ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/06/2020

By blogger on ಶನಿವಾರ, ಜೂನ್ 20, 2020







                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/06/2020 
                                                                                                               
ಯಾದಗಿರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ: 78/2020 ಕಲಂ ಮನುಷ್ಯ ಕಾಣೆಯಾದ ಬಗ್ಗೆ : ಇಂದು ದಿನಾಂಕ 20-06-2020 ರಂದು 5 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಅನುಷಾಬಾಯಿ ಗಂಡ ರಾಮು ಪವಾರ ವಯಾ:38 ಉ: ಕೂಲಿ ಜಾ: ಲಂಬಾಣಿ ಸಾ:ಉಮಲಾನಾಯಕ ತಾಂಡಾ ಮುದ್ನಾಳ ತಾ:ಜಿ ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ. ನನ್ನ ಗಂಡನು ಗೌಂಡಿ ಕೆಲಸ ಮಾಡುತ್ತಿದ್ದನು ಈಗ ಹೋದ ಮಾರ್ಚ ತಿಂಗಳ ಮೊದಲ ವಾರದಲ್ಲಿ ನನ್ನ ಗಂಡನಿಗೆ ಲಕವಾ ಹೊಡೆದಿದ್ದು ಅವನು ಬಹಳ ಅನಾರೋಗ್ಯಪಿಡಿತನಾದಾಗ ನಾವು ಆತನಿಗೆ ಸುಮಾರು 15 ದಿವಗಳ ಕಾಲ ಖಾಸಗಿ ಔಷಧಿಯನ್ನು ಕೊಡಿಸಿದ್ದು  ಗುಣಮುಖನಾಗಿದ್ದನು. ಆದರೂ ಆತನ ದೇಹದ ಬಲಭಾಗ ಕೈ ಕಾಲಿಗೆ ಲಕವಾದ ಪರಿಣಾಮವಾಗಿದ್ದರಿಂದ ಅವನು ಸ್ವಲ್ಪ ಕುಂಟುತ್ತಾ ನಡೆಯುತ್ತಿದ್ದನು. ಅವನು ಸ್ಪಷ್ಟವಾಗಿ ಮಾತಾಡುತ್ತಿರ ಲಿಲ್ಲಾ. ನನ್ನ ಗಂಡನು ಆಗಾಗ ನಮಗೆ ಹೇಳದೇ ಕೇಳದೇ ಆ ಕಡೆ ಈ ಕಡೆ ತಿರುಗಾಡುತ್ತಿದ್ದು ನಾನು ನೋಡಿ ನಮ್ಮ ಅಥವಾ ಅಣ್ಣತಮಕಿಯವರು ನೋಡಿ ಮತ್ತೆ ಆತನಿಗೆ ಮನೆಗೆ ಕರೆದುಕೊಂಡು ಬರುತ್ತಿದ್ದರು. 
    