ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/07/2020

By blogger on ಗುರುವಾರ, ಜುಲೈ 9, 2020




                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/07/2020 
                                                                                                               
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 93/2020 ಕಲಂ 143, 147, 148, 323, 324, 504, 506 ಸಂ 149 ಐಪಿಸಿ : ದಿನಾಂಕ 03/07/2020 ರಂದು ಸಾಯಂಕಾಲ 7-00 ಗಂಟೆಗೆ ಫಿರ್ಯಾಧಿ ಮತ್ತು ಅವನ ಮನೆಯವರು ತಮ್ಮ ಮನೆಯಲ್ಲಿರುವಾಗ ಆರೋಪಿತನು ತನ್ನ ಮನೆಯ ಮುಂದ ಕುಳಿತು ಫಿರ್ಯಾಧಿದಾರರಿಗೆ ಮತ್ತು ಅವನ ಮನೆಯವರಿಗೆ ಅವಾಚ್ಯವಾಗಿ ಬೈಯ್ಯುತ್ತಿರುವಾಗ ಫಿರ್ಯಾಧಿ ಮತ್ತು ಅವನ ಮನೆಯವರು ಕೂಡಿ ಆರೋಪಿತನ ಮನೆ ಹತ್ತಿರ ಹೋಗಿ ನಮಗೆ ಯಾಕೆ ಬೈಯ್ಯುತ್ತಿದ್ದಿ ಅಂತಾ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಏ ಬೋಸಡಿ ಮಕ್ಕಳೇ ನೀವು ನಮ್ಮ ಮನೆ ಹತ್ತಿರ ಬಂದು ಕೇಳುತ್ತಿರಿ ನಿಮಗೆ ಬಹಳ ಸೊಕ್ಕುಯಿದೆ ಅಂತಾ ಅಂದು ಫಿರ್ಯಾಧಿ ಜೋತೆಗೆ ಮತ್ತು ಅವನ ಮನೆಯವರ ಜೋತೆಗೆ ಜಗಳ ತೆಗೆದು ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಕಟ್ಟಿಗೆಯಿಂದ, ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ ಬಗ್ಗೆ.


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 06/2020 ಕಲಂ: 107 ಸಿಆರ್ಪಿಸಿ : ಸಂಕ್ಷೀಪ್ತ ಸಾರಾಂಶ: ನಾನು ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ಸರಕಾರದ ಪರವಾಗಿ ಕೊಡುವ ಪಿಯರ್ಾದಿ ಏನೆಂದರೆ, ಇಂದು ದಿ:08.07.2020 ರಂದು ಬೆಳಿಗ್ಗೆ  10:00 ಗಂಟೆಗೆ  ಹಳ್ಳಿಬೇಟಿ ಕುರಿತು ಯಲ್ಲಪ್ಪ ಹೆಚ್ಸಿ-117  ರವರೊಂದಿಗೆ ಕಕ್ಕೇರಾ ಪಟ್ಟಣ, ಏದಲಬಾಯಿ,  ಗೆದ್ದಲಮರಿ ಗ್ರಾಮಗಳಿಗೆ ಬೇಟಿ ನೀಡಿ ನಂತರ ಬೈಲಕುಂಟಿ ಗ್ರಾಮಕ್ಕೆ  2:00 ಪಿಎಮ್ ಸುಮಾರಿಗೆ ಬೇಟಿ ನೀಡಿದಾಗ ಭಾತ್ಮಿದಾರರಿಂದ ಮಾಹಿತಿ ತಿಳಿದುಬಂದಿದ್ದೇನೆಂದರೆ,  ಸೋಮನಿಂಗಪ್ಪ ತಂದೆ ಬಾಲಪ್ಪ ತೆಳಗಿನಮನಿ ಇತನಿಗೆ ಹಣಮವ್ವ, ನಿಂಗವ್ವ, ದೊಡ್ಡಶಾವಮ್ಮ ಸಣ್ಣ ಶಾವಮ್ಮ ಅಂತಾ ನಾಲ್ಕು ಜನ ಮಕ್ಕಳಿದ್ದು. ಎಲ್ಲರದು ಮದುವೆಯಾಗಿದ್ದು.  ಸಣ್ಣ ಶಾವಮ್ಮ ಮತ್ತು ಹಣಮವ್ವಳಿಗೆ ಸಾಲವಡಗಿಗೆ, ನಿಂಗವ್ವಳಿಗೆ ಕೋಳಿಹಾಳಕ್ಕೆ, ದೊಡ್ಡ ಶಾವಮ್ಮಳಿಗೆ ಊರಲ್ಲಿಯೇ ಕೊಟ್ಟು ಮದುವೆ ಮಾಡಿದ್ದು. ಹಣಮವ್ವ ಮತ್ತು ನಿಂಗವ್ವ ರವರು ತಮ್ಮೂರಿನಿಂದ ಬಂದು ಬೈಲಕುಂಟಿಯಲ್ಲಿಯೇ ಬಂದಿದ್ದು.  ಸಣ್ಣ ಶಾವಮ್ಮ ಇವರಿಗೂ ಕೂಡಾ ಸಾಲವಡಗಿಯಲ್ಲಿ ತನಗೆ ಯಾವುದೇ ಆಸ್ತಿ ಇಲ್ಲದರಿಂದ ಸಣ್ಣ ಶಾವಮ್ಮಳು ಕೂಡಾ ಬೈಲಕುಂಟಿಯಲ್ಲಿಯೇ ಬಂದು ಇದ್ದು. ಸೋಮನಿಂಗಪ್ಪನಿಗೆ ಗಂಡು ಮಕ್ಕಳು ಇರುವದಿಲ್ಲಾ ಸಣ್ಣ ಶಾವಮ್ಮಳಿಗೆ ಯಾವುದೇ ಆಸ್ತಿ ಇಲ್ಲದರಿಂದ ಸೋಮನಿಂಗಪ್ಪನು ತನ್ನ ಜಮೀನು ಸವರ್ೆ ನಂ:67/ಅ  ಬಂಡಿ ಹೊಲ ಅಂತ ಹೆಸರಿನ ಹೊಲದ ಸಣ್ಣ ಶಾವಮ್ಮಳ ಹೆಸರಿಗೆ ಸುಮಾರು 30 ವರ್ಷಗಳ ಹಿಂದೆ ಮಾಡಿದ್ದು.  ಈ ಜಮೀನಿನ ವಿಷಯವಾಗಿ ನಿಂಗಮ್ಮ ಗಂಡ ಹಣಮಂತ ಕೋಳಿಹಾಳ ಇವಳು ತನ್ನ ತಂದೆಯ ಆಸ್ತಿಯಲ್ಲಿ ತನಗೂ ಪಾಲ ಬರಬೇಕಾಗಿದ್ದು. ನನ್ನ ತಂಗಿ ಸಣ್ಣ ಶಾಮವ್ವ ಇವಳು ನನ್ನ ತಂದೆ ಮೃತಪಟ್ಟ ನಂತರ ತನ್ನ ಹೆಸರಿಗೆ ಮಾಡಿಕೊಂಡಿದ್ದು. ಅಂತ ತಕರಾರು ತೆಗೆದಿದ್ದು ಇದರಿಂದಾಗಿ ಮೊದಲೇಯ ಪಾಟಿಯವರಾದ 1) ಸಣ್ಣ ಶಾವಮ್ಮ ಗಂಡ ಮದನಪ್ಪ ಸಾಲವಡಗಿ ವ:55 ವರ್ಷ ಉ: ಮನೆಕೆಲಸ 2) ಮದನಪ್ಪ ತಂದೆ ಬಸಲಿಂಗಪ್ಪ ಸಾಲವಾಡಗಿ ವ:60 ವರ್ಷ ಉ: ಒಕ್ಕಲುತನ  3) ಭೀಮರಾಯ ತಂದೆ ಮದನಪ್ಪ ಸಾಲವಾಡಗಿ ವ:35 ವರ್ಷ ಉ: ಒಕ್ಕಲುತನ  4) ಪರಮಣ್ಣ ತಂದೆ ಮದನಪ್ಪ ಸಾಲವಾಡಗಿ ವ: 30 ವರ್ಷ ಉ: ಒಕ್ಕಲುತನ 5) ಶರಣಬಸವ ತಂದೆ ಮದನಪ್ಪ ಸಾಲವಾಡಗಿ  ವ:28 ವರ್ಷ ಉ: ಅಟೋ ಚಾಲಕ ಎಲ್ಲರ ಜಾ: ಬೇಡರ ಸಾ: ಎಲ್ಲರೂ ಕೋಳಿಹಾಳ ಹಾ;ವ: ಬೈಲಕುಂಟಿ ಇವರಿಗೂ ಮತ್ತು ಎರಡನೇಯ ಪಾಟರ್ಿ ಯವರಾದ 1) ನಿಂಗಮ್ಮ ಗಂಡ ಹಣಮಂತ್ರಾಯ ಕೋಳಿಹಾಳ ವ:60 ವರ್ಷ ಉ: ಕೂಲಿಕೆಲಸ 2) ಪ್ರಭು ತಂದೆ ಹಣಮಂತ್ರಾಯ ಕೋಳಿಹಾಳ ವ:45 ವರ್ಷ ಉ: ಒಕ್ಕಲುತನ 3) ಶಿವನಂದ ತಂದೆ ಹಣಮಂತ್ರಾಯ ಕೋಳಿಹಾಳ ವ:35 ವರ್ಷ 4) ನಾನಗೌಡ ತಂದೆ ಹಣಮಂತ್ರಾಯ ಕೋಳಿಹಾಳ ವ:32 ವರ್ಷ ಉ: ಒಕ್ಕಲುತನ 5) ಗುರಪ್ಪ ತಂದೆ ಹಣಮಂತ್ರಾಯ ಕೋಳಿಹಾಳ ವ:29 ವರ್ಷ ಉ: ಒಕ್ಕಲುತನ   ಎಲ್ಲರ ಜಾ: ಬೇಡರ ಸಾ: ಎಲ್ಲರೂ ಸಾಲವಾಡಗಿ ಹಾ;ವ: ಬೈಲಕುಂಟಿ ತಾ: ಹುಣಸಗಿ ಮೇಲೆ  ನಮೂದಿಸಿದ ಎರಡು ಪಾಟರ್ಿಂ ಜನರ ಮಧ್ಯ ಅವರವರಲ್ಲಿ ಭಾರಿ ವೈಮನಸ್ಸು ಉಂಟಾಗಿದ್ದು. ಸದರಿ ಎರಡೂ ಪಾಟರ್ಿಯವರು ಜಮೀನು ಸವರ್ೇ ನಂ:67/ಅ  ವಿಷಯದಲ್ಲಿ ಯಾವ ವೇಳೆಯಲ್ಲಿ ತಮ್ಮ ತಮ್ಮಲ್ಲಿ  ಹೊಡೆಬಡೆ ಮಾಡಿಕೊಂಡು ತಮ್ಮ ಪ್ರಾಣ ಹಾನಿ ಮಾಡಿಕೊಳ್ಳುವದಾಗಲಿ ಅಥವಾ ದೊಡ್ಡಿಯಲ್ಲಿ ಯಾವುದೇ ಸಮಯದಲ್ಲಿ ಸಾರ್ವಜನಿಕ ಶಾಂತತಾ ಭಂಗ ಹಾಗು ವಿಷಮ ವಾತಾವರಣ ಉಂಟು ಮಾಡುವ ಸಂಭವ ಇದ್ದ ಬಗ್ಗೆ ತಿಳಿದುಬಂದಿದ್ದರಿಂದ ಮತ್ತು ಸಾರ್ವಜನಿಕ ಆಸ್ತಿಗಾಗಲಿ ಪ್ರಾಣಕ್ಕಾಗಿ ಹಾನಿಯನ್ನುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿ ಪ್ರತಿವಾದಿಗಳಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧಗಳನ್ನು ತಡೆಗಟ್ಟುವ ದೃಷ್ಠಿಯಿಂದ ಪ್ರತಿವಾದಿ ಜನರ ಮೇಲೆ ಮುಂಜಾಗೃತ ಕ್ರಮ ಜರುಗಿಸುವದು ಅವಶ್ಯಕತೆ ಕಂಡುಬಂದಿದ್ದರಿಂದ 5:00 ಪಿಎಮ್ ಕ್ಕೆ ಠಾಣೆಗೆ ಬಂದು ಸರಕಾರದ ಪರವಾಗಿ ಫಿಯರ್ಾದಿಯಾಗಿ ಸದರಿ ಎರಡು ಪಾಟರ್ಿಯವರಿಗೂ ಶಾಂತರೀತಿಯಿಂದ ಇರುವಂತೆ ಅವರ ಕಡೆಯಿಂದ ಕಲಂ:116 (2) ಸಿಆರ್ಪಿಸಿ ಪ್ರಕಾರ ಇಂಟೇರಿಯಂ ಬಾಂಡ್ ಪಡೆದುಕೊಳ್ಳಲು ಮಾನ್ಯರವರಲ್ಲಿ ವಿನಂತಿ.


ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.17/2020 ಕಲಂ: 174 ಸಿ.ಆರ್.ಪಿ.ಸಿ : ದಿನಾಂಕ 06.07.2020 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಮೃತಳಾದ ಆಕಾಂಕ್ಷಳು ತನ್ನ ಓಣಿಯ ಮಕ್ಕಳೊಂದಿಗೆ ತಮ್ಮ  ಮನೆಯ ಮುಂದಿನ ರೋಡಿನ ಮೇಲೆ ನಿಂತಿದ್ದ ಖಾಲಿ ಟ್ರ್ಯಾಕ್ಟರನ ಟ್ರ್ಯಾಲಿಯಲ್ಲಿ ಹತ್ತುವುದು & ಇಳಿಯುವುದು ಮಾಡುತ್ತ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೈ ಜಾರಿ ಅಲ್ಲಿಂದಲೇ ಬೋರಲಾಗಿ ಸಿಸಿ ರಸ್ತೆಯ ಮೇಲೆ ಮುಖಕ್ಕೆ ಹಣೆಗೆ ಮೇಲ್ನೋಟಕ್ಕೆ ತರಚಿದಂತಹ ಗಾಯಗಳಾಗಿದ್ದು ಸದರಿಯವಳನ್ನು ಚಿಕಿತ್ಸೆ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 06.07.2020 ರಂದು ಮಧ್ಯಾಹ್ನ 2:00 ಗಂಟೆಗೆ  ಸಂಭವಿಸಿದ ಆಕಸ್ಮಿಕ ಘಟನೆಯ ಕಾಲಕ್ಕೆ ಆದಂತಹ ಭಾರಿ ಒಳಪೆಟ್ಟಿನಿಂದ ದಿನಾಂಕ 07.07.2020 ಸಂಜೆ 7:55 ಗಂಟೆಗೆ ಮೃತಪಟ್ಟಿದ್ದ ಬಗ್ಗೆ ಫಿರ್ಯಾದಿ ನೀಡಿದ  ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಕ್ರಮ ಕೈಕೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 92/2020 ಕಲಂ. 