ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/06/2020

By blogger on ಬುಧವಾರ, ಜೂನ್ 24, 2020







                         ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/06/2020 
                                                                                                               
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 52/2020 ಕಲಂ 323, 324, 307 ಐಪಿಸಿ : ಇಂದು ದಿನಾಂಕ.24/06/2020 ರಂದು 11-15 ಎಎಂಕ್ಕೆ ಶ್ರೀ ಮುದುಕಪ್ಪ ತಂದೆ ಯಂಕಯ್ಯ ಕೊಂಡೆನಾಯಕ ವಃ 40 ಜಾತಿಃ ಬೇಡರು ಉಃ ಒಕ್ಕಲುತನ ಸಾಃ ಯಮನೂರ ಹಾಃವಃ ಲಕ್ಷ್ಮೀ ಸುಪರ ಬಜಾರ ಹಿಂದುಗಡೆ ಯಾದಗಿರಿ. ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ.24/06/2020 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ನಮ್ಮ ಮಾವನಾದ ಮರಿಲಿಂಗಪ್ಪ ತಂ. ತಿಮ್ಮಣ್ಣ ಕನ್ನಳ್ಳಿ ಈತನು ಎಂದಿನಂತೆ ತನ್ನ ಸ್ಕೊಟಿ ತೆಗೆದುಕೊಂಡು ವಾಕಿಂಗ ಹೋಗುತ್ತೇನೆ ಅಂತಾ ಹೇಳಿ ಹೋದನು. ನಂತರ ನಾನು ಮನೆಯಲ್ಲಿದ್ದಾಗ ಬೆಳಿಗ್ಗೆ 9-30 ಗಂಟೆ ಸುಮಾರಿಗೆ ನಮ್ಮ ಮಾವ ಮರಿಲಿಂಗಪ್ಪ ಇತನ ಗೆಳೆಯರು ನಮ್ಮ ಮನೆಗೆ ಬಂದು ನಿಮ್ಮ ಮಾವ ಮರಿಲಿಂಗಪ್ಪ ಇತನಿಗೆ ಯಾದಗಿರಿ ನಗರದ ಚಿತ್ತಾಪೂರ ರಸ್ತೆಗೆ ಬರುವ ಬಿರನಕಲ್ ಹಣಮೇಗೌಡ ಇವರ ಮನೆಗೆ ಹೊಗುವ ರಸ್ತೆಯ ಕ್ರಾಸನಲ್ಲಿ ಯಾರೋ ಹೊಡೆ ಬಡೆ ಮಾಡಿ ಬಾರಿಗಾಯಗೊಳಿಸಿದ್ದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದರಿಂದ ಆಗ ನಾನು ಗಾಬರಿಗೊಂಡು ನಮ್ಮ ಸಂಭಂದಿಕನಾದ ಶ್ರೀಶೈಲ್ ತಂದೆ ಸಾಬಣ್ಣ ಶಿರವಾಳ ಇತನನ್ನು ಕರೆದುಕೊಂಡು ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನಮ್ಮ ಮಾವ ಮರಿಲಿಂಗಪ್ಪ ಇತನು ಉಪಚಾರದಲ್ಲಿದ್ದು  ತಲೆ ಮೇಲೆ, ಹಣೆಯ ಮೇಲೆ, ಎಡಗೈ ಮುಂಗೈಗೆ, ಬಲಗೈ ಮುಂಗೈಗೆ, ಗದ್ದಕ್ಕೆ, ಬಲ ಪಕ್ಕೇಗೆ ಭಾರಿಗಾಯಗಳಾಗಿದ್ದು ಇರುತ್ತದೆ. ಯಾರೋ ಆರೋಪಿತರು ಯಾವುದೋ ಒಂದು ಉದ್ದೇಶದಿಂದ ನಮ್ಮ ಮಾವ ಮರಿಲಿಂಗಪ್ಪ ಈತನ ಮೇಲೆ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ಮಾರಾಣಾಂತಿಕ ಹಲ್ಲೇ ಮಾಡಿದ್ದು ಇರುತ್ತದೆ. ನಂತರ ನಮ್ಮ ಮಾವ ಮರಿಲಿಂಗಪ್ಪ ಇತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಗೆ ಕಳುಹಿಸಿಕೊಟ್ಟು ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ನಮ್ಮ ಮಾವನ ಸ್ಕೂಟಿ ನಿಂತಿತ್ತು ಅಲ್ಲೇ ಚಪ್ಪಲಗಳು ಬಿದ್ದಿದ್ದು, ಸ್ವಲ್ಪ ಮುಂದೆ ರಸ್ತೆಯ ಮೇಲೆ ಚಾಕು ಬಿದ್ದಿದ್ದು ಮತ್ತೆ ಸ್ವಲ್ಪ ಮುಂದೆ ಹೋಗಿ ನೋಡಲು ರಸ್ತೆಯ ಪಕ್ಕ ಗಡಿಯಾರ ಹಾಗೂ ತಗ್ಗಿನಲ್ಲಿ ಮೋಬೈಲ್ ಬಿದ್ದಿದ್ದು ಈ ಸ್ಥಳದಲ್ಲಿ ರಕ್ತ ಚೆಲ್ಲಿದ್ದು ಇರುತ್ತದೆ. ಸದರಿ ಘಟನೆ ಇಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಜರುಗಿದ್ದು ಇರುತ್ತದೆ.ಕಾರಣ ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿತರನ್ನು ಪತ್ತೆ ಮಾಡಿ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.52/2020 ಕಲಂ.323,324,307 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:-  80/2020 ಕಲಂ: 283, 304(ಎ) ಐಪಿಸಿ ಸಂಗಡ 122 ಐ.