ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/06/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 72/2020 ಕಲಂ 341, 323, 504, 506 ಸಂ 34 ಐಪಿಸಿ : ದಿನಾಂಕ 06/06/2020 ರಂದು ಸಾಯಂಕಾಲ 6-30 ಗಂಟೆಗೆ ಫಿರ್ಯಾಧಿದಾರನು ತನ್ನ ಮನೆಯಲ್ಲಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾಧಿ ಮನೆ ಹತ್ತಿರ ಬಂದು ಕೃಊಜರ ಕಿರಾಯಿ ಹೋಗುವ ಸಂಬಂಧ ಫಿರ್ಯಾಧಿ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ, ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಹೊಡೆಬಡೆ ಮಾಡಿ ಮತ್ತು ಕಾಲಿನಿಂದ ಒದ್ದು ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ,ಆರ್ ನಂ: 06/2020 ಕಲಂ 174 ಸಿ ಆರ್ ಪಿ ಸಿ : ಇಂದು ದಿನಾಂಕ:07.06.2020 ಬೆಳಿಗ್ಗೆ 8:00 ಗಂಟೆಯ ಪಿರ್ಯಾಧಿ ಲಿಂಗಮ್ಮ ಗಂ ನಂದಪ್ಪ ಕುಪ್ಪಿ ವಯಸ್ಸು 55 ವರ್ಷ ಉ: ಕೂಲಿಕೆಲಸ ಜಾ: ಹಿಂದೂ ಕುರುಬರ ಸಾ:ಬಪ್ಪರಗಿ ಹಾ:ವ:ಹುಲಿಕೇರಿ ತಾ: ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಪಿರ್ಯಾಧಿ ಅಜರ್ಿಯನ್ನು ಸಲ್ಲಿಸಿದ್ದು ಸದರ ಅಜರ್ಿಯ ಸಾರಾಂಶವೆನೆಂದರೆ ನನಗೆ ಬಪ್ಪರಗಿ ಗ್ರಾಮದ ನಂದಪ್ಪ ಇವರೊಂದಿಗೆ ಮದುವಯಾಗಿದ್ದು ನನಗೆ ಸಿದ್ದಪ್ಪ, ಬಸಪ್ಪ, ಅಂತ ಇಬ್ಬರೂ ಮಕ್ಕಳಿದ್ದು ನಂತರ ನನ್ನ ಗಂಡನು ಬಿಳೆಬಾಯಿಯ ಮತ್ತೊಬ್ಬಳನ್ನು ಮದುವೆಯಾಗಿದ್ದು. ನನ್ನ ಗಂಡನು ಎರಡನೇಯ ಹೆಂಡತಿಯ ಜೋತೆಗೆ ಬಪ್ಪರಗಿಯಲ್ಲಿದ್ದು. ಆಗಾಗ ನನ್ನ ಹತ್ತಿರ ಬಂದು ಹೋಗುವದು ಮಾಡುತ್ತಿದ್ದು. ನನ್ನ ಮಕ್ಕಳಾದ ಸಿದ್ದಪ್ಪ, ಬಸಪ್ಪ ರವರು ಮದೆವೆಯಾಗಿದ್ದು.