ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/06/2020
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 21/2020 ಕಲಂ 279, 338 ಐಪಿಸಿ : ದಿನಾಂಕ 27/05/2020 ರಂದು ಬೆಳಿಗ್ಗೆ 6-10 ಎ.ಎಂ ದ ಸುಮಾರಿಗೆ ಯಾದಗಿರಿ- ಶಹಪುರ ಮುಖ್ಯ ರಸ್ತೆ ಮೇಲೆ ಬರುವ ಯಾದಗಿರಿ ಬೀಮಾ ನದಿಯ ಬ್ರಿಡ್ಜ್ ಹತ್ತಿರ ಈ ಕೇಸಿನ ಪಿಯರ್ಾದಿಯ ಗಂಡನಾದ ಗಾಯಾಳು ವೆಂಕಟರೆಡ್ಡಿ ವಯ;45 ವರ್ಷ ಇವರು ಮೋಟಾರು ಸೈಕಲ್ ನಂ.ಕೆಎ-33, ವಾಯ್-1792 ನೇದ್ದರ ಮೇಲೆ ಕುಳಿತುಕೊಂಡು ಯಾದಗಿರಿಯಿಂದ ಬಬಲಾದಕ್ಕೆ ಹೊರಟಿದ್ದಾಗ ಆರೋಪಿತನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಿದ್ದಾಗ ಅದೇ ವೇಲೆಗೆ ರಸ್ತೆಗೆ ಹಂದಿಯೊಂದು ಹಠಾತ್ತನೆ ಬಂದಾಗ ಒಮ್ಮೊಲೆ ಬ್ರೇಕ್ ಹಾಕಿ ಸ್ಕಿಡ್ ಮಾಡಿ ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಗಾಯಾಳು ವೆಂಕಟರೆಡ್ಡಿ ಇವರಿಗೆ ಹಣೆಗೆ ಮತ್ತು ತಲೆಗೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಮೋಟಾರು ಸೈಕಲ್ ಸವಾರನ ಮೇಲೆ ಸೂಕ್ತ ಕ್ರಮ ಜರುಗಿಸಿರಿ ಅಂತಾ ಇಂದು ತಡವಾಗಿ ಪಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 21/2020 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 157/2020. ಕಲಂ 279, 338 ಐ.ಪಿ.ಸಿ. ಮತ್ತು 187 ಐ.ಎಮ್.ವಿ. ಆಕ್ಟ : ಇಂದು ದಿನಾಂಕ:03-06-2020 ರಂದು 5:00 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀ ಮಲ್ಲಿಕಾಜರ್ುನ ತಂದೆ ಹಣಮಂತ ನಾಯ್ಕೋಡಿ ವಯ: 41 ವರ್ಷ ಜಾ: ಕಬ್ಬಲಿಗ ಉ: ಒಕ್ಕಲುತನ ಸಾ:ದಿಗ್ಗಿಬೇಸ ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏಂದರೆ ನಮ್ಮವು ದೋರನಳ್ಳಿ ಸೀಮಾಂತರದಲ್ಲಿ ಹೊಲಗಳಿದ್ದು ದಿನಾಂಕ: 01-06-2020 ರಂದು ನಾನು ನಮ್ಮ ಮೊಟಾರ ಸೈಕಲ್ ಮೇಲೆ ಹೊಲಕ್ಕೆ ಹೊರಟಿದ್ದೆನು. ಅದರಂತೆ ನಮ್ಮ ಸಂಭಂದಿಕರಾದ ಅಂಬಣ್ಣ ತಂದೆ ಭೀಮರಾಯ ನಾಯ್ಕೋಡಿ ಇವರು ಕೂಡಾ ತನ್ನ ಮೊಟಾರ ಸೈಕಲ್ ನಂ. ಕೆ.