ಎಂ.ವಿ. ಕಾಯ್ದೆ : ಇಂದು ದಿನಾಂಕ 24-06-2020 ರಂದು ಬೆಳಗ್ಗೆ 7-30 ಗಂಟೆಗೆ ಫಿರ್ಯಾಧಿದಾರನಾದ ಶ್ರೀ ಭೀಮಣ್ಣ ತಂದೆ ಸಂಜೀವಪ್ಪ ಇದ್ದಲಿ ವಯ: 65 ವರ್ಷ, ಜಾತಿ: ಕಬ್ಬಲಿಗ ಉ: ಒಕ್ಕಲುತನ ಕೆಲಸ ಸಾ: ಯರಗೋಳ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿತನಾಗಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೇನೆ. ನನಗೆ ಮೂರು ಜನ ಮಕ್ಕಳಿದ್ದು, ಹಿರಿಯವನಾದ ಸಾಬಣ್ಣ ವಯಾಃ 30 ವರ್ಷ, ಎರಡನೇಯವನಾದ ವಿಶ್ವರಾಧ್ಯ ಮತ್ತು ಕೊನೆಯವನಾದ ಸಂಜಯಕುಮಾರ ಅಂತಾ ಮೂರು ಜನ ಗಂಡು ಮಕ್ಕಳು ಇರುತ್ತಾರೆ, ಹಿರಿಯ ಮಗನಾದ ಸಾಬಣ್ಣ ಇತನು ಯಾದಗಿರಿ ಎಸ್.ಬಿ.ಐ. ಬ್ಯಾಂಕನಲ್ಲಿ ಕ್ರೆಡಿಟ್ ಕಾಡರ್್ ತಯ್ಯಾರು ಮಾಡುವ ಕೆಲಸ ಮಾಡುತ್ತಾನೆ, ಆದ್ದರಿಂದ ಅವನು ಬೆಳಿಗ್ಗೆ ನಮ್ಮೂರಿನಿಂದ ತನ್ನ ಮೋಟಾರ ಸೈಕಲ್ ಮೇಲೆ ಯಾದಗಿರಿಗೆ ಹೋಗಿ ರಾತ್ರಿ 9-00 ಗಂಟೆಯ ಸುಮಾರಿಗೆ ಮರಳಿ ಮನೆಗೆ ಬರುತ್ತಾನೆ, 
       ಹೀಗಿರುವಾಗ ನಿನ್ನೆ ದಿನಾಂಕ 23-06-2020 ರಂದು ನನ್ನ ಹಿರಿಯ ಮಗನಾದ ಸಾಬಣ್ಣ ಇತನು ತನಗೆ ಹೊಟ್ಟೆ ಕಡಿಯುತಿದೆ, ನಾನು ಆಸ್ಪತ್ರೆಗೆ ತೋರಿಸಿಕೊಳ್ಳುತ್ತೆನೆ ಡ್ಯೂಟಿಗೆ ಹೋಗಲಿಲ್ಲ, ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಮನೆಯಲ್ಲಿಯೇ ಇದ್ದನು, ರಾತ್ರಿ 8-30 ಗಂಟೆಯ ಸುಮಾರಿಗೆ ನಾನು, ನನ್ನ ಹೆಂಡತಿಯಾದ ನಾಗಮ್ಮ ಎಲ್ಲರೂ ಮನೆಯಲ್ಲಿದ್ದಾಗ ನನ್ನ ಮಗನಾದಸಾಬಣ್ಣ ಇತನು ಹೊರಗಡೆ ಹೋಗಿ ಬರುತ್ತೆನೆ ಅಂತಾ ಹೇಳಿ ತನ್ನ ಮೋಟಾರ ಸೈಕಲ್ ನಂ ಕೆ.ಎ-33-ವೈ-1830 ನೆದ್ದನ್ನು ತೆಗೆದುಕೊಂಡು ಹೋದನು, ರಾತ್ರಿ 9-30 ಗಂಟೆಯಾದರು ಸಾಬಣ್ಣನು ಮನೆಗೆ ಬರದ ಕಾರಣ ನಾವು ಅವನಿಗೆ ಪೋನ ಮಾಡಿ ಹೇಳಿದಾಗ ನಾನು ಹೊರಗಡೆ ಊಟ ಮಾಡುತ್ತೆನೆ, ನೀವು ಊಟ ಮಾಡಿ ಮಲಗಿಕೊಳ್ಳಿರಿ ನಾನು ಆಮೇಲೆ ಬರುತ್ತೆನೆ ಅಂತಾ ಹೇಳಿದನು, ಆಗ ನಾವು ಎಲ್ಲರೂ ಊಟ ಮಾಡಿ ಮನೆಯಲ್ಲಿಯೇ ಮಲಗಿಕೊಂಡಿದ್ದೆವು, ನಂತರ ರಾತ್ರಿ 11-15 ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ಶೇಖ ಮುಜ್ಜದ ಶೇಠ ಇವರು ಪೋನ ಮಾಡಿ ನಿಮ್ಮ ಮಗನಾದ ಸಾಬಣ್ಣ ಮತ್ತು ನಿಮ್ಮ ಅಣ್ಣತಮಕಿಯವರಾದ ರಮೇಶ ಇದ್ದಲಿ ಇಬ್ಬರೂ ಕೂಡಿ ಮೋಟಾರ ಸೈಕಲ್ ಮೇಲೆ ಯರಗೋಳ ಕಡೆಯಿಂದ ನಾಲವಾರ ಕಡೆಗೆ ಹೋಗುವಾಗ ಅಲ್ಲಿ ವಾಹನ ಅಪಘಾತವಾಗಿ ನಿಮ್ಮ ಮಗ ಸ್ಥಳದಲ್ಲಿಯೇ ಸತ್ತಿರುತ್ತಾನೆ ಅಂತಾ ಅಲ್ಲಿ ಚೆಕ್ ಪೋಸ್ಟ ಹತ್ತಿರ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ತಿಳಿಸಿದ್ದಾರೆ ನೀವು ಕೂಡಲೇ ಅಲ್ಲಿಗೆ ಹೋಗಿರಿ ಅಂತಾ ತಿಳಿಸಿದಾಗ ನಾನು, ನನ್ನ ಹೆಂಡತಿ, ನನ್ನ ಮಗನಾದ ವಿಶ್ವರಾಧ್ಯ ಹಾಗೂ ನಮ್ಮ ಅಣ್ಣತಮ್ಮಕಿಯವರಾದ ಗುಂಡಪ್ಪ ತಂದೆ ಕಾಳಪ್ಪ ಇದ್ದಲಿ, ಪ್ರಕಾಶ ತಂದೆ ಸಾಬಣ್ಣ ಇದ್ದಲಿ, ಅಮೀನರೆಡ್ಡಿ ತಂದೆ ಚಂದ್ರಾಮಪ್ಪ ಇದ್ದಲಿ ಎಲ್ಲರೂ ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗನಾದ ಸಾಬಣ್ಣ ಇತನ ಮೋಟಾರ ಸೈಕಲ್ ಯರಗೋಳದಿಂದ ನಾಲವಾರ ಕಡೆಗೆಹೋಗುವ ರೋಡಿನ ಪೊಲೀಸ್ ಚೆಕ್ ಪೊಸ್ಟ ಹತ್ತಿರ ರೋಡಿನ ಮೇಲೆ ನಿಂತಿದ್ದ ಉಸುಕಿನ ಟಿಪ್ಪರಕ್ಕೆ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ನನ್ನ ಸಾಬಣ್ಣನಿಗೆ ಹಣ್ಣೆಗೆ ಮತ್ತು ತಲೆಯ ಮುಂಭಾಗಕ್ಕೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು, ಅಲ್ಲದೇ ಎದೆಗೆ ಮತ್ತು ಬಲಪಕ್ಕೆಗೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಸತ್ತಿದ್ದನು, ಮೋಟಾರ ಸೈಕಲ್ ಮೇಲೆ ಹಿಂದೆ ಕುಳಿತ ರಮೇಸ ತಂದೆ ಸಾಬಣ್ಣ ಇದ್ದಲಿ ಇತನ ಮೂಖಕ್ಕೆ ಮತ್ತು ಹಣೆಗೆ ರಕ್ತಗಾಯಗಳು ಆಗಿದ್ದವು, ಈ ಘಟನೆಯ ಬಗ್ಗೆ ರಮೇಶ ಇತನಿಗೆ ವಿಚಾರಿಸಲಾಗಿ ತಾವಿಬ್ಬರೂ ಊಟ ಮಾಡುವ ಸಲುವಾಗಿ ಧಾಬಾದ ಕಡೆಗೆ ಹೊರಟಿದ್ದು, ಮೋಟಾರ ಸೈಕಲ್ ಸಾಬಣ್ಣ ಇತನು ಓಡಿಸಿಕೊಂಡು ಹೋಗುತ್ತಿದ್ದು, ಆದರೆ ಟಿಪ್ಪರ ನಂ ಕೆ.ಎ-32-ಡಿ-3649 ನೆದ್ದರ ಚಾಲಕನು ತನ್ನ ಟಿಪ್ಪರ ಟಾಯರ್ ಪಂಪಚರ ಆದ ಸಲುವಾಗಿ ಟಿಪ್ಪರನ್ನು ರೋಡಿನ ಮೇಲೆ ನಿಲ್ಲಿಸಿ ಅದಕ್ಕೆ ಯಾವುದೇ ಗುರುತು ಮತ್ತು ಇಂಡಿಕೇಟರಗಳನ್ನು ಹಾಕದೇ ಅಜಾಗರೂಕತೆಯಿಂದ ನಿಲ್ಲಿಸಿದ್ದರಿಂದ ಸಾಬಣ್ಣನು ಮೋಟಾರ ಸೈಕಲನ್ನು ಟಿಪ್ಪರದ ಹಿಂಭಾಗಕ್ಕೆ ಡಿಕ್ಕಿಪಡಿಸಿದ್ದು ಇರುತ್ತದೆ, ಈ ಅಪಘಾತವು ಇಂದು ರಾತ್ರಿ 11-00 ಗಂಟೆಗೆ ಜರುಗಿರುತ್ತದೆ ಅಂತಾ ತಿಳಿಸಿದನು, ನಾವು ಕೂಡಾ ಪರಿಶೀಲಿಸಿ ನೋಡಲಾಗಿ ಟಿಪ್ಪರ ನಂ ಕೆ.ಎ-32-ಡಿ-3649 ನೇದ್ದರ ಚಾಲಕನು ತನ್ನ ಟಿಪ್ಪರ ಪಂಪಚರ ಆದ ಸಲುವಾಗಿ ಆ ಜಾಗದಲ್ಲಿ ಯಾವದೇ ಮುನ್ಸೂಚನೆ ಇಲ್ಲದೆ, ತನ್ನ ಟಿಪ್ಪರ ಹಿಂಭಾಗಕ್ಕೆ ರೇಡಿಯಂ ಅಳವಡಸದೆ ಮತ್ತು ಇಂಡಿಕೇಟರ ಹಾಕದೇ ಹೋಗಿ ಬರುವ ವಾಹನಗಳಿಗೆ ಗೋತ್ತಾಗದ ಹಾಗೇ ಅಜಾಗರೂಕತೆಯಿಂದ ಅಪಾಯಕಾರಿ ರೀತಿಯಲ್ಲಿ ತನ್ನ ಟಿಪ್ಪರನ್ನು ರೋಡಿನ ಮಧ್ಯ ಭಾಗದಲ್ಲಿ ನಿಲ್ಲಿಸಿ ನಿರ್ಲಕ್ಷ ತೋರಿಸಿದ್ದರಿಂದ ಈ ಅಪಘಾತ ಆಗಿರುತ್ತದೆ. ಟಿಪ್ಪರ ಚಾಲಕ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ. ಈ ವಿಷಯದ ಬಗ್ಗೆ ನಾವು ಮನೆಯಯವರೆಲ್ಲರೂ ವಿಚಾರಣೆ ಮಾಡಿ ತಡವಾಗಿ ಇಂದು ದಿನಾಂಕ 24-06-2020 ರಂದು ಬೆಳಗ್ಗೆ 7-30 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದು, ಅವನ ಮೇಲೆ ಕಾನೂನು ರೀತಿಯ ಕ್ರಮಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 80/2020 ಕಲಂ 283, 304(ಎ) ಐ.ಪಿ.ಸಿ ಸಂಗಡ 122 ಐ.ಎಂ.ವಿ ಕಾಯ್ದೆ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.



ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 81/2020 ಕಲಂ: 143, 147, 148, 341, 323, 324, 326, 307, 504, 506 ಸಂ 149 ಐಪಿಸಿ : ಇಂದು ದಿನಾಂಕ 24/06/2020 ರಂದು ಬೆಳಿಗ್ಗೆ 8-30 ಗಂಟೆಗೆ ಜಿಜಿಎಚ್ ಯಾದಗಿರಿಯಿಂದ ಗಾಯಾಳು ಎಮ್.ಎಲ್.ಸಿ. ಪೋನ ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುದಾರರ ಮಗಳಾದ ಗಂಗಶ್ರೀ ತಂದೆ ಹಣಮಂತ ಹಲಗೇರ ಸಾಃ ಮುದ್ನಾಳ ಇವರ ಹೇಳಿಕೆಯನ್ನು ಪಡೆದುಕೊಂಡ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಬಿ.ಎ. ದ್ವೀತಿಯ ವರ್ಷದಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ಈ ಹಿಂದೆ ಸುಮಾರು ಮೂರು ತಿಂಗಳುಗಳ ಹಿಂದೆ ನಮ್ಮ ತಂದೆ ಹಣಮಂತ ಇವರಿಗೆ ಮತ್ತು ನಮ್ಮೂರಿನ ಎರಡನೇ ಅಣ್ಣತಮ್ಮಕಿಯವರಾದ ಭೀಮಪ್ಪ ತಂದೆ ಹಣಮಂತ ಪೂಜಾರಿ ಇವರ ಮಧ್ಯ ನಮ್ಮೂರಿನ ಗ್ರಾಮ ದೇವತೆ ಕರೆಮ್ಮ ದೇವಿ ಜಾತ್ರೆ ಮಾಡುವ ಸಂಬಂದ ದೇಣಿಗೆ ಕೊಡುವ ವಿಷಯದಲ್ಲಿ ಬಾಯಿ ಮಾತಿನ ತಕರಾರು ನಡೆದಿತ್ತು,  ಆ ವಿಷಯದ ಸಂಬಂಧ ನಮ್ಮಿಬ್ಬರ ಮನೆಯವರ ನಡುವೆ ವೈಮನಸ್ಸು ಬೆಳೆದಿದ್ದು ಇರುತ್ತದೆ, ಅವಾಗಿನಿಂದ ಇಲ್ಲಿಯವರೆಗೆ ಸುಕುಮನಿ ತಂದೆ ಭೀಮಪ್ಪ ಪೂಜಾರಿ ಇತನು ನಮ್ಮ ಮನೆಯವರೆಗೆ ಹೊಡೆಯಬೇಕು ಅಂತಾ ಕಾಯುತ್ತಾ ಇದ್ದಿದ್ದನು,  
