ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/07/2020

By blogger on ಸೋಮವಾರ, ಜುಲೈ 6, 2020

\


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/07/2020 
                                                                                                               
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 90/2020 ಕಲಂ 323, 341, 504, 506 ಸಂಗಡ 34 ಐಪಿಸಿ: ಇಂದು ದಿನಾಂಕ 05-07-2020 ರಂದು 9-30 ಎ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಗಂಗಮ್ಮಾ ಗಂಡ ಶರಣಪ್ಪಾ ಮಡಿವಾಳ ವಯಾ: 50 ಜಾ: ಮಡಿವಾಳ ಉ: ಹೋಲಮನೆಗೆಲಸ ಸಾ: ಕೌಳೂರ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನಂದರೆ ನನ್ನ ಗಂಡನಾದ ಶರಣಪ್ಪಾ ಇತನು ಮೃತಪಟ್ಟಿದ್ದು ನನ್ನ ಗಂಡನಿಗೆ ನಿಂಗಪ್ಪಾ ಹಾಗೂ ದೇವಪ್ಪಾ ಇಬ್ಬರು ಸಹೋದರರಿರುತ್ತಾರೆ. ಎಲ್ಲರೂ ಬೇರೆ ಬೇರೆಯಾಗಿ ವಾಸವಾಗಿರುತ್ತೆವೆ. ನನ್ನ ಮೈದುನ ದೇವಪ್ಪ  ಇತನ ಮಗಳಾದ ಮೌನಾಶ್ರೀ ಇವಳಿಗೆ ಈಗ ಕೆಲವು ದಿವಸಗಳ ಹಿಂದೆ ನಾಯಕಲ್ದಿಂದ ಬೀಗರು ನೋಡಲಿಕ್ಕೆ ಬಂದು ಹೋಳಿಗೆ ಉಂಡು ಹೋಗಿದ್ದು, ಆ ಸಮಯದಲ್ಲಿ ದೇವಪ್ಪಾ ಇತನು ನಮಗೆ ಅವರ ಮಗಳ ಕಾರ್ಯಕ್ರಮಕ್ಕೆ ಕರೆದಿರಲಿಲ್ಲಾ. ಇದರಿಂದ ಅವರು ಮತ್ತು ನಾವು ಮಾತಾಡುತ್ತಿರಲಿಲ್ಲಾ. ಹೀಗಿದ್ದು ದಿನಾಂಕ 26-06-2020 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನಾಯಕಲದಿಂದ ನನ್ನ ಮೈದುನನಾದ ದೇವಪ್ಪಾ ಇತನ ಬೀಗರು ಅವರ ಮಗಳಾದ ಮೌನಾಶ್ರೀ ಇವಳ ನಿಶ್ಚಯ ಕಾರ್ಯಕ್ರಮಕ್ಕೆ ಬಂದಿದ್ದರು. ಸಾಯಂಕಾಲ 4 ಗಂಟೆ ಸುಮಾರಿಗೆ  ನನ್ನ ಮಕ್ಕಳಾದ ನಿಂಗಪ್ಪಾ ಮತ್ತು ರೆಡ್ಡಿ ಹಾಗೂ  ನಮ್ಮೂರ ನಿಂಗಾರೆಡ್ಡಿ ತಂದೆ ಮರೆಪ್ಪಾ ಬಾವೂರ ಎಲ್ಲರೂ ಶರಣಪ್ಪಾ ಬಾಡದೊರ ಇವರ ಮನೆಯ ಹತ್ತಿರ ಇದ್ದಾಗ ಆ ವೇಳೆಯಲ್ಲಿ ನನ್ನ ದೊಡ್ಡ ಮೈದುನನಾದ ನಿಂಗಪ್ಪಾ ಇತನ ಮಗನಾದ ಮೋನಪ್ಪಾ ಇತನು ನನ್ನ ಮಕ್ಕಳ ಹತ್ತಿರ ಹೋಗಿ ಭೋಸಡಿ ಮಕ್ಕಳೇ ಮಕ್ಕಳು ಹೇಗೆ ಕುಂತಾರ ನೋಡು ಮುಖ ಒಣಗಿಸಿಕೊಂಡು ಅವರಿಗೆ ನಮ್ಮ ಕಾರ್ಯಕ್ರಮಕ್ಕೆ ಕರೆದಿಲ್ಲಾ ಅಂತಾ ಹೀಗೆ ಕುಂತಾರ ಸೂಳೇ ಮಕ್ಕಳೇ ಅಂತಾ ಬೈಯ್ಯತ್ತಿದ್ದಾಗ ಆಗ ನನ್ನ ಮಕ್ಕಳು ಮೋನಪ್ಪನ ಜೋತೆಯಲ್ಲಿ ಜಗಳಕ್ಕೆ ಬಿದ್ದು ಬಾಯಿ ಮಾಡಿಕೊಳ್ಳುತ್ತಿದ್ದಾಗ ನಾನು ಕೂಡಾ ಅಲ್ಲಿಗೆ ಹೋದೇನು ಅಷ್ಟರಲ್ಲಿ ಅಲ್ಲಿಗೆ ನನ್ನ ಮೈದುನನರಾದ 1) ನಿಂಗಪ್ಪಾ ತಂದೆ ಸಾಬಣ್ಣಾ ಮಡಿವಾಳ 2) ದೇವಪ್ಪಾ ತಂದೆ ಸಾಬಣ್ಣಾ ಮಡಿವಾಳ ಮತ್ತು ದೇವಪ್ಪನ ಹೆಂಡತಿಯಾದ 3) ಶರಣಮ್ಮಾ ಗಂಡ ದೇವಪ್ಪಾ ಮಡಿವಾಳ ಹಾಗೂ ಅಲ್ಲಿಯೇ ಇದ್ದ 4) ಮೋನಪ್ಪಾ ತಂದೆ ನಿಂಗಪ್ಪಾ ಮಡಿವಾಳ ಎಲ್ಲರೂ ಸೇರಿಕೊಂಡು ನನ್ನ ಮಕ್ಕಳಿಗೆ ಎಲೇ ಭೋಸಡಿ ಮಕ್ಕಳೇ ನಿಮಗೆ ಸೊಕ್ಕು ಬಾಳ ಬಂದಿದೆ ಇವತ್ತು ನಿಮಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ನನ್ನ ಮಕ್ಕಳ ತೆಕ್ಕೆ ಕುಸ್ತಿಗೆ ಬಿದ್ದಾಗ ನಾನು ನನ್ನ ಮಕ್ಕಳಿಗೆ ಅಲ್ಲಿಂದ ಕರೆದುಕೊಂಡು ನಮ್ಮ ಮನೆಯ ಕಡೆಗೆ ಹೋಗುವಾಗ ಆ 4 ಜನರು ನಮಗೆ ಮುಂದೆ ಹೋಗದಂತೆ ತಡೆದು ಅಡ್ಡಗಟ್ಟಿ ನಿಲ್ಲಿಸಿ ಎಲ್ಲಿಗೆ ಹೋಗುತ್ತಿರಿ ಇವತ್ತು ನಿಮ್ಮ ಸೊಕ್ಕು ಮುರಿಯುತ್ತೆವೆ ಅಂತಾ ನಿಂಗಪ್ಪಾ, ದೇವಪ್ಪಾ ಮತ್ತು ಮೋನಪ್ಪಾ ಮೂವರು ಕೂಡಿ ನನ್ನ ಮಕ್ಕಳಿಗೆ ಹಿಡಿದು ನೆಲಕ್ಕೆ ಹಾಕಿ ತಮ್ಮ ಮನಸ್ಸಿಗೆ ಬಂದ ಹಾಗೇ ಕೈಯಿಂದ ಹೊಡೆದು ಕಾಲಿನಿಂದ ಒದ್ದರು. ಆಗ ನಾನು ಅವರಿಗೆ ಹೊಡೆಯುವುದನ್ನು ಬಿಡಿಸಿಕೊಳ್ಳುವಾಗ ದೇವಮ್ಮಾ ಗಂಡ ದೇವಪ್ಪಾ ಇವಳು ನನಗೆ ಕೈಯಿಂದ ಬೆನ್ನಿಗೆ ಮತ್ತು ಕಪಾಳಕ್ಕೆ ಹೊಡೆದಳು. ಆಗ ನಾವೇಲ್ಲರೂ ಒದರಾಡುವುದು ಚೀರಾಡುವುದು ಮಾಡುತ್ತಿದ್ದಾಗ ಅದೇ ವೇಳೆಗೆ ಅಲ್ಲಿಯೇ ಇದ್ದ ನಿಂಗಾರೆಡ್ಡಿ ತಂದೆ ಮರೆಪ್ಪಾ ಬಾವೂರ ಇವರು ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಅವರು ಜಗಳಾ ಬಿಟ್ಟು ಹೋಗುವಾಗ ಇವತ್ತು ಉಳಿದಿರಿ ಇನ್ನೊಮ್ಮೆ ಸಿಗರಿ ಸೂಳೇ ಮಕ್ಕಳೇ ನಿಮಗೆ ಖಲಾಸ ಮಾಡುತ್ತೆವೆ ಅಂತಾ ಜೀವದ ಭಯ ಹಾಕಿ ಹೋದರು. ನಮಗೆ ಅಷ್ಟೇನು ಪೆಟ್ಟಾಗದ ಕಾರಣ ನಾವು ದವಾಖಾನೆಗೆ ತೋರಿಸಿಕೊಂಡಿಲ್ಲಾ ಈ ವಿಷಯದ ಬಗ್ಗೆ ಮನೆಯಲ್ಲಿ ಮತ್ತು ಸಮಾಜದವರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿದ್ದು ಬಗ್ಗೆ ಮೇಲ್ಕಂಡ 4 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿ ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಜವಿದೆ. ಜಗಳದಲ್ಲಿ ನನ್ನ ಹಾಗೂ ನನ್ನ ಅಣ್ಣನ ಮಗನಿಗೆ ಅಷ್ಟೇನು ಪೆಟ್ಟಾಗದ ಕಾರಣ ಆಸ್ಪತ್ರೆಗೆ ತೊರಿಸಿಲ್ಲಾ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 90/2020 ಕಲಂ 323, 341, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 91/2020 ಕಲಂ. 87 ಕೆ.ಪಿ ಎಕ್ಟ್ 1963 : ಇಂದು ದಿನಾಂಕ; 05-07-2020 ರಂದು 6-45 ಪಿಎಮ್ ಕ್ಕೆ ಶ್ರೀ ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ಯಾದಗಿರಿ ಗ್ರಾಮೀಣ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ ನಾನು ಇಂದು ದಿನಾಂಕ. 13/05/2020 ರಂದು 3-15  ಪಿಎಮ್ ಕ್ಕೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇರುವಾಗ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಓರುಂಚಾ  ತಾಂಡಾದ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ತಿಳಿಸಿದ್ದು, ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 91/2020 ಕಲಂ. 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಪೊಲೀಸ ಠಾಣೆ ಗುನ್ನೆ ನಂ:- 92/2020 ಕಲಂ 143, 147, 148, 323, 324, 504, 506 ಸಂ 149 ಐಪಿಸಿ : ದಿನಾಂಕ 03/07/2020 ರಂದು ಸಾಯಂಕಾಲ 7-00 ಗಂಟೆಗೆ ಫಿರ್ಯಾಧಿ ಮತ್ತು ಅವನ ಮನೆಯವರು ತಮ್ಮ ಮನೆಯಲ್ಲಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾಧಿಯ ಮನೆಯ ಹತ್ತಿರ ಬಂದು ಏ ಬೋಸಡಿ ಮಕ್ಕಳೇ ನಾವು ಮಾಡುವ ಅಂಗನವಾಡಿ ಕಟ್ಟಡದ ಕೆಲಸದಲ್ಲಿ ನೀವು ತಲೆ ಯಾಕೆ ಹಾಕುತ್ತಿದ್ದಿರಿ, ನಿಮಗೆ ಬಹಳ ಸೊಕ್ಕುಯಿದೆ ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕುತ್ತಿದ್ದರು, ಆಗ ನಾನು ಯಾಕೆ ಬೈಯ್ಯುತ್ತಿದ್ದಿರಿ, ಆ ಕೆಲಸ ನಮಗೆ ಸಿಕ್ಕಿದೆ ನಾವು ಕೆಲಸ ಮಾಡಿಸುತ್ತೆವೆ ಅಂತಾ ಅಂದಿದ್ದಕ್ಕೆ ಅವರೆಲ್ಲರೂ ಕೂಡಿಕೊಂಡು  ಅವಾಚ್ಯವಾಗಿ ಬೈದು, ಕಟ್ಟಿಗೆಯಿಂದ, ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ ಬಗ್ಗೆ.