279,338 ಐಪಿಸಿ : ಇಂದು ದಿನಾಂಕ. 08-07-2020 ರಂದು ಶ್ರೀ ತಿಪ್ಪಣ್ಣ ಹೆಚ್.ಸಿ-47 ರವರು ರಾಯಚೂರ ರಿಮ್ಸ್ ಆಸ್ಪತ್ರೆಯಿಂದ ಎಮ್.ಎಲ್.ಸಿ ಪಡೆದು ಫಿಯರ್ಾದಿ ಹೇಳಿಕೆ ಪಡೆದು ಮರಳಿ ಠಾಣೆಗೆ ಸಾಯಂಕಾಲ 5-30 ಗಂಟೆಗೆ ಹಾಜರಪಡಿಸಿದ ಸಾರಾಂಶವೇನೆಂದರೆ, 08-07-2020 ರಂದು 11-30 ಎ.ಎಮ್ ಸುಮಾರಿಗೆ ಫಿಯರ್ಾದಿಯ ಗಂಡ ಸೈದಾಪೂರ ನಾರಾಯಣಪೇಟ ರೋಡ ವಿ.ವಿ.ಹೆಚ್.ಎಸ್. ಶಾಲೆಯ ಹತ್ತಿರ ಹಿರೋ ಹೊಂಡ ಮೋಟಾರ ಸೈಕಲ್ ನಂ ಕೆ.ಎ-36 ಆರ್-7132 ನೇದ್ದರ ಮೇಲೆ ಹೊರಟಾಗ ಹಂದಿ ಅಡ್ಡ ಬಂದು ಗಾಡಿ ಸ್ಕಿಡ್ ಆಗಿ ಬಿದ್ದಿದ್ದು ತಲೆಗೆ ಬಾರಿ ಗುಪ್ತ ಗಾಯವಾಗಿ ಎಡ ಕಿವಿಯಿಂದ ರಕ್ತ ಬರುತ್ತಿದ್ದು ಮತ್ತು ಮೂಗಿನ ಮೇಲೆ ರಕ್ತ ಗಾಯ ವಾಗಿರುತ್ತದೆ. ಅಂತ ಸಾರಾಂಶದ ಮೆಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ.92/2020 ಕಲಂ. 279, 338 ಐಪಿಸಿ ಐ.ಎಮ್.ವಿ.ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 01/2020 107 ಸಿ.ಆರ್.ಪಿ.ಸಿ : ದಿನಾಂಕ:08/07/2020 ರಂದು 20.15 ಗಂಟೆಗೆ ಠಾಣೆಯ ಮರಲಿಂಗಪ್ಪ ಪಿಸಿ-355 ರವರು ಠಾಣೆಗೆ ಬಂದು ಒಂದು ಲಿಖಿತ ವರದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:08/07/2020 ರಂದು 18.15 ಗಂಟೆಗೆ  ನಾನು  ನನ್ನ ಗಸ್ತು ಗ್ರಾಮವಾದ ಕುರೇಕನಾಳ ಗ್ರಾಮಕ್ಕೆ ಬೇಟಿಗೆಂದು ಹೋದಾಗ ಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಸಂಗಪ್ಪ ತಂದೆ ರೇವಣಪ್ಪ ತೊಂಡಿಹಾಳ ಮತ್ತು ಸಂಗಡಿಗರು ಮತ್ತು ಗ್ರಾಮದ ಸುರೇಶಕುಮಾರ ತಂದೆ ವೆಂಕಟರಾವ ದೇಶಪಾಂಡೆ ಮತ್ತು ಸಂಗಡಿಗರ ಮದ್ಯ ಕುರೇಕನಾಳ ಗ್ರಾಮ ಸೀಮೆಯ ಹೊಲ ಸವರ್ೆ ನಂ.41 ರಲ್ಲಿ 24 ಎಕರೆ 15 ಗುಂಟೆಯ ಜಮೀನದ ಕಬ್ಜಾದ  ವಿಷಯದಲ್ಲಿ ಸುಮಾರು ದಿನಗಳಿಂದಾ ತಕರಾರು ಇದ್ದು,  ಹೊಲ ಸವರ್ೆ ನಂ.41 ರಲ್ಲಿ 24 ಎಕರೆ 15 ಗುಂಟೆಯ ಜಮೀನದ ಕಬ್ಜಾದ ವಿಷಯದಲ್ಲಿ ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಸುರೇಶಕುಮಾರ ತಂದೆ ವೆಂಕಟರಾವ ದೇಶಪಾಂಡೆ ವಯ:69 ಸಾ:ಕುರೇಕನಾಳ ಸಂಗಡಿಗರ  ಮೇಲೆ ಮುಂಜಾಗೃತಾ ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 02/2020 107 ಸಿ.