ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/05/2020

By blogger on ಸೋಮವಾರ, ಜೂನ್ 1, 2020


                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/05/2020 
                                                                                                               
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 48/2020 ಕಲಂ: 188, 269, 270 ಐಪಿಸಿ: ಇಂದು ದಿನಾಂಕ; 30/05/2020 ರಂದು 6-00 ಪಿಮ್ ಕ್ಕೆ  ಶ್ರೀ ಭಕ್ಕಪ್ಪ ತಂದೆ ಸಂಭಣ್ಣ ಹೊಸಮನಿ ನಗರಸಭೆ ಆಯುಕ್ತರರು ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಢಾದಿಕಾರಿಗಳವರ ಕಛೇರಿ ಯಾದಗಿರಿ ಜಿಲ್ಲೆರವರ ಆದೇಶ ಪ್ರಕಾರ ಯಾದಗಿರಿ ನಗರ ಸಭೆ ವಾರ್ಡ ನಂಬರ 20 ರಲ್ಲಿಯ ದುಖಾನವಾಡಿ ವ್ಯಾಪ್ತಿಯಲ್ಲಿ ನೊವೆಲ್ ಕೊರೋನಾ (ಕೋವಿಡ್-19) ಪಾಸಿಟಿವ್ ಪ್ರಕರಣ ನಿಮಿತ್ಯ ಎಲ್ಲಾ ಜನರ ಸುರಕ್ಷತೆ ದೃಷ್ಠಿಯಿಂದ ಆ ಪ್ರದೇಶವನ್ನು ನಿರ್ಭಂಧಿಸಿ ಕಂಟೇನ್ಮೆಂಟ್ ಜೋನ್ ಮತ್ತು ಬಫರ ಜೋನ್ ಎಂದು ಆದೇಶಿಸಿ ದುಖಾನವಾಡಿ ಪ್ರದೇಶವನ್ನು ಸರಕಾರದ ಆಧೇಶದನ್ವಯ ಕಂಟೆನ್ಮೆಂಟ್ ಪ್ಲಾನ ಅನುಸಾರ 100 ಮೀಟರ ವಾರ್ಡ ನಂಬರ 20 ದುಖಾನವಾಡಿ ಪ್ರದೇಶವನ್ನು ಕಂಟೆನ್ಮೆಂಟ ಜೋನ್ ಎಂದು ಆದೇಶಿಸಿರುತ್ತದೆ. ದುಖಾನವಾಡಿ ಪ್ರದೇಶದ ವ್ಯಕ್ತಿಯಾದ ಮಹ್ಮದ ಸರ್ವರ ಹಾಗೂ ಆತನ ಹೆಂಡತಿಗೆ ಕೊರೋನಾ (ಕೋವಿಡ್-19) ಪಾಸಿಟಿವ್ ಶಂಕೆ ಕಂಡು ಬಂದಿದ್ದರಿಂದ ರೋಗಿಯನ್ನು ಇತರರಿಂದ ಪ್ರತ್ಯೇಕಿಸಿ ಕ್ವಾರೆಂಟೆನ್ ಕೇಂದ್ರದಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದು ಆದರೆ ನಿನ್ನೆ ದಿನಾಂಕ; 29/05/2020 ರಂದು  ಚಿಕಿತ್ಸೆ ಪಡೆದ ನಂತರ ಸದರಿಯವರ ಕೋರೋನಾ ವೈದ್ಯಕೀಯ ಪರಿಕ್ಷೇಯು ಋಣಾತ್ಮಕ(ನೇಗೆಟಿವ್)ವಾಗಿ ಕಂಡು ಬಂದಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ದುಖನವಾಡಿಗೆ ಬಂದಿದ್ದು ಜನರು ಗುಂಪುಗುಡಿಕೊಂಡು ಯಾವುದೇ ಸಂಭ್ರಮಾಚಾರಣೆ ಮಾಡಬಾರದು ಅಂತಾ ಸರಕಾರದ ಆದೇಶವಿದ್ದರು ಕೂಡಾ ದುಖನವಾಡಿಯಲ್ಲಿ ಮಾನ್ಯ ಜಿಲ್ಲಾದಿಕಾರಿಗಳ ಆಧೇಶ ಕಲಂ.144 ಸಿಆರ್ಪಿಸಿ ಜಾರಿಯಲ್ಲದಿದರೂ ಕೂಡಾ ಎಲ್ಲಾ ಜನರು ಗುಂಪುಗೂಡಿಕೊಂಡು ಮಹಮ್ಮದ ಸರ್ವರ ಮತ್ತು ಆತನ ಹೆಂಡತಿಯನ್ನು ಮೆರವಣಿಗೆ ಮುಖಾಂತರ ದುಖಾನವಾಡಿಯಲ್ಲಿ ಸಂಭ್ರಮಾಚರಣೆಯನ್ನು ಕೈಕೊಂಡಿದ್ದು ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವವಿರುವ ಬಗ್ಗೆ ತಿಳಿದ್ದಿದ್ದು ಸಹ ವಿಧಿ ವಿರುದ್ದವಾಗಿ ಜನರನ್ನು ಸೇರಿದ್ದು ಹಾಗೂ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವವಿರುವ ದ್ವೇಷಪೂರ್ವಕ ಕೃತ್ಯವೆಸಗಿದ್ದು ಈ ಕೃತ್ಯವು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮೂಲಕ ವಿಡಿಯೋ ಸಂದೇಶಗಳು ಹರಿಬಿಟ್ಟಿದ್ದು ಇರುತ್ತದೆ. ಈ ಬಗ್ಗೆ ದುಖಾನವಾಡಿಯಲ್ಲಿ ಇಂದು ದಿನಾಂಕ; 30/05/2020 ರಂದು ಸಾಯಂಕಾಲ ನಾನು ಮತ್ತು ನಮ್ಮ ಜೀಪ್ ಚಾಲಕನಾದ ಆನಂದ ಕೂಡಿಕೊಂಡು ಹೋಗಿ ವಿಚಾರಣೆ ಕೈಕೊಂಡಿದ್ದು ಈ ಮೇಲಿನ  ನಿಜ ಸಂಗಂತಿ ತಿಳಿದು ಬಂದಿರುತ್ತದೆ. ಕಾರಣ ಮೇಲ್ಕಂಡಂತೆ ಸರಕಾರದ ಆದೇಶ ಉಲ್ಲಂಘನೆ ಮಾಡಿ ಕೃತ್ಯವೆಸಗಿದ್ದು ಭಾತ್ಮಿದಾರರಿಂದ ವಿಡಿಯೋ ಪರಿಶೀಲಿಸಿ ನೋಡಲಾಗಿ ಈ ಕೆಳಕಂಡ ಕೆಲವು ಜನರುಗಳ ಹೆಸರುಗಳು ತಿಳಿದು ಬಂದಿದ್ದು ಇನ್ನುಳಿದ ಕೆಲವು ಜನರುಗಳ ಹೆಸರುಗಳು ತಿಳಿದು ಬಂದಿರುವುದಿಲ್ಲ  ಗೊತ್ತಾದ್ದಲ್ಲಿ ತಿಳಿಸುತ್ತೇನೆ. ಸ್ವಾಗತ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡಿದ್ದ 1)ಎಮ್.ಡಿ ಸರ್ವರ 2) ವಸೀಮ್ 3) ಬಾಬಾ ಆಟೋ ಚಾಲಕ 4) ರಸೂಲ್ 5) ಹಬೀಬ್ 6) ಅಕ್ಬರ 7) ನಭೀ 8) ಜಾವೀದ 9) ಬಾಬಾ ಡೊಂಗ್ರಿ ಹಾಗೂ ಈತರರು ಪಾಲ್ಗೊಂಡಿದ್ದು ಸದರಿ ಘಟನೆಯು ನಿನ್ನೆ ದಿನಾಂಕ; 29/05/2020 ರಂದು 2-00 ಪಿಎಮ್ ದಿಂದ 3-00 ಪಿಎಮ್ ಮಧ್ಯದ ಅವಧಿಯಲ್ಲಿ ಜರುಗಿದ್ದು ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಲಾಗಿದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.48/2020 ಕಲಂ.188, 269, 270 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
   
