ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/06/2020

By blogger on ಗುರುವಾರ, ಜೂನ್ 11, 2020








                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/06/2020 
 ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 75/2020 ಕಲಂ 302, 109 ಸಂ 149 ಐಪಿಸಿ : ಇಂದು ದಿನಾಂಕ 11/06/2020 ರಂದು ಸಾಯಂಕಾಲ 2-30 ಗಂಟೆಗೆ ಫಿರ್ಯಾಧಿದಾರನಾದ ದೊಡ್ಡ ತಾಯಪ್ಪ ತಂದೆ ಮಲ್ಲಪ್ಪ ಕ್ಯಾಸಪ್ಪನಳ್ಳೇರ ಸಾಃ ಅಲ್ಲಿಪೂರ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನನ್ನ ಮತ್ತು ನನ್ನ ಅಣ್ಣತಮಕಿಯವರಾದ ವೀರಭದ್ರಪ್ಪ ತಂದೆ ಮಲ್ಲಪ್ಪ ಕ್ಯಾಸಪ್ಪನಳ್ಳೆರ ಇಬ್ಬರ ಹೊಲವು ಕ್ಯಾಸಪ್ಪನಳ್ಳಿ ಗ್ರಾಮಕ್ಕೆ ಹೋಗುವ ರೋಡಿನ ಪಕ್ಕದಲ್ಲಿ ಇದ್ದಿರುತ್ತದೆ, ನಮ್ಮ ಹೊಲದ ಪಕ್ಕದಲ್ಲಿ ಕ್ಯಾಸಪ್ಪನಳ್ಳಿ ಗ್ರಾಮದ ಶರಣಪ್ಪ ತಂದೆ ಅಡಿವೆಪ್ಪ ಮೂಕಪ್ಪನೊರ, ಮಲ್ಲಪ್ಪ ತಂದೆ ಅಡಿವೆಪ್ಪ ಮೂಕಪ್ಪನೊರ, ಹಣಮಂತ್ರಾಯ ತಂದೆ ಅಡಿವೆಪ್ಪ ಮೂಕಪ್ಪನೊರ, ಯಂಕಪ್ಪ ತಂದೆ ಅಡಿವೆಪ್ಪ ಮೂಕಪ್ಪನೊರ ಇವರ ಹೊಲಗಳು ಇದ್ದು ಅವರಿಗೂ ಮತ್ತು ನಮಗೂ ಹೊಲದ ಡ್ವಾಣದ ವಿಷಯದಲ್ಲಿ ತಕರಾರುಗಳು ಆಗುತ್ತಾ ಬಂದಿದ್ದು, ಆ ವೇಳೆಯಲ್ಲಿ ನನ್ನ ಅಣ್ಣತಮ್ಮಕಿಯವನಾದ ಮಲ್ಲಪ್ಪ ತಂದೆ ಭೀಮರಾಯ ಬೆಳಗೇರಿ ಇತನು ಮಧ್ಯಸ್ಥಿಕೆ ವಹಿಸಿ ತಕರಾರುಗಳು ಬಗೆಹರಿಸಲು ಪ್ರಯತ್ನಪಟ್ಟಾಗ ಆ ವೇಳೆಯಲ್ಲಿ ಅವರೆಲ್ಲರೂ ನೀನು ನಿಮ್ಮ ಅಣ್ಣತಮಕಿಯವರ ಪರವಾಗಿ ಹೇಳಲು ಬಂದಿದ್ದಿ, ಇನ್ನೊಂದು ಸಲ ನೀನು ಈ ವಿಷಯದಲ್ಲಿ ನಮಗೆ ಏನಾದರು ಹೇಳಲು ಬಂದರೆ ನಿನ್ನ ಪರಿಣಾಮ ನೆಟ್ಟಗಿರಲ್ಲ ಅಂತಾ ಅಂಜಿಕೆ ಹಾಕಿದ್ದರು, ಅದೇ ವಿಷಯದಲ್ಲಿ ಆಗಿನಿಂದ ಇಲ್ಲಿಯವರೆಗೆ ಅವರು ನಮ್ಮ ಜೋತೆಗೆ ತಕರಾರು ಮಾಡುತತಾ ಬಂದಿರುತ್ತಾರೆ, ಈಗ ಮಳೆಗಾಲು ಬಂದಿದ್ದರಿಂದ ರೋಡಿನ ಮೇಲೆ ಬಿದ್ದ ಮಳೆ ನೀರು ಬಿದ್ದು ರೋಡಿಗೆ ಅಳವಡಿಸಿದ ಫೂಲಿನಿಂದ ಹೊರಗಡೆ ಹೋಗುತ್ತಿದ್ದು, ಆ ಫೂಲಿನ ಸಿಮೆಂಟ ಪೈಪದಲ್ಲಿ ಮಣ್ಣು ತುಂಬಿ ನೀರು ಹೋಗುವದು ಬಂದ ಆಗಿರುತ್ತದೆ, ಹೀಗಿರುವಾಗ ಇಂದು ದಿನಾಂಕ 11/06/2020 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನಾನು, ನನ್ನ ಅಣ್ಣತಮಕಿಯವರಾದ ವೀರಭದ್ರಪ್ಪ ತಂದೆ ಮಲ್ಲಪ್ಪ ಕ್ಯಾಸಪ್ಪನಳ್ಳೇರ, ನನ್ನ ತಮ್ಮನಾದ ಸಣ್ಣತಾಯಪ್ಪ ತಂದೆ ಮಲ್ಲಪ್ಪ ಕ್ಯಾಸಪ್ಪನಳ್ಳೇರ ಮತ್ತು ನಮ್ಮ ಗ್ರಾಮದ ಮಲ್ಲಪ್ಪ ತಂದೆ ಭೀಮರಾಯ ಬೆಳಗೇರಿ ಎಲ್ಲರೂ ಕೂಡಿಕೊಂಡು ಕ್ಯಾಸಪ್ಪನಳ್ಳಿ ಗ್ರಾಮದ ಸೀಮೆಯಲ್ಲಿ ಬರುವ ನಮ್ಮ ಹೊಲಕ್ಕೆ ಹೋದೆವು, ಹೊಲದ ಬಾಜುಯಿದ್ದ ಫೂಲಿನಲ್ಲಿ ಇದ್ದ ಮಣ್ಣು ತೆಗೆಯುತ್ತಿದ್ದೆವು, ಮಧ್ಯಾಹ್ನ 1-30 ಗಂಟೆ ಸುಮಾರಿಗೆ ನನ್ನ ಅಣ್ಣನಾದ ವೀರಭದ್ರಪ್ಪ ಇತನು ಫೂಲಿನ ಒಳಗಡೆ ಇಳಿದು ಮಣ್ಣು ತುಂಬಿಕೊಡುತ್ತಿದ್ದನು, ಮಲ್ಲಪ್ಪ ಬೆಳಗೇರಿ ಇತನು ರೋಡಿನ ಕಡೆಗೆ ಬೆನ್ನು ಮಾಡಿ ಕುಳಿತಿದ್ದನು, ನಾನು ಅವನ ಪಕ್ಕದಲ್ಲಿ ಕುಳಿತುಕೊಂಡಿದ್ದೆನು, ಇಬ್ಬರೂ ಮೇಲೆ ಕುಳಿತು ಮಣ್ಣನ್ನು ಹೊರಗಡೆ ಚಲ್ಲುತ್ತಿದ್ದೆವು, ಪಕ್ಕದಲ್ಲಿ ನನ್ನ ತಮ್ಮ ಸಣ್ಣತಾಯಪ್ಪ ಇತನು ನಿಂತಿದ್ದನು, ಅದೇ ವೇಳೆಗೆ ಯಾದಗಿರಿ-ವಾಡಿ ಮುಖ್ಯ ರಸ್ತೆ ಕಡೆಯಿಂದ ನನಗೆ ಪರಿಚಯದವನಾದ ಕ್ಯಾಸಪ್ಪನಳ್ಳಿ ಗ್ರಾಮದ ಈಶಪ್ಪ ತಂದೆ ತಮ್ಮಣ್ಣ ತೆಲಗರ ಇತನು ತನ್ನ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡು ಸ್ವಲ್ಪ ದೂರದಿಂದ ರೋಡಿನ ಮೇಲೆ ಅಲ್ಲಿಪೂರ ಕಡೆಯಿಂದ ನಡೆದುಕೊಂಡು ಬರುತ್ತಿದ್ದುದ್ದನ್ನು ನೋಡಿದೇವು, ಅವನು ತಮ್ಮೂರಿನ ಕಡೆಗೆ ಅಥವಾ ನಮ್ಮ ಹೊಲದ ಸಮೀಪದಲ್ಲಿ ಇರುವ ತನ್ನ ಹೊಲಕ್ಕೆ ಹೋಗುತ್ತಿದ್ದಾನೆ ಅಂತಾ ನಮ್ಮಷ್ಟಕ್ಕೆ ನಾವು ಕೆಲಸ ಮಾಡುತ್ತಿದ್ದೆವು, ಆಗ ಅವನು ನಮ್ಮ ಕಡೆಗೆ ಬಂದವನೇ ಮಲ್ಲಪ್ಪ ತಂದೆ ಬೆಳಗೇರಿ ಇತನಿಗೆ ಏ ಬೋಸಡಿ ಮಗನೇ ನೀನು ಈ ಹಿಂದೆ ನಿನ್ನ ಅಣ್ಣತಮಕಿಯವರ ಮಧ್ಯಸ್ಥಿಕೆ ವಹಿಸಿ ನಮಗೆ ಅನ್ಯಾಯ ಮಾಡಿದ್ದಿ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೆನೆ ಅಂತಾ ಅಂದವನೇ ತನ್ನ ಕೈಯಲ್ಲಿಯಿದ್ದ ಕೊಡಲಿಯಿಂದ ನನ್ನ ಪಕ್ಕದಲ್ಲಿಯೇ ಕುಳಿತಿದ್ದ ಮಲ್ಲಪ್ಪ ತಂದೆ ಭೀಮರಾಯ ಬೆಳಗೇರಿ ಇತನ ಕುತ್ತಿಗೆ ಎಡಭಾಗಕ್ಕೆ ಜೋರಾಗಿ ಹೊಡೆದನು, ಆಗ ಅವನಿಗೆ ಭಾರಿ ರಕ್ತಗಾಯವಾಗಿ ಅವನು ನೆಲದ ಮೇಲೆ ಬಿದ್ದನು, ಅಷ್ಟರಲ್ಲಿ ವೀರಭದ್ರಪ್ಪ ಇತನು ಫೂಲಿನ ಸಿಮೇಂಟ ಪೈಪದಿಂದ ಮೇಲೆ ಬಂದು ಈಶಪ್ಪ ತಂದೆ ತಮ್ಮಣ್ಣ ತೆಲಗರ ಇತನನ್ನು ಹಿಡಿದುಕೊಂಡನು, ನಾನು ಅಂಜಿ ಹೊಲದಲ್ಲಿ ಗಳೆ ಹೊಡೆಯುತ್ತಿದ್ದ ನನ್ನ ಅಣ್ಣ ತಮ್ಮಕಿಯವರಾದ ಮಲ್ಲಪ್ಪ ತಂದೆ ಹಣಮಂತ ಕ್ಯಾಸಪ್ಪನಳ್ಳೇರ ಇತನಿಗೆ ಕರೆದುಕೊಂಡು ಹೋಗಿ ಬರುವಷ್ಟರಲ್ಲಿ ವೀರಭದ್ರಪ್ಪನು ಈಶಪ್ಪನಿಗೆ ಬಿಟ್ಟು ಮಲ್ಲಪ್ಪ ಬೆಳಗೇರಿ ಇತನು ಸಾಯುತ್ತಾನೆ ಅಂತಾ ನೀರು ಹಾಕುವಷ್ಟರಲ್ಲಿ ಈಶಪ್ಪನು ಕೊಡಲಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು, ನಂತರ ಸ್ವಲ್ಪ ಸಮಯದಲ್ಲಿ ಮಲ್ಲಪ್ಪ ಬೆಳಗೇರಿ ಇತನು ಸ್ಥಳದಲ್ಲಿಯೇ ಬಿದ್ದು ಬಿಕ್ಕುತ್ತಾ ಮೃತಪಟ್ಟನು, ಈ ಹಿಂದೆ ಸುಮಾರು ಎರಡು-ಮೂರು ವರ್ಷಗಳಿಂದ ನಮಗೂ ಮತ್ತು ಈಶಪ್ಪ ತಂದೆ ತಮ್ಮಣ್ಣ ತೆಲಗರ ಇತನ ಬೀಗರಿಗೂ ಹೊಲದ ಸೀಮೆಯ ವಿಷಯದಲ್ಲಿ ತಕರಾರು ಆಗಿದ್ದು, ಆಗ ಮಲ್ಲಪ್ಪ ತಂದೆ ಭೀಮರಾಯ ಬೆಳಗೇರಿ ಇತನು ಮಧ್ಯಸ್ಥಿಕೆ ವಹಿಸಿದಕ್ಕೆ ಇದೆ ವಿಷಯದಲ್ಲಿ ಈಶಪ್ಪ ಮತ್ತು ಆತನ ಬೀಗರು ತಿವೃ ವೈಮನಸ್ಸು ಬೆಳೆಸಿಕೊಂಡು ಬಂದು ಈಶಪ್ಪನು ತನ್ನ ಬೀಗರಾದ ಶರಣಪ್ಪ ತಂದೆ ಅಡಿವೆಪ್ಪ ಮೂಕಪ್ಪನೊರ, ಮಲ್ಲಪ್ಪ ತಂದೆ ಅಡಿವೆಪ್ಪ ಮೂಕಪ್ಪನೊರ, ಹಣಮಂತ್ರಾಯ ತಂದೆ ಅಡಿವೆಪ್ಪ ಮೂಕಪ್ಪನೊರ, ಯಂಕಪ್ಪ ತಂದೆ ಅಡಿವೆಪ್ಪ ಮೂಕಪ್ಪನೊರ ಮತ್ತು ಈಸಪ್ಪ ಇತನ ಅಣ್ಣನಾದ ಗುಂಡಪ್ಪ ತಂದೆ ತಮ್ಮಣ್ಣ ತೆಲಗರ ಇವರ ಪ್ರಚೋದನೆಯಿಂದ ಈಶಪ್ಪ ತಂದೆ ತಮ್ಮಣ್ಣ ತೆಲಗರ ಇತನು ವೀರಭದ್ರಪ್ಪ ಕ್ಯಾಸಪ್ಪನಳ್ಳೇರ ಇತನಿಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುತ್ತಾನೆ, ಆದ್ದರಿಂದ 1)ಈಶಪ್ಪ ತಂದೆ ತಮ್ಮಣ್ಣ ತೆಲಗರ 2)ಶರಣಪ್ಪ ತಂದೆ ಅಡಿವೆಪ್ಪ ಮೂಕಪ್ಪನೊರ, 3)ಮಲ್ಲಪ್ಪ ತಂದೆ ಅಡಿವೆಪ್ಪ ಮೂಕಪ್ಪನೊರ, 4)ಹಣಮಂತ್ರಾಯ ತಂದೆ ಅಡಿವೆಪ್ಪ ಮೂಕಪ್ಪನೊರ, 5)ಯಂಕಪ್ಪ ತಂದೆ ಅಡಿವೆಪ್ಪ ಮೂಕಪ್ಪನೊರ ಮತ್ತು 6)ಗುಂಡಪ್ಪ ತಂದೆ ತಮ್ಮಣ್ಣ ತೆಲಗರ ಇವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 75/2020 ಕಲಂ 302, 109 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ, 


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 159/2020 ಕಲಂ 279, 304(ಎ) ಐ.ಪಿ.ಸಿ : ಇಂದು ದಿನಾಂಕ 11/06/2020 ರಂದು ಮುಂಜಾನೆ 07-00 ಗಂಟೆಗೆ ಫಿರ್ಯಾದಿ ಶ್ರೀಮತಿ ನಿಂಗಮ್ಮ ಗಂಡ ಶರಣಪ್ಪ ಕುಣಚಗಿ ವಯ 35 ವರ್ಷ ಜಾತಿ ಲಿಂಗಾಯತ ಉಃ ಮನೆಗೆಲಸ ಸಾಃ ಮನಗನಾಳ ತಾಃ ಶಹಾಪೂರ ಜಿಃ ಯಾದಗಿರಿ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ಫಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ, ತನ್ನ ಗಂಡನಾದ ಶರಣಪ್ಪ ಇವರು ಡ್ರೈವರ ಕೆಲಸ ಮಾಡಿಕೊಂಡಿದ್ದರು, ಇತ್ತಿಚಿಗೆ 3 ತಿಂಗಳಿನಿಂದ ಕಲಬುರಗಿಯ ಮರಳಿನ ಟಿಪ್ಪರನ್ನು ನಡೆಸುತಿದ್ದರು. ತನ್ನ ಗಂಡನೊಂದಿಗೆ ಗ್ರಾಮದ ನಬಿ ರಸೂಲ್ ತಂದೆ ಅಬ್ದುಲ್ ರಹಿಮಾನ್ ಗುರುಸಣಗಿ ಇವನು ಕ್ಲೀನರ ಕೆಲಸಕ್ಕೆ ಹೋಗುತಿದ್ದನು. ನಿನ್ನೆ ದಿನಾಂಕ 10/06/2020 ರಂದು ಸಾಯಂಕಾಲ 5-00 ಗಂಟೆಗೆ ನನ್ನ ಗಂಡ ಮತ್ತು ನಮ್ಮೂರಿನ ನಬಿರಸೂಲ್ ಇಬ್ಬರೂ ಟಿಪ್ಪರನಲ್ಲಿ ಮರಳು ಸಾಗಾಣಿಕೆ ಮಾಡುವದು ಇದೆ ಶಹಾಪೂರಕ್ಕೆ ಹೋಗುತ್ತೇವೆ ಅಂತ ಹೇಳಿ ಮನೆಯಿಂದ ಹೋಗಿದ್ದರು. ಹೀಗಿರುವಾಗ ಇಂದು ದಿನಾಂಕ 11/06/2020 ರಂದು ಬೆಳಗಿನ ಜಾವ 04.25 ಎ.ಎಂ. ಸುಮಾರಿಗೆ ದೇವದುರ್ಗದಲ್ಲಿರುವ ಫಿರ್ಯಾದಿಯ ತಮ್ಮ ಮಲ್ಲಿಕಾಜರ್ುನ ತಂ/ ಶರಣಪ್ಪ ಅಣೇರ ಈತನು ತನ್ನ ಜೊತೆಯಲಿರುವ ಇನ್ನೊಬ್ಬ ತಮ್ಮ ಸುರೇಶನಿಗೆ ಫೋನ್ ಮಾಡಿ 4.20 ಎ.ಎಂ. ಸುಮಾರಿಗೆ ಮಾವ ಶರಣಪ್ಪನೊಂದಿಗೆ ಟಿಪ್ಪರನಲ್ಲಿ ಮರಳು ತುಂಬಿಕೊಂಡು ಬರಲು ಹೋಗಿದ್ದ ಕ್ಲೀನರ್ ನಬಿ ರಸೂಲ್ ಇವನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಮಾವ ಶರಣಪ್ಪ ಕುಣಚಗಿ ಇಬ್ಬರು ಕೂಡಿಕೊಂಡು ಟಿಪ್ಪರ.ನಂ.ಕೆಎ-33 ಬಿ-6669 ನೇದ್ದರಲ್ಲಿ ದೇವದುರ್ಗ ತಾಲೂಕಿನ ಬಾಗೂರಿಗೆ ಹೋಗಿ ಮರಳು ಲೋಡ ಮಾಡಿಕೊಂಡು ಇಂದು ದಿನಾಂಕ: 11/06/2020 ರಂದು ಬೆಳಿಗ್ಗೆ 02-00 ಎ.ಎಂ. ಸುಮಾರಿಗೆ ಬಾಗೂರಿನಿಂದ ಶಹಾಪುರ ಮಾರ್ಗವಾಗಿ ಬೀದರಕ್ಕೆ ಹೊರಟಿದ್ದೆವು. ನಮ್ಮೊಂದಿಗೆ ನಮ್ಮ ಟಿಪ್ಪರ ಮಾಲೀಕನ ಇನ್ನೊಂದು ಟಿಪ್ಪರ.ನಂ. ಕೆಎ-32 ಡಿ-6888 ನೇದ್ದನ್ನು ಇಸ್ಮಾಯಿಲ್ ತಂ/ ಬಾಬು ಮುಲ್ಲಾ ಸಾ|| ಕೊರಳ್ಳಿ ತಾ|| ಆಳಂದ ಈತನು ನಡೆಸುತ್ತಿದ್ದನು. ಸದರಿ ಟಿಪ್ಪರ ನಮ್ಮ ಮುಂದೆ ಹೋಗುತಿತ್ತು. ಅದರ ಹಿಂದಿನಿಂದ ನಾವು ಹೋಗುತಿದ್ದೆವು. ಇಂದು ಬೆಳಿಗ್ಗೆ 3.50 ಎ.ಎಂ. ಸುಮಾರಿಗೆ ಶಹಾಪುರ ಹೊಸ ಬಸ್ ನಿಲ್ದಾಣ ದಾಟಿ ಹೊರಟಿದ್ದಾಗ ಮುಂದೆ ಹೊರಟಿದ್ದ ಟಿಪ್ಪರ್.ನಂ. ಕೆಎ-32 ಡಿ-6888 ನೇದ್ದರ ಚಾಲಕ ಇಸ್ಮಾಯಿಲ್ ಇವನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ ಹತ್ತಿಗುಡೂರ-ಶಹಾಪುರ ಮುಖ್ಯ ರಸ್ತೆಯಲ್ಲಿರುವ ಶಹಾಪುರ ನಗರದ ಪಾಲ್ಕಮ್ಮ ಗುಡಿಯ ಹತ್ತಿರ ರೋಡಿನಲ್ಲಿ ಒಮ್ಮೆಲೆ ಬ್ರೇಕ್ ಹಾಕಿ ನಿಲ್ಲಿಸಿದರಿಂದ ನಮ್ಮ ಚಾಲಕ ಶರಣಪ್ಪ ಇವರ ನಿಯಂತ್ರಣ ತಪ್ಪಿ ನಮ್ಮ ಟಿಪ್ಪರ ಮುಂದೆ ನಿಂತ ಟಿಪ್ಪರನ ಹಿಂಬಾಗದಲ್ಲಿ ಡಿಕ್ಕಿಯಾದ ಪರಿಣಾಮ ನಿಮ್ಮ ಮಾವ ಶರಣಪ್ಪನ ಬಲಗಾಲಿನ ಮೊಳಕಾಲ ಕೆಳಗೆ ಭಾರೀ ರಕ್ತಗಾಯವಾಗಿ ಕಾಲು ನುಜ್ಜುಗುಜ್ಜ್ಜಾಗಿದ್ದು ಮತ್ತು ಎದೆಗೆ ಭಾರೀ ಒಳಪೆಟ್ಟಾಗಿರುತ್ತದೆ. ಸ್ಥಳಕ್ಕೆ ಬಂದ 108 ವಾಹನದಲ್ಲಿ ನಿಮ್ಮ ಮಾವ ಶರಣಪ್ಪನಿಗೆ ಹಾಕಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ 4.15 ಎ.ಎಂ.ಕ್ಕೆ ಗಾಯಾಳುವಿಗೆ ಪರೀಕ್ಷೆ ಮಾಡಿದ ವೈಧ್ಯಾಧಿಕಾರಿಗಳು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ. ನಾನು ಶಹಾಪೂರಕ್ಕೆ ಬರುತ್ತೇನೆ. ನೀವು ಬೇಗನೆ ಶಹಾಪುರ ಸರಕಾರಿ ಆಸ್ಪತ್ರೆಗೆ ಬನ್ನಿ ಅಂತಾ ಹೇಳಿದ್ದರಿಂದ ಫಿರ್ಯಾದಿ ಮತ್ತು ಆಕೆಯ ತಮ್ಮ ಸುರೇಶ ಇಬ್ಬರು ಕೂಡಿ ಶಹಾಪುರ ಸರಕಾರಿ ಆಸ್ಪತ್ರೆಗೆ ಬಂದು ಮರ್ಚರಿ ಕೋಣೆಯಲ್ಲಿದ್ದ ತನ್ನ ಗಂಡನ ಶವ ನೋಡಲಾಗಿ ಮೇಲ್ಕಾಣಿಸಿದಂತೆ ಗಾಯಗಳಾಗಿರುತ್ತವೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಟಿಪ್ಪರ.ನಂ. ಕೆಎ-32 ಡಿ-6888 ನೇದ್ದರ ಚಾಲಕ ಇಸ್ಮಾಯಿಲ್ ತಂ/ ಬಾಬು ಮುಲ್ಲಾ ಸಾ|| ಕೊರಳ್ಳಿ ತಾ|| ಆಳಂದ ಜಿಃ ಕಲಬುರಗಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 159/2020 ಕಲಂ 279 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 81/2019 ಕಲಂ ಮಹಿಳೆ ಕಾಣೆ : ಇಂದು ದಿನಾಂಕ: 11-06-2020 ರಂದು ಬೆಳಿಗ್ಗೆ 09-00 ಗಂಟೆಗೆ ಪಿಯರ್ಾಧಿದಾರನಾದ ದೇವಿಂದ್ರಪ್ಪ ತಂದೆ ಮರೆಯಪ್ಪ ಬಾಗ್ಲಿ ವ|| 26 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಇಂದಿರಾ ನಗರ ಸೈದಾಪೂರ ಈತನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 28-05-2020 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ನಾನು ಕೂಲಿಕೆಲಸಕ್ಕೆ ನನ್ನ ಅಣ್ಣ ಲಕ್ಷ್ಮಣ ಈತನು ಕೂಲಿಕೆಲಸಕ್ಕೆ ಅಂತಾ ಕ್ತಾತ್ನಾಳ ಗ್ರಾಮಕ್ಕೆ ಹೋದನು. ನಾನೂ ಕೂಡ ಕೂಲಿಕೆಲಸಕ್ಕೆ ಹಿರೆನೂರ ಗ್ರಾಮಕ್ಕೆ ಹೋದೆನು, ನಾನು ಅಂದು ರಾತ್ರಿ 07-00 ಗಂಟೆಗೆ ಕೂಲಿಕೆಲಸದಿಂದ ಮನೆಗೆ ಬಂದಾಗ ನಮ್ಮ ತಾಯಿ ನನಗೆ ತಿಳಿಸಿದ್ದೆನೆಂದರೆ ತಂಗಿ ಲಕ್ಷ್ಮೀ ಈಕೆಯು ಮನೆಯಲ್ಲಿ ಇಲ್ಲ ಎಲ್ಲೋ ಹೋಗಿದ್ದಾಳೆ ಅಂತಾ ತಿಳಿಸಿದ್ದರಿಂದ ನಾನು ನನ್ನ ಇನ್ನೊಬ್ಬ ತಂಗಿಯಾದ ಸರಸ್ವತಿ ಈಕೆಗೆ ಎಲ್ಲೋಗಿದ್ದಾಳೆ ಅಂತಾ ಕೇಳಿದಾಗ ಲಕ್ಷ್ಮೀ ಈಕೆಯು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನನಗೆ ನಾನು ನನ್ನ ಶಾಲೆಯ ಕಾಗದ ಪತ್ರಗಳನ್ನು ಝಿರಾಕ್ಸ ಮಾಡಿಕೊಂಡು ಬರುತ್ತೇನೆ ಅಂತಾ ನನ್ನ ಹತ್ತಿರ 20 ರೂಪಾಯಿ ತೆಗೆದುಕೊಂಡು 
ಸೈದಾಪೂರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದಳು ಮತ್ತೆ ವಾಪಸ ಮನೆಗೆ ಬಂದಿರುವದಿಲ್ಲ ಅಂತಾ ತಿಳಿಸಿದಳು, ಆಗ ನಾನು ಆಕೆಯ ನಂಬರಗೆ ಪೊನ್ ಮಾಡಿದಾಗ ಪೊನ್ ಸ್ವಿಚ್ ಆಫ್ ಅಂತಾ ಬಂತು ಆಗ ನಾನು ನನ್ನ ಅಣ್ಣ ಲಕ್ಷ್ಮಣ ಇಬ್ಬರೂ ಕೂಡಿ ಸೈದಾಪೂರಕ್ಕೆ ಬಂದು ನನ್ನ ತಂಗಿ ಲಕ್ಷ್ಮೀ ಈಕೆಗೆ ಹುಡಕಾಡಲಾಗಿ ಆಕೆ ಸಿಗಲಿಲ್ಲ ಆಕೆ ಎಲ್ಲಿಯಾದರೂ ತನ್ನ ಸ್ನೇಹಿತರ ಮನೆಗೆ ಹೋಗಿರಬಹುದು ಮುಂಜಾನೆ ಬರಬಹುದು ಅಂತಾ ಸುಮ್ಮಿನಿದ್ದೆವು, ಮರು ದಿನ ಕೂಡ ನನ್ನ ತಂಗಿ ಮನೆಗೆ ಬರಲಿಲ್ಲ ಆಗ ನಾವು ನಮ್ಮ ಸಂಬಂಧಿಕರ ಊರುಗಳಿಗೆ ಹೋಗಿ ಹುಡುಕಾಡಲಾಗಿ ನಮ್ಮ ತಂಗಿ ಲಕ್ಷ್ಮೀ ಈಕೆಯು ಸಿಗಲಿಲ್ಲ ನಾವು ಎಲ್ಲಾ ಕಡೆ ಹುಡಕಾಡಿದರು ನಮ್ಮ ತಂಗಿ ಲಕ್ಷ್ಮೀ ತಂದೆ ಮರೆಯಪ್ಪ ಬಾಗಲಿ ವ|| 23 ವರ್ಷ ಜಾ|| ಕಬ್ಬಲಿಗ ಉ|| ಅಥಿತಿ ಶಿಕ್ಷಕಿ ಸಾ|| ಇಂದಿರಾನಗರ ಸೈದಾಪೂರ ಈಕೆಂಯಿಷ್ಟು ದಿನ ಹುಡಕಾಡಿದರೂ ಸಿಗದ ಕಾರಣ ಇಂದು ದಿನಾಂಕ: 11-06-2020 ರಂದು ಠಾಣೆಗೆ ತಡವಾಗಿ ಬಂದು ನನ್ನ ತಂಗಿ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಇರುತ್ತದೆ. 



 ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 82/2020 ಕಲಂ. 287,304(ಎ) ಐಪಿಸಿ : ಇಂದು ದಿನಾಂಕ 11-06-2020 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀ ಅಬ್ದುಲ್ಸಾಬ ತಂದೆ ಮಹ್ಮದ ಹುಸೇನ ಪಿಂಜರ್, ವಯ|| 60 ವರ್ಷ, ಜಾ|| ಮುಸ್ಲಿಂ, ಉ|| ಒಕ್ಕಲುತನ ಸಾ: ಯಲಸತ್ತಿ ಗ್ರಾಮ, ತಾ: ಗುರುಮಠಕಲ ಜಿ: ಯಾದಗಿರಿ ಈತನು ಠಾಣೆಗೆ ಬಂದು ಹೇಳಿಕೆ ನೀಡಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ್ದು ಸಾರಾಂಶವೇನೆಂದರೆ, ಇಂದು ಬೆಳಿಗ್ಗೆ ನಾವೆಲ್ಲರೂ ಕೂಡಿ ಕಿಲ್ಲನಕೇರಾ ಗ್ರಾಮದ ಯೋಗೇಶ ಶೇಠ ಹೊಲದತ್ತಿರ ಬಂದೆವು. ಹೊಲದಲ್ಲಿದ್ದ ಕೆರೆಮಣ್ಣು ಕುಪ್ಪಿಯ ಪಕ್ಕಕ್ಕೆ ಹಾಸಿಗೆಯಲ್ಲಿ ನನ್ನ ದೊಡ್ಮಮಗ ನಭೀಸಾ ಹೆಣವಾಗಿದ್ದ. ನನ್ನಮಗನ ಮುಖ ಚಪ್ಪಟ್ಟವಾಗಿ ಮುಖವೆಲ್ಲ ರಕ್ತವಾಗಿತ್ತು. ಯಂಗಾಗ್ಯದಂತಾ ಬಂದೆಸಾಬನಿಗೆ ಕೇಳಿದರೆ ಮಹ್ಮದ ಹೇಳಿದ್ದರಿಂದ ನಾನು ಹೊಲದತ್ತಿರ ಬಂದು ನೋಡಿದಾಗ ನಭೀಸಾ ಮೃತಪಟ್ಟಿದ್ದ. ಜೆಸಿಬಿ ಆಪರೇಟರ್ಗೆ ಕೇಳಿದರೆ ಜೆಸಿಬಿಯಿಂದ ಮಣ್ಣು ಲೆವಲ್ ಮಾಡುವ ಕಾಲಕ್ಕೆ ಬೆಳ್ಗಮುಂಜಾನೆ 5.30 ಗಂಟೆ ಸುಮಾರಿಗೆ ಮಣ್ಣಿನ ಕುಪ್ಪಿಯ ಪಕ್ಕಕ್ಕೆ ಮಲಗಿದ್ದ ಮಾಲೀಕನ ಮೇಲೆ ಜೆಸಿಬಿ ಟೈರ್ ಹಾಯ್ದದ ನಾನು ಮಾಲೀಕನಿಗೆ ನೋಡಿಲ್ಲ ಮುಂದಕ್ಕೋಗಿ ಪುನ: ಮಣ್ಣಿನ ಕುಪ್ಪಿಯತ್ತಿರ ಜೆಸಿಬಿ ತಂದಾಗ ಮಾಲೀಕ ಕಾಣಿಸಿದ ಅಂತಾ ತಿಳಿಸಿದನೆಂದು ಹೇಳಿದ. ನನ್ನ ದೊಡ್ಮಗ ನಭೀಸಾ ತಂದೆ ಅಬ್ದುಲಸಾಬ ಪಿಂಜರ್ ವಯಸ್ಸು 26 ವರ್ಷ ಈತನು ಕಿಲ್ಲನಕೇರಾ ಗ್ರಾಮ ಸೀಮೆಯ ಯೋಗೇಶ ಶೇಠ ಹೊಲದಲ್ಲಿ ಕೆರೆಮಣ್ಣಿನ ಡಿಗ್ಗಿ ಪಕ್ಕಕೆ ಮಲಗಿದ್ದನ್ನು ನೋಡದೆ ಜೆಸಿಬಿ ಆಪರೇಟರಾದ ಮಹೆಬೂಬಪಾಶ ಈತನು ಕೆರೆಮಣ್ಣು ಹೊಲದಲ್ಲಿ ಲೆವಲ್ ಮಾಡುವ ಕಾಲಕ್ಕೆ ನಿರ್ಲಕ್ಷ್ಯತನದಿಂದ ನನ್ನ ಮಗನ ಮೇಲೆ ಜೆಸಿಬಿ ಹಾಯಿಸಿರುತ್ತಾನೆ. ಜೆಸಿಬಿ ಚಕ್ರ ನನ್ನಮಗನ ಮುಖದ ಮೇಲೆ ಹಾಯ್ದೋಗಿದ್ದರಿಂದ ನನ್ನಮಗ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಕಾರಣ ಜೆಸಿಬಿ ಆಪರೇಟರ್ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ನೀಡಿದ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ.82/2020 ಕಲಂ. 279,304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 


 ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 74/2020 ಕಲಂ 323,324, 504, 506 ಐಪಿಸಿ : ದಿನಾಂಕ 10/06/2020 ರಂದು ನಮ್ಮ ಓಣಿಯಲ್ಲಿ ಒಬ್ಬರು ತೀರಿಕೊಂಡಿದ್ದರು. ನಾನು ನೋಡಿಕೊಂಡು ಬರಲು ರಾತ್ರಿ ಅಲ್ಲಿಗೆ ಹೋಗಿದ್ದೆ. ಆಗ ನಮ್ಮ ಅಣ್ಣತಮ್ಮಕೀಯ ಮರೆಪ್ಪ ತಂದೆ ರಾಯಪ್ಪ ಮ್ಯಾಗೇರಿ ಈತನು ಕುಡಿದ ಅಮಲಿನಲ್ಲಿ ಒದರಾಡುತ್ತಿದ್ದ. ಬುದ್ದಿವಾದ ಹೇಳಿದ್ದಕ್ಕೆ ಫಿಯರ್ಾದಿಯೊಂದಿಗೆ ಜಗಳ ಮಾಡಿಕೊಂಡಿದ್ದನು. ಹೀಗಿದ್ದು ಇಂದು ದಿನಾಂಕ 11/06/2020 ರಂದು 6.30 ಎಎಮ್ ಕ್ಕೆ ಫಿಯರ್ಾದಿದಾರನು ಆರೋಪಿತನ ಮನೆಯ ಮುಂದೆ ಹೋಗಿ ನಿನ್ನೆ ರಾತ್ರಿ ನನಗೆ ಯಾಕೆ ಬೈದಿರುವೆ ಅಂತ ಕೇಳಿದ್ದಕ್ಕೆ ಆರೋಪಿತನು ಮತ್ತೆ ಅವಾಚ್ಯವಾಗಿ ಬೈದು ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಐ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ. 


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 41/2020 ಕಲಂ: 279 ಐಪಿಸಿ : ಇಂದು ದಿನಾಂಕ 11/06/2020 ರಂದು 12:00 ಪಿ.ಎಂ ಕ್ಕೆ ಪಿಯರ್ಾದಿ ಶ್ರೀ ನೀಲಪ್ಪ ತಂದೆ ರಾಜಪ್ಪ ಚವನಬಾವಿ ವ:32 ವರ್ಷ ಉ:ಒಕ್ಕಲುತನ ಜಾ:ಹಿಂದು ಕುರಬರ ಸಾ:ಜೊಗಂಡಬಾವಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಪಿಯರ್ಾದಿಯ ಅಜರ್ಿಯ ಸಾರಾಂಶವೆನಂದರೆ ನನ್ನ ಅಣ್ಣ ದ್ಯಾಮಣ್ಣ ತಂದೆ ರಾಜಪ್ಪ ಚವನಬಾವಿ ರವರದ್ದು ಒಂದು ಟಾಟಾ ಇಂಡಿಕಾ ಎಲ್.ಎಕ್ಸ. ಕಾರ ನಂ ಕೆ.ಎ.28 ಸಿ-5377 ಕಾರು ಇದ್ದು ಅದನ್ನು ನಮ್ಮ ಅಣ್ಣ ದ್ಯಾಮಣ್ಣ ರವರು ಚಲಾಯಿಸುತ್ತಿದ್ದರು ದಿನಾಂಕ 07/06/2020 ರಂದು ಬೆಳಗಿನ ಜಾವ 3:00 ಗಂಟೆಯ ಸುಮಾರಿಗೆ ನಮ್ಮ ಅಣ್ಣ ದ್ಯಾಮಣ್ಣನು ಬಿಳೆಬಾಯಿಗೆ ಕಾರ ಬಾಡಿಗೆಗೆ ಹೋಗುವದು ಇದೆ ಅಂತಾ ಮನೆಯಲ್ಲಿ ಇದ್ದ ನನಗೆ ಮತ್ತು ನಮ್ಮ ತಮ್ಮಂದಿರಾದ ಹಣಮಪ್ಪ ತಂದೆ ರಾಜಪ್ಪ ಚವನಬಾವಿ, ಮಲ್ಲಪ್ಪ ತಂದೆ ರಾಜಪ್ಪ ಚವನಬಾವಿ ರವರಿಗೆ ಹೇಳಿ ನಮ್ಮ ಟಾಟಾ ಇಂಡಿಕಾ ಎಲ್.ಎಕ್ಸ. ಕಾರ ನಂ ಕೆ.ಎ.28 ಸಿ-5377 ಕಾರನ್ನು ತಗೆದುಕೊಂಡು ಹೋದರು. ನಂತರ ಬೆಳಗಿನ ಜಾವ 3:45 ಗಂಟೆಯ ಸುಮಾರಿಗೆ ನಮ್ಮ ಅಣ್ಣ ದ್ಯಾಮಣ್ಣನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ತಾನು ದಿನಾಂಕ 07/06/2020 ರಂದು ಬೆಳಗಿನ ಜಾವ 3:30 ಗಂಟೆಯ ಸುಮಾರಿಗೆ ಹಗರಟಗಿ ಗ್ರಾಮದಿಂದ 2 ಕಿ.ಮೀ ಅಂತರದಲ್ಲಿ ಇರುವ ರಸ್ತೆಯ ತಿರುವಿನಲ್ಲಿ ತಾನು ತನ್ನ ಗಾಡಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿದಾಗ ಕಾರು ತನ್ನ ನಿಯಂತ್ರಣ ತಪ್ಪಿ ರಸ್ತೆಯ ಎಡಬಾಜುವಿಗೆ ಬಿದ್ದಿದು,್ದ ತಾನು ಗಾಡಿ ನಿಯಂತ್ರಣ ತಪ್ಪಿದ ಕೂಡಲೆ ಗಾಡಿಯಿಂದ ಕೆಳಗೆ ಬಿದ್ದಿದ್ದು ನನಗೆ ಯಾವುದೆ ಪೆಟ್ಟುಗಳು ಆಗಿರುವದಿಲ್ಲ ನನ್ನ ಗಾಡಿ ಹೋಗಿ ತಗ್ಗಿನಲ್ಲಿ ಬಿದ್ದಿರುತ್ತದೆ ಅಂತಾ ಹೇಳಿದನು. ಆಗ ನಾನು ಈ ವಿಷಯವನ್ನು ನಮ್ಮ ತಮ್ಮಂದಿರಾದ ಹಣಮಪ್ಪ ಹಾಗೂ ಮಲ್ಲಪ್ಪ ರವರಿಗೆ ಹೇಳಿ ಅವರನ್ನು ಕರೆದುಕೊಂಡು ಹೋಗಿ ನೋಡಿದ್ದು ಅಲ್ಲಿ ನಮ್ಮ ಅಣ್ಣ ದ್ಯಾಮಣ್ಣ ರವರು ಇದ್ದು ಅವರಿಗೆ ಯಾವುದೆ ಗಾಯಗಳು ಆಗಿರುವದಿಲ್ಲ ನಮ್ಮ ಕಾರನ್ನು ನೋಡಲಾಗಿ ಕಾರ ಸಂಪೂರ್ಣ ನುಜ್ಜುಗೊಜ್ಜಾಗಿದ್ದು ಇರುತ್ತದೆ ಕಾರಣ ನಮ್ಮ ಅಣ್ಣ ದ್ಯಾಮಣ್ಣ ರವರಿಗೆ ಯಾವುದೆ ಗಾಯಗಳಾಗಿರದೆ ಇರುವದರಿಂದ ನಾವು ನಮ್ಮ ಕಾರು ಪಲ್ಟಿಯಾಗಿ ಬಿದ್ದು ಸಂಪೂರ್ಣ ನುಜುಗೊಜ್ಜಾಗಿದ್ದರಿಂದ ನಾವು ಇನ್ಸುರೆನ್ಸ ಸಂಬಂದ ಇನ್ಸುರೆನ್ಸ ಆಪೀಸ್ಗೆ ಹೋದಾಗ ಅವರು ಎಪ್.ಐ.ಆರ್ ಅದರೆ ಮಾತ್ರ ಇನ್ಸುರೆನ್ಸ ಬರುತ್ತದೆ ಅಂತಾ ಹೇಳಿದ್ದರಿಂದ ಇಂದು ಅಪಘಾತ ಪಡಿಸಿದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ತಡವಾಗಿ ಬಂದು ಪಿಯರ್ಾದ ಕೊಟ್ಟಿದ್ದು ಇರುತ್ತದೆ. ಅಂತಾ ಸಾರಾಂಶವೆನೆಂದರೆ ಠಾಣೆಯ ಗುನ್ನೆ ನ 41/2020 ಕಲಂ 279 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!