ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/06/2020

By blogger on ಸೋಮವಾರ, ಜೂನ್ 29, 2020







                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/06/2020 
                                                                                                               
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 174/2020 ಕಲಂ 457, 380 ಐಪಿಸಿ : ಇಂದು ದಿನಾಂಕ: 27/06/2020 ರಂದು 12.30 ಪಿ.ಎಂ.ಕ್ಕೆ ಶ್ರೀ ಮರೆಪ್ಪ ತಂ/ ಭೀಮಪ್ಪ ಜಾಲಿಬೆಂಚಿ ಸಾ|| ಗೋಗಿ(ಕೆ) ತಾ|| ಶಹಾಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದಿ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:26/06/2020 ರಂದು ಎಂದಿನಂತೆ ಬೆಳಿಗ್ಗೆ 9.00 ಎ.ಎಂ.ಕ್ಕೆ ನಮ್ಮ ಶಾಪನ್ನು ಓಪನ್ ಮಾಡಿ ನಾನು ಮತ್ತು ಮಲ್ಲಿಕಾಜರ್ುನ ಇಬ್ಬರು ಸಾಯಂಕಾಲದ ವರೆಗೆ ಕೆಲಸ ಮಾಡಿ ಸಾಯಂಕಾಲ 7.00 ಪಿ.ಎಂ.ಕ್ಕೆ ನಮ್ಮ ಶಾಪನ್ನು ಬಂದ ಮಾಡಿಕೊಂಡು ಮನೆಗೆ ಹೋಗಿದ್ದೆನು. ಇಂದು ದಿನಾಂಕ: 27/06/2020 ರಂದು ಬೆಳಿಗ್ಗೆ 7.30 ಎ.ಎಂ. ಸುಮಾರಿಗೆ ನಮ್ಮ ಶಾಪ್ ಪಕ್ಕದಲ್ಲಿನ ಚಹಾ ಅಂಗಡಿಯ ಮರಿಲಿಂಗಪ್ಪ ದೊಡ್ಡಮನಿ ಈತನು ಫೋನ್ ಮಾಡಿ ನಿಮ್ಮ ಅಂಗಡಿಯ ಎಡಭಾಗದ ಟೀನ್ ಕತ್ತರಿಸಿ ಯಾರೋ ಅಂಗಡಿಯಲ್ಲಿ ಹೋಗಿ ಹೋಗಿ ಬಂದಿರುತ್ತಾರೆ ಅಂತಾ ಹೇಳಿದಾಗ ನಾನು 8.00 ಎ.ಎಂ.ಕ್ಕೆ ಶಹಾಪುರಕ್ಕೆ ಬಂದು ನನ್ನ ಸೈಬರ್ ಶಾಪ್ ನೋಡಲಾಗಿ ಶಾಪಿನ ಎಡ ಸೈಡಿನ ಟೀನ್ ಕತ್ತರಿಸಿದ್ದು, ಶಾಪನೊಳಗೆ ಹೋಗಿ ನೋಡಲಾಗಿ ಶಾಪ್ನಲ್ಲಿ ಇದ್ದ 1) ವಿವ್ರೋ ಕಂಪನಿಯ 2 ಸಿ.ಪಿ.ಯು ಅಂ.ಕಿ|| 7000=00, 2) ವಿಪ್ರೋ ಕಂಪನಿಯ 3 ಮಾನಿಟರ್ಗಳು ಅ.ಕಿ|| 6000=00, 3) ಒಂದು ಕೆನಾನ್ ಕಂಪನಿಯ ಕಲರ್ ಜರಾಕ್ಷ ಅಂ.ಕಿ|| 12,000=00 ರೂ, 4) ಒಂದು ಕೆನಾನ್ ಕಂಪನಿಯ ಸ್ಕ್ಯಾನರ್ ಅ.ಕಿ|| 4000=00 ರೂ, 5) ಒಂದು ಎಂ.ಐ ಸಿ.ಸಿ ಕ್ಯಾಮೆರಾ ಅ.ಕಿ|| 2000=00 ರೂ ಮತ್ತು ನಗದು ಹಣ 60,000=ರೂ ಹೀಗೆ ಒಟ್ಟು 91,000=00 ರೂ ಮೌಲ್ಯದ ಸಾಮಗ್ರಿ ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ದಿನಾಂಕ: 26/06/2020 ರಂದು ರಾತ್ರಿ 7.00 ಪಿ.ಎಂ. ಇಂದ ಇಂದು ದಿನಾಂಕ: 27/06/2020 ರಂದು ಬೆಳಿಗ್ಗೆ 7.00 ಎ.ಎಂ. ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಸೈಬರ್ ಕೆಫೆಯ ಟೀನ್ ಕತ್ತರಿಸಿ ಶಾಪನಲ್ಲಿ ಇದ್ದ ಒಟ್ಟು 91000=00 ರೂ ಮೌಲ್ಯದ ಸಾಮಗ್ರಿ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.174/2020 ಕಲಂ 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 175/2019 ಕಲಂ 392 ಐಪಿಸಿ : ಇಂದು ದಿನಾಂಕ: 27/06/2020 ರಂದು ಬೆಳಿಗ್ಗೆ 600 ಪಿ.ಎಂ. ಸುಮಾರಿಗೆ ಶ್ರೀಮತಿ ಮರೆಮ್ಮ ಗಂ/ ವೆಂಕಟೇಶ ಭೋವಿ ಸಾ|| ಕಕ್ಕೇರಿ ತಾ|| ಸುರಪುರ ಹಾ.ವ|| ಯು.ಕೆ.ಪಿ. ಕ್ಯಾಂಪ್ ಆಲಿಮಟ್ಟಿ ತಾ|| ನಿಡಗುಂದಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಹಾಜರಪಡಿಸಿದ್ದು ಸದರಿ ಫಿಯರ್ಾದಿ ಸಾರಾಂಶ ಏನೆಂದರೆ, ಈಗ್ಗೆ 15 ದಿವಸಗಳ ಹಿಂದೆ ನಾನು ನನ್ನ ತವರು ಮನೆಯಲ್ಲಿ ಬಂದು ಇರುತ್ತೇನೆ. ಇಂದು ದಿನಾಂಕ:27/06/2020 ರಂದು ಶಹಾಪುರದ ಶರಣನಗರದಲ್ಲಿ ನಮ್ಮ ಸಂಬಂಧಿಕರ ಹೋಳಿಗೆ ಕಾರ್ಯಕ್ರಮ ಇದ್ದುದರಿಂದ ನಾನು ಮತ್ತು ಅತ್ತಿಗೆ ನಿರ್ಮಲಾ ಗಂಡ ಮಲ್ಲಿಕಾಜರ್ುನ ಚಾಕ್ರಿ ಮತ್ತು ನನ್ನ ಅಣ್ಣ ರಾಜಶೇಖರ ತಂ/ ಸೋಮಲಿಂಗಪ್ಪ ಚಾಕ್ರಿ 3 ಜನರು ಕೂಡಿ ಹೋಳಿಗೆ ಕಾರ್ಯಕ್ರಮಕ್ಕೆ ಹೋಗಿ 12.30 ಪಿ.ಎಂ.ಕ್ಕೆ ಹೋಳಿಗೆ ಕಾರ್ಯಕ್ರಮ ಮುಗಿಸಿಕೊಂಡು ನನ್ನ ಅಣ್ಣ ರಾಜಶೇಖರ ಚಾಕ್ರಿ ರವರ ಮನೆಗೆ ಹೋಗಿ ಬಂದರಾಯಿತು ಅಂತಾ ನಾನು, ನನ್ನ ಅತ್ತಿಗೆ ನಿರ್ಮಲಾ ಮತ್ತು ಅಣ್ಣ ರಾಜಶೇಖರ 3 ಜನರು ನಡೆದುಕೊಂಡು ಪರಿವಾರದಾಬಾದ ಪಕ್ಕದ ರಸ್ತೆಯ ಮೂಲಕ ಬಂದು ಭೀ.ಗುಡಿ-ಶಹಾಪುರ ಮುಖ್ಯ ರಸ್ತೆ ದಾಟಿ ಗಣೇಶನಗರದಲ್ಲಿರುವ ಸ್ವರಾಜ್ ಟ್ರಾಕ್ಟರ ಶೋರೂಮ್ ಪಕ್ಕದ ರಸ್ತೆಯ ಮುಖಾಂತರ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯಾಹ್ನ 1.10 ಪಿ.ಎಂ. ಸುಮಾರಿಗೆ ನಾವು 3 ಜನರು ಗಣೇಶ ನಗರದ ಸ್ಪೂತರ್ಿ ಮಕ್ಕಳ ಆಸ್ಪತ್ರೆಯ ಹತ್ತಿರ ಇದ್ದಾಗ ಎದರುಗಡೆಯಿಂದ ಒಂದು ಮೋಟರ ಸೈಕಲದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮಾಸ್ಕ ಮತ್ತು ತಲೆಯ ಮೇಲೆ ಕ್ಯಾಪ್ ಹಾಕಿಕೊಂಡು ಮೋಟರ ಸೈಕಲದಲ್ಲಿ ಅತಿವೇಗದಿಂದ ಬಂದವರೆ ನನ್ನ ಕೊರಳಲ್ಲಿದ್ದ ಬಂಗಾರದ ಆಭರಣಗಳಿಗೆ ಕೈ ಹಾಕಿ ಕಿತ್ತುಕೊಂಡು ಶಹಾಪುರ-ಭೀ.ಗುಡಿ ರೋಡಿನ ಕಡೆಗೆ ಜೋರಾಗಿ ಮೋಟರ ಸೈಕಲ್ ನಡೆಸಿಕೊಂಡು ಹೋದರು ಆಗ ನಾವು 3 ಜನರು ಚೀರಾಡುತ್ತಾ ಮೋಟರ ಸೈಕಲ್ ಬೆನ್ನತ್ತಿ ಹೋದಾಗ ಮೋಟರ ಸೈಕಲ್ ಶಹಾಪುರ ಹಳೆಯ ಬಸ್ ನಿಲ್ದಾಣದ ಕಡೆಗೆ ಹೋಯಿತು ನಂತರ ಘಟನೆ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಕೊರಳಲ್ಲಿ ಒಟ್ಟು 50 ಗ್ರಾಂ ಬಂಗಾರದ ಮಾಂಗಲ್ಯ ಸರ ಮತ್ತು 20 ಗ್ರಾಂ ಬಂಗಾರದ ಎರಡೆಳೆ ಚೈನ್ ಇದ್ದವು ಅದರಲ್ಲಿ ಬಂಗಾರದ ಮಾಂಗಲ್ಯ ಸರ ಮತ್ತು ಎರಡೆಳೆ ಬಂಗಾರದ ಚೈನಿನಲ್ಲಿ ಎರಡು ತುಕಡಿ ಬಂಗಾರ ಸ್ಥಳದಲ್ಲಿ ಬಿದ್ದಿದ್ದವು ಅವನ್ನು ಎತ್ತಿಕೊಂಡು ನಾವು 3 ಜನರು ಶಹಾಪುರ ನಗರದಲ್ಲಿ ತಿರುಗಾಡಿ ನನ್ನ ಮಾಂಗಲ್ಯ ಸರ ಮತ್ತು ಎರಡೆಳೆ ಚೈನ್ನ್ನು ಹರಿದುಕೊಂಡು ಹೋದ ಅಪರಿಚಿತ ವ್ಯಕ್ತಿಗಳಿಗೆ ಹುಡುಕಾಡಲಾಗಿ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ನಂತರ ಸ್ಥಳದಲ್ಲಿ ಸಿಕ್ಕ ಬಂಗಾರವನ್ನು ತೂಕ ಮಾಡಿಸಿದಾಗ ಒಟ್ಟು ಬಂಗಾರದ ಮಾಂಗಲ್ಯ ಸರದಲ್ಲಿ 12 ಗ್ರಾಂ ಉಳಿದಿದ್ದು, 38 ಗ್ರಾಂ ಹರಿದುಕೊಂಡು ಹೋಗಿರುತ್ತಾರೆ ಅದೇ ರೀತಿ ಎರಡೆಳೆ ಬಂಗಾರದ ಚೈನಿನಲ್ಲಿ 1 ಗ್ರಾಂ ಉಳಿದಿದ್ದು, 19 ಗ್ರಾಂ ಹರಿದುಕೊಂಡು ಹೋಗಿರುತ್ತಾರೆ. 1)38 ಗ್ರಾಂ ಬಂಗಾರದ ಮಾಂಗಲ್ಯ ಸರ ಅ.ಕಿ|| 114,000=00 ರೂ, 2) 19 ಗ್ರಾಂ ಎರಡೆಳೆ ಬಂಗಾರದ ಚೈನ್ ಅ.ಕಿ|| 57000=00 ರೂ ಹೀಗೆ ಒಟ್ಟು 171,000=00 ರೂ ಮೌಲ್ಯದ ಬಂಗಾರದ ಆಭರಣವನ್ನು ಅಪರಿಚಿತ ವ್ಯಕ್ತಿಗಳು ಕಿತ್ತುಕೊಂಡು ಹೋಗಿರುತ್ತಾರೆ. ಘಟನೆ ಕಾಲಕ್ಕೆ ನಾನು ಗಾಬರಿಯಲ್ಲಿ ಮೋಟಾರ ಸೈಕಲ್ ಮೇಲೆ ಬಂದು ನನ್ನ ಕೊರಳಲ್ಲಿನ ಆಭರಣಗಳನ್ನು ಕಿತ್ತುಕೊಂಡು ಹೋದ ವ್ಯಕ್ತಿಗಳ ಮುಖ ಮತ್ತು ಮೋಟಾರು ಸೈಕಲ್ ನಂಬರ ನೋಡಿರುವದಿಲ್ಲ. ಸದರಿ ಘಟನೆಯು ದಿನಾಂಕ-27/06/2020 ರಂದು ಮಧ್ಯಾಹ್ನ 1.10 ಪಿ.ಎಂ. ಇಂದ 1.20 ಪಿ.ಎಂ. ಅವಧಿಯಲ್ಲಿ ಜರುಗಿರುತ್ತದೆ. ಕಾರಣ ದಿನಾಂಕ: 27/06/2020 ರಂದು ಮಧ್ಯಾಹ್ನ 1.10 ಪಿ.ಎಂ. ಇಂದ 1.20 ಪಿ.ಎಂ. ಅವಧಿಯಲ್ಲಿ ಶಹಾಪುರಿನ ಗಣೇಶ ನಗರದಲ್ಲಿರುವ ಸ್ಪೂತರ್ಿ ಮಕ್ಕಳ ಆಸ್ಪತ್ರೆಯ ಹತ್ತಿರ ನನ್ನ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರ ಹಾಗೂ ಎರಡೆಳೆ ಬಂಗಾರದ ಚೈನನ್ನು ಕಿತ್ತಿಕ್ಕೊಂಡು ಹೋದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.175/2019 ಕಲಂ 392 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 23/2020  ಕಲಂ 279,  337, 338 ಐಪಿಸಿ  : :-  ಇಂದು  ದಿನಾಂಕ 27/06/2020 ರಂದು  ಬೆಳಿಗ್ಗೆ 9-45 ಎ.ಎಂ ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ  ರಸ್ತೆ ಮೇಲೆ ಬರುವ ಯಾದಗಿರಿ ಆರ್.ಟಿ.ಓ ಕಾಯರ್ಾಲಯದ ಹತ್ತಿರ ಈ ಕೇಸಿನ ಪಿಯರ್ಾದಿಯ ತಮ್ಮನಾದ  ಗಾಯಾಳು  ಸೋಪಣ್ಣ ಈತನು  ಮೋಟಾರು ಸೈಕಲ್ ಬುಲೆಟ ಎನಪೀಲ್ಡ್ ನಂಬರು ಇಲ್ಲದ್ದು  ಅದರ ಚೆಸ್ಸಿ ನಂಬರ ಒಇ3ಗ3ಖ5ಅ2ಏಅ475109 ಹಾಗೂ ಅದರ ಇಂಜಿನ್ ನಂ. ಗ3ಖ5ಅ2ಏಅ455960 ನೇದ್ದನ್ನು ನಡೆಸಿಕೊಂಡು ಇನ್ನೊಬ್ಬ ಗಾಯಾಳು ಚಿನ್ನಣ್ಣ ಈತನಿಗೆ ಹಿಂದೆ ಕೂಡಿಸಿಕೊಂಡು ಯಾದಗಿರಿ ನಗರದ ಕಡೆಯಿಂದ ಡಾನ್ ಬೋಸ್ಕೋ ಶಾಲೆ ಕಡೆಗೆ  ಹೋಗುತ್ತಿದ್ದಾಗ ಈ ಕೇಸಿನ ಆರೋಪಿತನು ತನ್ನ ಡಿಸಿಎಂ ಟ್ರಕ್ ವಾಹನ ನಂ.ಕೆಎ-32, ಬಿ-8370  ನೇದ್ದನ್ನು   ಅತೀವೇಗ ಮತ್ತು ಅಲಕ್ಷ್ಯತನದಿಂದ  ನಡೆಸಿಕೊಂಡು ಬಂದು ಮೋಟಾರು ಸೈಕಲ್ ನೇದ್ದಕ್ಕೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು   ಸದರಿ ಅಪಘಾತದಲ್ಲಿ ಇಬ್ಬರು ಗಾಯಾಳುವಿಗೆ  ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದರಿಂದ ಈ ಬಗ್ಗೆ ವಾಹನದ ಚಾಲಕನ  ಮೇಲೆ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 23/2020 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 24/2020  ಕಲಂ 279,  338 ಐಪಿಸಿ : ಇಂದು ದಿನಾಂಕ-27/06/2020 ರಂದು ಮದ್ಯಾಹ್ನ 02-45 ಪಿ ಎಮ್ ಕ್ಕೆ ಶ್ರೀ ರವಿಕುಮಾರ ತಂದೆ ಕೃಷ್ಣ ಸೇಡಂಕರ್ ವಯ; 34 ವರ್ಷ, ಜಾ;ಪ.ಜಾತಿ(ಮೋಚಿ), ಉ;ಬಟ್ಟೆ ಅಂಗಡಿ ವ್ಯಾಪಾರ, ಸಾ;ಅಜೀಜ ಕಾಲನಿ ಯಾದಗಿರಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ ನಮ್ಮದು ಒಂದು ಬಟ್ಟೆ ಅಂಗಡಿಯು ಮುದ್ನಾಳ ಪೆಟ್ರೋಲ್ ಬಂಕ್ ಹತ್ತಿರ ಇರುತ್ತದೆ. ಬಟ್ಟೆ ಅಂಗಡಿ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಇರುತ್ತೇನೆ.  ನಿನ್ನೆ ದಿನಾಂಕ 26/06/2020 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆಯಾದ ಕೃಷ್ಣ ವಯ;58 ವರ್ಷ ಹಾಗೂ ನನ್ನ ತಮ್ಮ  ಮಂಜುನಾಥ ಮೂರು ಜನರು ಕೂಡಿಕೊಂಡು  ನಮ್ಮ ಬಟ್ಟೆ ಅಂಗಡಿಯನ್ನು ಮುಚ್ಚಿಕೊಂಡು  ನಮ್ಮ ಅಜೀಜ ಕಾಲನಿ ಮನೆಗೆ ಹೋಗಲು ಆಟೋ ಸಲುವಾಗಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದೆವು. ಅಷ್ಟರಲ್ಲಿಯೇ ನಾವು ನೋಡು ನೋಡುತ್ತಿದ್ದಂತೆ ಒಬ್ಬ ಮೋಟಾರು ಸೈಕಲ್ ಸವಾರನು ಹಳೆ ಬಸ್ ನಿಲ್ದಾಣದ ಕಡೆಯಿಂದ ಹೊಸ ಬಸ್ ನಿಲ್ದಾಣದ ಕಡೆಗೆ ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮಲ್ಲಿ ನಮ್ಮ ತಂದೆಗೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದನು. ಆಗ ನಮ್ಮ ತಂದೆಯವರು ಅಪಘಾತದ ರಭಸಕ್ಕೆ ಕುಸಿದು ಬಿದ್ದರು ಸದರಿ ಅಪಘಾತದಲ್ಲಿ ನಮ್ಮ ತಂದೆಗೆ ನೋಡಲು ಎಡಸೊಂಟಕ್ಕೆ ಭಾರೀ ಒಳಪೆಟ್ಟಾಗಿದ್ದು, ಎಡಗಾಲಿನ ಬೆರಳುಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಇರುತ್ತವೆ. ನಮ್ಮ ತಂದೆಗೆ ಅಪಘಾತ ಪಡಿಸಿದ ಮೋಟಾರು ಸೈಕಲ್ ಸ್ಥಳದಲ್ಲಿದ್ದು ಅದರ ನಂಬರ ನೋಡಲು ಕೆಎ-33, ಎಸ್-1018 ನೇದ್ದು ಇದ್ದು ಅದರ ಸವಾರನು  ಸ್ಥಳದಲ್ಲಿದ್ದಾಗ ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ದೇವಿಂದ್ರಪ್ಪ ತಂದೆ ರಾಮಪ್ಪ ಉಪ್ಪಾರ  ಉ;ಹತ್ತಿಕುಣಿ ಸಕರ್ಾರಿ ಆಸ್ಪತ್ರೆಯಲ್ಲಿ ಹಿರಿಯ ಆರೋಗ್ಯ ಸಹಾಯಕ, ಸಾ;ಕಡೇಚೂರು ಅಂತಾ ತಿಳಿಸಿರುತ್ತಾನೆ ಈ ಘಟನೆ ಜರುಗಿದಾಗ ಸಮಯ ಅಂದಾಜು 5-20 ಪಿ,ಎಂ, ಆಗಿರುತ್ತದೆ. ಅದೇ ಸಮಯಕ್ಕೆ ನನ್ನ ಸ್ನೇಹಿತನಾದ ಶಿವಕುಮಾರ ತಂದೆ ಮಲ್ಲಿಕಾಜರ್ುನ ದಮ್ಮೂರ ಸಾ;ಯಾದಗಿರಿ ಈತನು ಅಪಘಾತವನ್ನು ಕಂಡು ನಮ್ಮ ಹತ್ತಿರ ಬಂದು ಘಟನೆ ಬಗ್ಗೆ ವಿಚಾರಿಸಿದ್ದು ನಂತರ ಎಲ್ಲರೂ ಸೇರಿಕೊಂಡು ನಮ್ಮ ತಂದೆಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಯಾದಗಿರಿ ಸಕರ್ಾರಿ ಆಸ್ಪತ್ರೆಯ ವೈದ್ಯರು ನಮ್ಮ ತಂದೆಗೆ ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ ಉಪಚಾರಕ್ಕಾಗಿ ಎಕ್ಸರೆ ಮಾಡಿಕೊಂಡು ಬೇರೆ ಕಡೆ ಕರೆದುಕೊಂಡು ಹೋಗಲು ತಿಳಿಸಿದ್ದು ಅದೇ ಚಿಕಿತ್ಸೆ ಕೊಡಿಸುವ ಅವಸರದಲ್ಲಿ ನಾನು ನನ್ನ ತಂದೆಗೆ ಯಾದಗಿರಿ ಖಾಸಗಿ ಆಸ್ಪತ್ರಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿ ತಡವಾಗಿ ಇಂದು ದಿನಾಂಕ 27/06/2020 ರಂದು ಖುದ್ದಾಗಿ ಠಾಣೆಗೆ ಹಾಜರಾಗಿ ಪಿಯರ್ಾದು ಅಜರ್ಿಯನ್ನು ನೀಡುತ್ತಿದ್ದು ನಿನ್ನೆ ದಿನಾಂಕ 26/06/2020 ರಂದು ಸಾಯಂಕಾಲ  5-20 ಪಿ.