ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/06/2020

By blogger on ಗುರುವಾರ, ಜೂನ್ 25, 2020






                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/06/2020 
                                                                                                               
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 46/2020 ಕಲಂ 379 ಐ.ಪಿ.ಸಿ : ಇಂದು ದಿನಾಂಕ 25/06/2020 ರಂದು 8:20 ಎ.ಎಂ ಕ್ಕೆ ಬಾಬು ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗೂ ಆರೋಪಿ ಹಾಗೂ ಮುದ್ದೆಮಾಲಿನೊಂದಿಗೆ ಜ್ಞಾಪನ ಪತ್ರ ನೀಡಿದ್ದು ಎ.ಎಸ್.ಐ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶವೆನೆಂದರೆ ದಿನಾಂಕ 25/06/2020 ರಂದು ನಾನು ಮುಂಜಾನೆ 5:00 ಗಂಟೆಗೆ ರಾತ್ರಿ ಗಸ್ತು ಚೆಕ್ಕಿಂಗ ಕರ್ತವ್ಯ ಮುಗಿಸಿಕೊಂಡು ಮರಳಿ ಠಾಣೆಗೆ ಬಂದಾಗ ಪೊಲೀಸ್ ಬಾತ್ಮಿದಾರರಿಂದ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಲಿಂಗಸೂರ ಕಡೆಯಿಂದ ಒಂದು ಬಾತರಬೆಂಜ ಟಿಪ್ಪರದಲ್ಲಿ ಅನಧಿಕೃತವಾಗಿ ಮರಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ ಅಂತಾ ಖಚಿತ ಬಾತ್ಮಿಬಂದಿದ್ದು ನಾನು ಪಂಚರಿಗೆ ಹಾಗೂ ಸಿಬ್ಬಂದಿಯವರಿಗೆ ಕರೆದುಕೊಂಡು 6:45 ಎ.ಎಂ ಕ್ಕೆ ನಾರಾಯಣಪೂರ ಲಿಂಗಸೂರ ಮುಖ್ಯ ರಸ್ತೆಯ ಮೇಲೆ ದೇವರಗಡ್ಡಿ ಕ್ರಾಸ ಹತ್ತಿರ ಹೋಗಿ ನಿಂತಾಗ 7:00 ಗಂಟೆಯ ಸುಮಾರಿಗೆ ಲಿಂಗಸೂರ ಕಡೆಯಿಂದ ಒಂದು ಬಾರತಬೆಂಜ ಟಿಪ್ಪರ ಬಂದಿದ್ದು ನಾನು ಸದರಿ ವಾಹನವನ್ನು ನಿಲ್ಲಿಸುವಂತೆ ವಾಹನ ಚಾಲಕನಿಗೆ ಕೈಸನ್ನೆ ಮಾಡಿದ್ದು, ಆಗ ಟಿಪ್ಪರದ ಚಾಲಕನು ತನ್ನ ಟಿಪ್ಪರನ್ನು ನಿಲ್ಲಿಸಿದ್ದು ಇರುತ್ತದೆ. ನಾನು ಟಿಪ್ಪರ ಚಾಲಕನಿಗೆ ಟಿಪ್ಪರದಲ್ಲಿ ಏನು ಇರುತ್ತದೆ ಅಂತಾ ಕೇಳಲಾಗಿ ಟಿಪ್ಪರ ಚಾಲಕನು ಟಿಪ್ಪರದಲ್ಲಿ ಮರಳು ಇರುತ್ತದೆ ಅಂತಾ ಹೇಳಿದನು. ನಾನು ವಾಹನ ಚಾಲಕನಿಗೆ ಮರಳನ್ನು ಸಾಗಣಿಕೆ ಮಾಡಲು ತಮ್ಮ ಹತ್ತಿರ ಪರವಾನಿಗೆ ಇರುವ ಬಗ್ಗೆ ಕೇಳಲಾಗಿ ಟಿಪ್ಪರ ಚಾಲಕನು ಮರಳನ್ನು ಸಾಗಣಿಕೆ ಮಾಡಲು ನನ್ನ ಹತ್ತಿರ ಯಾವುದೆ ಪರವಾನಿಗೆ ಇರುವದಿಲ್ಲ ನನಗೆ ನಮ್ಮ ವಾಹನದ ಮಾಲಿಕರು ಕೃಷ್ಣಾ ನದಿಯಿಂದ ಮರಳನ್ನು ಕಳವುನಿಂದ ತುಂಬಿಕೊಂಡು ಬರಲು ತಿಳಿಸಿದ್ದರಿಂದ ನಾನು ಕೃಷ್ಣಾ ನದಿಯಿಂದ ಮರಳನ್ನು ಕಳುವಿನಂದ ತುಂಬಿಕೊಂಡು ಹೋಗುತ್ತಿರುವದಾಗಿ ತಿಳಿಸಿದನು. ನಂತರ ನಾನು ಟಿಪ್ಪರ ಚಾಲಕನ ಹೆಸರು ಕೇಳಲಾಗಿ ಅವನು ತನ್ನ ಹೆಸರು ಭೀಮಣ್ಣ ತಂದೆ ಸುರೇಶ ಕುಂಬಾರ ವ:27 ವರ್ಷ ಉ:ಚಾಲಕ ಜಾ:ಹಿಂದು ಕುಂಬಾರ ಸಾ:ಬಸವನಗರ ಬಾಗಲಕೋಟ ರಸ್ತೆ ವಿಜಯಪೂರ ಹಾ:ವ: ಹುಡ್ಕೋ ಮುದ್ದೆಬಿಹಾಳ ಅಂತಾ ತಿಳಿಸಿದನು. ನಂತರ ನಾನು ಲಾರಿಯನ್ನು ಪರಿಶೀಲಿಸಲಾಗಿ ಲಾರಿಯಲ್ಲಿ ಅಂದಾಜು 6 ಬ್ರಾಸಿನಷ್ಟು ಮರಳು ಇದ್ದು ಅದರ ಅಂದಾಜು ಕಿಮತ್ತು 15000/- ರೂ ಆಗುತ್ತಿದ್ದು ಲಾರಿಯ ಅಂದಾಜು ಕಿಮ್ಮತ್ತು 5,00,000/- ರೂ ಆಗಬಹದು. ಸದರಿ ಲಾರಿಯ ಚಾಲಕನು ಸರಕಾರಕ್ಕೆ ಯಾವುದೆ ರಾಜಧನ ಕಟ್ಟದೆ ಅಕ್ರಮವಾಗಿ ಮರಳನ್ನು ಕಳವುಮಾಡಿಕೊಂಡು ಸಾಗಿಸುತ್ತಿರುವದು ಕಂಡುಬಂದಿರುತ್ತದೆ. ಸದರಿ ಸ್ಥಳದ ಚೆಕ್ಕಂಬಂದಿಯನ್ನು ಪರಿಶೀಲಿಸಲಾಗಿ ಪೂರ್ವಕ್ಕೆ ನಾರಾಯಣಪೂರ ಲಿಂಗಸೂರ ಮುಖ್ಯ ರಸ್ತೆಯಿಂದ ಮೇಲಿನಗಡ್ಡಿಯೊಳಗೆ ಹೋಗುವ ಡಾಂಬರ ರಸ್ತೆ ಇರುತ್ತದೆ, ಪಶ್ಚಿಮಕ್ಕೆ ನಾರಾಯಣಪೂರ ಬಸವಸಾಗರ ಆಣೆಕಟ್ಟಿಗೆ ಸಂಬಂದಿಸಿದ ಸರಕಾರಿ ಖುಲ್ಲಾಜಾಗೆಯಲ್ಲಿ ಜೀನಿಕಂಟಿಬೆಳೆದ ಸ್ಥಳ ಇರುತ್ತದೆ, ಉತ್ತರಕ್ಕೆ ಲಿಂಗಸೂರದಿಂದ ನಾರಾಯಣಪೂರಕ್ಕೆ ಬರುವ ಡಾಂಬರ ರಸ್ತೆ ಇರುತ್ತದೆ, ದಕ್ಷಿಣಕ್ಕೆ ನಾರಾಯಣಪೂ ದಿಂದ ಲಿಂಗಸೂರಕ್ಕೆ ಹೋಗುವ ಡಾಂಬರ ರಸ್ತೆ ಇರುತ್ತದೆ, ನಂತರ ನಾನು ಸದರಿ ಮರಳು ತುಂಬಿದ ಲಾರಿಯನ್ನು ಮತ್ತು ವಾಹನದ ಚಾಲಕನನ್ನು ವಶಕ್ಕೆ ತೆಗೆದುಕೊಂಡು, ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ: 25/06/2020 ರಂದು 7:00 ಎ.ಎಮ್. ದಿಂದ 8:00 ಎ.ಎಮ್ ದವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು 8:20 ಎ.ಎಂ ಕ್ಕೆ ಜಪ್ತಿ ಪಂಚನಾಮೆ ಹಾಗೂ ಆರೋಪಿ ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನಿಮಗೆ ಜ್ಞಾಪನ ಪತ್ರ ನೀಡಿದ್ದು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 46/2020 ಕಲಂ 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:-  75/2020 ಕಲಂ: 78(3) ಕೆ.ಪಿ.