ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/06/2020

By blogger on ಮಂಗಳವಾರ, ಜೂನ್ 23, 2020                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/06/2020 
                                                                                                               
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 60/2020  279 338 304(ಎ) ಐಪಿಸಿ : ದಿನಾಂಕ:23/06/2020 ರಂದು 20.40 ಗಂಟೆಯ ಸುಮಾರಿಗೆ ಪಿಯರ್ಾದಿ ಠಾಣೆಗೆ ಬಂದು ಒಂದು ಕನ್ನಡದಲ್ಲಿ ಹೇಳಿಕೆ ಕೊಟ್ಟಿದ್ದು ಏನೆಂದರೆ, ಇಂದು ದಿನಾಂಕ:23/06/2020 ರಂದು ನಮ್ಮ ತಮ್ಮನಾದ ರವಿ ಚವ್ಹಾಣ ಈತನು ತಾನು ಹೊಸದಾಗಿ ಖರಿಧಿ ಮಾಡಿದ ನಂಬರ ಇಲ್ಲದ ಹೆಚ್.ಎಪ್.ಡಿಲಕ್ಸ್ ಮೋಟಾರ್ ಸೈಕಲ ಮೇಲೆ ಕೋಳಿಹಾಳ ತಾಂಡಾದಿಂದಾ ಹುಣಸಗಿಗೆ ಬರುವಾಗ ಹಣಸಗಿ ಮದ್ದಿನ ಮನಿ ಕ್ಯಾಂಪ್ ದಾಟಿ ಮುಂದೆ ಹುಣಸಗಿ ಕಡೆಗೆ ಬರುವಾಗ ಎದರುಗಡೆಯಿಂದಾರಾಘವೇಂದ್ರ ತಂದೆ ಫೂಲಸಿಂಗ ಚವ್ಹಾಣ ಸಾ: ಕೋಳಿಹಾಳ ದೊಡ್ಡ ತಾಂಡಾ ಈತನು ತಾನು ನಡೆಯಿಸುವಹೆಚ್.ಎಪ್.ಡಿಲಕ್ಸ್ ಮೋಟಾರ್ ಸೈಕಲ ನಂಬರ ಕೆಎ-33 ಯು-6118 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು, ಮೃತ ರವಿ ಈತನು ನಡೆಯಿಸಿಕೊಂಡು ಬರುವ ನಂಬರ ಇಲ್ಲದ ಹೊಸ ಹೆಚ್.ಎಪ್.ಡಿಲಕ್ಸ್ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತದ ಮಾಡಿದ್ದು, ಅಪಘತಾದಲ್ಲಿ ನಮ್ಮ ತಮ್ಮ ರವಿಗೆ ಹಣೆಗೆ ಭಾರಿ ರಕ್ತಗಾಯವಾಗಿ ಹೆಣೆಯ ಬಾಗ ಒಳಗಡೆ ಹೋಗಿ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತ ಮಾಡಿದ ರಾಘವೇಂದ್ರನ ಹಣೆಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಕಾರಣ ಹೆಚ್.ಎಪ್.ಡಿಲಕ್ಸ್ ಮೋಟಾರ್ ಸೈಕಲ ನಂಬರ ಕೆಎ-33 ಯು-6118 ನೇದ್ದರ ಸವಾರ ರಾಘವೇಂದ್ರ ತಂದೆ ಫೂಲಸಿಂಗ ಚವ್ಹಾಣ ಸಾ: ಕೋಳಿಹಾಳ ದೊಡ್ಡ ತಾಂಡಾ ಈತನ ಮೇಲೆ ಕಾನೂನ ಕ್ರಮ ಜರುಗಿಸಿಬೇಕು ಅಂತಾಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:-  152/2020 ಕಲಂ 279, 304(ಎ) ಐಪಿಸಿ : ಮಾನ್ಯರವರಲ್ಲಿ ವಿನಂತಿಸಿಕೊಳ್ಳುವದೆನೆಂದರೆ, ದಿನಾಂಕ:17/06/2020 ರಂದು 3-45 ಪಿ.ಎಮ್ ಕ್ಕೆ ಸರಕಾರಿ ಆಸ್ಪತ್ರೆ ಸುರಪೂರದಿಂದ ಎಂ.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ರಸ್ತೆ ಅಪಘಾತದಲ್ಲಿ ಗಾಯ ಹೊಂದಿ ಉಪಚಾರ ಪಡೆಯುತ್ತಿದ್ದಗಾಯಾಳು ಶ್ರೀಮತಿ ಶಾಂತಾ ಗಂಡ ಪುನಿತ ಸಾ|| ಪಳ್ಳೆಕರನಹಳ್ಳಿ ಚಿತ್ರದುರ್ಗ ಜಿ|| ಚಿತ್ರದುರ್ಗ ಇವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:17/06/2020 ರಂದು ಮುಂಜಾನೆ ನಾನು ಕರ್ತವ್ಯಕ್ಕೆ ಹೊಗಿ ಮದ್ಯಾಹ್ನದ ವರೆಗೆ ಕರ್ತವ್ಯ ನಿರ್ವಹಿಸಿರುತ್ತೆನೆ. ನಂತರ ಮದ್ಯಾಹ್ನ 1:30 ಗಂಟೆಯ ಸುಮಾರಿಗೆ ಶಾಲೆಯಿಂದ ಕೆಲಸದ ನಿಮಿತ್ಯ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಾರ್ಯಲಯ ಸುರಪುರಕ್ಕೆ ಹೊಗುವ ಕುರಿತು ನನ್ನ ಪ್ಲೀಸರ್ ಸ್ಕೂಟಿ ನಂ. ಕೆಎ-17 ಇಹೆಚ್-9742 ನೇದ್ದರ ಮೇಲೆ ಹೊರಟೇನು. ನಾನು ಬಾದ್ಯಾಪುರ ಗ್ರಾಮದಿಂದ ಸಿದ್ದಾಪುರ ಮಾರ್ಗವಾಗಿ ಸುರಪುರ-ಕೆಂಭಾವಿ ಮುಖ್ಯರಸ್ತೆಯ ಮೇಲೆ ಸುರಪುರ ಕಡೆಗೆ ಹೊರಟಿದ್ದಾಗ 1:45 ಗಂಟೆ ಸುಮಾರಿಗೆ ಸಿದ್ದಾಪುರ ಸಿಮಾಂತರಲ್ಲಿ ಕೆರೆಯ ಹತ್ತಿರ ಎದರುಗಡೆಯಿಂದ ಒಂದು ಟಾಟಾ ಎಸಿಇ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ಬಲಕ್ಕೆ ತಿರುಗಿಸಿ ನನ್ನ ಸ್ಕೂಟಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಕೂಟಿ ಸಮೇತ ನಾನು ಕೆಳಗಡೆ ಬಿದ್ದೇನು. ಆಗ ಟಾಟಾ ಎಸಿಇ ವಾಹನದ ಮೇಲಿದ್ದ ಪತ್ರಾಸ್ ಹಾಗು ಕಟ್ಟಿಗೆಯ ಬಲೀಸ್ ಗಳು ಸಹ ನನ್ನ ಮೇಲೆ ಬಿದ್ದಿದ್ದು, ಸದರಿ ಅಪಘಾತದಲ್ಲಿ ನನ್ನ ತಲೆಗೆ ರಕ್ತಗಾಯ, ಎಡಗಡೆ ಹಸ್ತಕ್ಕೆ ಹಾಗೂ ಬೆರಳುಗಳಿಗೆ ರಕ್ತಗಾಯ, ಬಲಗೈ ಹಸ್ತಕ್ಕೆ, ಮೊಣಕೈ ಹತ್ತಿರ ರಕ್ತಗಾಯ, ಬಲ ಹೊಟ್ಟೆಗೆ, ಪಕ್ಕೆಗೆ ತರಚಿದ ರಕ್ತಗಾಯಳಾಗಿ ಭಾರಿ ಗುಪ್ತಗಾಯವಾಗಿರುತ್ತದೆ. ಆಗ ನನ್ನ ಹಿಂದುಗಡೆ ತಮ್ಮ ಮೋಟರ್ ಸೈಕಲ್ಗಳ ಮೇಲೆ ಹೊರಟಿದ್ದ ನಮ್ಮ ಶಾಲೆಯ ಮುಖ್ಯ ಗುರುಗಾಳಾದ ಪ್ರಕಾಶ ತಂದೆ ಮಾಣಿಕಪ್ಪ ಮುಡಬಿ ಹಾಗು ಲಾಡ್ಲೆಪಟೇಲ್ ತಂದೆ ಮಹ್ಮದ ಪಟೇಲ್ ಸಾ: ಆಲ್ದಾಳ ಇವರು ಬಂದು ನನಗೆ ಎಬ್ಬಿಸಿರುತ್ತಾರೆ. ನನಗೆ ಅಪಘಾತ ಪಡಿಸಿದ ಟಾಟಾ ಎಸಿಇ ವಾಹನದ ನಂಬರ ನೊಡಲಾಗಿ ಕೆಎ-25 ಸಿ-4644 ನೇದ್ದು ಚಾಲಕನ ಹೆಸರು, ವಿಳಾಸ ವಿಚಾರಿಸಲಾಗಿ ಇಫರ್ಾನ್ ತಂದೆ ರಹಿಮಾನಸಾಬ ಸೌದಾಗರ ಸಾ|| ವನದುರ್ಗ ತಾ|| ಶಹಾಪೂರ ಅಂತಾ ತಿಳಿಸಿರುತ್ತಾನೆ. ನಂತರ ಪ್ರಕಾಶ ಮುಡಬಿ ಮತ್ತು ಲಾಡ್ಲೆಪಟೇಲ್ ಇಬ್ಬರೂ 108 ಅಂಬುಲೇನ್ಸ ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ಅದರಲ್ಲಿ ನನಗೆ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ಟಾಟಾ ಎಸಿಇ ಗೂಡ್ಸ್ ವಾಹನ ಚಾಲಕನಾದ ಇಫರ್ಾನ್ ತಂದೆ ರಹಿಮಾನಸಾಬ ಸೌದಾಗರ ಇತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ನನಗೆ ಡಿಕ್ಕಿಪಡಿಸಿದರಿಂದ ನನಗೆ ಸಾದಾ ಹಾಗು ಭಾರಿ ಗಾಯಗಳಾಗಿದ್ದು, ಸದರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ. 152/2020 ಕಲಂ:279, 338 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಸದರಿ ಪ್ರಕರಣದಲ್ಲಿಯ ಗಾಯಾಳು ಫಿಯರ್ಾದಿ ಶ್ರೀಮತಿ ಶಾಂತಾ ಗಂಡ ಪುನಿತ ಇವರು ಇಂದು ದಿನಾಂಕ:23/06/2020 ರಂದು ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ಅಪಘಾತದಲ್ಲಿ ಆಗಿರುವ ಗಾಯಗಳಿಂದಾಗಿ ಮೃತ ಪಟ್ಟಿರುವ ಬಗ್ಗೆ ಮೃತಳ ಗಂಡನಾದ ಪುನೀತ ತಂದೆ ಮಲ್ಲೇಶಪ್ಪ ವ|| 37 ವರ್ಷ ಜಾ|| ಲಿಂಗಾಯತ ಸಾ|| ಪಳ್ಳೆಕರನಹಳ್ಳಿ ಚಿತ್ರದುರ್ಗ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ:304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ.03/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ 23/06/2020 ರಂದು 12:30 ಪಿ.