ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/07/2020

By blogger on ಶನಿವಾರ, ಜುಲೈ 11, 2020




                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/07/2020 
                                                                                                               
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ. 18/2020 ಕಲಂ 174 ಸಿ.ಆರ್.ಪಿ.ಸಿ : ಪಿರ್ಯಾಧಿಯ ಗಂಡನಾದ ಮೃತ ಪ್ರಕಾಶ ತಂದೆ ಲಕ್ಷ್ಮಣ್ ಚವ್ಹಾಣ್ ವ|| 21 ವರ್ಷ ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ಮಲ್ಲಾಪೂರ ತಾಂಡಾ ಈತನು ನಿನ್ನೆ ದಿನಾಂಕ 10.07.2020 ಸಂಜೆ 06.00 ಗಂಟೆಗೆ ತಮ್ಮ ಹೊಲದಲ್ಲಿ ಇರುವ ಎತ್ತುಗಳಿಗೆ ಮೇವು ಹಾಕಿ ಹೊಲಕ್ಕೆ ನೀರು ಬಿಟ್ಟು ಬರುತ್ತೇನೆ ಅಂತಾ ಮಿನಸಪೂರ ಸಿಮಾಂತರದ ತಮ್ಮ ಹೊಲಕ್ಕೆ ಹೋದವನು ರಾತ್ರಿ ಸುಮಾರು 10.30 ಗಂಟೆಗೆ ಮನೆಗೆ ಬಂದು ಸಂಜೆ 06.30 ಗಂಟೆಯ ಸುಮಾರಿಗೆ ಹೊಲದಲ್ಲಿ ಎತ್ತುಗಳಿಗೆ ಮೇವು ಹಾಕಿ ಹೊಲದಲ್ಲಿ ನೀರು ಕಟ್ಟುತ್ತಿದ್ದಾಗ ಆಕಸ್ಮಕವಾಗಿ ಪೋದೆಯಲ್ಲಿದ್ದ ಹಾವು ಎಡಗಾಲ ಕೀಲಿನಲ್ಲಿ ಕಚ್ಚಿದ್ದು ನಂತರ ನಾನು ಅದೇನು ಮಾಡುತ್ತದೆ ಅಂತಾ ನಿರ್ಲಕ್ಷ್ಯ ವಹಿಸಿ ಬೇವಿನ ತಪ್ಪಲ ತಿಂದಿರುತ್ತೇನೆ. ಸುಮಾರು ರಾತ್ರಿ 10.00 ಗಂಟೆಯ ಸುಮಾರಿಗೆ ನನಗೆ ತಲೆ ಸುತ್ತಿದಂತಾಗಿದ್ದರಿಂದ ಅಲ್ಲಿಂದ ಮನೆ ಕಡೆಗೆ ಬಂದಿರುತ್ತೇನೆ. ನನಗೆ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಅಂತಾ ತಿಳಿಸಿದ ಮೇರೆಗೆ ಪಿರ್ಯಾದಿ ಮತ್ತು ಇತರರು ಕೂಡಿಕೊಂಡು ಮೃತನನ್ನು ಚಿಕಿತ್ಸೆ ಕುರಿತು ಸಮುದಾಯ ಆರೋಗ್ಯ ಕೇಂದ್ರ ಗುರುಮಠಕಲಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು ಮೃತನು ಚಿಕಿತ್ಸೆ ಹೊಂದುತ್ತಾ ಚಿಕಿತ್ಸೆ ಫಲಕಾರಿಗದೇ ಇಂದು ದಿನಾಂಕ 11.07.2020 ರಂದು ಸಮಯ 00.30 ಗಂಟೆಗೆ ಮೃತಪಟ್ಟಿದ್ದು ಆ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತಾ ಪಿರ್ಯಾಧಿ ನೀಡಿದ ಬಾಯಿಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಕ್ರಮ ಕೈಗೊಂಡೆನು.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 95/2020  ಕಲಂ. 279 ಐಪಿಸಿ : ಇಂದು ದಿನಾಂಕ 11.07.2020 ರಂದು 11-00 ಎ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಬಂದು ಹೇಳಿಕೆ ನೀಡಿ ಗಣಕಯಂತ್ರದಲ್ಲಿ ಟೈಪ  ಮಾಡಿಸಿದ ಹೇಳಿಕೆ ಸಾರಾಂಶವೆನೆಂದರೆ, ಹೀಗಿದ್ದು ದಿನಾಂಕ. 09.07.2020 ರಂದು ಮದ್ಯಾಹ್ನ ನಮ್ಮ ಸಂಬಂಧಿಕರಿಗೆ ಅರಾಮವಿಲ್ಲದ ಕಾರಣ ಮಾತಾಡಿಸಲು ನಾನು ಮತ್ತು ನಮ್ಮ ಕಾರ ಚಾಲಕ ರಾಯಚೂರಿಗೆ ಮಾರುತಿ ಎಸ್ ಸುಪ್ರೋ ಕಂಪನಿ ಕೆ.ಎ 33 ಎಮ್ 7951 ನೇದ್ದರ ಮೇಲೆ ಹೋಗುವಾಗ ಯಾದಗಿರಿ ರಾಯಚೂರ ಮುಖ್ಯ ರಸ್ತೆ ಮೇಲೆ ರಾಚನಳ್ಳಿ ಕ್ರಾಸ ಹತ್ತಿರ ಕಾರ ಚಾಲಕನಾದ ಚಂದ್ರಶೇಖರ ತಂದೆ ಬಸವರಾಜಪ್ಪ ಪೊಲೀಸ್ ಪಾಟೀಲ ಇತನು ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಾಗ ಕಾರಿಗೆ ಅಡ್ಡವಾಗಿ ರಸ್ತೆಯ ಮೇಲೆ ಎಮ್ಮೆ ಬಂದಿದ್ದು ಅದನ್ನು ತಪ್ಪಿಸಲು ಹೋದಾಗ ಕಾರ ನಿಯಂತ್ರಣ ತಪ್ಪಿ ರೋಡಿನ ಕೆಳಕ್ಕೆ ಬಿದಿದ್ದು ಅಪಘಾತ ಸಂಭವಿಸಿರುತ್ತದೆ. ಸದರಿ ಅಪಘಾತದಲ್ಲಿ ಕಾರಗೆ ಎದುರುಗಡೆ ಜಖಂಗೊಂಡು, ಕಾರಿನ ಮುಂದಿನ ಭಾಗ, ಇಂಜಿನ, ಕಾರಿನ ಹಿಂದಿನ ಭಾಗ ಹಾಗೂ ಕಾರಿನ ಏರಬ್ಯಾಗ ಡ್ಯಾಮೇಜ್ ಆಗಿರುತ್ತದೆ. ಹೆಡಲೈಟ್ ಮತ್ತು ಗ್ಲಾಸ ಒಡೆದು ನಷ್ಟವಾಗಿರುತ್ತದೆ. ಹಾಗೂ ಸದರಿ ಕಾರ ಸಂಪೂರ್ಣ ಜಖ: ಆಗಿರುತ್ತದೆ. ಸದರಿ ಅಪ
 ಚಾಲಕನಾದ  ಚಂದ್ರಶೇಖರ ತಂದೆ ಬಸ ಘಾತದಲ್ಲಿ ಕಾರಿನ ಚಾಲಕ ಮತ್ತು ನನಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ. 