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 47/2020 ಕಲಂ 323,498(ಎ),504,506,ಸಂಗಡ 34 ಐ.ಪಿ.ಸಿ : ಇಂದು ದಿನಾಂಕ 05/07/2020 ರಂದು 3:00 ಪಿ.ಎಂ ಕ್ಕೆ ಶ್ರೀಮತಿ ಶಿವಮ್ಮ ಗಂಡ ಬೀರಪ್ಪ ಹುಲಿಬೆಂಚಿ ವ:23 ವರ್ಷ ಉ:ಕೂಲಿಕೆಲಸ ಜಾ:ಹಿಂದು ಕುರಬರ ಸಾ: ಮದಲಿಂಗನಾಳ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಪಿಯರ್ಾದಿ ಅಜರ್ಿಯ ಸಾರಾಂಶವೆನೆಂದರೆ ನನ್ನ ತವರು ಮನೆ ಮದಲಿಂಗನಾಳ ಗ್ರಾಮವಿದ್ದು ನನಗೆ ಈಗ ಸುಮಾರು 6 ವರ್ಷಗಳ ಹಿಂದೆ ನಮ್ಮೂರ ಬೀರಪ್ಪ ತಂದೆ ಬಸಪ್ಪ ಹುಲಿಬೆಂಚಿ ರವರೊಂದಿಗೆ ನಮ್ಮ ಸಂಪ್ರದಾಯದ ಪ್ರಕಾರ ನಮ್ಮ ಸಮಾಜದ ಗುರುಹಿರಿಯರಾದ ಶರಣಪ್ಪ ರಕ್ಕಸಗಿ,  ಸಾಬಣ್ಣ ರಕ್ಕಸಗಿ, ಸಾಬಗೌಡ ಪೊಲೀಸ್ ಪಾಟೀಲ ,ವೆಂಕನಗೌಡ ಪೊಲೀಸ್ ಪಾಟೀಲ, ಸೋಮನಿಂಗಪ್ಪ ಭಂಗಿ  ಹಾಗೂ ಊರ ಗುರುಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದು ಇರುತ್ತದೆ . ನಾನು ಹಾಗೂ ನನ್ನ ಗಂಡ ಮದುವೆಯಾದ ನಂತರ ಎರಡು ವರ್ಷದ ವರೆಗೆ ಚೆನ್ನಾಗಿ ಇದ್ದು ನಮ್ಮ ದಾಂಪತ್ಯ ಜೀವನದಿಂದ ನನಗೆ ಒಂದು ಹೆಣ್ಣುಮಗು ಜನಸಿರುತ್ತದೆ. ನನ್ನ ಗಂಡನು ನನಗೆ ಒಂದು ಮಗುವಾದ ನಂತರ ನನಗೆ ಕರೆದುಕೊಂಡು ಹೋಗಲು ಬಂದಿರಲಿಲ್ಲ. ನನ್ನ ಮಗು ಈಗ 2 ವರ್ಷದ ಹಿಂದೆ ಅನಾರೋಗ್ಯದ ನಿಮಿತ್ಯ ಮೃತಪಟ್ಟಿದ್ದು ಇರುತ್ತದೆ. ನನ್ನ ಮಗು ಮೃತಪಟ್ಟ ನಂತರ ನನಗೆ ಮರಳಿ ಮಕ್ಕಳಗಾಗಿರುವದಿಲ್ಲ ಇದರಿಂದ ನನ್ನ ಗಂಡನು ನನಗೆ ಬೋಸುಡಿ ನಿನಗೆ ಮರಳಿ ಮಕ್ಕಳು ಆಗುವದಿಲ್ಲ ನೀನು ಗೊಡ್ಡಸೂಳಿ ಇದ್ದಿಯಾ ಅಂತಾ ಬೈದು ನನ್ನೊಂದಿಗೆ ಸರಿಯಾಗಿ ಸಂಸಾರ ಮಾಡುತ್ತಿರಲಿಲ್ಲ. ನಂತರ ನನ್ನ ಮೇಲೆ ವಿನಾಕಾರಣ ಸಂದೇಹಪಡುತ್ತಾ ನನಗೆ ಹೊಡೆಯುವದು ಬೈಯುವದು ಮಾನಸಿಕವಾಗಿ ಚುಚ್ಚಿ ಮಾತನಾಡುವದು ಮಾಡಹತ್ತಿದನು, ನೀನು ನಿನ್ನ ತವರು ಮನೆಗೆ ಹೋಗು ಅಂತಾ ನನ್ನ ತವರು ಮನೆಗೆ ಕಳುಹಿಸಿದನು. ನಾನು ನನ್ನ ತವರು ಮನೆಗೆ ಬಂದು ನನ್ನ ತಾಯಿಗೆ ಈ ವಿಷಯವನ್ನು ಹೇಳಿದ್ದು ನಂತರ ನನ್ನ ತಾಯಿ ಶರಣಮ್ಮ ರವರು ನಮ್ಮ  ಊರ ಹಿರಿಯರಾದ ಶರಣಪ್ಪ ರಕ್ಕಸಗಿ,  ಸಾಬಣ್ಣ ರಕ್ಕಸಗಿ, ಸಾಬಗೌಡ ಪೊಲೀಸ್ ಪಾಟೀಲ ,ವೆಂಕನಗೌಡ ಪೊಲೀಸ್ ಪಾಟೀಲ, ಸೋಮನಿಂಗಪ್ಪ ಭಂಗಿ  ರವರಿಗೆ ನಮ್ಮ ಊರ ಹಣಮಂತ ದೇವರ ಗುಡಿ ಕಟ್ಟೆಗೆ ಕರೆಯಿಸಿ ಈ ವಿಷಯವನ್ನು ಅವರಿಗೆ ಹೇಳಿದಳು ಆಗ ನಮ್ಮ ಊರ ಹಿರಿಯರು ನನ್ನ ಗಂಡ ಬೀರಪ್ಪನಿಗೆ ನಮ್ಮ ಊರ ಹಣಮಂತ ದೇವರ ಗುಟಿಯ ಕಟ್ಟೆಯ ಮೆಲೆ  ಕರೆಯಿಸಿ ಈ ಬಗ್ಗೆ ನ್ಯಾಯಾಪಂಚಾಯಿತಿ ಮಾಡಿದ್ದು ನಮ್ಮ ಊರ ದೈವದಲ್ಲಿ ನನ್ನ ಗಂಡನು  ನನ್ನನ್ನು  ಕರೆದುಕೊಂಡು ಹೋಗಿ ಚೆನ್ನಾಗಿ ಸಂಸಾರ ಮಾಡುತ್ತೇನೆ ಅಂತಾ ಹೇಳಿ ನನ್ನನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಕರೆದುಕೊಂಡು ಹೋಗಿ ಸ್ವಲ್ಪ ದಿನ ಚೆನ್ನಾಗಿ ನೋಡಿಕೊಂಡು ಮತ್ತೆ ನನ್ನ ಮೇಲೆ ಸಂದೇಹ ಪಡುತ್ತಾ ನೀನು ಅವನ ಜೊತೆ ಇದ್ದಿಯಾ ಇವನ ಜೊತೆ ಇದ್ದಿಯಾ ಅಂತಾ ನನಗೆ ಹೊಡೆಯುವದ ಮತ್ತು ಚುಚ್ಚುಮಾತುಗಳಿಂದ ಬೈಯುವದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಮಾಡುತ್ತಾ ಬಂದಿರುತ್ತಾನೆ ನಾನು ಈ ವಿಷಯವನ್ನು ನಮ್ಮ ತವರು ಮನೆಗೆ ಬಂದು ನನ್ನ ತಾಯಿ ಶರಣಮ್ಮ ಹಾಗೂ ನಮ್ಮ ತಾಯಿಯ ಅಣ್ಣನಾದ ಬಸಪ್ಪ ಹುಲಿಬೆಂಚಿ ರವರ ಮುಂದೆ ಹೇಳಿದ್ದು ಅವರು ನನಗೆ ಇದನ್ನೆಲ್ಲ ತಾಳಿಕೊಂಡು ನಿನ್ನ ಗಂಡನೊಂದಿಗೆ ಅನುಸರಿಸಿಕೊಂಡು ಹೋಗಮ್ಮ ನಿನ್ನ ಗಂಡನಿಗೆ ಇವತ್ತಲ್ಲ ನಾಳೆ ಬುದ್ದಿ ಬರುತ್ತದೆ ಆವಾಗ ನಿನ್ನ ಸಂಸಾರ ಚೆನ್ನಾಗಿ ಆಗುತ್ತದೆ ಅಂತಾ ನನಗೆ ಬುದ್ದಿಮಾತು ಹೇಳಿ ಮತ್ತೆ ನನ್ನ ಗಂಡನ ಮನೆಗೆ ಕಳುಹಿಸಿದ್ದರು. ನಾನು ಮರಳಿ ನನ್ನ ಗಂಡನ ಮನೆಗೆ ಹೋದಾಗ ಈಗ ಒಂದುವಾರದ ಹಿಂದೆ ಮತ್ತೆ ನನ್ನ ಗಂಡನು ನನ್ನ ಮೇಲೆ ಸಂದೆಹಪಟ್ಟು ನಾನು ನಮ್ಮ ವಾರಗಿಯವರೊಂದಿಗೆ ಮಾತನಾಡಿದಾಗ ಆಕೆ ಜೊತೆಯಾಕೆ ಮಾತನಾಡಿದಿ ಇವನ ಜೊತೆ ಯಾಕೆ ಮಾತನಾಡಿದಿ ಅಂತಾ ನನ್ನೊಂದಿಗೆ ಜಗಳ ತಗೆದು ನನಗೆ ಹೊಡೆದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಮಾಡಿದಾಗ ನಾನು ಮತ್ತೆ ನಿನ್ನೆ ದಿನ ನನ್ನ ತವರು ಮನೆಗೆ ಬಂದು ನಮ್ಮ ತಾಯಿಗೆ ಈ ವಿಷಯವನ್ನು ಹೇಳಿದ್ದು  ಇರುತ್ತದೆ ನಮ್ಮ ತಾಯಿಯವರು ನಿನ್ನೆ ದಿನ ನಮ್ಮ ಊರು ಹಿರಿಯರಾದ ಶರಣಪ್ಪ ರಕ್ಕಸಗಿ,  ಸಾಬಣ್ಣ ರಕ್ಕಸಗಿ, ಸಾಬಗೌಡ ಪೊಲೀಸ್ ಪಾಟೀಲ ,ವೆಂಕನಗೌಡ ಪೊಲೀಸ್ ಪಾಟೀಲ, ಸೋಮನಿಂಗಪ್ಪ ಭಂಗಿ  ರವರಿಗೆ ಕರೆಯಿಸಿ ಮತ್ತೆ ನನ್ನ ಮಗಳ ಗಂಡ ನನ್ನ ಮಗಳಿಗೆ ಹೊಡೆಯುವದು ಮತ್ತು ಬಡಿಯುವದು ಮಾಡುತ್ತಿದ್ದಾನೆ ಅಂತಾ ಅಂದಾಗ ನಮ್ಮ ಊರ ಹಿರಿಯರು ನನ್ನ ಗಂಡ ಬೀರಪ್ಪನಿಗೆ ಕರೆಯಿಸಿ ವಿಚಾರ ಮಾಡಿದಾಗ ಊರ ಹಿರಿಯರ ಮುಂದೆ ನನ್ನ ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಹೇಳಿ ನನ್ನನ್ನು ಕರೆದುಕೊಂಡು ಹೋಗಿ ನಿನ್ನೆ ದಿನ ಶನಿವಾರ ದಿನಾಂಕ 04/07/2020 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನಾನು ನನ್ನ ಗಂಡನ ಮನೆಯಲ್ಲಿ ಇದ್ದಾಗ ನನ್ನ ಗಂಡನು ನನಗೆ ಬೋಸುಡಿ ಸುಳಿ ನೀನು ಮತ್ತಮತ್ತೆ ನನ್ನನ್ನು ಊರ ದೈವದ ಮುಂದೆ ಕರೆಸಿ ನನಗೆ ಅವಮಾನ ಮಾಡುತ್ತಿಯಾ ನಾನು ನಿನ್ನ ಜೊತೆ ಸಂಸಾರ ಮಾಡುವದಿಲ್ಲ ನೀನು ಎಲ್ಲಿ ಬೇಕಾದರು ಇರು ಅಂತಾ ಅಂದು ನನ್ನೊಂದಿಗೆ ಜಗಳಕ್ಕೆ ಬಿದ್ದನು ಆಗ ನಾನು ನಿನ್ನನ್ನು ಮದುವೆಯಾಗಿ ಬಂದಿದ್ದೆನೆ ನಾನು ಎಲ್ಲಿ ಬೇಕಾದರು ಯಾಕೆ ಇರಲಿ ಅಂತಾ ಅಂದಾಗ ನನ್ನ ಗಂಡನ ಅಣ್ಣ ಮಾಳಪ್ಪ ಹುಲಿಬೆಂಚಿ ಈತನು ಬೋಸುಡಿ ಅಂತಾ ನನಗೆ ಅವಾಚ್ಯವಾಗಿ ಬೈದನು ಆಗ ನಾನು ಮಾಳಪ್ಪನಿಗೆ ನಾನು ನನ್ನ ಗಂಡ ಏನುಬೇಕಾದರು ಮಾಡುತ್ತವೆ ನೀವು ಮದ್ಯ ಬರಬೇಡಿರಿ ಅಂತಾ ಅಂದಾಗ ನನ್ನ ಗಂಡ ಬೀರಪ್ಪ ಹಾಗೂ ನನ್ನ ಗಂಡನ ಅಣ್ಣ ಮಾಳಪ್ಪ ರವರು ನನಗೆ ನಮಗೆ ಎದುರುಮಾತನಾಡುತ್ತಿಯಾ ಬೋಸುಡಿ ಸೂಳಿ ಅಂತಾ ಅಂದು ನನ್ನಗಂಡನು ಕೈಯಿಂದ ನನ್ನ ಬೆನ್ನಿಗೆ ಹಾಗೂ ಕಪಾಳಕ್ಕೆ ಹೊಡೆದಿದ್ದು ನನ್ನ ಗಂಡನ ಅಣ್ಣ ಮಾಳಪ್ಪನು ಕೈಯಿಂದ ನನ್ನ ಕಪಾಳಕ್ಕೆ ಹೊಡದಿದ್ದು ಆಗ ನಾನು ಚೀರಾಡ ಹತ್ತಿದಾಗ ಬೊಸುಡಿ ಒದರಾಡಿದರಿ ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಆಗ ನಾನು ಮತ್ತೆ ಚೀರಾಡಹತ್ತಿದಾಗ ಅಲ್ಲಿಯೇ ಇದ್ದ ಗಿರಿಯಪ್ಪ ನಾಯಕೋಡಿ, ದೇವಪ್ಪ ನಾಲತವಾಡ, ಸಾಬಣ್ಣ ರಕ್ಕಸಗಿ, ರವರು ಬಂದು ಬಡಿಸಿದ್ದು ಇರುತ್ತದೆ. ಕಾರಣ ನನ್ನ ಮೇಲೆ ಸಂದೇಹಪಟ್ಟು ನನಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಮಾಡಿ ನನಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ನನ್ನ ಗಂಡ ಬೀರಪ್ಪ ಹಾಗೂ ನಮ್ಮ ಮಾವ ಮಾಳಪ್ಪನ ಮೇಲೆ  ಕೇಸು ಮಾಡಬೇಕು ನನಗೆ ಜಗಳದಲ್ಲಿ ಅಷ್ಟೇನು ಪೆಟ್ಟುಗಳು ಆಗಿರುವದಿಲ್ಲ ನಾನು ದವಾಖಾನೆಗೆ ಹೋಗುವದಿಲ್ಲ ನಾನು ನಿನ್ನೆ ದಿನ ನಮ್ಮ ಮನೆಯವರ ಜೊತೆ ವಿಚಾರಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಪಿಯರ್ಾದಿ  ಅಜರ್ಿಕೊಟ್ಟಿರುತ್ತೇನೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 47/2020 ಕಲಂ 323,498(ಎ), 504, 506, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 13/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ:05/07/2020 ರಂದು ನಾನು ಮತ್ತು ರವಿಕುಮಾರ ಸಿಪಿಸಿ-17 ಕೂಡಿ ಹಳ್ಳಿ ಬೇಟಿ ಕುರಿತು ಚನ್ನೂರ, ವನದುಗಾಘ, ಕಾಡಂಗೇರಾ, ಹೋಸ್ಕೆರಾ ಮತ್ತು ಸ್ಕೇರಾ ತಾಂಡಾಗಳಿಗೆ ಬೇಟಿ ಮಾಡಿ ಬಂದಿದ್ದು, 10.30 ಎಎಂ ಸುಮಾರಿಗೆ ಚನ್ನೂರ ಗ್ರಾಮದ ಬೇಟಿ ಮಾಡಿದಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ಗೋಗಿ ಗ್ರಾಮದಲ್ಲಿನ ನಿವಾಸಿತರಾದ 1) ದೇವಿಂದ್ರಪ್ಪ ತಂದೆ ವೀರುಪಾಕ್ಷಪ್ಪ ಕುಂಬಾರ ವಯಾ: 54 ವರ್ಷ 2) ಗುರುಲಿಂಗಪ್ಪ ತಂದೆ ವೀರುಪಾಕ್ಷಪ್ಪ ಕುಂಬಾರ ವಯಾ: 49 ವರ್ಷ 3) ಕಾಂತಪ್ಪ ತಂದೆ ವೀರುಪಾಕ್ಷಪ್ಪ ಕುಂಬಾರ ವಯಾ: 47 ವರ್ಷ ಎಲ್ಲರೂ ಉ: ಒಕ್ಕಲುತನ ಜಾ: ಕುಂಬಾರ ಸಾ: ಚನ್ನೂರ ಕೆೆ ಇವರುಗಳು, ಚನ್ನೂರ ಕೆ ಗ್ರಾಮದವರೇ ಆದ ಶಿವಪ್ಪ @ ಶಿವರಾಜಪ್ಪ ತಂದೆ ಬಸಣ್ಣ ಕುಂಬಾರ ವಯಾ:35 ವರ್ಷ ತಾ: ಶಹಾಪೂರ ಜಿ: ಯಾದಗಿರಿ. ಇವರೊಂದಿಗೆ ಚನ್ನೂರ ಸೀಮಾಂತರ ಹೊಲ ಸವರ್ೇ ನಂ: 143 ವಿಸ್ತೀರ್ಣ 13 ಎಕರೆ 21 ಗುಂಟೆ  ಜಮೀನಿನ ವಿಷಯದಲ್ಲಿ ತಕರಾರುಗಳಾಗಿ, ಕಳೆದ ಸಾಲಿನಲ್ಲಿ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 81/2019 ಕಲಂ: 447, 427, 504 ಸಂ: 34 ಐ.ಪಿ.ಸಿ ನೇದ್ದು, ವರದಿಯಾಗಿರುತ್ತದೆ. ಈಗ ಸದರಿ ಜಮೀನಿನ ವಿಷಯದಲ್ಲಿ ಮಾನ್ಯ ಸಿವ್ಹಲ್ ನ್ಯಾಯಾಲಯ ಶಹಾಪೂರ ದಲ್ಲಿ ದಾವೆ ನಡೆದಿರುವದಾಗಿ ತಿಳಿದು ಬಂದಿರುತ್ತದೆ. ಮತ್ತು ಸದರಿ ಜಮೀನಿನಲ್ಲಿ ಈ ವರ್ಷ ಕೂಡ ಉಳುಮೆ ಮಾಡುವ ವಿಷಯದಲ್ಲಿ ಎರಡು ಪಾಟರ್ೀಗಳ ಜನರು ಪುನ: ಜಗಳ ಮಾಡಿಕೊಳ್ಳುವ ಸಂಭವ ಕಂಡು ಬಂದಿದ್ದು, ಈ ಎರಡೂ ಪಾಟರ್ಿಯ ಜನರ ನಡುವೆ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 3 ಜನರ ವಿರುದ್ಧ ಇಂದು ದಿನಾಂಕ:05/07/2020 ರಂದು 03.30 ಪಿಎಮ್ ಕ್ಕೆ ಠಾಣೆ ಪಿ.