ಎಂ.ಕ್ಕೆ ಯಾದಗಿರಿ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ಮುಖ್ಯ ರಸ್ತೆಯ ಮೇಲೆ ಬರುವ ಮುದ್ನಾಳ ಪೆಟ್ರೋಲ್ ಬಂಕ್ ಹತ್ತಿರ ಹೊಸ ಬಸ್ ನಿಲ್ದಾಣದ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ನಿಂತಿದ್ದ ನಮ್ಮ ತಂದೆಗೆ ಮೋಟಾರು ಸೈಕಲ್ ನಂಬರ ಕೆಎ-33, ಎಸ್-1018 ನೇದ್ದರ ಸವಾರನು ತನ್ನ ಮೋಟಾರು ಸೈಕಲನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಅಪಘಾತ ಮಾಡಿದ್ದು ಆತನ ಮೇಲೆ ಮುಂದಿನ ಕಾನುನು ಕ್ರಮ ಜರುಗಿಸಿರಿ ಅಂತಾ ವಿನಂತಿ ಅಂತಾ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-24/2020 ಕಲಂ-279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 



ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 15/2020 ಕಲಂ 174 ಸಿ.ಆರ್.ಪಿ.ಸಿ : ಪಿರ್ಯಾಧಿ ಅಕ್ಕ ಲಕ್ಷ್ಮೀ ಇವಳಿಗೆ ಸುಮಾರು 10 ವರ್ಷಗಳ ಹಿಂದೆ ಧರ್ಮಪೂರ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು ಪಿರ್ಯಾಧಿ ಭಾವ ಇತ್ತಿಚ್ಚಿಗೆ 3-4 ವರ್ಷದಿಂದ ಕುಡಿಯುವ ಚಟಕ್ಕೆ ಬಿದ್ದು ಕೆಲವು ದಿನ ಧರ್ಮಪೂರದಲ್ಲಿದ್ದು ಇನ್ನು ಕೆಲವು ದಿನ ಬೆಂಗಳೂರಿಗೆ ದುಡಿಯಲಿಕ್ಕೆ ಹೋಗುತ್ತಿದ್ದ. ಕಳೆದ ನಾಲ್ಕೈದು ತಿಂಗಳಿಂದ ಏನು ಕೆಲಸ ಮಾಡದೆ ದಿನಾಲೂ ಕುಡಿದು ತಿರುಗಾಡುತ್ತಿದ್ದರಿಂದ ತನ್ನ ಮನೆಯ ಸಂಸಾರ ಹೇಗೆ ನಡೆಸಬೇಕು ಅಂತಾ ತೋಚದೆ ನನ್ನ ಅಕ್ಕ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಇಂದು ಬೆಳಗಿನ ಜಾವ 5 ಗಂಟೆಯಿಂದ 5.30 ಗಂಟೆ ಸುಮಾರಿಗೆ ಸಂಡಸಕ್ಕೆ ಅಂತಾ ಮನೆಯಿಂದ ಹೋಗಿ ಧರ್ಮಪೂರ ಗ್ರಾಮದ ಮಸ್ಸೆಮ್ಮ ಬಾಯಿಯಲ್ಲಿ ಬಿದ್ದು ಮುಳಗಿ ಸತ್ತಿರುತ್ತಾಳೆ ಅಂತಾ ಪಿರ್ಯಾಧಿ



ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 157/2020 ಕಲಂ: 78 () ಕೆ.ಪಿ. ಕಾಯ್ದೆ   : ಇಂದು ದಿನಾಂಕ: 27/06/2020 ರಂದು 7:00 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ್ ಪಿಐ ಸಾಹೇಬರು ಒಬ್ಬ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:27/06/2020 ರಂದು 5 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪಟ್ಟಣದ ಹಳೆಯ ಹಳೆ ತಹಶಿಲ್ ಆಫೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ನಿಂಗಪ್ಪ ಹೆಚ್.