ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 31/05/2020
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 67/2020 ಕಲಂ: 279,337,304(ಎ) ಐಪಿಸಿ: ಇಂದು ದಿನಾಂಕ: 31/05/2020 ರಂದು ಜಿಜಿಹೆಚ್ ಯಾದಗಿರಿಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ನಾನು ಎಮ್.ಎಲ್.ಸಿ ವಿಚಾರಣೆ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡೆನು. ನಂತರ ಪ್ರಕರಣದ ಫಿರ್ಯಾಧಿದಾರರಾದ ಶ್ರೀಮತಿ ಮರೆಮ್ಮ ಗಂಡ ಮೋನಪ್ಪ ಮಾಶಾಳ, ವ:65, ಜಾ:ಮಾದಿಗ, ಉ:ಮನೆಕೆಲಸ ಸಾ:ಅಳ್ಳೊಳ್ಳಿ ತಾ:ಚಿತ್ತಾಪೂರ ಇವರು ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ನನ್ನ ಗಂಡನು ಈಗ ಸುಮಾರು 3-4 ವರ್ಷಗಳಿಂದ ವಡಗೇರಾ ಪಟ್ಟಣದ ಗೌರಿಶಂಕರ ತಾತ ಇವರ ಹತ್ತಿರ ಕೂಲಿ ಕೆಲಸ ಮಾಡಿಕೊಂಡು ಇರುತ್ತಾನೆ. ಆಗಾಗ ನಮ್ಮೂರಿಗೆ ಬಂದು ಹೋಗುತ್ತಿರುತ್ತಾನೆ. ಇಂದು ದಿನಾಂಕ: 31/05/2020 ರಂದು ಬೆಳಗ್ಗೆ 10-30 ಗಂಟೆ ಸುಮಾರಿಗೆ ನನ್ನ ಗಂಡ ಮೋನಪ್ಪನು ವಡಗೇರಾ-ತುಮಕೂರು ಮೇನ ರೋಡ ಡ್ರೈವರ ಮಹ್ಮದ ಈತನ ಹೊಲದ ಹತ್ತಿರ ಸದರಿ ಕೂಲಿ ಕೆಲಸ ಮಾಡುವ ಗೌರಿಶಂಕರ ತಾತ ಇವರ ಹೊಲಕ್ಕೆ ನಡೆದುಕೊಂಡು ಹೊರಟಾಗ ಹಿಂದುಗಡೆಯಿಂದ ಮೋಟರ್ ಸೈಕಲ್ ನಂ. ಕೆಎ 33 ಯು 0117 ನೇದ್ದರ ಸವಾರ ಗುರುನಾಥ ತಂದೆ ಹಾಲಪ್ಪ ಸಾ:ಬೀರನಕಲ್ ತಾಂಡಾ ಈತನು ಮೋಟರ್ ಸೈಕಲ್ ಮೇಲೆ ತನ್ನ ತಂದೆಗೆ ಕೂಡಿಸಿಕೊಂಡು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತಿದ್ದಾಗ ಅಷ್ಟರಲ್ಲಿ ಎದುರುಗಡೆಯಿಂದ ರೈತರ 3-4 ಎತ್ತುಗಳು ಬರುತ್ತಿದ್ದು, ಸದರಿ ಎತ್ತುಗಳು ಒಮ್ಮಲೇ ಬೆದರಿಕೊಂಡಿದ್ದರಿಂದ ಮೋಟರ್ ಸೈಕಲ್ ಸವಾರನು ಮೋಟರ್ ಸೈಕಲ್ ಅನ್ನು ಎತ್ತುಗಳಿಗೆ ಗುದ್ದುವುದನ್ನು ತಪ್ಪಿಸಲು ಹೋಗಿ ನನ್ನ ಗಂಡನಿಗೆ ಡಿಕ್ಕಿಪಡಿಸಿ ಮೋಟರ್ ಸೈಕಲ್ ಸಮೇತ ಬಿದ್ದಿದ್ದರಿಂದ ನನ್ನ ಗಂಡನ ಎಡ ತೆಲೆಗೆ ಭಾರಿ ರಕ್ತ ಗಾಯ ಮತ್ತು ಮೈ ಕೈಗೆ ಅಲ್ಲಲ್ಲಿ ರಕ್ತಗಾಯಗಳಾಗಿದ್ದು, ಮೋಟರ್ ಸೈಕಲ್ ಹಿಂದೆ ಕುಳಿತ ಹಾಲಪ್ಪನಿಗೆ ತರಚಿದ ಗಾಯಗಳಾಗಿರುತ್ತವೆ. ಅಪಘಾತವನ್ನು ಸೈಯದ ಅಲಿ ತಂದೆ ನಬಿಸಾಬ ಕೋಳಿ ಈತನು ನೋಡಿರುತ್ತಾನೆ. ನನ್ನ ಗಂಡನಿಗೆ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿ, ಹೆಚ್ಚಿನ ಉಪಚಾರ ಕುರಿತು ಯಾದಗಿರಿ ಶರಣಬಸವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ಸೇರಿಕೆ ಮಾಡಿದಾಗ ಉಪಚಾರ ಪಡೆಯುತ್ತಾ 1-50 ಪಿಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಾರಣ ಸದರಿ ಮೋಟರ್ ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 67/2020 ಕಲಂ: 279,337,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 69/2020 ಕಲಂ 279, 337, 338 304 (ಎ) ಐಪಿಸಿ:ದಿನಾಂಕ 29/05/2020 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾಧಿ ಮತ್ತು ಆರೋಪಿ ಇಬ್ಬರೂ ಕೂಡಿಕೊಂಡು ತಮ್ಮ ವೈಕ್ತಿಕ ಕೆಲಸಯಿದ್ದ ಪ್ರಯುಕ್ತ ಮೋಟಾರ ಸೈಕಲ್ ನಂ ಕೆ.ಎ-33-ಡಬ್ಲ್ಯೂ-4756 ನೆದ್ದರ ಮೇಲೆ ಕುಳಿತುಕೊಂಡು ತಮ್ಮ ತಾಂಡಾದಿಂದ ಯಾದಗಿರಿಗೆ ಬರುವಾಗ ಮಾರ್ಗಮಧ್ಯ ಹತ್ತಿಕುಣಿ ರಾಮುನಾಯಕ ವಾರಿ ತಾಂಡಾ-ಹತ್ತಿಕುಣಿ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುವಾಗ ಎದುರುಗಡೆ ಕಾಡ ಹಂದಿ ಬಂದುದ್ದರಿಂದ ಆರೋಪಿತನು ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ತೋಟಗಾರಿಕಾ ಇಲಾಖೆ ಹತ್ತಿಕುಣಿ ಕ್ರಾಸ್ ಹತ್ತಿರ ಮೋಟಾರ ಸೈಕಲ್ ಸ್ಕಿಡ್ ಆಗಿ ಅಪಘಾತವಾಗಿದ್ದು, ಅಪಘಾತದಲ್ಲಿ ಫಿರ್ಯಾಧಿಗೆ ಮತ್ತು ಆರೋಪಿತನಿಗೆ ಇವರಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ಸಾದಾ ಗಾಯಗಳು ಆಗಿರುತ್ತವೆ ಅಂತಾ ಫಿರ್ಯಾಧೀಯ ಹೇಳಿಕೆಯ ಮೇರೆಗೆ ಪ್ರಕರಣ ದಾಖಲು ಆಗಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿಯ ಗಾಯಾಳು ಆರೋಪಿ ರವಿಕುಮಾರ ತಂದೆ ಗೋಬ್ರು ಜಾಧವ ವಯಾ:28 ಜಾ: ಲಂಬಾಣಿ ಸಾಃ ಸೌದಾಗರ ತಾಂಡಾ ಇತನಿಗೆ ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ಹಚ್ಚಿನ ಉಪಚಾರಕ್ಕೆ ರಾಯಚೂರಿನ ರೀಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ರಾಯಚೂರಿನ ಕಣ್ವ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಗಾಯಾಳು ಆರೋಫಿತನು ಅಲ್ಲಿ ಉಪಚಾರಕ್ಕೆ ಸ್ಪಂಧಿಸದ ಕಾರಣ ಆತನಿಗೆ ಊರಲ್ಲಿಯೇ ಖಾಸಗಿ ಔಷಧಿ ಮುಖಾಂತರ ಉಪಚಾರಪಡಿಸಿಬೇಕೆಂದು ರಾಯಚೂರಿನಿಂದ ಇಂದು ದಿನಾಂಕ 31-05-2020 ರಂದು ಸೌದಾಗರ ತಾಂಡಾಕ್ಕೆ ಕರೆದುಕೊಂಡು ಮಧ್ಯಾನ 2 ಗಂಟೆ ಸುಮಾರಿಗೆ ಬಂದಾಗ ಸೌದಾಗರ ತಾಂಡಾದಲ್ಲಿ ರವಿಕುಮಾರ ಇತನು 2-30 ಪಿ.ಎಮ್ ಕ್ಕೆ ತನ್ನ ಮನೆಯಲ್ಲಿ ಅಪಘಾತದಲ್ಲಿ ಆದ ಗಾಯಗಳಿಂದಲೇ ಮೃತಪಟ್ಟಿದ್ದು ಇರುತ್ತದೆ ಅಂತಾ ಮೃತ ತಾಯಿಯಾದ ಶ್ರೀಮತಿ ಜಲಮಿಬಾಯಿ ಗಂಡ ಗೋಬ್ರ್ಯಾ ಜಾಧವ ಇವಳು ನೀಡಿದ ಹೇಳಿಕೆಯ ಮೇಲಿಂದ ಈ ಪ್ರಕರಣದಲ್ಲಿ ಕಲಂ 304 (ಎ) ಐಪಿಸಿ ಅಳವಡಿಸಿಕೊಳ್ಳುವಂತೆ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಲಾಗಿದೆ.
Hello There!If you like this article Share with your friend using