     ಹೀಗಿರುವಾಗ ಇಂದು ದಿನಾಂಕ 24/06/2020 ರಂದು ಬೆಳಿಗ್ಗೆ 7-30 ಗಂಟೆಯ ಸುಮಾರಿಗೆ ನನ್ನ ತಂದೆಯಾದ ಹಣಮಂತ ತಂದೆ ಭೀಮಶಪ್ಪ ಹಲಗೇರ ಮತ್ತು ನನ್ನ ಅಣ್ಣನಾದ ಸುಕುಮುನಿ ತಂದೆ ಹಣಮಂತ ಹಲಗೇರ ಇಬ್ಬರೂ ಕೂಡಿಕೊಂಡು ಕೂಲಿಕೆಲಸಕ್ಕೆ ಹೋಗಿ ಬರುತ್ತೆವೆ ಅಂತಾ ಮನೆಯಲ್ಲಿ ಹೇಳಿ ನಮ್ಮ ಮೋಟಾರ ಸೈಕಲ್ ಮೇಲೆ ಕುಳಿತುಕೊಂಡು ಹೋದರು, ನಾನು ಮತ್ತು ನನ್ನ ತಾಯಿ ಇಬ್ಬರೂ ನಮ್ಮ ಮನೆಯ ಮುಂದೆ ನಿಂತಿದ್ದೆವು, ಸ್ವಲ್ಪ ಸಮಯದ ನಂತರ ನನ್ನ ತಂದೆ ಮತ್ತು ನನ್ನ ಅಣ್ಣನ ಜೋತೆಗೆ ಜಗಳ ತೆಗೆದು ಹೊಡೆಯುತ್ತಿದ್ದಾರೆ ಅಂತಾ ವಿಷಯ ಗೋತ್ತಾಗಿ ನಾನು ಮತ್ತು ನನ್ನ ತಾಯಿ ಇಬ್ಬರೂ ಅಲ್ಲಿಗೆ ಹೋದಾಗ ಗೋತ್ತಾಗಿದ್ದೆನೆಂದರೆ ನನ್ನ ತಂದೆ ಮತ್ತು ನನ್ನ ಅಣ್ಣ ಇಬ್ಬರೂ ಕೂಲಿಕೆಲಸಕ್ಕೆ ಅಂತಾ ನಮ್ಮೂರ ವೀರಬಸವಂತರೆಡ್ಡಿಗೌಡ ಇವರ ಮನೆಯ ಎದುರುಗಡೆ ರೋಡಿನ ಮೇಲೆ ಮೋಟಾರ ಸೈಕಲ್ ಮೇಲೆ ಹೋಗುವಾಗ ನಮ್ಮೂರಿನ 1)ಭೀಮಪ್ಪ ತಂದೆ ಹಣಮಂತ ಪೂಜಾರಿ 2)ಸುಕುಮನಿ ತಂದೆ ಹಣಮಂತ ಪೂಜಾರಿ 3)ಹಣಮಂತ ತಂದೆ ಭೀಮಪ್ಪ ಪೂಜಾರಿ 4)ಗೌರವ್ವ ಗಂಡ ಭೀಮಪ್ಪ ಪೂಜಾರಿ 5)ಹಣಮಂತ ತಂದೆ ತಿಪ್ಪಣ್ಣ ಪೂಜಾರಿ 6)ಭೀಮವ್ವ ಗಂಡ ಹಣಮಂತ ಪೂಜಾರಿ 7)ಬಸವ್ವ ಗಂಡ ತಿಪ್ಪಣ್ಣ ಪೂಜಾರಿ 8)ದೇವಪ್ಪ ಸಾಃ ಎಲ್ಲರೂ ಮುದ್ನಾಳ 8)ತಿಮ್ಮಣ್ಣ ತಂದೆ ಯಂಕಪ್ಪ ಕಂಚಗಾರಹಳ್ಳಿ 9)ಶರಣಪ್ಪ ತಂದೆ ಯಂಕಪ್ಪ ಕಂಚಗಾರಹಳ್ಳಿ ಮತ್ತು 10)ಗಂಗಿಮಾಳಮ್ಮ ಗಂಡ ತಿಮ್ಮಣ್ಣ ಕಂಚಗಾರಹಳ್ಳಿ ಸಾಃ ಎಲ್ಲರೂ ರಾಂಪೂರಹಳ್ಳಿ ಇವರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಕಲ್ಲು, ಬಡಿಗೆ ಮತ್ತು ಕಬ್ಬಿಣದ ರಾಡ ಗಳನ್ನು ಹಿಡಿದುಕೊಂಡು ಬಂದು ನನ್ನ ತಂದೆ ಮತ್ತು ನನ್ನ ಅಣ್ಣ ಇಬ್ಬರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವರ ಜೋತೆಗೆ ಜಗಳ ತೆಗೆದು ಏ ರಂಡಿ ಮಕ್ಕಳೇ ಈ ಹಿಂದೆ ನೀನು ನಮ್ಮೂರ ಗ್ರಾಮ ದೇವತೆ ಕರೆಮ್ಮ ದೇವಿ ಜಾತ್ರೆ ಮಾಡುವ ಸಂಬಂಧ ನೀನು ದೇಣಿಗೆ ಕೊಡುವ ಸಂಬಂಧ ತಕರಾರು ಮಾಡಿದ್ದಿರಿ ಸೂಳೇ ಮಕ್ಕಳೇ ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕುತ್ತಿದ್ದರು, ಅವರಲ್ಲಿ 1)ಭೀಮಪ್ಪ ತಂದೆ ಹಣಮಂತ ಪೂಜಾರಿ ಇತನು ಕಬ್ಬಿಣದ ರಾಡಿನಿಂದ ನನ್ನ ತಂದೆಯ ತಲೆಗೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ ಮತ್ತು ಅದೇ ರಾಡಿನಿಂದ ಬಲಗೈಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ, 2)ಸುಕುಮನಿ ತಂದೆ ಹಣಮಂತ ಪೂಜಾರಿ ಇತನು ಕಬ್ಬಿಣದ ರಾಡಿನಿಂದ ನಮ್ಮ ತಂದೆಯ ಬಲಗಾಲಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ, 3)ಹಣಮಂತ ತಂದೆ ಭೀಮಪ್ಪ ಪೂಜಾರಿ ಇತನು ಕಟ್ಟಿಗೆ ಬಡಿಗೆಯಿಂದ ನನ್ನ ಅಣ್ಣ ಸುಕುಮನಿ ಇವನ ತಲೆಗೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ, 4)ಗೌರವ್ವ ತಂದೆ ಭೀಮಪ್ಪ ಪೂಜಾರಿ 5)ಹಣಮಂತ ತಂದೆ ತಿಪ್ಪಣ್ಣ ಪೂಜಾರಿ ಇವರಿಬ್ಬರೂ ಕೂಡಿಕೊಂಡು ಕಲ್ಲಿನಿಂದ ನನ್ನ ಅಣ್ಣ ಸುಕುಮುನಿ ಇವನ ಮೈತುಂಬಾ ಹೊಡೆದು ಒಳಪೆಟ್ಟು ಮಾಡಿರುತ್ತಾರೆ, 6)ಭೀಮವ್ವ ಗಂಡ ಹಣಮಂತ ಪೂಜಾರಿ 7)ಬಸವ್ವ ಗಂಡ ತಿಪ್ಪಣ್ಣ ಪೂಜಾರಿ 8)ದೇವಪ್ಪ ಸಾಃ ಎಲ್ಲರೂ ಮುದ್ನಾಳ 8)ತಿಮ್ಮಣ್ಣ ತಂದೆ ಯಂಕಪ್ಪ ಕಂಚಗಾರಹಳ್ಳಿ ಮತ್ತು 9)ಶರಣಪ್ಪ ತಂದೆ ಯಂಕಪ್ಪ ಕಂಚಗಾರಹಳ್ಳಿ 10)ಗಂಗಿಮಾಳಮ್ಮ ಗಂಡ ತಿಮ್ಮಣ್ಣ ಕಂಚಗಾರಹಳ್ಳಿ ಸಾಃ ಎಲ್ಲರೂ ರಾಂಪೂರಹಳ್ಳಿ ಇವರೆಲ್ಲರೂ ಕೂಡಿಕೊಂಡು ನನ್ನ ತಂದೆ ಹಣಮಂತ ಮತ್ತು ನನ್ನ ಅಣ್ಣ ಸುಕುಮುನಿ ಇವರಿಬ್ಬರನ್ನು ನೆಲಕ್ಕೆ ಹಾಕಿ ಕಾಲಿನಿಂದ ಮನಬಂದಂತೆ ಒದ್ದಿರುತ್ತಾರೆ ಮತ್ತು ಕೈಮುಷ್ಠಿ ಮಾಡಿ ಹೊಡೆದಿರುತ್ತಾರೆ, ಆಗ ಅವರು ಚೀರಾಡುತ್ತಿರುವಾಗ ನಾನು, ನನ್ನ ತಾಯಿ ಪಾರ್ವತಿ ಮತ್ತು ನಮ್ಮೂರ ದಂಡಪ್ಪ ತಂದೆ ಹಣಮಂತ ಕುಪಗಲ್ಲ ಅರುಣಕುಮಾರ ತಂದೆ ನಿಂಗಪ್ಪ ಕವಲೇರ, ಅಶೋಕ ತಂದೆ ಹಣಮಂತ ಕವಲೇರ, ಶರಣಪ್ಪ ತಂದೆ ತಿಮ್ಮಣ್ಣ ಬಸಂತಪೂರ ಮತ್ತು ಶರಣಪ್ಪ ತಂದೆ ಈರಪ್ಪ ದೇವದುರ್ಗ ಎಲ್ಲರೂ ಕೂಡಿಕೊಂಡು ಜಗಳವನ್ನು ನೋಡಿ ಬಿಡಿಸಿರುತ್ತೆವೆ, ಈ ಜಗಳವು ಇಂದು ಬೆಳಿಗ್ಗೆ 7-30 ಗಂಟೆಗೆ ನಮ್ಮೂರ ವೀರಬಸಂತರೆಡ್ಡಿಗೌಡ ಇವರ ಮನೆ ಮುಂದೆ ರೋಡಿನ ಮೇಲೆ ನಡೆದಿರುತ್ತದೆ, ಅವರೆಲ್ಲರೂ ಕೂಡಿಕೊಂಡು ನಮ್ಮ ತಂದೆ ಹಣಮಂತ ಮತ್ತು ಅಣ್ಣ ಸುಕುಮುನಿ ಇವರಿಬ್ಬರಿಗೆ ಕೊಲೆ ಮಾಡುವ ಉದ್ದೇಶದಿಂದ ಕಲ್ಲು, ಬಡಿಗೆ, ಕಬ್ಬಿಣದ ರಾಡುಗಳಿಂದ ಹೊಡೆದು ಭಾರಿ ರಕ್ತಗಾಯ, ಗುಪ್ತಗಾಯ, ತರಚಿದಗಾಯಗಳು ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ, ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಮರಳಿ ಠಾಣೆಗೆ ಬೆಳಿಗ್ಗೆ 9-30 ಗಂಟೆಗೆ ಠಾಣೆಗೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 81/2020 ಕಲಂ 143, 147, 148, 341, 323, 324, 326, 307 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.14/2020 ಕಲಂ: 174 ಸಿ.ಆರ್.ಪಿ.ಸಿ : ಮೃತನಿಗೆ ತನ್ನ ಅತ್ತೆಯ ಮಗಳಾದ ನಿಂಗಮ್ಮಳೊಂದಿಗೆ ದಿನಾಂಕ 01.06.2020 ರಂದು ಸಂಪ್ರದಾಯದಂತೆ ಹಿರಿಯ ಸಮಕ್ಷಮದಲ್ಲಿ ಮದುವೆಯಾಗಿದ್ದು ಇರುತ್ತದೆ. ಮೃತನ ಅತ್ತೆ ಸುಮಾರು ದಿನಗಳಿಂದ ಮಾನಸೀಕ ಅಸ್ವಸ್ತಳಾಗಿ ಕಾಯಿಲೆಯಿಂದ ಬಳಲುತ್ತಿರುವುದರಿಂದ ಮೃತನ ಮಗಳು ತನ್ನ ತಾಯಿಗೆ ತೋರಿಸಿ ಬರುತ್ತೇನೆ ಅಂತಾ ಹೇಳಿದ್ದರಿಂದ ದಿನಾಂಕ 19.06.2020 ರಂದು ಮೃತನು ತನ್ನ ಹೆಂಡತಿ, ತಂಗಿ ನಿಕಿತಾಳಿಗೆ ಚಿಂತಕುಂಟಾ ಗ್ರಾಮಕ್ಕೆ ಬಿಟ್ಟು ಬಂದಿರುತ್ತಾನೆ. ನಂತರ ದಿನಾಂಕ 23.06.2020 ರಂದು ಪುನಃ ತನ್ನ ಹೆಂಡತಿಗೆ, ತಂಗಿಗೆ ಕರೆದುಕೊಂಡು ಬರುತ್ತೆನೆ ಅಂತಾ ತನ್ನ ತಾಯಿಗೆ ಹೇಳಿ ಊರಿಂದ ಹೋಗಿರುತ್ತಾನೆ. ಸಂಜೆ 6:00 ಗಂಟೆಯ ಸುಮಾರಿಗೆ ತನ್ನ ಹೆಂಡತಿಗೆ, ತಂಗಿಗೆ ಊರಿಗೆ ಹೋಗೋನ ನಡ್ರಿ ಅಂತಾ ಹೇಳಿದಾಗ ಮೃತನ ಹೆಂಡತಿಯು ಕುಪ್ಪಸ ಹೊಲಿಯಲು ಹಾಕುತ್ತೇನೆ ಮತ್ತೊಮ್ಮೆ ನೀವು ಯಾವಾಗಾದ್ರೂ ಬಂದ್ರೆ ತರುವಿರಂತೆ ಅಂತಾ ಹೇಳಿದಕ್ಕೆ ಗಂಡ-ಹೆಂಡತಿ ಬಾಯಿ ಮಾಡಿಕೊಂಡು ಕೋಪದಲ್ಲಿ ಸಂಡಾಸಕ್ಕೆ ಹೋಗುತ್ತೆನೆ ಅಂತಾ ಹೇಳಿ ಪೂಜಾರೋರ ಹೊಲದಲ್ಲಿಯ ನವಿಲು ಗಿಡಕ್ಕೆ ಬಟ್ಟೆಯ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟ ಬಗ್ಗೆ.    