ಹೀಗಿದ್ದು ದಿನಾಂಕ 20-03-2020 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಮನೆಯಲ್ಲಿ ನಾನು ನನ್ನ ಗಂಡ ರಾಮು ಹಾಗೂ ನನ್ನ ಅತ್ತೆಯಾದ ಗಂಗಿಬಾಯಿ ಮತ್ತು ಮಾವನಾದ ಖೀರು ಹಾಗೂ ಮಗನಾದ ಸಾಗರ ಎಲ್ಲರೂ ಇದ್ದೆವು ಅದೇ ವೇಳೆಯಲ್ಲಿ ನನ್ನ ಗಂಡನು ಮನೆಯಿಂದ ಹೋರಗಡೆ ಹೋದನು. ಅವನು ತಾಂಡಾದಲ್ಲಿಯೇ ತಿರುಗಾಡಿ ಬರಬಹುದು ಅಂತಾ ತಿಳಿದು ನಮ್ಮಷ್ಟ್ಟಕ್ಕೆ ನಾವು ನಮ್ಮ ಮನೆಯಲ್ಲಿ ಕೆಲಸದಲ್ಲಿ ತೊಡಗಿದೇವು. ರಾತ್ರಿಯಾದರೂ ನನ್ನ ಗಂಡನು ಮನೆಗೆ ಬರದ ಕಾರಣ ಅವನಿಗೆ ನಾವು ಮನೆಯವರೆಲ್ಲರೂ ಹಾಗೂ ನಮ್ಮ ಸಂಬಂಧಿಯಾದ ಭೋಜು ತಂದೆ ರೇವು ರಾಠೋಡ ಎಲ್ಲರೂ ಕೂಡಿಕೊಂಡು ನಮ್ಮ ತಾಂಡಾದಲ್ಲಿ ಹುಡುಕಾಡಲಾಗಿ ನನ್ನ ಗಂಡನು ಸಿಗಲಿಲ್ಲಾ. ಮತ್ತು ಗಾಬರಿಗೊಂಡು ನಮ್ಮ ಸಂಬಂಧಿಕರ ತಾಂಡಾಗಳಿಗೆ ಹೋಗಿ ಅಲ್ಲಿಯೂ ಕೂಡಾ ವಿಚಾರಿಸಲಾಗಿ ನನ್ನ ಗಂಡ ಪತ್ತೆಯಾಗಲಿಲ್ಲಾ. ಅದರಂತೆ ಯಾದಗಿರಿ ಸೈದಾಪೂರ ರಾಯಚೂರು ವಾಡಿ ಕಲಬುರಗಿ ಮತ್ತು ಇತರೇ ಕಡೆಗಳಿಗೆ ಹೋಗಿ ಅಲ್ಲಿಯ ರೇಲ್ವೇ ಸ್ಟೇಷನ್, ಬಸ್ ನಿಲ್ದಾಣ, ಹಾಗೂ ಎಲ್ಲಾ ಕಡೆಗಳಲ್ಲಿ ತಿರುಗಾಡಿ ಹುಡಿಕಾಡಿದರೂ ನನ್ನ ಗಂಡನ ಸುಳಿವು ಸಿಕ್ಕಿಲ್ಲಾ. ನನ್ನ ಗಂಡನು ಕಾಣೆಯಾದಾಗಿನಿಂದ ಇಲ್ಲಿಯವರೆಗೆ ನಾನು ನಮ್ಮ ಮನೆಯವರು ಹಾಗೂ ನಮ್ಮ ಸಂಬಂಧಿಕರು ಸೇರಿಕೊಂಡು ಹುಡುಕಾಡಿದರೂ ನನ್ನ ಗಂಡ ಸಿಕ್ಕಿರುವುದಿಲ್ಲಾ. ನನ್ನ ಗಂಡನು ಕನ್ನಡ ಮತ್ತು ಹಿಂದಿಯಲ್ಲಿ ಮಾತನಾಡುತ್ತಾನೆ. ನನ್ನ ಗಂಡನ ಚಹರೆ ಪಟ್ಟಿ ಈ ರೀತಿಯಾಗಿ ಇರುತ್ತದೆ. ಗೋಧಿ ಬಣ್ಣ, ನೀಟಾದ ಉದ್ದ ಮೂಗು, ತೆಳ್ಳನೆ ಮೈಕಟ್ಟು ಇದ್ದು ಅವನ ದೇಹದ ಭಲಬಾಗಕ್ಕೆ ಲಕವಾ ಹೊಡೆದಿದ್ದರಿಂದ ಕಾಲು ಸ್ವಲ್ಪ ಕುಂಟುತ್ತಾ ನಡೆಯುತ್ತಾನೆ. ನನ್ನ ಗಂಡನು ಮನೆಯಿಂದ ಹೋಗುವಾಗ ಮೈಮೇಲೆ ಪಿಂಕ ಬಣ್ಣದ ಭೂಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ ತೊಟ್ಟಿದ್ದು ಇರುತ್ತದೆ.  ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಂಡು ಕಾಣೆಯಾದ ನನ್ನ ಗಂಡನನ್ನು ಪತ್ತೆ ಮಾಡಬೇಕು ಅಂತಾ ನೀಡಿದ ಹೇಳಿಕೆ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ:78/2020 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದು ಅದೆ.  



ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 110/2020 ಕಲಂ 279, 337, 338 ಐಪಿಸಿ : ನಿನ್ನೆ  ದಿನಾಂಕ 19.06.2020 ರಂದು ಸಂಜೆ 4:30 ಗಂಟೆಗೆ ಫಿರ್ಯಾದಿಯು ತನ್ನ ಮನೆಗೆ ಕಿರಾಣಿ ಸಾಮಾನುಗಳನ್ನು ತರುವ ಸಲುವಾಗಿ ಗುರುಮಠಕಲ್ ಪಟ್ಟಣದ ರಾಜು ಎಸ್.ಟಿ.ಡಿಯ ಮುಂದೆ ರೊಡಿನ ಪಕ್ಕದಲ್ಲಿ ಹೋಗುತ್ತಿದ್ದಾಗ ಆರೋಪಿತನು ಮೋಟರು ಸೈಕಲ್ ನಂಬರ ಕೆಎ-32-ಇ.ಕ್ಸ್-5593 ನೇದ್ದನ್ನನು ಅತಿವೇಗ ಮತ್ತು ಅಲಕ್ಷತನದಿಂದ ಅಂಕು-ಡೊಂಕಾಗಿ ಚಲಾಯಿಸಿಕೊಂಡು ಬಂದು ನಿಯಂತ್ರಿಸಲು ಸಾಧ್ಯವಾಗದೇ ಫಿರ್ಯಾಧಿಗೆ ಡಿಕ್ಕಿಪಡಿಸಿ ಮುಂದೆ ಹೋಗಿ ತಾನೂ ಕೂಡ ಗಾಯಗೊಂಡಿದ್ದು ನಂತರ ಫಿರ್ಯಾದಿಯು ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ಖಾಸಗಿ ಆಸ್ಪತ್ರಯಲಿ ತೋರಿಸಿಕೊಂಡು ನಂತರ ಇಂದು ದಿನಾಂಕ 20.06.2020 ರಂದು ಖುದ್ದಾಗಿ ಠಾಣೆಗೆ ಬಂದು ದೂರು ನೀಡಿದ್ದು ಸದರಿ ಫಿರ್ಯಾಧಿಯ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 110/2020 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 111/2020 ಕಲಂ 379 ಐಪಿಸಿ : ಇಂದು ದಿನಾಂಕ 20.06.2020 ರಂದು ಸಮಯ ರಾತ್ರಿ 10:00 ಗಂಟೆಗೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ಟ್ರ್ಯಾಕ್ಟರ ನಂಬರ ಟಿ.ಎಸ್.-02-ಯು.ಸಿ-4990 ನೇದ್ದಕ್ಕೆ ಅಳವಡಿಸಿದ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರನ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 111/2020 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 73/2020 ಕಲಂ: 498(ಎ), 504, 324, 323, 506 ಸಂ 149 ಐಪಿಸಿ : ಇಂದು ದಿನಾಂಕ: 20/06/2020 ರಂದು 5-45 ಪಿಎಮಕ್ಕೆ ಶ್ರೀ ಅಯ್ಯಪ್ಪ ತಂದೆ ಚಂದಪ್ಪ ಕಮತಗಿ ಸಾ:ದೇವಿಕೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ಅಕ್ಕ ಶಾಂತಮ್ಮ ಇವಳಿಗೆ ಸುಮಾರು 15 ವರ್ಷಗಳ ಹಿಂದೆ ಕಾಡಂಗೇರಾ ಗ್ರಾಮದ ದೇವಪ್ಪ ಎಂಬುವನಿಗೆ ಕೊಟ್ಟ ಲಗ್ನ ಮಾಡಿದ್ದು, ಕೆಲ ದಿನ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದು, ನಂತರ ಅವಳ ಗಂಡ, ಅತ್ತೆ ಮತ್ತು ಭಾವ ಮೈದುನದವರು ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡುತ್ತಾ ಬಂದು ದಿನಾಂಕ: 14/06/2020 ರಂದು ಬೆಳಗ್ಗೆ 6 ಗಂಟೆಗೆ ನಮ್ಮ ಶಾಂತಮ್ಮಳಿಗೆ ಅವಳ ಗಂಡನಾದ 1) ದೇವಪ್ಪ ತಂದೆ ಸಿದ್ದಪ್ಪ ಆಡಿನವರ, ಅತ್ತೆಯಾದ 2) ನಾಗಮ್ಮ ಗಂಡ ಸಿದ್ದಪ್ಪ ಆಡಿನವರ, ಭಾವನಾದ 3) ನರಸಪ್ಪ ತಂದೆ ಸಿದ್ದಪ್ಪ ಆಡಿನೋರ, ಮೈದುನದವರಾದ 4) ಅಯ್ಯಪ್ಪ ತಂದೆ ಸಿದ್ದಪ್ಪ ಆಡಿನೋರ, 5) ಮಲ್ಲಪ್ಪ ತಂದೆ ಸಿದ್ದಪ್ಪ ಆಡಿನೋರ, 6) ನಾಗಪ್ಪ ತಂದೆ ಸಿದ್ದಪ್ಪ ಆಡಿನೋರ, ನೆಗಣ್ಣಿಯಾದ 7) ಬಸಮ್ಮ ಗಂಡ ಅಯ್ಯಪ್ಪ ಆಡಿನೋರ, ಗಂಡನ ಅಣ್ಣತಮ್ಮಕೀಯವರಾದ 8) ದುರ್ಗಪ್ಪ ತಂದೆ ಸಾಬಣ್ಣ ಡುಗನೋರ, 9) ನಿಂಗಪ್ಪ ಗಲ್ಲಬಕ್ಕಿ ಮತ್ತು ಇತರರು ಶಾಂತಮ್ಮಳಿಗೆ ಬಾಯಿಗೆ ಬಂದಂಗೆ ಅವಾಚ್ಯ ಬೈದು ಈ ಸೂಳೆ ಸಂಸಾರ ಮಾಡಲ್ಲ ಇವಳಿಗೆ ಹೊಡೆದು ಖಲಾಸ ಮಾಡಿರಿ ಎಂದು ಬೈದು ಅಯ್ಯಪ್ಪನು ಕಟ್ಟಿಗೆಯಿಂದ ಎರಡು ತೋಳುಗಳಿಗೆ, ಸೊಂಟಕ್ಕೆ ಹೊಡೆದು ಒಳಪೆಟ್ಟು ಮಾಡಿದ್ದು, ಗಂಡ ದೇವಪ್ಪನು ಕೂದಲೂ ಹಿಡಿದು ಕೈಯಿಂದ ಹೊಡೆದಿದ್ದು, ಅತ್ತೆ ಮತ್ತು ನೆಗೆಣಿ ಇಬ್ಬರೂ ಹೊಟ್ಟೆ ಮೇಲೆ ಒದ್ದಿರುತ್ತಾರೆ. ಆಗ ಜಗಳವನ್ನು ಹಣಮಂತ ಡುಗಲೊರ ಈತನು ಬಿಡಿಸಿರುತ್ತಾನೆ. ನಮ್ಮ ಅಕ್ಕ ರಾಯಚೂರು ರೀಮ್ಸ ಬೋಧಕ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಳೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 73/2020 ಕಲಂ: 498(ಎ), 504, 324, 323, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 82/2020 ಕಲಂ 143,147,323,354,504,506 ಸಂಗಡ 149 ಐಪಿಸಿ : ನಿನ್ನೆ ದಿನಾಂಕ: 19/06/2020 ರಂದು ಸಾಯಂಕಾಲ ಫಿಯರ್ಾದಿಯು ಬಹಿದರ್ೆಸೆಗೆ ಹೋದಾಗ ಆರೋಪಿತನ ತಂಗಿಗೆ ಹಳ್ಳಿನಿಂದ ಹೊಡೆದಿದ್ದಾನೆ ಅಂತಾ ವಿನಾಕಾರಣ ಆಪಾದನೆ ಮಾಡಿ ತಕರಾರು ಮಾಡಿಕೊಂಡಿದ್ದು ಅದೇ ವಿಷಯದಲ್ಲಿ ಇಂದು ದಿನಾಂಕ:20/06/2020 ರಂದು 9 ಎ.ಎಮ್. ಸುಮಾರಿಗೆ ಆರೋಪಿತರು ಗುಂಪುಕಟ್ಟಿಕೊಂಡು ಫಿಯರ್ಾದಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿದ್ದು ಆಗ ಫಿಯರ್ಾದಿಯ ತಾಯಿ ಶಾಂತಿಬಾಯಿ, ತಂಗಿ ಸರಸ್ವತಿ ಇವರು ಜಗಳ ಬಿಡಿಸಲು ಹೋದಾಗ ಅವರಿಗೂ ಸಹ ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ದೂರು.



ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 83/2020 ಕಲಂ 143,147,148,323,324,354,504,506 ಸಂಗಡ 149 ಐಪಿಸಿ : ನಿನ್ನೆ ದಿನಾಂಕ: 19/06/2020 ರಂದು ಸಾಯಂಕಾಲ ಹೆಣ್ಣು ಮಕ್ಕಳು ಬಹಿದರ್ೆಸೆಗೆ ಹೋಗುವ ಕಡೆಗೆ ಆರೋಪಿತರು ಸಹ ಬಹಿದರ್ೆಸೆಗೆ ಹೊರಟಾಗ ಫಿಯರ್ಾದಿಯು ಆ ಕಡೆಗೆ ಬಹಿದರ್ೆಸೆಗೆ ಹೋಗದಂತೆ ಹೇಳಿದ್ದರಿಂದ ತಕರಾರು ಮಾಡಿಕೊಂಡಿದ್ದು ಅದೇ ವಿಷಯದಲ್ಲಿ ಇಂದು ದಿನಾಂಕ:20/06/2020 ರಂದು 9.30 ಎ.ಎಮ್. ಸುಮಾರಿಗೆ ಆರೋಪಿತರು ಗುಂಪುಕಟ್ಟಿಕೊಂಡು ಬಂದು ಫಿಯರ್ಾದಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಕಲ್ಲು ಕಟ್ಟಿಗೆಯಿಂದ ಹೊಡೆಬಡೆ ಮಾಡಿದ್ದು ಆಗ ಫಿಯರ್ಾದಿಯ ಹೆಂಡತಿ ಅಂಬಿಕ ಇವಳು ಜಗಳ ಬಿಡಿಸಲು ಹೋದಾಗ ಅವಳಿಗೂ ಸಹ ಕೈ ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ದೂರು.



ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 43/2020 ಕಲಂ: 323, 324, 354, 504, 506, ಸಂಗಡ 34  ಐಪಿಸಿ : ಇಂದು ದಿನಾಂಕ 20/06/2020 ರಂದು ಯಲ್ಲಪ್ಪ ಹೆಚ್.ಸಿ-158 ರವರು ಬಾಗಲಕೋಟ ಕೆರೂಡಿ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಪಿಯರ್ಾದಿ ಅನ್ನಪೂರ್ಣ ಈತಳ ಪಿಯರ್ಾದಿ ಅಜರ್ಿಯನ್ನು ಪಡೆದುಕೊಂಡು 6:30 ಪಿ.ಎಂ.ಕ್ಕೆ ಠಾಣೆಗೆ ತಂದು ಹಾಜರು ಪಡಿಸಿದ್ದು ಪಿಯರ್ಾದಿಯ ಅಜರ್ಿಯ ಸಾರಾಂಶವೆನೆಂದರೆ ನಮ್ಮ ಗ್ರಾಮದಲ್ಲಿ ನಮ್ಮ ಮನೆ ಮತ್ತು ದಸ್ತಪ್ಪ ರವರ ಮನೆಗಳು ಅಕ್ಕಪಕ್ಕದಲ್ಲಿ ಇದ್ದು ದಸ್ತಪ್ಪ ಮತ್ತು ನಮ್ಮ ಹೊಲಗಳು ಅಕ್ಕಪಕ್ಕದಲ್ಲಿ ಇರುತ್ತವೆ. ನಿನ್ನೆ ದಿನಾಂಕ:19/06/2020 ರಂದು ನಮ್ಮ ಹೊಲವನ್ನು ಬಿತ್ತಲು ನಮ್ಮ ಹೊಲಕ್ಕೆ ನಮ್ಮೂರ ಹಣಮಂತ್ರಾಯ ತಂದೆ ಮಲ್ಲಪ್ಪ  ನಾಗರಬಟ್ಟದರ ಹಾಗೂ ಹುಲಗಪ್ಪ ತಂದೆ ಬಸಣ್ಣ ಎಮ್ಮೇರ ರವರ ಗಳೆಗಳನ್ನು ಕರೆದುಕೊಂಡು ಹೋಗಿ ನಮ್ಮ ಹೊಲವನ್ನು ಬಿತ್ತಿದ್ದು, ಮದ್ಯಾಹ್ನ ಹೊತ್ತಿನಲ್ಲಿ ಅವರು ತಮ್ಮ ಗಳೆಗಳನ್ನು ಕೊಳ್ಳಹರಿದು ದಸ್ತಪ್ಪರವರ ಹೊಲದಲ್ಲಿ ಇರುವ ಬಾವಿಗೆ ನೀರುಕುಡಿಸಲು ಹೋಗಿದ್ದು ಆಗ ದಸ್ತಪ್ಪನ ಹೆಂಡತಿ ಶಂಕ್ರಮ್ಮ ರವರು ಹಣಮಂತ್ರಾಯನಿಗೆ ಮತ್ತು ಹುಲಗಪ್ಪನಿಗೆ ನಮ್ಮ ಹೊಲದಲ್ಲಿ ಯಾಕಬಂದಿರಿ ಇಲ್ಲಿ ನಿಮಗೆ ದಾರಿಇರುವದಿಲ್ಲ ಅಂತಾ ಅಂದು ಅವರಿಗೆ ಬೈದು