ಆರ್.ಪಿ.ಸಿ : ದಿನಾಂಕ:08/07/2020 ರಂದು 20.45 ಗಂಟೆಗೆ ಠಾಣೆಯ ಮರಲಿಂಗಪ್ಪ ಪಿಸಿ-355 ರವರು ಠಾಣೆಗೆ ಬಂದು ಒಂದು ಲಿಖಿತ ವರದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:08/07/2020 ರಂದು 18.15 ಗಂಟೆಗೆ  ನಾನು  ನನ್ನ ಗಸ್ತು ಗ್ರಾಮವಾದ ಕುರೇಕನಾಳ ಗ್ರಾಮಕ್ಕೆ ಬೇಟಿಗೆಂದು ಹೋದಾಗ ಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಸಂಗಪ್ಪ ತಂದೆ ರೇವಣಪ್ಪ ತೊಂಡಿಹಾಳ ಮತ್ತು ಸಂಗಡಿಗರು ಮತ್ತು ಗ್ರಾಮದ ಸುರೇಶಕುಮಾರ ತಂದೆ ವೆಂಕಟರಾವ ದೇಶಪಾಂಡೆ ಮತ್ತು ಸಂಗಡಿಗರ ಮದ್ಯ ಕುರೇಕನಾಳ ಗ್ರಾಮ ಸೀಮೆಯ ಹೊಲ ಸವರ್ೆ ನಂ.41 ರಲ್ಲಿ 24 ಎಕರೆ 15 ಗುಂಟೆಯ ಜಮೀನದ ಕಬ್ಜಾದ  ವಿಷಯದಲ್ಲಿ ಸುಮಾರು ದಿನಗಳಿಂದಾ ತಕರಾರು ಇದ್ದು,  ಹೊಲ ಸವರ್ೆ ನಂ.41 ರಲ್ಲಿ 24 ಎಕರೆ 15 ಗುಂಟೆಯ ಜಮೀನದ ಕಬ್ಜಾದ ವಿಷಯದಲ್ಲಿ ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಸಂಗಪ್ಪ ತಂದೆ ರೇವಣಪ್ಪ ತೊಂಡಿಹಾಳ ಸಾ:ಕುರೇಕನಾಳ ಸಂಗಡಿಗರ  ಮೇಲೆ ಮುಂಜಾಗೃತಾ ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ.

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 08/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ 08/07/2020 ರಂದು  1 ಪಿಎಮ್ ಕ್ಕೆ ವೀರೇಶ ಸಿಪಿಸಿ-197 ಭೀ.ಗುಡಿ ಪೊಲೀಸ್ ಠಾಣೆ ಇವರು ಠಾಣೆಗೆ ಬಂದು  ವರದಿ ಸಲ್ಲಿಸುವುದೇನೆಂದರೆ, ಇಂದು 10.30 ಎ.ಎಮ್ ಕ್ಕೆ ನಾನು ಹಳ್ಳಿ ಬೀಟ ಕರ್ತವ್ಯ ಕುರಿತು ಅರಳಹಳ್ಳಿ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಅರಳಳ್ಳಿ ಸೀಮಾಂತರದ ಸವರ್ೆ ನಂ:16 ರಲ್ಲಿನ 15 ಎಕರೆ 3 ಗುಂಟೆ ಜಮೀನ ವಿಷಯದಲ್ಲಿ ಅರಳಳ್ಳಿ ಗ್ರಾಮದ ಸೋಪಣ್ಣ ತಂದೆ ಸೋಪಣ್ಣ @ ಸೋಮನಾಥ ತಂದೆ ಭೀಮಣ್ಣ ಬೆನಕನಳ್ಳಿ ಹಾಗೂ ಹುಲಕಲ್ ಗ್ರಾಮದ ಪ್ರತಿವಾದಿದಾರರಾದ ಸಾಹೇಬಗೌಡ ತಂದೆ ಹಣಮಂತ್ರಾಯಗೌಡ ಪೊಲೀಸ್ ಬಿರಾದಾರ ಸಂಗಡ ಒಬ್ಬ ಇವರ ನಡುವೆ ಆಸ್ತಿಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಿನಾಂಕ 13/06/2020 ರಂದು ಜಗಳ ಮಾಡಿಕೊಂಡು ಠಾಣೆಯಲ್ಲಿ ಗುನ್ನೆ ಮತ್ತು ಪ್ರತಿಗುನ್ನೆ ದಾಖಲಾಗಿರುತ್ತವೆ. ಪ್ರತಿವಾದಿಗಳ ಮೇಲೆ ಠಾಣೆ ಗುನ್ನೆ ನಂ: 75/2020 ಕಲಂ 323, 324, 354, 355, 504, 506 ಸಂ 34 ಐಪಿಸಿ ದಾಖಲಾಗಿದ್ದು ಇರುತ್ತದೆ. ಆಸ್ತಿಯ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಜರುಗಿಸುವಂತೆ ವರದಿ ನೀಡಿದ್ದು, ಅದರ ಸಾರಾಂಶದ ಮೇಲಿಂದ ಠಾಣೆಯ ಪಿ.