    ಸದರಿ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದಾಗಿ ಚಲಾಯಿಸಿ ಅಪಘಾತಪಡಿಸಿದ ವರಾಜಪ್ಪ ಪೊಲೀಸ್ ಪಾಟೀಲ ವಯ: 41 ವರ್ಷ, ಜಾ: ಲಿಂಗಾಯತ  ಉ: ಚಾಲಕ  ಸಾ: ಕರಡಿಗುಡ್ಡ ತಾ|| ದೇವದುರ್ಗ ಜಿ|| ರಾಯಚೂರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇಂದು ಠಾಣೆಗೆ ಬಂದು ಹೇಳಿಕೆ ನೀಡಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ್ದು ಅದೆ.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 189/2020. ಕಲಂ. 279.338 ಐ.ಪಿ.ಸಿ. & 187 ಐಎಂವಿ ಯಾಕ್ಟ : ಇಂದು ದಿನಾಂಕ: 11/07/2020 ರಂದು 14-00 ಗಂಟೆಗೆ ಪಿಯರ್ಾದಿ ಶ್ರೀ ಹುಸೇನಬಾಷಾ ತಂದೆ ಮಕ್ತುಮಸಾಬ ನದಾಫ್ ವ|| 35 ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಜೈನಾಮಸಿದಿ ಹತ್ತಿರ ಶಹಾಪುರ ಹಾ||ವ|| ಬಿದರಾಣಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 10/07/2020 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಾವ ಹುಸ್ಮಾನಸಾಬ ತಂದೆ ಸೋಫಿಸಾಬ ನದಾಫ ನನ್ನ ತಮ್ಮ ಖಾಜಾಲಾಲ್ ತಂದೆ ಮಕ್ತುಮಸಾಬ ನದಾಫ ಮೂರುಜನರು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮೂರ ಅಯ್ಯಪ್ಪ ತಂದೆ ಸಾಬಣ್ಣ ಜೋಳದಡಿಗಿ ಈತನು ನಮ್ಮ ಮಾವನ ಹತ್ತಿರ ಬಂದು ನನಗೆ ಮೈಯಲ್ಲಿ ಆರಾಮ ಇಲ್ಲಾ ದೋರನಳ್ಳಿ ದವಾಖಾನೆಗೆ ಹೋಗಿ ಬರೋಣ ಅಂತ ತಿಳಿಸಿದ್ದರಿಂದ ನನ್ನ ಮಾವ ಉಸ್ಮಾನಸಾಬ ಈತನು ಸರಿ ಹೋಗಿ ಬರೋಣ ಅಂತ ತಿಳಿಸಿ ನನ್ನ ಮಾವ ಉಸ್ಮಾನ ಸಾಬ ಈತನು ತನ್ನ ಮೋಟರ್ ನಂಬರ ಕೆಎ-33ಎಲ್-2604 ನ್ನೇದ್ದನ್ನು ತೆಗೆದುಕೊಂಡು ದೋರನಳ್ಳಿ ಕಡೆಗೆ ಹೋದರು ನನ್ನ ಮಾವ ಉಸ್ಮಾನಸಾಬ ಈತನು ಮೋಟರ್ ಸೈಕಲ್ ನಡೆಸುತ್ತಿದ್ದನು. ಅಯ್ಯಪ್ಪನು ನನ್ನ ಮಾವ ಉಸ್ಮಾನಸಾಬನ ಹಿಂದೆ ಮೋಟರ್ ಸೈಕಲ್ ಮೇಲೆ ಕುಳಿತ್ತಿದ್ದನು. ಸಾಯಂಕಾಲ 7-40 ಗಂಟೆಗೆಯ ಸುಮಾರಿಗೆ ನಾನು ನನ್ನ ತಮ್ಮ ಖಾಜಾಲಾಲ ತಂದೆ ಮಕ್ತುಮಸಾಬ ಇಬ್ಬರು ನಮ್ಮ ಮನೆಯ ಮುಂದೆ ಇದ್ದಾಗ ನನ್ನ ಮಾವ ಉಸ್ಮಾನಸಾಬ ಈತನು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಬಿರಾಣಿಗ್ರಾಮದಿಂದ ದೋರನಳ್ಳಿಗೆ ನನ್ನ ಮೋಟರ್ ಸೈಕಲ್ ಮೇಲೆ ಹೋಗುವಾಗ 7-30 ಗಂಟೆಯ ಸುಮಾರಿಗೆ ಬಸವರಾಜ ಜಂಗಳಿ ಇವರ ಹೋಲದ ಹತ್ತಿರ ದೋರನಳ್ಳಿ ಹಳ್ಳ ಅಂದಾಜು 400 ಮೀಟರ್ ಇನ್ನು ಮುಂದೆ ದೋರನಳ್ಳಿ ಕಡೆಗೆ ಇರುವಾಗ ಒಂದು ಟ್ರ್ಯಾಕ್ಟರ್ ಚಾಲಕನು ದೋರನಳ್ಳಿ ಕಡೆಯಿಂದ ತನ್ನ ಟ್ರ್ಯಾಕ್ಟರ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲ್ಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ನನಗೆ ಮತ್ತು ಅಯ್ಯಪ್ಪನಿಗೆ  ಗಾಯಗಳು ಆಗಿರುತ್ತದೆ ಅಂತ ತಿಳಿಸಿದ್ದರಿಂದ ನಾನು ಮತ್ತು ನನ್ನ ತಮ್ಮ ಖಾಜಾಲಾಲ್ ತಂದೆ ಮಕ್ತುಮಸಾಬ ಇಬ್ಬರು ಅಪಘಾತ ಸ್ಥಳಕ್ಕೆ ಬಂದು ನೋಡಿ ವಿಚಾರಿಸಲಾಗಿ ನನ್ನ ಮಾವ ಉಸ್ಮಾನಸಾಬನಿಗೆ ಬಲಗಾಲ ಮೋಳಕಾಲ ಕೇಳಗೆ ಮುರಿದು ಭಾರಿ ರಕ್ತಗಾಯ, ಬಲಗಾಲ ಮೋಳಕಾಲ ಮೇಲೆ ಭಾರಿ ಗುಪ್ತಗಾಯ, ಬಲಗೈ ಮೋಳಕೈ ಭಾರಿ ರಕ್ತಗಾಯ, ಬಲಗೈ ತೋರುಬೆರಳಿಗೆ ಭಾರಿ ರಕ್ತಗಾಯ, ಮುಖಕ್ಕೆ ತರಚಿದ ರಕ್ತಗಾಯವಾಗಿರುತ್ತದೆ. ಅಯ್ಯಪ್ಪ ತಂದೆ ಸಾಬಣ್ಣ ಈತನಿಗೆ ನೋಡಲಾಗಿ ಬಲಗಾಲ ಮೋಳಕಾಲಿಗೆ ತರಚಿದ ರಕ್ತಗಾಯ. ಬಲಗೈ ಮೋಳಕೈ ಗುಪ್ತಗಾಯ, ಬಲಗಡೆ ತಲೆಗೆ ರಕ್ತಗಾಯ, ಎದೆಗೆ ಗುಪ್ತಗಾಯ, ಹಿಂದಿನ ಸೊಂಟಕ್ಕೆ ಭಾರಿ ಗುಪ್ತಗಾಯ ವಾಗಿದ್ದು ಇರುತ್ತದೆ. ಸದರಿ ಅಫಘಾತ ಮಾಡಿದ ಟ್ರ್ಯಾಕ್ಟರ್ ಚಾಲಕಲನಿಗೆ ನೋಡಿ ಹೆಸರು ವಿಚಾರಿಸಲಾಗಿ ಹೇಸರು ಹೇಳದೆ ಓಡಿ ಹೋದನು ಸದರಿಯವನಿಗೆ ನೋಡಿದರೆ ಗುತ್ತಿಸುತ್ತೆನೆ. ಸದರಿ ಅಪಘಾತ ಮಾಡಿದ ಟ್ರ್ಯಾಕ್ಟರ ನಂ ಕೆಎ-36ಟಿಎ-5781 ಅದರ ಇಂಜಿನ ನಂ ಎಸ್3251ಎ96474 ಚೆಸ್ಸಿ ನಂ 372846 ಮತ್ತು ಮೋಟರ್ ಸೈಕಲ್ ನಂ ಕೆಎ-33ಎಲ್-2604 ನೇದ್ದು ಜಕಂ ಗೋಂಡಿರುತ್ತದೆ. ಅಪಘಾತದ ಸ್ಥಳಕ್ಕೆ ಬಂದಿದ್ದ ದೇವಪ್ಪ ತಂದೆ ಮಾಳಪ್ಪ ಮಡ್ನಾಳದರ, ಮಲ್ಲಪ್ಪ ತಂದೆ ಸಾಬಣ್ಣ ಜೋಳದಡಿಗಿ. ಇವರು ನೋಡಿ ವಿಚಾರಿಸಿದ್ದು ಇರುತ್ತದೆ, ಆಗ ನಾನು ಮತ್ತು ನನ್ನ ತಮ್ಮ ಖಾಜಾಲಾಲ್, ಮಲ್ಲಪ್ಪ, ಮೂರು ಜನರು ಕೊಡಿಕೊಂಡು ಉಸ್ಮಾನಸಾಬ ಮತ್ತು ಅಯ್ಯಪ್ಪ  ಇವರಿಗೆ ಉಪಚಾರ ಕುರಿತು ಅಲ್ಲೆ ಹೋರಟಿದ್ದ ಒಂದು ಆಟೋದಲ್ಲಿ ಹಾಕಿಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಅಪಘಾತದ ಸುದ್ದಿಕೇಳಿ ಆಸ್ಪತ್ರೆಗೆ ಬಂದಿದ್ದ ನನ್ನ ತಮ್ಮ ಕರಿಂ ತಂದೆ ಮಕ್ತುಮಸಾಬ ಈತನು ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ಉಸ್ಮಾನಸಾಬನಿಗೆ ಮತ್ತು ಅಯ್ಯಪ್ಪನಿಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ತಮ್ಮ ಕರಿಂ ಮತ್ತು ಮಲ್ಲಪ್ಪ ಇಬ್ಬರು ಒಂದು ಅಂಬುಲೇನ್ಸದಲ್ಲಿ ಉಸ್ಮಾನಸಾಬನಿಗೆ ಮತ್ತು ಅಯ್ಯಪ್ಪನಿಗೆ ಕರೆದುಕೊಂಡು ಕಲಬುರಗಿಗೆ ಹೋದರು ನಾನು ನಮ್ಮ ಹಿರಿಯರೊಂದಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 189/2020 ಕಲಂ: 279, 338, ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 49/2020 ಕಲಂ: 143, 147, 323, 498(ಎ), 504, 506 ಸಂಗಡ 149 ಐ.ಪಿ.ಸಿ : ಪಿಯರ್ಾದಿಗೆ 5ವರ್ಷಗಳ ಹಿಂದೆ ಕೊಟೇಗುಡ್ಡ ಗ್ರಾಮದ ತಿಪ್ಪಣ್ಣ ತಂದೆ ಮಲ್ಲಪ್ಪ ಕೊಂಡಗೂಳಿ ಇವರೊಂದಿಗೆ ಗುರು ಹಿರಿಯರ ಸಮಕ್ಷಮದಲ್ಲಿ ್ಲ ಮದುವೆ ಆಗಿದ್ದು ಪಿಯರ್ಾದಿಯ ಗಂಡನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದು ತನ್ನೊಂದಿಗೆ ಕರೆದುಕೊಂಡು ಹೋಗದೆ ಇಲ್ಲಿಯೇ ತನ್ನ ತಂದೆ-ತಾಯಿಯೊಂದಿಗೆ ಬಿಟ್ಟು ಹೋಗಿ ತಾನು ಡ್ಯೂಟಿ ಮಾಡಿ ಬಂದು ಹೋಗುವುದು ಮಾಡುತ್ತಿದ್ದು ಮದುವೆಯ ನಂತರ ಒಂದು ವರ್ಷ ಪಿಯಾದಿಯ ಗಂಡನು ಪಿಯರ್ಾದಿಯೊಂದಿಗೆ ಅನೋನ್ಯವಾಗಿ ಸಂಸಾರವನ್ನು ಮಾಡಿದ್ದು ಇರುತ್ತದೆ. ನಂತರ ಬೆಂಗಳೂರಿನಿಂದ ಊರಿಗೆ ಬಂದಾಗ ನನಗೆ ನೀನು ಸರಿಯಾಗಿ ಮನೆಯ ಕೆಲಸ ಮಾಡುವುದಿಲ್ಲ & ನೀನು ನನಗೆ ತಕ್ಕ ಹೆಂಡತಿಂ ಅಲ್ಲ ನೀನು ನಿನ್ನ ತವರು ಮನೆಗೆ ಹೋಗು ಅಂತಾ ಬೈದು ಕೈಯಿಂದ ಹೊಡೆದು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದು ಮನೆಯಲ್ಲಿಯೇ ಇದ್ದ ಇತರರು ಪಿಯರ್ಾದಿಗೆ ಮನೆಯಲ್ಲಿ ನೀನು ಸರಿಯಾಗಿ ಮನೆಯ ಕೆಲಸ ಮಾಡುವುದಿಲ್ಲ ನಮ್ಮ ತಿಪ್ಪಣ್ಣನಿಗೆ ತಕ್ಕ ಹೆಂಡತಿ ಅಲ್ಲ. ನಮ್ಮ ಮನೆಯಲ್ಲಿ ಇರಬೇಡ ನೀನು ತವರು ಮನೆಗೆ ಹೋಗು ಅಂತಾ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದು ಈ ವಿಷಯವನ್ನು ಪಿಯರ್ಾದಿಯು ತಂದೆ-ತಾಯಿಯವರಿಗೆ ವಿಷಯ ತಿಳಿಸಿದ್ದು ಅವರು ನೀನು ಇದನ್ನು ಸಹಿಸಿಕೊ ಇಂದಲ್ಲ ನಾಳೆ ನಿನ್ನ ಸಂಸಾರ ಸರಿ ಹೊಂದುತ್ತದೆ ಅಂತಾ ಹೇಳಿದಾಗ ಸಂಸಾರ ಸರಿದಾರಿಗೆ ಬರಲಿ ಅಂತಾ ಅವರುಗಳು ನೀಡಿದ ಕಿರುಕುಳವನ್ನು ಸಹಿಸಿಕೊಂಡು ಬಂದಿದ್ದು ಅವರುಗಳು ಸ್ವಲ್ಪ ದಿವಸ ತವರೂ ಮನೆಗೆ ಕಳುಹಿಸುವುದು ಮತ್ತೆ ಊರಿನ ಹಿರಿಯರು ನ್ಯಾಯಪಂಚಾಯತ ಮಾಡಿ ಬುದ್ದಿ ಮಾತು ಹೇಳಿದಾಗ ಮನೆಗೆ ಕರೆದುಕೊಂಡು ಹೋಗಿ ಸ್ವಲ್ಪ ದಿವಸಗಳ ಬಳಿಕ ಮತ್ತೆ ಅವರೆಲ್ಲರೂ ದೈಹಿಕ ಮತ್ತು ಮಾನಸಿಕ ನೀಡುತ್ತಾ ಬಂದಿರುತ್ತಾರೆ. ದಿನಾಂಕ:04/07/2020 ರಂದು ಮುಂಜಾನೆ ಪಿಯರ್ಾದಿಯು ಊರ ಶ್ರೀ ಹನಮಂತ ದೇವರ ದೇವಸ್ಥಾನಕ್ಕೆ ಬಂದು ಮರಳಿ ಮನೆಗೆ ಮುಂಜಾನೆ 10:00 ಗಂಟೆಯ ಸುಮಾರಿಗೆ ತನ್ನ ಗಂಡನ ಮನೆಯ ಮುಂದಾದು ಸಿಸಿ ರಸ್ತೆಯ ಮೇಲೆ ಹೋಗುತ್ತಿದ್ದಾಗ ಮನೆಯ ಮುಂದೆ ನಿಂತಿದ್ದ ಮಲ್ಲಪ್ಪ ಕೊಂಡಗೂಳಿ, ಬಸಮ್ಮ ಕೊಂಡಗೂಳಿ, ಸಂಗಪ್ಪ ಕೊಂಡಗೂಳಿ, ಸಿದ್ದಮ್ಮ ಕಂಬಳಿ ಇವರು ಪಿಯರ್ಾದಿಗೆ  ಲೇ ಸೂಳಿ ನಿನ್ನದು ಎಷ್ಟು ಸೊಕ್ಕು ನಿನಗೆ ಕರೆದುಕೊಂಡು ಬರಲ್ಲಾ ಅಂದರು ನಮಗೆ ನ್ಯಾಯ ಪಂಚಾಯತ ಮಾಡಿಸುತ್ತಿಯಾ ಅಂತಾ ಬೈದಾಗ ಪಿಯರ್ಾದಿಯು ಅವರಿಗೆ ಯಾಕೆ ಎನಾಯಿತು ನನಗೆ ಎಷ್ಟು ದಿವಸ ತವರು ಮನೆಯಲ್ಲಿ ಬಿಡುತ್ತಿರಿ ಅಂತಾ ಕೇಳಿದಾಗ ಮಲ್ಲಪ್ಪ ಕೊಂಡಗೂಳಿ, ಸಂಗಪ್ಪ ಕೊಂಡಗೂಳಿ ಇವರು  ಎದುರು ಮಾತನಾಡುತ್ತಿಯಾ ಭೊಸೂಡಿ ನಿನ್ನ ಖಲಾಸ್ ಮಾಡುತ್ತೇವೆ.  ಅಂತಾ ಅವಾಚ್ಯ ಶಬ್ದಗಳಿಂದ ಬೈದಿದ್ದು ಬಸಮ್ಮ ಕೊಂಡಗೂಳಿ, ಸಿದ್ದಮ್ಮ ಕೊಂಡಗೂಳಿ ಇವರು ಪಿಯರ್ಾದಿಗೆ ಕೈಯಿಂದ ಹೊಡೆ ಬಡೆ ಮಾಡಿದ್ದು ಕ್ರಮ ಜರುಗಿಸಿ ನ್ಯಾಯ ದೊರಕಿಸಿ ಕೊಡಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 49/2020 ಕಲಂ: 143, 147, 323, 498(ಎ), 504, 506 ಸಂಗಡ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.  


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 80/2020  ಕಲಂ 279, 283 304(ಎ) ಐಪಿಸಿ : ಇಂದು ದಿನಾಂಕ: 11/07/2020 ರಂದು 10.30 ಪಿಎಮ್ ಕ್ಕೆ ಅಜರ್ಿದಾರರಾದ ಶ್ರೀಮತಿ ಮಾದೇವಿ ಗಂಡ ಮಾನಪ್ಪ ಬೈಲಪತ್ತಾರ ವಯ:48 ಉ: ಮನೆಗೆಲಸ ಜಾ:ಬೈಲ ಪತ್ತಾರ ಸಾ: ಗೋಗಿ ಪೇಠ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ ಇಬ್ಬರು ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಮಗನಾದ ರಾಜಶೇಖರ ಈತನು ಶಹಾಪುರದಲ್ಲಿ ಮನೆ ಮಾಡಿಕೊಂಡು ಇರುತ್ತಿದ್ದರಿಂದ, ನನ್ನ ಮಗ ರಾಜಶೇಖರ ಈತನಿಗೆ ಬೇಟಿಯಾಗಲು ನನ್ನ ಗಂಡ ಮಾನಪ್ಪ ಈತನು ತನ್ನ ಮೋಟಾರ್ ಸೈಕಲ್ ನಂ: ಕೆಎ-33-ಎಲ್-3032 ನೇದ್ದನ್ನು ತಗೆದುಕೊಂಡು ಮಧ್ಯಾಹ್ನ 01.00 ಗಂಟೆಗೆ ನಮ್ಮ ಮನೆಯಿಂದ ನಮಗೆ ಹೇಳಿ ಹೋದನು ಆಗ ನಾನು ಆಯಿತು ಹೋಗಿ ಬಾ ಅಂತಾ ಹೇಳಿದೆನು.