ಎ.ಆರ್ ನಂ: 13/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 14/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ:05/07/2020 ರಂದು ನಾನು ಮತ್ತು ರವಿಕುಮಾರ ಸಿಪಿಸಿ-17 ಕೂಡಿ ಹಳ್ಳಿ ಬೇಟಿ ಕುರಿತು ಚನ್ನೂರ, ವನದುಗಾಘ, ಕಾಡಂಗೇರಾ, ಹೋಸ್ಕೆರಾ ಮತ್ತು ಸ್ಕೇರಾ ತಾಂಡಾಗಳಿಗೆ ಬೇಟಿ ಮಾಡಿ ಬಂದಿದ್ದು, 10.30 ಎಎಂ ಸುಮಾರಿಗೆ ಚನ್ನೂರ ಗ್ರಾಮದ ಬೇಟಿ ಮಾಡಿದಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ಗೋಗಿ ಗ್ರಾಮದಲ್ಲಿನ ನಿವಾಸಿತರಾದ 1) ಶಿವಪ್ಪ @ ಶೀವರಾಜಪ್ಪ ತಂದೆ ಬಸ್ಸಣ್ಣ ಕುಂಬಾರ ವಯಾ: 40 ವರ್ಷ 2) ರಾಜಶೇಖರ ತಂದೆ ಬಸ್ಸಣ್ಣ ಕುಂಬಾರ ವಯಾ: 38 ವರ್ಷ 3) ನಿಂಗಣ್ಣ ತಂದೆ ಗುಂಡಪ್ಪ ಕುಂಬಾರ ವಯಾ: 35 ವರ್ಷ 4) ದೇವಿಂದ್ರಪ್ಪ ತಂದೆ ಗುಂಡಪ್ಪ ಕುಂಬಾರ ವಯಾ: 35 ವರ್ಷ ಎಲ್ಲರೂ ಉ: ಒಕ್ಕಲುತನ ಜಾ: ಕುಂಬಾರ ಸಾ: ಚನ್ನೂರ ಕೆೆ ಇವರುಗಳು, ಚನ್ನೂರ ಕೆ ಗ್ರಾಮದವರೇ ಆದ ದೇವಿಂದ್ರಪ್ಪ ತಂದೆ ವೀರುಪಾಕ್ಷಪ್ಪ ಕುಂಬಾರ ವಯಾ: 54 ವರ್ಷ ಸಾ: ಚನ್ನೂರ ತಾ: ಶಹಾಪೂರ ಜಿ: ಯಾದಗಿರಿ. ಇವರೊಂದಿಗೆ ಚನ್ನೂರ ಸೀಮಾಂತರ ಹೊಲ ಸವರ್ೇ ನಂ: 143 ವಿಸ್ತೀರ್ಣ 13 ಎಕರೆ 21 ಗುಂಟೆ  ಜಮೀನಿನ ವಿಷಯದಲ್ಲಿ ತಕರಾರುಗಳಾಗಿ, ಕಳೆದ ಸಾಲಿನಲಿ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 81/2019 ಕಲಂ: 447, 427, 504 ಸಂ: 34 ಐ.ಪಿ.ಸಿ ನೇದ್ದು, ವರದಿಯಾಗಿರುತ್ತದೆ. ಈಗ ಸದರಿ ಜಮೀನಿನ ವಿಷಯದಲ್ಲಿ ಮಾನ್ಯ ಸಿವ್ಹಲ್ ನ್ಯಾಯಾಲಯ ಶಹಾಪೂರ ದಲ್ಲಿ ದಾವೆ ನಡೆದಿರುವದಾಗಿ ತಿಳಿದು ಬಂದಿರುತ್ತದೆ. ಮತ್ತು ಸದರಿ ಜಮೀನಿನಲ್ಲಿ ಈ ವರ್ಷ ಕೂಡ ಉಳುಮೆ ಮಾಡುವ ವಿಷಯದಲ್ಲಿ ಎರಡೂ ಪಾಟರ್ಿಯ ಜನರ ನಡುವೆ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 04 ಜನರ ವಿರುದ್ಧ ಇಂದು ದಿನಾಂಕ:05/07/2020 ರಂದು 04.20 ಪಿಎಮ್ ಕ್ಕೆ ಠಾಣೆ ಪಿ.ಎ.ಆರ್ ನಂ: 14/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!