ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/07/2020

By blogger on ಶುಕ್ರವಾರ, ಜುಲೈ 3, 2020


                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/07/2020 
                                                                                                               
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 181/2020  ಕಲಂ 188 ಐ.ಪಿ.ಸಿ :       ಇಂದು ದಿನಾಂಕ 02/07/2020 ರಂದು ಬೆಳಿಗ್ಗೆ 12-00 ಗಂಟೆಗೆ ಫಿರ್ಯಾಧಿ ಶ್ರೀ ಪ್ರಕಾಶ ಪುರಾಣಿಕ ತಂದೆ ಶಂಕ್ರಯ್ಯ ಪುರಾಣೀಕ ವ|| 34 ಜಾ|| ಜಂಗಮ ಉ|| ಗ್ರಾಮಲೆಕ್ಕ ಅಧೀಕಾರಿ ಶಹಾಪೂರ. ಸಾ|| ಬಸವೇಶ್ವರ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶದಂತೆ, ಶಹಾಪುರ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ವಿದ್ಯಾನಗರ ಕಾಲೂನಿಯ  ನಿವಾಸಿತನಾದ ಸತೀಶ ತಂದೆ ರಾಮಚಂದ್ರ ದೇವಕರ್ ವ|| 36 ಜಾ|| ಮರಾಠ ಉ|| ಒಕ್ಕಲುತನ ಸಾ|| ವಿದ್ಯಾನಗರ ಶಹಾಪುರ ಎಂಬುವರು ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದಿಂದ ದಿನಾಂಕ 08/06/2020 ರಂದು ಜವಾಹರ ನವೋದಯ ಶಾಲೆಯ ಕ್ವಾರೆಂಟೈನ ಸೆಂಟರನಲ್ಲಿ  ದಿನಾಂಕ 22/06/2020 ರ ವರೆಗೆ 14 ದಿನ ಕ್ವಾರಂಟೈನಲ್ಲಿದ್ದು, ಕ್ವಾರೆಂಟೈನ್  ಅವಧಿ ಮುಗಿದ  ನಂತರ ಶಹಾಪೂರ  ವೈದ್ಯಾಧಿಕಾರಿಗಳು ಸದರಿ ವ್ಯಕ್ತಿಗೆ  ತಮ್ಮಮನೆಗೆ ಹೋದ ನಂತರ ದಿನಾಂಕ 06/07/2020 ರ ವರೆಗೆ 14 ದಿನ ಹೋಮ್ ಕ್ವಾರೆಂಟೈನ್ ಇರುವಂತೆ ಮೌಖಿಕವಾಗಿ ಸೂಚಿಸಿ ಕಳುಹಿಸಿದ್ದರು. ಸತೀಶ ಇವರು ಶಹಾಪೂರ ನಗರದ ತಮ್ಮ ಮನೆಗೆ ಬಂದಾಗ ಹೋಮ್ ಕ್ವಾರೆಂಟೈನ್ನ ಅವಧಿ ಮುಗಿಯದೆ  ನಗರದಲ್ಲಿ ಸುತ್ತಾಡುತಿದ್ದ ಬಗ್ಗೆ  ಮಾಹಿತಿ ಬಂದ ಮೇರೆಗೆ ಇಂದು ದಿನಾಂಕ 28/06/2020 ರಂದು ಬೆಳಿಗಗೆ 11-00 ಗಂಟೆಗೆ ನಾನು ಸದರಿ ಶಹಾಪುರದ ವಿದ್ಯಾನಗರಕ್ಕೆ ಭೇಟಿ ಮಾಡಿದಾಗ ಹೋಮ್ ಕ್ವಾರಂಟೈನಲ್ಲಿರಬೇಕಾದ ವ್ಯಕ್ತಿ ಸತೀಶ ತಂದೆ ರಾಮಚಂದ್ರ ದೇವಕರ್ ಇವರು ವಿದ್ಯಾನಗರದ ಸುಮಿತ್ರಾ ಸ್ಮಾರಕ ಶಾಲೆಯ ಹತ್ತಿರ ತಿರುಗಾಡುತಿದ್ದನು. ಕಾರಣ ಉಲ್ಲೇಖದಲ್ಲಿ ನಮೂದು ಮಾಡಿದ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾನೆ. ನಾನು ನಮ್ಮ ಮೇಲಾದಿಕಾರಿಗಳೊಂದಿಗೆ ಚಚರ್ಿಸಿ ಅವರ ನಿದರ್ೆಶನದಂತೆ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ. ಕಾರಣ ಶಹಾಪೂರ ನಗರದ ವಿಧ್ಯಾನಗರದ ನಿವಾಸಿತನಾದ ಸತೀಶ ತಂದೆ ರಾಮಚಂದ್ರ ದೇವಕರ್ ವ|| 36 ಜಾ|| ಮರಾಠ ಉ|| ಒಕ್ಕಲುತನ ಸಾ|| ವಿದ್ಯಾನಗರ ಶಹಾಪುರ ಈತನ ವಿರುದ್ದ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ. ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 181/2020 ಕಲಂ 188 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 79/2020 323, 324, 504, 506 ಐಪಿಸಿ : ಇಂದು ದಿನಾಂಕ: 02/07/2020 ರಂದು 08.15 ಪಿಎಮ್ ಕ್ಕೆ ಅಜರ್ಿದಾರನಾದ ಮಹ್ಮದ ಗೌಸ್ ತಂದೆ    ಶಿರಾಜೂದ್ದೀನ್ ಪೌಜಿ ವಯಾ: 50 ವರ್ಷ ಜಾ: ಮುಸ್ಲೀಂ ಸಾ: ಗೋಗಿ ಪೇಠ ಇವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಮಹ್ಮದ ಗೌಸ್ ತಂದೆ    ಶಿರಾಜೂದ್ದೀನ್ ಪೌಜಿ ವಯಾ: 50 ವರ್ಷ ಜಾ: ಮುಸ್ಲೀಂ ಸಾ: ಗೋಗಿ ಪೇಠ ನಿವಾಸಿಯಾಗಿದ್ದು, ಈ ಮೇಲಿನ ವಿಷಯಕ್ಕೆ ಸಂಬಂದಿಸಿದಂತೆ ದಿನಾಂಕ:07/06/2020 ರಂದು ರವಿವಾರ ದಂದು ನಾನು ಗೋಗಿ ಪೇಠ ಬಸ್ ನಿಲ್ದಾಣದ ಹತ್ತಿರ ಸಾಯಂಕಾಲದ 04.00 ಪಿಎಂ ಸುಮಾರಿಗೆ ಶಹಾಪೂರ ಕ್ಕೆ ಹೋಗಬೇಕು ಅಂತಾ ನಿಂತಿರುವಾಗ ನಮ್ಮ ಓಣಿಯ ಮಹ್ಮದ ಅಲಿಂ ಚೋರಗಸ್ತಿ ಸಾ: ಗೋಗಿ ಪೇಠ ಈತನು ತನಗೆ ಕುಡಿಯಲಿಕ್ಕೆ ಹಣ ಬೇಕು ಕೊಡು ಅಂತಾ ಕೇಳಿದ ಆಗ ನಾನು ನನ್ನ ಹತ್ತಿರ ಹಣ ಇಲ್ಲ ಅಂತಾ ಹೇಳಿದ್ದರಿಂದ ಮಹ್ಮದ ಅಲಿಂ ಈತನು ಸೂಳೆ ಮಗನೆ ನೀನು ಯಾವಾಗಲು ಹೀಗೆ ಹೇಳತಿ ಅಂತಾ ಅವಾಚ್ಯವಾಗಿ ಬೈಯತೊಡಗಿದ ಆಗ ನಾನು ಸುಮ್ಮನೆ ಬೈಯಬೇಡ ಅಂದಿದ್ದಕ್ಕೆ ಏಕಾಏಕಿಯಾಗಿ ಅಲ್ಲೆ ಬಿದ್ದಿದ್ದ ಒಂದು ಕಲ್ಲಿನಿಂದ ನನ್ನ ಬಲಗೈಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಆಗ ಅಲ್ಲೆ ಇದ್ದ 1) ಮೌನೇಶ @ ಮಾನಪ್ಪ ತಂದೆ ಭೀಮರಾಯ ಗುಡಿನವರ ಸಾ: ದೇವಿ ನಗರ ಶಹಾಪೂರ 2) ಕುತುಬುದ್ದೀನ್ ತಂದೆ ಜೈರೋದ್ದೀನ್ ಪೀರಾ ಸಾ: ಗೋಗಿ ಪೇಠ ಇವರುಗಳು ನೋಡಿ ಬಿಡಿಸಿಕೊಂಡರು, ಇಲ್ಲದಿದ್ದರೆ, ಇನ್ನು ಹೊಡೆಯುತ್ತಿದ್ದನು, ಹೊಡೆದು ಹೊಗುವಾಗ ಮಗನೆ ನನಗೆ ಎದರು ಆದರೆ ನಿನಗೆ ಖಲಾಸ್ ಮಾಡುತ್ತೇನೆ ಅಂತಾ ಜೀವದ ಭಯ ಹಾಕಿರುತ್ತಾನೆ. ಎಂ.ಎಲ್.ಸಿ ಆದಾಗ ನಾನು ನಂತರ ಠಾಣೆಗೆ ಬಂದು ಹೇಳಿಕೆ ನೀಡುತ್ತೇನೆ ಅಂತಾ ತಿಳಿಸಿದ್ದೇನು.