ಸಿ-118  3) ಶ್ರೀ ಮನೋಹರ ಹೆಚ್ಸಿ-105 4) ಶ್ರೀ ಪರಮೇಶಿ ಸಿಪಿಸಿ-142 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ರಂಗಣ್ಣ ತಂದೆ ಪಾಂಡಪ್ಪ ನಾಯಕ್ ವ|| 32 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಬೈರಿಮಡ್ಡಿ  2) ಶ್ರೀ ವೆಂಕಟೇಶ ತಂದೆ ಗಂಗಾಧರ ನಾಯಕ ವ|| 24 ವಷ್ ಜಾ|| ಬೇಡರ ಉ||ಡ್ರೈವರ ಸಾ: ಬಿಚಗತಕೇರಿ ಸುರಪುರ ಇವರನ್ನು 5:10 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 5:20 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33 ಜಿ-0238 ನೇದ್ದರಲ್ಲಿ ಹೊರಟು 5:30 ಪಿ.ಎಮ್ ಕ್ಕೆ ಸುರಪೂರ ಹಳೆಯ ತಹಶೀಲ್ ಆಫೀಸ್ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಹಳೆ ತಹಶೀಲ್ ಆಫೀಸ್ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5:30 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಬಲಭೀಮ ತಂದೆ ಮಲ್ಲಿಕಾಜರ್ು ನಾಯಕ ವ||24 ವರ್ಷ ಜಾ|| ಬೇಡರು ಉ|| ಕೂಲಿ ಸಾ||ಬೈರಿಮಡ್ಡಿ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 1500=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:30 ಪಿ.ಎಮ್ ದಿಂದ 6:30 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ  ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 83/2020 ಕಲಂ 323, 324, 504, 506 ಸಂ: 34 ಐಪಿಸಿ : ದಿನಾಂಕ 26-05-2020 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನಾಯಕಲದಿಂದ ನಮ್ಮ ಬೀಗರು ನಮ್ಮ ಮಗಳ ನಿಶ್ಚಯ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಗ್ರಾಮದಲ್ಲಿ ಜೀಪ ತೆಗೆದುಕೊಂಡು ಬರುವ ವೇಳೆಯಲ್ಲಿ ನಮ್ಮ ಅಣ್ಣ ಶರಣಪ್ಪನ ಮಗನಾದ ನಾಗಪ್ಪಾ ಇತನು ಜೀಪು ಬರುವಾಗ ಬೇಕಂತಲೇ ಒಮ್ಮೇಲೆ ಅಡ್ಡ ಬಂದಿದ್ದು ಇರುತ್ತದೆ. ಸಾಯಂಕಾಲ 4 ಗಂಟೆ ಸುಮಾರಿಗೆ ಸುಮಾರಿಗೆ ನಾನು ಹಾಗೂ ನಮ್ಮ ಅಣ್ಣನಾದ ನಿಂಗಪ್ಪಾ ತಂದೆ ಸಾಬಣ್ಣಾ ಹಾಗೂ ನನ್ನ ಮಗನಾದ ಸಿದ್ದಪ್ಪಾ ಹಾಗೂ ನನ್ನ ಅಣ್ಣ ನಿಂಗಪ್ಪನ ಮಗನಾದ ಸಾಬರೆಡ್ಡಿ ಹಾಗೂ ಇತರೇ ನಮ್ಮ ಅಣ್ಣತಮಕಿಯವರು ನಮ್ಮ ಮನೆಯ ಮುಂದುಗಡೆ ಇದ್ದೇವು. ಆ ವೇಳೆಗೆ ಕಾರ್ಯಕ್ರಮ ಇನ್ನೂ ನಡೆದಿತ್ತು. ಅದೇ ವೇಳೆಗೆ ನನ್ನ ಹಿರಿಯಣ್ಣನಾದ ಶರಣಪ್ಪಾ ಇತನ ಮಕ್ಕಳಾದ 1) ಬಸರೆಡ್ಡಿ ತಂದೆ ಶರಣಪ್ಪಾ ಮಡಿವಾಳ ಮತ್ತು ಇತನ ಸಹೋದರರಾದ 2) ನಾಗಪ್ಪಾ ತಂದೆ ಶರಣಪ್ಪಾ ಮಡಿವಾಳ 3) ಸಣ್ಣಸಾಬಣ್ಣಾ ತಂದೆ ಶರಣಪ್ಪಾ ಮಡಿವಾಳ ಮತ್ತು 4) ಗಂಗಮ್ಮಾ ಗಂಡ ಶರಣಪ್ಪಾ ಮಡಿವಾಳ ಎಲ್ಲರೂ ಕೂಡಿ ನಮ್ಮ ಮನೆಯ ಹತ್ತಿರ ಬಂದವರೇ ಬಸರೆಡ್ಡಿ ಇತನು ತನ್ನ ಕೈಯ್ಯಲ್ಲಿ ಬಡಿಗೆ ಹಿಡಿದುಕೊಂಡಿದ್ದು ನಮ್ಮ ಹತ್ತಿರ ಬಂದವರೇ ನಮಗೆ ಎಲೇ ಭೋಸಡಿ ಮಕ್ಕಳೇ ನಮಗೆ ಬಿಟ್ಟು ಕಾರ್ಯಕ್ರಮ ಹೇಗೆ ಮಾಡುತ್ತಿರಿ ನಿಮಗೆ ಸೊಕ್ಕು ಬಾಳ ಬಂದಿದೆ ಅಂತಾ ಅಂದವರೇ ಅವರಲ್ಲಿ ಗಂಗಮ್ಮಾ ಇವಳು ತನ್ನ ಕೈಯ್ಯಲಿದ್ದ ಕಾರದ ಪುಡಿಯನ್ನು