ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/06/2020

By blogger on ಗುರುವಾರ, ಜೂನ್ 11, 2020                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/06/2020 
                                                                                                               
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 74/2020 ಕಲಂ 302 ಸಂ 34 ಐಪಿಸಿ : ಇಂದು ದಿನಾಂಕ 10/06/2020 ರಂದು ಮಧ್ಯಾಹ್ನ 1-00 ಗಂಟೆಗೆ ಫಿರ್ಯಾಧಿದಾರರಾದ ಡಾಃ ನಂದಕುಮಾರ ತಂದೆ ತುಳಸಿರಾಮ ತಾಂದಳೆ ಸಾಃ ರಾಮನಗರ ಕಲಬುಗರ್ಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿತನಾಗಿದ್ದು ಗೌರವ ಉಪನ್ಯಾಸಕರು ಅಂತಾ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನಮ್ಮ ತಂದೆ-ತಾಯಿಗೆ ನಾವು ಐದು ಜನ ಅಣ್ಣ ತಮ್ಮಂದಿರು ಇರುತ್ತೆವೆ, ನನ್ನ ತಮ್ಮನಾದ ರಾಜಕುಮಾರ ಇವರು ನಾಲ್ಕನೇ ಮಗನು ಇದ್ದಿರುತ್ತಾನೆ, ನನ್ನ ತಮ್ಮ ಅಪಜಲಪೂರ ಬಸ್ ಡಿಪೋದಲ್ಲಿ ಡ್ರೈವರ ಕಮ್ ಕಂಡಕ್ಟರ ಅಂತಾ ಸುಮಾರು 1 ವರ್ಷದಿಂದ ಕೆಲಸ ಮಾಡುತಿದ್ದರು, ಕಾರಾಣಾಂತದಿಂದ ಈಗ ಡಿಸ್ಮಿಸ್ ಆಗಿರುತ್ತಾರೆ, ಈಗ ಅವರು 10 ದಿವಸಗಳಿಂದ ಅವರು ಯಾದವರಾವ ತಂದೆ ಜಯರಾಮ ಮೊರೆ ಇವರ ಲಾರಿ ನಂ ಎಮ್.ಎಚ್-08-ಡಬ್ಲ್ಯು-2753 ನೆದ್ದರ ಡ್ರೈವರ ಅಂತಾ ಕೆಲಸ ಮಾಡುತ್ತಿದ್ದರು,  ನನ್ನ ತಮ್ಮನು ದಿನಾಂಕ 23/05/2020 ರಂದು ಯಾದಗಿರಿ-ಸೆಡಂ ಮುಖ್ಯ ರಸ್ತೆಯ ಯಡ್ಡಳ್ಳಿ-ಬಂದಳ್ಳಿ ರೋಡಿನ ಮೇಲೆ ರೋಡಿನ ಬದಿಯ ಜಾಲಿ ಕಂಟಿಯಲ್ಲಿ ಬಿದ್ದು ಮೃತಪಟ್ಟಿದ್ದು, ಆತನ ಹಣೆಗೆ, ಎದೆಗೆ ಮತ್ತು ಇತರೆ ಕಡೆಗಳಲ್ಲಿ ಗುಪ್ತಗಾಯಗಳು ಮತ್ತು ತರಚಿದಗಾಯಗಳಾಗಿದ್ದು, ಆತನ ಸಾವಿನಲ್ಲಿ ಲಾರಿ ಕ್ಲೀನರ ಶರಣು ಕಲಶೆಟ್ಟಿ ಮತ್ತು ಇತನ ಗೆಳೆಯ ಅವರ ಮೇಲೆ ನನ್ನ ತಮ್ಮನ ಸಾವಿನ ಬಗ್ಗೆ ಸಂಶಯ ಇರುತ್ತದೆ ಅಂತಾ ಹೇಳಿಕೆ ಫಿರ್ಯಾಧಿ ಸಲ್ಲಿಸಿದ್ದು, ನನ್ನ ಫಿರ್ಯಾಧಿ ಮೇರೆಗೆ ಅಂದೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. ನಂ 06/2020 ಕಲಂ 174(ಸಿ) ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿರುತ್ತಿರಿ, ಈ ಮೊದಲು ನಾನು ನೀಡಿದ ಹೇಳಿಕೆಗೆ ಮುಂದುವರೆದು ಇಂದು ದಿನಾಂಕ 10/06/2020 ರಂದು ಯಾದಗಿರಿ ಗ್ರಾಮೀಣ ಠಾಣೆಗೆ ಹಾಜರಾಗಿ ನನ್ನ ಪುರವಣಿ ಹೇಳಿಕೆ ಏನೆಂದರೆ ನನ್ನ ತಮ್ಮನಾದ ರಾಜಕುಮಾರ ತಂದೆ ತುಳಸಿರಾಮ ತಾಂದಳೆ ಹಾಗು ಲಾರಿ ಕ್ಲೀನರಾದ ಶರಣು ತಂದೆ ಮಹಾಂತಪ್ಪ ದಂಡೆ (ಕಲಶೆಟ್ಟಿ) ಇವರಿಬ್ಬರೂ ಸುಮಾರು ಒಂದು  ವರ್ಷದಿಂದ ಒಬ್ಬರಿಗೊಬ್ಬರು ಪರಿಚಯವಾಗಿದ್ದು, ನನ್ನ ತಮ್ಮನು ನೌಕರಿಯಲ್ಲಿದ್ದ ಸಮಯದಲ್ಲಿ ಒಂದು ವರ್ಷದ ಹಿಂದೆ ತನ್ನ ತಿಂಗಳ ಸಂಬಳ ತೆಗೆದುಕೊಂಡು ಬರುವಾಗ ಶರಣು ತಂದೆ ಮಹಾಂತಪ್ಪ ದಂಡೆ (ಕಲಶೆಟ್ಟಿ) ಇತನು ನನ್ನ ತಮ್ಮನ ಜೋತೆಗೆ ಜಗಳ ಮಾಡಿ ಅವನಿಗೆ ಕಲ್ಲಿನಿಂದ ತಲೆಗೆ ಹೊಡೆದು ಆತನ ಹತ್ತಿರವಿದ್ದ ಸಂಬಳದ 5000/ರೂ ಹಣವನ್ನು ಕಸಿದುಕೊಂಡು ಹೋಗಿದ್ದು, ಮುಂದೆ ಆತನಿಗೆ ಕರೆಯಿಸಿ ನನ್ನ ತಮ್ಮನ ತಂಟೆಗೆ ಬರದಂತೆ ತಿಳಿಸಿ ಹೇಳಬೇಕು ಅಂದರೂ ಕೂಡಾ ಆತನು ನಮ್ಮ ಸಂಪರ್ಕದಲ್ಲಿ ಸಿಗಲಿಲ್ಲ, ಮುಂದೆ ನನ್ನ ತಮ್ಮನು ಆತನಿಂದ ಆತನಿಂದ ಅಂತರ ಕಾಯ್ದುಕೊಂಡು ಅವನಿಂದ ದೂರ ಇರುತ್ತಿದ್ದನು, ಈಗ ನನ್ನ ತಮ್ಮನು ಕೆ.ಎಸ್.ಆರ್.ಟಿ.ಸಿ. ಯಿಂದ ಡಿಸ್ಮಿಸ್ ಆದ ನಂತರ ಮನೆಯಲ್ಲಿಯೇ ಇರುತ್ತಿದ್ದನು, ಆ ಸಮಯದಲ್ಲಿ ಶರಣು ತಂದೆ ಮಹಾಂತಪ್ಪ ದಂಡೆ (ಕಲಶೆಟ್ಟಿ) ಇತನು ಇತ್ತಿತ್ತಲಾಗಿ ಸುಮಾರು ಎರಡು ಸಲ ನಮ್ಮ ತಮ್ಮನ ಮನೆಗೆ ಬಂದು ಯಾಕೆ ಸುಮ್ಮನೆ ಮನೆಯಲ್ಲಿ ಕುಳಿತಿರುವಿ ನನ್ನ ಜೋತೆಗೆ ಲಾರಿಯ ಮೇಲೆ ಸೈಡ್ ಚಾಲಕ ಅಂತಾ ಕೆಲಸಕ್ಕೆ ಬಾ ಅಂತಾ ಹೇಳಿದಾಗ ಆ ವೇಳೆ ನನ್ನ ತಮ್ಮನ ಹೆಂಡತಿಯಾದ ಸುರೇಖಾ ಇವಳು ಶರಣು ಇತನಿಗೆ ನೀನು ನನ್ನ ಗಂಡನ ಜೋತೆಗೆ ಈ ಮೊದಲು ಜಗಳ ಮಾಡಿ ಕಲ್ಲಿನಿಂದ ಅವನ ತಲೆಗೆ ಹೊಡೆದು ಹಣ ಕಸಿದುಕೊಂಡು ಹೋಗಿದ್ದಿ, ನಿನ್ನ ಜೋತೆಗೆ ನನ್ನ ಗಂಡನಿಗೆ ಕಳುಹಿಸುವದಿಲ್ಲ ಅಂತಾ ಹೇಳಿದರೂ ಕೂಡಾ ಲಾರಿ ಕ್ಲೀನರ ಶರಣು ಇತನು ನನ್ನ ತಮ್ಮನನ್ನು ಒತ್ತಾಯ ಪೂರ್ವಕವಾಗಿ ತನ್ನ ಜೋತೆಗೆ ಕೆಲಸಕ್ಕೆ ಕರೆದುಕೊಂಡು ಹೋಗಿದಾನೆ ಅಂತಾ ಈ ಬಗ್ಗೆ ಸುರೇಖಾ ಇವಳಿಂದ ನನಗೆ ಗೊತ್ತಾಗಿರುತ್ತದೆ.
          ಹೀಗಿರುವಾಗ ದಿನಾಂಕ 14/05/2020 ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ರಾಜಕುಮಾರ, ಆತನ ಹೆಂಡತಿಯಾದ ಸುರೇಖಾ ಹಾಗೂ ಅವರ ಮಕ್ಕಳಾದ ವಷರ್ಾ, ಪೂಜಾ ಹಾಗೂ ಪ್ರೇಮ, ಮತ್ತು ನನ್ನ ತಾಯಿಯಾದ ಪದ್ಮಾವತಿ ಎಲ್ಲರೂ ಮನೆಯಲ್ಲಿದ್ದಾಗ ಶರಣು ತಂದೆ ಮಹಾಂತಪ್ಪ ದಂಡೆ (ಕಲಶೆಟ್ಟಿ) ಹಾಗೂ ಅವನ ಜೋತೆಯಲ್ಲಿ ಮುಖ್ಯ ಚಾಲಕ ಶ್ರವಣ ಸುಲ್ತಾನಪೂರ ಎಂಬುವವನು ನನ್ನ ತಮ್ಮನ ಮನೆಗೆ ಬಂದು ನನ್ನ ತಮ್ಮನನ್ನು ಸೈಡ್ ಲಾರಿ ಚಾಲಕನಾಗಿ ಮಂಗಳೂರಿಗೆ ಹೋಗುವದಿದೆ ಅಂತಾ ಕರೆದುಕೊಂಡು ಹೋದರು, ಮುಂದೆ ದಿನಾಂಕ 16/05/2020 ರವರೆಗೆ ನನ್ನ ತಮ್ಮನು ತನ್ನ ಮನೆಯವರ ಜೋತೆಗೆ ಪೋನಿನಲ್ಲಿ ಮಾತಾಡಿದ್ದು, ತದನಂತರ ನನ್ನ ತಮ್ಮನ ಪೋನಿನಿಂದ ಲಾರಿ ಮೇನ ಚಾಲಕನಾದ ಶ್ರವಣ ಇತನು ಸುಮಾರು ಎರಡು-ಮೂರು ಸಲ ನನ್ನ ತಮ್ಮನ ಹೆಂಡತಿ ಸುರೇಖಾ ಇವರ ಸಂಗಡ ಮಾತಾಡಿದಾಗ ಅವಳು ತನ್ನ ಗಂಡನಿಗೆ ಪೋನ ಕೊಡಿರಿ ಅವರ ಜೋತೆಗೆ ಮಾತಾಡುತ್ತೆನೆ ಅಂತಾ ಹೇಳಿದರೂ ಕೂಡಾ ಅವರು ನಿನ್ನ ಗಂಡನು ಈಗ ಲಾರಿ ನಡೆಸುತ್ತಿದ್ದಾನೆ, ಆಮೇಲೆ ಅವರಿಗೆ ಪೋನ ಕೊಡುತ್ತೆನೆ ಅಂತಾ ಹೇಳಿ ನನ್ನ ತಮ್ಮನಿಗೆ  ಮಾತಾಡಲು ಪೋನ ಕೊಟ್ಟಿರುದಿಲ್ಲ, ದಿನಾಂಕ 23/05/2020 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಶ್ರವಣ ಇತನು ನನ್ನ ತಮ್ಮನ ಮೊಬೈಲದಿಂದ ನನ್ನ ತಮ್ಮನ ಮನೆಯವರ ಮೊಬೈಲಕ್ಕೆ ನಾಲ್ಕು-ಐದು ಸಲ ಪೋನ ಮಾಡಿ ಅಶ್ಲೀಲವಾಗಿ ವರ್ಷ ಇವಳ ಸಂಗಡ ಮಾತಾಡಿದ್ದು, ಅವಳು ನಮ್ಮ ತಂದೆಗೆ ಪೋನ ಕೋಡಿರಿ ಅಂತಾ ಹೇಳಿದಾಗ ನಿಮ್ಮ ತಂದೆ ರಾಜಕುಮಾರ ಇವನಿಗೆ ಹೊಡೆದು ಹಾಕಿರುತ್ತೆವೆ, ನೀವು ಬಂದು ಬಾಡಿ ತೆಗೆದುಕೊಂಡು ಹೋಗಿರಿ ಅಂತಾ ಹೇಳಿದನು, ನಂತರ ಅದೇ ದಿನ ಮಧ್ಯಾಹ್ನ 2-37 ಗಂಟೆಯ ಸುಮಾರಿಗೆ ನಾನು ಬೀದರ ಮನೆಯಲ್ಲಿ ಇರುವಾಗ ನನ್ನ ಅಳಿಯನಾದ ಮಾರುತಿ ತಂದೆ ಮುರುಳಿಧರರಾವ ಪತಂಗೆ ಇವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಿನ್ನ ತಮ್ಮನಾದ ರಾಜಕುಮಾರ ಇವರು ಸತ್ತಿರುತ್ತಾರೆ ಅಂತಾ ಲಾರಿ ಮಾಲೀಕರಾದ ಶ್ರೀ ಯಾದವರಾವ ತಂದೆ ಜಯರಾಮ ಮೊರೆ ಇವರು ನನಗೆ ಪೋನ ಮಾಡಿ ಹೇಳಿರುತ್ತಾರೆ, ಲಾರಿ ಮಾಲೀಕನಿಗೆ ನಾನು ಪೋನ ಮಾಡಿದಾಗ ಅದೇ ವಿಷಯ ನನಗೂ ತಿಳಿಸಿದ್ದು, ನಂತರ ನಾನು ಈ ವಿಷಯವನ್ನು ನನ್ನ ತಮ್ಮನ ಹೆಂಡತಿಗೆ ಪೋನ ಮಾಡಿ ತಿಳಿಸಿದೆನು, ನಾನು ಬೀದರದಿಂದ ಕಲಬುಗರ್ಿಗೆ ಬಂದು ನಂತರ ಅಲ್ಲಿಂದ ನನ್ನ ಕುಟುಂಬದವರೊಂದಿಗೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದಾಗ ನನ್ನ ತಮ್ಮನ ಮೃತದೇಹ ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಇದೆ ಅಂತಾ ಗೋತ್ತಾಗಿ ನಾವೆಲ್ಲರೂ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ತಮ್ಮನ ಮೃತದೇಹವು ಶವಗಾರ ಕೋಣೆಯಲ್ಲಿ ಇದ್ದು, ಶವವನ್ನು ಪರಿಶೀಲಿಸಿ ನೋಡಿದಾಗ ನನ್ನ ತಮ್ಮನ ಹಣೆಗೆ, ಎದೆಗೆ, ಮೆಲಕಿಗೆ ಭಾರಿ ಗುಪ್ತಗಾಯಗಳು ಮತ್ತು ಎದೆಗೆ ತರಚಿದ ಗಾಯಗಳು, ಬಲಗೈಗೆ ರಕ್ತಗಾಯಗಳು ಆಗಿದ್ದವು, ಅದರಂತೆ ಬಲಪಕ್ಕೆಗೆ ಭಾರಿ ಗುಪ್ತಗಾಯವಾದಂತೆ ಕಂಡುಬಂದಿತ್ತು, ಈ ಮೇಲೆ ಹೇಳಿದವನಾದ ಶರಣು ತಂದೆ ಮಹಾಂತಪ್ಪ ದಂಡೆ (ಕಲಶೆಟ್ಟಿ) ಈ ಹಿಂದೆ ನನ್ನ ತಮ್ಮ ರಾಜಕುಮಾರ ಇತನ ಜೋತೆಗೆ ಜಗಳ ತೆಗೆದು ಅವನಿಗೆ ಕಲಿನಂದ ಹೊಡೆದು ಹಣ ಕಸಿದುಕೊಂಡು ಹೋಗಿದ್ದು, ಇದೇ ವಿಷಯದಲ್ಲಿ ಶರಣು ಇತನು ನನ್ನ ತಮಮ್ನ ಮೇಲೆ ತೀವೃ ವೈಮನಸ್ಸು ಬೆಳೆಸಿಕೊಂಡು ಬಂದು ನನ್ನ ತಮ್ಮನಿಗೆ ಕೊಲೆ ಮಾಡಬೇಕು ಅಂತಾ ಉದ್ದೇಶದಿಂದ  ಶರಣು ಮತ್ತು ಶ್ರವಣ ಇಬ್ಬರೂ ಕೂಡಿಕೊಂಡು ಯಡ್ಡಳ್ಳಿ-ಬಂದಳ್ಳಿ ರೋಡಿನ ಮೇಲೆ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ಭಾರಿ ಗಾಯಗೊಳಿಸಿ ಕೊಲೆ ಮಾಡಿರುತ್ತಾರೆ ಅಂತಾ ಈಗ ನಮಗೆ ಗೋತ್ತಾಗಿರುತ್ತದೆ, ಈ ಘಟನೆಯು ದಿನಾಂಕ 23/05/2020 ರಂದು ಬೆಳಿಗ್ಗೆ 9-00 ಗಂಟೆಗೆ ನಡೆದಿರುತ್ತದೆ, ಆದ್ದರಿಂದ ಈ ಪ್ರಕರಣವು ಕೊಲೆ ಕೇಸು ಅಂತಾ ಪರಿಗಣಿಸಿ ತನಿಖೆ ಕೈಗೊಳ್ಳಬೇಕು ಅಂತಾ ಹೇಳಿ ಬರೆಯಿಸಿದ ಪುರವಣಿ ಹೇಳಿಕೆ ನಿಜವಿರುತ್ತದೆ. ಮತ್ತು ಲಾರಿ  ಮಾಲೀಕರಾದ ಜಾಧವರಾವ ಮೋರೆ ಇವರೂ ಕೂಡಾ ಹಲವಾರು ಸಲ ನಮಗೆ ನಮ್ಮ ತಮ್ಮನ ಸಾವಿನ ಸುದ್ದಿ ಕುರಿತು ಸುಳ್ಳು ಮಾಹಿತಿ ಹೇಳಿದ್ದು ಈ ಎಲ್ಲಾ ಘಟನೆಗೆ ಇವರ ಪಾತ್ರವು ಕೂಡಾ ಇರಬಹುದು. ಇವರನ್ನು ಕೂಡಾ ತನಿಖೆಗೆ ಒಳಪಡಿಸಿ ಅವರು ಮಾತನಾಡಿದ ಪೋನ ಕರೆಗಳನ್ನು ಪರಿಶೀಲನೆ ಮಾಡಲು ವಿನಂತಿ ಇರುತ್ತದೆ. ಅದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 74/2020 ಕಲಂ 302 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 50/2020 ಕಲಂ 380 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ದಿನಾಂಕ 10/06/2020 ರಂದು ಕಛೇರಿಯ ಸಮಯದಲ್ಲಿ ಜೆನರೇಟರ್ ಚಾಲೂ ಮಾಡಲು ಶ್ರೀ ಮಲ್ಲಿಕಾಜರ್ುನ ಎಸ್.ಓ ರವರು ಹೋದಾಗ ಜನರೇಟರ್ನಲ್ಲಿ ಬ್ಯಾಟರಿ ಇಲ್ಲದ್ದು ಕಂಡುಬಂದಿದ್ದು, ಬ್ಯಾಟರಿ ಕಳ್ಳತನವಾಗಿರುವ ವಿಷಯ ಗಮನಕ್ಕೆ ಬಂದಿರುತ್ತದೆ. ಆದ ಕಾರಣ ದಿನಾಂಕ 09/06/2020 ರಂದು ರಾತ್ರಿ 09-00 ಗಂಟೆಯಿಂದ ಇಂದು ದಿನಾಂಕ 10/06/2020 ರ ಬೆಳಿಗ್ಗೆ 11-00 ಗಂಟೆಯ ಅವಧಿಯಲ್ಲಿ ಕೋಟರ್್ ಆವರಣದಲ್ಲಿಯ ಸುಮಾರು 8000/- ರೂ. ಕಿಮ್ಮತ್ತಿನ ಒಚಿಞಜ: ಞಥಿ ಖಿಜಛಿ ಅಠಟಿಟಿಜಛಿಣ ಃಚಿಣಣಜಡಿಥಿ. ಖಟ. ಓಠ: 184ಖಖಕ640 ಈಣಠಟಿ 88. ಜನರೇಟರ್ಗೆ ಜೋಡಿಸಿದಂತಹ ಸ್ಕ್ರಟೇಕ್ ಕಂಪನಿಯ ಬ್ಯಾಟರಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ತಾವು ದಯಮಾಡಿ ಕಳ್ಳರನ್ನು ಹಿಡಿದು ಸದರಿ ಬ್ಯಾಟರಿಯನ್ನು ನ್ಯಾಯಾಲಯಕ್ಕೆ ದೊರಕಿಸಿಕೊಡಲು ಈ ಮೂಲಕ ವಿನಂತಿಸಿಕೊಳುತ್ತೇನೆ. ಈ ಕೂಡ ಬ್ಯಾಟರಿ ಗ್ಯಾರಂಟಿ ಅವಧಿಯ ಜೆರಾಕ್ಸ್ ನಕಲು ಲಗತ್ತಿಸಿದೆ. ಇನ್ನೂ ಹೆಚ್ಚಿನ ಮಾಹಿತಿ ಅಗತ್ಯತೆ ಇದ್ದಲ್ಲಿ ಮಾಹಿತಿ ಒದಗಿಸಲಾಗುವುದು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 50/2020 ಕಲಂ 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 148/2020 ಕಲಂ 143, 147, 148, 323, 324, 354 504, 506 ಸಂ.149 ಐಪಿಸಿ  : ಇಂದು ದಿನಾಂಕ:10/06/2020 ರಂದು 11 ಎ.ಎಂ. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಜೆಟ್ಟೆಪ್ಪ ತಂದೆ ಹಣಮಂತ ವಡ್ಡರ ವ|| 27 ವರ್ಷ ಜಾ|| ವಡ್ಡರ ಉ|| ಕೂಲಿ ಸಾ|| ಕುಪಗಲ್ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿ ನೀಡಿದ್ದು, ಸಾರಾಂಶವೆನೆಂದರೆ ನಿನ್ನೆ ದಿನಾಂಕಃ 09/06/2020 ರಂದು ಮದ್ಯಾಹ್ನ ನಾನು ಮತ್ತು ನನ್ನ ಅಣ್ಣನಾದ ಯಲ್ಲಪ್ಪ ತಂದೆ ಹಣಮಂತ ವಡ್ಡರ ವಯಃ 29 ವರ್ಷ ಇಬ್ಬರೂ ಕುಪಗಲ್ ಗ್ರಾಮದಿಂದ ಸಂತೆ ಮಾಡಿಕೊಂಡು ಹೋಗುವದಕ್ಕಾಗಿ ಸುರಪೂರಕ್ಕೆ ಬಂದಿದ್ದೇವು. ನಾವು ಸಂತೆ ಮಾಡಿಕೊಂಡು ಸಾಯಂಕಾಲ ಸುರಪೂರ ನಗರದ ವಡ್ಡರ ಓಣಿಯಲ್ಲಿರುವ ನನ್ನ ಚಿಕ್ಕಪ್ಪ ಭೀಮಣ್ಣ ತಂದೆ ಭಾಗಪ್ಪ ರಾಯಚೂರ ಇವರಿಗೆ ಭೇಟಿಯಾಗಿ ಹೋಗಬೆಕೆಂದು ಅವರ ಮನೆಗೆ ಹೋಗಿದ್ದೇವು. ಆಗ ಸಾಯಂಕಾಲ 5-00 ಗಂಟೆಯ ಸುಮಾರಿಗೆ ವಡ್ಡರ ಓಣಿಯ ನಮ್ಮ ಜನಾಂಗದವರಾದ 1) ನಾಗಪ್ಪ ತಂದೆ ಭೀಮಣ್ಣ ಕಟ್ಟಿಮನಿ 2) ಮಲ್ಲೇಶಿ ತಂದೆ ನಾಗಪ್ಪ ವಡ್ಡರ 3) ಅವಿನಾಶ ತಂದೆ ಹಣಮಂತ ಕಟ್ಟಿಮನಿ, 4) ಜೆಟ್ಟೆಪ್ಪ ತಂದೆ ಜೆಟ್ಟೆಪ್ಪ ಪೂಜಾರಿ 5) ಭೀಮಣ್ಣ ತಂದೆ ಜೆಟ್ಟೆಪ್ಪ ಪೂಜಾರಿ 6) ಜೆಟ್ಟೆಪ್ಪ ತಂದೆ ನಾಗಪ್ಪ ವಡ್ಡರ 7) ಶಾರದಾ ಗಂಡ ನಾಗಪ್ಪ ವಡ್ಡರ ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ನನ್ನ ಚಿಕ್ಕಪ್ಪನ ಮನೆಯ ಮುಂದೆ ಬಂದವರೇ ನನ್ನ ಚಿಕ್ಕಪ್ಪ ಭೀಮಣ್ಣನಿಗೆ ಏನಲೇ ಮಗನೇ ಭೀಮ್ಯಾ ನಿನ್ನ ಅಣ್ಣ ಭರಮಯ್ಯ ಹಾಗು ಆತನ ಮಕ್ಕಳು ನಮ್ಮ ಮನೆಗೆ ಬಂದು ನನ್ನ ಹೆಂಡತಿ, ಮಗಳಿಗೆ ಹೊಡೆಬಡೆ ಮಾಡಿ ನಿಮ್ಮ ಮನೆಗೆ ಬಂದಿದ್ದಾರಂತೆ, ಹೊರಗಡೆ ಕಳಿಸು ಸೂಳೆ ಮಕ್ಕಳಿಗೆ ಅಂತ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದಾಗ ನನ್ನ ಚಿಕ್ಕಪ್ಪ ಭೀಮಣ್ಣನು ಯಾರು ನನ್ನ ಮನೆಗೆ ಬಂದಿಲ್ಲಾ, ಅವರ ಮನೆಗೆ ಹೋಗಿ ಕೇಳ್ರಿ ಅಂತ ಹೇಳಿದ್ದಕ್ಕೆ, ನಾಗಪ್ಪನು ನಮ್ಮ ಮನೆಯಿಂದ ಅವರೆಲ್ಲರೂ ನಿನ್ನ ಮನೆಯ ಕಡೆಗೆ ಬಂದಿದ್ದಾರಂತೆ, ನೀವೇ ಗಂಡ-ಹೆಂಡತಿ ಜಗಳ ಹಚ್ಚಿದ್ದಿರಿ ಸೂಳೆ ಮಕ್ಕಳೇ ಅನ್ನುತ್ತ ನಾಗಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಚಿಕ್ಕಪ್ಪ ಭೀಮಣ್ಣ ರಾಯಚೂರ ಇತನ ಬಲಮೊಣಕಾಲಿನ ಕೆಳಗೆ ಹೊಡೆದಿದ್ದರಿಂದ ಗುಪ್ತಗಾಯ ನನ್ನ ಚಿಕ್ಕಪ್ಪನು ಸತ್ತೆನಪ್ಪೋ ಅಂತ ಚೀರಿದಾಗ ನಾವಿಬ್ಬರೂ ಅಣ್ಣ-ತಮ್ಮಂದಿರು ಹಾಗು ನನ್ನ ಚಿಕ್ಕಮ್ಮ ಕಾಂತಮ್ಮ ಮೂವರು ಬಿಡಿಸಲು ಹೋದಾಗ ಮಲ್ಲೇಶಿ ತಂದೆ ನಾಗಪ್ಪ ಇತನು ನಿವೇಕೆ ನಡುವೆ ಬರುತ್ತೀರಿಲೇ ಸೂಳೆ ಮಕ್ಕಳೇ ಅನ್ನುತ್ತ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು, ನಂತರ ಅದೇ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದಿದ್ದರಿಂದ ಗುಪ್ತಗಾಯವಾಗಿರುತ್ತದೆ. ಅವಿನಾಶ ಕಟ್ಟಿಮನಿ ಇತನು ಕೈಯಿಂದ ನನ್ನ ಹೊಟ್ಟೆಗೆ, ಎದೆಗೆ ಹೊಡೆದಿರುತ್ತಾನೆ. ಜೆಟ್ಟೆಪ್ಪ ತಂದೆ ಜೆಟ್ಟೆಪ್ಪ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಅಣ್ಣ ಯಲ್ಲಪ್ಪನ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು, ನಂತರ ಭೀಮಣ್ಣ ತಂದೆ ಜೆಟ್ಟಪ್ಪ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಯಲ್ಲಪ್ಪನ ಬೆನ್ನಿಗೆ ಎರಡು ಸಲ ಹೊಡೆದಿರುತ್ತಾನೆ. ಜೆಟ್ಟಪ್ಪ ತಂದೆ ನಾಗಪ್ಪ ಇತನು ನನ್ನ ಚಿಕ್ಕಮ್ಮ ಕಾಂತಮ್ಮ ಇವಳಿಗೆ ಸೂಳೆ ಓಣಿಯಲ್ಲಿ ಬಹಳ ಸೊಕ್ಕಿದೆ ನಿಮಗೆ ಅನ್ನುತ್ತ ಸೀರೆಯ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡಿ ಕೈಯಿಂದ ಕಪಾಳಕ್ಕೆ ಹಾಗು ತಲೆಗೆ ಹೊಡೆದಿರುತ್ತಾನೆ. ಹಾಗು ಶಾರದಾ ಇವಳು ಇನ್ನು ಹೊಡಿರಿ ಸೂಳೀಮಕ್ಕಳಿಗೆ, ಬಂದಿದ್ದೆಲ್ಲಾ ನಾವು ನೋಡಿಕೊಳ್ಳುತ್ತೇವೆ ಅಂತ ಹೇಳುತ್ತ ಕೈಯಿಂದ ನನ್ನ ಚಿಕ್ಕಮ್ಮನ ಬೆನ್ನಿಗೆ ಹೊಡೆದಿರುತ್ತಾಳೆ. ಆಗ ನಮಗೆ ಹೊಡೆಯುವದನ್ನು ನೋಡಿ ಅದೇ ಓಣಿಯ ನಾಗಪ್ಪ ತಂದೆ ಭೀಮಪ್ಪ ಪೂಜಾರಿ ಮತ್ತು ಅಡಿವೆಪ್ಪ ತಂದೆ ಭೀಮಣ್ಣ ವಡ್ಡರ ಇವರು ಬಂದು ಬಿಡಿಸಿರುತ್ತಾರೆ. ಆಗ ಅವರೆಲ್ಲರೂ ಇವತ್ತು ಜನರು ಬಿಡಿಸಿದ್ದಕ್ಕೆ ಉಳಿದಿದ್ದಿರಿ ಲೇ ಸೂಳೆ ಮಕ್ಕಳೆ, ಇನ್ನೊಮ್ಮೆ ನಮ್ಮ ತಂಟೆಗೆ ಬಂದರೇ ಜೀವ ಸಹಿತ ಉಳಿಸುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ನಾವು ಮೂವರು ಖಾಸಗಿ ಅಟೋರಿಕ್ಷಾದಲ್ಲಿ ಉಪಚಾರಕ್ಕಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡು ರಾತ್ರಿ ಮನೆಗೆ ಹೋಗಿರುತ್ತೇವೆ. ಬಳಿಕ ಮನೆಯಲ್ಲಿ ನಾನು ಮತ್ತು ನನ್ನ ಅಣ್ಣ ಯಲ್ಲಪ್ಪ ಹಾಗು ನನ್ನ ಚಿಕ್ಕಪ್ಪ ಭೀಮಣ್ಣ ಮೂವರು ಚಚರ್ೆ ಮಾಡಿ ಅವರ ಮೇಲೆ ಕೇಸ್ ಮಾಡಬೆಕೆಂದು ಇಂದು ತಡವಾಗಿ ದೂರು ಕೊಡಲು ಬಂದಿರುತ್ತೇವೆ. ಕಾರಣ ಅಕ್ರಮಕೂಟ ರಚಿಸಿಕೊಂಡು ಬಂದು ಕೈಯಿಂದ ಹಾಗು ಬಡಿಗೆಗಳಿಂದ ನಮಗೆ ಹೊಡಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!