ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/06/2020

By blogger on ಸೋಮವಾರ, ಜೂನ್ 29, 2020


                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/06/2020 
                                                                                                               
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 84/2020 ಕಲಂ 323, 324, 325, 504, 506 ಸಂ 34 ಐಪಿಸಿ : ದಿನಾಂಕ 28/06/2020 ರಂದು ಸಾಯಂಕಾಲ 7-00 ಗಂಟೆಗೆ ಫಿರ್ಯಾಧಿದಾರನು ಮತ್ತು ಅಣ್ಣತಮಕಿಯವರ ತಮ್ಮ ಮನೆ ಮುಂದೆ ಮಾತಾಡುತ್ತಾ ನಿಂತಿರುವಾಗ ಫಿರ್ಯಾಧಿ ಹೆಂಡತಿ ನಳದ ಹತ್ತಿರ ನೀರು ತುಂಬುತ್ತಿದ್ದಳು, ಆಗ ಆರೋಪಿತರು ಬಂದು ನಮ್ಮ ಹೊಲದ ಡ್ವಾಣ ನೀವೇ ಒಡೆದಿದ್ದಿರಿ ಸೂಳೇ ಮಕ್ಕಳೇ ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಕೈಯಿಂದ, ಕಲ್ಲಿನಿಂದ ಫಿರ್ಯಾಧಿಗೆ, ಫಿರ್ಯಾಧಿ ಅಣ್ಣನಿಗೆ ಮತ್ತು ಫಿರ್ಯಾಧಿ ಹೆಂಡತಿಗೆ ಹೊಡೆದು ರಕ್ತಗಾಯ, ಗುಪ್ತಗಾಯ, ಮತ್ತು ತರಚಿದಗಾಯ ಮಾಡಿದ ಬಗ್ಗೆ, ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 85/2020 ಕಲಂ 341, 323, 324, 504, 506 ಸಂ 34 ಐಪಿಸಿ : ದಿನಾಂಕ 28/06/2020 ರಂದು ಸಾಯಂಕಾಲ 7-00 ಗಂಟೆಗೆ ಫಿರ್ಯಾಧಿದಾರನು ಮತ್ತು ಅವನ ಅಣ್ಣ ಇಬ್ಬರೂ ಕೂಡಿಕೊಂಡು ಆರೋಪಿತರ ಮನೆ ಹತ್ತಿರ ಹೋಗಿ ನಿನ್ನೆ ನೀನು ನಮ್ಮ ಹೊಲದ ಡ್ವಾಣ ಯಾಕೆ ಒಡೆದಿದ್ದಿ ಅಂತಾ ಕೇಳಿದಕ್ಕೆ  ಆಗ ಆರೋಪಿತರು ಎಲ್ಲರೂ ಕೂಡಿಕೊಂಡು ಫಿರ್ಯಾಧಿ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ, ಕಲ್ಲಿನಿಂದ ಫಿರ್ಯಾಧಿಗೆ, ಫಿರ್ಯಾಧಿ ಅಣ್ಣನಿಗೆ ಹೊಡೆದು ರಕ್ತಗಾಯ, ಗುಪ್ತಗಾಯ, ಮತ್ತು ತರಚಿದಗಾಯ ಮಾಡಿದ ಬಗ್ಗೆ, ಪ್ರಕರಣ ದಾಖಲು ಮಾಡಿದ್ದು ಇರುತ್ತದೆ


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 86/2020 ಕಲಂ 143, 147, 447, 427 504, 506 ಸಂಗಡ 149 ಐಪಿಸಿ ಮತ್ತು ಕಲಂ 24 ಸಿನಿಯರ್ ಸಿಟಿಜನ್ ಎಕ್ಟ-2007 : ಇಂದು ದಿನಾಂಕ 29-06-2020 ರಂದು 6 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಗುರುನಾಥರೆಡ್ಡಿ ತಂದೆ ದುಂಡಪ್ಪಾ ಹೊನ್ನಾರೆಡ್ಡಿ ವಯಾ:70 ಉ: ಒಕ್ಕಲುತನ ಜಾ: ಲಿಂಗಾಯತರೆಡ್ಡಿ ಸಾ: ಯಡ್ಡಳ್ಳಿ ತಾ:ಜಿ ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ನೀಡಿದ್ದು ಅದರ ಸಾರಾಂಶವೆನೆಂದರೆ ನನಗೆ ಒಬ್ಬನೇ ಒಬ್ಬ ಮಗ ಸಾಹೇಬರೆಡ್ಡಿ @ ಬಾಬುರೆಡ್ಡಿ ಅಂತಾ ಮಗನಿದ್ದು, ಸಾಹೇಬರೆಡ್ಡಿ @ ಬಾಬುರೆಡ್ಡಿ ಇತನಿಗೆ ಚಿತಾಪೂರ ತಾಲೂಕಿನ ಬಂಕಲಗಾ ಗ್ರಾಮದ ಸಿದ್ರಾಮರೆಡ್ಡಿ ತಂದೆ ಮಹಾದೇವಪ್ಪ ಹಣಮರೆಡ್ಡಿ ಎಂಬುವವರು ತಮಗೆ ಗಂಡುಮಕ್ಕಳಿಲ್ಲದ ಕಾರಣ ನನ್ನ ಮಗನನ್ನೆ 1989 ನೇ ಸಾಲಿನಲ್ಲಿ ದತ್ತುಪುತ್ರನನ್ನಾಗಿ ಸ್ವೀಕಾರ ಮಾಡಿಕೊಂಡಿರುತ್ತಾರೆ. ಅದರ ಪ್ರಕಾರ ರಜೀಸ್ರ್ಟೇಷನ್ ಆಗಿರುತ್ತದೆ. ನಂತರ ನನ್ನ ಮಗನು ಬಂಕಲಗಾ ಗ್ರಾಮದಲ್ಲಿಯೇ ತನ್ನ ಹೆಂಡತಿ ಮಕ್ಕಳೊಂದಿಗೆ ಇದ್ದು ಅವರ ಸಮಸ್ತ ಆಸ್ತಿಗೆ ಬಾಬುರೆಡ್ಡಿ ಇತನೇ ವಾರಸುದಾರನಾಗಿರುತ್ತಾನೆ. ನಮ್ಮ ಗ್ರಾಮದ ಸೀಮಾಂತರದಲ್ಲಿ ನನ್ನ ಮಾಲೀಕತ್ವದಲ್ಲಿ 16 ಎಕರೇ ಹಾಗೂ ನನ್ನ ತಮ್ಮನಾದ ಸುರೇಶರೆಡ್ಡಿ ಇವರ ಹೆಸರಿನಲ್ಲಿ 15 ಎಕರೆ ಹೋಲವಿದ್ದು ಸದರಿ ಹೋಲಗಳು ಒಂದೇ ಹಾಸಿಗೆಯಲ್ಲಿರದೇ ಬೇರೆ ಬೇರೆ ಕಡೆಗಳಲ್ಲಿದ್ದು ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೆವೆ. ಸಾಹೇಬರೆಡ್ಡಿ @ ಬಾಬುರೆಡ್ಡಿ ಬಂಕಲಗಾ ಗ್ರಾಮಕ್ಕೆ ದತ್ತುಪುತ್ರನಾಗಿ ಹೋದ ಬಳಿಕ ಅವನು ಯಡ್ಡಳ್ಳಿ ಗ್ರಾಮದಲ್ಲಿರುವ ನಮ್ಮ ಆಸ್ತಿಯ ಮೇಲಿನ ಎಲ್ಲಾ ಹಕ್ಕನ್ನು ಕಳೆದುಕೊಂಡಿರುತ್ತಾನೆ. ನಮಗೆ ಹೋಲ ಸಾಗುವಳಿ ಮಾಡಲು ಆಗದ ಕಾರಣ ನಾನು ಹಾಗೂ ನನ್ನ ತಮ್ಮನಾದ ಸುರೇಶರೆಡ್ಡಿ ಇಬ್ಬರೂ ಬೇರೆಯವರಿಗೆ ಹೋಲಗಳು ಖಟ್ಟಗುತ್ತಿಗೆ ಹಚ್ಚುತ್ತಾ ಬಂದಿರುತ್ತೆವೆ. ಸದರಿ ಸಾಹೇಬರೆಡ್ಡಿ @ ಬಾಬುರೆಡ್ಡಿ  ಇತನು ಆಗಾಗ ನಮ್ಮೂರಿಗೆ ಬಂದು ನಾವು ಖಟ್ಟಗುತ್ತಿಗೆ ಹಚ್ಚಿದ ಹೋಲದವರಿಗೆ ಅಂಜಿಸುತ್ತಾ ಇದು ನನ್ನ ಹೋಲ ಇಲ್ಲಿ ಸಾಗುವಳಿ ಮಾಡಿದರೇ ನಿಮ್ಮ ಪರಿಣಾಮ ನೆಟ್ಟಗಿರೋಲ್ಲಾ ಅಂತಾ ಅಂಜಿಸುತ್ತಾ ಬಂದಿದ್ದು ಅಲ್ಲದೇ ನನಗೆ ವಯಸ್ಸಾಗಿದ್ದರೂ ಕೂಡಾ ನನಗೂ ಕೂಡಾ ಹೀನಾಯವಾಗಿ ನಿಂದಿಸುತ್ತಾ ಅವಾಚ್ಯವಾಗಿ ಬೈಯ್ಯುತ್ತಾ ಬಂದಿದ್ದು ಇರುತ್ತದೆ.
     ಹೀಗಿದ್ದು ಈ ವರ್ಷವು ಕೂಡಾ ನಾನು ಹಾಗೂ ನನ್ನ ತಮ್ಮನಾದ ಸುರೇಶರೆಡ್ಡಿ ಇಬ್ಬರೂ ನಮ್ಮ ಹೋಲಗಳನ್ನು ಈ ಹಿಂದೆ ಖಟ್ಟಗುತ್ತಿಗೆ ಮಾಡಿದ ನಮ್ಮ ಗ್ರಾಮದವರಾದ ಗೋವಿಂದಪ್ಪಾ ತಂದೆ ಮಲ್ಲಪ್ಪಾ ನೀರಕಟ್ಟಾ, ಸಿದ್ದಪ್ಪಾ ತಂದೆ ಕಷ್ಣಪ್ಪಾ ತಡಬಿಡಿ, ತಿಮ್ಮಯ್ಯಾ ತಂದೆ ಸಾಬಣ್ಣಾ ಜಿನಬಾವಿ, ಸಾಬಣ್ಣಾ ತಂದೆ ಮಲ್ಲಪ್ಪಾ ಮೂಲಿಮನಿ ಹಾಗೂ ದೇವಪ್ಪಾ ತಂದೆ ಸಾಬಣ್ಣಾ ಬೇವಿನಾಳ ಇವರಿಗೆ ಖಟ್ಟಗುತ್ತಿಗೆ ಹಾಗೇ ಹಚ್ಚಿದ್ದು ಇರುತ್ತದೆ. ಈ ವರ್ಷ ಮಳೆ ಚನ್ನಾಗಿ ಆಗಿದ್ದರಿಂದ ಹೋಲ ಮಾಡಿದ ಎಲ್ಲರೂ ಎಲ್ಲಾ ಹೋಲಗಳಲ್ಲಿ ಹತ್ತಿ ಬೀಜಗಳನ್ನು ಬಿತ್ತಿದ್ದು ಹತ್ತಿ ಬೆಳೆಯು ಕೂಡಾ ಬೆಳೆದಿತ್ತು. ದಿನಾಂಕ 28-06-2020 ರಂದು ಬೆಳಗ್ಗೆ ನಮ್ಮ ಹೋಲಗಳು ಖಟ್ಟಗುತ್ತಿಗೆ ಮಾಡಿದ ಮೇಳ್ಕಂಡ ಎಲ್ಲರೂ ನಮಗೆ ತಿಳಿಸಿದ್ದೆನೆಂದರೆ ನಿನ್ನೆ ದಿನಾಂಕ 27-06-2020 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಿಮ್ಮ ಮಗನಾದ 1) ಸಾಹೇಬರೆಡ್ಡಿ @ ಬಾಬುರೆಡ್ಡಿ ಇತನು ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನಾವು ಬಿತ್ತಿದ ಹತ್ತಿ ಹೋಲಗಳನ್ನು ಟ್ರ್ಯಾಕ್ಟರದ ಮುಖಾಂತರ ಎಲ್ಲಾ ಹತ್ತಿ ಬೆಳೆಗಳನ್ನು ಹಾಳು ಮಾಡಿದ್ದು ಇರುತ್ತದೆ. ಇದಕ್ಕೆ ಸಾಹೇಬರೆಡ್ಡಿ @ ಬಾಬುರೆಡ್ಡಿ ಇತನ ಸಂಬಂಧಿಕರಾದ 2) ಕಮಲಾಬಾಯಿ ಗಂಡ ನಿಂಗಾರೆಡ್ಡಿ 3)ಅಭಿಶೇಕರೆಡ್ಡಿ ತಂದೆ ಸಾಹೇಬರೆಡ್ಡಿ @ ಬಾಬುರೆಡ್ಡಿ 4) ಶ್ರೀನಿವಾಸರೆಡ್ಡಿ ತಂದೆ ನಿಂಗಾರೆಡ್ಡಿ ಪೋಲಿಸ್ ಪಾಟೀಲ್ 5) ನಂಧೀಶರೆಡ್ಡಿ ತಂದೆ ನಿಂಗಾರೆಡ್ಡಿ ಪೋಲಿಸ್ ಪಾಟೀಲ್ ಸಾ: ಎಲ್ಲರೂ ಯಡ್ಡಳ್ಳಿ ಮತ್ತು ಸಿಂದಗಿ ತಾಲೂಕಿನ ಕೊಂಡಗೂಳಿ ಗ್ರಾಮದ 6) ಶಶೀಧರ ತಂದೆ ಭೀಮರೆಡ್ಡಿ ಕೆಂಭಾವಿ ಮತ್ತು 7) ಸಂತéೋಷ ತಂದೆ ವಿಠಲರೆಡ್ಡಿ ಕೆಂಬಾವಿ ಇವರೆಲ್ಲರ ಪ್ರಚೋಧನೆ ಇರುತ್ತದೆ. ಸದರಿ ಟ್ರ್ಯಾಕ್ಟರವು ನಮ್ಮ ಗ್ರಾಮದ ಬಸಪ್ಪಾ ತಂದೆ ಹಣಮಂತ ನೈಕೋಡಿ ಇತನದೇ ಇದ್ದು ಆತನೇ ಟ್ರ್ಯಾಕ್ಟರ ನಡೆಸುತ್ತಿದ್ದನು ಟ್ರ್ಯಾಕ್ಟರ ನಂಬರ ನಮಗೆ ಗೊತ್ತಿಲ್ಲಾ ಅಂತಾ ತಿಳಿಸಿದರು. ಕೂಡಲೇ ನಾನು ಅವರೆಲ್ಲರನ್ನು ಕರೆದುಕೊಂಡು ನಮ್ಮ ಹೋಲಗಳಗೆ ಹೋಗಿ ನೋಡಿದಾಗ ಎಲ್ಲಾ ಹೋಲದಲಿಯ ಹತ್ತಿ ಬೇಳೆಯನ್ನು ಟ್ರ್ಯಾಕ್ಟರ ಸಹಾಯದಿಂದ ಹೊಡೆದು ಹರಗಿ ಹಾಳು ಮಾಡಿದ್ದರು. ಇದರಿಂದ ಸುಮಾರು 2 ಲಕ್ಷ್ಯ ರೂಪಾಯಿದಷ್ಟು ಲುಕ್ಸಾನ ಆಗಿತ್ತು. ನಂತರ ನಾನು ಸಾಹೇಬರೆಡ್ಡಿ @ ಬಾಬುರೆಡ್ಡಿ ಇತನಿಗೆ ಬೇಟಿಯಾಗಿ ನೀನು ದತ್ತುಪುತ್ರನಾಗಿ ಬಂಕಲಗಾ ಗ್ರಾಮಕ್ಕೆ ಹೋಗಿದ್ದಿ ಕಾನೂನಿನ ಪ್ರಕಾರ ಇಲ್ಲಿ ನಿನಗೆ ಯಾವುದೇ ಆಸ್ತಿ ಬರುವುದಿಲ್ಲಾ ಆದರೂ ನೀನು ವಿನಾಕಾರಣ ನಮಗೆ ತೊಂದರೆ ಕೊಡುತ್ತಿದ್ದಿ ಅಂತಾ ಕೇಳಿದಾಗ ಅವನು ನನಗೆ ಎಲೇ ಭೋಸಡಿ ಮಗನೇ ಈ ಆಸ್ತಿಗೆಲ್ಲಾ ನಾನೇ ವಾರಸುದಾರನು ನೀವು ಹೇಗೆ ಸಾಗುವಳಿ ಮಾಡುತ್ತಿರಿ ನೋಡಿಕೊಳ್ಳುತ್ತೆನೆ. ನೀವು ಆ ಹೋಲದಲ್ಲಿ ಕಾಲೀಟ್ಟರೇ ನಿಮಗೆ ಅಲ್ಲಿಯೇ ಮಗಿಸಿಬಿಡುತ್ತೆನೆ ಅಂತಾ ನನಗೆ ಅಂಜಿಸಿ ಜೀವದ ಭಯ ಹಾಕಿದನು.
