ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/06/2020

By blogger on ಸೋಮವಾರ, ಜೂನ್ 8, 2020









                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/06/2020 
                                                                                                             
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 158/2020 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ 08/06/2020 ರಂದು 12.30 ಪಿ.ಎಂ.ಕ್ಕೆ ಶ್ರೀ ಶಶಿಕಾಂತ ತಂ/ ಸುಭಾಸ ಚವ್ಹಾಣ ಸಾ|| ಕನ್ಯಾಕೊಳ್ಳೂರ ಜಾಫಾನಾಯಕ ತಾಂಡಾ ತಾ||ಶಹಾಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ತಂದೆ ಸುಭಾಸ @ ಸುಭ್ಯಾ ತಂ/ ಚಂದಪ್ಪ ಚವ್ಹಾಣ ಸಧ್ಯ ಗ್ರಾಮ ಪಂಚಾಯತಿ ಸದಸ್ಯ ಇದ್ದು, ಇಂದು ದಿನಾಂಕ: 08/06/2020 ರಂದು ಬೆಳಿಗ್ಗೆ 7.00 ಎ.ಎಂ. ಸುಮಾರಿಗೆ ಶಹಾಪುರದಲ್ಲಿ ಉಧ್ಯೋಗ ಕಾತ್ರಿಗೆ ಸಂಬಂಧಿಸಿದಂತೆ ಕೆಲಸ ಇದೆ ಮುಗಿಸಿಕೊಂಡು ಬರುತ್ತೇನೆ ಅಂತಾ ಹೇಳಿ ನನ್ನ ತಂದೆಯವರು ನಮ್ಮ ಫ್ಯಾಶನ್ ಪ್ರೋ ಮೋಟರ ಸೈಕಲ್ ನಂ. ಕೆಎ-33 ಯು-4027 ನೇದ್ದನ್ನು ನಡೆಸಿಕೊಂಡು ಮನೆಯಿಂದ ಹೋದರು. ನಂತರ ಬೆಳಿಗ್ಗೆ 8.35 ಎ.ಎಂ. ಸುಮಾರಿಗೆ ಬೆನಕನಳ್ಳಿ ಗ್ರಾಮದ ನಟರಾಜ ತಂ/ ಭೀಮರಾಯ ದೊಡ್ಡಮನಿ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು ಬೆಳಿಗ್ಗೆ ನಾನು ಬೆನಕನಳ್ಳಿ-ಕನ್ಯಾಕೊಳ್ಳೂರ ರಸ್ತೆಯ ಪಕ್ಕದಲ್ಲಿರುವ ನಮ್ಮ ಹೊಲದಲ್ಲಿ ಇದ್ದಾಗ 8.30 ಎ.ಎಂ. ಸುಮಾರಿಗೆ ರಸ್ತೆಯಲ್ಲಿರುವ ತಿರುವಿನಲ್ಲಿ ಬೆನಕನಳ್ಳಿ ಕಡೆಯಿಂದ ಕನ್ಯಾಕೊಳ್ಳೂರ ಕಡೆಗೆ ನಿಮ್ಮ ತಂದೆಯವರು ಮೋಟರ ಸೈಕಲದಲ್ಲಿ ಕುಳಿತು ಹೊರಟಿದ್ದಾಗ, ಕನ್ಯಾಕೊಳ್ಳೂರ ಕಡೆಯಿಂದ ಒಂದು ಅಟೋದ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬೆನಕನಳ್ಳಿ ಕಡೆಗೆ ಬರುತ್ತಾ ಮುಂದೆ ಹೊರಟಿದ್ದ ನಿಮ್ಮ ತಂದೆಯವರ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದ ಪರಿಣಾಮ ಮೋಟರ ಸೈಕಲ್ ಸಮೇತವಾಗಿ ನಿಮ್ಮ ತಂದೆಯವರು ರೋಡಿನಲ್ಲಿ ಬಿದ್ದಿದ್ದು, ಹತ್ತಿರ ಹೋಗಿ ನೋಡಲಾಗಿ ನಿಮ್ಮ ತಂದೆಯವರ ಹಣೆಗೆ ತರಚಿದ ಗಾಯ, ತಲೆಯ ಬಲಸೈಡಿಗೆ ಭಾರೀ ಒಳಪೆಟ್ಟಾಗಿ ಮೂಗು ಮತ್ತು ಬಾಯಿ ಇಂದ ರಕ್ತ ಬರುತ್ತಿದ್ದು, ಬಲ ಮೊಳಕಾಲಿಗೆ ತರಚಿದಗಾಯ, ಬಲಗಾಲ ಕಿರುಬೆರಳಿಗೆ ರಕ್ತಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಅಲ್ಲಿಯೇ ಇದ್ದ, ಅಟೋಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಯಲ್ಲಪ್ಪ ತಂ/ ಅಯ್ಯಪ್ಪ ಯಾದವ ಸಾ|| ಕಾಡಮಗೇರಾ ಅಂತಾ ಹೇಳುತ್ತಿದ್ದಾಗ, ಕನ್ಯಾಕೊಳ್ಳೂರ ಕಡೆಯಿಂದ ಒಂದು ಮೋಟರ ಸೈಕಲ್ ಬರುತ್ತಿದ್ದುದನ್ನು ನೋಡಿ ಅಲ್ಲಿಂದ ಓಡಿ ಹೋದನು ಅವನಿಗೆ ಇನ್ನೊಮ್ಮೆ ನೋಡಿದಲ್ಲಿ ಗುರುತಿಸುತ್ತೇನೆ. ನಾನು 108 ವಾಹನಕ್ಕೆ ಫೋನ್ ಮಾಡಿದ್ದೇನೆ ನೀನು ಬೇಗನೆ ಬಾ ಅಂತಾ ಹೇಳಿದಾಗ ನಾನು ಮತ್ತು ನನ್ನ ತಾಂಡಾದ ಕಿಶನ್ ತಂ/ ಕೇಮು ಚವ್ಹಾಣ ಇಬ್ಬರು ಕೂಡಿಕೊಂಡು ಘಟನೆ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಂದೆ ಮೇಲ್ಕಾಣಿಸಿದಂತೆ ಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅಲ್ಲಿಯೇ ಇದ್ದ ಅಟೋ ನಂಬರ ನೋಡಲಾಗಿ ಕೆಎ-33 ಎ-9470 ಅಂತಾ ಇರುತ್ತದೆ. ನಂತರ ಘಟನೆ ಸ್ಥಳಕ್ಕೆ ಬಂದ 108 ವಾಹನದಲ್ಲಿ ನನ್ನ ತಂದೆಗೆ ಹಾಕಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ತಪಾಸಣೆ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಗೆ ಕರೆದುಕೊಂಡು ಹೋಗಲು ತಿಳಿಸಿದ ನಂತರ ನಮ್ಮ ತಂದೆಗೆ 108 ವಾಹನದಲ್ಲಿ ಹಾಕಿಕೊಂಡು ಕಲಬುಗರ್ಿಗೆ ಹೋಗುತ್ತಿದ್ದಾಗ ಅಂದಾಜು 10.45 ಎ.ಎಂ. ಸುಮಾರಿಗೆ ಶಹಾಬಾದ್ ಕ್ರಾಸ್ ಹತ್ತಿರ ನನ್ನ ತಂದೆಯವರು ಅಪಘಾತದಲ್ಲಿ ತನಗೆ ಆದಗಾಯಗಳಿಂದ ಚೇತರಿಸಿಕೊಳ್ಳದೆ ಮೃತಪಟ್ಟಿರುತ್ತಾರೆ ಕಾರಣ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.158/2020 ಕಲಂ 279 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಪಿ,ಎ,ಆರ್ 07/2020 ಕಲಂ:107 ಸಿಆರ್,ಪಿ,ಸಿ : ಶೀಲಾದೇವಿ ಪಿಎಸ್ಐ ಗುರುಮಠಕಲ ಪೊಲೀಸ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೇನಂದರೆ ಇಂದು ದಿನಾಂಕ:08.06.2020 ರಂದು ಮದಾಹ್ನ 3 ಗಂಟೆ  ಸುಮಾರಿಗೆ ಹಳ್ಳಿ ಬೇಟಿ ಮತ್ತು ಪೆಟ್ರೋಲಿಂಗ್ ಕುರಿತು ಠಾಣೆಯಿಂದ ಹೊರಟು ಗುಂಜನೂರ, ಚಿನ್ನಕಾರ, ದಮರ್ಾಪೂರ ಕಂದಕೂರ ಗ್ರಾಮಗಳಿಗೆ ಬೇಟಿ  ನೀಡಿದ ನಂತರ ಸಮಯ 4 ಪಿಎಮ್ ಸುಮಾರಿಗೆ ಚಿಂತನಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪೊಲೀಸ ಬಾತ್ಮಿದಾರರಿಗೆ ವಿಚಾರಿಸಿದಾಗ ತಿಳಿದು ಬಂದಿರುವುದೇನೆಂದರೆ, ಚಿಂತನಳ್ಳಿ ಗ್ರಾಮದ ಜಮೀನು