      ನನಗೆ ಮಹ್ಮದ ಆಲಿಂ ಹೊಡೆದಿದ್ದರಿಂದ ನಾನು ಆಸ್ಪತ್ರೆಗೆ ಉಪಚಾರಕ್ಕೆ ಹೋಗಿ ಹೆಚ್ಚಿನ ಉಪಚಾರಕ್ಕೆ ಕಲಬುರಗಿಗೆ ಹೋಗಿದ್ದು ಮತ್ತು ಮಹ್ಮದ ಆಲಿಂ ಈತನು ನನಗೆ ಜೀವದ ಬೇದರಿಕೆ ಹಾಕಿದ್ದರಿಂದ ಅಂಜಿ ಠಾಣೆಗೆ ಬಂದಿರುವದಿಲ್ಲ, ನಂತರ ನಮ್ಮ ಅಳಿಯನಾದ ಅಬೀದ ಹುಸೇನ ತಂದೆ ಸೈಯದ್ ಅಹಮದ ಜಕಮಿ ಸಾ: ಹಳಿಸಗರ ಇವರಿಗೆ ನಾನು ಹೊಡೆಸಿಕೊಂಡು ಮನೆಯಲ್ಲಿ ಅಂಜಿ ಕುಳಿತಿರುವ ಬಗ್ಗೆ ಗೋತ್ತಾಗಿ ಹೀಗೆ ಅಂಜಿ ಕುಳಿತರೆ ಮತ್ತೆ ಹೊಡೆಯುತ್ತಾನೆ ಅಂತಾ ದೈರ್ಯ ಹೇಳಿದ್ದರಿಂದ ತಡವಾಗಿ ದಿನಾಂಕ: 02/07/2020 ರಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನಗೆ ಅವಾಚ್ಯವಾಗಿ ಬೈಯ್ದು ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಮಹ್ಮದ ಅಲಿಂ ಚೋರಗಸ್ತಿ ಸಾ: ಗೋಗಿ ಪೇಠ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 79/2020 ಕಲಂ: 323, 324, 504, 506, ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 54/2020 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:02.07.2020 ರಂದು 12:35 ಪಿಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ನಾನು ಇಂದು ದಿನಾಂಕ:02.07.2020 ರಂದು ಮುಂಜಾನೆ 9:00 ಗಂಟೆಗೆ ಠಾಣೆಯಲ್ಲಿದ್ದಾಗ ಠಾಣೆಯ ಸಿಬ್ಬಂದಿಯಾದ  ಪ್ರಭುಗೌಡ ಹೆಚ್ಸಿ-120 ರವರು ಬಂದು ನನಗೆ ತಿಳಿಸಿದ್ದೇನೆಂದರೆ, ಕೊಡೇಕಲ್ಲ ಗ್ರಾಮದ ಹುಣಸಗಿ-ನಾರಾಯಣಪುರ ಮುಖ್ಯ ರಸ್ತೆಯ ಬಸವೇಶ್ವರ  ವೃತ್ತದಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಿರುವುದಾಗಿ ತಿಳಿಸಿದ್ದು ಸದರಿ ಸಿಬ್ಬಂದಿಯವರು ಹೇಳಿದ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ಆಯ್ಯನಗೌಡ ಹೆಚ್ಸಿ-124 ರವರು ಪಡೆದುಕೊಂಡು ಹಾಜರ ಪಡಿಸಿದ್ದು. ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:54/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
  ನಂತರ ಮಟಕಾ ಜೂಜಾಟ ಸ್ಥಳಕ್ಕೆ  ಸಿಬ್ಬಂದಿಯವರೊಂದಿಗೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಜೂಜುಕೊರನಿಂದ ನಗದು ಹಣ 970/-ರೂ ಒಂದು ಮಟಕಾ ನಂಬರ ಬರೆದ ಚೀಟಿ ಒಂದು ಬಾಲ್ ಪೆನ್ನು ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗ 3:30 ಪಿ. ಎಮ್ ಬಂದಿದ್ದು ಅದೆ.
ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
ಶಿವಾನಂದ ತಂದೆ ಸಿದ್ರಾಮಪ್ಪ ಆಸಂಗಿಹಾಳ ವ:45 ವರ್ಷ ಉ: ಕೂಲಿಕೆಲಸ ಜಾ: ಹಿಂದೂ ರೆಡ್ಡಿ ಸಾ: ಕೊಡೇಕಲ್ಲ ತಾ:ಹುಣಸಗಿ

ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 55/2020 ಕಲಂ:188 269 270 ಐಪಿಸಿ : ಇಂದು ದಿನಾಂಕ:02.07.2020 ರಂದು 4:00 ಪಿಎಮ್ ಕ್ಕೆ  ಪಿರ್ಯಾಧಿ  ಶ್ರೀ.ಅಪ್ಪಣ್ಣ ತಂದೆ   ಮಡಿವಾಳಪ್ಪ ಗುಡಿಮನಿ ವ: 27 ವರ್ಷ  ಉ:ಗ್ರಾಮಲೆಕ್ಕಾಧಿಕಾರಿಗಳು ನಾರಾಯಣಪೂರ ಗ್ರಾಮ ಜಾ: ಹರಿಜನ ಸಾ: ದೇವರ ಹಿಪ್ಪರಗಿ ತಾ: ದೇವರಹಿಪ್ಪರಗಿ ಹಾ:ವ: ಕೊಡೇಕಲ್ಲ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ  ಗಣಕೀಕರಿಸಿಕೊಂಡು ತಂದ ಪಿರ್ಯಾಧಿ  ಅಜರ್ಿಯನ್ನು ಹಾಜರ ಪಡಿಸಿದ್ದು. ಸದರ ಪಿರ್ಯಾಧಿಯ ಅಜರ್ಿಯ ಸಾರಾಂಶವೆನೆಂದರೆ, ನಾನು ಮಾನ್ಯ ತಹಸಿಲ್ದಾರರು ಹುಣಸಗಿ ರವರ ಆದೇಶದಂತೆ ಬಿ.ಸಿ.ಎಮ್ ಹಾಸ್ಟೇಲ್ ನಾರಾಯಣಪೂರ ಕ್ವಾರಂಟೈನ್ ಕೇಂದ್ರದ ಮೇಲ್ವಿಚಾರಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:15/05/2020 ರಿಂದ 31/05/2020 ರವರೆಗೆ ಬಿ.ಸಿ.ಎಮ್ ಹಾಸ್ಟೇಲ್ ನಾರಾಯಣಪೂರದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿರುವ ಶ್ರೀ ವಸಂತ ತಂದೆ ನಾರಾಯಣ ಸಾ||ಮಾವಿನಗಿಡದ ತಾಂಡಾ ಇತನನ್ನು ದಿನಾಂಕ:28/05/2020 ರಂದು ವೈಧ್ಯಾಧಿಕಾರಿಗಳು ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದು, ದಿನಾಂಕ:31/05/2020 ರಂದು ಸದರಿಯವನಿಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂಖ್ಯೆ:ಸಂ/ಕಂ/ನೈ.ವಿ.ಪ/ಕೋವಿಡ-19/33/2020-21 ದಿನಾಂಕ:29/05/2020ನೇದ್ದರ ಪ್ರಕಾರ ಕೋವಿಡ್-19 ಪ್ರಯುಕ್ತ ಹೋಮ ಕ್ವಾರಂಟೈನ್ ನಲ್ಲಿ ಇಟ್ಟು ಸರಕಾರದ ನಿಯಮ ಪಾಲಿಸುವಂತೆ ತಿಳಿಸಿ ಕಳುಹಿಸಲಾಯಿತು. ಆದರೂ ಸಹ ಶ್ರೀ ವಸಂತ ತಂದೆ ನಾರಾಯಣ ಸಾ||ಮಾವಿನಗಿಡದ ತಾಂಡಾ ಇವರು 14 ದಿವಸಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರದೇ ದಿನಾಂಕ:28/06/2020 ರಂದು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶವನು ಉಲ್ಲಂಘಿಸಿ ಬೇರೆಯೊಬ್ಬರ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸೋಂಕನ್ನು ಹರಡಿಸುವ ಉದ್ದೇಶದಿಂದ ತನ್ನ ಮನೆಯಿಂದ ಹೊರಗಡೆ ತಿರುಗಾಡಿದ್ದು ಇರುತ್ತದೆ. ಅದರಂತೆ ಸದರಿಯವನ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ತಿರಸ್ಕರಿಸಿ ಬೇರೆಯೊಬ್ಬರ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸೋಂಕನ್ನು ಹರಡಿಸುವ ಉದ್ದೇಶದಿಂದ ಹೋಮ ಕ್ವಾರಂಟೈನ್ ಬಿಟ್ಟು ಮಾವಿನಗಿಡದ ತಾಂಡಾದ ತನ್ನ ಮನೆಯಿಂದ ಹೊರಗಡೆ ತಿರುಗಾಡಿದವನ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಲು ಅಂತ  ಪಿರ್ಯಾಧಿಯ ಅಜರ್ಿಯ  ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:55/2020 ಕಲಂ: 188, 269 270 ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 56/2020 ಕಲಂ: 188 269 270 ಐಪಿಸಿ: ಇಂದು