ಎಂ ಕ್ಕೆ ಶ್ರೀಮತಿ ಬಸಮ್ಮ ಗಂಡ ಪರಮಣ್ಣ ಜೇವಗರ್ಿ ವ:30 ವರ್ಷ ಉ:ಹೊಲಮನೆ ಕೆಲಸ ಜಾ:ಲಿಂಗಾಯತ ಸಾ:ಬೂದಿಹಾಳ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ತವರು ಮನೆ ಲಿಂಗಸೂರ ತಾಲೂಕಿನ ಗುಡದಿನ್ನಿ ಗ್ರಾಮವಿದ್ದು ನನಗೆ ಈಗ ಸುಮಾರು  7 ವರ್ಷಗಳ ಹಿಂದೆ ಬೂದಿಹಾಳ ಗ್ರಾಮದ ಪರಮಣ್ಣ ಈತನೊಂದಿಗೆ ಮದುವೆಯಾಗಿದ್ದು ನನಗೆ ವಿನಯಕುಮಾರ ಅಂತಾ 6 ವರ್ಷದ ಮಗನಿರುತ್ತಾನೆ ಮದುವೆಯಾದ ನಂತರ ಒಂದು ವರ್ಷದವರೆಗೆ ನಾನು ನನ್ನ ಗಂಡ ಹಾಗೂ ಅತ್ತೆ ಮಾವ ಎಲ್ಲರೂ ಚೆನ್ನಾಗಿ ಇದ್ದೇವು ನನ್ನ ಗಂಡ ಕುಡಿಯುವ ಚಟದವನಾಗಿದ್ದು ಸಂಸಾರದೊಳಗೆ ನನ್ನ ಗಂಡ ಮತ್ತು ಅತ್ತೆ ಮಾವಂದಿರೊಂದಿಗೆ ಕಿರಿಕಿರಿ ಆಗುತ್ತಿದ್ದು ನಾನು ನನ್ನ ತವರೂರಾದ ಗುಡನಾಳ ಗ್ರಾಮಕ್ಕೆ ಹೋಗಿದ್ದು ಇರುತ್ತದೆ. ಈಗ ಸುಮಾರು ಒಂದು ತಿಂಗಳ ಹಿಂದೆ ನನ್ನ ಗಂಡನ ಹತ್ತಿರ ಬಂದು ಇದ್ದು ಆಗ ನನಗೆ ಮತ್ತು ನನ್ನ ಗಂಡ ಹಗೂ ಅತ್ತೆ ಮಾವ ಸರಿಯಾಗಿ ಹೊಂದಾಣಿಕೆ ಆಗದೆ ಇದ್ದುದರಿಂದ ನಾನು ಪುನಃ ತವರು ಮನೆಗೆ ಹೋಗಿರುತ್ತೇನೆ ಇಂದು ದಿನಾಂಕ 23/06/2020 ರಂದು ಮುಂಜಾನೆ 7:00 ಗಂಟೆಯ ಸುಮಾರಿಗೆ ನನ್ನ ಅಕ್ಕನ ಮಗನಾದ ಅಂಬರೇಶ ತಂದೆ ರುದ್ರಪ್ಪ ಸಾ: ಗುಡನಾಳ ಇತನ ಪೋನಿಗೆ ವಿನೋದ ಬೂದಿಹಾಳ ಗ್ರಾಮದವರು ಪೋನಿನ ಮೂಲಕ ತಿಳಿಸಿರುತ್ತಾನೆ ನಿನ್ನ ಗಂಡ ಹೊರಟ್ಟಿ ಗ್ರಾಮದ ಡೋಣಿ ನದಿ ದಡದಲ್ಲಿ ಜಾಲಿಕಂಟಿಯಲ್ಲಿ ನೇಣು ಲುಂಗಿಯಿಂದ ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾನೆ. ನಾನು ನನ್ನ ತಾಯಿ ಲಕ್ಷಿಂಬಾಯಿ ನನ್ನ ಅಣ್ಣ ಆದನಗೌಡ ಹಾಗೂ ಇತತರು ಕೂಡಿಕೊಂಡು ನನ್ನ ಗಂಡ ನೇಣು ಹಾಕಿಕೊಂಡ ಸ್ಥಳಕ್ಕೆ 11:30 ಎ.