ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/06/2020
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 168/2020 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 19/06/2020 ರಂದು ರಾತ್ರಿ 20-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ಕಾಸು-02 ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 19/06/2020 ರಂದು ಸಾಯಂಕಾಲ 17-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರನಗರದ ಗಂಗಾ ನಗರ ಏರಿಯಾದಲ್ಲಿರುವ ಬಲಭೀಮೇಶ್ವರ ಕಟ್ಟೆಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 50/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿಮಾಡಿಕೊಂಡು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಸಾಯಂಕಾಲ 18-00 ಗಂಟೆಗೆ ಅನುಮತಿ ಪಡೆದುಕೊಂಡು, ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಸಾಯಂಕಾಲ 18-25 ಗಂಟೆಗೆ ದಾಳಿ ಮಾಡಿ ಆರೋಪಿ ತಿಪ್ಪಣ್ಣ ತಂದೆ ಮರೆಪ್ಪ ಬಿಜಾಪೂರ ವಯ 36 ವರ್ಷ ಜಾತಿ ಕಬ್ಬಲಿಗ ಉಃ ಮಟಕಾ ಅಂಕಿ ಬರೆದುಕೊಳ್ಳುವದು ಸಾಃ ಗಂಗಾನಗರ ಶಹಾಪೂರ ಈತನಿಂದ ನಗದು ಹಣ 1050=00 ರೂಪಾಯಿ ಮತ್ತು ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು 18-30 ಗಂಟೆಯಿಂದ 19-30 ಗಂಟೆಯ ಅವಧಿಯಲ್ಲ್ಲಿ ಬಿದಿಯ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿರುತ್ತದೆ ಅಂತ ಆರೋಪಿತನ ವಿರುದ್ದ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 168/2020 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ.02/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ19/06/2020 ರಂದು ಮುಂಜಾನೆ 9:30 ಗಂಟೆಯ ಸುಮಾರಿಗೆ ಪಿಯರ್ಾದಿಯ ಮಗ ರಂಗನಾಥ ಈತನು ತಾವು ಕಟ್ಟಿಸುತ್ತಿರುವ ಮನೆಯ ಗೊಡೆಯ ಮೇಲಿನ ಸವರ್ಿಸ್ ವಾಯರ ಜೊತೆಗೆ ಜೈ ವಾಯರನ್ನು ಬಿಚ್ಚಿ ಸುತ್ತತ್ತಾ ತಮ್ಮ ಮನೆಯ ಮುಂದಿನ ಲೈಟಿನ ಕಂಬಕ್ಕೆ ಸುತ್ತುವ ಸಮಯದಲ್ಲಿ ಸವರ್ಿಸ್ ವಾಯರ ಜೊತೆಗೆ ಇರುವ ಜೈ ವಾಯರ ವಿದ್ಯುತ್ ಕಂಬದ ಮೇನ್ ವಾಯರಗೆ ತಗಲು ಮೃತ ರಂಗನಾಥನು ಹಿಡಿದುಕೊಂಡಿರುವ ಜೈ ವಾಯರದಲ್ಲಿ ವಿದ್ಯುತ್ ಪ್ರಸಾರವಾಗಿ ಕರೆಂಟ ಶಾಖಹೊಡೆದಾಗ ಅಲ್ಲಿಯೇ ಇದ್ ಮೃತ ರಂಗನಾಥನ ತಂದೆ ದೇವಪ್ಪ ಈತನು ಅವನನ್ನು ಬಿಡಿಸಿಕೊಳ್ಳಲು ಬಂದಾಗ ದೇವಪ್ಪನಿಗೆ ಕರೇಂಟ ಶಾಖಹೊಡೆದು ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 97/2020 ಕಲಂ:143.147.148.323.324.504.506 ಸಂಗಡ 149 ಐ.ಪಿ.ಸಿ : ಇಂದು ದಿನಾಂಕ 19.06.2020 ರಂದು 12.30 ಪಿಎಮ್ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಬಸಮ್ಮ ಗಂಡ ಹಣಮಂತ್ರಾಯ ಬಡಿಗೇರ ವ|| 45 ವರ್ಷ ಉ|| ಕೂಲಿಕೆಲಸ ಜಾ|| ಪ.ಜಾತಿ(ಹೊಲೆಯ) ಸಾ|| ಕಾಚಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾಧಿ ಅಜರ್ಿ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 18/06/2020 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ನಾನು ನನ್ನ ಮಕ್ಕಳಾದ ಮಲ್ಲಪ್ಪ, ರಾಜು, ನೀಲಮ್ಮ ಎಲ್ಲರೂ ಕೂಡಿ ಮೈಲಾರಿ ಗಂಡ ಹುಲಿಗೆಪ್ಪ ಮಾದರ ಇವರ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಹಾದು ಹೋಗುತ್ತಿದ್ದಾಗ ನಮ್ಮೂರ ಮಾದಿಗ ಜನಾಂಗದವರಾದ 1) ರುದ್ರಪ್ಪ ತಂದೆ ನಂದಪ್ಪ ಮಾದರ 2) ಬಸಪ್ಪ ತಂದೆ ಪರಸಪ್ಪ ಮಾದರ 3) ಕಾಸಪ್ಪ ತಂದೆ ಬಸಪ್ಪ ಮಾದರ 4) ಸಿದ್ದಪ್ಪ ತಂದೆ ಬಸಪ್ಪ ಮಾದರ 5) ಮೈಲಪ್ಪ ತಂದೆ ಹುಲಗಪ್ಪ 6) ಚಂದ್ರಪ್ಪ ತಂದೆ ಹಣಮಂತ್ರಾಯ ಮಾದರ 7) ಭೀಮರಾಯ ತಂದೆ ಚಂದಪ್ಪ ಮಾದರ 8) ನಂದಪ್ಪ ತಂದೆ ಹಣಮಂತ್ರಾಯ ಮಾದರ 9) ದುರ್ಗಪ್ಪ ತಂದೆ ಮಲ್ಲಪ್ಪ ಮಾದರ 10) ಶರಣಪ್ಪ ತಂದೆ ಮಲ್ಲಪ್ಪ ಮಾದರ 11) ಶಂಕ್ರೆಪ್ಪ ತಂದೆ ದುರ್ಗಪ್ಪ ಮಾದರ 12) ಬಾಲವ್ವ ಗಂಡ ನಂದಪ್ಪ 13) ರೇಣುಕಾ ಗಂಡ ಹುಲಗಪ್ಪ ಮಾದರ 14) ಯಲ್ಲಮ್ಮ ಗಂಡ ಬಸಪ್ಪ ಮಾದರ 15) ಮಾನವ್ವ ಗಂಡ ಚಂದ್ರಾಮ ಮಾದರ ಸಾ|| ಎಲ್ಲರೂ ಕಾಚಾಪೂರ ಈ ಎಲ್ಲಾ ಜನರು ಗುಂಪು ಕಟ್ಟಿಕೊಂಡು ಬಂದವರೇ ನೀನು ಬೆಳಿಗ್ಗೆ ನಮಗೆ ಬುದ್ದಿವಾದ ಹೇಳುವಷ್ಟು ದೊಡ್ಡವಳಾಗಿದ್ದಿಯಾ ನಿನಗೆ ಸೊಕ್ಕು ಬಹಳ ಬಂದಿದೆ ಹೋಲೆಯ ಸೂಳೆ ಮಗಳಾ ಅಂತಾ ಎಲ್ಲರೂ ಅವಾಚ್ಯವಾಗಿ ಬೈಯುತ್ತಾ ಬಂದವರೇ ಎಲ್ಲರೂ ನನಗೆ ಕೈಯಿಂದ ಹೊಟ್ಟೆಗೆ, ಬೆನ್ನಿಗೆ ಹೊಡೆಬಡೆ ಮಾಡುತ್ತಿದ್ದಾಗ ಅಲ್ಲೇ ಇದ್ದ ನನ್ನ ಮಕ್ಕಳಾದ ಮಲ್ಲಪ್ಪ, ರಾಜು, ನೀಲಮ್ಮ ಇವರು ಯಾಕೆ ನಮ್ಮ ತಾಯಿಗೆ ಹೊಡೆಯುತ್ತಿದ್ದಿರಿ ಅಂತಾ ಕೇಳಿದಾಗ ಎಲಾ ಸೂಳೆ ಮಕ್ಕಳೆ ನಿಮ್ಮದು ಬಹಳ ಆಗಿದೆ ಅಂತಾ ಅಂದವರೇ ಅವರ ಪೈಕಿ ರುದ್ರಪ್ಪ ತಂದೆ ನಂದಪ್ಪ ಮಾದರ ಈತನು ಅಲ್ಲೇ ಬಿದ್ದದ್ದ ಬಡಿಗೆಯಿಂದ ಮಗ ರಾಜು ಈತನಿಗೆ ಬೆನ್ನಿಗೆ, ಎಡಕೈ ಮಂಗೈ ಹತ್ತಿರ ಹೊಡೆದು ಒಳಪೆಟ್ಟು ಮಾಡಿದನು. ಬಸಪ್ಪ ತಂದೆ ಪರಸಪ್ಪ ಮಾದರ ಮತ್ತು ಕಾಸಪ್ಪ ತಂದೆ ಬಸಪ್ಪ ಮಾದರ ಇವರಿಬ್ಬರು ಇನ್ನೊಬ್ಬ ಮಗನಾದ ಮಲ್ಲಪ್ಪನಿಗೆ ಕೈಯಿಂದ ಹೊಟ್ಟೆಗೆ, ಬೆನ್ನಿಗೆ ಹೊಡೆ ಬಡೆ ಮಾಡಿದರು. ಅಲ್ಲದೇ ಚಂದ್ರಪ್ಪ ತಂದೆ ಹಣಮಂತ್ರಾಯ ಮಾದರ ಮತ್ತು ಭೀಮರಾಯ ತಂದೆ ಚಂದ್ರಪ್ಪ ಮಾದರ ಇವರಿಬ್ಬರು ನಮ್ಮ ಸಂಬಂದಿಯಾದ ಮಾನಪ್ಪ ತಂದೆ ಸುಗಪ್ಪ ಬಡಿಗೇರ ಈತನು ಯಾಕೆ ಹೊಡೆಯುತ್ತಿರಿ ಅಂತಾ ಕೇಳಲು ಬಂದಾಗ ಆತನಿಗೆ ದುರ್ಗಪ್ಪ ತಂದೆ ಮಲ್ಲಪ್ಪ, ಶರಣಪ್ಪ ತಂದೆ ಮಲ್ಲಪ್ಪ ಇವರಿಬ್ಬರು ಆತನ ಟೊಂಟಕ್ಕೆ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿದರು. ನಂತರ ಎಲ್ಲಾ ಜನರು ನಮಗೆ ನೆಲಕ್ಕೆ ಕೆಡವಿ ಕಾಲಿನಿಂದ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ಅಡೆಪ್ಪ ತಂದೆ ಕಾಶಿರಾಯ ಬಡಿಗೇರ ಮತ್ತು ಸುಗಪ್ಪ ತಂದೆ ಭಿಯಪ್ಪ ಬಡಿಗೇರ ಇವರಿಬ್ಬರು ಬಂದು ಸದರಿಯವರು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರು ಹೊಡೆಯುವದನ್ನು ಬಿಟ್ಟು ಹೊಲೆಯ ಸೂಳೆ ಮಕ್ಕಳೆ ಇನ್ನು ಮುಂದೆ ನಮಗೆ ಬುದ್ದಿ ಹೇಳಲು ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಮ್ಮ ಸಂಬಂದಿ ಮಾನಪ್ಪ ತಂದೆೆ ಸುಗಪ್ಪ ಈತನಿಗೆ ಟೊಂಕಕ್ಕೆ ಒಳಪೆಟ್ಟು ಆಗಿದ್ದರಿಂದ ಇಂದು ಬೆಳಿಗ್ಗೆ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಆಗಿರುತ್ತಾನೆ. ಉಳಿದ ನಮಗೆಲ್ಲರಿಗೂ ಅಷ್ಟೆನು ಗಾಯಪೆಟ್ಟು ಆಗದೇ ಇರುವುದರಿಂದ ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ಈ ವಿಷಯದ ಬಗ್ಗೆ ನಮ್ಮ ಸಂಬಂದಿಕರಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನಮಗೆ ಬುದ್ದಿವಾದ ಹೇಳುವಷ್ಟು ದೊಡ್ಡವಳಾಗಿದ್ದಿಯಾ ಅಂತಾ ವಿನಾಕಾರಣ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿ ಗುಪ್ತಗಾಯಪಡಿಸಿ ಅವಾಚ್ಯವಾಗಿ ಬೈದು ಜೀವ ಬೇದರಿಕೆ ಹಾಕಿದ ಮೇಲ್ಕಾಣಿಸಿದ 15 ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 97/2020 ಕಲಂ 143,147,148,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ..
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 98/2020 ಕಲಂ: 379 ಐ.ಪಿ.ಸಿ : ಮಾನ್ಯರವರಲ್ಲಿ ವಿನಂತಿಸಿಕೊಳ್ಳುವದೇನಂದರೆ ಇಂದು ದಿನಾಂಕ: 19/06/2020 ರಂದು 1.00 ಪಿಎಮ್ಕ್ಕೆ ಫಿಯರ್ಾದಿ ಶ್ರೀ.ಮಲ್ಲಣ್ಣ ತಂದೆ ಭೀಮರಾಯ ಯಾಳಗಿ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಏನೆಂದರೆ, ಸುಮಾರು 1 ವರ್ಷದಿಂದ ನಾನು ಕೆಂಭಾವಿಯ ಪ್ರಭಾಕರ ಸರ್ ಇವರ ಕೆಂಭಾವಿ ಸೀಮಾಂತರದ ಹೊಲ ಸವರ್ೇ ನಂ. 366 ನೇದ್ದನ್ನು ಲೀಜಿಗೆ ಹಾಕಿಕೊಂಡಿರುತ್ತೇನೆ. ಸದರಿ ಹೊಲಗಳಿಗೆ ನೀರುಣಿಸುವ ಸಲುವಾಗಿ ಹೊಲ ಸವರ್ೇ ನಂ 366 ರ ಮಾಲಹಳ್ಳಿಗೆ ಹೋಗುವ ದಾರಿಯ ಬಾವಿಗೆ 7.5 ಹೆಚ್ಪಿಯ ಖಿಇಘಿಒಔ ಕಂಪನಿಯ ತಿಳಿ ಹಸಿರು ಬಣ್ಣದ ನೀರು ಎತ್ತುವ ಮೊಟಾರ ಕೂಡಿಸಿದ್ದು ಅದರ ಅ.ಕಿ. 22500/ ರೂ.ಗಳು ಇರುತ್ತದೆ. ಹೀಗಿದ್ದು ಎಂದಿನಂತೆ ದಿನಾಂಕ 14.06.2020 ರಂದು ಸಾಯಾಂಕಾಲ 06.00 ಗಂಟೆ ಸುಮಾರಿಗೆ ನಾನು ಲೀಜಿಗೆ ಮಾಡಿದ ಹೊಲದ ಕಡೆಗೆ ತಿರುಗಾಡುತ್ತಾ ಹೋದಾಗ ಬಾವಿಗೆ ಕೂಡಿಸಿದ ನನ್ನ 7.5 ಹೆಚ್.ಪಿ ನೀರು ಎತ್ತುವ ಮೊಟಾರ ಕಾಣಿಸಲಿಲ್ಲ, ಆಗ ನಾನು ಗಾಬರಿಯಾಗಿ ಹೊಲದ ತುಂಬೆಲ್ಲಾ ಹುಡುಕಾಡಿದ್ದು ಎಲ್ಲಿಯೂ ಸಿಗಲಿಲ್ಲ. ನಮ್ಮ 7.5 ಹೆಚ್.ಪಿ ನೀರು ಎತ್ತುವ ಮೊಟಾರ ಅ;ಕಿ: 22500/ ರೂಗಳು ನೇದ್ದವುಗಳನ್ನು ದಿನಾಂಕ 13.06.2020 ರಂದು ರಾತ್ರಿ 08.00 ಗಂಟೆಯಿಂದ ದಿನಾಂಕ 14.06.2020 ರ ಬೆಳಗಿನ ಜಾವ 06.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಮೊಟಾರ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ಸಲ್ಲಿಸಿದ್ದು, ಕಾರಣ ನನ್ನ 7.5 ಹೆಚ್.