ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/06/2020
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 70/2020 ಕಲಂ: 379 ಐಪಿಸಿ : ಇಂದು ದಿನಾಂಕ: 09/06/2020 ರಂದು 8-15 ಪಿಎಮ್ ಕ್ಕೆ ಶ್ರೀಮತಿ ಎನ್. ಬೇಬಿ ಗಂಡ ನಾರಾಯಣರಾವ ಎನ್. ವ:45, ಜಾ:ಕಮ್ಮಾ, ಉ:ಹೊಲಮನೆ ಕೆಲಸ ಸಾ:ಪೆದ್ದಪಳ್ಳ ಹಾಲಮೊರ ಮಂಡಲ್ ರಾಜಮಂಡ್ರಿ (ಎಪಿ) ಹಾ:ವ:ನಾಯ್ಕಲ್ ತಾ:ವಡಗೇರಾ ರವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮತ್ತು ನನ್ನ ಗಂಡ ಇಬ್ಬರೂ ಈಗ ಸುಮಾರು 2 ವರ್ಷಗಳಿಂದ ಗುರುಸಣಗಿ ಗ್ರಾಮದ ಸೂಗರೆಡ್ಡಿ ತಂದೆ ಸಿದ್ದಪ್ಪ ಪೊಲೀಸ್ ಪಾಟಿಲ್ ಇವರ ಸುಮಾರು 18 ಎಕರೆ ಗದ್ದೆಯನ್ನು ಲೀಜಿಗೆ ಮಾಡಿಕೊಂಡು ಬರುತ್ತಿದ್ದೇವೆ. ಈ ವರ್ಷ ನಾಯ್ಕಲ್ ಸೀಮಾಂತರದಲ್ಲಿರುವ ಚೌದ್ರಿ ಇವರ ಗದ್ದೆಯನ್ನು ಕೂಡಾ ಲಿಜಿಗೆ ಹಾಕಿಕೊಂಡಿದ್ದು, ಅಲ್ಲಿಯೇ ಸೆಡ್ಡ ಹಾಕಿಕೊಂಡು ವಾಸ ಇರುತ್ತವೆ. ಸದರಿ ನಾವು ಲೀಜಿಗೆ ಮಾಡುವ ಹೊಲ ಗದ್ದೆ ಉಳುಮೆ ಮಾಡಲು ಈಗ ಸುಮಾರು 6 ತಿಂಗಳ ಹಿಂದೆ ಒಂದು ಮಹಿಂದ್ರಾ ಟ್ರ್ಯಾಕ್ಟರ (ಇಂಜನ) ನನ್ನ ಹೆಸರಿನಲ್ಲಿ ಖರೀದಿ ಮಾಡಿರುತ್ತೇವೆ. ಸದರಿ ಟ್ರ್ಯಾಕ್ಟರ (ಇಂಜನ) ಇನ್ನು ನೊಂದಣಿ ಮಾಡಿಸಿರುವುದಿಲ್ಲ. ಅದರ ಇಂಜನ್ ನಂ. ಓಏಆ4ಘಿಂಇ0260 ಮತ್ತು ಚೆಸ್ಸಿ ನಂ. ಒಃಓಖಈಂಐಃಇಏಚಓಆ03608 ಇರುತ್ತದೆ. ನಾವು ಸೂಗರೆಡ್ಡಿ ಇವರ ಹೊಲವನ್ನು ಲೇವಲಿಂಗ ಮಾಡಿ ಗದ್ದೆ ಮಾಡಲು ಸುಮಾರು ಲಕ್ಷಾಂತರ ರೂ. ಖಚರ್ು ಮಾಡಿರುತ್ತೇವೆ. ಆದರೆ ಇತ್ತಿಚ್ಚೆಗೆ ಸೂಗರೆಡ್ಡಿ ತಂದೆ ಸಿದ್ದಪ್ಪ ಪೊಲೀಸ್ ಪಾಟಿಲ್ ಮತ್ತು ಅವನ ಮಗ ಸಿದ್ದಲಿಂಗರೆಡ್ಡಿ ತಂದೆ ಸೂಗರೆಡ್ಡಿ ಪೊಲೀಸ್ ಪಾಟಿಲ್ ಇಬ್ಬರೂ ಸಾ:ಗುರುಸಣಗಿ ಇವರು ಬಂದು ವಿನಾಕಾರಣ ನಮ್ಮೊಂದಿಗೆ ತಕರಾರು ಮಾಡುತ್ತಾ ಬರುತ್ತಿದ್ದರು. ಹೀಗಿದ್ದು ಈಗ ಸುಮಾರು ಒಂದು ವಾದ ಹಿಂದೆ ಹೋದ ಶುಕ್ರವಾರ ದಿನಾಂಕ: 29/05/2020 ರಂದು ನಾನು ಮತ್ತು ನನ್ನ ಗಂಡ ಇಬ್ಬರೂ ನಾಯ್ಕಲ್ ಚೌದ್ರಿ ಇವರ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದೆವು. ನಮ್ಮ ಹೊಸ ಮಹಿಂದ್ರಾ ಟ್ರ್ಯಾಕ್ಟರನ್ನು ಸದರಿ ನಮ್ಮ ಸೆಡ್ಡ ಮುಂದುಗಡೆ ನಿಲ್ಲಿಸಿದ್ದೆವು. ಬೆಳಗ್ಗೆ 8-30 ಗಂಟೆ ಸುಮಾರಿಗೆ 1) ಸೂಗರೆಡ್ಡಿ ತಂದೆ ಸಿದ್ದಪ್ಪ ಪೊಲೀಸ್ ಪಾಟಿಲ್ ಮತ್ತು ಅವನ ಮಗ 2) ಸಿದ್ದಲಿಂಗರೆಡ್ಡಿ ತಂದೆ ಸೂಗರೆಡ್ಡಿ ಪೊಲೀಸ್ ಪಾಟಿಲ್ ಹಾಗೂ ಅವರ ಡ್ರೈವರ 3) ಬಸಪ್ಪ ಎಲ್ಲರೂ ಸಾ:ಗುರುಸಣಗಿ ಈ ಮೂರು ಜನ ಸೇರಿ ಬಂದವರೆ ನಮ್ಮ ಸೆಡ್ಡಿನ ಹತ್ತಿರ ನಿಲ್ಲಿಸಿದ ಟ್ರ್ಯಾಕ್ಟರ ಚಾಲು ಮಾಡುವುದನ್ನು ನೋಡಿ ನಾವು ಗದ್ದೆಯಿಂದ ಸೆಡ್ಡಿನ ಹತ್ತಿರ ನಡೆದುಕೊಂಡು ಬರುವಷ್ಟರಲ್ಲಿ ಮೂರು ಜನ ಸೇರಿ ನಮ್ಮ ಟ್ರ್ಯಾಕ್ಟರ ಕಳುವು ಮಾಡಿಕೊಂಡು ಹೊದರು. ನಾವು ನಮ್ಮ ಟ್ರ್ಯಾಕ್ಟರ ಏಕೆ ಒಯ್ಯುತ್ತಿರಿ ಎಂದು ಹೇಳಿದರು ಕೇಳದೆ ಮೂರು ಜನ ಸೇರಿ ಟ್ರ್ಯಾಕ್ಟರ ಕಳ್ಳತನ ಮಾಡಿಕೊಂಡು ಹೊದರು. ಸದರಿ ನಮ್ಮ ಕಳುವಾದ ಟ್ರ್ಯಾಕ್ಟರ ಅಂದಾಜು ಬೆಲೆ 5,00,000/- ರೂ. ಆಗಬಹುದು. ಕಾರಣ ಸೂಗರೆಡ್ಡಿ ಮತ್ತು ಅವನ ಮಗ ಸಿದ್ದಲಿಂಗರೆಡ್ಡಿ ಹಾಗೂ ಡ್ರೈವರ ಬಸ್ಸಪ್ಪ ಮೂರು ಜನ ಸೇರಿ ನಮ್ಮ ಟ್ರ್ಯಾಕ್ಟರ ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ನನ್ನ ಗಂಡ ನಮ್ಮ ಟ್ರ್ಯಾಕ್ಟರ ಅನ್ನು ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಮ್ಮ ಟ್ರ್ಯಾಕ್ಟರ ಕಳುವು ಮಾಡಿಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನಮ್ಮ ಟ್ರ್ಯಾಕ್ಟರ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 70/2020 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 49/2020 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಕಪ್ಪು ಬಣ್ಣದ ಹೊಂಡಾ ಯುನಿಕಾನರ್್ ಮೋಟರ್ ಸೈಕಲ್ ನಂ ಏಂ 33, ಕಿ 4621 ಇದ್ದು, ಅದರ ಇಟಿರಟಿಜ ಓಠ-ಏಅ09ಇ86617456, ಅಚಿ ಓಠ-ಒಇ4ಏಅ09ಅಐಆ8607615, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 25,000/ ರೂಪಾಯಿಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು, ದಿನಾಂಕ 19/05/2020 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ನಾನು ನನ್ನ ಮೋಟರ್ ಸೈಕಲ್ ತೆಗೆದುಕೊಂಡು, ಯಾದಗಿರಿ ನಗರಕ್ಕೆ ಬಂದು ಉಳ್ಳೆಸುಗೂರ ಕಾಂಪ್ಲೆಕ್ಸ್ ಮುಂದೆ ನನ್ನ ಮೋಟರ್ ಸೈಕಲ್ ನಿಲ್ಲಿಸಿ, ನಮ್ಮ ಗದ್ದೆಗೆ ಪೈಪ್ ಲೈನ್ ಮಾಡಿಸುವ ಕಾರಣ ಕೆಲವು ಹಾಡರ್್ ವೇರ ಸಾಮಾನುಗಳನ್ನು ತೆಗೆದುಕೊಂಡು ಸುಮಾರು 01-30 ಪಿ.