ಎ.ಆರ್ ನಂ:08/2020 ಕಲಂ 107 ಸಿ.ಆರ್.ಪಿ.ಸಿ  ನೇದ್ದರ ಅಡಿಯಲ್ಲಿ ಮುಂಜಾಗೃತಾ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಕುರಿತು ಮಾನ್ಯರವರಲ್ಲಿ ವರದಿ ಸಲ್ಲಿಸಿರುತ್ತೇನೆ.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 09/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ 08/07/2020 ರಂದು  1 ಪಿಎಮ್ ಕ್ಕೆ ವೀರೇಶ ಸಿಪಿಸಿ-197 ಭೀ.ಗುಡಿ ಪೊಲೀಸ್ ಠಾಣೆ ಇವರು ಠಾಣೆಗೆ ಬಂದು  ವರದಿ ಸಲ್ಲಿಸುವುದೇನೆಂದರೆ, ಇಂದು 10.30 ಎ.ಎಮ್ ಕ್ಕೆ ನಾನು ಹಳ್ಳಿ ಬೀಟ ಕರ್ತವ್ಯ ಕುರಿತು ಅರಳಹಳ್ಳಿ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಅರಳಳ್ಳಿ ಸೀಮಾಂತರದ ಸವರ್ೆ ನಂ:16 ರಲ್ಲಿನ 15 ಎಕರೆ 3 ಗುಂಟೆ ಜಮೀನ ವಿಷಯದಲ್ಲಿ ಹುಲಕಲ್ ಗ್ರಾಮದ ಸಾಹೇಬಗೌಡ ತಂದೆ ಹಣಮಂತ್ರಾಯ ಪೊ.ಬಿರೆದಾರ ಹಾಗೂ ಅರಳಹಳ್ಳಿ ಗ್ರಾಮದ ಪ್ರತಿವಾದಿದಾರರಾದ ಸೋಪಣ್ಣ @ ಸೋಮನಾಥ ತಂದೆ ಭೀಮಣ್ಣ ಬೆನಕನಳ್ಳಿ ಸಾ:ಅರಳಹಳ್ಳಿ ಸಂಗಡ ಒಬ್ಬ ಇವರ ನಡುವೆ ಆಸ್ತಿಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಿನಾಂಕ 13/06/2020 ರಂದು ಜಗಳ ಮಾಡಿಕೊಂಡು ಠಾಣೆಯಲ್ಲಿ ಗುನ್ನೆ ಮತ್ತು ಪ್ರತಿಗುನ್ನೆ ದಾಖಲಾಗಿರುತ್ತವೆ. ಪ್ರತಿವಾದಿಗಳ ಮೇಲೆ ಠಾಣೆ ಗುನ್ನೆ ನಂ: 76/2020 ಕಲಂ 143, 147, 323, 354, 504, 506 ಸಂ 149 ಐಪಿಸಿ ದಾಖಲಾಗಿದ್ದು ಇರುತ್ತದೆ. ಆಸ್ತಿಯ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಜರುಗಿಸುವಂತೆ ವರದಿ ನೀಡಿದ್ದು, ಅದರ ಸಾರಾಂಶದ ಮೇಲಿಂದ ಠಾಣೆಯ ಪಿ.ಎ.ಆರ್ ನಂ:09/2020 ಕಲಂ 107 ಸಿ.ಆರ್.ಪಿ.