ಆಕ್ಟ್ : ದಿನಾಂಕ: 25/06/2020 ರಂದು 2-45 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ದಿನಾಂಕ: 25/06/2020 ರಂದು ಸಮಯ ಬೆಳಗ್ಗೆ 11-30 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ಪ್ರಕಾಶ ಹೆಚ.ಸಿ 18, ಶ್ರೀ ಗುಂಡಪ್ಪ ಹೆಚ್.ಸಿ 37 ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೇನಂದರೆ ನಾಯ್ಕಲ್ ಗ್ರಾಮದ ಚನ್ನಬಾಯಿ ಸಮೀಪದ ಹೊರಗಿನ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಅವರಿಗೆ ದಾಳಿ ವಿಷಯ ತಿಳಿಸಿ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೊರಟು ಸಮಯ ಮದ್ಯಾಹ್ನ 12-25 ಗಂಟೆ ಸುಮಾರಿಗೆ ನಾಯ್ಕಲ್ ಗ್ರಾಮದ ಚನ್ನಬಾವಿ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮಠವನ್ನು ಮರೆಯಾಗಿ ನಿಂತು ನೋಡಲಾಗಿ ಹೊರಗಿನ ಮಠದ ಮುಂದುಗಡೆ ಸಾರ್ವಜನಿಕ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 12-30 ಪಿಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ಅಬ್ದುಲ್ ಬಾಷಾ ತಂದೆ ಖಾಜಾಸಾಬ ಭಾರಪೇಟ, ವ:32, ಜಾ:ಮುಸ್ಲಿಂ, ಉ:ಡ್ರೈವರ ಸಾ:ನಾಯ್ಕಲ್ ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂಧಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದ ಒಂದು ಚೀಟಿ ಅ.ಕಿ.00=00, 2) ನಗದು ಹಣ 3000/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 3000/- ರೂ. ಮುದ್ದೇಮಾಲನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿಯವನಿಗೆ ಮಟ್ಕಾ ನಂಬರಗಳನ್ನು ಬರೆದ ಚೀಟಿ ಮತ್ತು ಹಣ ಯಾರಿಗೆ ಕೊಡುತ್ತಿ ಎಂದು ಕೇಳಿದಾಗ ಹಣಮಂತ ಅಗಸರ ಸಾ:ಮನಗನಾಳ ಎಂಬ ಬುಕ್ಕಿಗೆ ಕೊಡುವುದಾಗಿ ಹೇಳಿರುತ್ತಾನೆ. ಸದರಿ ಘಟನೆ ಸ್ಥಳವು ಹೊರಗಿನ ಮಠದ ಮುಂದುಗಡೆ ಇರುವ ಸಾರ್ವಜನಿಕ ಕಟ್ಟೆಯ ಮೇಲೆ ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು ಇಂದು ದಿನಾಂಕ: 25/06/2020 ರಂದು 4-30 ಪಿಎಮ್ ಕ್ಕೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 75/2020 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!