ಎಂ ಸುಮಾರಿಗೆ ನಾನು ಬಂದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ನನ್ನ ಗೆಳೆಯರಾದ ಮಹಾಂತೇಶ ತಂದೆ ಜಯಪ್ರಕಾಶ ಗೋಗಿ ಸಾ|| ವೀರಭದ್ರೇಶ್ವರ ನಗರ ಯಾದಗಿರಿ ಹಾಗೂ ಖಾಜಾ ಮೈನೊದ್ದೀನ್ ತಂದೆ ಮಹ್ಮದ್ ಯುಸೂಫ್ ಸಾ|| ನಾಯ್ಕಲ್ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದರು. ಎಲ್ಲರು ಕೂಡಿ ಅಂಗಡಿ ಅಕ್ಕ ಪಕ್ಕದಲ್ಲಿ ಹಾಗೂ ಇತರ ಕಡೆಗಳಲ್ಲಿ ನೋಡಲು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋದಂತೆ ಕಂಡು ಬಂದಿರುತ್ತದೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ಮೋಟರ್ ಸೈಕಲ್ ಪತ್ತೆಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 49/2020 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:-. 10/2020 ಕಲಂ. 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 09.06.2020 ರಂದು ಬೆಳಿಗ್ಗೆ 10.00 ಗಂಟೆಗೆ ಫಿಯರ್ಾದಿ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಹೇಳಿಕೆ ನೀಡಿದ್ದು ಸಾರಾಂಶವೇನೆಂದರೆ ಫಿಯರ್ಾದಿಯ ಮಗಳು ತಾರಮ್ಮಳು ನಿನ್ನೆ ರಾತ್ರಿ 10.00 ಗಂಟೆಗೆ ಮನೆಯಲ್ಲಿ ಚಹಾ ಮಾಡಲು ಒಲೆ ಹಚ್ಚಿದಾಗ ರಾತ್ರಿ ವೇಳೆ ಕತ್ತಲ್ಲಲ್ಲಿ ಸೀರೆ ಸೆರಗಿಗೆ ಬೆಂಕಿ ಹತ್ತಿ ಮೈಯಲ್ಲಾ ಸುಟ್ಟಿರುತ್ತದೆ. ಬೆಂಕಿ ಹತ್ತಿದ್ದರಿಂದ ಚೀರಾಡಿದಾಗ ನಾವು ಹೋಗಿ ನೋಡಿ ಬೆಂಕಿ ಆರಿಸಿದ್ದು, ರಾತ್ರಿ ವೇಳೆಯಲ್ಲಿಯೇ ಒಂದು ಖಾಸಗಿ ವಾಹನದಲ್ಲಿ ತಾರಮ್ಮಳನ್ನು ಕರೆದುಕೊಂಡು ರಿಮ್ಸ್ ಆಸ್ಪತ್ರೆ ರಾಯಚೂರಗೆ ಬಂದಿದ್ದು, ಆಸ್ಪತ್ರೆಯ ವೈದ್ಯರು ವಾಹನದಲ್ಲಿ ತರುವಾಗ ದಾರಿ ಮಧ್ಯದಲ್ಲಿಯೇ ತಾರಮ್ಮ ಮೃತಪಟ್ಟಿರುತ್ತಾಳೆ ಅಂತ ತಿಳಿಸಿದ್ದು ಅಂದಾಜು ಸಮಯ ಇಂದು ಬೆಳಿಗ್ಗೆ 2.30 ಗಂಟೆಗೆ ಸತ್ತಿರುತ್ತಾಳ,ೆ ಸದರಿಯವಳ ಸಾವಿನಲ್ಲಿ ಯಾರ ಮೇಲು ಯಾವುದೆ ರೀತಿಯ ದೂರು, ಸಂಶಯ ಇರುವದಿಲ್ಲ.ಅಂತ ಹೇಳಿಕೆ ನೀಡಿದ್ದು ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿನಿಂದ ಸೈದಾಪೂರ ಠಾಣೆ ಯು.ಡಿ.ಆರ್. ನಂ. 10/2020 ಕಲಂ. 174 ಸಿ.ಆರ್.ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 48/2020 ಕಲಂ: 78(3) ಕೆ.ಪಿ ಆಠ್ಟಿ್ : ಇಂದು ದಿನಾಂಕ:09.06.2020 ರಂದು 11:00 ಎಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ನಾನು ಇಂದು ದಿನಾಂಕ:09.06.2020 ರಂದು ಮುಂಜಾನೆ 9:00 ಗಂಟೆಗೆ ಠಾಣೆಯಲ್ಲಿದ್ದಾಗ ಠಾಣೆಯ ಸಿಬ್ಬಂದಿಯಾದ ಪ್ರಭುಗೌಡ ಹೆಚ್ಸಿ-120 ರವರು ಬಂದು ನನಗೆ ತಿಳಿಸಿದ್ದೇನೆಂದರೆ, ಕಕ್ಕೇರಾ ಪಟ್ಟಣದ ಬಲಶೆಟ್ಟಿಹಾಳ-ಶಾಂತಪೂರ ಕ್ರಾಸ ಮುಖ್ಯ ರಸ್ತೆಯ ವಾಲ್ಮೀಕಿ ವೃತ್ತದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಿರುವುದಾಗಿ ತಿಳಿಸಿದ್ದು ಸದರಿ ಸಿಬ್ಬಂದಿಯವರು ಹೇಳಿದ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ಕಜ್ಜಪ್ಪ ಪಿಸಿ-251 ರವರು ಪಡೆದುಕೊಂಡು ಹಾಜರ ಪಡಿಸಿದ್ದು. ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:48/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ನಂತರ ಮಟಕಾ ಜೂಜಾಟ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಜೂಜುಕೊರನಿಂದ ನಗದು ಹಣ 1590/-ರೂ ಒಂದು ಮಟಕಾ ನಂಬರ ಬರೆದ ಚೀಟಿ ಒಂದು ಬಾಲ್ ಪೆನ್ನು ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗ 3:00 ಪಿ. ಎಮ್ ಬಂದಿದ್ದು ಅದೆ.
ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
ಸೋಮಣ್ಣ ತಂದೆ ನಂದಪ್ಪ ಗೋವಿಂಧರ ವ:22 ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ: ಶಟ್ಟರ್ ಓಣಿ ಕಕ್ಕೇರಾ ತಾ: ಸುರಪೂರ
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 49/2020 ಕಲಂ: 498(ಎ) 323 504 506 ಐಪಿಸಿ : ಇಂದು ದಿನಾಂಕ:09.06.2020 ರಂದು ಸಾಯಂಕಾಲ 5:45 ಪಿಎಮ್ ಕ್ಕೆ ಪಿರ್ಯಾಧಿ ಶ್ರೀಮತಿ. ಲಕ್ಷ್ಮೀ ಗಂಡ ಸೋಮನಾಥ ಇಂದ್ರಗಿ ವ:26 ವರ್ಷ ಉ:ಮನೆಕೆಲಸ ಜಾ: ಕುರುಬರ ಸಾ: ಮಂಜಲಾಪೂರ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿರ್ಯಾಧಿ ಅಜರ್ಿಯನ್ನು ಹಾಜರ ಪಡಿಸಿದ್ದು. ಸದರ ಪಿರ್ಯಾಧಿಯ ಅಜರ್ಿಯ ಸಾರಾಂಶವೆನೆಂದರೆ ನನಗೆ 13 ವರ್ಷಗಳ ಹಿಂದೆ ನಮ್ಮ ತಂದೆ-ತಾಯಿಯವರು ನಮ್ಮೂರು ಮಲ್ಲಪ್ಪ ಇಂದ್ರಗಿ ರವರ ಮನಗನಾದ ಸೋಮನಾಥ ತಂದೆ ಮಲ್ಲಪ್ಪ ಇಂದ್ರಗಿ ರವರೊಂದಿಗೆ ಮದುವೆ ಮಾಡಿದ್ದು. ನಮ್ಮ ಮದುವೆಯು ನನ್ನ ಗಂಡನ ಮನೆಯ ಮುಂದೆ ಆಗಿದ್ದು. ಮದುವೆಯ ಕಾಲಕ್ಕೆ ನನ್ನ ತಂದೆ ಮಾಹಾದೇವಪ್ಪ, ತಾಯಿ ರಾಯಮ್ಮ ಹಾಗೂ ನನ್ನ ದೊಡ್ಡಪ್ಪನಾದ ತಮ್ಮಣ್ಣ ಹಾಗೂ ನನ್ನ ಗಂಡನ ಮನೆಯ ಕಡೆಯಿಂದ ಅತ್ತೆ-ಮಾವ ಮತ್ತು ಅವರ ಸಂಬಂಧಿ ಶಿವಪ್ಪ ತಂದೆ ಪರಮಣ್ಣ ಇಂದ್ರಗಿ ಹಾಗೂ ನಮ್ಮ ಅಣ್ಣ-ತಮ್ಮಕೀಯ ರವರು ಮತ್ತು ಅವರ ಅಣ್ಣತಮ್ಮಕೀಯವರು ಹಾಜರಿದ್ದು. ನಮ್ಮ ಮದುವೆಯ ಕಾಲಕ್ಕೆ ಹಾಜರಿದ್ದು ಮದುವೆ ಮಾಡಿದ ನಮ್ಮ ದೊಡ್ಡಪ್ಪ ತಮ್ಮಣ್ಣನು ಈಗ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದು. ನಾನು ಮದುವೆಯಾದ ಮೇಲೆ ಗಂಡನ ಮನೆಯಲ್ಲಿಯೇ ಇದ್ದು. ನಮ್ಮ ದಾಂಪತ್ಯದಿಂದ ನನಗೆ ಈಗ 7 ವರ್ಷಗಳ ಹಿಂದೆ ನಿತೀನ್ ಅಂತ ಒಬ್ಬ ಗಂಡು ಮಗ ಜನಿಸಿದ್ದು. ಮದುವೆಯಾದ ಮೇಲೆ 7-8 ವರ್ಷಗಳ ವರೆಗೆ ನನ್ನ ಗಂಡನು ನನ್ನನ್ನು ಒಳ್ಳೆಯ ರೀತಿಯಿಂದ ನೋಡಿಕೊಂಡಿದ್ದು ನಂತರ ನನ್ನ ಗಂಡ ಸೋಮನಾಥನು ನನಗೆ ವಿನಾ ಕಾರಣ ಬೈಯುವದು ಹೊಡೆಬಡೆ ಮಾಡುವದು ಇಯಾಳಿಸುವದು ಮಾಡ ಹತ್ತಿದ್ದು. ನನ್ನ ಗಂಡ ಸೋಮನಾಥನು ನನಗೆ ಸೂಳಿ ನೀನು ನನಗೆ ಎಷ್ಟುದಿವಸದಿಂದ ಮೂಲ ಆಗಿದಿ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲಾ. ಏನಾದರೂ ಕೇಳಿದರೇ ಎದುರು ವಾದಿಸುತ್ತಿ ಅಂತ ಪದೇ-ಪದೇ ಬೈಯುವದು ಹೊಡೆಬಡೆ ಮಾಡುವದು ಮಾಡುತ್ತಾ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದರಿಂದ ನಾನು ಈ ವಿಷಯವನ್ನು ನನ್ನ ತವರೂ ಮನೆಗೆ ಹೋಗಿ ನನ್ನ ತಂದೆ-ತಾಯಿ ರವರಿಗೆ ತಿಳಿಸಿದ್ದು. ನನ್ನ ತಂದೆ-ತಾಯಿಯವರು ಈಗ ಒಂದೂವರೆ ವರ್ಷದ ಹಿಂದೆ ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ನನ್ನೊಂದಿಗೆ ಒಳ್ಳೆಯ ರೀತಿಯಿಂದ ಇದ್ದು. ಒಳ್ಳೆಯ ರೀತಿಯಿಂದ ಸಂಸಾರ ಮಾಡಿಕೊಂಡು ಹೋಗುವಂತೆ ತಿಳುವಳಿಕೆ ನೀಡಿ ಹೋಗಿದ್ದು. ನಂತರ ನನ್ನ ಗಂಡನು ಕೆಲದಿನ ನನ್ನೊಂದಿಗೆ ಚನ್ನಾಗಿದ್ದು ಈಗ ಒಂದು ವರ್ಷದ ಹಿಂದೆ ಮತ್ತೆ ನನ್ನ ಗಂಡನು ಪುನಃ ನನಗೆ ಹೊಡೆ-ಬಡೆ ಮಾಡುವದು ಕಿರುಕುಳ ಕೊಡುವದು ಮುಂದುವರಿಸಿದ್ದರಿಂದ ನಾನು ಅವನ ಕಿರುಕುಳಕ್ಕೆ ಬೆಸತ್ತು ಈಗ ಒಂದು ವರ್ಷದ ಹಿಂದ ನನ್ನ ತವರೂರು ಮನೆಗೆ ಹೋಗಿ ಇರುವೇನು. ನನ್ನ ಮಗ ನಿತೀನ್ನು ನನ್ನ ಗಂಡನ ಹತ್ತಿರ ಇದ್ದು. ನಾನು ಈಗ ಒಂದು ವರ್ಷದ ಹಿಂದೆ ಸುರಪೂರ ನ್ಯಾಯಾಲಯದಲ್ಲಿ ನನ್ನ ಹಾಗೂ ನನ್ನ ಮಗನ ಜೀವನಾಂಶಕ್ಕಾಗಿ ನನ್ನ ಗಂಡನ ಮೇಲೆ ಕೇಸ್ ಮಾಡಿದ್ದು ಅದು ಇನ್ನೂ ವಿಚಾರಣೆಯಲ್ಲಿರುತ್ತದೆ. ಹೀಗಿರುವಾಗ ನನ್ನ ಮಗನು ನನ್ನ ಗಂಡನ ಹತ್ತಿರ ಇದ್ದುದರಿಂದ ನನಗೆ ನನ್ನ ಮಗನನ್ನು ನೋಡುವ ಬಯಕೆಯಾಗಿದ್ದರಿಂದ ನಾನು ನನ್ನ ತಮ್ಮನ ಹೆಂಡತಿ ಜ್ಯೋತಿ ಗಂಡ ಹೈಯಾಳಪ್ಪ ಅಸ್ಕಿ ರವರೊಂದಿಗೆ ದಿನಾಂಕ:08.06.2020 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ನನ್ನ ಗಂಡನ ಮನೆಗೆ ನನ್ನ ಮಗನನ್ನು ನೋಡಲು ಹೋದಾಗ ಮನೆಯ ಮುಂದೆ ನನ್ನ ಗಂಡನು ಇದ್ದು ಅವನು ನನಗೆ ನೋಡಿದವನೇ ಸೂಳೇ ಇಲ್ಲಿಗ್ಯಾಕೆ ಬಂದಿದಿ ಅಂತಾ ಬೈಯ ಹತ್ತಿದ್ದು ಆಗ ನಾನು ಅವನಿಗೆೆ ನನ್ನ ಮಗನನ್ನು ನೋಡಬೇಕೆಂದು ಬಯಕೆಯಾಗಿದ್ದರಿಂದ ನನ್ನ ಮಗನನ್ನು ನೋಡಲು ಬಂದಿದ್ದೇನೆ ಮಗನನ್ನು ನೋಡಿಕೊಂಡು ಹೋಗುತ್ತೆನೆ ಅಂತ ಅನ್ನುತ್ತಿರುವಾಗಲೇ ನನ್ನ ಗಂಡನು ನನಗೆ ಜೋರಾಗಿ ಕೈಯಿಂದ ಕಪಾಳದ ಮೇಲೆ ಹೊಡೆದು ನೂಕಿಕೊಟ್ಟಿದ್ದು. ಆಗ ನಾನು ನೆಲಕ್ಕೆ ಬಿದ್ದಾಗ ನನ್ನ ಗಂಡನು ನನಗೆ ಕಾಲಿನಿಂದ ಮೈಮೇಲ್ಲಾ ಒದ್ದು ತುಳಿದು ಗುಪ್ತಗಾಯ ಪಡಿಸಿದ್ದು. ಆಗ ನಾನು ಚಿರಾಡಲು ನನ್ನ ಜೋತೆಗೆ ಇದ್ದ ನನ್ನ ನಾದಿನಿ ಜ್ಯೋತಿ ಗಂಡ ಹ್ಯಯಾಳಪ್ಪ ಅಸ್ಕಿ ಹಾಗೂ ಅಲ್ಲಿಂದಲೇ ಹೋಗುತ್ತಿದ್ದ ಮೇಲಾರ ದೊಡ್ಡಿಯ ಕಕ್ಕೇರಾದ ಬಸವರಾಜ ತಂದೆ ಸೋಮಪ್ಪ ಮೇಲಾರವರು ನೋಡಿ ಬಿಡಿಸಿದ್ದು. ಇವರು ಬಿಡಿಸದಿದ್ದರೆ ನನ್ನ ಗಂಡನು ನನಗೆ ಇನ್ನೂ ಹೊಡೆ-ಬಡೆ ಮಾಡುತ್ತಿದ್ದನು ಹೋಗುವಾಗ ನನ್ನ ಗಂಡನು ನನಗೆ ಸೂಳೆ ಇವತ್ತು ನನ್ನ ಕೈಯಲ್ಲಿ ಉಳಿದಿದದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ನನಗೆ ಈ ಘಟನೆಯಲ್ಲಿ ಅಷ್ಟೇನು ಪೆಟ್ಟಾಗಿರುವದಿಲ್ಲಾ ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗುವದಿಲ್ಲಾ ನಾನು ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು. ಕಾರಣ ನನ್ನ ಗಂಡನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಪಿರ್ಯಾಧಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:49/2020 ಕಲಂ: 498(ಂ) 323 504 506 ಕಅ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 08/2020 107 ಸಿ.ಆರ್.ಪಿ.ಸಿ : ದಿನಾಂಕ:09/06/2020ರಂದು18.10ಗಂಟೆಗೆಠಾಣೆಯಶ್ರೀ ಚಂದ್ರಾಮಪ್ಪ ಹೆಚ್.ಸಿ-10(ಸಿ) ಹುಣಸಗಿ ಪೊಲೀಸ ಠಾಣೆರವರುಠಾಣೆಗೆ ಬಂದುಒಂದು ಲಿಖಿತದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ,ದಿನಾಂಕ:08/06/2020 ರಂದು ನಾನು ಬಲಶೆಟ್ಟಿಹಾಳ ಗ್ರಾಮಕ್ಕೆ ಬೇಟಿಗೆಂದು ಹೋದಾಗಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಬಸಣ್ಣತಂದೆರಾಯಪ್ಪಜೋಗಿನ್ ಮತ್ತು ಸಂಗಡಿಗರು ಮತ್ತುಅದೇಗ್ರಾಮದಮುದಕಪ್ಪ @ ಕೆಂಜಾಡೆಪ್ಪತಂದೆ ಹೊಳೆಪ್ಪ ಜೋಗಿನ್ಮತ್ತು ಸಂಗಡಿಗರ ಮದ್ಯ ಬಲಶೆಟ್ಟಿಹಾಳ ಸೀಮೆಯ ಹೊಲ ಸವರ್ೆ ನಂ18/5 ರಜಮೀನದಲ್ಲಿ ಬಿತ್ತನೆ ಮಾಡುವ ಸಲುವಾಗಿ ಕಬ್ಜಾದ ವಿಷಯದಲ್ಲಿ ಸುಮಾರು ದಿನಗಳಿಂದಾ ತಕರಾರುಇದ್ದು, ಸದರಿ ವಿಷಯದಲ್ಲಿ ಈ ಮೊದಲು ಜಗಳವಾಗಿ ಠಾಣೆಯಲ್ಲಿಗುನ್ನೆ ನಂ.51/2019, 52/2019 ಮತ್ತು 65/2019, 66/2019 ಪ್ರಕರಣದಾಖಲಾಗಿದ್ದು, ಎರಡು ಪಾಟರ್ಿಯವರುಒಂದೇಊರಿನವರಿದ್ದ ಮುಂಭರುವ ದಿನಗಳಲ್ಲಿ ಮತ್ತೆತಮ್ಮತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ.ಕಾರಣ ಮೇಲ್ಕಂಡವರ ಮೇಲೆ ಮುಂಜಾಗೃತಾಕ್ರಮಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆಕ್ರಮಕೈಕೊಂಡಿದ್ದುಇದೆ.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 40/2020 ಕಲಂ: 323,324,504,506, ಸಂಗಡ 34 ಐಪಿಸಿ : ಇಂದು ದಿನಾಂಕ 09/06/2020 ರಂದು 6:00 ಪಿ.ಎಂ ಕ್ಕೆ ಪಿಯರ್ಾದಿ ರವಿನಾಯಕ ತಂದೆ ನಾರಾಯಣ ರಾಠೋಡ ವ:42 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಲಮಾಣಿ ಸಾ: ಲಕ್ಷ್ಮಣಕೇರಿ ತಾಂಡಾ ತಾ: ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದುಕನ್ನಡದಲ್ಲಿ ಬರೆದ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನಾನು ಹಾಗೂ ನಮ್ಮ ತಾಯಿ ಚವಳಬಾಯಿ ರವರು ನಿನ್ನೆ ದಿನಾಂಕ 08/06/2020 ರಂದು 6:30 ಪಿ.