠಾಣೆಗೆ ಖುದ್ದಾಗಿ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿಯನ್ನು ನೀಡಿದ್ದರ ಸಾರಾಂಶವೇನೆಂದರೆ ಇಂದು ದಿನಾಂಕ 13/07/2020 ರಂದು ಬೆಳಿಗ್ಗೆ ನನ್ನ ವಯಕ್ತಿಕ ಕೆಲಸದ ನಿಮಿತ್ಯ ನನ್ನ ಸ್ನೇಹಿತನಾದ ಮೀರಾರೆಡ್ಡಿ ತಂದೆ ಹೇಮರೆಡ್ಡಿ ಹತ್ತಿಕುಣಿ ಸಾ;ಬೊಮ್ಮನಳ್ಳಿ ಇವರಿಗೆ ನನ್ನ ಸಂಗಡ ಕರೆದುಕೊಂಡು ಅವರ ಮೋಟಾರು ಸೈಕಲ್ ನಂಬರ ಕೆಎ-56, ಎಚ್-2365 ನೇದ್ದರ ಮೇಲೆ ನಮ್ಮೂರಿನಿಂದ ಯಾದಗಿರಿಗೆ ಬಂದಿದ್ದೆವು. ಯಾದಗಿರಿಗೆ ಬಂದು ನಮ್ಮ ಕೆಲಸ ಮುಗಿಸಿಕೊಂಡು ಮರಳಿ ಯಾದಗಿರಿಯಿಂದ ನಮ್ಮೂರಿಗೆ ಹೋಗುತ್ತಿದ್ದಾಗ ಮೋಟಾರು ಸೈಕಲನ್ನು ಮೀರಾರೆಡ್ಡಿ ಈತನೇ ನಡೆಸಿಕೊಂಡು ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಮುದ್ನಾಳ ಪೆಟ್ರೋಲ್ ಬಂಕ್ ಹತ್ತಿರ ನಮ್ಮ ಹಿಂದಿನಿಂದ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ಹಿಂದನಿಂದ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ನಾವಿಬ್ಬರು ಮೊಟಾರು ಸೈಕಲ್ ಮೇಲಿಂದ ರಸ್ತೆಯ ಮೇಲೆ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ಬಲಗೈ ಮೊಣಕೈಗೆ, ಮುಂಗೈಗೆ, ಭುಜಕ್ಕೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಇರುತ್ತವೆ ಎದ್ದು ನೋಡಲು ಮೀರಾರೆಡ್ಡಿ ಈತನಿಗೆ ಕೂಡ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಇರುತ್ತದೆ. ನಮಗೆ ಅಪಘಾತಪಡಿಸಿದ ವಾಹನವು ಬುಲೆರೋ ಗೂಡ್ಸ್ ವಾಹನವಿದ್ದು ಅದರ ನಂಬರ ಕೆಎ-33, ಎ-7776 ಅಂತಾ ಇರುತ್ತದೆ ಅದರ ಚಾಲಕನು ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂದೆ ನಿಂಗಪ್ಪ ದುಪ್ಪಲ್ಲಿ  ಸಾ;ಉಳ್ಳೆಸೂಗುರು ಅಂತಾ ತಿಳಿಸಿರುತ್ತಾನೆ. ಈ ಅಪಘಾತವು ಇಂದು ದಿನಾಂಕ 13/07/2020 ರಂದು ಸಾಯಂಕಾಲ 4-30 ಪಿ.ಎಂ.ಕ್ಕೆ ಜರುಗಿದ್ದು ಇರುತ್ತದೆ. ಈ ಘಟನೆ ಬಗ್ಗೆ ನನ್ನ ಅಣ್ಣನಾದ ಶರಣರೆಡ್ಡಿ ತಂದೆ ಅಮೀನರೆಡ್ಡಿ ಹತ್ತಿಕುಣಿ ಇವರಿಗೆ ಪೋನ್ ಮಾಡಿ ಘಟನೆಯ ಸ್ಥಳಕ್ಕೆ ಬರಲು ತಿಳಿಸಿರುತ್ತೇನೆ. ಸ್ವಲ್ಪ ಸಮಯದ ನಂತರ ನನ್ನ ಅಣ್ಣ ಶರಣರೆಡ್ಡಿ ಇವರು ತಮ್ಮ ಸಂಗಡ ವೈಜನಾಥರೆಡ್ಡಿ ತಂದೆ ಸಿದ್ದಣ್ಣಗೌಡ ಇವರಿಗೆ ಕರೆದುಕೊಂಡು ಬಂದಿರುತ್ತಾರೆ. ನಮಗೆ ಅಪಘಾತಪಡಿಸಿದ ವಾಹನದ ಚಾಲಕನು ಅಪಘಾತದಲ್ಲಿ ಆದ ಗಾಯಗಳ ಚಿಕಿತ್ಸೆಯ ವೆಚ್ಚವನ್ನು ಕೊಡುತ್ತೇನೆ ಅಂತಾ ನಮಗೆ ತಿಳಿಸಿ ಇಲ್ಲಿಯವರೆಗೆ ಕೊಡದ ಕಾರಣ ನಾವು ತಡವಾಗಿ ಠಾಣೆಗೆ ಬಂದು ಈ ದೂರನ್ನು ಸಲ್ಲಿಸುತ್ತಿದ್ದು ನಮಗೆ ಅಪಘಾತ ಪಡಿಸಿದ ಬುಲೇರೋ ವಾಹನ ನಂಬರ ಕೆಎ-33, ಎ-7776 ನೇದ್ದರ ಚಾಲಕ ರಮೇಶ ಈತನ ಮೇಲೆ ಕಾನೂನಿನ ಮುಂದಿನ ಕ್ರಮ ಜರುಗಿಸಿರಿ ಅಂತಾ ದೂರು ಅಜರ್ಿ ಇರುತ್ತದೆ ಮತ್ತು ನಮಗೆ ರಸ್ತೆ ಅಪಘಾತದಲ್ಲಾದ ಗಾಯದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳಿಸಿಕೊಡಬೇಕೆಂದು ಮಾನ್ಯರವರಲ್ಲಿ ವಿನಂತಿ ನೀಡಿದ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.26/2020 ಕಲಂ 279, 337 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!