ನನ್ನ ಕಣ್ಣಲ್ಲಿ ಉಗ್ಗಿದಾಗ ಬಸರೆಡ್ಡಿ ಇತನು ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನ್ನ ಎಡಮೊಳಕಾಲಿಗೆ ಹೊಡೆದು ಗುಪ್ತ್ತಗಾಯ ಮಾಡಿದನು. ಇನ್ನೂಳಿದವರು ನನಗೆ ನೆಲಕ್ಕೆ ಹಾಕಿ ತಮ್ಮ ಮನಸ್ಸಿಗೆ ಬಂದ ಹಾಗೇ ಕೈಯಿಂದ ಹೊಟ್ಟೆಗೆ ಮತ್ತು ಬೆನ್ನಿಗೆ ಹೊಡೆದು ಕಾಲಿನಿಂದ ಒದ್ದರು. ಆಗ ನನ್ನ ಮಗನಾದ ಸಿದ್ದಪ್ಪಾ ಹಾಗೂ ನಮ್ಮ ಅಣ್ಣನಾದ ನಿಂಗಪ್ಪಾ ಇತನ ಮಗನಾದ ಸಾಬರೆಡ್ಡಿ ತಂದೆ ನಿಂಗಪ್ಪಾ ಇವರಿಬ್ಬರೂ ನನಗೆ ಹೊಡೆಯುವುದನ್ನು ಬಿಡಿಸಲು ಬಂದಾಗ ಅವರೆಲ್ಲರೂ ಇವರಿಬ್ಬರಿಗೂ ಕೂಡಾ ಕ್ಯಯಿಂದ ಹೊಡೆಬಡಿ ಮಾಡಿದರು.ಆಗ ನಾನು ನೆಲಕ್ಕೆ ಬಿದ್ದು ಒದರಾಡುವದು ಚೀರಾಡುವುದು ಮಾಡುತ್ತಿದ್ದಾಗ ನಮ್ಮ ಅಣ್ಣನಾದ ನಿಂಗಪ್ಪಾ ತಂದೆ ಸಾಬಣ್ಣಾ ಮಡಿವಾಳ ಹಾಗೂ ಅಣ್ಣತಮಕಿಯವರಾದ ಸಾಬಣ್ಣಾ ತಂದೆ ಗುಂಜಲಪ್ಪಾ ಮಡಿವಾಳ ಹಾಗೂ ಯಂಕಪ್ಪಾ ತಂದೆ ನಿಂಗಪ್ಪಾ ಬಾಗಲೇರ ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಅವರು ಜಗಳಾ ಬಿಟ್ಟು ಹೋಗುವಾಗ ಇವತ್ತು ಉಳಿದಿರಿ ಇನ್ನೊಮ್ಮೆ ಸಿಗರಿ ಸೂಳೇ ಮಕ್ಕಳೇ ನಿಮಗೆ ಖಲಾಸ ಮಾಡುತ್ತೆವೆ ಅಂತಾ ಜೀವದ ಭಯ ಹಾಕಿ ಹೋದರು. ನಂತರ ನಾನು ನಿನ್ನೆನೇ ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಈ ವಿಷಯದ ಬಗ್ಗೆ ಮನೆಯಲ್ಲಿ ಮತ್ತು ಸಮಾಜದವರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿದ್ದು ಬಗ್ಗೆ ಮೇಲ್ಕಂಡ 4 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿ ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಜವಿದೆ. ಜಗಳದಲ್ಲಿ ನನ್ನ ಹಾಗೂ ನನ್ನ ಅಣ್ಣನ ಮಗನಿಗೆ ಅಷ್ಟೇನು ಪೆಟ್ಟಾಗದ ಕಾರಣ ಆಸ್ಪತ್ರೆಗೆ ತೊರಿಸಿಲ್ಲಾ ಅಂತಾ ಹೇಳಿಕೆ ನೀಡಿದ್ದರಿಂದ ಠಾಣೆ ಗುನ್ನೆ ನಂ: 83/2020 ಕಲಂ 323, 324, 504, 506 ಸಂ: 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು



ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 176/2020  ಕಲಂ 323 324 504 506 ಐ.ಪಿ.ಸಿ : ಇಂದು ದಿನಾಂಕ 27/06/2020 ರಂದು ರಾತ್ರಿ 20-15 ಗಂಟೆಗೆ ಫಿರ್ಯಾದಿ ದೇವಿಂದ್ರಪ್ಪ ತಂದೆ ದೊಡ್ಡಭೀಮಪ್ಪ ಖಚರ್ೆನೋರ ಸಾಃ ಕನ್ಯಾಕೊಳ್ಳುರ ಹಾಲಿವಸತಿ ಗುತ್ತಿಪೇಠ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಾವು ಮೂರು ಜನ ಅಣ್ಣ-ತಮ್ಮಂದಿರರು ಇದ್ದು, ನನ್ನ ಹಿರಿಯ ಅಣ್ಣ ದೊಡ್ಡಮಲ್ಲಪ್ಪ ಮತ್ತು ತಮ್ಮ ಶಾಂತಪ್ಪ ಇಬ್ಬರೂ ಕನ್ಯಾಕೊಳ್ಳುರ ಗ್ರಾಮದಲ್ಲಿವಾಸವಾಗಿರುತ್ತಾರೆ. ನಾನು ಶಹಾಪೂರದ ಗುತ್ತಿಪೇಠದಲ್ಲಿ ಕುಟುಂಬ ಸಮೇತ ವಾಸವಾಗಿರುತ್ತೇನೆ. ಆಗಾಗ ಕನ್ಯಾಕೊಳ್ಳುರ ಗ್ರಾಮಕ್ಕೆ ಹೋಗಿ ಬರುವದು ಮಾಡುತ್ತಿರುತ್ತೇನೆ. ಹೀಗಿರುವಾಗ ಇಂದು ಮುಂಜಾನೆಯ ಸುಮಾರಿಗೆ ನನ್ನ ಹಿರಿಯ ಅಣ್ಣನ ಮಗ ಮಾನಪ್ಪ@ ಮೋಹನರಾಜ ತಂದೆ ದೊಡ್ಡಮಲ್ಲಪ್ಪ ಈತನು, ಶಾಂತಪ್ಪ ಮತ್ತು ಅವನ ಮಗನ ರಾಮಕೃಷ್ಣ ಇವರ ಜೊತೆ ವಿನಾಕಾರಣ ಬಾಯಿ ಮಾತಿನ ತಕರಾರು ಮಾಡಿರುತ್ತಾನೆ  ಅಂತ ಸುದ್ದಿ ಗೊತ್ತಾಗಿ ಇಂದು ಮದ್ಯಾಹ್ನ ಶಹಾಪೂರದಿಂದ ಕನ್ಯಾಕೊಳ್ಳುರ ಗ್ರಾಮಕ್ಕೆ ಹೋಗಿ ನನ್ನ ತಮ್ಮ ಶಾಂತಪ್ಪ ಮತ್ತು ಮಗ ರಾಮಕೃಷ್ಣ ಹಾಗೂ ಮಾನಪ್ಪ @ ಮೋಹನರಾಜ ಇವರಿಗೆ ವಿಚಾರಣೆ ಕುರಿತು ಶಾಂತಪ್ಪನ ಮನೆಯ ಮುಂದೆ ಕರೆದು ವಿಚಾರಣೆ  ಮಾಡಿದಾಗ ಶಾಂತಪ್ಪನು ಅಂದಾಜು ಒಂದು ತಿಂಗಳದಹಿಂದೆ ತನ್ನ ಮಗಳ ಮದುವೆ ಮಾಡಿದ್ದು ಮದುವೆ  ಕಾಲಕ್ಕ ಹಿರಿಯ ಅಣ್ಣ ದೊಡ್ಡಮಲ್ಲಪ್ಪ ಮತ್ತು ಅವನ ಮಗ ಮಾನಪ್ಪ @ ಮೋಹನರಾಜ ಇವರಿಗೆ ವಿಷಯ ತಿಳಿಸಿರುವುದಿಲ್ಲ ಅದೆ ಸಂಬಂಧವಾಗಿ ಮಾನಪ್ಪ @ ಮೋಹನರಾಜನು ಇಂದು ಶಾಂತಪ್ಪನ ಜೊತೆ ನಮಗೆ ಹೇಳದೆ  ಹೇಗೆ? ಮದುವೆ ಮಾಡಿರಿ ಅಂತ ತಕರಾರು ಮಾಡಿದ ಬಗ್ಗೆ ಗೊತ್ತಾಯಿತು. ಹೀಗಿರುವಾಗ ಇಂದು ದಿನಾಂಕ 27/06/2020 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಶಾಂತಪ್ಪನ ಮನೆಯ ಮುಂದೆ ವಿಚಾರಣೆ ಮಾಡುವಾಗ ನಾನು, ಮಾನಪ್ಪ @ ಮೋಹನರಾಜನಿಗೆ ಏನೋ ಮಾನಪ್ಪ ನೀನು  ನಮಗೆಲ್ಲಾ ಬಿಟ್ಟು ನಿನ್ನ ತಮ್ಮನ ಮದುವೆ ಮಾಡಿದಿ ನಾವೇನಾದರು ನಿನಗೆ ಯಾಕೆ ನಮಗೆ ಬಿಟ್ಟು ಮದುವೆ ಮಾಡಿದ್ದಿಯಾ ಅಂತ  ಎಂದಾದರು ಕೇಳಿದ್ದಿವೇನು ಅಂತ ಅಂದಿದ್ದಕ್ಕೆ ನನಗೆ ಮಾನಪ್ಪ@ ಮೋಹನರಾಜನು ಏ ಬೋಸ್ಡಿ ಮಗನೇ ನೀನು ಅವರ ಪರವಾಗಿಯೇ ಮಾತನಾಡಲಿಕ್ಕೆ ಬಂದಿದ್ದಿಯಾ ಅಂತ ಮನೆಯ ಮುಂದೆ ಹಾಕಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ಬೆನ್ನಿಗೆ ಮತ್ತು ಕಾಲಿಗೆ  ಹೊಡೆದು ಹಲ್ಲೆ ಮಾಡಿ ಒಳಪೆಟ್ಟು ಮಾಡಿರುತ್ತಾನೆ. ಜಗಳ ಬಿಡಿಸಲು ಬಂದ ನನ್ನ ತಮ್ಮ ಶಾಂತಪ್ಪ ಮತ್ತು ಅವನ  ಮಗ ರಾಮಕೃಷ್ಣ ಇಬ್ಬರಿಗೆ  ಕೈಯಿಂದ ಬೆನ್ನಿಗೆ ತಲೆಗೆ ಹೊಡೆಯುತಿದ್ದಾಗ ಗ್ರಾಮದ ಸಿನಪ್ಪ ಉಪ್ಪಾರ ಮತ್ತು ಅಮಲಪ್ಪ ಡೊಂಗನೋರ ಇಬ್ಬರೂ ಬಂದು ಜಗಳ ಬಿಡಿಸಿಕೊಂಡರು. ನಂತರ ಮಾನಪ್ಪ @ ಮೋಹನರಾಜನು ನಮಗೆ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ನನಗೆ  ಹೊಡೆದ ಕಟ್ಟಿಗೆ ಅಲ್ಲಿಯೆ ಎಸೆದು ಹೋದನು.  ನನ್ನ ತಮ್ಮ ಶಾಂತಪ್ಪ ಮತ್ತು ಅವರ ಮಗ ರಾಮಕೃಷ್ಣ ಇಬ್ಬರಿಗೂ ಗಾಯವಾಗದರಿಂದ ಉಪಚಾರ ಪಡೆದುಕೊಂಡಿರುವುದಿಲ.್ಲ  ನನಗೆ ಉಪಚಾರ ಕುರಿತು ಆಸ್ಪತ್ರಗೆ ಕಳುಹಿಸಬೇಕು. ಸದರಿ ಘಟನೆ ಇಂದು ಮದ್ಯಾಹ್ನ 2-30 ಗಂಟೆಯಿಂದ 2-45 ಗಂಟೆಯ ಅವಧಿಯಲ್ಲಿ ಜರುಗಿರುತ್ತದೆ. ಕಾರಣ ನಮಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಜೀವ ಬೆದರಿಕೆ  ಹಾಕಿದ ಮಾನಪ್ಪ @ ಮೋಹನರಾಜ ತಂದೆ ದೊಡ್ಡಮಲ್ಲಪ್ಪ ಖಚರ್ೆನೋರ ವಯ 35 ವರ್ಷ ಸಾಃ ಕನ್ಯಾಕೊಳ್ಳುರ ಈತನ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 176/2020 ಕಲಂ 323, 324, 504, 506, ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!