ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/07/2020

By blogger on ಶುಕ್ರವಾರ, ಜುಲೈ 3, 2020

                          ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/07/2020 
                                                                                                               
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 25/2020  ಕಲಂ 279,  338, 304(ಎ) ಐಪಿಸಿ : ದಿನಾಂಕ 01/07/2020 ರಂದು 01-30 ಪಿ.ಎಂ.ಕ್ಕೆ  ಶ್ರೀ  ಸಾಬಣ್ಣ ತಂದೆ ರಾಮಯ್ಯ ಕುಂಬಾರ ವಯ;62 ವರ್ಷ, ಜಾ;ಕುಂಬಾರ, ಉ;ಕುಂಬಾರಿಕೆ, ಸಾ;ಎಂ.ಹೊಸಳ್ಳಿ ತಾ;ಜಿ;ಯಾದಗಿರಿ  ಇವರು ಠಾಣೆಗೆ ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿಯನ್ನು ಸಲ್ಲಿಸಿದ ಸಾರಾಂಶವೇನೆಂದರೆ ನನ್ನ ಮಗನಾದ ವಿಶ್ವರಾಧ್ಯ @ ವಿಶ್ವನಾಥ ವಯ;26 ವರ್ಷ ಈತನು ದಿನಾಂಕ 29/06/2020 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಮಗಳಾದ ಶಾಂತಮ್ಮ ಈಕೆಗೆ ತನ್ನ ಸಂಗಡ ಕರೆದುಕೊಂಡು ನನ್ನ ಹಿರಿಮಗಳಾದ ಲಕ್ಷ್ಮೀ ಈಕೆಗೆ ಮಾತನಾಡಿಸಿಕೊಂಡು ಬರುತ್ತೇವೆಂದು ನಮ್ಮ ಮೋಟಾರು ಸೈಕಲ್ ನಂಬರ ಕೆಎ-33, ವಾಯ್-5433 ನೇದ್ದರ ಮೇಲೆ ನಮ್ಮೂರಿನಿಂದ ಮುದ್ನಾಳ ಗ್ರಾಮಕ್ಕೆ ಹೋಗಿದ್ದು ಇರುತ್ತದೆ. ಹೀಗಿದ್ದು ನಂತರ ರಾತ್ರಿ 10-30 ಪಿ.ಎಂ.ದ ಗಂಟೆ ಸುಮಾರಿಗೆ ನನ್ನ ಮೊಮ್ಮಗನಾದ ರಾಜು ತಂದೆ ಸಾಬಣ್ಣ ಸಾ;ಮುದ್ನಾಳ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಮಾವನಾದ ವಿಶ್ವಾರಾಧ್ಯ @ ವಿಶ್ವನಾಥ ಇವರು ಇಂದು ಸಾಯಂಕಾಲ ನಮ್ಮ ಮನೆಗೆ ಬಂದು ಅಮ್ಮನಿಗೆ ಮಾತನಾಡಿಸಿ ಊಟ ಮಾಡಿದ ನಂತರ ಚಿಕ್ಕಮ್ಮ ಶಾಂತಮ್ಮಳಿಗೆ ಇಲ್ಲಿಯೇ ಬಿಟ್ಟು ನಾನು ಎಂ.ಹೊಸಳ್ಳಿ ಊರಿಗೆ ಹೋಗಿ ನಾಳೆ ಬೆಳಿಗ್ಗೆ ಬರುತ್ತೇನೆಂದು ತನ್ನ ಮೋಟಾರು ಸೈಕಲ್ ತೆಗೆದುಕೊಂಡು ಹೋಗಿದ್ದು ಇರುತ್ತದೆ.  