ಎಂಕ್ಕೆ ಬಂದು ನೋಡಲಾಗಿ ನನ್ನ ಗಂಡ ಹೊರಟ್ಟಿ ಸೀಮಾಂತರದ ಡೋಣಿ ದಂಡೆಯ ಮೇಲೆ ಜಾಲಿಕಂಟಿಯಲ್ಲಿ ಲುಂಗಿಯಿಂದ ನೇಣುಹಾಕೊಂಡು ಮೃತಪಟ್ಟಿದ್ದು ನೋಡಿರುತ್ತೇನೆ. ನನ್ನ ಮಾವ ಮಲ್ಲಣ್ಣ. ಮಲ್ಲಣ್ಣ , ಬಸವರಾಜ ಇವರಿಗೆ ವಿಚಾರಿಸಲಾಗಿ ತಿಳಿದು ಬಂದಿದ್ದನೆಂದರೆ ನಿನ್ನೆ ದಿನಾಂಕ 22/06/2020 ರಂದು ಮುಂಜಾನೆ 10:00 ಗಂಟೆಗೆ ಮನೆಯಿಂದ ಹೊರಗೆ ಹೋದವನು ಸಾಯಂಕಾಲವಾದರು ಮನೆಗೆ ಬಂದಿರುವದಿಲ್ಲ ಎಲ್ಲಿಗೆಆದರು ಹೋಗಿರಬೇಕು ಅಂತಾ ಸುಮ್ಮನೇ ಇದ್ದೇವು ಇಂದು ಬೆಳಿಗ್ಗೆ ನಮ್ಮ ಊರಿನವನಾದ ಯಮನಪ್ಪ ತಂದೆ ಶರಣಪ್ಪ ಭಂಗಿ ಈತನು ಮೀನು ಹೊಡೆಯಲು ಡೋಣಿಗೆ ಬಂದಾಗ ಸಾಯಂಕಾಲ ಹೊತ್ತಿನಲ್ಲಿ ಒಬ್ಬ ಮನುಷ್ಯ ಜಾಲಿಕಂಟಿಯಲ್ಲಿ ನೇಣು ಹಾಕಿಕೊಂಡಿದ್ದು ನಾನು ನೋಡಿರುತ್ತೇನೆ ಅವರು ಯಾರು ಎಂಬುವದು ನನಗೆ ಗೊತ್ತಿರುವದಿಲ್ಲ ಅಂತಾ ತಿಳಿಸಿದನು ನಾನು ಇಂದು ಮುಂಜಾನೆ 6:00 ಗಂಟೆಯ ಸುಮಾರಿಗೆ ಬಸವರಾಜ , ಶಂಕರಗೌಡ , ಮಲ್ಲನಗೌಡ ಇತರರು ಬಂದು ನೋಡಿರುತ್ತೇವೆ ಅಂತಾ ತಿಳಿಸಿದರು. ನನ್ನ ಗಂಡನು ತನ್ನ ಹೊಲದಮೇಲೆ ಕೊಡೆಕಲ್ಲ ಬ್ಯಾಂಕಿನಲ್ಲಿ ಪಿ.ಕೆ.ಜಿ.ಬಿ ಯಲ್ಲಿ ಬೆಳೆ ಸಾಲಮಾಡಿದ್ದು ಹಾಗೂ ಬೇರೆ ಬೇರೆ ಅವರ ಹತ್ತಿರ ಸಾಲಮಾಡಿದ್ದು ಆ ಸಾಲವನ್ನು ಹೇಗೆ ತಿರಿಸಬೇಕೆಂದು ಆಗ ಆಗ ಚಿಂತೆ ಮಾಡುತ್ತಿದ್ದ ಮತ್ತು ಜಮೀನನಲ್ಲಿ ಮಳೆ ಆಗದೆ ಕಾರಣ ಬೇಳೆ ಬೇಳೆಯದ ಕಾರಣ ಸಾಲ ತಿರಿಸಲು ಆಗದೆ ಇರುವದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಯಾರು ಇಲ್ಲದೆ ಸ್ಥಳದಲ್ಲಿ ಬಂದು ಜಾಲಿಕಂಟಿಯಲ್ಲಿ ನಿನ್ನೆ ದಿನಾಂಕ 22/06/2020 ರಂದು 11:00 ಎ.ಎಂ ದಿಂದ 6:00 ಪಿ.ಎಂ ದ ಮದ್ಯದ ಅವಧಿಯಲ್ಲಿ ನನ್ನ ಗಂಡನು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ನನ್ನ ಗಂಡನ ಮರಣದಲ್ಲಿ ಯಾರಮೇಲೆ ಯಾವುದೆ ಸಂಶಯ ಇರುವದಿಲ್ಲ ನನ್ನ ಗಂಡನ ಸಾಲದ ಬಾದೆಯಿಂದ ಮೃತಪಟ್ಟಿದ್ದು ಕಾರಣ ಮಾನ್ಯರು ಕಾನೂನು ಕ್ರಮ ಕೈಕೊಳ್ಳಬೇಕೆಂದು ಈ ಅಜರ್ಿಯ ಮೂಲಕ ವಿನಂತಿಸಿಕೊಂಡಿದ್ದು ಇರುತ್ತದೆ ಅಂತಾ ನೀಡಿದ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್ ನಂ 03/2020 ಕಲಂ 174 ಸಿ ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 172/2020. ಕಲಂ 279, 338 ಐ.