ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/06/2020

By blogger on ಗುರುವಾರ, ಜೂನ್ 18, 2020







                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/06/2020 
                                                                                                               
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 105/2020 ಕಲಂ 143, 147, 148, 323, 326, 354, 355, 504, 506 ಸಂಗಡ 149 ಐಪಿಸಿ. : ಇಂದು ದಿನಾಂಕ 17.06.2020 ರಂದು ಸಂಜೆ 6:15 ಗಂಟೆಗೆ ಆರೋಪಿತರ ಮತ್ತು ಫಿರ್ಯಾದಿದಾರನ ದೊಡ್ಡಮ್ಮಳಿಗೆ ಸೇರಿದ ಜಾಗದಲ್ಲಿಯ ಶೆಟರಗಳಿಗೆ ಫಿರ್ಯಾದಿಯ ದೊಡ್ಡಮ್ಮ ಹಾಗೂ ಫಿರ್ಯಾದಿ ಕೀಲಿ ಹಾಕಿದ ಶೆಟರಗಳನ್ನು  ಸುತ್ತಿಗೆಯಿಂದ ಹೊಡೆದು ಖುಲ್ಲಾ ಮಾಡುತ್ತಿದ್ದಾಗ ಫಿರ್ಯಾದಿಯು ಹಾಗೆಲ್ಲಾ ತೆರಿಬ್ಯಾಡ್ರಿ ಹಿರಿಯ ಸಮಕ್ಷಮದಲ್ಲಿ ಕುಂತು ನ್ಯಾಯಪಂಚಾಯತಿ ಮಾಡೋಣ ಅಂತಾ ಹೇಳಿದರೂ ಸಹ ಕೇಳದೆ ಅದೇ ರೀತಿ ಮುಂದು ವರೆಸಿದ್ದು ಆ ರೀತಿ ಮಾಡಬೇಡ ಅಂತಾ ಫಿರ್ಯಾದಿ ಹೇಳಿದಕ್ಕೆ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು, ಸುತ್ತಿಗೆ ಹಿಡಿದುಕೊಂಡು ಬಂದು, ಕೈಯಿಂದ, ಸುತ್ತಿಗೆಯಿಂದ ಹೊಡೆ-ಬಡೆ ಮಾಡಿ ಭಾರಿ ರಕ್ತಗಾಯಗೊಳಿಸಿ, ಚಪ್ಪಲಿಯಿಂದ ಹೊಡೆ-ಬಡೆ ಮಾಡಿ, ಫಿರ್ಯಾದಿಯ ಹೆಂಡತಿ ಕೈಹಿಡಿದು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ್ದು ಅಲ್ಲದೇ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 105/2020 ಕಲಂ 143, 147, 148, 323, 326, 354, 355, 504, 506 ಸಂಗಡ 149 ಐಪಿಸಿ.


ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 106/2020 ಕಲಂ 143, 147, 148, 323, 324, 504, 506 ಸಂಗಡ  149 ಐಪಿಸಿ. : ಇಂದು ದಿನಾಂಕ 17.06.2020 ರಂದು ಸಂಜೆ 7:00 ಗಂಟೆಯ ಸುಮಾರಿಗೆ ಕೊಟಗೇರಾ ಗ್ರಾಮದಲ್ಲಿ ಮಳೆ ಬರುತ್ತಿದ್ದಾಗ ಆರೋಪಿತರ ಮನೆಯಲ್ಲಿ ಬಿದ್ದ ಮಳೆ ನೀರು ಫಿರ್ಯಾದಿಯ ಮನೆಯ ಅಂಗಳದಲ್ಲಿ ಹೋಗಿತ್ತಿದ್ದುದನ್ನು ಕಂಡು ಫಿರ್ಯಾದಿಯ ತಂದೆ ರತ್ನಪ್ಪನು ಆರೋಪಿ ಹುಸೇನಪ್ಪನಿಗೆ ಕರೆದು ಸ್ವಲ್ಪ ಒಡ್ಡು ಹಾಕಿಕೊಂಡು ಮಳೆ ನೀರು ತಮ್ಮ ಅಂಗಳದಲ್ಲಿ ಬರದಂತೆ ಸರಿ ಮಾಡಿಕೊಳ್ಳುವಂತೆ ಹೇಳಿದಕ್ಕೆ ಆರೋಪಿ ಹುಸೇನಪ್ಪನು ಲೇ ಸೂಳೆ ಮಗನೆ ನಿನಗೆ ಬೇಕಾದ್ರೆ ನೀನು ಮಾಡಿಕೊ ನಮಗೇನ್ ಕೇಳತಿಲೇ ಅಂತಾ ಹೊಲಸು ಮಾತಿನಲ್ಲಿ ಬೈದಿದ್ದು, ಆಗ ಫಿರ್ಯಾದಿಯು ಅಲ್ಲಿಗೆ ಹೋಗಿ ನಮ್ಮಪ್ಪನಿಗೆ ಯಾಕ ಬೈತಿ ಅಂತಾ ಕೇಳಿದಕ್ಕೆ ಆರೋಪಿ ಭೀಮ್ಮಪ್ಪನು ತನ್ನ ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಬಂದು ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ಆರೋಪಿ ಹುಸೇನಪ್ಪನು ಅಲ್ಲಿದ್ದ ಮತ್ತೊಂದು ಕಟ್ಟಿಗೆಯಿಂದ ಡೆವಿಡ್ನ ತಲೆಗೆ ಹೊಡೆದು ಗಾಯಗೊಳಿಸಿದನು. ಅಲ್ಲದೇ ಉಳಿದ ಆರೋಪಿತರಾದ ಮುತ್ತುರಾಜ, ರವಿರಡ್ಡಿ, ವಿಲ್ಸನ್ ಇವರು ಮೂರು ಜನರು ಕೂಡಿಕೊಂಡು ಉಳಿದವರಿಗೆ ಕೈಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂದ ಮೇಲಿಂದ ಠಾಣೆ ಗುನ್ನೆ ನಂಬರ 106/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿದ್ದು ಇರುತ್ತದ.


ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 107/2020 ಕಲಂ 323, 324, 504, 506 ಸಂಗಡ 34 ಐಪಿಸಿ. : ಇಂದು ದಿನಾಂಕ 17.06.2020 ರಂದು ಸಂಜೆ 7:00 ಗಂಟೆಯ ಸುಮಾರಿಗೆ ಕೊಟಗೇರಾ ಗ್ರಾಮದಲ್ಲಿ ಮಳೆ ಬರುತ್ತಿದ್ದಾಗ ಫಿರ್ಯಾದಿದಾರರ ಮನೆಯಲ್ಲಿ ಬಿದ್ದ ಮಳೆ ನೀರು ವಾಡಿಕೆಯಂತೆ ಮುಂದೆ ಹೋಗುತ್ತಿದ್ದಾಗ ಆರೋಪಿ ರತ್ನಪ್ಪನು ಆರೋಪಿ ಫಿರ್ಯಾದಿಯ ತಂದೆಯಾದ ಹುಸೇನಪ್ಪನಿಗೆ ಕರೆದು ಲೇ ಸೂಳೆ ಮಗನೆ ನಿಮ್ಮ ಮಳೆ ನೀರು ಬರಲಾರದಂತೆ ವಡ್ಡು ಕಟ್ಟಿಕೊ ಅಂತಾ ಅವಾಚ್ಯವಾಗಿ ಬೈಬಿದ್ದು ಆಗ ಫಿರ್ಯಾದಿಯು ಆ ರೀತಿ ಬೈಬ್ಯಾಡ ಅಂತಾ ಹೇಳಿದಕ್ಕೆ ಆರೋಪಿತರು ಕಟ್ಟಿಗೆಯಿಂದ, ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನಿಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 107/2020 ಕಲಂ 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿದ್ದು ಇರುತ್ತದೆ.



ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 108/2020 ಕಲಂ 323, 354, 504, 506 ಸಂಗಡ 149 ಐಪಿಸಿ. : ಇಂದು ದಿನಾಂಕ 17.06.2020 ರಂದು ಸಂಜೆ 4:00 ಗಂಟೆಯ ಸುಮಾರಿಗೆ ಫಿರ್ಯಾದಿಯ ಮಗ ಮತ್ತು ಆರೋಪಿತರ ಮಕ್ಕಳಾದ ಭೀಮಾಶಂಕರ ಮತ್ತು ಶಿವು ಇವರೊಂದಿಗೆ ಆಟ ಆಡುತ್ತಿದ್ದನು. ಆಗ ಹುಡುಗರು ಆಟದಲ್ಲಿ ಬಾಯಿ ಮಾಡಿಕೊಂತ ಇದ್ದಾಗ ಆರೋಪಿ ಕಾಶಪ್ಪ ಅಲ್ಲಿಗೆ ಹೋಗಿ ಫಿರ್ಯಾದಿಯ ಮಗನಿಗೆ ತಲೆಗೆ ಹೊಡೆದು ನೂಕಿ ಕೊಟ್ಟನು. ಆಗ ಫಿರ್ಯಾದಿ ಅಲ್ಲಿಗೆ ಹೋಗಿ ಅಂಗ ಯಾಕ ಹೊಡಿತಿದಿ. ಹುಡುಗರು ಆಟ ಆಡತಾವ-ಜಗಳ ಮಾಡತಾವ ಮತ್ತು ಒಂದಾಗತಾವ ಅಂತಾ ಹೇಳಿದಕ್ಕೆ ಆರೋಪಿ ಭೀಮರಾಯ ಲೇ ಸೂಳೆ ನೀನೆನ ಮನಗೆ ಬುದ್ದಿ ಮಾತ ಹೇಳಿತಿ ನಡಿಲೇ ಅಂತಾ ಅವಾಚ್ಯವಾಗಿ ಬೈದಿದ್ದು ಆಗ ಫಿರ್ಯಾದಿ ಹಂಗೆಲ್ಲ ಬೈಬ್ಯಾಡ ಅಂತಾ ಹೇಳಿದಕ್ಕೆ ಆರೊಪಿ ಸಾಬಣ್ಣ ಬಂದು ಲೇ ಸೂಳೆ ನಿಂದೆನ ಸುದ್ದಿ ಅಂತಾ ಹೇಳಿ ಫಿರ್ಯಾದಿಯ ಕೈ ಹಿಡಿದು ಎಳೆದು ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೇ ಆರೋಪಿತರಾದ ಪಾರ್ವತಿ ಹಾಗೂ ಮಹಾದೇವಮ್ಮ ಇವರು ಫಿರ್ಯಾದಿಗೆ ಕೈಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲಧೇ ಆರೋಪಿ ಭೀಮರಾಯನು ಲೇ ಸೂಳೆ ಇವತ್ತು ಉಳಕೊಂಡಿದಿ ಮತ್ತೊಮ್ಮೆ ನಮ್ಮ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಹೇಳಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫೀರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ : 108/2020 ಕಲಂ 323, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 42/2020 ಕಲಂ: 279  ಐಪಿಸಿ : ಇಂದು ದಿನಾಂಕ 17/06/2020 ರಂದು 6:00 ಪಿ.