ಹೋದ ಸ್ವಲ್ಪ  ಸಮಯದಲ್ಲೇ ನನ್ನ ಸ್ನೇಹಿತರೊಬ್ಬರು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಿನ್ನ ಮಾಮನವರು ಮುದ್ನಾಳ ಕಡೆಯಿಂದ ಯಾದಗಿರಿಗೆ ಬರುವಾಗ ಡಾನ್ ಬೋಸ್ಕೋ ಶಾಲೆಯ ಮುಂದಿನ ರಸ್ತೆ ಮೇಲೆ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುವಾಗ ಚಾಲನೆ ಮೇಲಿನ ನಿಯಂತ್ರಣ ತಪ್ಪಿ ಸ್ಕಿಡ್ ಮಾಡಿಕೊಂಡು ಅಪಘಾತ ಮಾಡಿಕೊಂಡಿದ್ದು ಅವರಿಗೆ ಸದರಿ ಅಪಘಾತದಲ್ಲಿ ತಲೆಗೆ ಭಾರೀ ಒಳಪೆಟ್ಟಾಗಿದ್ದು ಬಲಕಿವಿಯಿಂದ ರಕ್ತ ಹೊರ ಬಂದಿರುತ್ತದೆ. ಆತನ ಮೋಟಾರು ಸೈಕಲ್ ಸ್ಥಳದಲ್ಲಿ ಬಿದ್ದಿದ್ದು ಅದರ ನಂಬರ ಕೆಎ-33, ವಾಯ್-5433 ಇದ್ದು ಈ ಅಪಘಾತವು ಈಗಷ್ಟೆ ಅಂದಾಜು 10 ಪಿ.ಎಂ.ಕ್ಕೆ ಜರುಗಿದ್ದು ಇರುತ್ತದೆ. ನೀವು ಕೂಡಲೇ ಘಟನಾ ಸ್ಥಳಕ್ಕೆ ಬರಬೇಕು ಅಂದಾಗ ನನಗೆ ಗಾಬರಿಯಾಗಿ ಕೂಡಲೇ ಘಟನಾ ಸ್ಥಳಕ್ಕೆ ನನ್ನ ತಾಯಿಯನ್ನು ಸಂಗಡ ಕರೆದುಕೊಂಡು ಬಂದು ನೋಡಲು ನನಗೆ ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜವಿದ್ದು ಒಂದು ಖಾಸಗಿ ಆಟೋದಲ್ಲಿ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ ನೀವು ಆಸ್ಪತ್ರೆಗೆ ಬರಬೇಕು ಅಂದಾಗ ನಾನು ಈ ವಿಷಯವನ್ನು ನನ್ನ ಅಣ್ಣನ ಮಗನಾದ ಸಾಬಣ್ಣ ತಂದೆ ಮಲ್ಲಯ್ಯ ಇವರಿಗೆ ತಿಳಿಸಿ ನನ್ನ ಸಂಗಡ ಕರೆದುಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಮಗ ವಿಶ್ವಾರಾಧ್ಯ @ ವಿಶ್ವಾನಾಥ ಈತನು ಚಿಕಿತ್ಸೆ ಪಡೆಯುತ್ತಿದ್ದು ಮೂಚರ್ೆ ಹೋಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇದ್ದಿರುವುದಿಲ್ಲ, ನಂತರ ಘಟನೆ ಬಗ್ಗೆ  ರಾಜು ಈತನಿಂದ ಮತ್ತೆ ತಿಳಿದುಕೊಂಡಿದ್ದು ನನಗೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಪೋಲೀಸರು ವಿಚಾರಣೆಗೆ ಬಂದಾಗ ಈ ಘಟನೆಯಲ್ಲಿ ಗಾಯಗೊಂಡ ಬಗ್ಗೆ ಮೊದಲು ಚಿಕಿತ್ಸೆ ಕೊಡಿಸುತ್ತೇವೆ ಹಾಗು ಮನೆಯಲ್ಲಿ ಹಿರಿಯರಿಗೆ ಕೇಳಿ ಕೇಸು ಕೊಡುತ್ತೆಂದು ಹೇಳಿರುತ್ತೇವೆ ನಂತರ ನನ್ನ ಮಗನಿಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬರುಗಿಗೆ ರೆಫರ್ಡ ಮಾಡಿದಾಗ ನಾವು  ನನ್ನ ಮಗ ವಿಶ್ವಾರಾಧ್ಯ @ ವಿಶ್ವಾನಾಥ ಈತನಿಗೆ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆ ಮಾಡಿರುತ್ತೇವೆ. ಸದ್ಯ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಘಟನೆ ಬಗ್ಗೆ ನಮಗೆ ಹಿರಿಯರು ಕೇಸು ಕೊಡಲು ತಿಳಿಸಿದ ಮೇರೆಗೆ ಇಂದು ದಿನಾಂಕ 01/07/2020 ರಂದು ನಿಮ್ಮ ಠಾಣೆಗೆ ಖುದ್ದಾಗಿ ಹಾಜರಾಗಿ ತಡವಾಗಿ ದೂರು ನೀಡುತ್ತಿದ್ದು ದಿನಾಂಕ 29/06/2020 ರಂದು ರಾತ್ರಿ 10 ಗಂಟೆ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಡಾನ್ ಬೋಸ್ಕೋ ಶಾಲೆಯ ಮುಂದಿನ ಮುಖ್ಯ ರಸ್ತೆ ಮೇಲೆ ಮೋಟಾರು ಸೈಕಲ ನಂ.ಕೆಎ-33, ವಾಯ್-5433 ನೆದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುವಾಗ ಚಾಲನೆ ಮೇಲಿನ ನಿಯಂತ್ರಣ ತಪ್ಪಿ ಸ್ಕಿಡ್ ಮಾಡಿಕೊಂಡು ಅಪಘಾತ ಮಾಡಿಕೊಂಡಿದ್ದು ಸದರಿ ಅಪಗಾತದಲ್ಲಿ ಆತನಿಗೆ ತಲೆಗೆ ಭಾರೀ ಗುಪ್ತಗಾಯವಾಗಿದ್ದು ಈ ಬಗ್ಗೆ ಆತನ ಮೇಲೆ ಕಾನೂನಿನ ಮುಂದಿನ ಕ್ರಮ ಜರುಗಿಸಿರಿ ಅಂತಾ ದೂರು ಅಜರ್ಿ ಇರುತ್ತದೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 25/2020 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಹೀಗಿದ್ದು  ಈ ಪ್ರಕರಣದಲ್ಲಿನ ಗಾಯಾಳು ವಿಶ್ವಾರಾಧ್ಯ ಇವರಿಗೆ ದಿನಾಂಕ 29/06/2020 ರಂದು ರಾತ್ರಿ 10 ಪಿ.ಎಂ.ಕ್ಕೆ ರಸ್ತೆ ಅಪಘಾತದಲ್ಲಾದ ಗಾಯಗಳಿಗೆ ಚಿಕಿತ್ಸೆ ನೀಡಿದ  ಯಾದಗಿರಿ ಸಕರ್ಾರಿ ಆಸ್ಪತ್ರೆಯ ವೈದ್ಯರು ಅದೇ ದಿನ  ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರ ಮೇರೆಗೆ ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಗೆ ಉಪಚಾರಕ್ಕಾಗಿ ದಾಖಲು ಮಾಡಿದ್ದು ಗಾಯಾಳು ಇವರು ದಿನಾಂಕ 29/06/2020 ರಿಂದ ಇಂದಿನವರೆಗೆ ಕಾಮರಡ್ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆಗೆ ಸ್ಪಂದಿಸದೇ ಇಂದು ದಿನಾಂಕ 03/07/2020  ರಂದು ಬೆಳಿಗಿನ ಜಾವ 03-25  ಎ.ಎಂ.ಕ್ಕೆ  ಅಪಘಾತದಲ್ಲಾದ ಗಾಯಗಳ ಬಾಧೆಯಿಂದ ಮೃತಪಟ್ಟ ಬಗ್ಗೆ  ಕಾಮರಡ್ಡಿಯ ಆಸ್ಪತ್ರೆಯಿಂದ ಡೆತ್ ಎಮ್.ಎಲ್.ಸಿ ಸ್ವೀಕೃತಗೊಂಡಿದ್ದು ಇರುತ್ತದೆ.  ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಿ ಅಂತಾ ಪುರವಣಿ ಹೇಳಿಕೆ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಮಾಹಿತಿಯನ್ನು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.  ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 55/2020 ಕಲಂ 379 ಐಪಿಸಿ : ಇಂದು ದಿನಾಂಕ. 03/07/2020 ರಂದು 11-30 ಎಎಮ್ ಸುಮಾರಿಗೆ ಫಿಯರ್ಾದಿ ಶ್ರೀ ಶಿವಕುಮಾರ ತಂದೆ ತಿಪ್ಪಣ್ಣ ಗೂರಮ್ ವ;30 ಜಾ; ಮುನ್ನರೆಡ್ಡಿ ಉ; ಪೀಲ್ಡ್ ಆಫೀಸರ್ ವಾಯಾ ಫೈನಾನ್ಸ್ ಯಾದಗಿರಿ ಸಾ; ಬೆಳ್ಳೂರು ತಾ; ಜಿ; ಬೀದರ ಹಾ.ವ; ಲಕ್ಷ್ಮೀ ನಗರ ಯಾದಗಿರಿ ಇವರು ಠಾಣೆಗೆ ಬಂದು ದೂರು ನೀಡಿದ ಸಾರಾಂಶವೇನೆಂದರೆ, ನಾನು ಜನೇವರಿ-2020 ರಿಂದ ಇಲ್ಲಿಯವರೆಗೆ ಯಾದಗಿರಿಯ ಲಕ್ಷ್ಮೀ ನಗರದಲ್ಲಿರುವ ವಾಯಾ ಫೈನಾನ್ಸದಲ್ಲಿ ಪೀಲ್ಡ್ ಆಫೀಸರ ಅಂತಾ ಕೆಲಸ ನಿರ್ವಹಿಸುತ್ತಿದ್ದು ಸದರಿ ವಾಯಾ ಫೈನಾನ್ಸದಲ್ಲಿಯೇ ವಸತಿ ಮಾಡಿಕೊಂಡು ಇರುತ್ತೇನೆ. ಹಿಗೀದ್ದು ನನ್ನದೊಂದು ಸೀಲ್ವರ ಬಣ್ಣದ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ. ಏಂ 39 ಕಿ  6798  ಅಂತಾ ಇದ್ದು, ಅದರ ಇಟಿರಟಿಜ ಓಠ-ಊಂ10ಂಉಊಊಅಆ2091, ಅಚಿ ಓಔ. ಒಃಐಊಂಖ08ಘಿಊಊಅ44717, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 20,000/ ರೂಪಾಯಿಗಳು. ಇದ್ದು ಈ ಮೋಟರ್ ಸೈಕಲ್ ನಾನೇ ಉಪಯೋಗ ಮಾಡುತ್ತಿದ್ದೆನು.  ಹೀಗಿದ್ದು, ದಿನಾಂಕ. 09/06/2020 ರಂದು 9-00 ಪಿ.ಎಂ ಸುಮಾರಿಗೆ ನಾನು ಯಾದಗಿರಿಯ ಲಕ್ಷ್ಮೀ ನಗರದಲ್ಲಿರುವ ನಮ್ಮ ವಾಯಾ ಫೈನಾನ್ಸ್ ಮುಂದುಗಡೆ ಎಂದಿನಂತೆ ನಾನು ನನ್ನ ವಾಹನವನ್ನು ಲಾಕ್ ಹಾಕಿ ನಿಲ್ಲಿಸಿ, ಫೈನಾನ್ಸದಲ್ಲಿ ಉಳಿದುಕೊಂಡೆನು. ನಂತರ ದಿನಾಂಕ. 10/06/2020 ರ ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ಎದ್ದು ನನ್ನ ಕೆಲಸಕ್ಕೆ ಹೋಗಲು ಫೈನಾನ್ಸ್ ಹೊರಗಡೆ ಬಂದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ಫೈನಾನ್ಸದ ಅಕ್ಕ ಪಕ್ಕದಲ್ಲಿ ನೋಡಿದರೂ ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ನಂತರ ನಾನು ವಾಯಾ ಫೈನಾನ್ಸ್ದಲ್ಲಿ ಪೀಲ್ಡ್ ಆಫೀಸರರಾಗಿ ಕೆಲಸ ಮಾಡಿಕೊಂಡು ನನ್ನೊಂದಿಗೆ ಫೈನಾನ್ಸ್ದಲ್ಲಿ ವಾಸವಾಗಿರುವ ಶಶಿಕುಮಾರ ತಂದೆ ಹುಸೇನಪ್ಪ ಹುಟಕನೊರ ಮತ್ತು ಅಶೋಕ ತಂದೆ ಗೈಬಣ್ಣ ವಾಡರ ಇವರಿಗೆ ತಿಳಿಸಿದಾಗ ಅವರು ಕೂಡ ಹೊರಗಡೆ ಬಂದು ನೋಡಿದರು. ಎಲ್ಲರು