ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/06/2020

By blogger on ಸೋಮವಾರ, ಜೂನ್ 22, 2020








                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/06/2020 
                                                                                                               
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 87/2020 ಕಲಂ. 279. 304(ಎ) ಐಪಿಸಿ  : 22-06-2020 ರಂದು ಮದ್ಯಾಹ್ನ 02-30 ಗಂಟೆಗೆ ಪಿಯರ್ಾಧಿ ಠಾನೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಸವೆನೆಂದರೆ  ನಾನು ಮೇಲ್ಕಂಡ ಹೆಸರು ಮತ್ತು ವಿಳಾಸದ ನಿವಾಸಿತನಿದ್ದು, ಒಕ್ಕಲುತನ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ  ಉಪಜೀವನ ಮಾಡಿಕೊಂಡಿರುತ್ತೇನೆ. ನನಗೆ 3 ಜನ ಮಕ್ಕಳಿದ್ದು 1) ಮಂಜುಳಾ ವ|| 09 ವರ್ಷ 2) ಕಾತರ್ಿಕ ವ|| 07 ವರ್ಷ 3) ಮಲ್ಲು ವ|| 05 ವರ್ಷ ಅಂತಾ  ಮಕ್ಕಳಿರುತ್ತಾರೆ. ನನ್ನ ಮಗಳು ಮಂಜುಳಾ ತನ್ನ ಇಬ್ಬರು ತಮ್ಮಂದಿರನ್ನು ಕರೆದುಕೊಂಡು ಮನೆಯಲ್ಲಿ ತಿಳಿಸಿ  ಇಂದು ಬೆಳಿಗ್ಗೆ 8-00 ಗಂಟೆಗೆ ನಮ್ಮೂರಿನಿಂದ 1 ಕಿ.ಮೀ ದೂರದಲ್ಲಿರುವ ಬನದೇಶ್ವರ ದೇವಾಲಯಕ್ಕೆ ದೇವರಿಗೆ ಹೋಗಿದ್ದಳು. ಹೀಗಿದ್ದು ಇಂದು ದಿನಾಂಕ: 22-06-2020 ರಂದು ಬೆಳಿಗ್ಗೆ 10.05 ಗಂಟೆ ಸುಮಾರಿಗೆ ನಾನು ಊರಿನಲ್ಲಿದ್ದಾಗ ನನಗೆ ನಮ್ಮೂರಿನ ರಾಚಪ್ಪ ಬಾಲಚೇಡ ಇವರು ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ನಿನ್ನ ಮಗಳು ಮಂಜುಳಾ ಬನದೇಶ್ವರ ಗುಡಿಯಿಂದ ಮರಳಿ ಮನೆಗೆ ಬರುವಾಗ ಮಲ್ಲಯ್ಯ ಕುರುಬರ ಇವರ ಜಮೀನು ಹತ್ತಿರ ರೋಡಿನ ಮೇಲೆ  ಹಿಂಬದಿಯಿಂದ ಬಂದ ಬೈಕ ಸವಾರನೊಬ್ಬ ಡಿಕ್ಕಿ ಪಡಿಸಿದ್ದು ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ. ಬೇಗನೆ ಬಾ ಅಂತ ತಿಳಿಸಿದ್ದು ಆಗ ನಾನು ಕೂಡಲೇ ಮನೆಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗಳ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ಬಲಗಾಲಿಗೆ ತೆರಚಿದ ಗಾಯವಾಗಿತ್ತು. ಸದರಿ ಘಟನೆ ಹೇಗಾಯಿತು ಅಂತ ನಾನು ರಾಚಪ್ಪ ಈತನಿಗೆ  ವಿಚಾರಿಸಲಾಗಿ ಸದರಿಯವನು ತಿಳಿಸಿದ್ದೆನೆಂದರೆ, ನಾನು ಹೊಲದಿಂದ ಮನೆಗೆ ಬರುವಾಗ  ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಿನ್ನ ಮಗಳು ದೇವಸ್ಥಾನದ ಕಡೆಯಿಂದ ಕಾಳೇಬೆಳಗುಂದಿ ಕಡೆಗೆ ರೋಡಿನ ಮೇಲೆ ನಡೆದುಕೊಂಡು ಹೊರಟಿದ್ದಳು, ಹಿಂದಿನಿಂದ ಬಂದ ಬಜಾಜ ಪ್ಲಾಟಿನಂ. ಬೈಕ ನಂಬರ ಕೆಎ-33 ಎಕ್ಷ- 5105 ನೇದ್ದರ ಸವಾರನು ತನ್ನ ಬೈಕನ್ನು ಅತಿವೇಗ ಮತ್ತು ಅಲಕ್ಷತದಿಂದ ಚಲಾಯಿಸಿಕೊಂಡು ಬಂದು ಮಂಜುಳಾಗೆ ಡಿಕ್ಕಿಪಡಿಸಿ ಅಪಘಾತಪಡಿಸಿರುತ್ತಾನೆ. ಅವನ ಹೆಸರು ವಿಳಾಸ ವಿಚಾರಿಸಲಾಗಿ ಅವನ ಹೆಸರು ಲಕ್ಷ್ಮಣ ತಂದೆ ಮಲ್ಲಪ್ಪ ಮಕ್ಕಳಿ ವ|| 28 ವರ್ಷ ಜಾ|| ವಡ್ಡರ ಸಾ|| ಮುಸ್ಲೆಪಲ್ಲಿ ತಿಳಿಸಿದನು. ಆಗ ಕೂಡಲೇ ಒಂದು ಖಾಸಗಿ ವಾಹನ ತೆಗೆದುಕೊಂಡು ನನ್ನ ಮಗಳನ್ನು ಯಾದಗಿರಿ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋದೆವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನನ್ನ ಮಗಳು ಚಿಕಿತ್ಸೆ ಫಲಕಾರಿಯಾಗದೆ ಮದ್ಯಾಹ್ನ 12-35 ಗಂಟೆಗೆ ನನ್ನ ಮಗಳು ಆಸ್ಪತ್ರೆಯಲ್ಲಿ ಮೃತಪಟಿರುತ್ತಾಳೆ.
      ಕಾರಣ ಮೋಟರ ಸೈಕಲ್ ನಂಬರ ಕೆಎ-33 ಎಕ್ಷ- 5105 ನೇದ್ದರ ಅತಿ ವೇಗ ಮತ್ತು ಅಲಕ್ಷತನದಿಂದ ತನ್ನ ಬೈಕನ್ನು ಓಡಿಸಿಕೊಂಡು ಬಂದು ನಡೆದುಕೊಂಡು ಹೊರಟಿದ್ದ ನನ್ನ ಮಗಳು ಮಂಜುಳಾ ವ|| 09 ವರ್ಷ, ಇವಳಿಗೆ ಡಿಕ್ಕಿಪಡಿಸಿದ್ದು, ಅಪಘಾತದಲ್ಲಿ ನನ್ನ ಮಗಳ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿ ಕಾರಣ ಸದರಿ ಮೋಟರ ಸೈಕಲ್ ಚಾಲಕನ ಮೇಲೆ  ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಫಿಯರ್ಾದಿ ನೀಡಿದ್ದು ಇರುತ್ತದೆ 



ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:-  99/2020 ಕಲಂ: 143.147.323.448,427,504.506 ಸಂ 149 ಐಪಿಸಿ  : ಇಂದು ದಿನಾಂಕ 22.06.2020 ರಂದು 3.30 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀರಾಯಪ್ಪ ತಂದೆ ಸಕ್ರೆಪ್ಪ ನಾಯ್ಕೋಡಿ ವ: 25 ವರ್ಷ, ಜಾ:ಕುರಬರ ಉ:ಒಕ್ಕಲುತನ, ಸಾ||ಪರಸನಳ್ಳಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ  ಹೀಗಿದ್ದು ದಿನಾಂಕ 20.06.2020 ರಂದು ರಾತ್ರಿ 09.30 ಗಂಟೆಗೆ ನಾನು ಹಾಗು ನನ್ನ ಅಣ್ಣ ಪ್ರಕಾಶ ತಂದೆ ಸಕ್ರೆಪ್ಪ ನಾಯ್ಕೋಡಿ ಹಾಗು ನಮ್ಮ ಅತ್ತಿಗೆ ಬೋರಮ್ಮ ನಾವೆಲ್ಲರು ಮನೆಯಲ್ಲಿದ್ದಾಗ ನಮ್ಮ ಜನಾಂಗದ 1] ಖಂಡಪ್ಪ ತಂದೆ ಭೀಮರಾಯ ನಾಯ್ಕೋಡಿ 2] ರಾಯಪ್ಪ ತಂದೆ ಖಂಡಪ್ಪ ನಾಯ್ಕೋಡಿ 3] ವಿರೇಶ ತಂದೆ ಖಂಡಪ್ಪ ನಾಯ್ಕೋಡಿ 4] ಹಳ್ಳೆಪ್ಪ ತಂದೆ ಶರಣಪ್ಪ ನಾಯ್ಕೋಡಿ 5] ಪರಶುರಾಮ ತಂದೆ ಹಳ್ಳೆಪ್ಪ ನಾಯ್ಕೋಡಿ 6] ವಿರೇಶ ತಂದೆ ಹಳ್ಳೆಪ್ಪ ನಾಯ್ಕೋಡಿ 7] ಮಲ್ಲಪ್ಪ ತಂದೆ ಹಳ್ಳೆಪ್ಪ ನಾಯ್ಕೋಡಿ 8] ರಾಯಪ್ಪ ತಂದೆ ಮಲ್ಲಪ್ಪ ನಾಯ್ಕೋಡಿ 9] ನಿಂಗಪ್ಪ ತಂದೆ ರಾಯಪ್ಪ ನಾಯ್ಕೋಡಿ 10] ಮಲ್ಲಪ್ಪ ತಂದೆ ಈರಪ್ಪ ಕಕ್ಕೇರಿ 11] ಭೀಮರಾಯ ತಂದೆ ಮಲ್ಲಪ್ಪ ನಾಯ್ಕೋಡಿ 12] ನಿಂಗಪ್ಪ ತಂದೆ ಮಲ್ಲಪ್ಪ ನಾಯ್ಕೋಡಿ 13] ವೆಂಕಟೇಶ ತಂದೆ ರಾಯಪ್ಪ ನಾಯ್ಕೋಡಿ 14] ಮಲಕಪ್ಪ ತಂದೆ ಅಂಬಲಪ್ಪ ಹಾಲಬಾವಿ 15] ಮಲ್ಲವ್ವ ಗಂಡ ಖಂಡಪ್ಪ ನಾಯ್ಕೋಡಿ 16] ಹಳ್ಳೆವ್ವ ಗಂಡ ಮಲ್ಲಪ್ಪ ಕಕ್ಕೇರಿ 17] ಪರಮವ್ವ ಗಂಡ ರಾಯಪ್ಪ ನಾಯ್ಕೋಡಿ 18] ತಾಯಮ್ಮ ಗಂಡ ಹಳ್ಳೆಪ್ಪ ನಾಯ್ಕೋಡಿ 19] ನಿಂಗಮ್ಮ ಗಂಡ ಈರಪ್ಪ ನಾಯ್ಕೋಡಿ 20] ಸಾವಿತ್ರಿ ಗಂಡ ಮಲ್ಲಪ್ಪ ನಾಯ್ಕೋಡಿ ಸಾ|| ಎಲ್ಲರೂ ಪರಸನಳ್ಳಿ ಇವರು ಗುಂಪು ಕಟ್ಟಿಕೊಂಡು ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಎಲೇ ಸೂಳೇ ಮಗನೇ ರಾಯಾ ಮನೆಯಲ್ಲಿ ಕುಳಿತು ಏನು ಮಾಡುತ್ತಿ ಸೂಳಿ ಮಗನೇ ಅಂತ ಬೈಯುತ್ತಿದ್ದಾಗ ನಾನು ಸದರಿಯವರಿಗೆ ಅಂಜಿ ಮನೆಯ ಒಳಗಿನ ಕೋಣೆಯಲ್ಲಿ ಕುಳಿತಿದ್ದು ಆಗ ನನ್ನ ಅಣ್ಣನಾದ ಪ್ರಕಾಶ ಈತನು ಏಕೇ ಏನು ಆಯಿತು ಅಂತ ಕೇಳಿದಾಗ ಇಲ್ಲ ಸೂಳೆ ಮಕ್ಕಳೆ ನಿಮ್ಮದು ಊರಾಗ ಬಹಾಳ ಆಗಿದೆ ಎಲ್ಲಿದ್ದಾನೇ ಆ ರಾಯಾ ಸೂಳಿ ಮಗ ಅಂತ ಅವಾಚ್ಯಾವಾಗಿ ಬೈಯುತ್ತಾ ಎಲ್ಲರೂ ನಮ್ಮ ಮನೆಯ ಟೈಲ್ಸಗಳನ್ನು ಒಡೆದುಹಾಕಿ ಗೃಹ ಉಪಯೋಗಿ ವಸ್ತುಗಳನ್ನು ಒಡೆದು ಹಾಕಿ ನಾಶಪಡಿಸಿ ಸೂಳೆ ಮಗ ರಾಯ ಸಿಗಲಿ ಅಂತ ಎಲ್ಲರೂ ಬೈಯುತ್ತಾ ನಮ್ಮ ಮನೆಯ ಒಳಗೆ ನುಗ್ಗಿ ಒಳಗಿನ ಕೋಣೆಯಲ್ಲಿದ್ದ ಬ್ಯಾಟಿ ಸಿಕ್ಸಿತು ಅಂತ ಎಲ್ಲರೂ ನನಗೆ ಕೈಯಿಂದ ಹೊಡೆಬಡೆ ಮಾಡಿ ಕಾಲಿನಿಂದ ಒದೆಯುತ್ತಿದ್ದಾಗ ನಮ್ಮ ಅಣ್ಣ ಪ್ರಕಾಶ ಹಾಗು ಅತ್ತಿಗೆ ಬೋರಮ್ಮ ಇವರು ಚೀರಾಡಲಿಕ್ಕೆ ಹತ್ತಿದಾಗ ನಮ್ಮ ಚಿಕ್ಕಪ್ಪನಾದ ಶಿವರಾಜ ದೊಡಮನಿ ಹಾಗು ಅಲ್ಲಿಯೇ ಮನೆಯ ಮುಂದೆ ಹೊರಟ ಗಿರೆಪ್ಪ ಸುರಪೂರ ಮತ್ತು ಗುರಪ್ಪ ಚಲುವಾದಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನಮ್ಮ ಮನೆಯಿಂದ ಹೊರಗೆ ಹೋಗಿ ಮಗನೇ ರಾಯ ಇನ್ನೊಂದು ಸಲ ಸಿಗು ನಿನ್ನ ಜೀವ ನಮ್ಮ ಕೈಯಲ್ಲಿದೆ ಅಂತ ಜೀವದ ಭಯ ಹಾಕಿ ಹೋಗಿದ್ದು ಅಂತ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 99/2020 ಕಲಂ 143,147,323,448,427,504,506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 171/2020 ಕಲಂ  379 ಐ.ಪಿ.ಸಿ ಮತ್ತು 44(1) ಕೆ.ಎಮ್.ಎಮ್.ಸಿ.ಆರ್ : ಇಂದು ದಿನಾಂಕ 22/06/2020  ರಂದು  ಮದ್ಯಾಹ್ನ 13-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ವೆಂಕಟೇಶ ಪೊಲೀಸ್ ಉಪ-ಅಧೀಕ್ಷಕರು, ಸುರಪೂರ ಉಪ ವಿಭಾಗ ರವರು, ಒಂದು ಮರಳು ತುಂಬಿದ ಲಾರಿ  ನಂ ಒಊ-18-ಂಅ-6090 ನೇದ್ದು ಮತ್ತು ಅದರ ಚಾಲಕ ಹಾಗೂ ಮೂಲ ಜಪ್ತಿ ಪಂಚನಾಮೆಯೊಂದಿಗೆ ವರದಿ ಹಾಜರ ಪಡಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಫಿಯರ್ಾದಿಯವರು  ಇಂದು ದಿನಾಂಕ 22/06/2020  ರಂದು ಬೆಳಿಗ್ಗೆ 09-10 ಗಂಟೆಗೆ ತಮ್ಮ ಸಿಬ್ಬಂಧಿಯವರಾದ ಉಮಾಕಾಂತ ಹೆಚ್.ಸಿ 192, ಸುಭಾಷ ಪಿ.ಸಿ 174 ಹಾಗೂ ಜೀಪ್ ಚಾಲಕ ಚಂದಪ್ಪಗೌಡ ಎ.ಪಿ.ಸಿ 143 ರವರೊಂದಿಗೆ ಭೀ-ಗುಡಿಯಿಂದ ಶಹಾಪೂರ ಕಡೆಗೆ ಸರಕಾರಿ ಜೀಪ್ ನಂ ಕೆಎ-33-ಜೊ-0253 ನೇದ್ದರಲ್ಲಿ ಬರುತಿದ್ದಾಗ ಶಹಾಪೂರದ ಹೊಸ ತಹಸೀಲ್ ಕಾಯರ್ಾಲಯದ ಹತ್ತಿರ ಮುಂಜಾನೆ 09-20 ಗಂಟೆಗೆ ಬಾತ್ಮಿ ಬಂದಿದ್ದೆನೆಂದರೆ,  ದೇವದುರ್ಗದಿಂದ- ಹತ್ತಿಗೂಡುರ ಕಡೆಗೆ ಒಂದು ಲಾರಿಯಲ್ಲಿ ಅಕ್ರಮವಾಗಿ ಮರಳು ಲೊಡ ಮಾಡಿಕೊಂಡು ಬರುತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ, ಜೊತೆಯಲಿದ್ದ ಸಿಬ್ಬಂದಿಯವರಿಗೆ ವಿಷಯ ತಿಳಿಸಿ ಸಿಬ್ಬಂದಿಯವರ ಸಹಾಯದಿಂದ ಇಬ್ಬರೂ ಪಂಚರನ್ನು  ದೇವದುರ್ಗ ಕ್ರಾಸ್ ಹತ್ತಿರ ಬರಲು ತಿಳಿಸಿ ಮುಂಜಾನೆ 9-40 ಗಂಟೆಗೆ  ಗಂಟೆಗೆ ದೇವದುರ್ಗ ಕ್ರಾಸ್ಗೆ ಬಂದಿದ್ದು. ಇಬ್ಬರೂ ಪಂಚರಾದ  1) ಪ್ರಕಾಶ ತಂದೆ ನಿಂಗಣ್ಣ ಕನ್ನೂರ ವಯ 39 ವರ್ಷ ಜಾತಿ ಲಿಂಗಾಯತ ಉಃ ವ್ಯಾಪಾರ ಸಾಃ ಸಗರ(ಬಿ) ಹಾಲಿವಸತಿ ಗಾಂಧಿ ಚೌಕ ಶಹಾಪೂರ 2) ಶರಣು ತಂದೆ ಶಿವಪ್ಪ ಅಂಗಡಿ ವಯ 28 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿಸಗರ ಶಹಾಪೂರರವರ ಸಮಕ್ಷಮದಲ್ಲಿ ಮರಳು ತುಂಬಿಕೊಂಡು ಬರುತಿದ್ದ ವಾಹನಗಳನ್ನು ನಿಗಾ ಮಾಡುತ್ತಾ ನಿಂತಿದ್ದಾಗ, ಮುಂಜಾನೆ 10-00 ಗಂಟೆಗೆ ದೇವದುರ್ಗ ಕಡೆಯಿಂದ ಒಂದು ಲಾರಿ ನಂ ಒಊ-18-ಂಅ-6090 ನೇದ್ದು ಬಂದಿದ್ದು, ಸದರಿ ಲಾರಿಯಿಂದ ನೀರಿನ ಹನಿಗಳು ಬಿಳುತಿದ್ದರಿಂದ ಸಂಶಯ ಬಂದು, ಸದರಿ ವಾಹನವನ್ನು  ಕೈ ಮಾಡಿ ನಿಲ್ಲಿಸಿ ಚಾಲಕನಿಗೆ ಹೆಸರು ವಿಳಾಸ  ಲಾರಿಯಲ್ಲಿ ಲೋಡ ಇದ್ದ ಬಗ್ಗೆ ವಿಚಾರಿಸಿದಾಗ ಮರಳು ಇದೆ ಅಂತ ಹೇಳಿದ್ದು, ಸದರಿ ಮರಳು ಸಾಗಿಸುತಿದ್ದ ಬಗ್ಗೆ ರಾಯಲ್ಟಿ ಮತ್ತು ವಾಹನದ ದಾಖಲೆಗಳನ್ನು ಹಾಜರ ಪಡಿಸಲು ತಿಳಿಸಿದ್ದು ಸದರಿ ಲಾರಿ ಚಾಲಕ ಶರಣಪ್ಪ ಗುಪ್ತಾ ಈತನಿಗೆ ರಾಯಲ್ಟಿ ಮತ್ತು ವಾಹನದ ದಾಖಲೆಗಳನ್ನು ಹಾಜರ ಪಡಿಸಿದ್ದು ಸದರಿ ದಾಖಲೆಗಳನ್ನು ಪರಿಶೀಲಿಸಿದಾಗ ರಾಯಲ್ಟಿಯಲ್ಲಿ ಅವಧಿ ಮುಗಿದಿದ್ದರೂ  ಅದರೆ ರಾಯಲ್ಟಿಯನ್ನು ಬಳಕೆ ಮಾಡಿಕೊಂಡು ಮರಳು ಸಾಗಿಸುತಿದ್ದ ಬಗ್ಗೆ  ಕಂಡು ಬಂದಿರುತ್ತದೆ.  ಸದರಿ ರಾಯಲ್ಟಿಯಲ್ಲಿ ಎಮ್.ಡಿ.ಪಿ ನಂಬರ ಖಂಓಖಂಔಖ12800003843 ದಿನಾಂಕ 21/06/2020 ನೇದ್ದನ್ನು ಹಾಜರುಪಡಿಸಿದನು. ಎಮ್.ಡಿ.ಪಿಯಲ್ಲಿ ಗಿಚಿಟಜಣಥಿ ಯಲ್ಲಿ ನೊಂದಾಯಿಸಿದ ಅವಧಿಯ ದಿನಾಂಕ 21/06/2020 8:07:57 ಎ.ಎಮ್.ದಿಂದ 21/06/2020 7:07:57 ಪಿ.ಎಮ್ (11 ಡಿ) ಗಂಟೆಯವರೆಗೆ ಅಂತ ಇದ್ದು, ಸದರಿ ರಾಯಲ್ಟಿಯ ಅವಧಿ ಮುಗಿದಿದ್ದರೂ ಸಹಿತ ಪುನಃ ಅದೆ ರಾಯಲ್ಟಿಯನ್ನು ಬಳಕೆ ಮಾಡಿಕೊಂಡು ಮರಳು ಸಾಗಿಸಿದ್ದು ಕಂಡು ಬಂದಿರುತ್ತದೆ. ಸದರಿ ವಾಹನ ಚಾಲಕನಿಗೆ ಸದ್ಯ ಲಾರಿಗೆ ರಾಯಲ್ಟಿ ನೀಡುತ್ತಿಲ್ಲ ನಿಮಗೆ ಹೇಗೆ ರಾಯಲ್ಟಿ ನೀಡಿದರು ಅಂತ ವಿಚಾರಿಸಿದಾಗ ಇದರ ಬಗ್ಗೆ ನನಗೆ ಮಾಹಿತಿ ಇರುವುದಿಲ್ಲ ನಮ್ಮ ವಾಹನದ ಮಾಲಿಕನಿಗೆ ಗೊತ್ತಿರುತ್ತದೆ ಅಂತ ಹೇಳಿದನು.