          ನಂತರ ನಾನು ಮತ್ತು ನನ್ನ ಸಣ್ಣ ಮಗ ರಮೇಶ ಈತನೊಂದಿಗೆ ಮನೆಯಲ್ಲಿ ಇದ್ದಾಗ ದಿ:11/07/2020 ರಂದು 08.15 ಪಿಎಂ ಕ್ಕೆ ನಮ್ಮ ಪರಿಚಯದವರಾದ ಬಸವರಾಜ ಪ್ಯಾಟಿ ಹಾಗೂ ಅಶೋಕರೆಡ್ಡಿ ಕಂಚಲಕವಿ ಇವರು ಪೋನ ಮಾಡಿ ಹೇಳಿದ್ದು ಏನಂದರೆ, ಮಾನಪ್ಪ ಈತನು ಮೋಟಾರ್ ಸೈಕಲ್ ನಂ: ಕೆಎ-33-ಎಲ್-3032 ರಲ್ಲಿ ಶಹಾಪೂರ ದಿಂದ ಗೋಗಿಗೆ ಬರುವಾಗ ಭೀ.ಗುಡಿ-ಗೋಗಿ ಮಧ್ಯ ಇರುವ ಮಂಜಿತ ಕಾಟನ್ ಮಿಲ್ ಹತ್ತಿರ ರೋಡಿನ ಎಡಗಡೆ ಟ್ರ್ಯಾಕ್ಟರ ಟ್ರಾಯಿಲಿಗೆ ಯಾವುದೆ ಇಂಡಿಕೇಟರ ಹಾಕದೇ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದೆ ರೋಡಿನ ಮೇಲೆ ನಿಲ್ಲಿಸಿದ್ದರಿಂದ ಮಾನಪ್ಪ ಈತನು ತನ್ನ ಮೋಟಾರ್ ಸೈಕಲನ್ನು ವೇಗದಲ್ಲಿ ನಡಿಸಿಕೊಂಡು ಎದುರಿಗೆ ಬರುವ ವಾಹನದ ಪೋಕಸ್ ನೋಡದೆ ರೋಡಿನ ಮೇಲೆ ನಿಲ್ಲಿಸಿದ್ದ ಟ್ರ್ಯಾಕ್ಟರಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಮಾನಪ್ಪ ಈತನಿಗೆ ಮೈ ಮತ್ತು ಕೈ, ಎದೆಗೆ ಬಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಸಮಯ ಅಂದಾಜು 08.00 ಪಿಎಂ ಆಗಿರಬಹುದು ಅಂತಾ ವಿಷಯ ತಿಳಿಸಿದರು. ಆಗ ನಾನು ಮತ್ತು ಮಗನಾದ ರಮೇಶ ಹಾಗು ನಮ್ಮ ಓಣಿಯ ನದ್ದೀಮ ಮತ್ತು ಮಹೇಶ ಇವರೊಂದಿಗೆ ಅಪಘಾತ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನನ್ನ ಗಂಡ ಮಾನಪ್ಪ ತಂದೆ ರಾಯಪ್ಪ ಈತನು ಮೃತಪಟ್ಟಿದ್ದು ನಿಜವಿತ್ತು. ಸದರಿ ಟ್ರ್ಯಾಕ್ಟರ ನಂಬರ ನೊಡಲಾಗಿ ಇಂಜಿನ ನಂ: ಕೆಎ-33-ಟಿಎ-0444 ಇದ್ದು, ಟ್ರಾಯಿಲಿ ನಂಬರ ಇರುವದಿಲ್ಲ, ಟ್ರ್ಯಾಕ್ಟರ ಚಾಲಕನ ಹೆಸರು ವಿಳಾಸ ವಿಚಾರಿಸಿದ್ದು, ಸಿದ್ದಯ್ಯ ಸ್ವಾಮಿ ತಂದೆ ಚಿದಾನಂದ ಹೀರೆಮಠ ಸಾ: ಹೋತಪೇಠ ಅಂತ ತಿಳಿಯಿತು.

         ಆದ್ದರಿಂದ ಅಪಘಾತದಲ್ಲಿ ನನ್ನ ಗಂಡ ಮಾನಪ್ಪ ತಂದೆ ರಾಯಪ್ಪ ಈತನು ಮೃತಪಟ್ಟಿದ್ದು ಇರುತ್ತದೆ. ಈ ಬಗ್ಗೆ ಅಜರ್ಿ ಸಾರಂಶದಂತೆ ಕಾನೂನು ಕ್ರಮ ಜರುಗಿಸಲು ಈ ಅಜರ್ಿಯನ್ನು ನನ್ನ ಇಬ್ಬರು ಮಕ್ಕಳಾದ ರಾಜಶೇಖರ, ರಮೇಶ ಇವರ ಸಮಕ್ಷಮದಲ್ಲಿ ಅಜರ್ಿ ನೀಡಿರುತ್ತೇನೆ ಅಂತಾ ಅಜರ್ಿ ಮೇಲಿಂದ ಠಾಣೆ ಗುನ್ನೆ ನಂ: 80/2020 ಕಲಂ, 279, 283, 304(ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!