ವಿಷಯಕ್ಕೆ ಸಂಬಂದಿಸಿದಂತೆ ಸವರ್ೇ ನಂ 139 02 ಎಕರೆ ಜಮೀನು ಜಮೀನು ವಿಷಯದಲ್ಲಿ ತಟ್ಟೆ ತಕರಾರುಗಳಿದ್ದು 1ನೇ ಪಾಟರ್ಿ ಜನರಾದ ಹಾಗೂ 2ನೇ ಪಾಟರ್ಿಯವರಾದ ಇವರ ನಡುವೆ ಆಂತರಿಕ ವೈಮನ್ಸಿನಿಂದ ಕೂಡಿದ್ದು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಈ ಎರಡು ಪಾಟರ್ಿಯ  ಜನರ ನಡುವೆ  ಕಲಹ ಉಂಟಾಗಿ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟಾಗುವ ಸಾದ್ಯತೆಗಳು ಇರುತ್ತವೆ, ಅಲ್ಲದೆ ಇದರಿಂದ ಚಿಂತನಳ್ಳಿ ಗ್ರಾಮದಲ್ಲಿ  ಸಾರ್ವಜನಿಕ ಶಾಂತತೆಗೆ ಭಂಗವನುಂಟುಮಾಡುವ ಸಾದ್ಯತೆ ಇದೆ, ಅಂತ ಪೊಲೀಸ  ಬಾತ್ಮಿದಾರರಿಂದ ಹಾಗೂ ಸಾರ್ವಜನಿಕರಿಂದ ವಿಚಾರಣೆ ಕಾಲಕ್ಕೆ ತಿಳಿದು ಬಂದಿದ್ದರಿಂದ ನಾನು ಸಮಯ ಸಾಯಂಕಾಲ 05:20 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಚಿಂತನಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ದಕ್ಕೆ ಉಂಟಾಗುವ ಸಾಧ್ಯತೆ ಇರುವದರಿಂದ ಎರಡು ಪಾಟರ್ಿಯ ಜನರಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗವಾಗದಂತೆ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳುವ ಸಲುವಾಗಿ ಸದರಿ ಎರಡೂ ಪಾಟರ್ಿಯ ಜನರ ಮೇಲೆ ಮುಂಜಾಗೃತ ಕ್ರಮವಾಗಿ ಕೋರಿ ಗುರುಮಠಕಲ ಪೊಲೀಸ ಠಾಣೆ ಪಿ,ಎ,ಆರ್ ನಂ 07/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ಸದರಿಯವರ ಮೇಲೆ ಕಲಂ.116 ಸಿ.ಆರ್,ಪಿಸಿ ಅಡಿಯಲ್ಲಿ ಬಾಂಡಕ್ರಮ ಜರುಗಿಸಲು ವಿನಂತಿ.


ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಪಿ,ಎ,ಆರ್ 08/2020 ಕಲಂ:107 ಸಿಆರ್,ಪಿ,ಸಿ : ನಾನು ಶೀಲಾದೇವಿ ಪಿಎಸ್ಐ ಗುರುಮಠಕಲ ಪೊಲೀಸ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೇನಂದರೆ ಇಂದು ದಿನಾಂಕ:08.06.2020 ರಂದು ಮದ್ಯಾನ್ಹ 3 ಗಂಟೆ  ಸುಮಾರಿಗೆ ಹಳ್ಳಿ ಬೇಟಿ ಮತ್ತು ಪೆಟ್ರೋಲಿಂಗ್ ಕುರಿತು ಠಾಣೆಯಿಂದ ಹೊರಟು ಗುಂಜನೂರ, ಚಿನ್ನಕಾರ, ದಮರ್ಾಪೂರ ಕಂದಕೂರ ಗ್ರಾಮಗಳಿಗೆ ಬೇಟಿ  ನೀಡಿದ ನಂತರ ಸಮಯ 4.30 ಪಿಎಮ್ ಸುಮಾರಿಗೆ ಪಸಪೂಲ ಗ್ರಾಮಕ್ಕೆ ಹೋಗಿ ಅಲ್ಲಿ ಪೊಲೀಸ ಬಾತ್ಮಿದಾರರಿಗೆ ವಿಚಾರಿಸಿದಾಗ ತಿಳಿದು ಬಂದಿರುವುದೇನೆಂದರೆ, ಪಸಪೂಲ ಗ್ರಾಮದ ಜಮೀನು ವಿಷಯಕ್ಕೆ ಸಂಬಂದಿಸಿದಂತೆ ಸವರ್ೇ ನಂ 70 ಚಾಕರಿ ಎಂಬ ಹೊಲದ ವಿಸ್ತಿರ್ಣ 5 ಎಕರೆ 20 ಗುಂಟೆ ಜಮೀನುಗಳಲ್ಲಿ ಹೆಸರಿಗೆ 36 ಗುಂಟೆ ಮತ್ತು ಹಣಮಂತ ತಂದೆ ಆಶಪ್ಪ ಇತನ ಹೆಸರಿಗೆ 36 ಗುಂಟೆ ಮತ್ತು ಸಾಬಣ್ಣ ತಂದೆ ಜಟ್ಟೆಪ್ಪ ಇತನ ಹೆಸರಿಗೆ 1 ಎಕರೆ 34 ಗುಂಟೆ ಜಮೀನು ಪಹಣಿ ಪತ್ರಿಕೆಯಲ್ಲಿ ಇರುತ್ತದೆ. ಎರಡು ಪಾಟರ್ಿ ಜನರ ನಡುವೆ ಸವರ್ೇ ನಂ 70 ಚಾಕರಿ ಎಂಬ ಹೊಲದ ವಿಸ್ತಿರ್ಣ 5 ಎಕರೆ 20 ಗುಂಟೆ ಆಸ್ತಿ ಬಗ್ಗೆ ಎರಡು ಪಾಟರ್ಿಯವರು ಜಮೀನು ವಿಷಯದಲ್ಲಿ ತಟ್ಟೆ ತಕರಾರುಗಳಿದ್ದು ಇವರ ನಡುವೆ ಆಂತರಿಕ ವೈಮಸ್ಸು ಕೂಡಿದ್ದು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಈ ಎರಡು ಪಾಟರ್ಿಯ  ಜನರ ನಡುವೆ ಕಲಹ ಉಂಟಾಗಿ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟಾಗುವ ಸಾದ್ಯತೆಗಳು ಇರುತ್ತವೆ, ಎರಡೂ ಪಾಟರ್ಿಯ ಜನರ ಮೇಲೆ ಮುಂಜಾಗೃತ ಕ್ರಮವಾಗಿ ಕೋರಿ ಗುರುಮಠಕಲ ಪೊಲೀಸ ಠಾಣೆ ಪಿ,ಎ,ಆರ್ ನಂ 08/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ಸದರಿಯವರ ಮೇಲೆ ಕಲಂ.116 ಸಿ.ಆರ್,ಪಿಸಿ ಅಡಿಯಲ್ಲಿ ಬಾಂಡಕ್ರಮ ಜರುಗಿಸಲು ವಿನಂತಿ.


ಶೋರಾಪೂರ  ಪೊಲೀಸ ಠಾಣೆ ಗುನ್ನೆ ನಂ:- 15/2020 ಕಲಂ. 107 ಸಿಆರ್ಪಿಸಿ : ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೆನೆಂದರೆ ಇಂದು ದಿನಾಂಕ: 08/06/2020 ರಂದು ಮಧ್ಯಾಹ್ನ ಸುಮಾರಿಗೆ ಠಾಣೆಯ ಸಿಬ್ಬಂಧಿಯಾದ ಶ್ರೀ ಬಸವರಾಜ ಸಿಪಿಸಿ-180 ರವರನ್ನು ಸಂಗಡ ಕರೆದುಕೊಂಡು ಪೆಟ್ರೊಲಿಂಗ ಕರ್ತವ್ಯ ಕುರಿತು ಹೊರಟು ರಂಗಮಪೇಟ್, ಹಸನಾಪುರ, ದಿವಳಗುಡ್ಡ ಏರಿಯಾದಲ್ಲಿ ಪೆಟ್ರೊಲಿಂಗ ಮಾಡಿ 3 ಪಿ.ಎಂ ಕ್ಕೆ ದಿವಳಗುಡ್ಡ ಏರಿಯಾದ ಮುಸ್ಲಿಂ ಜನರ ವೈಷ್ಣವಿ ಆಸ್ಪತ್ರಗೆ ಬೇಟಿನಿಡಿದ ಸಮಯದಲ್ಲಿ ನಮಗೆ ತಿಳಿದು ಬಂದ ಮಾಹಿತಿ ಏನಂದರೆ, ಎದುರುದಾರರು ದಿನಾಂಕ:17/05/2020 ರಂದು ರಾತ್ರಿ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯ ಸಿಬ್ಬಂದಿಯವರ ಜೊತೆ ತಕರಾರು ಮಾಡಿ ಹೊಗಿರುತ್ತಾರೆ ಅಂತಾ ವಿಷಯ ತಿಳಿದಿದ್ದು ಸದರಿಯವರನ್ನು ಹೀಗೆ ಬಿಟ್ಟರೆ ಇಂದಿಲ್ಲ ನಾಳೆ ಆಸ್ಪತ್ರೆಯ ಸಿಬ್ಬಂದಿಯರೊಂದಿಗೆ ತಕರಾರು ಮಾಡಿ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟುಮಾಡುವ ಸಾಧ್ಯತೆ ಹೆಚ್ಚಾಗಿ ಇರುವ ಬಗ್ಗೆ ಕಂಡು ಬಂದಿದ್ದರಿಂದ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮರಳಿ ಠಾಣೆಗೆ ಬಂದು ಎದುರುದಾರರ ವಿರುದ್ಧ ಠಾಣೆಯ ಪಿ.ಎ.ಆರ್. ನಂ.15/2020 ಕಲಂ:107 ಸಿಆರ್ಪಿಸಿ ನೇದ್ದರಂತೆ ಕ್ರಮ ಜರುಗಿಸಿದ್ದು ಇರುತ್ತದೆ.