ಪಿ.ಸಿ : ದಿನಾಂಕ: 08-06-2020 ರಂದು ರಾತ್ರಿ 9:00 ಗಂಟೆ ಸುಮಾರಿಗೆ ಶಹಾಪುರ ಕನ್ಯಾಕೊಳೂರ ರಸ್ತೆಯ ಎಸ್.ಬಿ. ಪಾಟೀಲ ಸಿಮೆಂಟಿನ ಪೈಪು ಕಂಬದ ಫ್ಯಾಕ್ಟ್ರಿಯ ಹತ್ತಿರ ರಸ್ತೆಯ ಮೇಲೆ ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ನಡೆದುಕೊಂಡು ಹೊರಟಿದ್ದ ಫಿಯರ್ಾದಿದಾರ ಅಳಿಯ ಚಿದಾನಂದ ತಂದೆ ಯಂಕಪ್ಪ ಲಿಂಗದಳ್ಳಿ ಸಾ: ಹಳಿಸಗರ ಎಂಬುವವರಿಗೆ ಡಿಕ್ಕಿಪಡಿಸಿ ಭಾರಿ ಗಾಯ ಪಡಿಸಿದ ಟ್ರ್ಯಾಕ್ಟರ ನಂ. ಕೆ.ಎ.33-ಟಿ.ಎ.3290 ನೇದ್ದರ ಚಾಲಕ ಶಿವಪ್ಪ ತಂದೆ ಹಣಮಂತ ಅಂಬಿಗೇರ ಸಾ: ಹಳಿಸಗರ ಶಹಾಪುರ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಇದ್ದ ಫಿರ್ಯದಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ.172/2020 ಕಲಂ. 279, 338 ಐ.ಪಿ.ಪಿ.  ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.  ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 88/2020, ಕಲಂ, 323. 324, 447,.504.506. ಸಂಗಡ 34  ಐ ಪಿ ಸಿ   : ಇಂದು ದಿನಾಂಕ: 23-06-2020 ಬೆಳಿಗ್ಗೆ 11-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 23-06-2020 ರಂದು ಬೆಳಿಗ್ಗೆ 07-30 ಗಂಟೆಗೆ ಹೆಗ್ಗಣಗೇರಾ ಸಿಮಾಂತರದ ಹೊಲ ಸವರ್ೆ ನಂಬರ 53/1 ರಲ್ಲಿ ಹೊಲ ಸಾಗುವಳಿ ಮಾಡುತ್ತಿರುವಾಗ ಆರೋಪಿತರು ಸೇರಿಕೊಂಡು ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಇದು ನಮ್ಮ ಹೊಲ ಇದೆ ಅಂತಾ ತಕರಾರು ತೆಗೆದು ಅವಾಚ್ಯವಾಗಿ ಬೈದು ಪೈಪಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ  ನಿನಗೆ ಖಲಾಸ ಮಾಡುತ್ತೇನೆ ಮಗನೆ ಅಂತಾ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿ ಜೀವ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 89/2020, ಕಲಂ, 323. 