ಕಳುಹಿಸಿದ್ದರು. ಅವರು ಮರಳಿ ಬಂದು ನಮ್ಮ ಹೊಲವನ್ನು ಬಿತ್ತಿ ಮನೆಗೆ ಬಂದೆವು. ನಂತರ ರಾತ್ರಿ 8:30 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ  ನಾನು ಹಾಗೂ ನನ್ನ ಹಾಗೂ ನನ್ನ ಮಗ ಭೀಮಣ್ಣ ರವರು ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ಹಣಮಂತ್ರಾಯ ಮತ್ತು ಹುಲಗಪ್ಪ ರವರು ನಮ್ಮ ಮನೆಯ ಮುಂದೆ ಬಂದಾಗ ನನ್ನ ಮಗ ಬೀಮಣ್ಣನು ಹಣಮಂತ್ರಾಯನಿಗೆ ಮದ್ಯಾಹ್ನ ಹೊತ್ತಿನಲ್ಲಿ ದಸ್ತಪ್ಪನ ಹೊಲಕ್ಕೆ ಎತ್ತುಗಳನ್ನು ನೀರುಕುಡಿಸಲು ಯಾಕೆ ಹೋಗಿದ್ದಿ ಅವರಿಗೆ ಮತ್ತು ನಮಗೆ ಮೊದಲೇ ಸರಿ ಇರುವದಿಲ್ಲ ನೀವು ಅವರ ಹೊಲಕ್ಕೆ ಯಾಕೆ ಎತ್ತುಗಳಿಗೆ ನೀರು ಕುಡಿಸಲು ಹೋಗಿದ್ದಿರಿ ಅಂತಾ ಅಂದನು, ಆಗ ದಸ್ತಪ್ಪನ ಮನೆಯ ಮುಂದೆ ದಸ್ತಪ್ಪ ಹಾಗೂ ಅವನ ಹೆಂಡತಿ ಶಂಕ್ರಮ್ಮ ರವರು ಇದ್ದರು. ಇದನ್ನು ಕೇಳಿದ ದಸ್ತಪನು ಬೋಸುಡಿ ಮಗನ್ಯಾ ಬೀಮ್ಯಾ ನಮ್ಮ ಹೊಲದಲ್ಲಿ ಬೇಕು ಅಂತಲೇ ನೀರು ಕುಡಿಸಲು ಕಳುಹಿಸಿ ಈಗ ಮತ್ತೆ ಮ್ಯಾಲ ಸಮಾಧಾನದ ಮಾತು ಆಡುತ್ತಿಯಾ ಅಂತಾ ಅವಾಚ್ಯವಾಗಿ ಬೈಯಹತ್ತಿದನು ಆಗ ನನ್ನ ಮಗ ಭೀಮಣ್ಣನು ನಾನು ಯಾಕೆ ಬೇಕಂತಲೇ ಕಳುಹಿಸಲಿ ಅಂತಾ ಅಂದಾಗ ದಸ್ತಪ್ಪನು ಮತ್ತೆ ನಮಗೆ ಎದರು ಮಾತನಾಡುತ್ತಿಯಾ ಬೋಸುಡಿ ಮಗನೇ ಅಂತಾ ಅಂದು ನನ್ನ ಮಗ ಭೀಮಣ್ಣನೊಂದಿಗೆ ಜಗಳ ತಗೆದು ಕೈಯಿಂದ ಕಪಾಳಕ್ಕೆ ಹೊಡೆದು ಕಲ್ಲಿನಿಂದ ನನ್ನ ಮಗನ ತಲೆಗೆ ಹೊಡೆದನು ಇದರಿಂದ ನನ್ನ ಮಗನ ತಲೆಯಲ್ಲಿ ರಕ್ತ ಬರಹತ್ತಿದ್ದು ಇದನ್ನು ನೋಡಿ ನಾನು ಬಿಡಿಸಿಕೊಳ್ಳಲು ಹೋದಾಗ ದಸ್ತಪ್ಪನು ಬೋಸುಡಿ ಸೂಳಿ ಬಿಡಿಸಿಕೊಳ್ಳಲು ಬಂದಿದ್ದಿಯಾ ಅಂತಾ ಅಂದು ನನ್ನ ಸೀರೆ ಹಿಡಿದು ಎಳೆದಾಡಿ ನನಗೆ ಅವಮಾನ ಮಾಡಿ ನನಗೆ ಕಾಲಿನಿಂದ ಒದ್ದು ಕೆಳಗೆ ಕೆಡುವಿ ಅಲ್ಲಿಯೇ ಬಿದ್ದಿದ್ದ ಮತ್ತೊಂದು ಕಲ್ಲಿನಿಂದ ನನ್ನ ತಲೆಯ ಮೇಲೆ ಹೊಡೆದಿದ್ದು ಇದರಿಂದ  ನನ್ನ ತಲೆಗೆ ಒಳಪೆಟ್ಟಾಗಿ ನನ್ನ ತಲೆಯಲ್ಲಿ ಬಾವು ಬಂದಿರುತ್ತದೆ. ಅಲ್ಲಿಯೇ ಇದ್ದ ದಸ್ತಪ್ಪನ ಹೆಂಡತಿ ಶಂಕ್ರಮ್ಮ ಇವಳು ಬಂದು ನನಗೆ ಕೈಯಿಂದ ಹೊಡೆದಳು ಆಗ ನಾನು ಮತ್ತು ನನ್ನ ಮಗ ಭೀಮಣ್ಣ ರವರು ಚೀರಾಡಹತ್ತಿದಾಗ ಅಲ್ಲಿಯೇ ಇದ್ದ ಹಣಮಂತ್ರಾಯ ತಂದೆ ಮಲ್ಲಪ್ಪ ನಾಗರಬಟ್ಟದರ, ಹುಲಗಪ್ಪ ತಂದೆ ಬಸಣ್ಣ ಎಮ್ಮೇರ, ರವರು ಜಗಳ ಬಿಡಿಸಿದರು ಆಗ ದಸ್ತಪ್ಪ ಮತ್ತು ಶಂಕ್ರಮ್ಮ ರವರು ಬೋಸುಡಿ ಮಕ್ಕಳೇ ಇವತ್ತು ಇವರು ಬಂದು ಬಿಡಿಸಿಕೊಂಡರು ಅಂತಾ ನಿಮ್ಮ ಜೀವ ಉಳದಿದೆ ಇಲದಿದ್ದರೆ ನಿಮ್ಮನ್ನು ಇವತ್ತು ಇಲ್ಲಿಯೇ ಖಲಾಸ ಮಾಡಿ ಬಿಡುತ್ತಿದ್ದೇವು ಅಂತಾ ಜೀವದ ಬೆದರಿಕೆ ಹಾಕಿಹೋದರು. ನಂತರ ನಾನು ಹಾಗೂ ನನ್ನ ಮಗ ಭೀಮಣ್ಣನು ನಿನ್ನೆ ದಿನ ರಾತ್ರಿ ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತುಹೋಗಿದ್ದು ಕೊಡೆಕಲ್ಲ ಡಾಕ್ಟರ ನನಗೆ ಮತ್ತು ನನ್ನ ಮಗನಿಗೆ ಪ್ರಥಮೊಚಾರ ಮಾಡಿ ಹೆಚ್ಚಿನ ಉಪಚಾರ ಕುರಿತು ಬಾಗಲಕೋಟಿ ಕೆರೂಡಿ ಆಸ್ಪತ್ರೆಗೆ ಕಳುಹಿಸಿದು ನಾವು ಇಲ್ಲಿ ಉಪಚಾರ ಪಡೆದುಕೊಳ್ಳುತ್ತಿದ್ದೇವೆ ಕಾರಣ ನಮಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿಜೀವ ಬೆದರಿಕೆ ಹಾಕಿದ ದಸ್ತಪ್ಪ ಹಾಗೂ ಅವನ ಹೆಂಡತಿಯ ಮೇಲೆ ಕೇಸು ಮಾಡಲು ತಮ್ಮ ವಿನಂತಿ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 43/2020 ಕಲಂ,323,324,354,504,506, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 154/2020 ಕಲಂ 379 ಐ.ಪಿ.ಸಿ.  ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994 : ಇಂದು ದಿನಾಂಕ:20/06/2020 ರಂದು 11:30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸುರಪೂರ ಪೊಲೀಸ್ ಠಾಣೆ ಸಾಹೇಬರು ಒಂದು ಮರಳು ತುಂಬಿದ ಟಿಪ್ಪರದೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ಸಾರಾಂಶವೆನೆಂದರೆ, ಇಂದು ದಿನಾಂಕ:20/06/2020 ರಂದು 8 ಎ.ಎಮ್ ಸುಮಾರಿಗೆ ನಾನು ಸಂಗಡ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮಂಜುನಾಥ ಸಿಪಿಸಿ-271, ಶ್ರೀ ದೇವಿಂದ್ರಪ್ಪ ಸಿಪಿಸಿ-184 ರವರೊಂದಿಗೆ ಗಾಂದಿ ಚೌಕದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಒಬ್ಬರು ತಮ್ಮ ಟಿಪ್ಪರದಲ್ಲಿ ಶೆಳ್ಳಗಿ ಸೀಮಾಂತರದ ಕೃಷ್ಣಾ ನದಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ದೇವಾಪುರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಸಂಗಡ ಇದ್ದ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮಂಜುನಾಥ ಸಿಪಿಸಿ-271, ಶ್ರೀ ದೇವಿಂದ್ರಪ್ಪ ಸಿಪಿಸಿ-184 ಹಾಗೂ ಜೀಪ ಚಾಲಕನಾದ ಶ್ರೀ ಶರಣಗೌಡ ಸಿಪಿಸಿ-218 