ಇಬ್ಬರೂ ಕೂಡಿಯೇ ಇದ್ದು ನನ್ನ ಮಗ ಬಸಪ್ಪನಿಗೆ ಮೊದಲು ನಮ್ಮೂರಿನ ಮಾಳಮ್ಮ ಎಂಬುವರೊಂದಿಗೆ ಮದುವೆಯಾಗಿದ್ದು. ನಂತರ ಅವಳು ನನ್ನ ಮಗನೊಂದಿಗೆ ಸರಿಯಾಗಿ ಸಂಸಾರ ಮಾಡದೇ ನನ್ನ ಮಗನೊಂದಿಗೆ ಸರಿಯಾಗಿ ಸಂಸಾರ ಮಾಡದೇ ಇದ್ದುದರಿಂದ ನನ್ನ ಮಗನು ಈಗ ಒಂದು ವರ್ಷದ ಹಿಂದೆ ಲಿಂಗಸೂರು ತಾಲೂಕಿನ ನಂದಿಹಾಳ ಗ್ರಾಮದ ಜಂಬಮ್ಮ ರವರೊಂದಿಗೆ ಎರಡನೇಯ ಮದುಯಾಗಿದ್ದು. ನನ್ನ ಮಗನು ತನ್ನ ವೈವಾಹಿಕ ಜೀವನ ಸರಿಯಾಗಿ ಇಲ್ಲದೇ ಇದ್ದುದರಿಂದ ನನ್ನ ಮಗನು ವೈವಾಹಿಕ ಜೀವದಲ್ಲಿ ನೊಂದು ಜೀಗುಪ್ಸೆಗೊಂಡಿದ್ದು ಇರುತ್ತದೆ. ಹೀಗಿರುವಾಗ ನಿನ್ನೆ ದಿನಾಂಕ:06.06.2020 ಸಾಯಾಂಕಾಲ 4:00 ಸುಮಾರಿಗೆ ನನ್ನ ಮಗ ಬಸಪ್ಪ ತಂದೆ ನಂದಪ್ಪ ಕುಪ್ಪಿ ವ:28 ವರ್ಷ ಇತನು ನನಗೆ ಕೊಡೇಕಲ್ಲದಲ್ಲಿ ನನ್ನ ಕೆಲಸ ಇದೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿದ್ದು. ನನ್ನ ಮಗನು ಸಾಯಂಕಾಲವಾದರೂ ಮರಳಿ ಮನೆಗೆ ಬರಲಿಲ್ಲಾ. ನಾನು ನನ್ನ ಮಗನ ಪೋನಿಗೆ ಪೋನ್ ಹಚ್ಚಿರೆ ಬಂದಾಗಿದ್ದು ಇರುತ್ತದೆ. ನನ್ನ ಮಗನು ರಾತ್ರಿ ನಿನ್ನೆ ದಿನ ಮನೆಗೆ ಬಂದಿರಲಿಲ್ಲಾ. ಇಂದು ಬೆಳಿಗ್ಗೆ 6:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಅಣ್ಣ ತಮ್ಮಕೀಯ ಹಣಮಪ್ಪ ತಂದೆ ಮಲ್ಲಪ್ಪ ಸಣ್ಣಕಲ್ಲ ಇತನು ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ ಈಗ ಸ್ವಲ್ಪ ಹೊತ್ತಿ ಹಿಂದೆ ಕೊಡೇಕಲ್ಲ ಗ್ರಾಮದ ನನಗೆ ಪರಿಚಯದ ಸಂಗಪ್ಪ ತಂದೆ ನೀಲಪ್ಪ ಹೋಸೂರು ಇವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ನಾನು ಸಂಡಾಸಕ್ಕೆಂದು ನಮ್ಮೂರ ಸ್ಟೆಡಿಯಂ ಹಿಂದಿನ ದೇವಪ್ಪ ತಂದೆ ಸಿದ್ದಪ್ಪ ಲಕ್ಕುಂಡಿ ರವರ ಹೊದಲ್ಲಿ ಹೋದಾಗ ಒಬ್ಬ ಮನುಷ್ಯನು ಬೇವಿನ ಗಿಡದ ಟೊಂಗೆಗೆ ನೇಣು ಬಿಗಿದುಕೊಂಡು ಸತ್ತಿದ್ದು ಕಂಡು ಬಂದಿದ್ದು. ನಾನು ಸಮೀಪಕ್ಕೆ ಹೋಗಿ ನೋಡಲಾಗಿ ಸದರಿ ನೇನು ಹಾಖಿಕೊಂಡ ಮನುಷ್ಯನು ನಿನಗೆ ಅಳಿಯನಾಗಬೇಕಾದ ಬಸಪ್ಪ ತಂದೆ ನಂದಪ್ಪ ಕುಪ್ಪಿ ಇತನಿದ್ದು ನೀನು ಅವರ ಮನೆಯವರಿಗೆ ತಿಳಿಸಿ ಬೇಗನೇ ಕರೆದುಕೊಂಡು ಬಾ ಅಂತ ತಿಳಿಸಿದ್ದಾಗಿ ತಿಳಿಸಿದ್ದು. ಕೂಡಲೇ ನಾನು ಮತ್ತು ನನ್ನ ಮಗ ಸಿದ್ದಪ್ಪ ಹಾಗೂ ವಿಷಯ ತಿಳಿಸಿದ ನನಗೆ ತಮ್ಮನಾಗಬೇಕಾದ ಹನಮಪ್ಪ ತಂದೆ ಮಲ್ಲಪ್ಪ ಸಣ್ಣಕಲ್ಲ ಹಾಗೂ ನಮ್ಮೂರ ಗದ್ದೆಪ್ಪ ತಂದೆ ಭೀಮಪ್ಪ ಕುರಿ, ಜ್ಞಾನಪ್ಪ ತಂದೆ ಮಲ್ಲೇಶಪ್ಪ ಪುಜಾರಿ, ಮುದುಕಪ್ಪ ತಂದೆ ಗದ್ದೆಪ್ಪ ಸಣ್ಣಕಲ್ಲ, ನಿಂಗಪ್ಪ ತಂದೆ ಗದ್ದೆಪ್ಪ ಗೌಡರ, ಚಂದಪ್ಪ ತಂದೆ ಬೀಮಪ್ಪ ಮಾಳೂರು ಹಾಗೂ ಇತರರು ಕೂಡಿ ಕೊಡೇಕಲ್ಲ ಗ್ರಾಮದ ದೇವಪ್ಪ ತಂದೆ ಸಿದ್ದಪ್ಪ ಲಕ್ಕುಂಡಿ ರವರ ಹೊಲದಲ್ಲಿ ಬಂದು ನೋಡಲಾಗಿ ನನ್ನ ಮಗ ಬಸಪ್ಪನು ಈ ಹೊಲದಲ್ಲಿಯ ದಕ್ಷಿಣ ಬದುವಿನ ಮೇಳಿನ ಬೇವಿನ ಗಿಡದ ಟೊಂಗೆಗೆ ಮೂಗದಾಣಿ ದಾರದ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ತನ್ನ ಕೊರಳಿಗೆ ಕಟ್ಟಿಕೊಂಡು ನೇಣು ಬಿಗಿದುಕೊಂಡಿದ್ದು ಕಂಡು ಬಂದಿದ್ದು ನೋಡಲಾಗಿ ನನ್ನ ಮಗನು ನಾಲಿಗೆಯು ಬಾಯಿಯಿಂದ ಹೊರಗೆ ಚಾಚಿದ್ದು ಎರಡು ಕೈಗಳು ದೇಹಕ್ಕೆ ಹೊಂದು ಕೆಳಗೆ ಚಾಚಿದ್ದು. ನನ್ನ ಮಗನು ತನ್ನಿಂದ ತಾನೇ ನಿನ್ನೆ ರಾತ್ರಿ ವೇಳೆಯಲ್ಲಿ ತನ್ನ ವೈವಾಹಿಕ ಜೀವನದಲ್ಲಿ ನೊಂದು ಜೀಗುಪ್ಸೆಗೊಂಡು ಮಾನಸಿಕವಾಗಿ ನೊಂದು ನೇಣು ಹಾಖಿಕೊಂಡಿದ್ದು. ನನ್ನ ಮಗನ ಮರಣದಲ್ಲಿ ಯಾರ ಮೇಲೂ ಯಾವುದೇ ಸಂಶಯ ಇರುವದಿಲ್ಲಾ. ನನ್ನ ಮಗನ ಶವವು ನೇಣು ಹಾಕಿಕೊಂಡು ಸ್ಥಳದಲ್ಲಿಯೇ ಇದ್ದು ತಾವು ಸ್ಥಳಕ್ಕೆ ಬಂದು ಪರೀಶಿಲಿಸಿ ಮುಂದಿನ ಕ್ರಮ ಜರುಗಿಸಲು ಅಂತ ವಗೈರೆ ಪಿರ್ಯಾಧಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:06/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
Hello There!If you like this article Share with your friend using