354.504.506. ಸಂಗಡ 34  ಐ ಪಿ ಸಿ : ಇಂದು ದಿನಾಂಕ: 23-06-2020 ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಸವೆನೆಂದರೆ ದಿನಾಂಕ: 23-06-2020 ರಂದು ಬೆಳಿಗ್ಗೆ 10-00 ಗಂಟೆಗೆ ಹೆಗ್ಗಣಗೇರಾ ಸಿಮಾಂತರದ ಹೊಲ ಸವರ್ೆ ನಂಬರ 53/1 ರಲ್ಲಿ ಆರೋಪಿತರು ಹೊಲ ಸಾಗುವಳಿ ಮಾಡುತ್ತಿರುವಾಗ ನಾವು ಹೋಗಿ ಇದರಲ್ಲಿ ನಮಗೆ ಪಾಲು ಬರುತ್ತದೆ ನಿನು ಒಬ್ಬನೆ ಯಾಕೆ ಸಾಗುವಳಿ ಮಾಡುತ್ತಿ ಅಂತಾ ಕೇಳಿದ್ದಕ್ಕೆ ಆರೋಪಿತರು ಇದು ನಾವು ಖರೀದಿ ಮಾಡಿದ ಹೊಲ ಇದೆ ನಿವು ಏನು ಕೇಳುತ್ತಿರಲೆ ಸೂಳೆ ಮಕ್ಕಳೆ ಅಂತಾ ಕೈಯಿಂದ ಹೊಡೆ ಬಡೆ ಮಾಡಿ ಸೀರೆಯ ಸೇರಗೂ ಹಿಡಿದು ಎಳದಾಡಿ ಅವಮಾನ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿ ಜೀವ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 79/2020 ಕಲಂ 143, 147, 323, 324, 447, 504, 506 ಸಂ 149 ಐಪಿಸಿ : ದಿನಾಂಕ 23/06/2020 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾಧಿ ಮತ್ತು ಆತನ ಮಗ ಇಬ್ಬರೂ ಕೂಡಿ ಚಾಮನಳ್ಳಿ ಗ್ರಾಮದ ಸೀಮಾಂತರದ ತಮ್ಮ ಹೊಲ ಸವರ್ೆ ನಂ 107 ರಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾಧಿ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಫಿರ್ಯಾಧಿ ಮತ್ತು ಅವನ ಮಗನ ಜೋತೆಗೆ ಜಗಳ ತೆಗೆದು ಏ ಸೂಳೇ ಮಕ್ಕಳೆ ನೀವು ನಮ್ಮ ಹೊಲದಲ್ಲಿ ಯಾಕೆ ಕೆಲಸ ಮಾಡುತ್ತಿದ್ದಿರಿ, ಈ ಹೊಲ ನಮದು ಇದೆ ಇಲ್ಲಿಂದ ಹೋಗಿರಿ ಅಂತಾ ಅವಾಚ್ಯವಾಗಿ ಬೈದು, ಕಟ್ಟಿಗೆಯಿಂದ, ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ ಬಗ್ಗೆ.
ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!