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 73/2020 ಕಲಂ: 498(ಎ), 504, 324, 323, 506 ಸಂ 149 ಐಪಿಸಿ : ಇಂದು ದಿನಾಂಕ: 20/06/2020 ರಂದು 5-45 ಪಿಎಮಕ್ಕೆ ಶ್ರೀ ಅಯ್ಯಪ್ಪ ತಂದೆ ಚಂದಪ್ಪ ಕಮತಗಿ ಸಾ:ದೇವಿಕೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ಅಕ್ಕ ಶಾಂತಮ್ಮ ಇವಳಿಗೆ ಸುಮಾರು 15 ವರ್ಷಗಳ ಹಿಂದೆ ಕಾಡಂಗೇರಾ ಗ್ರಾಮದ ದೇವಪ್ಪ ಎಂಬುವನಿಗೆ ಕೊಟ್ಟ ಲಗ್ನ ಮಾಡಿದ್ದು, ಕೆಲ ದಿನ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದು, ನಂತರ ಅವಳ ಗಂಡ, ಅತ್ತೆ ಮತ್ತು ಭಾವ ಮೈದುನದವರು ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡುತ್ತಾ ಬಂದು ದಿನಾಂಕ: 14/06/2020 ರಂದು ಬೆಳಗ್ಗೆ 6 ಗಂಟೆಗೆ ನಮ್ಮ ಶಾಂತಮ್ಮಳಿಗೆ ಅವಳ ಗಂಡನಾದ 1) ದೇವಪ್ಪ ತಂದೆ ಸಿದ್ದಪ್ಪ ಆಡಿನವರ, ಅತ್ತೆಯಾದ 2) ನಾಗಮ್ಮ ಗಂಡ ಸಿದ್ದಪ್ಪ ಆಡಿನವರ, ಭಾವನಾದ 3) ನರಸಪ್ಪ ತಂದೆ ಸಿದ್ದಪ್ಪ ಆಡಿನೋರ, ಮೈದುನದವರಾದ 4) ಅಯ್ಯಪ್ಪ ತಂದೆ ಸಿದ್ದಪ್ಪ ಆಡಿನೋರ, 5) ಮಲ್ಲಪ್ಪ ತಂದೆ ಸಿದ್ದಪ್ಪ ಆಡಿನೋರ, 6) ನಾಗಪ್ಪ ತಂದೆ ಸಿದ್ದಪ್ಪ ಆಡಿನೋರ, ನೆಗಣ್ಣಿಯಾದ 7) ಬಸಮ್ಮ ಗಂಡ ಅಯ್ಯಪ್ಪ ಆಡಿನೋರ, ಗಂಡನ ಅಣ್ಣತಮ್ಮಕೀಯವರಾದ 8) ದುರ್ಗಪ್ಪ ತಂದೆ ಸಾಬಣ್ಣ ಡುಗನೋರ, 9) ನಿಂಗಪ್ಪ ಗಲ್ಲಬಕ್ಕಿ ಮತ್ತು ಇತರರು ಶಾಂತಮ್ಮಳಿಗೆ ಬಾಯಿಗೆ ಬಂದಂಗೆ ಅವಾಚ್ಯ ಬೈದು ಈ ಸೂಳೆ ಸಂಸಾರ ಮಾಡಲ್ಲ ಇವಳಿಗೆ ಹೊಡೆದು ಖಲಾಸ ಮಾಡಿರಿ ಎಂದು ಬೈದು ಅಯ್ಯಪ್ಪನು ಕಟ್ಟಿಗೆಯಿಂದ ಎರಡು ತೋಳುಗಳಿಗೆ, ಸೊಂಟಕ್ಕೆ ಹೊಡೆದು ಒಳಪೆಟ್ಟು ಮಾಡಿದ್ದು, ಗಂಡ ದೇವಪ್ಪನು ಕೂದಲೂ ಹಿಡಿದು ಕೈಯಿಂದ ಹೊಡೆದಿದ್ದು, ಅತ್ತೆ ಮತ್ತು ನೆಗೆಣಿ ಇಬ್ಬರೂ ಹೊಟ್ಟೆ ಮೇಲೆ ಒದ್ದಿರುತ್ತಾರೆ. ಆಗ ಜಗಳವನ್ನು ಹಣಮಂತ ಡುಗಲೊರ ಈತನು ಬಿಡಿಸಿರುತ್ತಾನೆ. ನಮ್ಮ ಅಕ್ಕ ರಾಯಚೂರು ರೀಮ್ಸ ಬೋಧಕ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಳೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 73/2020 ಕಲಂ: 498(ಎ), 504, 324, 323, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.



ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 74/2020 ಕಲಂ: 435,427,504,506 ಸಂ 34 ಐಪಿಸಿ : ಇಂದು ದಿನಾಂಕ: 24/06/2020 ರಂದು 5 ಪಿಎಮ್ ಕ್ಕೆ ಶ್ರೀಮತಿ ಅಂಬ್ರಮ್ಮ ಗಂಡ ಶಿವರುದ್ರಯ್ಯ ಹಿರೆಮಠ, ವ:45, ಜಾ:ಜಂಗಮ, ಉ:ಮನೆಕೆಲಸ ಸಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ವಡಗೇರಾ ಪಟ್ಟಣದಲ್ಲಿ ನಮ್ಮದೊಂದು ಸ್ವಂತ ಮನೆ ಇರುತ್ತದೆ. ನಮ್ಮ ಮನೆ ಎದುರುಗಡೆ ನಾಗಪ್ಪ ತಂದೆ ಬಸವರಾಜ ಶಾರದಳ್ಳಿ ಸಾ:ವಡಗೇರಾ ಇವರ ಮನೆ ಇರುತ್ತದೆ. ಹೀಗಿದ್ದು ಎದುರುಮನೆಯ ನಾಗಪ್ಪ ಮತ್ತು ಅವನ ಮಕ್ಕಳು ಅಣ್ಣತಮ್ಮಂದಿರು ವಿನಾಕಾರಣ ನಮಗೆ ಮನೆ ಮುಂದಿನ ಜಾಗದ ಸಂಬಂಧ ತಕರಾರು ಮಾಡುವುದು, ನಮ್ಮ ಜಾಗದಲ್ಲಿ ಬಂದು ಕಲ್ಲು ಮಣ್ಣು ಹಾಕುವುದು, ದನ ಕಟ್ಟುವುದು ಇತ್ಯಾದಿ ಮಾಡುತ್ತಾ ಬಂದಿರುತ್ತಾರೆ. ಆದರೂ ನಾವು ಸಂಭಾಳಿಸಿಕೊಂಡು ಬಂದಿರುತ್ತೇವೆ. ಹೀಗಿದ್ದು ನಿನ್ನೆ ದಿನಾಂಕ: 23/06/2020 ರಂದು ರಾತ್ರಿ 9 ಗಂಟೆ ಸುಮಾರಿಗೆ ನನ್ನ ಗಂಡನ ಹೆಸರಿನಲ್ಲಿರುವ ಮೋಟರ್ ಸೈಕಲ್ ನಂ. ಕೆಎ 33 ಕ್ಯೂ 7077 ನೇದ್ದನ್ನು ನಮ್ಮ ಮನೆ ಮುಂದೆ ನಿಲ್ಲಿಸಿ, ಊಟ ಮಾಡಿ ಮಲಗಿಕೊಂಡೆವು. ದಿನಾಂಕ: 24/06/2020 ರಂದು ರಾತ್ರಿ 01:00 ಗಂಟೆ ಸುಮಾರಿಗೆ ನಮ್ಮ ಬಾಜು ಮನೆಯ ಸೂಗಪ್ಪ ತಂದೆ ಸಂಗಣ್ಣ ಅಮಂಗಿ ಸಾ:ವಡಗೇರಾ ಈತನು ಬಂದು ನಮ್ಮ ಮನೆ ಬಾಗಿಲು ಪಡೆದು ಎಬ್ಬಿಸಿ, ನಿಮ್ಮ ಮೋಟರ್ ಸೈಕಲ್ ಅನ್ನು ಭರತ ತಂದೆ ನಾಗಪ್ಪ ಈತನು ಬೆಂಕಿ ಹಚ್ಚಿ ಸುಡುತ್ತಿದ್ದಾನೆ ಎಂದು ಹೇಳಿದಾಗ ನಾನು ನನ್ನ ಗಂಡ ಅಂಬ್ರಮ್ಮ ಇಬ್ಬರೂ ಎದ್ದು ಹೊರಗಡೆ ಬಂದು ನೋಡಲಾಗಿ ಭರತ ತಂದೆ ನಾಗಪ್ಪ ಶಾರದಹಳ್ಳಿ ಸಾ:ವಡಗೇರಾ ಈತನು ನಮ್ಮ ಮೋಟರ್ ಸೈಕಲನ್ನು ಖಾಲೆ ಪ್ಲಾಸ್ಟಿಕ ಕ್ಯಾರಿಬ್ಯಾಗಗಳನ್ನು ಇಟ್ಟು ಕಡ್ಡಿ ಕೊರೆದು ಬೆಂಕಿ ಹಚ್ಚುತ್ತಿದ್ದನು. ನಾವು ಹೋಗಿ ಯಾಕೆಂದು ನೋಡುವಷ್ಟರಲ್ಲಿ ಬೆಂಕಿಯು ಮೋಟರ್ ಸೈಕಲದ ಇಂಜನಗೆ ಹತ್ತಿ ಇಂಜನ ಮತ್ತು ಅದರ ಆಸುಪಾಸಿನ ಭಾಗಗಳು ಸುಟ್ಟಿರುತ್ತದೆ. ಕಾರಣ ಸದರಿ ಭರತ ಈತನು ನಮ್ಮ ಮನೆ ಮುಂದಿನ ಜಾಗದ ವೈಮನಸ್ಸಿನಿಂದ ರಾತ್ರಿ ವೇಳೆಯಲ್ಲಿ ನಮ್ಮ ಮೋಟರ್ ಸೈಕಲ್ ಸುಟ್ಟು ಅಂದಾಜು 35,000/- ರೂ. ಲಾಸ ಮಾಡಿರುತ್ತಾನೆ. ಬೆಳಗ್ಗೆ ಪುನಃ 5-30 ಗಂಟೆ ಸುಮಾರಿಗೆ ನಾವು ನಮ್ಮ ಮನೆ ಮುಂದೆ ಇದ್ದಾಗ 1) ಭರತ ತಂದೆ ನಾಗಪ್ಪ ಶಾರದಳ್ಳಿ, 2) ನಾಗಪ್ಪ ತಂದೆ ಬಸವರಾಜ ಶಾರದಳ್ಳಿ, 3) ಬಸವರಾಜ ತಂದೆ ಲಿಂಗಣ್ಣ ಶಾರದಳ್ಳಿ, 4) ಚಂದ್ರಪ್ಪ ತಂದೆ ಬಸವರಾಜ ಶಾರದಳ್ಳಿ ಮತ್ತು ಇತರರು ಸೇರಿ ಬಂದು ನಮಗೆ ಜಾಗದ ಸಂಬಂದ ಬಾಯಿಗೆ ಬಂದಂಗೆ ಅವಾಚ್ಯ ಬೈದು ಸೂಳಿದಾಳಿ ಅಂತಾ ಬೈದು ನನಗೆ ಮತ್ತು ನನ್ನ ಗಂಡನಿಗೆ ಜಂಗಮ ಸೂಳೆ ಮಕ್ಕಳೆ ಇವತ್ತು ನಿಮ್ಮ ಗಾಡಿ ಸುಟ್ಟಿವಿ ಬಹಳ ಕಿಸಿದಾಡಿದರೆ ನಿಮ್ಮನ್ನೆಲ್ಲ ಒಂದಲ್ಲಿ ಹಾಕಿ ಸುಟ್ಟು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿದರು. ಆಗ ನೆರೆ ಹೊರೆಯವರಾದ ಸೂಗಪ್ಪ ತಂದೆ ಸಂಗಣ್ಣ, ಶಿವರಾಜಪ್ಪ ತಂದೆ ಸಿದ್ದಲಿಂಗಣ್ಣ ಪಡಶೆಟ್ಟಿ ಮತ್ತು ಹಣಂತ್ರಾಯ ತಂದೆ ಶಿವರಾಯ ಜಡಿ ಮತ್ತು ಇತರರು ನೋಡಿರುತ್ತಾರೆ. ಕಾರಣ ಮನೆ ಮುಂದಿನ ಜಾಗದ ಸಂಬಂಧ ವೈಮನಸ್ಸಿನಿಂದ ನಮ್ಮ ಮೋಟರ್ ಸೈಕಲಗೆ ಬೆಂಕಿ ಹಚ್ಚಿ ಸುಟ್ಟು ನಮಗೆ ಲುಕ್ಸಾನ ಮಾಡಿದ್ದಲ್ಲದೆ. ನಮಗೆ ಅವಾಚ್ಯ ಬೈದು ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 74/2020 ಕಲಂ: 435,427,504,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.



ಕೋಡೆಕಲ್ ಪೊಲೀಸ ಠಾಣೆ ಗುನ್ನೆ ನಂ:- 50/2020 ಕಲಂ: 379 ಐ ಪಿ ಸಿ : ಇಂದು ದಿನಾಂಕ 24.06.2020 ರಂದು  12:30 ಪಿ.ಎಮ್ ಗಂಟೆಗೆ ಪಿರ್ಯಾಧಿ ಶ್ರೀ.ಮಲ್ಲಣ್ಣ ತಂದೆ ಶಿವಣ್ಣ ಕಮತಗಿ ವ33 ವರ್ಷ ಜಾ: ಹಿಂದೂ ಗಾಣಿಗೇರ ಉ: ಒಕ್ಕಲುತನ ಸಾ:ಕಕ್ಕೇರಾ ತಾ: ಸುರಪುರ  ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ಬಂದ ಫಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ, ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಉಪ ಜೀವಿಸುತ್ತಿದ್ದು. ಕಕ್ಕೇರಾ ಪಟ್ಟಣದಲ್ಲಿ ನಮ್ಮ ಮನೆಯು ಬಲಶೆಟ್ಟಿಹಾಳ -ಶಾಂತಪೂರ ಕ್ರಾಸ್ ಮುಖ್ಯ ರಸ್ತೆಯ ಪಕ್ಕದಲ್ಲಿ ರಸ್ತೆಯ ಉತ್ತರಕ್ಕೆ ಹೊಂದಿ ಕುಂಬಾರ ರವರ ಬಜಾಬ್ ಮೋಟರ್ ಸೈಕಲ್ ಶೋರೂಮ ಪಕ್ಕದಲ್ಲಿ ಇದ್ದು.  ನಾನು ನನ್ನ ಹೊಲ-ಮನೆಗಳಿಗೆ ತಿರುಗಾಡಲು. ಈಗ 10 ವರ್ಷಗಳ ಹಿಂದೆ ಒಂದು ಸ್ಪೆಂಡರ್ ಪ್ಲಸ್ ಮೊಟಾರ ಸೈಕಲ್ ನಂಬರ ಏಂ-33ಎ-7343 ನೇದ್ದನ್ನು ಖರೀದಿಸಿದ್ದು. ಇದರ ಚೆಸ್ಸಿ ನಂ: ಒಃಐಊಂ10ಇಎಂಊಂ05738   ಇಂಜನ್ ನಂ:ಊಂ10ಇಂಂಊಂ61746   ಇದ್ದು ನಾನು ಹೊಲದಲ್ಲಿ ಕೆಲಸವಿದ್ದಾಗ ಈ ಮೋಟರ್ ಸೈಕಲ್ ತೆಗೆದುಕೊಂಡು ಹೋಗಿ ಮರಳಿ ಬಂದ ನಂತರ ದಿನಾಲೂ ನಮ್ಮ ಮನೆಯ ಮುಂದೆ ನನ್ನ ಮೋಟರ್ ಸೈಕಲ್ಗೆ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸುತ್ತಿದ್ದು ಇರುತ್ತದೆ.