ಪಿ ನೀರು ಎತ್ತುವ ಖಿಇಘಿಒಔ ಮೊಟಾರ ಅ;ಕಿ: 22,500/ ರೂ.ಗಳು ಕಿಮ್ಮತ್ತಿನ ಮೊಟಾರನ್ನು ಕಳುವು ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:98/2020 ಕಲಂ: 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 169/2020. ಕಲಂ. 279.337.338 ಐ.ಪಿ.ಸಿ. & 187 ಐಎಂವಿ ಯಾಕ್ಟ : ಇಂದು ದಿನಾಂಕ: 19/06/2020 ರಂದು 18-15 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ. ಇದೆ ಅಂತ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ 18-20 ಗಂಟೆಗೆ ಹೋಗಿ ಉಪಚಾರ ಪಡೆಯುತ್ತಿದ್ದ ಗಾಯಾಳುದಾರಳಾದ ಖಾಸಿಂಬಿ ತಂದೆ ದಾವಲಸಾಬ ಕಟಗರ ವ|| 20 ಜಾ|| ಮುಸ್ಲಿಂ ಉ|| ಮನೆಕೆಲಸ ಸಾ|| ರಾಮಸಮುದ್ರಾ ಇವರ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 20-30 ಗಂಟೆಗೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 18/06/2020 ರಂದು ನಮ್ಮ ಅಣ್ಣತಮಕಿಯ ಪಾತಿಮಾ ತಂದೆ ಮೈಬೂಬಸಾಬ ಇವರ ಮದುವೆ ರಾಮಸಮುದ್ರದಲ್ಲಿ ಜರುಗಿದ್ದು ಇರುತ್ತದೆ. ಸದರಿ ಪಾತಿಮಾಳ ವಲಿಮಾ (ಮಂಚದ ಊಟ) ಸುರಪೂರ ತಾಲುಕಿನ ವಾಗಣಗೇರಿಯಲ್ಲಿ ಇದ್ದುದ್ದರಿಂದ ನಾವು ವಾಗಣಗೇರಿಗೆ ಹೋಗಿ ವಲಿಮಾ ಮುಗಿಸಿಕೊಂಡು ಮರಳಿ ರಾಮಸಮುದ್ರಕ್ಕೆ ಹೋಗುವ ಸಂಬಂದವಾಗಿ ಕೂೃಜರ ನಂ ಕೆಎ-33ಎ-6982 ನೇದ್ದರಲ್ಲಿ ನಾನು ಮತ್ತು ನನ್ನ ಅಣ್ಣತಮಕಿಯ 1] ಮೈಬೂಬಸಾಬ ತಂದೆ ಕತಾಲಸಾಬ ಖುರೇಶಿ. ಮತ್ತು ನಮ್ಮೂರ 2] ಹುಸೇನಬಿ ಗಂಡ ಚಾಂದಪಾಶಾ. ನಮ್ಮ ಸಂಬಂದಿಕರಾದ 3] ಮೈಬೂಬಿ ಗಂಡ ಅಫಜಲ್ ಕಟಗರ ಸಾ|| ಎಲ್ಹೇರಿ, 4] ಅಫಜಲ್ ತಂದೆ ಮೌಲಾನಾಸಾಬ ಕಟಗರ ಸಾ|| ಎಲ್ಹೇರಿ ಎಲ್ಲರು ಕುಳಿತುಕೊಂಡು ಹೋರಟೇವು ಸದರಿ ಕೂೃಜರನಂ ಕೆಎ-33ಎ-6982 ನೇದ್ದರ ಚಾಲಕನಾದ ಸಾಬಣ್ಣ ತಂದೆ ಹಣಮಂತ ಕ್ಯಾಸಪ್ಪನಳ್ಳಿ ಸಾ|| ಮುಂಡರಿಗಿ ಇತನು ಚಲಾಯಿಸುತ್ತಿದ್ದನು ಸದರಿ ನಮ್ಮ ಕೂೃಜರ ಚಾಲಕ ಸಾಬಣ್ಣ ಈತನು ತನ್ನ ಕೃಜರನ್ನು ಸುರಪೂರ-ಶಹಾಪುರ ಮುಖ್ಯ ರಸ್ತೆಯ ಮೇಲೆ 17-00 ಗಂಟೆಯ ಸುಮಾರಿಗೆ ದೇವದುಗರ್ಾ ಕ್ರಾಸ್ ದಾಟಿ ಅಂದಾಜು 500 ಮೀಟರ್ ದಲ್ಲಿ ಹತ್ತಿಗುಡೂರ ಕಡೆಗೆ ಹೋಗುತ್ತಿರುವಾಗ ಎದುರಿಗಡೆ ಹತ್ತಿಗುಡೂರ ಕಡೆಯಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕೃಜರಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಇರುತ್ತದೆ ಸದರಿ ಅಪಘಾತದಲ್ಲಿ ನನಗೆ ಬಲಗಾಲು ತೋಡಿಗೆ, ಬಲಗೈ ಜುಬ್ಬಕ್ಕೆ ಗುಪ್ತಗಾಯವಾಗಿರುತ್ತದೆ. ಮೈಬೂಬಸಾಬ ತಂದೆ ಕತಾಲಸಾಬ ಖುರೇಶಿ. ಇವರಿಗೆ ಎಡಗಡೆ ತಲೆಗೆ ಭಾರಿ ರಕ್ತಗಾಯ, ಎಡಗಾಲು ಸೊಂಟಕ್ಕೆ ಭಾರಿ ಗುಪ್ತಗಾಯ, ಹುಸೇನಬಿ ಗಂಡ ಚಾಂದಪಾಶಾ ಇವರಿಗೆ ಎರಡು ಕಾಲು ಗೆಜ್ಜಿಗೆ ಗುಪ್ತಗಾಯ, ಎರಡು ಕಾಲು ಟೊಂಕಕ್ಕೆ ಗುಪ್ತಗಾಯವಾಗಿರುತ್ತದೆ. ಮೈಬೂಬಿ ಗಂಡ ಅಫ್ಜಲ್ ಕಟಗರ ಇವರಿಗೆ ಎಡಗಣ್ಣಿನ ಮೇಲೆ ರಕ್ತಗಾಯ, ಅಫಜಲ್ ತಂದೆ ಮೌಲಾನಾಸಾಬ ಕಟಗರ ಇವರಿಗೆ ಸೋಂಟಕ್ಕೆ ಭಾರಿ ಗುಪ್ತಗಾಯ, ಎಡಗೈಗೆ ಗುಪ್ತಗಾಯವಾಹಗಿರುತ್ತದೆ. ನಮ್ಮ ಕೂೃಜರಚಾಲಕ ಸಾಬಣ್ಣ ಈತನಿಗೆ ಸಣ್ಣ ಪುಟ್ಟ ಗುಪ್ತ ಗಾಯವಾಗಿದ್ದು ಇರುತ್ತದೆ. ನಮ್ಮ ಹಿಂದೆ ಹೋರಟಿದ್ದ ನಮ್ಮ ಅಣ್ಣತಮಕಿಯ ರಫೀಕ ತಂದೆ ಮೈಬೂಬಸಾಬ ಖುರೇಶಿ, ರಹಿಂ ತಂದೆ ಮೈಬೂಸಾಬ ಖುರೇಶಿ, ಇವರು ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ನಮಗೆ ಅಪಘಾತದ ಮಾಡಿದ ಲಾರಿ ನೋಡಲಾಗಿ ಎಂಹೆಚ್-04-ಹೆಚ್-3423 ನೇದ್ದು ಇದ್ದು ಅದರ ಪಕ್ಕದಲ್ಲಿ ನಿಂತಿದ್ದ ಅದರ ಚಾಕನ ಹೆಸರು ವಿಚಾರಿಸಲಾಗಿ ಸಿದ್ದಲಿಂಗಪ್ಪ ತಂದೆ ಖಾಸಿಪತಿ ಸಾ|| ಹಳಿಸಗರ ಶಹಾಪೂರ ಅಂತ ಹೇಳಿ ಹೋದನು ಲಾರಿ ಮತ್ತು ಕೂೃಜರ ಎರಡು ಜಕಂಗೊಂಡಿದ್ದು ಇರುತ್ತದೆ. ನಮಗೆ ಉಪಚಾರ ಕುರಿತು ರಫಿಕ್, ರಹಿಂ. ಇಬ್ಬರು ಕೂಡಿ ನನಗೆ ಮತ್ತು ಮೈಬೂಬಸಾಬ, ಹುಸೇನಬಿ, ಮೈಬೂಬಿ, ಅಫಜಲ್, ಎಲ್ಲರಿಗು ಒಂದು ಖಾಸಗಿ ವಾಹನದಲ್ಲಿ ಹಾಕಿ ಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಸಾಬಣ್ಣನು ಸಣ್ಣ ಪುಟ್ಟು ಗಾಯವಾಗಿದ್ದರಿಂದ ಉಪಚಾರ ಮಾಡಿಸಿಕೊಂಡಿರುವದಿಲ್ಲಾ. ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 169/2020 ಕಲಂ: 279, 337, 338, ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using