ಸಿ  ನೇದ್ದರ ಅಡಿಯಲ್ಲಿ ಮುಂಜಾಗೃತಾ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಕುರಿತು ಮಾನ್ಯರವರಲ್ಲಿ ವರದಿ ಸಲ್ಲಿಸಿರುತ್ತೇನೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 09/2020 ಕಲಂ: 107 ಸಿಆರ್ಪಿಸಿ  : ಮಾನ್ಯರವರಲ್ಲಿ ನಾನು ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ ಠಾಣೆ ಇದ್ದು ತಮ್ಮಲ್ಲಿ ವರದಿಯನ್ನು ಸಲ್ಲಿಸುವುದೆನೆಂದರೆ ಇಂದು ದಿನಾಂಕ 08.07.2020 ರಂದು 1 ಪಿ.ಎಮ್ಕ್ಕೆ ಹಳ್ಳಿಬೇಟಿ ಕುರಿತು ಏವೂರ ಗ್ರಾಮಕ್ಕೆ ಬೇಟಿ ನೀಡಿದಾಗ  ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನಂದರೆ  ಸದರ ಗ್ರಾಮದ ಹೊಲ ಸವರ್ೇ ನಂಬರ 300 ರ ಉಳಿಮೆ ಮಾಡುವ ವಿಷಯದಲ್ಲಿ ಒಂದನೇಯ ಪಾಟರ್ಿಯ  1] ಶರಣಪ್ಪ ತಂದೆ ಭೀಮಣ್ಣ ಲಕ್ಕಾಗೋಳ ವಯಾ|| 23 ಜಾ|| ಕುರುಬರ ಉ|| ಒಕ್ಕಲುತನ ಹಾಗು 2] ಗಂಗಪ್ಪ ತಂದೆ ಹಣಮಂತ್ರಾಯ ಲಕ್ಕಾಗೋಳ ವಯಾ|| 50 ಜಾ|| ಕುರುಬರ ಉ|| ಒಕ್ಕಲುತನ 3) ಗೌಡಪ್ಪ ತಂದೆ ಹಣಮಂತ್ರಾಯ ವಯಾ|| 47 ಜಾ|| ಕುರುಬರ ಉ|| ಒಕ್ಕಲುತನ 4) ಭಿಮಣ್ಣ ತಂದೆ ಹಣಮಂತ್ರಾಯ ವಯಾ|| 43 ಜಾ|| ಕುರುಬರ ಉ|| ಒಕ್ಕಲುತನ 5) ವಿರುಪಾಕ್ಷಿ ತಂದೆ ಗಂಗಪ್ಪ ವಯಾ|| 28 ಜಾ|| ಕುರುಬರ ಉ|| ಒಕ್ಕಲುತನ 6) ಕಾಶಿನಾಥ ತಂದೆ ಗಂಗಪ್ಪ ವಯಾ|| 25 ಜಾ|| ಕುರುಬರ ಉ|| ಒಕ್ಕಲುತನ 7) ಮಾಳವ್ವ ಗಂಡ ಭೀಮಣ್ಣ ವಯಾ|| 30 ಜಾ|| ಕುರುರಬ ಉ|| ಹೊಲಮನೆಗೆಲಸ ಹಾಗು 2ನೇ ಪಾಟರ್ೀಯ 1) ಮಡಿವಾಳಪ್ಪ ತಂದೆ ನಿಂಗಪ್ಪ ಲಕ್ಕಾಗೋಳ ವಯಾ|| 45 ಜಾ|| ಕುರುಬರ ಉ|| ಒಕ್ಕಲುತನ 2) ಕಳಸಪ್ಪ ತಂದೆ ನಿಂಗಪ್ಪ ಲಕ್ಕಾಗೋಳ ವಯಾ|| 38 ಜಾ|| ಕುರುಬರ ಉ|| ಒಕ್ಕಲುತನ 3) ಸಂಗಪ್ಪ ತಂದೆ ನಿಂಗಪ್ಪ ಲಕ್ಕಾಗೋಳ ವಯಾ|| 35 ಜಾ|| ಕುರುಬರ ಉ|| ಒಕ್ಕಲುತನ 4) ಶಿವಬಾಯಿ ಗಂಡ ನಿಂಗಪ್ಪ ಲಕ್ಕಾಗೋಳ ವಯಾ|| 60 ಜಾ|| ಕುರುಬರ 5) ನಾಗಮ್ಮ ಗಂಡ ಮಡಿವಾಳಪ್ಪ ವಯಾ|| 40 ಜಾ|| ಕುರುಬರ ಉ|| ಮನೆಗೆಲಸ ಸಾ|| ಎಲ್ಲರೂ ಏವೂರ ಇದ್ದು ಸದರಿ ಎರಡು ಪಾಟರ್ಿ ಜನರ ಮದ್ಯ ಹೊಲ ಸವರ್ೇ ನಂಬರ 300 ರ ವಿಷಯದಲ್ಲಿ ಭಾರೀ ವೈಮನಸ್ಸು ಬೆಳೆದು ಗ್ರಾಮದಲ್ಲಿ ಎರಡು ಪಾಟರ್ಿಗಳಾಗಿ ಎರಡು ಪಾಟರ್ಿ ಜನರ ಮದ್ಯ ಗಲಾಟೆಗಳಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾಗು ಜೀವ ಹಾನಿಯಾಗುವ ಸಂಭವ ಕಂಡು ಬಂದಿದ್ದರಿಂದ ಮರಳಿ ಠಾಣೆಗೆ 4 ಪಿ ಎಮ್ ಕ್ಕೆ ಬಂದು ಸದರ ಎರಡು ಪಾಟರ್ಿ ಜನರ ವಿರುದ್ದ ಮುಂಜಾಗ್ರಾತ ಕ್ರಮವಾಗಿ ಠಾಣಾ ಪಿಎಆರ್ ನಂಬರ 09/2020   ಕಲಂ 107 ಸಿಆರ್ಪಿಸಿ ನೇದ್ದರಲ್ಲಿ ಕ್ರಮ ಜರಗಿಸಿದ್ದು ಕಾರಣ ಸದರ ಎರಡು ಪಾಟರ್ಿ ಜನರನ್ನು ಕರೆಯಿಸಿ ಗ್ರಾಮದಲ್ಲಿ ಒಳ್ಳೆಯ ನಡತೆಯಿಂದ ಇರುವಂತೆ ಕಲಂ 111 ಸಿಆರ್ಪಿಸಿ ಅಡಿಯಲ್ಲಿ ಇಂಟೇರಿಯಂ ಬಾಂಡ ಬರೆಯಿಸಿಕೊಳ್ಳಲು  ಮಾನ್ಯರವರಲ್ಲಿ ವಿನಂತಿ ಇರುತ್ತದೆ.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 93/2020 ಕಲಂ. 279,337,338 ಐಪಿಸಿ : ಇಂದು ದಿನಾಂಕ. 08-07-2020 ರಂದು ಬಾಲಂಕು ಆಸ್ಪತ್ರೆ ರಾಯಚೂರ ಯಿಂದ ಎಮ್.ಎಲ್.ಸಿ ಪಡೆದು ಫಿಯರ್ಾದಿ ಹೇಳಿಕೆ ಪಡೆದುಕೊಂಡು ಸಾಯಂಕಾಲ6-30 ಗಂಟೆಗೆ ಮರಳಿ ಠಾಣೆಗೆ ಬಂದು ಪಿರ್ಯಾದಿ ಹೇಳಿಕೆ ಸಾರಾಂಶವೇನೆಂದರೆ, 08-07-2020 ರಂದು ಬೆಳಿಗ್ಗೆ 8-35 ಎ.ಎಮ್ ಸುಮಾರಿಗೆ ಫಿಯರ್ಾದಿ ಮತ್ತು ರಂಗಪ್ಪ ಇಬ್ಬರೂ ಸೇರಿ ಹಿರೋ ಹೋಂಡಾ ಬೈಕ ನಂ. ಕೆಎ-36 ಇ.ಕೆ-7900 ನೇದ್ದರ ಮೇಲೆ ಬೆಳಗುಂದಿ ಗ್ರಾಮದಿಂದ ಹೊಲದ ಕಡೆಗೆ ಹೊರಟಾಗ ಸೈದಾಪೂರ ಕಡೆಯಿಂದ ಬಂದ  ಮಹೇಶ ತಂದೆ ನಾಗಪ್ಪ ನಲ್ಲಿ ವಯ|| 20 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಕಡೆಚೂರ ಪಲ್ಸ್ರರ್ ಬೈಕ ನಂ. ಕೆ.ಎ-33 ಎಕ್ಷ-1006 ನೇದ್ದರ ಚಾಲಕ ಇಬ್ಬರೂ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿದ್ದು, ಅಪಘಾತದಲ್ಲಿ  ಫಿಯರ್ಾದಿಗೆ ಬಾಯಿಗೆ ಮತ್ತು ಕಣ್ಣಿಗೆ ರಕ್ತಗಾಯ ಮತ್ತು ರಂಗಪ್ಪ ಇವರಿಗೆ ಎಡ ಮೊಳಕಾಲು ಮುರಿದಂತೆ ಮತ್ತು ಬಲ ಕೀವಿಗೆ ರಕ್ತ ಗಾಯವಾಗಿದ್ದು. ಮಹೇಶನಿಗೆ ತಲೆಯ ಮುಂದಿನ ಬಾಗಕ್ಕೆ ರಕ್ತ ಗಾಯ ಮತ್ತು ಮೂಗಿಗೆ ರಕ್ತ ಗಾಯ. ಮತ್ತು ಸಾಬಮ್ಮ  ಇವರಿಗೆ ಮೊಳಕಾಲಿಗೆ ರಕ್ತ ಗಾಯ ತಲೆಗೆ ಗುಪ್ತ ಗಾಯ ವಾಗಿದ್ದು ಇರುತ್ತದೆ. 

ಗಂಡ ಸೈದಾಪೂರ ನಾರಾಯಣಪೇಟ ರೋಡ ವಿ.ವಿ.ಹೆಚ್.ಎಸ್. ಶಾಲೆಯ ಹತ್ತಿರ ಹಿರೋ ಹೊಂಡ ಮೋಟಾರ ಸೈಕಲ್ ನಂ ಕೆ.ಎ-36 ಆರ್-7132 ನೇದ್ದರ ಮೇಲೆ ಹೊರಟಾಗ ಹಂದಿ ಅಡ್ಡ ಬಂದು ಗಾಡಿ ಸ್ಕಿಡ್ ಆಗಿ ಬಿದ್ದಿದ್ದು ತಲೆಗೆ ಬಾರಿ ಗುಪ್ತ ಗಾಯವಾಗಿ ಎಡ ಕೀವಿಯಿಂದ ರಕ್ತ ಬರುತ್ತಿದ್ದು ಮತ್ತು ಮೂಗಿನ ಮೇಲೆ ರಕ್ತ ಗಾಯ ವಾಗಿರುತ್ತದೆ. ಅಂತ ಸಾರಾಂಶದ ಮೆಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ.92/2020 ಕಲಂ. 279, 338 ಐಪಿಸಿ ಐ.ಎಮ್.ವಿ.ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!