      ಸದರಿ ವಾಹನ ಮಾಲಿಕನ ಹೆಸರು ವಿಳಾಸದ ಬಗ್ಗೆ ವಿಚಾರಿಸಿದ್ದು, ವಿನೋದ ಕುಮಾರ ತಂದೆ  ಬಸವರಾಜ ಸಾಃ ಪ್ರತಾಪ್ ನಗರ ಬೀದರ  ಅಂತ ಹೇಳಿದನು. ಸದರಿ ಲಾರಿಯ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಸಾಗಿಸುತಿದ್ದ ಬಗ್ಗೆ  ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಮರಳು ತುಂಬಿದ ಲಾರಿಯನ್ನು ಮುಂಜಾನೆ  10-30 ಗಂಟೆಯಿಂದ 11-30 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 171/2020 ಕಲಂ  379 ಐ.ಪಿ.ಸಿ ಮತ್ತು 44(1) ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.



ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 113/2020 ಕಲಂ:143, 147, 323, 447, 504, 506 ಸಂ 149 ಐಪಿಸಿ : ಇಂದು ದಿನಾಂಕ 22.06.2020 ರಂದು ಬೆಳಿಗ್ಗೆ 8:30 ಗಂಟೆಯ ಫಿರ್ಯಾದಿಯು ಖರೀದಿ ಮಾಡಿದ ತನ್ನ ಪಾಲಿನ ಹೊಲಗಳ ಸವರ್ೇ ನಂಬರ 203/2 ಮತ್ತು 203/4 ನೇದ್ದರಲ್ಲಿ ಟ್ರ್ಯಾಕ್ಟರದಿಂದ ಗಳೆ ಹೊಡೆಯುತ್ತಿದ್ದಾಗ ಆರೋಪಿತರೆಲ್ಲಾರು ಸೇರಿ ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಯ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಟ್ರ್ಯಾಕ್ಟರಗೆ ಅಡ್ಡ ಬಂದು ನಿಂತು ಲೇ ಸೂಳೆ ಮಗನೆ ಸಾಬಣ್ಣ ನಮ್ಮ ಹೊಲದಲ್ಲಿ ಯಾಕ ಗಳ್ಯಾ ಹೊಡ್ಯಾಕತಿ ಅಂತಾ ಅವಾಚ್ಯವಾಗಿ ಬೈದಾಗ ಫಿರ್ಯಾದಿಯು ನಾನು ಈ ಹೊಲ ನಿಮ್ಮ ಅಣ್ಣನಾದ ದೊಡ್ಡ ಹುಸೇನಪ್ಪನಿಂದ ಖರೀದಿ ಮಾಡಿನಿ ಅದರಲ್ಲಿ ನೀನು ಕೂಡ ಸಾಕ್ಷಿ ಇದ್ದಿ ಮತ್ತ್ಯಾಕ ನಮ್ಮ ಹೊಲದಾಗ ಬಂದು ಗಳ್ಯಾ ಹರಕಾತ್ ಮಾಡಾಕತ್ತಿ ಅಂತಾ ಹೇಳಿದಕ್ಕೆ. ಆರೋಪಿತರು ಫೀರ್ಯಾದಿಯ ಎದೆಯ ಮೇಲೆ ಬಂದು ನಡುವೆ ಮಾಡಿಕೊಂಡು ಕೈಯಿಂದ ದೊಬ್ಬ್ಯಾಡಿ ನೂಕಿ ಕೊಟ್ಟು ಲೇ ಸೂಳೆ ಮಗನೆ ನೀನು ಕೊಟ್ಟ ರೊಕ್ಕ ನಿನ್ನ ಮಾರಿಮ್ಯಾಗ ಬಿಸಾಕತೀನಿ ಲೇ ಅಂತಾ ಅವಾಚ್ಯವಾಗಿ ಬೈದು, ಲೇ ಸೂಳೆ ಮಗನೆ ನಮ್ಮ ಹೊಲದಾಗ ಗಳ್ಯಾ ಕಟ್ಟಿದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿಯು ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ: 113/2020 ಕಲಂ:143, 147, 323, 447, 504, 506 ಸಂ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.



ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 16/2020 ಕಲಂ. 107 ಸಿಆರ್ಪಿಸಿ  : ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೆನೆಂದರೆ ಇಂದು ದಿನಾಂಕ: 22/06/2020 ರಂದು ಮಧ್ಯಾಹ್ನ ಸುಮಾರಿಗೆ ಠಾಣೆಯ ಸಿಬ್ಬಂಧಿಯಾದ ಶ್ರೀ ಮನೋಹರ ಹೆಚ್ಸಿ-105 ರವರನ್ನು ಸಂಗಡ ಕರೆದುಕೊಂಡು ಪೆಟ್ರೋಲಿಂಗ ಕುರಿತು ರಂಗಮಪೇಟ್, ದಿವಳಗುಡ್ಡ, ಹಸನಾಪುರ, ವೆಂಕಟಪ್ಪ ನಾಯಕ್ ಸರ್ಕಲ್ ಮತ್ತು ತಿಮ್ಮಾಪುರ ಏರಿಯಾಕ್ಕೆ 4 ಪಿ.ಎಂ ಕ್ಕೆ ಬೇಟಿ ನಿಡಿದಾಗ ತಿಳಿದು ಬಂದ ಮಾಹಿತಿ ಏನೆಂದರೆ ಗ್ರಾಮದ ವಡ್ಡರ ಜನಾಂಗದವರ ನಡುವೆ ದಿನಾಂಕ:09/06/2020 ರಂದು 4:30 ಪಿ.ಎಂ ಸುಮಾರಿಗೆ ಹಳೇ ವೈಶಮ್ಯದಿಂದ ಒಬ್ಬರಿಗೊಬ್ಬರು ಗುಂಪು ಕಟ್ಟಿಕೊಂಡು ಜಗಳ ಮಾಡಿಕೊಂಡು ಎರಡು ಪಾಟರ್ಿಗಳ ಮೇಲೆ ಗುನ್ನೆ ಪ್ರತಿಗುನ್ನೆ ಜರಗಿದ್ದು ಅಂದಿನಿಂದ ಎರಡು ಪಾಟರ್ಿಯವರು ತಮ್ಮ ತಮ್ಮಲ್ಲಿ ವೈಮನಸ್ಸು ಮಾಡಿಕೊಂಡು ಒಂದು ಕೈ ನೊಡೆ ಬಿಡೋಣ ಅಂತಾ ಊರಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದು ಸದರಿಯವರನ್ನು ಹೀಗೆ ಬಿಟ್ಟರೆ ಇಂದಿಲ್ಲ ನಾಳೆ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟುಮಾಡುವ ಸಾಧ್ಯತೆ ಇರುವ ಬಗ್ಗೆ ಕಂಡು ಬಂದಿದ್ದರಿಂದ  ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮರಳಿ ಠಾಣೆಗೆ ಬಂದು ಎರಡು ಪಾಟರ್ಿಯವರ ವಿರುದ್ಧ ಕಲಂ:107 ಸಿಆರ್ಪಿಸಿ ನೇದ್ದರಂತೆ ಕ್ರಮ ಜರುಗಿಸಿದ್ದು ಇರುತ್ತದೆ



ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 06/2020 ಕಲಂ:110 (ಇ ಮತ್ತು ಜಿ) ಸಿಆರ್ಪಿಸಿ :        ಇಂದು ದಿನಾಂಕ: 22/06/2020 ರಂದು ನಾನು ಗೋಗಿ ಪೇಠ ಗ್ರಾಮದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಗೋಗಿ ಪೇಠ ಗ್ರಾಮದ ಬಸ್ ನಿಲ್ದಾಣ ಹತ್ತಿರ ರೋಡಿನಲ್ಲಿ, ಸಾರ್ವಜನಿಕ ರಸ್ತೆಯ ಮೇಲೆ 04.30 ಪಿ.ಎಂ ಸುಮಾರಿಗೆ ಒಬ್ಬ ವ್ಯಕ್ತಿ ಹೊಗಿ ಬರುವ ಜನರೊಂದಿಗೆ ಅಸಬ್ಯ ರೀತಿಯಿಂದ ವರ್ತನೆ ಮಾಡುತ್ತಾ ಹೆಣ್ಣು ಮಕ್ಕಳಿಗೆ ಬೈಯುತ್ತಾ, ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಹೋಗಿ ಬರುವ ಜನರಿಗೆ ಹೇದರಿಸುವದು ಬೇದರಿಸುವದು ಮಾಡವದನ್ನು ಕಂಡು ಸದರಿಯವನನ್ನು ಹೀಗೆ ಬಿಟ್ಟರೆ ಸಾರ್ವಜನಿಕರೊಂದಿಗೆ ತಕರಾರು ಮಾಡಿ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗಉಂಟು ಮಾಡುವ ಸಂಬವ ಹೆಚ್ಚಾಗಿ ಕಂಡು ಬಂದಿದ್ದರಿಂದ ಸದರಿಯವರನ್ನು 04.35 ಪಿಎಂಕ್ಕೆ ದಸ್ತಗಿರಿ ಮಾಡಿಕೊಂಡು 04.55 ಪಿಎಂ.ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗೃತ ಕ್ರಮವಾಗಿ ಗೋಗಿ ಪೊಲೀಸ್ ಠಾಣೆಯ ಪಿ.ಎ.ಆರ್ ನಂ:06/2020 ಕಲಂ, 110 (ಇ) (ಜಿ)  ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾಕ್ರಮ ಜರುಗಿಸಿದ್ದು ಇರುತ್ತದೆ