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 70/2020 ಕಲಂ 3 & 7 ಇ.ಸಿ. ಕಾಯ್ದೆ ಮತ್ತು 3(1) ಸೀಡ್ಸ ರೂಲ್ ಕಾಯ್ದೆ 1968: ದಿನಾಂಕ 30/05/2020 ರಂದು ಸಾಯಂಕಾಲ 5-15 ಗಂಟೆಗೆ ಆರೋಪಿತರು ಹತ್ತಿ ಬೀಜಗಳು ಸಂಸ್ಕರಣೆ ಮತ್ತು ಪ್ಯಾಕೇಜಿಂಗ ಮಾಡಲು ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಮುಂಡರಗಿ ಗ್ರಾಮ ಸಮೀಪದ ವರ್ಧಮಾನ ರೈಸ್ ಮಿಲ್ ಗೋದಾಮಿನಲ್ಲಿ ಬೇರೆ ಕಡೆಯಿಂದ ಹತ್ತಿ ಬೀಜಗಳನ್ನು ತೆಗೆದುಕೊಂಡು ಬಂದು ಸಂಗ್ರಹಿಸಿ ಅವುಗಳನ್ನು ವಿವಿಧ ತಳಿಗಳ ಹೆಸರುಗಳುಳ್ಳ ಪಾಕೇಟಗಳಲ್ಲಿ ಪ್ಯಾಕ್ ಮಾಡಿ  ಮಾರಾಟ ಮಾಡುವ ಸಂಬಂಧ ತಯ್ಯಾರು ಮಾಡಿ ಇಟ್ಟಿದ್ದು, ಸದರಿ ಗೋದಾಮಿಗೆ ದಾಳಿ ಮಾಡಿ ಅಂದಾಜ 2,46,52,700/ರೂ ಕಿಮ್ಮ್ತತಿನ ಹತ್ತಿ ಬೀಜಗಳನ್ನು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 92/2020 ಕಲಂ: 143.147.323.447427.504.506 ಸಂಗಡ 149 ಐಪಿಸಿ: ಇಂದು ದಿನಾಂಕ 30/05/2020 ರಂದು ಸಾಯಾಂಕಾಲ 5.00 ಗಂಟೆಗೆ ಪಿರ್ಯಾದಿ ಶ್ರೀ ಮಹ್ಮದ ಹಾಜಿ ತಂದೆ ಲಾಲಸಾಬ ವಯಾ|| 40 ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಕೆಂಭಾವಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ  ಪಿರ್ಯಾದಿ ಸಾರಾಂಶವೆನೆಂದರೆ ಕೆಂಭಾವಿ ಸೀಮಾಂತರ ಸವರ್ೆ ನಂಬರ 597/ಪೋ2-2 ವಿಸ್ತಿರ್ಣ 2 ಎಕರೆ 30 ಗುಂಟೆ ಹೊಲ ನನ್ನ ಹೆಸರಿನಲ್ಲಿದ್ದು ಸದರಿ ಹೊಲದ ಮಾಲಿಕ, ಕಬéೆದಾರ, ಹಾಗೂ ಸಾಗುವಳಿದಾರ ನಾನೆ ಇರುತ್ತೇನೆ. ನನ್ನ ಹೊಲದ ಹದ್ದುಬಸ್ತ ಮಾಡಿ ಸಿಮೆಂಟಿನ ಕಂಬಗಳನ್ನು ಹಾಕಿರುತ್ತೇನೆ.  ಹೀಗಿದ್ದು ದಿನಾಂಕ:- 27/05/2020 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಮ್ಮ ಪಕ್ಕದ ಹೊಲದವರಾದ 1) ದವಲಸಾಬ ತಂದೆ ಬಾವಾಸಾಬ ಆಚಿದೇಲಿ 2) ಶರಣಬಸಪ್ಪ ತಂದೆ ವಿರುಪಾಕ್ಷಪ್ಪ 3) ರವಿ ತಂದೆ ಸಿದ್ದಣ್ಣ ಅಂಗಡಿ 4) ಅಬ್ದುಲ್ಸಾಬ ತಂದೆ ನಬಿಸಾಬ ನಾಶಿ 5) ನಬಿಸಾಬ ತಂದೆ ರಸುಲ್ಸಾಬ ನಾಶಿ 6) ಆದಮ್ ಹುಸೇನ ದಫೇದಾರ 7) ಆದಮ್ ನಾಶಿ 8) ಖಾಜಾಹುಸೇನಿ ನಾಶಿ 9) ಸೋಫಿಸಾಬ ನಾಶಿ 10) ದವಲಸಾಬ ನಾಶಿ 11) ಗೌಸ್ ಖಾಜಿ ತಂದೆ ಸಲಿಮುದ್ದಿನ ಖಾಜಿ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ನಮ್ಮ ಹೊಲಕ್ಕೆ ಹದ್ದು ಬಸ್ತ ಮಾಡಿ ಹಾಡದ ಸಿಮೆಂಟ ಕಂಬಗಳನ್ನು ಕಿತ್ತಿ ತೆಗೆದು ನಷ್ಟ ಮಾಡುತ್ತಿದ್ದಾಗ ನಾನು ನಮ್ಮ ಹೊಲದಲ್ಲಿ ಹಾಕಿದ ಕಂಬಗಳನ್ನು ಯಾಕೆ ಕಿತ್ತುತ್ತಿದ್ದಿರಿ ಅಂತಾ ಅಂದಾಗ ಎಲ್ಲರು ಎಲೇ ಹಾಜಿ ಸೂಳೆ ಮಗನೆ ಈ ಹೋಲದಲ್ಲಿ ನಮ್ಮ ಪಾಲು ಬರುತ್ತದೆ ಮಗನೆ ಅಂತಾ ಅವಾಚ್ಯವಾಗಿ ಬ್ಶೆದು ಎಲ್ಲರೂ ಕೈಯಿಂದ ಹೊಡೆ ಬಡೆ ಮಾಡುತ್ತಿದ್ದಾಗ ನಾನು ಚಿರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ರಸ್ತೆಯ ಮೇಲೆ ಹೊರಟಿದ್ದ ಸಂಗಪ್ಪ ತಂದೆ ಬಸಪ್ಪ ಗುಡಿಮನಿ ಹಾಗು ಮಂಜೂರ  ತಂದೆ ಅಬ್ದುಲ್ ರಜಾಕ  ಮತ್ತು ನೂರ ಮಹ್ಮದ್ ತಂದೆ ಅಕ್ಬರ ಅಲಿ ಇವರೆಲ್ಲರು ಬಂದು ನನಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ಮಗನೇ  ಇನ್ನೊಮ್ಮೆ  ಈ ಹೊಲದಲ್ಲಿ ಏನಾದರೂ ಮಾಡಿದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ನಂತರ ಈ ವಿಷಯದ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ನನಗೆ ಯಾವ್ಯದೆ ಗಾಯ ವಗೈರೆ ಆತರುವುದಿಲ್ಲ. ಕಾರಣ ಮೇಲ್ಕಾಣಿಸಿದ ಎಲ್ಲಾ ಜನರು ನನ್ನೊಂದಿಗೆ ವಿನಾಕಾರಣ ಜಗಳ ತೆಗೆದು ಹೊಲದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಕೈಯಿಂದ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 11 ಜನರ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಲು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 92/2020 ಕಲಂ 143.147.323.447.427.504.506 ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 144/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ: 30/05/2020 ರಂದು 7:30 ಪಿ.ಎಮ್. ಕ್ಕೆ ನಾನು ಠಾಣೆಯಲ್ಲಿದ್ದಾಗಶ್ರೀ ಚೇತನ್ ಪಿ.ಎಸ್.ಐ (ಕಾ&ಸು-1) ಸಾಹೇಬರು ಸುರಪೂರ ಪೊಲೀಸ್ಠಾಣೆರವರು 06 ಜನಆರೋಪಿತರೊಂದಿಗೆಠಾಣೆಗೆ ಬಂದು, ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ಸಾರಾಂಶವೆನಂದರೆಇಂದು ದಿನಾಂಕ:30/05/2020 ರಂದು 4 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯಸುರಪುರ ನಗರದ ಬಸ್ ನಿಲ್ದಾಣದ ಹಿಂದುಗಡೆ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೊಹರ ಹೆಚ್ಸಿ-105 3) ಶ್ರೀ ನಿಂಗಪ್ಪ ಹೆಚ್ಸಿ-118 ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ರವಿಕುಮಾರತಂದೆ ಸಿದ್ದಣ್ಣ ನಾಯಕ ವ|| 37 ವರ್ಷಜಾ|| ಬೇಡರು ಉ|| ವ್ಯಾಪಾರ ಸಾ|| ಬೈರಿಮಡ್ಡಿತಾ|| ಸುರಪುರ 2) ಶ್ರೀ ಲೋಹಿತಕುಮಾರತಂದೆ ಬಸವರಾಜ ನಾಯಕ್ ವ|| 31 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಡೊಣ್ಣಿಗೇರಿ ಸುರಪುರಇವರನ್ನು 5 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5:15 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿಠಾಣೆಯಿಂದ ಹೊರಟು 5:25 ಪಿ.ಎಂ ಕ್ಕೆ ಸುರಪುರ ನಗರದ ಬಸ್ ನಿಲ್ದಾಣದ ಹಿಂದುಗಡೆಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 5:30 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿಒಟ್ಟು 06 ಜನರು ಸಿಕ್ಕಿದ್ದು ಅವರಅವರ ಹೆಸರು, ವಿಳಾಸ ವಿಚಾರಿಸಿದ್ದು 1) ಸಂತೋಷಕುಮಾರತಂದೆ ಬಸಣ್ಣ ನಾಯಕ ವ|| 44 ವರ್ಷಜಾ|| ಬೇಡರು ಉ|| ವ್ಯಾಪಾರ ಸಾ|| ಗಾಂದಿಚೌಕ ಹತ್ತಿರ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1200/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಅಂಬ್ರೇಶ ನಾಯಕತಂದೆ ಮರೆಪ್ಪ ನಾಯಕ್ ವ|| 42 ವರ್ಷಜಾ|| ಬೇಡರು ಉ|| ಹೊಟೇಲ್ ವ್ಯಾಪಾರ ಸಾ|| ಉಪ್ಪಾರ ಮೊಹಲ್ಲಾ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1100/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಮಾನಪ್ಪತಂದೆಚಂದಪ್ಪ ಬೊನಾಲಕೇರಿ ವ|| 50 ವರ್ಷಜಾ|| ಮಾದಿಗ ಉ|| ಒಕ್ಕಲುತನ ಸಾ|| ಬೋನಾಲಕೇರಿ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1330/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಇಫರ್ಾನ್ತಂದೆಇಕ್ಬಾಲ ಅಹ್ಮದಕೆಮ್ಮನಗಡಿ ವ|| 42 ವರ್ಷಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಸರಕಿಮೊಹಲ್ಲಾತಿಮ್ಮಾಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1230/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಮಾರ್ಥಂಡಪ್ಪತಂದೆ ಭೀಮಣ್ಣ ದಿಲ್ವಾರ ವ|| 48 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ದೇವರಗೋನಾಲ ಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1600/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಮಹ್ಮದ ಖಾಸಿಂ ತಂದೆಅಬ್ದುಲ್ ರಸಿದ್ ಉಸ್ತಾದ ವ|| 38 ವರ್ಷಜಾ|| ಮುಸ್ಲಿಂ ಉ|| ಟೇಲರಿಂಗ್ ಸಾ|| ಕಬಡಗೇರಾ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1300/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆಇಟ್ಟ ಹಣ 5400/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 13,160/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು5:30  ಪಿ.ಎಮ್ ದಿಂದ 6:30 ಪಿ.ಎಮ್ ವರೆಗೆಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದುಇರುತ್ತದೆ. ನಂತರ 06 ಜನ ಆರೋಪಿರೊಂದಿಗೆ ಮರಳಿ ಠಾಣೆಗೆರಾತ್ರಿ 7 ಗಂಟೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 15/2020 ಕಲಂ. 174  ಸಿಆರ್ಪಿಸಿ: ಇಂದು ದಿನಾಂಕ:30/05/2020 ರಂದು 9:30 ಎ.ಎಮ್ ಕ್ಕೆ ಪಿಯರ್ಾಧಿದಾರಳಾದ ಶ್ರೀಮತಿ ಲಕ್ಷ್ಮೀಬಾಐಇ ಗಂಡ ತಿಪ್ಪಣ್ಣ ವಂದಾಲಿ ಸಾ:ಸೂಗೂರ ತಾ:ಸುರಪೂರ ಇವರ ಹೇಳಿಕೆ ಸಾರಾಂಶವೆನೆಂದರೆ ನನಗೆ ಮೂರು ಜನ ಹೆಣ್ಣು ಮಗಕ್ಕಳು ಒಬ್ಬ ಗಂಡು ಮಗನಿದ್ದು ಅದರಲ್ಲಿ ಹಿರಿಯ ಮಗಳು ಬಸಮ್ಮನನ್ನು ನಮ್ಮ ತಮ್ಮ ಬಸವರಾಜನಿಗೆ ಕೊಟ್ಟು ಮದುವೆ ಮಾಡಿರುತ್ತೆವೆ. ಅವಳಿಗೆ 4 ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗನಿದ್ದು ಗಂಡು ಮಗನು ಬೆಂಗಳೂರಿನಲ್ಲಿ ಸುಮಾರು 10 ವರ್ಷದಿಂದ ಅಲ್ಲೆ ಇದ್ದು ಕೂಲಿ ಕೆಲಸ ಮಾಡುತ್ತಾನೆ. ಮೂರು ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ತಮ್ಮ ಬಸವರಾಜ ತಿರಿಕೊಂಡಿರುತತಾನೆ. ನಂತರ ನನ್ನ ಮಗಳು ಬಸಮ್ಮ ಕೂಡಾ ಮಾನಸಿಕ ಅಸ್ವಸ್ಥಳಾಗಿರುತ್ತಾಳೆ. ಆದ್ದರಿಂದ ಕೊನೆಯ ಮಗಳು ಜಯಶ್ರೀ ಇವಳು ಸೆಡಂ ತಾಲೂಕಿನ ಕೊಡ್ಲಾ ಗ್ರಾಮದಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವ್ಯಾಂಸ ಮಾಡುತ್ತಿದ್ದು 9 ನೇ ತರಗತಿ ಪರೀಕ್ಷೆ ಬರೆದು ರಜೆಯಲ್ಲಿ ಗ್ರಾಮಕ್ಕೆ ಬಂದು ನಮ್ಮ ಮನೆಯಲ್ಲಿ ಹಿರಿಯ ಮೊಮ್ಮಗಳನ್ನು ನನ್ನ ಮಗ ಬಸವರಾಜನಿಗೆ ಕೊಡ್ಡು ಮದುವೆ ಮಾಡಿರುತ್ತೆವೆ. ಕೊನೆಯ ಮೊಮ್ಮಗಳು ತಾಯಿ ಮಾನಸಿಕವಾಗಿದ್ದರಿಂದ ನಮ್ಮ ಮನೆಯಲ್ಲಿ ಬಂದು ಇರುತ್ತಿದ್ದು ನಿನ್ನೆ ದಿನಾಂಕ:29/05/2020 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ದನಗಳು ಹೊಡೆದುಕೊಂಡು ಬರಲು ಸಂಗಡ ಪ್ರಶಾಂತ ತಂದೆ ಮಲ್ಲಣ್ಣ, ಭಾಗ್ಯಶ್ರೀ ತಮದೆ ಮಹಿಪಾಲರೆಡ್ಡಿ ಎಲ್ಲರೂ ಕೂಡಿ ಊರು ಮುಂದಿನ ಹೊಲಗಳಲ್ಲಿ ಹೋಗಿ ದನಗಳನ್ನು ಹುಡುಕಲಾಗಿ ಸಿಕ್ಕಿರುವದಿಲ್ಲ.  ನಂತರ ಕೃಷ್ಣಾ ನದಿಯ ದಂಡೆಯಲ್ಲಿ ಹೋಗಿ ಹುಡಕಲಾಗಿ ಅಲ್ಲಿಯು ಸಿಕ್ಕಿರುವದಿಲ್ಲ. ಜಯಶ್ರೀ ಇವಳಿಗೆ ಬಾಯಾರಿಕೆ ಯಾಗಿದ್ದರಿಂದ ಕೃಷ್ಣಾನದಿಯಲ್ಲಿ ನಿರು ಕುಡಿಯಲು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳಿಗಿರುತ್ತಾಳೆ ಪ್ರಶಾಂತ , ಭಾಗ್ಯಶ್ರೀ ಕೂಗಿದರು ಬಂದಿರುವದಿಲ್ಲ. ನಂತರ ಪ್ರಶಾಂತ ಈತನು ನನ್ನ ಮಗ ಬಸವರಾಜನಿಗೆ ಪೋನ ಮಾಡಿ ವಿಷಯ ತಿಳಿಸಿದಾಗ ನಾವೆಲ್ಲರೂ ಗಾಬರಿಯಾಗಿ ಬೇವಿನಾಳ  ಸೀಮಾಂತರ ಕೃಷ್ಣಾ ನದಿಯಲ್ಲಿ ಬಂದು ನೋಡಲಾಗಿ ಸಿಕ್ಕಿರುವದಿಲ್ಲ. ನನ್ನ ಮಗ ಮತ್ತು ಮೊಮ್ಮಗ ಹಡುಕಿದರು ಸಿಕ್ಕಿರುವದಿಲ್ಲ. ನಂತರ ಬೆಂಗಳೂರಿನಲ್ಲಿದ್ದ ಮೊಮ್ಮಗ ಮಲ್ಲಿಕಾಜರ್ುನನಿಗೆ ಪೋನ ಮಾಡಿ ವಿಷಯ ತಿಳಿಸಿರುತ್ತೆವೆ. ಇಂದು ದಿನಾಂಕ:30/05/2020 ರಂದು ಬೆಳಿಗೆ 6 ಗಂಟೆ ಸುಮಾರಿಗೆ ಅಗ್ನಿ ಶಾಮಕ ದಳದವರಿಗೆ ಪೋನ ಮಾಡಿ ವಿಷಯ ತಿಳಿಸಿದಾಗ ಅವರು ಬಂದು ಹುಡಕಲಾಗಿ 8 ಎ.ಎಮ್ ಸುಮಾರಿಗೆ ನದಿ ನೀರಿನಿಂದ ಮೃತ ದೇಹವನ್ನು ತೆಗೆದಿರುತ್ತಾರೆ, ನಾವು ಎಲ್ಲರೂ ಹೋಗಿ ನೋಡಿ ಗುರುತ್ತಿಸಿರುತ್ತೆವೆ. ನನ್ನ ಮೊಮ್ಮಗಳು ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಗಳಿ ಮೃತಪಟ್ಟಿರುತ್ತಾರೆ. ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ. ಅಂತ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.15/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!