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 47/2020 ಕಲಂ: 87  ಕೆ.ಪಿ ಆಠ್ಟಿ್ : ಇಂದು ದಿನಾಂಕ: 08.06.2020 ರಂದು ಬೆಳಿಗ್ಗೆ 10:00 ಗಂಟೆಗೆ ಠಾಣೆಯಲ್ಲಿದ್ದಾಗ ನನಗೆ ರಾಯಗೇರಾ ಗ್ರಾಮದ ಹತ್ತಿರ ಕೆರೆಯ ದಂಡೆಯಲ್ಲಿ ಸಕರ್ಾರಿ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಅವರವಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ  ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ನೀಡಿದ ಅನುಮತಿಯನ್ನು ಕಜ್ಜಪ್ಪ ಪಿಸಿ-251 ರವರು ಪಡೆದುಕೊಂಡು ತಂದು ಹಾಜರ ಪಡಿಸಿದ್ದು. ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:47/2020 ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ನಂತರ ಮಾನ್ಯ ಪಿಎಸ್ಐ ಸಾಹೇಬರು 5:00 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು 52 ಇಸ್ಪೀಟ್ ಎಲೆಗಳು ಮತ್ತು 45,800/-  ರೂ ನಗದು ಹಣಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.
ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ಹುಸೇನಸಾಬ ತಂದೆ ಬಾವಸಾಬ ಕೊಂಕಲ್ ವ:28 ವರ್ಷ ಉ: ಚಾಲಕ ಜಾ: ಮುುಸ್ಲಿಂ ಸಾ: ಹುಣಸಗಿ ತಾ:ಹುಣಸಗಿ
2) ದೇವೀಂದ್ರಪ್ಪ ತಂದೆ ಶರಣಪ್ಪ ಜಕಾತಿ ವ: 32 ವರ್ಷ ಉ: ಒಕ್ಕಲುತನ ಜಾ: ಲಿಂಗಾಯತ ಸಾ:ಗೋಡಿಹಾಳ ತಾ: ಸುರಪೂರ
3) ಯಂಕಪ್ಪ ತಂದೆ ಬಸಣ್ಣ ಬಾಲಗೋಡ ವ:30 ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ: ಹುಣಸಗಿ ತಾ: ಹುಣಸಗಿ
4) ಭೀಮಣ್ಣ ತಂದೆ ಕಾಮರಾಯ ಗಂಟಿ ವ:30 ವರ್ಷ ಉ: ಒಕ್ಕಲುತನ ಜಾ: ಕುರುಬರ ಸಾ: ಗೋಡಿಹಾಳ ತಾ: ಸುರಪೂರ
5) ವಿರುಪಾಕ್ಷಿ ತಂದೆ ಮಲ್ಲಿಕಾಜರ್ುನ್ ಅಂಗಡಿ ವ:29 ವರ್ಷ ಜಾ: ಹಿಂದೂ ಲಿಂಗಾಯತ ಉ: ಒಕ್ಕಲುತನ ಸಾ: ಗೋಡಿಹಾಳ ತಾ: ಸುರಪೂರ
6) ಮಲ್ಲಿಕಾಜರ್ುನ್ ತಂದೆ ದೇವಿಂದ್ರಪ್ಪ ಅಪ್ಪರಾಲ್ ವ: 35 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನಸಾ:ಗೋಡಿಹಾಳ ತಾ:ಸುರಪೂರ


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!