ದಿನಾಂಕ:02.07.2020 ರಂದು 5:15 ಪಿಎಮ್ ಕ್ಕೆ  ಪಿರ್ಯಾಧಿ  ಶ್ರೀ. ದೇವಪ್ಪ ತಂದೆ ಸೋಪಣ್ಣ ಚವ್ಹಾಣ ವ:29 ವರ್ಷ ಜಾ: ಲಂಬಾಣಿ ಉ:ಜುಮಾಲಪೂರ ಗ್ರಾಮ ಲೆಕ್ಕೀಗ ಸಾ:ಗೌಡೂರ ತಾಂಡ ತಾ:ಲಿಂಗಸೂಗೂರು ಹಾ:ವ: ಕೊಡೇಕಲ್ಲ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ  ಗಣಕೀಕರಿಸಿಕೊಂಡು ತಂದ ಪಿರ್ಯಾಧಿ  ಅಜರ್ಿಯನ್ನು ಹಾಜರ ಪಡಿಸಿದ್ದು. ಸದರ ಪಿರ್ಯಾಧಿಯ ಅಜರ್ಿಯ ಸಾರಾಂಶವೆನೆಂದರೆ, ನಾನು ಮಾನ್ಯ ತಹಶೀಲ್ದಾರರು ಹುಣಸಗಿ ಹಾಗೂ ಮಾನ್ಯ ಕಂದಾಯ ನಿರೀಕ್ಷಕರು  ಕೊಡೇಕಲ್ಲ ರವರ ಆದೇಶದಂತೆ ಸದ್ಯ ಕೋವಿಡ್-19 ಕೋರೋನಾ ಕರ್ತವ್ಯದ ಮೇಲೆ ಇದ್ದು. ಸದ್ಯ ಕೋವಿಡ್ -19 ಪ್ರಯುಕ್ತ ಕೆಲವು ಜನರಿಗೆ ಹೋಂ ಕ್ವಾರಂಟೈನ್ದಲ್ಲಿ ಇಟ್ಟು ಸಕರ್ಾರದ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು ಸಹ ಶ್ರೀ ಸುನೀಲ್ ತಂದೆ ಕೃಷ್ಣಪ್ಪ ರಾಠೋಡ ವ:22 ವರ್ಷ ಜಾ: ಲಂಬಾಣಿ ಉ: ಜೆಸಿಬಿ ಆಪ್ ರೆಟರ್ ಸಾ: ಜುಮಾಲಪೂರ ದೊಡ್ಡ ತಾಂಡ (ಧಮರ್ಾಪೂರ) ಇವರು ದಿನಾಂಕ:09.06.2020 ರಂದು ಮಾಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ತಾಲೂಕು ವಾಳವಾ ಪಟ್ಟಣದಿಂದ ಜುಮಾಲಪೂರ ದೊಡ್ಡ ತಾಂಡಾಕ್ಕೆ ಬಂದಿದ್ದು. ಸದರಿಯವನ ಮೊಬೈಲ್ ನಂ:8668676009 ಇದ್ದು. ಸದರಿಯವನಿಗೆ  ದಿನಾಂಕ:08.06.2020 ರಂದು ಮಾಹಾರಾಷ್ಟ ರಾಜ್ಯದ ತಾಲೂಕ ವಾಳವಾದಲ್ಲಿ ಕೋವಿಡ್-2019 ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆಗೆ ಒಳಪಡಿಸಿದ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರಿಗೆ ಮಾಹಿತಿ ಬಂದಿದ್ದು. ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂಖ್ಯೆ ಸಂ:/ಕಂದಾಯ/ ನೈ,ವಿ.ಪ/ ಕೋವಿಡ್/19/33/2020-2021 ದಿನಾಂಕ:29.05.2020 ನೇದ್ದರ ಪ್ರಕಾರ ಕೋವಿಡ್-19 ಪ್ರಯುಕ್ತ ಕೆಲವು ಜನರಿಗೆ ಹೋಂ ಕ್ವಾರಂಟೈನ್ನಲ್ಲಿ ಇಟ್ಟು ಸಕರ್ಾರ ನಿಯಮ ಪಾಲಿಸುವಂತೆ ತಿಳಿಸಿದರೂ ಸಹ ಸದರಿಯವನು ಅಲ್ಲಿನ ಅಧೀಕಾರಿಗಳಿಗೆ  ಮಾಹಿತಿ ತಿಳಿಸದೇ  ಜುಮಾಲಪೂರ ದೊಡ್ಡ ತಾಂಡಾಕ್ಕೆ ಬಂದಿದ್ದು. ಸದರಿಯವನು ದಿನಾಂಕ:30.06.2020 ರ ವರೆಗೆ ಹೋಂ ಕ್ವಾರಂಟೈನ್ನಲ್ಲಿ ಇರಬೇಕಾಗಿದ್ದು. ಆದರೆ ಕೋವಿಡ್-19 ತಂತ್ರಾಂಶದ ವರದಿಯಂತೆ 28.06.2020 ರಂದು ಹೋಂ ಕ್ವಾರಂಟೈನ್ ವ್ಯಾಪ್ತಿಯ ಹೊರಗೆ ಇದ್ದು. ಹಾಗೂ ಸದರಿಯವನ ಮೋಬೈಲ್ ನಂ:8668676009 ನೇದ್ದರ ಕರೆಗಳ ಮಾಹಿತಿಯಿಂದ ಸದರಿಯವನು ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸದೇ ತಿರಸ್ಕರಿಸಿ ಬೇರೆಯೊಬ್ಬರ ಪ್ರಾಣಕ್ಕೆ ಅಪಾಯಕಾರಿಯಾದ ಕೋರೋನಾ ಸೋಂಕನ್ನು ಹರಡಿಸುವ ಉದ್ದೇಶದಿಂದ ಹೋಂ ಕ್ವಾರಂಟೈನ್ ಬಿಟ್ಟು ಜುಮಾಲಪೂರ ದೊಡ್ಡ ತಾಂಡಾದ ತನ್ನ ಮನೆಯಿಂದ ಹೊರಗಡೆ ತಿರುಗಾಡಿದ್ದು ಇರುತ್ತದೆ.  ಸದರಿಯವನು ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘನೆ ಮಾಡಿದ ಕೋವಿಡ್-19 ತಂತ್ರಾಂಶದ ವರದಿಯ ಪತ್ರಿಯನ್ನು ಈ ಕೂಡಾ ಲಗತ್ತಿಸಿದ್ದು. ಕಾರಣ ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ಅಂತ  ಪಿರ್ಯಾಧಿಯ ಅಜರ್ಿಯ  ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:56/2020 ಕಲಂ: 188, 269 270 ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 57/2020 ಕಲಂ: 188 269 270 ಐಪಿಸಿ: ಇಂದು ದಿನಾಂಕ:02.07.2020 ರಂದು 4:00 ಪಿಎಮ್ ಕ್ಕೆ  ಪಿರ್ಯಾಧಿ  ಶ್ರೀ. ಹಣಮಪ್ಪ ತಂದೆ ರಾಮಪ್ಪ ಹಂಡರ್ಗಲ್ ವ:43 ವರ್ಷ ಉ:ಗ್ರಾಮಲೆಕ್ಕಾಧಿಕಾರಿಗಳು ಕೊಡೇಕಲ್ ಗ್ರಾಮ ಜಾ: ಕುರುಬ, ಸಾ: ಶಿರೂರ ತಾ:ಜಿ:ಬಾಗಲಕೋಟ ಹಾ:ವ:ಕೊಡೇಕಲ್ಲ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ  ಗಣಕೀಕರಿಸಿಕೊಂಡು ತಂದ ಪಿರ್ಯಾಧಿ  ಅಜರ್ಿಯನ್ನು ಹಾಜರ ಪಡಿಸಿದ್ದು. ಸದರ ಪಿರ್ಯಾಧಿಯ ಅಜರ್ಿಯ ಸಾರಾಂಶವೆನೆಂದರೆ, ನಾನು ಮಾನ್ಯ ತಹಸಿಲ್ದಾರರು ಹುಣಸಗಿ ರವರ ಆದೇಶದಂತೆ ಕೊಡೇಕಲ್ ಗ್ರಾಮದ ಹೋಮ್ ಕ್ವಾರಂಟೈನ್ ಮೇಲ್ವಿಚಾರಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಆಂದ್ರಪ್ರದೇಶದಿಂದ ಬಂದಿರುವಂತ ಜನರಾದ 1) ರಾಜು ತಂದೆ ದ್ಯಾಮಣ್ಣ ವಡ್ಡರ, 2) ಪರಶುರಾಮ ತಂದೆ ದ್ಯಾಮಣ್ಣ ವಡ್ಡರ, 3) ಹಣಮಂತ ತಂದೆ ಮಲ್ಲಪ್ಪ ವಡ್ಡರ ಎಲ್ಲರೂ ಸಾ||ಕೊಡೇಕಲ್ ಇವರು ದಿನಾಂಕ:08/06/2020 ರಂದು ಕೊಡೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದು, ಸದರಿಯವರಿಗೆ ಥರ್ಮಲ್ ಸ್ಕ್ರಿನಿಂಗ್ ಮಾಡಿಸಿ ದಿನಾಂಕ:08/06/2020 ರಿಂದ 21/06/2020 ರವರೆಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂಖ್ಯೆ:ಸಂ/ಕಂ/ನೈ.ವಿ.ಪ/ಕೋವಿಡ-19/33/2020-21 ದಿನಾಂಕ:29/05/2020ನೇದ್ದರ ಪ್ರಕಾರ ಕೋವಿಡ್-19 ಪ್ರಯುಕ್ತ ಹೋಮ ಕ್ವಾರಂಟೈನ್ ನಲ್ಲಿ ಇಟ್ಟು ಸರಕಾರದ ನಿಯಮ ಪಾಲಿಸುವಂತೆ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ತಿಳಿಸಿ ಹೇಳಿ ದಿನಾಂಕ:08/06/2020 ರಂದು ಸದರಿಯವರ ಮನೆಗಳಿಗೆ ಕಳುಹಿಸಲಾಯಿತು. ಆದರೂ ಸಹ 1) ರಾಜು ತಂದೆ ದ್ಯಾಮಣ್ಣ ವಡ್ಡರ, 2) ಪರಶುರಾಮ ತಂದೆ ದ್ಯಾಮಣ್ಣ ವಡ್ಡರ, 3) ಹಣಮಂತ ತಂದೆ ಮಲ್ಲಪ್ಪ ವಡ್ಡರ ಎಲ್ಲರೂ ಸಾ||ಕೊಡೇಕಲ್ (ಮಾರುತಿ ದೇವಸ್ಥಾನ) ಇವರು ದಿನಾಂಕ:21/06/2020 ರವರೆಗೆ ಅಂದರೆ 14 ದಿವಸಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇದ್ದು ಸಕರ್ಾರದ ನಿಯಮ ಪಾಲಿಸದೇ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶವನು ಉಲ್ಲಂಘಿಸಿ ಬೇರೆಯೊಬ್ಬರ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸೋಂಕನ್ನು ಹರಡಿಸುವ ಉದ್ದೇಶದಿಂದ ತನ್ನ ಮನೆಯಿಂದ ಹೊರಗಡೆ ತಿರುಗಾಡಿದ್ದು ಕೋವಿಡ್-19 ದತ್ತಾಂಶ ತಂತ್ರಜ್ಞಾನದಲ್ಲಿ ನಮೂದಿರುವ ರಾಜು ತಂದೆ ದ್ಯಾಮಣ್ಣ ವಡ್ಡರ ಇತನ ಮೋ.