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 05/2020 ಕಲಂ:110 (ಇ ಮತ್ತು ಜಿ) ಸಿಆರ್ಪಿಸಿ : ಇಂದು ದಿನಾಂಕ: 22/06/2020 ರಂದು ನಾನು ಗೋಗಿ ಪೇಠ ಗ್ರಾಮದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಗೋಗಿ ಪೇಠ ಗ್ರಾಮದ ಬಸ್ ನಿಲ್ದಾಣ ಹತ್ತಿರ ರೋಡಿನಲ್ಲಿ, ಸಾರ್ವಜನಿಕ ರಸ್ತೆಯ ಮೇಲೆ 03.30 ಪಿ.ಎಂ ಸುಮಾರಿಗೆ ಇಬ್ಬರು ವ್ಯಕ್ತಿಗಳು ಹೊಗಿ ಬರುವ ಜನರೊಂದಿಗೆ ಅಸಬ್ಯ ರೀತಿಯಿಂದ ವರ್ತನೆ ಮಾಡುತ್ತಾ ಹೆಣ್ಣು ಮಕ್ಕಳಿಗೆ ಬೈಯುತ್ತಾ, ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಹೋಗಿ ಬರುವ ಜನರಿಗೆ ಹೇದರಿಸುವದು ಬೇದರಿಸುವದು ಮಾಡವದನ್ನು ಕಂಡು ಸದರಿಯವನನ್ನು ಹೀಗೆ ಬಿಟ್ಟರೆ ಸಾರ್ವಜನಿಕರೊಂದಿಗೆ ತಕರಾರು ಮಾಡಿ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗಉಂಟು ಮಾಡುವ ಸಂಬವ ಹೆಚ್ಚಾಗಿ ಕಂಡು ಬಂದಿದ್ದರಿಂದ ಸದರಿಯವರನ್ನು 03.45 ಪಿಎಂಕ್ಕೆ ದಸ್ತಗಿರಿ ಮಾಡಿಕೊಂಡು 04.15 ಪಿಎಂ.ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗೃತ ಕ್ರಮವಾಗಿ ಗೋಗಿ ಪೊಲೀಸ್ ಠಾಣೆಯ ಪಿ.ಎ.ಆರ್ ನಂ:05/2020 ಕಲಂ, 110 (ಇ) (ಜಿ)  ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾಕ್ರಮ ಜರುಗಿಸಿದ್ದು ಇರುತ್ತದೆ



ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:-. 45/2020 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ: 22/06/2020 ರಂದು 6:30 ಪಿ.ಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ 22/06/2020 ರಂದು 2:30 ಪಿ.ಎಂ ಕ್ಕೆ ಪೊಲೀಸ್ ಠಾಣೆಯಲ್ಲಿದ್ದಾಗ ನಾರಾಯಣಪೂರ ಗ್ರಾಮದಲ್ಲಿನ ಶ್ರೀ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 45/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. 
      ನಂತರ ಮಾನ್ಯ ಪಿಎಸ್ಐ ಸಾಹೇಬರು 8:30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಆರೋಪಿ ಹಾಗೂ ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 1440/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. 

ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ಗದ್ದೆಪ್ಪ ತಂದೆ ಹನಮಪ್ಪ ಕ್ಯಾದಿಗೇರ ವ|| 23ವರ್ಷ ಜಾ|| ಹಿಂದೂ ಕುರುಬರ ಉ|| ಕುರಿಕಾಯುವುದು ಸಾ|| ನಾರಾಯಣಪೂರ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!