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 50 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 52 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 8:30 ಗಂಟೆಗೆ ಗಾಂದಿ ಚೌಕ ಹತ್ತಿರ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಸಿಬ್ಬಂಧಿಯೊಂದಿಗೆ ನಮ್ಮ ಠಾಣೆಯ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 8:45 ಗಂಟೆಗೆ ಕ್ಕೆ ಗಾಂದಿಚೌಕದಿಂದ ಹೊರಟು ಬೆಳಿಗ್ಗೆ 9:15 ಗಂಟೆಗೆ ದೇವಾಪರ ಕ್ರಾಸ ಹತ್ತಿರ ಹೋಗಿ ನಮ್ಮ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಿಂತುಕೊಂಡೆವು. ಅಂದಾಜ ಬೆಳಿಗ್ಗೆ 9:30 ಗಂಟೆಗೆ ಶಳ್ಳಗಿ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ತಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಸಿಬ್ಬಂಧಿಯವರ ಸಹಾಯದಿಂದ ಸದರಿ ಟಿಪ್ಪರ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಟಿಪ್ಪರ ಚಾಲಕನು ತನ್ನ ಟಿಪ್ಪರ ನಿಲ್ಲಿಸಿ ನಮ್ಮ ಪೊಲೀಸ್ ಜೀಪನ್ನು ನೋಡಿ ಟಿಪ್ಪರ ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದನು. ನಂತರ ನಾನು ಮತ್ತು ಪಂಚರ ಸಮಕ್ಷಮ ಸದರಿ ಟಿಪ್ಪರ ಹತ್ತಿರ ಹೋಗಿ ಪರೀಶಿಲಿಸಿ ನೋಡಲು. ಒಂದು ಭಾರತ ಬೆಂಜ್ ಟಿಪ್ಪರ ನಂ. ಕೆಎ-33 ಎ-9446 ಇದ್ದು ಅದರಲ್ಲಿ 13 ಘನ ಮೀಟರ್ ಮರಳು ಇದ್ದು ಅದರ ಅ.ಕಿ 10,400/- ಆಗುತ್ತದೆ. ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ 9:30 ಎ.ಎಮ್ ದಿಂದ 10:30 ಎ.ಎಮ್ ದವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟಿಪ್ಪರನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕ ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 10,400/- ರೂ.ಗಳ ಕಿಮ್ಮತ್ತಿನ ಅಂದಾಜು 13 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಮರಳು ತುಂಬಿದ ಟಿಪ್ಪರನ್ನು ಒಬ್ಬ ಖಾಸಗಿ ಚಾಲಕನ ಸಹಾಯದಿಂದ ಠಾಣೆಗೆ ಬೆಳಿಗ್ಗೆ 11:30 ಎ.ಎಂ.ಕ್ಕೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ. 154/2020 ಕಲಂ: 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!