ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/06/2020
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 98/2020 ಕಲಂ 143, 147, 148 323, 324, 504, 506 ಸಂಗಡ 149 ಐಪಿಸಿ : ನಿನ್ನೆ ದಿನಾಂಕ 03.06.2020 ರಂದು ಸಂಜೆ 05:00 ಗಂಟೆಗೆ ಫಿರ್ಯಾದಿಯು ತನ್ನ ಇಬ್ಬರು ಮಕ್ಕಳು ಹಾಗೂ ಹೆಂಡತಿಯೊಂದಿಗೆ ತನ್ನ ನಾಗಣಗುಡ್ಡ ಹೊಲದಲ್ಲಿರುವ ಜೋಳದ ಕೌಲಿಗಳನ್ನು ಆಯ್ದು ಬರುವ ಸಲುವಾಗಿ ಹೊಲಕ್ಕೆ ಹೋಗಿದ್ದು ಅಲ್ಲಿ ಆರೋಪಿ ಶರಣಪ್ಪ ಚಂದಾನೋರ ಮತ್ತು ಫಿರ್ಯಾದಿಯ ಹೊಲದ ನಡುವೆ ಇದ್ದ ಕಲ್ಲನ್ನು ಆರೋಪಿ ಶರಣಪ್ಪ ಚಂದಾನೋರ ಈತನು ಕಿತ್ತಿ ಫಿರ್ಯಾದಿಯ ಹೊಲದಲ್ಲಿ ಹಾಕಿರುವುದನ್ನು ನೋಡಿ ಅದನ್ನು ಮತ್ತೆ ಅದೇ ಡೋಣಕ್ಕೆ ಹಾಕಿರುತ್ತಾನೆ. ಅದನ್ನು ನೋಡಿದ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ ಬಡಿಗೆ ಹಿಡಿಕೊಂಡು ಬಂದು ಫಿರ್ಯಾದಿಗೆ ಆರೋಪಿ ಶರಣಪ್ಪ ಚಂದಾನೋರ ಈತನು ಲೇ ಸೂಳೆ ಮಗನೆ ಕಲ್ಲು ಯಾಕ ತಂದು ಹಾಕಿದಲೇ ಅಂತಾ ಹೇಳಿದ್ದು, ಆರೋಪಿ ಚಂದ್ರಯ್ಯ ಈತನು ಆ ಸೂಳೆ ಮಗನಿಗೆ ಏನ್ ಕೇಳತಿರಿ ಹೊಡಿರಿ ಅಂತಾ ಹೇಳಿದ್ದು ಉಳಿದ ಆರೋಪಿತರು ತಮ್ಮ-ತಮ್ಮ ಕೈಯಲಿದ್ದ ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದಿದ್ದು ಅಲ್ಲದೇ ಲೇ ಸೂಳೆ ಮಗನೆ ನೀನು ಒಬ್ಬನೇ ಸಿಗು ನಿನಗೆ ಖಲಾಸ ಮಾಡಿ ಹೊಲದಲ್ಲಿಯೇ ಹೂಳಿಟ್ಟು ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾದಿಯು ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಸದರಿ ಫಿರ್ಯಾದಿಯ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿದ್ದು ಇರುತ್ತದೆ.
Hello There!If you like this article Share with your friend using