ಕೂಡಿ ಅಲ್ಲಲ್ಲಿ ಹುಡುಕಾಡಿದರೂ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ಮೋಟರ್ ಸೈಕಲ್ ಪತ್ತೆಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 55/2020 ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.16/2020 ಕಲಂ: 174 ಸಿ.ಆರ್.ಪಿ.ಸಿ : ಮೃತನು ತನಗೆ ಸೇರಿದ ಕೋಟೆಯ ಹತ್ತಿರದ ಹೊಲಕ್ಕೆ ಹೊಂದಿಕೊಂಡಿದ್ದ ಜಗನ್ನಾಥ ಮಾದಗುಂಡಿ ಇವರ ಹೊಲವನ್ನು ಕೂಡ ಪಾಲಿಗೆ ಮಾಡಿದ್ದು ಆ ಹೊಲಗಳಲ್ಲಿ ಎಸರು ಬೆಳೆಯನ್ನು ಬಿತ್ತಿದ್ದನು. ಅಲ್ಲಿ ಕಾಡು ಪ್ರಾಣಿಗಳ ಹಾವಳ್ಳಿ ಹೆಚ್ಚಾಗಿದ್ದರಿಂದ ದಿನಾಲು ರಾತ್ರಿ ಮೃತನು ಹೊಲಕ್ಕೆ ಹೋಗಿ ತಡರಾತ್ರಿಯ ವರೆಗೆ 2-3 ಗಂಟೆಯ ವರೆಗೆ ಕಾದು ಮರಳಿ ಮನೆಗೆ ಬರುತ್ತಿದ್ದ. ಅದರಂತೆ ನಿನ್ನೆ ದಿನಾಂಕ 02.07.2020 ರಂದು ರಾತ್ರಿ 8:00 ಗಂಟೆಗೆ ಮನೆಯಲ್ಲಿ ಊಟ ಮಾಡಿದ ನಂತರ ಹೊಲಕ್ಕೆ ಹೋಗಿದ್ದು ರಾತ್ರಿ ಮಳೆ ಹೆಚ್ಚಾಗಿ ಯಾನಾಗುಂದಿ ಕಡೆಯಿಂದ ಬಂದ ಮಳೆ ನೀರಿನ ರಬಸಕ್ಕೆ ಸೆಳವಿಗೆ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದು ಆ ಬಗ್ಗೆ ಇಂದು ದಿನಾಂಕ 03.07.2020 ರಂದು ಬೆಳಿಗ್ಗೆ 06:00 ಗಂಟೆಗೆ ಮೃತನ ಮಗನು ಸ್ಥಳಕ್ಕೆ ಹೋಗಿ ನೋಡಿದ ನಂತರ ಮನೆಗೆ ಬಂದು ವಿಷಯ ತಿಳಿಸಿದ್ದ ಬಗ್ಗೆ ಫಿರ್ಯಾದಿಯು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 16/2020 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 25/2020  ಕಲಂ 107 ಸಿಆರ್ ಪಿಸಿ : ನಾನು ಮೋಹನರೆಡ್ಡಿ ಹೆಚ್.ಸಿ 151  ಸೈದಾಪೂರ ಪೊಲೀಸ್ ಠಾಣೆ ಇದ್ದು  ದಿನಾಂಕ: 03-07-2020 ರಂದು ಬೆಳಿಗ್ಗೆ 10-00 ಗಂಟೆಗೆ  ಹಳ್ಳಿ ಭೇಟಿ ಕುರಿತು ಸಂಗಡ  ಗಣೇಶ ಪಿ.ಸಿ-28ಯನ್ನು ಕರೆದುಕೊಂಡು  ಬೆಳಗುಂದಿ ಗ್ರಾಮಕ್ಕೆ ಬೇಟಿ ನೀಡಿ  ನಂತರ ಬೆಳಿಗ್ಗೆ 11-00 ಗಂಟೆಗೆ ಆನೂರು(ಬಿ) ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಪೊಲೀಸ ಬಾತ್ಮಿದಾರರ ಮುಖಾಂತರ ಮಾಹಿತಿಯನ್ನು ಸಂಗ್ರಹಿಸಲಾಗಿ ಮಾಹಿತಿ ತಿಳಿದುಬಂದಿದ್ದೆನೆಂದರೆ   ಆನೂರು(ಬಿ)  ಸೀಮಾಂತರದ ಹೊಲ ಸವರ್ೆ ನಂಬರ 66 ರಲ್ಲಿ 06 ಎಕರೆ  ಜಮೀನ ಮಾಲೀಕರಾದ 1) ಮಲ್ಲಪ್ಪ ತಂದೆ ಕೇಂಪು ಗಡ್ಡೆಪ್ಪ ವ|| 45 ಜಾ|| ಕುರುಬರು ಸಾ|| ಆನೂರು(ಬಿ) ಇವರ ಹೊಲದಲ್ಲಿ ನಿಂತ ಮಳೆಯ ನೀರು ಹರಿದು ಹೊಗುವ ವಿಚಾರವಾಗಿ ಇವರ ಮತ್ತು  ಆನೂರು(ಬಿ) ಗ್ರಾಮದ  ಸೀಮಾಂತರದ ಹೊಲ ಸವರ್ೆ ನಂಬರ 65ರ ಮಾಲೀಕರಾದ 1) ಶರಣಪ್ಪ ತಂದೆ ಯಂಕಯ್ಯ ಕಲಾಲ್ ವ|| 50,2) ಮಲ್ಲಪ್ಪ ತಂದೆ ಯಂಕಯ್ಯ ವ|| 35, 3) ಯಂಕಯ್ಯ ತಂದೆ ಶರಣಪ್ಪ ಕಲಾಲ್ ವ|| 25, 4) ಬಸವರಾಜ ತಂದೆ ಯಂಕಯ್ಯ ವ|| 20, ಮತ್ತು 5) ನಾಗಪ್ಪ ತಂದೆ ಮಲ್ಲಪ್ಪ ವ|| 18 ಎಲ್ಲೂರು ಕಲಾಲ್(ಈಳಿಗೇರ) ಜಾನಂಗಕ್ಕೆ ಸೇರಿದವರು ಆಗಿದ್ದು ಸದರಿ ಹೊಲ ಸವರ್ೆ ನಂಬರ 66 ರಲ್ಲಿ ಮಾಲೀಕರು. ಮತ್ತು ಮಲ್ಲಪ್ಪ ತಂದೆ ಕೇಂಪು ಗಡ್ಡೆಪ್ಪ ವ|| 45 ಜಾ|| ಕುರುಬ ಜಾನಾಂಗ ಇವರ ಹೊಲದಲ್ಲಿ ಮಳೆಯಿಂದ ಶೇಖರಣೆಗೊಂಡ ಮಳೆಯ ನೀರು ಹೋಗಲು ದಾರಿ ಬಿಡದೆ ತಡೆಒಡ್ಡಿದರಿಂದ ಇವರುಗಳ ಮಧ್ಯ ಈ ವಿಷಯವಾಗಿ ತಿವ್ರ ವೈಮನಸ್ಸು ಬೆಳಿಸಿಕೊಂಡಿದ್ದು ಇವರು ಊರಲ್ಲಿ ಯಾವ ವೇಳೆಯಲ್ಲಿ ಜಗಳ ಮಾಡಿಕೊಂಡು ಜೀವ ಮತ್ತು ಆಸ್ತಿ ಪಾಸ್ತಿಗೆ ಧಕ್ಕೆ ಉಂಟುಮಾಡಿಕೊಳ್ಳುವ ಸಂಭವ ಕಂಡು ಬಂದಿದ್ದು ಸದ್ಯ ಇವರು ಊರಲ್ಲಿ ಶಾಂತಿ ಸುವ್ಯವಸ್ಥಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವದು ಕಂಡು ಬಂದಿದ್ದರಿಂದ ಮರಳಿ 03-00 ಪಿ.ಎಮ್ ಕ್ಕೆ ಠಾಣೆಗೆ ಬಂದು ಆನೂರು(ಬಿ)  ಗ್ರಾಮದ 1) ಶರಣಪ್ಪ ತಂದೆ ಯಂಕಯ್ಯ ಕಲಾಲ್ ವ|| 50,2) ಮಲ್ಲಪ್ಪ ತಂದೆ ಯಂಕಯ್ಯ ವ|| 35, 3) ಯಂಕಯ್ಯ ತಂದೆ ಶರಣಪ್ಪ ಕಲಾಲ್ ವ|| 25, 4) ಬಸವರಾಜ ತಂದೆ ಯಂಕಯ್ಯ ವ|| 20, ಮತ್ತು 5) ನಾಗಪ್ಪ ತಂದೆ ಮಲ್ಲಪ್ಪ ವ|| 18 ಎಲ್ಲೂರು ಕಲಾಲ್(ಈಳಿಗೇರ) ಜಾನಂಗಕ್ಕೆ ಸೇರಿದವರು ತಾ|| ಜಿ|| ಯಾದಗಿರಿ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪಿಎಆರ್ ನಂ.25/2020 ಕಲಂ. 107 ಸಿಆರ್.ಪಿಸಿ ನೆದ್ದರಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ. ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಬರ ಮಾಡಿಕೊಂಡು ಕಲಂ.116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಬರೆಯಿಸಿಕೊಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!