ನಂ: 9591135924 ನೇದ್ದರ ಆಧಾರದ ಮೇಲೆ ಕಂಡುಬಂದಿರುತ್ತದೆ. ಅದರಂತೆ ಸದರಿಯವರ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ತಿರಸ್ಕರಿಸಿ ಬೇರೆಯೊಬ್ಬರ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸೋಂಕನ್ನು ಹರಡಿಸುವ ಉದ್ದೇಶದಿಂದ ಹೋಮ ಕ್ವಾರಂಟೈನ್ ಬಿಟ್ಟು ಕೊಡೇಕಲ್ ಗ್ರಾಮದ ತಮ್ಮ ಮನೆಯಿಂದ ಹೊರಗಡೆ ತಿರುಗಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಲು ಅಂತ  ಪಿರ್ಯಾಧಿಯ ಅಜರ್ಿಯ  ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:57/2020 ಕಲಂ: 188, 269 270 ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 162/2020 ಕಲಂ: 188 ಐಪಿಸಿ : ದಿನಾಂಕಃ 02/07/2020 ರಂದು 10:00 ಎ.ಎಮ್ ಕ್ಕೆ ಫಿಯರ್ಾದಿ ಮಲ್ಲಮ್ಮ ತಂದೆ ಸಿದ್ದಪ್ಪ ಬೇವೂರ ವ|| 25 ವರ್ಷ ಜಾ|| ಲಿಂಗಾಯತ ಉ|| ಗ್ರಾಮ ಲೇಕಪಾಲಕರು ದೇವಿಕೇರಾ ಸಾ|| ಹ್ಯಾಳ್ಯಾ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿ ಸಾರಾಂಶವೆನೆಂದರೆ, ಮಾನ್ಯ ಜಿಲ್ಲಾದಿಕಾರಿಗಳು ಯಾದಗಿರಿ ರವರ ಆಧೇಶದಂತೆ ಸುರಪುರ ನಗರ ವ್ಯಾಪ್ತಿಯಲ್ಲಿ ಬರುವ ರಂಗಮಪೇಟ್ ಏರಿಯಾದ ನಿವಾಸಿತನಾದ ರಫೀಕ್ ತಂದೆ ಚಾಂದ ಪಾಶಾ ಚಿಟವಳ್ಳಿ ಸಾ|| ರಂಗಮಪೇಟ್ ಫೊನ ನಂ. 9108050920 ಸಾ|| ರಂಗಮಪೇಟ್ ತಾ|| ಸುರಪುರ ಜಿ|| ಯಾದಗಿರಿ ಎಂಬುವನು ಮಾಹಾರಾಷ್ಟ್ರದ ಮುಂಬೈ ದಿಂದ ದಿನಾಂಕ:13/06/2020 ರಂದು ಯಾದಗಿರಿಗೆ ಬಂದು ದಿನಾಂಕ:24/06/2020 ರ ವರೆಗೆ 12 ದಿನ ಕ್ವಾರೆಂಟೈನ್ ಇದ್ದು ಕ್ವಾರೆಂಟೈನ್ ಅವದಿ ಮುಗಿದ ನಂತರ ಯಾದಗಿರಿಯ ವೈದ್ಯಾದಿಕಾರಿಗಳು ಸದರಿ ವ್ಯಕ್ತಿಗೆ ಊರಿಗೆ ಹೊದ ನಂತರ ದಿನಾಂಕ:25/06/2020 ರಿಂದ 14 ದಿನಗಳ ವರೆಗೆ ಹೋಮ್ ಕ್ವಾರೆಂಟೈನ್ ಇರುವಂತೆ ಮೌಖಿಕವಾಗಿ ಸೂಚಿಸಿ ಕಳುಹಿಸಿದ್ದರು ರಫೀಕ್ ಇವರು ರಂಗಮಪೇಟ್ಗೆ ಬಂದಾಗ ಹೋಮ್ ಕ್ವಾರೆಂಟೈನ್ ಅವದಿ ಮುಗಿಯದೆ ಅವನ ಮೊಬೈಲ್ ನಂ. 9108050920  ನೇದ್ದರ ಕರೆಗಳ ಮಾಹಿತಿಯಿಂದ ದಿನಾಂಕ:29/06/2020 ರಂದು 10 ಗಂಟೆಗೆ ಹಸನಾಪುರ ಏರಿಯಾದಲ್ಲಿ ತಿರುಗಾಡುತಿದ್ದ ಬಗ್ಗೆ ಮಾನ್ಯ ಜಿಲ್ಲಾದಿಕಾರಿಗಳ ಸಭೆಯ ನಿದರ್ೇಶನದಂತೆ ತಿಳಿದು ಬಂದಿರುತ್ತದೆ.ಕಾರಣ ರಫೀಕ್ ತಂದೆ ಚಾಂದ ಪಾಶಾ ಚಿಟವಳ್ಳಿ ಸಾ|| ರಂಗಮಪೇಟ್ ಫೊನ ನಂ. 9108050920 ಸಾ|| ರಂಗಮಪೇಟ್ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ದೂರು ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ 162/2020 ಕಲಂ: 188 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 163/2020 ಕಲಂ: 323, 504, 506 ಸಂ. 34 ಐಪಿಸಿ : ಇಂದು ದಿನಾಂಕ:02/07/2020 ರಂದು 12:15 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ ಡಿ ಕರ್ತವ್ಯದಲ್ಲಿರುವಾಗ ಶ್ರೀಮತಿ  ರಂಗಮ್ಮ ಗಂಡ ತಾಯಪ್ಪ ಕಾಟೇನವರ್ ವಯ|| 55 ವರ್ಷ ಜಾ|| ಬೇಡರ ಉ|| ಕೂಲಿ ಕೆಲಸ ಸಾ|| ಬಿಜಾಸಪೂರ ಇವಳು ಠಾಣೆಗೆ ಬಂದು ಒಂದು ಗಣಕೀಕೃತ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ನನ್ನ ತಂಗಿಯ ಮಗನಾದ ಬಸವರಾಜ ತಂದೆ ಹಣಮಂತ ಬಲ್ಲಟಗಿ ಇತನು ಸುಮಾರು ಮೂರು ವರ್ಷಗಳಿಂದ ನಮ್ಮೂರಲ್ಲೆ ಇದ್ದು ಕೂಲಿ ಕೆಲಸ ಮಾಡಿಕೊಂಡು ನನ್ನ ಹತ್ತಿರವೇ ವಾಸವಾಗಿರುತ್ತಾನೆ. ದಿನಾಂಕ:25/06/2020 ರಂದು ಮದ್ಯಾಹ್ನ 2:30 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ನನ್ನ ತಂಗಿಯ ಮಗನಾದ ಬಸವರಾಜ ಇತನು ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ನಿಂತಿರುವಾಗ 1) ಸಚಿನ್ ತಂದೆ ಯಲ್ಲಪ್ಪ ಹುಲಕಲ್, 2) ರವಿ ತಂದೆ ಯಲ್ಲಪ್ಪ ಹುಲಕಲ್ ಮತ್ತು 3) ಕಸ್ತೂರಿಬಾಯಿ ಗಂಡ ಯಲ್ಲಪ್ಪ ಹುಲಕಲ್ ಮೂವರ ಕೂಡಿ ಬಂದವರೆ ನಮ್ಮ ಬಸವರಾಜನಿಗೆ ಸಚಿನ್ ಇತನು ಎದೆಯ ಮೇಲಿನ ಅಂಗಿಹಿಡಿದು ನೀನು ನಮ್ಮ ತಂಗಿಗೆ ಚೂಡಾಯಿಸುತಿಯಾ ಸೂಳೆಮಗೆನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಪಾಳಕ್ಕೆ ಕೈಯಿಂದ ಹೊಡೆದನು. ರವಿ ಇತನು ಬಸವರಾಜನಿಗೆ ಕಾಲಿನಿಂದ ಒದ್ದು ಕೈಯಿಂದ ಹೊಟ್ಟೆಗೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಕಸ್ತೂರಿಬಾಯಿ ಇವಳು ಬಸವರಾಜನಿಗೆ ಕೈಯಿಂದ ಬೆನ್ನಿಗೆ ಹೊಡೆದಳು. ಅಲ್ಲೆ ಹೊರಟಿದ್ದ ಹರಿಶ್ಚಂದ್ರ ತಂದೆ ಭೀಮಪ್ಪ ದೊಡ್ಡಮನಿ ಮತ್ತು ವೆಂಕಟೇಶ ತಂದೆ ಶಿವಪ್ಪ ನಾಯಕ ಇಬ್ಬರು ಕೂಡಿ ಬಂದು ಜಗಳವನ್ನು ನೋಡಿ ಬಿಡಿಸಿದರು ಅವರು ಬಂದು ಜಗಳ ಬಿಡಿಸಿದ್ದಾರೆ ಅಂತಾ ಇವತ್ತ ನಿನ್ನನ್ನು ಬಿಟ್ಟಿವಿ ಸೂಳೆಮನಗೆ ಅಂತಾ ಅವಾಚ್ಯವಾಗಿ ಬೈಯ್ದು ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಹೊಗಿದ್ದು ಇರುತ್ತದೆ. ನಂತರ ಅಣ್ಣತಮ್ಮಕಿಯಾದ ಅಂಬ್ರೇಶ ತಂದೆ ಕೃಷ್ಣಪ್ಪ ಹಾಲಕೋಡ್ ಇತನ ವಿಚಾರ ಮಾಡಿ ಇಂದು ತಡವಾಗಿ ದೂರು ಕೊಡಲು ಬಂದಿರುತ್ತೇನೆ. ನನ್ನ ತಂಗಿಯ ಮಗನಾದ ಬಸವರಾಜ ಈತನಿಗೆ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿರುವವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಸದರಿ ಅಪರಾಧವು ಅಸಂಜ್ಞೆಯ ಅಪರಾಧವಗಿದ್ದರಿಂದ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರ ರವರಿಂದ ಅನುಮತಿ ಪಡೆದುಕೊಂಡು 01:45 ಪಿ.ಎಮ್.ಕ್ಕೆ ಠಾಣೆ ಗುನ್ನೆ ನಂ. 163/2020 ಕಲಂ. 323, 504, 506 ಸಂ.34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!