ಎಂ ಕ್ಕೆ ಪಿಯರ್ಾದಿ ತಿಮ್ಮಾರೆಡ್ಡಿ ತಂದೆ ವೆಂಕಟೇಶ ರೆಡ್ಡಿ ಸಾ||ಬೆಳಚಿಕ್ಕನಹಳ್ಳಿ ತಾ||ಗೌರಿಬಿದನೂರ ಜಿ||ಚಿಕ್ಕಬಳ್ಳಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಪಿಯರ್ಾದಿಯ ಅಜರ್ಿಯ  ಸಾರಾಂಶವೆನಂದರೆ ತನ್ನದು ಒಂದು ಮಾರುತಿ ಸ್ವಿಪ್ಟ ಡಿಸೈರ್ ಕಾರ ನಂ. ಕೆಎ-50 ಎ-3007 ಇದ್ದು ಇದನ್ನು ನಮಗೆ ಪರಿಚಯದವನಾದ ತೊಂಡೆಬಾವಿಯಲ್ಲಿರುವ ಎಸಿಸಿ ಸಿಮೇಂಟ್ ಕಂಪನಿಯಲ್ಲಿ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಾಜು ತಂದೆ ಮಾನಪ್ಪ ರಾಠೋಡ ಸಾ|| ಮಡಿಕೇಶ್ವರ ತಾಂಡಾ ತಾ|| ಮುದ್ದೆಭೀಹಾಳ ಜಿ|| ವಿಜಯಪೂರ ಇವರು ನನಗೆ ಲಾಕಡೌನ ಇರುವುದರಿಂದ ಕಂಪನಿಯಲ್ಲಿ ಕೆಲಸ ಇರುವುದಿಲ್ಲ ನಾನು ಊರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನನ್ನ ಮಾರುತಿ ಸ್ವಿಪ್ಟ ಡಿಸೈರ್ ಕಾರ ನಂ. ಕೆಎ-50 ಎ-3007 ನೇದ್ದನ್ನು ತೆಗೆದುಕೊಂಡು ದಿನಾಂಕ:02/04/2020 ರಂದು ತನ್ನ ಊರಿಗೆ ಹೋಗಿದ್ದು ಇರುತ್ತದೆ. ದಿನಾಂಕ:14/04/2020 ರಂದು ಮುಂಜಾನೆ ನನಗೆ ರಾಜು ತಂದೆ ಮಾನಪ್ಪ ರಾಠೋಡ ಸಾ|| ಮಡಿಕೇಶ್ವರ ತಾಂಡಾ ತಾ|| ಮುದ್ದೆಭೀಹಾಳ ಜಿ|| ವಿಜಯಪೂರ ಈತನು ಪೋನ್ ಮಾಡಿ ತಿಳಿಸಿದ್ದುಎನೇಂದರೆ ತಾನು ಮಾರುತಿ ಸ್ವಿಪ್ಟ ಡಿಸೈರ್ ಕಾರ ನಂ. ಕೆಎ-50 ಎ-3007 ನೇದ್ದನ್ನು ಬೆಂಗಳೂರಿಗೆ ನಿಮ್ಮ ಹತ್ತಿರ ಬಿಟ್ಟು ಬರಲು ಹಗರಗುಂಡದಿಂದ ದಿನಾಂಕ:13/04/2020 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ಹೊರಟು ಮಾರನಾಳ ತಾಂಡಾ ಕ್ರಾಸದಲ್ಲಿ ಬಂದಾಗ ನನಗೆ ನಮ್ಮ ಪರಿಚಯದವರು ಲಾಕಡೌನ ಇದೆ ಕಾರನ್ನು ಪೊಲೀಸ್ರು ಬಿಡುವುದಿಲ್ಲ ನೀನು ಬೆಂಗಳೂರಿಗೆ ಹೋಗಬೇಡಾ ಅಂತಾ ಹೇಳಿದಾಗ ನಾನು ಮರಳಿ ಹಗರಗುಂಡಕ್ಕೆ ಹೋಗುತ್ತಿದ್ದಾಗ ಹೊರಟ್ಟಿ ಸೀಮಾಂತರದಲ್ಲಿರುವ ಹೊರಟ್ಟಿ ಬ್ರಿಡ್ಜ್ ಹತ್ತಿರ ನಾನು ಚಲಾಯಿಸಿಕೊಂಡು ಹೊರಟಿದ್ದ ಮಾರುತಿ ಸ್ವಿಪ್ಟ ಡಿಸೈರ್ ಕಾರ ನಂ. ಕೆಎ-50 ಎ-3007 ನೇದ್ದು ದಿನಾಂಕ:13/04/2020 ರಂದು 7:30 ಪಿಎಮ್ ಸುಮಾರಿಗೆ ಕಾರು ತನ್ನ ನಿಯಂತ್ರಣ ತಪ್ಪಿ ರಸ್ತೆಯ ಎಡಬಾಜುವಿಗೆ ಹಳ್ಳದ ದಂಡೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದು ತನಗೆ ಯಾವುದೆ ಪೆಟ್ಟುಗಳು ಆಗಿರುವದಿಲ್ಲ ಕಾರನ್ನು ಅಲ್ಲಿಯೇ ಬಿಟ್ಟು ಊರಿಗೆ ಬಂದಿರುತ್ತೇನೆ ಅಂತಾ ತಿಳಿಸಿದನು. ಲಾಕಡೌನ್ ಜಾರಿಯಲ್ಲಿದ್ದುದರಿಂದ ಇಲ್ಲಿಯವರೆಗೆ ನನಗೆ ನನ್ನ ಕಾರ ಅಪಘಾತವಾಗಿ ಬಿದ್ದ ಸ್ಥಳಕ್ಕೆ ಬರದೆ ಆಗದೇ ಈಗ ಲಾಕಡೌನ ಮುಗಿದ್ದಿದ್ದರಿಂದ ನನ್ನ ಕಾರಬಿದ್ದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಾರುತಿ ಸ್ವಿಪ್ಟ ಡಿಸೈರ್ ಕಾರ ನಂ. ಕೆಎ-50 ಎ-3007 ನೇದ್ದು ಸಂಪೂರ್ಣ ನುಜ್ಜುಗೊಜ್ಜಾಗಿದ್ದು ಇರುತ್ತದೆ. ನನಗೆ ಪರಿಚಯದವನಾದ ರಾಜು ತಂದೆ ಮಾನಪ್ಪ ರಾಠೋಡ ಸಾ||ಮಡಿಕೇಶ್ವರ ತಾಂಡಾ ತಾ|| ಮುದ್ದೆಭೀಹಾಳ ಜಿ|| ವಿಜಯಪೂರ ಇವರು ನನ್ನ ಮಾರುತಿ ಸ್ವಿಪ್ಟ ಡಿಸೈರ್ ಕಾರ ನಂ. ಕೆಎ-50 ಎ-3007 ನೇದ್ದನ್ನು ದಿನಾಂಕ:13/04/2020 ರಂದು 7:30 ಪಿಎಮ್ ಸುಮಾರಿಗೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹೊರಟ್ಟಿ ಬ್ರಿಡ್ಜ್ ಹತ್ತಿರ ಅಪಘಾತ ಪಡೆಸಿ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ನನ್ನ ಕಾರ್ ಹಳ್ಳದಲ್ಲಿ ಪಲ್ಟಿಯಾಗಿ ಬಿದ್ದು ನುಜ್ಜುಗುಜ್ಜು ಆಗಿ ಪೂತರ್ಿಯಾಗಿ ಜಖಂಗೊಂಡಿದ್ದನ್ನು ನಾನು ಒಂದು ಖಾಸಗಿವಾಹನದ ಮೂಲಕ ನನ್ನ ಕಾರ್ನ್ನು ಠಾಣೆಗೆ ತೆಗೆದುಕೊಂಡು ಬಂದು ದೂರನ್ನು ನೀಡುತ್ತಿದ್ದು ಕಾರಣ ರಾಜು ತಂದೆ ಮಾನಪ್ಪ ರಾಠೋಡ ಸಾ||ಮಡಿಕೇಶ್ವರ ತಾಂಡಾ ತಾ|| ಮುದ್ದೆಭೀಹಾಳ ಜಿ|| ವಿಜಯಪೂರ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.42/2020 ಕಲಂ: 279 ಐಪಿಸಿ ಸಂಗಡ 187 ಐಎಮ್ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 152/2020 ಕಲಂ 279, 338 ಐಪಿಸಿ : ಇಂದು ದಿನಾಂಕ:17/06/2020 ರಂದು 3:45 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಸರಕಾರಿಆಸ್ಪತ್ರೆ ಸುರಪುರರವರಿಂದ ಎಂ.ಎಲ್.ಸಿ ಮಾಹಿತಿ ಬಂದ ಮರೆಗೆ ನಾನು ಸರಕಾರಿಆಸ್ಪತ್ರೆ ಸುರಪುರಕ್ಕೆ ಬೇಟಿ ನೀಡಿರಸ್ತೆಅಪಘಾತದಲ್ಲಿ ಗಾಯಾಳುದಾರಳಾದ ಶ್ರೀಮತಿ  ಶಾಂತಾಗಂಡ ಪುನಿತ ಸಾ|| ಪಳ್ಳೆಕರನಹಳ್ಳಿ ಚಿತ್ರದುರ್ಗ ಜಿ|| ಚಿತ್ರದುರ್ಗಇವರ ಹೇಳಿಕೆ ಸಾರಾಂಶವೇನೆಂದರೆ, ದಿನಾಂಕ:17/06/2020 ರಂದು ಮುಂಜಾನೆ ನಾನು ಕರ್ತವ್ಯಕ್ಕೆ ಹೊಗಿ ಮದ್ಯಾಹ್ನದ ವರೆಗೆಕರ್ತವ್ಯ ನಿರ್ವಹಿಸಿರುತ್ತೆನೆ. ನಂತರ ಮದ್ಯಾಹ್ನ 1:30 ಗಂಟೆಯ ಸುಮಾರಿಗೆ ಶಾಲೆಯಿಂದ ಕೆಲಸದ ನಿಮಿತ್ಯಕ್ಷೇತ್ರ ಶಿಕ್ಷಣಾದಿಕಾರಿಗಳ ಕಾರ್ಯಲಯ ಸುರಪುರಕ್ಕೆ ಹೊಗುವ ಕುರಿತು ನನ್ನ ಪ್ಲೀಸರ್ ಸ್ಕೂಟಿ ನಂ. ಕೆಎ-17 ಇಹೆಚ್-9742 ನೇದ್ದರ ಮೇಲೆ ಹೊರಟೇನು. ನಾನು ಬಾದ್ಯಾಪುರಗ್ರಾಮದಿಂದ ಸಿದ್ದಾಪುರ ಮಾರ್ಗವಾಗಿ ಸುರಪುರ-ಕೆಂಭಾವಿ ಮುಖ್ಯರಸ್ತೆಯ ಮೇಲೆ ಸುರಪುರಕಡೆಗೆ ಹೊರಟಿದ್ದಾಗ 1:45 ಗಂಟೆ ಸುಮಾರಿಗೆ ಸಿದ್ದಾಪುರ ಸಿಮಾಂತರಲ್ಲಿ ಕೆರೆಯ ಹತ್ತಿರಎದರುಗಡೆಯಿಂದಒಂದುಟಾಟಾ ಎಸಿಇ ವಾಹನ ಚಾಲಕನು ತನ್ನ ವಾಹನವನ್ನುಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದುಒಮ್ಮೆಲೆ ಬಲಕ್ಕೆ ತಿರುಗಿಸಿ ನನ್ನ ಸ್ಕೂಟಿಗೆಡಿಕ್ಕಿ ಪಡಿಸಿದ್ದರಿಂದ ಸ್ಕೂಟಿ ಸಮೇತ ನಾನು ಕೆಳಗಡೆ ಬಿದ್ದೇನು. ಆಗ ಟಾಟಾ ಎಸಿಇ ವಾಹನದ ಮೇಲಿದ್ದ ಪತ್ರಾಸ್ ಹಾಗು ಕಟ್ಟಿಗೆಯ ಬಲೀಸ್ ಗಳು ಸಹ ನನ್ನ ಮೇಲೆ ಬಿದ್ದಿದ್ದು, ಸದರಿಅಪಘಾತದಲ್ಲಿ ನನ್ನತಲೆಗೆರಕ್ತಗಾಯ, ಎಡಗಡೆ ಹಸ್ತಕ್ಕೆ ಹಾಗೂ ಬೆರಳುಗಳಿಗೆ ರಕ್ತಗಾಯ, ಬಲಗೈ ಹಸ್ತಕ್ಕೆ, ಮೊಣಕೈ ಹತ್ತಿರರಕ್ತಗಾಯ, ಬಲ ಹೊಟ್ಟೆಗೆ, ಪಕ್ಕೆಗೆ ತರಚಿದ ರಕ್ತಗಾಯಳಾಗಿ ಭಾರಿಗುಪ್ತಗಾಯವಾಗಿರುತ್ತದೆ. ಆಗ ನನ್ನ ಹಿಂದುಗಡೆತಮ್ಮ ಮೋಟರ್ ಸೈಕಲ್ಗಳ ಮೇಲೆ ಹೊರಟಿದ್ದ ನಮ್ಮ ಶಾಲೆಯ ಮುಖ್ಯ ಗುರುಗಾಳಾದ ಪ್ರಕಾಶತಂದೆ ಮಾಣಿಕಪ್ಪ ಮುಡಬಿ ಹಾಗು ಲಾಡ್ಲೆಪಟೇಲ್ತಂದೆ ಮಹ್ಮದ ಪಟೇಲ್ ಸಾ: ಆಲ್ದಾಳ ಇವರು ಬಂದು ನನಗೆ ಎಬ್ಬಿಸಿರುತ್ತಾರೆ. ನನಗೆ ಅಪಘಾತ ಪಡಿಸಿದ ಟಾಟಾ ಎಸಿಇ ವಾಹನದ ನಂಬರ ನೊಡಲಾಗಿ ಕೆಎ-25 ಸಿ-4644 ನೇದ್ದು ಚಾಲಕನ ಹೆಸರು, ವಿಳಾಸ ವಿಚಾರಿಸಲಾಗಿಇಫರ್ಾನ್ತಂದೆರಹಿಮಾನಸಾಬ ಸೌದಾಗರ ಸಾ|| ವನದುರ್ಗತಾ|| ಶಹಾಪೂರಅಂತಾ ತಿಳಿಸಿರುತ್ತಾನೆ. ನಂತರ ಪ್ರಕಾಶ ಮುಡಬಿ ಮತ್ತು ಲಾಡ್ಲೆಪಟೇಲ್ಇಬ್ಬರೂ 108 ಅಂಬುಲೇನ್ಸ ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ಅದರಲ್ಲಿ ನನಗೆ ಹಾಕಿಕೊಂಡು ಸುರಪೂರ ಸಕರ್ಾರಿಆಸ್ಪತ್ರೆಗೆತಂದು ಸೇರಿಕೆ ಮಾಡಿರುತ್ತಾರೆ. ಕಾರಣಟಾಟಾ ಎಸಿಇ ಗೂಡ್ಸ್ ವಾಹನ ಚಾಲಕನಾದಇಫರ್ಾನ್ತಂದೆರಹಿಮಾನಸಾಬ ಸೌದಾಗರಇತನುತನ್ನ ವಾಹನವನ್ನುಅತಿವೇಗ ಮತ್ತುಅಲಕ್ಷತನದಿಂದ ನಡೆಸಿ ನನಗೆ ಡಿಕ್ಕಿಪಡಿಸಿದರಿಂದ ನನಗೆ ಸಾದಾ ಹಾಗು ಭಾರಿ ಗಾಯಗಳಾಗಿದ್ದು, ಸದರಿ ಚಾಲಕನ ವಿರುದ್ದ ಕಾನೂನು ಕ್ರಮಜರುಗಿಸಬೇಕುಅಂತ ಹೇಳಿಕೆ ನೀಡಿದ್ದು ನಿಜವಿದೆ. ಅಂತಾಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!