       ಹೀಗಿರುವಾಗ ದಿನಾಂಕ 06.06.2020 ರಂದು ನಾನು ರಾತ್ರಿ 10:30 ಗಂಟೆಯ ಸುಮಾರಿಗೆ  ನನ್ನ ಮೋಟರ್ ಸೈಕಲ್ ನಂ: ಏಂ-33ಎ-7343 ನೇದ್ದನ್ನು ಮನೆಯ ಮುಂದೆ ನಿಲ್ಲಿಸಿಹ್ಯಾಂಡಲ್ ಲಾಕ್ ಮಾಡಿ ಮನೆಯ ಒಳಗೆ ಹೋಗಿ ಊಟ ಮಾಡಿ ಮಲಗಕೊಂಡಿದ್ದು. ಮರುದಿನ ದಿನಾಂಕ:07.06.2020 ರಂದು ಬೆಳಿಗ್ಗೆ 6:00 ಗಂಟೆಗೆ ಎದ್ದು  ಮನೆಯ ಮುಂದೆ ಹೋಗಿ ನೋಡಲಾಗಿ ನಮ್ಮ ಮನೆಯ ಮುಂದೆ ನಿಲ್ಲಿಸಿದ. ನನ್ನ ಮೋಟರ್ ಸೈಕಲ್  ಕಾಣಿಸಲಿಲ್ಲಾ. ಮನೆಯಲ್ಲಿದ್ದ ನನ್ನ ತಂದೆ ಶಿವಣ್ಣ, ತಾಯಿ ಮಾನಮ್ಮ, ಅಕ್ಕ ರೇಣುಕಾ, ಮಾವ ಪರಮಣ್ಣ ರವರಿಗೆ ಕರೆದಿದ್ದು ಅವರೂ ಕೂಡಾ ಬಂದು ನೋಡಿದ್ದು. ನನ್ನ ಮೋಟರ್ ಸೈಕಲ್ ಕಾಣಿಸಲಿಲ್ಲಾ. ನಂತರ ನಾವು ಅಕ್ಕಪಕ್ಕದ ಮನೆಯವರಾದ ವೆಂಕಟೇಶ ಶೆಟ್ಟಿ ತಂದೆ ಯಲ್ಲಣ್ಣಯ್ಯ ಶೆಟ್ಟಿ ಹಾಗೂ ಪರಮಣ್ಣ ತಂದೆ ನಂದಪ್ಪ ಕಮತಗಿ ಇವರಿಗೆ ಕೇಳಿದ್ದು. ಇವರು ಕೂಡಾ ನೋಡಿಲ್ಲಾ ಅಂತಾ ತಿಳಿಸಿದ್ದು. ಯಾರೋ ಕಳ್ಳರು ನಾನು ನನ್ನ ಮನೆಯ ಮುಂದೆ ನಿಲ್ಲಿಸಿದ  ಮೋಟರ್ ಸೈಕಲ್ನಿನ ಹ್ಯಾಂಡಲ್  ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು. ಅಂದಿನಿಂದ ಇವತ್ತಿನವರೆಗೆ ಅಕ್ಕಪಕ್ಕದ ಹಳ್ಳಿಗಳಿಗೆ, ಗ್ಯಾರೇಜ್ಗಳಿಗೆ  ಹಾಗೂ ಇತರ ಕಡೆಗೆ ಹೋಗಿ ಹುಡುಕಾಡಿದ್ದು  ಮತ್ತು ನಮಗೆ ಪರಿಚಯದವರು ಮತ್ತು ಗೆಳಿಯಂದಿರು ಒಯ್ದಿರಬಹುದೆಂದು ಅವರಿಗೆ ವಿಚಾರಿಸಿದ್ದು. ಯಾರೂ ಕೂಡಾ ಒಯ್ದುದಿರುವದಿಲ್ಲಾ ಅಂತ ತಿಳಿಸಿದ್ದು. ನನ್ನ ಮೋಟರ್ ಸೈಕಲ್ ಸಿಕ್ಕಿರುವದಿಲ್ಲಾ. ನನ್ನ ಸ್ಪೆಂಡರ್ ಪ್ಲಸ್ ಮೊಟಾರ ಸೈಕಲ್ ನಂಬರ ಏಂ-33ಎ-7343,  ಇದರ ಚೆಸ್ಸಿ ನಂ: ಒಃಐಊಂ10ಇಎಂಊಂ05738.  ಇಂಜನ್ ನಂ:ಊಂ10ಇಂಂಊಂ61746 ಅಂದಾಜು ಕಿಮ್ಮತ್ತು 5,000/- ನೇದ್ದನ್ನು ದಿನಾಂಕ: 06.06.2020 ರ ರಾತ್ರಿ 10:30 ಗಂಟೆಯಿಂದ ದಿನಾಂಕ:07.06.2020 ರ ಬೆಳಗ್ಗೆ6:00 ಗಂಟೆಯ ಮಧ್ಯದ  ವೇಳೆಯಲ್ಲಿ ಯಾರೋ ಕಳ್ಳರು ಹ್ಯಾಂಡಲ್ ಲಾಕ್ ಮುರಿದು ಕಳುವುಮಾಡಿಕೊಂಡು ಹೋಗಿದ್ದು. ನಾನು ಕಳುವಾದ ನನ್ನ ಮೋಟರ್ ಸೈಕಲ್ನ್ನು ನೋಡಿದಲ್ಲಿ ಗುತರ್ಿಸುತ್ತೇನೆ.ಇಂದಿನ ವರೆಗೆ ನನ್ನ ಮೋಟರ್ ಸೈಕಲ್ ಸಿಗಬಹುದೆಂದು ಹುಡುಕಾಡಿದ್ದರಿಂದ ದೂರು ಕೊಡಲು ತಡವಾಗಿದ್ದು. ಕಾರಣ ಕಳುವಾದ ನನ್ನ ಮೊಟಾರು ಸೈಕಲ್ನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಾರಾಂಶದ  ಮೇಲಿಂದ ಠಾಣೆಯ ಗುನ್ನೆ ನಂ 50/2020 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!