   ಈ ರೀತಿಯಾಗಿ ಸಾಹೇಬರೆಡ್ಡಿ @ ಬಾಬುರೆಡ್ಡಿ ತಂದೆ ಸಿದ್ರಾಮರೆಡ್ಡಿ ಹಣಮರೆಡ್ಡಿ ಸಾ: ಬಂಕಲಗಾ ಇತನು ದತ್ತುಪುತ್ರನಾಗಿ ಚಿತಾಪೂರ ತಾಲೂಕಿನ ಬಂಗಲಗಾ ಗ್ರಾಮಕ್ಕೆ ಹೋಗಿದ್ದರೂ ಆತನು ಈ ಮೇಲ್ಕಂಡವರ ಪ್ರಚೋಧನೆಯಿಂದ ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನಾವು ನಮ್ಮ ಹೋಲಗಳು ಪಾಲಿಗೆ ಹಚ್ಚಿದ ಪಾಲಿಗೆದಾರರಿಗೆ ಅಂಜಿಸಿ  ಅವರು ಹೋಲದಲ್ಲಿ ಬಿತ್ತಿದ ಹತ್ತಿ ಬೇಳೆಯನ್ನು ಟ್ರ್ಯಾಕ್ಟರದಿಂದ ಹರಗಿ ಸುಮಾರು 2 ಲಕ್ಷ್ಯ ರೂಪಾಯಿದಷ್ಟು ಲುಕ್ಸಾನ ಮಾಡಿ ನನಗೆ ವಯಸ್ಸಾಗಿದ್ದರೂ ಅವಾಚ್ಯವಾಗಿ ಬೈದು ಜೀವಧ ಭಯ ಹಾಕಿದ್ದು ಇರುತ್ತದೆ. ಆದ್ದರಿಂದ ಈ ಮೇಲ್ಕಂಡ 7 ಜನರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಫಿರ್ಯಾಧಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 86/2020 ಕಲಂ 143, 147, 447, 427 504, 506 ಸಂಗಡ 149 ಐಪಿಸಿ ಮತ್ತು ಕಲಂ 24 ಸಿನಿಯರ್ ಸಿಟಿಜನ್ ಎಕ್ಟ-2007 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 76/2020 ಕಲಂ: 379,511 ಐಪಿಸಿ : ಇಂದು ದಿನಾಂಕ: 29/06/2020 ರಂದು 12-30 ಪಿಎಮ್ ಕ್ಕೆ ಶ್ರೀ ಸಂಜೀವ ಕವಲಿ ಕಂದಾಯ ನಿರೀಕ್ಷಕರು ವಡಗೇರಾ ರವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ಮಾನ್ಯ ತಹಸಿಲ್ದಾರರು, ವಡಗೇರಾ ರವರಾದ ಶ್ರೀ ಸುರೇಶ ಅಂಕಲಗಿ ಮತ್ತು ನಾನು ಸಂಜೀವ ಕವಲಿ ಕಂದಾಯ ನಿರೀಕ್ಷಕ ವಡಗೇರಾ ಹಾಗೂ ವಡಗೇರಾ ಗ್ರಾಮ ಲೇಖಪಾಲಕರಾದ ಸಿದ್ದನಗೌಡ ಮೂರು ಜನ ಕೂಡಿ ಇಂದು ದಿನಾಂಕ:29/06/2020 ರಂದು ಗಡ್ಡೆಸೂಗೂರು ಕಡೆಯಿಂದ ವಡಗೇರಾ ಪಟ್ಟಣಕ್ಕೆ ಬರುತ್ತಿದ್ದೆವು. ಬೆಳಗ್ಗೆ 10-30 ಗಂಟೆ ಸುಮಾರಿಗೆ ಹಾಲಗೇರಾ ಕ್ರಾಸ ಹತ್ತಿರ ಗೂಗಲ್ ಕಡೆಯಿಂದ ಒಂದು ಟಿಪ್ಪರ ಮರಳು ತುಂಬಿಕೊಂಡು ಬಂದಿದ್ದು, ಅದನ್ನು ನಾವು ಮತ್ತು ಮಾನ್ಯ ತಹಸೀಲ್ದಾರರು ಕೂಡಿ ಸದರಿ ಮರಳು ತುಂಬಿದ ಟಿಪ್ಪರ ನಿಲ್ಲಿಸಿದಾಗ ಅದರ ಚಾಲಕನು ವಾಹನವನ್ನು ಸೈಡಿಗೆ ತಂದು ನಿಲ್ಲಿಸಿದನು. ಟಿಪ್ಪರ ಯಾರದು ಮರಳಿನ ರಾಯಲ್ಟಿ ಎಲ್ಲಿ ಇದೆ ಎಂದು ವಿಚಾರಿಸಿದಾಗ ಡ್ರೈವರನು ಟಿಪ್ಪರ ಪರ್ವತರೆಡ್ಡಿ ತಂದೆ ದೊಡ್ಡಪ್ಪಗೌಡ ಸಾ:ಆನೂರು (ಕೆ) ಈತನಿದಿರುತ್ತದೆ. ಸದರಿ ಪರ್ವತರೆಡ್ಡಿ ಇವರು ಮರಳು ತುಂಬಿಕೊಂಡು ಯಾದಗಿರಿಗೆ ಬಾ ಎಂದು ಹೇಳಿದ್ದರಿಂದ ನಾನು ಟಿಪ್ಪರನಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದೇನೆ. ನನ್ನ ಹತ್ತಿರ ರಾಯಲ್ಟಿ ಇರುವುದಿಲ್ಲ ಎಂದು ಹೇಳಿದನು. ನಾವು ವಾಹನದ ನಂಬರ ನೋಡುತ್ತಿದ್ದಾಗ ಅಷ್ಟರಲ್ಲಿ ಟಿಪ್ಪರ ಚಾಲಕನು ವಾಹನದಿಂದ ಇಳಿದು ಓಡಿ ಹೋದನು. ಅವನಿಗೆ ನೋಡಿದಲ್ಲಿ ಗುರತಿಸುತ್ತೇವೆ. ಟಿಪ್ಪರ ನಂ. ಕೆಎ 51 ಡಿ 4477 ಇರುತ್ತದೆ. ಸದರಿ ಟಿಪ್ಪರ ಮರಳು ತಂಬಿದ್ದು ಇರುತ್ತದೆ. ಕಾರಣ ಟಿಪ್ಪರ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದು, ನಾವು ನಿಲ್ಲಿಸಿ ರಾಯಲ್ಟಿ ಚೆಕ ಮಾಡಿದಾಗ ಟಿಪ್ಪರನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಬೇರೆ ಒಬ್ಬ ಚಾಲಕನ ಸಹಾಯದಿಂದ ಟಿಪ್ಪರನ್ನು ವಡಗೇರಾ ಪೊಲೀಸ್ ಠಾಣೆಗೆ ತರಲಾಯಿತು. ಸದರಿ ವಾಹನವನ್ನು ತಮ್ಮ ವಶಕ್ಕೆ ನೀಡಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 76/2020 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!