ಎಂ ಕ್ಕೆ ನಮ್ಮ ಮನೆಯ ಮುಂದೆ ಇದ್ದಾಗ ನಮ್ಮ ತಾಂಡಾದ ಬಸವರಾಜ ತಂದೆ ಶಾಂತಪ್ಪ ರಾಠೊಡ, ಆಲಪ್ಪ ತಂದೆ ಶೆಟ್ಟೆಪ್ಪ ರಾಠೋಡ, ದೇವಿಬಾಯಿ ರಾಠೊಡ, ಲಕ್ಷ್ಮಿಂಬಾಯಿ ಗಂಡ ಗೋವಿಂದ ರಾಠೊಡ ಇವರು ನಮ್ಮ ಹತ್ತಿರ ಬಂದು ಅವರಲ್ಲಿಯ ಬಸವರಾಜ ಈತನು ನನಗೆ ಬೋಸುಡಿ ಮಗನೆ ನಮ್ಮ ಹೊಲಕ್ಕೆ ಹೋಗಿ ನಮ್ಮ ಹೆಂಡತಿಗೆ ಹೆಂಗಬೇಕು ಹಂಗ ಮಾತನಾಡುತ್ತಿಯಾ ಮತ್ತು ಅಸಯ್ಯವಾಗಿ ಮಾತನಾಡುತ್ತಿಯಾ ಎಷ್ಟು ಸೊಕ್ಕು ನಿನಗೆ ಅಂತಾ ಕೇಳಿದನು. ಆಗ ನಾನು ಬಸವರಾಜನಿಗೆ ನಾನು ಆ ರೀತಿ ಮಾತನಾಡಿರುವದಿಲ್ಲ ಅಂತಾ ಅಂದಾಗ, ಬಸವರಾಜನು ಬೋಸುಡಿ ಮಗನೆ ಮಾತನಾಡೊತನ ಮಾತನಾಡಿ ಈಗ ಸುಳ್ಳು ಬೊಗಳುತ್ತಿಯಾ ಅಂತಾ ಅಂದವನೆ ಕೈಯಿಂದ ನನ್ನ ಕಪಾಳಕ್ಕೆ ಹೊಡೆದು ನನ್ನೊಂದಿಗೆ ತೆಕ್ಕೆ ಕುಸ್ತಿಗೆ ಬಿದ್ದು ನನ್ನನ್ನು ಕೆಳಗೆ ಕೆಡುವಿ ತನ್ನ ಕೈಯಲ್ಲಿ ಇದ್ದ ಕಟ್ಟಿಗೆಯಿಮದ ನನ್ನ ಎಡಗೈ ಹೊಡೆದು ರಕ್ತಗಾಯ ಮಾಡಿದ್ದು ಹಾಗೂ ಅವರಲ್ಲಿ ಆಲಪ್ಪ ಈತನು ತನ್ನ ಕೈಯಲ್ಲಿ ಇದ್ದ ಬಡಿಗೆಯಿಂದ ನನ್ನ ಎರಡು ಕುಂಡಿಯ ಮೇಲೆ ಹಾಗೂ ಹೊಟ್ಟೆಯ ಮೇಲೆ ಹೊಡೆದು ಕಂದುಗಟ್ಟಿದ ಗಾಯ ಪಡಿಸಿದ್ದು ಇರುತ್ತದೆ, ಅವರೊಂದಿಗೆ ಬಂದಿದ್ದ ದೇವಿಬಾಯಿ ರಾಠೋಡ, ಹಾಗೂ ಲಕ್ಷಿಂಬಾಯಿ ಗಂಡ ಗೋವಿಂದ ರಾಠೋಡ ಇವರು ಕೂಡ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದರು ನನ್ನ ತಾಯಿ ಬಿಡಿಸಿದರು ಕೂಡ ಬೀಡಲಿಲ್ಲ ಆಗ ನಾನು ಚೀರಾಡಲು ಅಲ್ಲಿಯೆ ಪಕ್ಕದಲ್ಲಿ ಇದ್ದ ನಮ್ಮ ತಾಂಡಾದ ಗುಂಡಪ್ಪ ತಂದೆ ತಾರಪ್ಪ ರಾಠೊಡ, ಗೋವಿಂದ ತಂದೆ ಗಂಗಪ್ಪ ರಾಠೊಡ, ಶಾಂತಿಲಾಲ ತಂದೆ ಪೂರಪ್ಪ ರಾಠೊಡ ಇವರು ಬಂದು ಬಿಡಿಸಿದರು. ಬಸವರಾಜ, ಆಲಪ್ಪ, ದೇವಿಬಾಯಿ, ಲಕ್ಷಿಂಬಾಯಿ ಇವರೆಲರೂ ನನಗೆ ಬೋಸುಡಿ ಮಗನೆ ಇವರು ಇವತ್ತು ಬಂದು ಬಿಡಿಸಿಕೊಂಡರು ಅಂತಾ ಉಳದಿದ್ದಿಯಾ ಇಲ್ಲದಿದ್ದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿಹೋದರು. ನಿನ್ನೆ ರಾತ್ರಿಯಾಗಿದ್ದರಿಂದ ಇಂದು ನಮ್ಮ ತಾಂಡಾದ ನಮ್ಮ ಸಮಾಜದ ಮುಖಂಡರೊಂದಿಗೆ ಹಾಗೂ ನಮ್ಮ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ಪಿಯರ್ಾದಿ ಕೊಟ್ಟಿದ್ದು ಇರುತ್ತದೆ. ಅಂತಾ ನೀಡಿದ ಪಿಯರ್ಾದಿಯ ಲಿಖಿತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 40/2020 ಕಲಂ 323,324,504,506, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- ಇಂದು ದಿನಾಂಕ 09-06-2020 ರಂದು 5-30 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಮರೆಮ್ಮಾ ಗಂಡ ಮಾನಪ್ಪಾ ಬಂದಳ್ಳಿಯೋರ ವಯಾ: 50 ಉ:ಹೋಲನಮನೆಗೆಲಸ ಜಾ: ಹರಿಜನ ಸಾ:ಅಲ್ಲಿಪೂರ ಇವರು ಠಾಣೆಗೆ ಹಾಜರಾಗಿ ಫಿರ್ಯಾಧಿ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನನಗೆ ಮೂರು ಜನರ ಗಂಡು ಮಕ್ಕಳು ಹಿರಯವರಿದ್ದು ಅವರ ನಂತರ ಮೂರು ಹೆಣ್ಣುಮಕ್ಕಳಿರುತ್ತಾರೆ. ಹೆಣ್ಣು ಮಕ್ಕಳಲ್ಲಿ ಹಿರಿಯ ಮಗಳಾದ ಶ್ರೀದೇವಿ ಅಂತಾ 18 ವರ್ಷದವಳಿದ್ದು ಅವಳು ಕೂಡ ನಮ್ಮ ಸಂಗಡವೇ ಹೋಲ ಮನೆಗೆಲಸ ಮಾಡಿಕೊಂಡಿರುತ್ತಾಳೆ. ನಮ್ಮ ಗ್ರಾಮದ ಹಾಗೂ ನಮ್ಮ ಎರಡನೇಯ ಅಣ್ಣತಮಕಿಯ ಮಗನಾದ ಹಣಮಂತ ತಂದೆ ಮಲ್ಲಿಕಾಜರ್ುನ ಬಂದಳ್ಳೀಯೋರ ಇತನು ಟ್ರ್ಯಾಕ್ಟರ ಚಲಾಯಿತ್ತಿದ್ದು, ಇತನು ನನ್ನ ಮಗಳಾದ ಶ್ರೀದೇವಿ ಇವಳು ಹೋಲ ಮನೆಗೆ ತಿರುಗಾಡುವಾಗ ಅಥವಾ ಸಂಡಾಸಕ್ಕೆ ಹಾಗೂ ಇತರೇ ಕಡೆಗೆ ಮನೆಯಿಂದ ಹೋರ ಹೋಗುವಾಗ ಮತ್ತು ಬರುವಾಗ ಹಣಮಂತನು ಬೇರೊಬ್ಬರ ಮೇಲೆ ಹಾಕಿ ಏನೇನೋ ಮಾತಾಡುವುದು, ಅಥವಾ ಕೈಸನ್ನೆ ಮಾಡುವುದು ಮಾಡುತ್ತಿದ್ದ ಬಗ್ಗೆ ನನ್ನ ಮಗಳು ಒಂದೆರಡು ಬಾರಿ ಮನೆಯಲ್ಲಿ ನನ್ನ ಹಾಗೂ ತನ್ನ ತಂದೆಯ ಮುಂದೆ ಹೇಳಿದ್ದಳು. ಆಗ ನಾವು ಹಾಗೂ ನಮ್ಮ ಸಂಬಂಧಿಯಾದ ಸಾಬಣ್ಣಾ ತಂದೆ ನಿಂಗಪ್ಪಾ ಬಂದಳ್ಳಿಕರ ಹಾಗೂ ನನ್ನ ಮಗನಾದ ಮರಲಿಂಗ ಎಲ್ಲರೂ ಕೂಡಿ ಹಣಮಂತನಿಗೆ ಮತ್ತು ಅವರ ಮನೆಯವರಿಗೆ ತಿಳಿಸಿ ನಮ್ಮ ಮಗಳ ತಂಟೆಗೆ ಬಾರದಂತೆ ತಿಳಿಸಿ ಹೇಳಿದೇವು. ಆದರೂ ಹಣಮಂತನು ಮೊದಲಿನಂತೆ ನನ್ನ ಮಗಳಿಗೆ ಸತಾಯಿಸುತ್ತಾ ಬಂದಿರುತ್ತಾನೆ. ಇಂದು ದಿನಾಂಕ 07-06-2020 ರಂದು ಬೆಳಗ್ಗೆ ನಾನು ನನ್ನ ಗಂಡ ಹಾಗೂ ನನ್ನ ಮಗನಾದ ಮರಲಿಂಗ ಎಲ್ಲರೂ ಕೂಡಿ ಎಂದಿನಂತೆ ನಮ್ಮ ಹೋಲದ ಕಡೆಗೆ ಹೋದೆವು. ಮಧ್ಯಾಹ್ನ 3-30 ಗಂಟೆ ಸುಮಾರಿಗೆ ನಾವೇಲ್ಲರೂ ನಮ್ಮ ಹೋಲದಲ್ಲಿದ್ದಾಗ ನನ್ನ ಎರಡನೇ ಮಗಳಾದ ಸಾಬಮ್ಮಾ ಇವಳು ಗಾರಿಯಿಂದ ನಮ್ಮ ಹೋಲಕ್ಕೆ ಬಂದು ತಿಳಿಸಿದ್ದೆನೆಂದರೆ ಈಗ ಅರ್ಧ ತಾಸಿನ ಹಿಂದೆ ನಾನು ಮತ್ತು ಅಕ್ಕಳಾದ ಶ್ರಿದೇವಿ ಇಬ್ಬರೂ ಕೂಡಿ ಸಂಡಾಸಕ್ಕೆ ಹೋಗಿದ್ದೇವು ನಂತರ ಅಲ್ಲಿಂದ ಮನೆಯ ಕಡೆಗೆ ಬರುವಾಗ ನಾನು ಸ್ವಲ್ಪ ಮುಂದೆ ಬರುತ್ತಿದ್ದೆ ಶ್ರಿದೇವಿ ಇವಳು ಸ್ವಲ್ಪ ಹಿಂದೆ ಬರುತ್ತಿದ್ದಳು. ಅದೇ ವೇಳೆಗೆ ನಮ್ಮ ಅಣ್ಣತಮಕಿಯವರ ಮಗನಾದ ಹಣಮಂತ ತಂದೆ ಮಲ್ಲಿಕಾಜರ್ುನ ಬಂದಳ್ಳೀಯೋರ ಇವನು ತನ್ನ ಮೋಟಾರ ಸೈಕಲ್ ತೆಗೆದುಕೊಂಡು ಬಂದು ಶ್ರೀದೇವಿ ಇವಳ ಮುಂದೆ ತಂದು ನಿಲ್ಲಿಸಿದನು. ಆಗ ಅವಳು ಅಲ್ಲಿಂದ ಬಾಜು ಆಗಿ ಬರುವಷ್ಟರಲ್ಲಿ ಶ್ರೀದೇವಿ ಇವಳನ್ನು ಬಲವಂತವಾಗಿ ಅಪಹರಿಸಿಕೊಂಡು ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ನಮ್ಮೂರ ಕಡೆಯಿಂದ ಯಾದಗಿರಿ ಮೇನ್ ರೊಡ ಕಡೆಗೆ ಹೋದನು. ಅಂತಾ ಗಾಬರಿಯಿಂದ ತಿಳಿಸಿದಾಗ ನಾವೆಲ್ಲರೂ ಕೂಡಲೇ ಮನೆಯ ಕಡೆಗೆ ಬಂದು ಎಲ್ಲರೂ ಕೂಡಿ ನನ್ನ ಮಗಳಿಗೆ ಹುಡುಕಾಡಿ ನೋಡಲಾಗಿ ನನ್ನ ಮಗಳ ಮತ್ತು ಹಣಮಂತನ ಸುಳಿವು ಸಿಗಲಿಲ್ಲಾ. ಈ ವಿಷಯದ ಬಗ್ಗೆ ಹಣಮಂತ ಇತನ ಮನೆಗೆ ಹೋಗಿ ಅವರ ತಂದೆ ತಾಯಿಗೆ ಹೇಳಿ ವಿಚಾರಿಸಿದ್ದು ಅವರು ಕೂಡಾ ಅವನಿಗೆ ಈ ಮೊದಲು ಆತನಿಗೆ ಇದೇ ವಿಷಯದಲ್ಲಿಯೇ ಬುದ್ದಿವಾದ ಹೇಳಿದ್ದು ಮನೆಯಲ್ಲಿ ಅವರ ಮಾತು ಸಹ ಕೇಳಿಲ್ಲಾ ಮತ್ತು ಈ ವಿಷಯದ ಬಗ್ಗೆ ತಮಗೇನು ಗೊತ್ತಿಲ್ಲಾ ಅಂತಾ ತಮಗೆ ತಿಳಿಸಿದರು. ಹಣಮಂತ ತಂದೆ ಮಲ್ಲಿಕಾಜರ್ುನ ಬಂದಳ್ಳೀಯೋರ ಇತನು ನಮ್ಮ ಮಗಳಾದ ಶ್ರಿದೇವಿ ಇವಳಿಗೆ ಆಗಾಗ ಸತಾಯಿಸುತ್ತಾ ಬಂದಿದ್ದು ಅವಳಿಗೆ ಬಲವಂತವಾಗಿ ಅಪಹರಿಸಿಕೊಂಡು ಹೋಗಿದ್ದು, ಅವನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಂಡು ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕು ಅಂತಾ ಹೇಳಿ ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಈ ಬಗ್ಗೆ ನಾವು ಮನೆಯಲ್ಲಿ ವಿಚಾರ ಮಾಡಿ ಮತ್ತು ಮಗಳಿಗೆ ಎಲ್ಲಾ ಕಡೆಗೆ ಹುಡುಕಾಡಿ ಅವಳು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾಧೀ ಸಲ್ಲಿಸಿದ್ದು ಇರುತ್ತದೆ ಅಂತಾ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 73/2020 ಕಲಂ 363 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 72/2020 279, 338, ಐಪಿಸಿ : ಇಂದು ದಿನಾಂಕ: 09/06/2020 ರಂದು 11.30 ಎಎಂ ಕ್ಕೆ ಅಜರ್ಿದಾರ ಶ್ರೀ. ಹೇಮರಡ್ಡಿ ತಂದೆ ಮರೆಪ್ಪ ಹಂಗರಗಿ ವಯಾ:42 ಉ:ಒಕ್ಕಲುತನ ಜಾ: ಹಿಂದೂ ರಡ್ಡಿ ಸಾ: ಮಲ್ಲಾಬಾದಿ ಹಾ:ವ: ಬೂದನೂರ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿ ನೀಡಿದ್ದು, ಅದರ ಸಾರಂಶ ಏನಂದರೆ, ನನ್ನ ತಮ್ಮನಾದ ಸಂಜೀವರಡ್ಡಿ ತಂದೆ ಮರೆಪ್ಪ ಹಂಗರಗಿ ವಯಾ:36 ವರ್ಷ ಉ: ಒಕ್ಕಲುತನ ಜಾ: ಹಿಂದೂ ರಡ್ಡಿ ಸಾ: ಮಲ್ಲಾಬಾದಿ ಹಾ: ವ: ಬೂದನೂರ ತಾ: ಶಹಾಪೂರ ಜಿ: ಯಾದಗಿರಿ ಈತನು ನಿನ್ನೆ ದಿನಾಂಕ: 08/06/2020 ರಂದು 06.45 ಎಎಂ ಸುಮಾರಿಗೆ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಮೋಟಾರ್ ಸೈಕಲ್ ನಂ: ಕೆಎ-33-ಇ-7799, ನೇದ್ದರ ಮೇಲೆ ಮನೆಯಿಂದ ಹೋಗಿದ್ದನು. ಸ್ವಲ್ಪ ಸಮಯದಲ್ಲಿಯೇ ನಮ್ಮ ಊರಿನ ರಾಘುರಡ್ಡಿ ತಂದೆ ಭೀಮರಡ್ಡಿ ಹುಡೇದ ವಯಾ:38 ಸಾ: ಬೂದನೂರ ಇವರು ಪೋನ ಮಾಡಿ ವಿಷಯ ತಿಳಿಸದ್ದೇನಂದರೆ, ನಿಮ್ಮ ತಮ್ಮನಾದ ಸಂಜೀವರಡ್ಡಿ ತಂದೆ ಮರೆಪ್ಪ ಹಂಗರಗಿ ಈತನು ಬೂದನೂರ ಊರಲ್ಲಿಂದ ಹೊಲಕ್ಕೆ ಹೋಗುತ್ತಾ ನಮ್ಮೂರಿನ ಮೇನ್ ಕೇನಾಲ ಬ್ರಿಡ್ಜ ಇನ್ನ ಅಂದಾಜು 20 ಮೀಟರ ಉತ್ತರಕ್ಕೆ ಮುಂದೆ ಇದ್ದಾಗ ರೋಡಿನಲ್ಲಿ ಹೋಗುತ್ತಿದ್ದಾಗ ಅಂದಾಜು 07.00 ಎಎಂ ಸುಮಾರಿಗೆ ಎದರುಗಡೆಯಿಂದ ಒಂದು ಸ್ಕಾಪರ್ಿಯೋ ವಾಹನ ನಂ: ಎಪಿ-31-ಬಿಡಬ್ಲೂ-4163, ನೇದ್ದರ ವಾಹನ ಚಾಲಕನು ತನ್ನ ವಾಹನವನ್ನು ಕಾಡಂಗೇರಾ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡೆಸಿ ಅಪಘಾತ ಮಾಡಿದ್ದು, ಆಗ ಸಂಜೀವರಡ್ಡಿ ಅಪಘಾತದ ರಬಸಕ್ಕೆ ರೋಡಿನ ಪಕ್ಕದಲ್ಲಿ ಸಿಡಿದು ಬಿದ್ದಿದ್ದು, ಆತನ ಮೋಟಾರ್ ಸೈಕಲ್ ಜಕಂಗೊಂಡಿರುತ್ತದೆ. ನಾನು ಓಡಿ ಹೋಗಿ ನೋಡಲಾಗಿ ಸಂಜೀವರಡ್ಡಿ ಈತನಿಗೆ ಬಲಗಾಲಿನ ಮೋಳಕಾಲಿನ ಕೆಳಗೆ ಮತ್ತು ಬಲಗಾಲಿನ ಮೋಳಕೈಗೆ ರಕ್ತಗಾಯಗಳಾಗಿದ್ದು, ಬಲಗಾಲಿನ ಮೋಳಕಾಲಿಗೆ ಭಾರಿ ಗುಪ್ತಗಾಯವಾಗಿ ಮೋಳಕಾಲು ಹತ್ತಿರ ಮುರಿದಿರುತ್ತದೆ. ಬೆನ್ನಿಗೆ ಮತ್ತು ಹಿಂಬದಿಯ ಟೊಂಕಕ್ಕೆ ಬಾರಿ ಒಳಪೆಟ್ಟಾಗಿ ಒದ್ದಾಡತೊಡಗಿದ, ಅಪಘಾತ ಮಾಡಿದ ಸ್ಕಾಪರ್ಿಯೋ ವಾಹನ ಚಾಲಕನ ನೋಡಲಾಗಿ ನಮ್ಮೂರಿಗೆ ಪಪ್ಪಾಯಿ ಬೆಳೆ ಖರೀದಿ ಮಾಡಲು ಬಂದು ಇಲ್ಲೆ ತಂಗಿರುವ ಬಾಲಕೃಷ್ಣ ತಂದೆ ಸೇವಾನಾಯಕ ವಯಾ:37 ಉ: ಲಂಬಾಣಿ ಉ: ಪಪ್ಪಾಯಿ ವ್ಯಾಪಾರ ಸಾ: ರುದ್ರಂಪೇಠ ತಾ:ಜಿ: ಅನಂತಪೂರ ಆಂದ್ರ ಪ್ರದೇಶ ಹಾ:ವ: ಬೂದನೂರ ತಾ: ಶಹಾಪೂರ ಈತನೆ ಇರುತ್ತಾನೆ. ನೀವು ಬೇಗ ಪಘಾತ ಸ್ಥಳಕ್ಕೆ ಬನ್ನಿ ಅಂತಾ ತಿಳಿಸಿದನು, ಆಗ ನಾನು ಮತ್ತು ನಮ್ಮ ಅಣ್ಣನಾದ ಶಿವಲಿಂಗರಡ್ಡಿ ತಂದೆ ಮಲ್ಲರೆಡ್ಡಪ್ಪ ಹಂಗರಗಿ, ಸಂಜೀವರಡ್ಡಿ ತಂದೆ ಭೀಮರಡ್ಡಿ ಹುಡೆದ ಎಲ್ಲರು ಹೋಗಿ ನೋಡಲಾಗಿ, ಸ್ಕಾಪರ್ಿಯೋ ವಾಹನ ನಂ: ಎಪಿ-31-ಬಿಡಬ್ಲೂ-4163, ನೇದ್ದರ ಚಾಲಕ ನಮ್ಮ ತಮ್ಮನಾದ ಸಂಜೀವರಡ್ಡಿ ಈತನ ಮೋಟಾರ್ ಸೈಕಲ್ ನಂ:ಕೆಎ-33-ಇ-7799 ನೇದ್ದಕ್ಕೆ ಎದುರಿನಿಂದ ಡಿಕ್ಕಿ ಪಡೆಸಿ ಅಪಘಾತ ಮಾಡಿದ್ದರಿಂದ ನಮ್ಮ ತಮ್ಮ ಸಂಜೀವರಡ್ಡಿ ಈತನಿಗೆ ಬಲಗಾಲಿನ ಮೊಳಕಾಲಿನ ಕೆಳಗೆ ಮತ್ತು ಬಲಗಾಲಿನ ಮೊಳಕೈಗೆ ರಕ್ತಗಾಯಗಳಾಗಿದ್ದು, ಬಲಗಾಲಿನ ಮೋಳಕಾಲಿಗೆ ಭಾರಿ ಗುಪ್ತಗಾಯವಾಗಿ ಮೋಳಕಾಲು ಹತ್ತಿರ ಮುರಿದಿರುತ್ತದೆ. ಬೆನ್ನಿಗೆ ಮತ್ತು ಹಿಂಬದಿಯ ಟೊಂಕಕ್ಕೆ ಬಾರಿ ಒಳಪೆಟ್ಟಾಗಿದ್ದವು, ಆಗ ನಾವೆಲ್ಲರೂ ನಮ್ಮ ತಮ್ಮನಿಗೆ ನಮ್ಮ ವಾಹನದಲ್ಲಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ, ವೈದ್ಯಾಧಿಕಾರಿಗಳ ಸಲಹೇ ಮೇರೆಗೆ ಹೆಚ್ಚಿನ ಉಪಚಾರಕ್ಕೆ ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ನಮ್ಮ ತಮ್ಮನಿಗೆ ಆಸ್ಪತ್ರೆಗೆ ಸೇರಿಕೆ ಮಾಡಿ ತಡವಾಗಿ ಇಂದು ದಿನಾಂಕ:09/06/2020 ರಂದು 11.30 ಎಎಂ ಕ್ಕೆ ಗೋಗಿ ಪೊಲೀಸ್ ಠಾಣೆಗೆ ಅಜರ್ಿ ನೀಡಿರುತ್ತೇನೆ.ಕಾರಣ ನಮ್ಮ ತಮ್ಮನಿಗೆ ಅಪಘಾತ ಮಾಡಿದ ಸ್ಕಾಪರ್ಿಯೋ ವಾಹನ ನಂ: ಎಪಿ-31-ಬಿಡಬ್ಲೂ-4163, ನೆದ್ದರ ಚಾಲಕ ಬಾಲಕೃಷ್ಣ ತಂದೆ ಸೇವಾನಾಯಕ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 72/2020 ಕಲಂ, 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 147/2020 ಕಲಂ 143, 147, 148, 323, 324, 354, 448, 504, 506 ಸಂ.149 ಐಪಿಸಿ : ಇಂದು ದಿನಾಂಕ:09/06/2020 ರಂದು 9 ಪಿ.ಎಂ. ಕ್ಕೆ ಠಾಣೆಯ ಎಸ್.ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶಾರದಾ ಗಂಡ ನಾಗಪ್ಪ ಕಟ್ಟಿಮನಿ ವ|| 38 ವರ್ಷ ಜಾ|| ವಡ್ಡರ ಉ|| ಮನೆಗೆಲಸ ಸಾ|| ತಿಮ್ಮಾಪುರ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿ ಸಾರಾಂಶವೆನೆಂದರೆ ನಮಗೆ ನಾಲ್ಕು ಜನ ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದು ಮನೆಗೆಲಸ ಮಾಡಿಕೊಂಡು ಕುಟುಂಬ ಸಮೇತವಾಗಿ ವಾಸವಾಗಿರುತ್ತೇವೆ. 2018 ನೇ ಸಾಲಿನಲ್ಲಿ ನಮ್ಮ ಅಣ್ಣತಮ್ಮಕಿಯಾದ ಲಕ್ಷ್ಮಿ ಗಂಡ ಗೋಪಾಲ ಚಂದನಕೇರಿ ಇವರ ಹೆಸರಿನಲ್ಲಿ ಒಂದು ಜನತಾ ಮನೆ ಮಂಜುರಾಗಿದ್ದು ಅದರ 70 ಸಾವಿರ ರೂಪಾಯಿನ್ನು ಮಂಜುನಾಥ ಅಮ್ಮಾಪುರಕರ ಇತನ ಅಣ್ಣನಾದ ವೆಂಕಟೇಶ ಇತನು ಲಕ್ಷ್ಮಿ ಚಂದನಕೇರಿ ಅಂತಾ ಹೇಳಿ ಬೆರೆಯವರನ್ನು ಸುರಪುರದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿಗೆ ಕರೆದುಕೊಂಡು ಹೊಗಿ 70 ಸಾವಿರ ರೂಪಾಯಿನ್ನು ಡ್ರಾ ಮಾಡಿ ಹಣ ಪಡೆದುಕೊಂಡಿದ್ದು ಇರುತ್ತದೆ. ಅದು ನಮಗೆ ಗೊತ್ತಾಗಿ ನಾವು ಸುರಪುರ ಪೊಲೀಸ್ ಠಾಣೆಯಲ್ಲಿ ಕೇಸ ಮಾಡಿಸಿದ್ದು ಇರುತ್ತದೆ. ಇದೇ ವೈಶಮ್ಯ ಇಟ್ಟುಕೊಂಡು ಅಂದಿನಿಂದ ವೆಂಕಟೇಶನ ಅಣ್ಣ-ತಮ್ಮಂದಿರು ನಮ್ಮ ಮೇಲೆ ವೈಷಮ್ಯ ಬೆಳೆಸಿಕೊಂಡಿರುತ್ತಾರೆ. ಹಿಗಿದ್ದು ಇಂದು ದಿನಾಂಕ:09/06/2020 ರಂದು ಸಾಯಂಕಾಲ 4:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಪೂಜಾ ವ|| 20 ವರ್ಷ, ಕುಸಮಾ ವ|| 16 ವರ್ಷ, ವಿಜಯಲಕ್ಷ್ಮಿ ವ|| 15 ವರ್ಷ, ಸಹನಾ ವ|| 12 ವರ್ಷ, ಮನೀಶ ವ|| 10 ವರ್ಷ ಎಲ್ಲರು ಮನೆಯ ಕಂಪೌಂಡ ಒಳಗಡೆ ಮಾತನಾಡುತ್ತಾ ಕುಳಿತಾಗ ಅದೇ ಸಮಯಕ್ಕೆ ನಮ್ಮ ಓಣೀಯ ನಮ್ಮ ಜನಾಂಗದವರಾದ 1) ಹಣಮಂತ ತಂದೆ ಭರಮಯ್ಯ ಅಮ್ಮಾಪುರಕರ 2) ಮಂಜುನಾಥ ತಂದೆ ಭರಮಯ್ಯ ಅಮ್ಮಾಪುರಕರ 3) ಭೀಮವ್ವ ಗಂಡ ಭರಮಯ್ಯ ಅಮ್ಮಾಪುರಕರ, 4) ಭೀಮಣ್ಣ ತಂದೆ ದ್ಯಾವಪ್ಪ ಕುಪಗಲ್ಲ, 5) ಭರಮಯ್ಯ ತಂದೆ ಹಣಮಂತ ಅಮ್ಮಾಪುರಕರ 6) ತಮ್ಮಣ್ಣ ತಂದೆ ರಾಮಣ್ಣ ಪುಜಾರಿ, 7) ನಾಗಪ್ಪ ತಂದೆ ಭೀಮಣ್ಣ ಪುಜಾರಿ ಎಲ್ಲರು ಗುಂಪುಕಟ್ಟಿಕೊಂಡು ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ನಮ್ಮ ಮನೆಯ ಕಂಪೌಂಡ ಒಳಗಡೆ ಬಂದು ನನಗೆ ನೀವು ವಿನಾಕಾರಣ ಲಕ್ಷ್ಮಿ ಚಂದನಕೇರಿ ಇವಳ ಕಡೆಯಿಂದ ನಮ್ಮ ಅಣ್ಣನ ಮೇಲೆ ಕೇಸ ಮಾಡಿಸಿದ್ದಿರಿ, ನಿಮ್ಮದು ಬಹಳ ಸೊಕ್ಕಿದೆ ಸೂಳೇ ಇವತ್ತು ನಿಮಗೆ ಬಿಡುವದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅವರಲ್ಲಿಯ ಹಣಮಂತ ಅಮ್ಮಾಪುರಕರ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದ ಬಳಿಕ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿರುತ್ತಾನೆ. ಮಂಜುನಾಥ ಅಮ್ಮಾಪುರಕರ ಇತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಎಡ ಪಕ್ಕೆಗೆ ಹೊಡೆದಿರುತ್ತಾನೆ. ನನ್ನ ಮಗಳಾದ ಪೂಜಾ ಇವಳಿಗೆ ಭೀಮವ್ವ ಗಂಡ ಭರಮಯ್ಯ ಅಮ್ಮಾಪುರಕರ ಇವಳು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾಳೆ. ಆಗ ನಮಗೆ ಹೊಡೆಯುವದನ್ನು ನೋಡಿ ಪಕ್ಕದ ಮನೆಯ ಗೋಪಾಲ ತಂದೆ ಹಣಮಂತ ಚಂದನಕೇರಿ ಇತನು ಬಿಡಿಸಲು ಬಂದಾಗ ಭೀಮಣ್ಣ ಕುಪಗಲ್ಲ ಮತ್ತು ಭರಮಯ್ಯ ಅಮ್ಮಾಪುರಕರ ಇಬ್ಬರು ನೀನು ಏಕೆ ಬಿಡಿಸಲು ಬರುತ್ತಿ ಸೂಳೇ ಮಗನೆ ಅಂತಾ ಅವಾಚ್ಯವಾಗಿ ಬೈಯುತ್ತಾ ಆತನಿಗೆ ಬಿಗಿಯಾಗಿ ಹಿಡಿದುಕೊಂಡಾಗ ತಮ್ಮಣ್ಣ ಪುಜಾರಿ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಗೋಪಾಲನ ತಲೆಯ ಮೇಲೆ ರಕ್ತಗಾಯ ಪಡಿಸಿರುತ್ತಾನೆ. ಹಾಗೂ ನಾಗಪ್ಪ ಪುಜಾರಿ ಇತನು ಗೋಪಾಲನಿಗೆ ಎದೆಗೆ ಹೊಟ್ಟೆಗೆ ಹೊಡೆದಿರುತ್ತಾನೆ. ಆಗ ನಾವೇಲ್ಲರು ಚಿರಾಡುತ್ತಿರುವಾಗ ನಮ್ಮ ಓಣಿಯ ಲಕ್ಷ್ಮಿ ಗಂಡ ಗೋಪಾಲ ಚಂದನಕೇರಿ, ತಾಯಮ್ಮ ಗಂಡ ದ್ಯಾವಪ್ಪ ವಲ್ಲೆಪುರ, ಬಸವರಾಜ ತಂದೆ ಮುದಕಪ್ಪ ಕುಂಬಾರ, ಇವರೆಲ್ಲರು ಬಂದು ಜಗಳ ನೋಡಿ ಬಿಡಿಸಿದರು. ಆಗ ಅವರೆಲ್ಲರು ಇವತ್ತು ಉಳದಿರಿ ಸೂಳೆ ನಮ್ಮ ಅಣ್ಣನ ಮೇಲೆ ಮಾಡಿರುವ ಕೇಸ್ ರಾಜಿ ಮಾಡಿಸದಿದ್ದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಜೀವದ ಬೇದರಿಕೆ ಹಾಕಿ ಹೊದರು. ಆಗ ನಾನು ಮತ್ತು ಗೋಪಾಲ ಇಬ್ಬರು ಖಾಸಗಿ ವಾಹನದಲ್ಲಿ ಉಪಚಾರಕ್ಕಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಠಾಣೆಗೆ ಬಂದಿರುತ್ತೇವೆ. ನನ್ನ ಮಗಳಿಗೆ ಯಾವುದೆ ಗಾಯವಾಗದೆ ಇದ್ದುದರಿಂದ ಆಕಗೆ ಆಸ್ಪತ್ರೆಗೆ ತೊರಿಸಿರುವದಿಲ್ಲ. ಕಾರಣ ಅಕ್ರಮ ಕೂಟ ಸೇರಿಕೊಂಡು ಬಂದು ನಮಗೆ ಬಡಿಗೆ, ಕಲ್ಲಿನಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿ ಹೊಗಿರುವ ಮೇಲೆ ಹೇಳಿದ 7 ಜನರ ಮೇಲೆ ಕಾನೂನು ಕ್ರಮ ಜರಗಿಸಲು ವಿನಂತಿ.
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 100/2020 ಕಲಂ 279, 337, 338 ಐಪಿಸಿ : ಇಂದು ದಿನಾಂಕ 09.06.2020 ರಂದು ಸಮಯ ರಾತ್ರಿ 8:20 ಗಂಟೆಗೆ ಗಾಯಾಳು ಮೊಗಲಪ್ಪ ಈತನು ತನ್ನ ಮನೆಗೆ ಸಿಮೇಂಟ್ ಬೇಕಾಗಿದ್ದರಿಂದ ಕೇಳಿ ಬರುವ ಸಲುವಾಗಿ ತಮ್ಮ ಮೋಟಾರು ಸೈಕಲ್ ನಂಬರ ಕೆಎ-33-ಎಕ್ಸ್-9672 ನೇದ್ದರ ಮೇಲೆ ಚಂಡ್ರಕಿಯಿಂದ ಯಾನಾಗುಂದಿ ಗ್ರಾಮಕ್ಕೆ ಹೋಗುತ್ತಿದ್ದಾಗ ಯಾನಾಗುಂದಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಶೋಕ ಲೈಲ್ಯಾಂಡ್ ಮಿನಿ ಗೂಡ್ಸ್ ಗಾಡಿ ನಂಬರ ಟಿ.ಎಸ್-06-ಯು.ಸಿ-2936 ನೇದ್ದರ ಚಾಲಕನು ಮೋಟಾರು ಸೈಕಲ್ಗೆ ಡಿಕ್ಕಿಪಡಿಸಿದ್ದರಿಂದ ಗಾಯಾಳು ಮೊಗಲಪ್ಪನಿಗೆ ತಲೆಗೆ, ಕಾಲಿಗೆ ಭಾರಿ ರಕ್ತಗಾಯಗಳು ಹಾಗೂ ಅಲ್ಲಲ್ಲಿ ತರಚಿದ ಸಣ್ಣ-ಪುಟ್ಟಗಾಯಗಳಾಗಿದ್ದು ಆ ಬಗ್ಗೆ ಗಾಯಳುವಿನ ತಮ್ಮ ಫೀರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 100/2020 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
Hello There!If you like this article Share with your friend using