ಎ.33-ಕ್ಯೂ-0746 ನೇದ್ದರ ಮೇಲೆ ಹೊಲಕ್ಕೆ ಹೊರಟಿದ್ದನು. ಹೀಗೆ ಶಹಾಪುರದಿಂದ ಹೊಲಕ್ಕೆ ಹೊರಟಾಗ ನನ್ನ ಮುಂದೆ ಅಂಬಣ್ಣ ರವರು ಹೊರಟಿದ್ದರು 30 ಫೀಟ ಅಳತೆಯಲ್ಲಿ ದೂರ ಹಿಂದೆ ನಾನು ನನ್ನ ಮೊಟಾರ ಸೈಕಲ್ ಮೇಲೆ ಹೊರಟಿದ್ದೆನು. ಹೀಗೆ ಹೊರಟಾಗ ಮಡ್ನಾಳ ಸೀಮಾಂತರದ ಕೆನಾಲ ಹತ್ತಿರ 5:00 ಪಿ.ಎಮ್. ಸುಮಾರಿಗೆ ಎದುರಿನಿಂದ ಒಂದು ಟ್ರ್ಯಾಕ್ಟರ ನಂ. ಕೆ.ಎ.33.ಟಿ.5480 ನೇದ್ದು ಬರುತ್ತಿದ್ದು ಅದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಪಕ್ಕದಲ್ಲಿ ಹೊರಟಿದ್ದ ಅಂಬಣ್ಣ ನಾಯ್ಕೋಡಿ ಈತನ ಮೊಟಾರ ಸೈಕಲ್ ಗೆ ಡಿಕ್ಕಿ ಪಡಿಸಿದನು. ಆಗ ಅಂಬಣ್ಣನು ಮೊಟಾರ ಸೈಕಲ್ ಸಮೇತ ಕೆಳಗೆ ಬಿದ್ದನು. ಅಫಘಾತ ಪಡಿಸಿದ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಅಲ್ಲೇ ಬಿಟ್ಟು ಓಡಿ ಹೋದನು. ನಾನು ತಕ್ಷಣ ಅಂಬಣ್ಣನಲ್ಲಿಗೆ ಹೋಗಿ ನೋಡಲಾಗಿ ಆತನಿಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿದೆ ಎದೆಗೆ ಒಳಪೆಟ್ಟಾಗಿದೆ. ಗದ್ದಕ್ಕೆ ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿವೆ. ಗಾಯಗೊಂಡ ಆತನನ್ನು 108 ವಾಹನದಲ್ಲಿ ಶಹಾಪುರದ ಸರಕಾರಿ ಆಸ್ಪತ್ರೆಗೆ ತೋರಿಸಿ ಹೆಚ್ಚಿನ ಉಪಚಾರಕ್ಕಾಗಿ ಕಲುಬುರಗಿಯ ಕಾಮರಡ್ಡಿ ಆಸ್ಪತ್ರಗೆ ಕೆದುಕೊಂಡು ಹೋಗಿ ಸೇರಿಕೆ ಮಾಡಿ ಮರಳಿ ಇಂದು ದಿನಾಂಕ: 03-06-2020 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತಿದ್ದೇನೆ. ಅಫಘಾತ ಪಡಿಸಿದ ಟ್ರ್ಯಾಕ್ಟರ ಚಾಲಕನ ಹೆಸರು ವಿಳಾಸ ಗೊತ್ತಾಗಿಲ್ಲ ನೋಡಿದರೆ ಗುರುತಿಸುತ್ತೇನೆ. ಆದ್ದರಿಂದ ದಿನಾಂಕ: 01-06-2020 ರಂದು 5:00 ಪಿ.ಎಮ್. ಸುಮರಾರಿಗೆ ಶಹಾಪೂರ ಶಿರವಾಳ ರಸ್ತೆಯ ಮಡ್ನಾಳ ಸೀಮಾಂತರದ ಕೆನಾಲ ಹತ್ತಿರ ರಸ್ತೆಯ ಮೇಲೆ ನಮ್ಮ ಸಭಂದಿಕ ಅಂಬಣ್ಣ ತಂದೆ ಭೀಮರಾಯ ನಾಯ್ಕೋಡಿ ಈತನಿಗೆ ಡಿಕ್ಕಿ ಪಡಿಸಿ ಓಡಿ ಹೋದ ಟ್ರ್ಯಾಕ್ಟರ ನಂ. ಕೆ.ಎ.33-ಟಿ.5480 ನೆದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.157/2020 ಕಲಂ. 279, 338 ಐ.ಪಿ.ಪಿ. ಮತ್ತು ಕಲಂ. 187 ಐ.ಎಮ್.ವಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 13/2020 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ 03/06/2020 ರಂದು 6-10 ಎ.,ಎಂಕ್ಕೆ ಪಿಯರ್ಾದಿ ಶ್ರೀ ಮಶ್ಯಾಕಸಾಬ ತಂದೆ ದೋಡ್ಡಬಾಬು ವ|| 28 ವರ್ಷ ಜಾ|| ಮುಸ್ಲಿಂ, ಉ|| ಕೂಲಿ ಸಾ|| ಎಂ.ಕೊಳ್ಳುರು ತಾ|| ಶಹಾಪೂರ ಕೊಡುವ ದೂರು ಅಜರ್ಿ ಸಾರಂಶವೆನಂದರೆ ಏನಂದರೆ. ನಾನು ಮತ್ತು ನಮ್ಮ ತಂದೆ-ತಾಯಿ ಮತು ನಮ್ಮ ತಮ್ಮ ಜೋತೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ನನಗೆ ಸುಮರು 9 ವರ್ಷಗಳಿಂದ ಯಡ್ಡಳ್ಳಿ ಗ್ರಾಮದ ರಮಂಜಾನಬಿ ಜೋತೆಯಲ್ಲಿ ಮದುವೆಯಾಗಿ ನಮ್ಮ ಸಂಸಾರದಲ್ಲಿ ಒಂದು ಹೆಣ್ಣು ಮಗ ಹುಟ್ಟಿದ್ದು ಇರುತ್ತದೆ, ನಪೀಲಾ ವ|| 8 ವರ್ಷ ಉ|| ವಿದ್ಯಾಥರ್ಿ ಇದ್ದು,
ಹೀಗಿದ್ದು ದಿನಾಂಕ 01/06/2020 ರಂದು ರಾತ್ರಿ 10:00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ರಮಂಜಾನಬಿ ಮತ್ತು ನನ್ನ ಮಗಳು ನಪೀಲಾ ಊಟಾ ಮಾಡಿ ಮಲಗಿದೇವು ದಿನಾಂಕ 02/06/2020 ರಂದು ರಾತ್ರಿ 02:00 ಎ.ಎಂ ಸುಮಾರಿಗೆ ನನ್ನ ಮಗಳಿ ಚಿರುತ್ತಾ ಎದ್ದು ನನಗೆ ಯಾಕೋ ಎನೆನೋ ಆಗುತ್ತಾ ಇದೆ ಹೋಟ್ಟೆ ನೋವಿತರಾ ಆಗುತ್ತಾ ಇದೆ ಅಂತಾ ಎಂದು ಅಳುತ್ತಾ ಇದ್ದಳು ನಾವೂ ಸಮದಾನ ಮಾಡಿತ್ತಿದ್ದು, ಬೇಳಗ್ಗೆ 08:00 ಎ.ಎಂಕ್ಕೆ ನನ್ನ ಮಗಳ ಬಾಯಿಂದ ಬುರಗ ಬಂದಿದ್ದರಿಂದ, ನನ್ನ ಮಗಳಿಗೆ ಯಾವೋದೊ ಒಂದು ವಿಷ ಪೂರಿತ ಹಾವೂ ಕಚ್ಚಿದ್ದು ಅಂತಾ ಗೋತ್ತಾಗಿ ಉಪಚಾರ ಕುರಿತು ನಾನು ಮತ್ತು ನನ್ನ ಹೆಂಡತಿ ರಮಂಜಾನಬಿ ಮತ್ತು ನಮ್ಮ ದೋಡ್ಡಪ್ಪ ಮಗ ಸಲೀಂ ಎಲ್ಲರೂ ಕೂಡಿ ಒಂದು ಅಟೋದಲ್ಲಿ ಕರೆದುಕೊಂಡು ದೇವದುಗರ್ಾದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲುಮಾಡಿದೆವು, ವೈದ್ಯರ ಸಲಹೆ ಮೆರೆಗೆ ನಾವು ಹೆಚ್ಚಿನ ಉಪಚಾರ ಕುರಿತು ರಯಾಚೂರಿನ ಜಿಲ್ಲಾ ಸರಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೆವು ಉಪಚಾರ ಹೋಂದುತ್ತಾ ಇಂದು ದಿನಾಂಕ 03/06/2020 ರಂದು ರಾತ್ರಿ 2:10 ಎ.ಎಂ ಕ್ಕೆ ಸದರ ನನ್ನ ಮಗಳ ನಪೀಲಾ ಇವಳು ಮೃತಪಟ್ಟಿದ್ದು ಇರುತ್ತದೆ.
ಕಾರಣ ನನ್ನ ಮಗಳು ನಪೀಲಾ ತಂದೆ ಮಾಶ್ಯಾಕಸಾಬ ಸೈಯಾದ ವ|| 8 ವರ್ಷ ಜಾ||ಮುಸ್ಲಿಂ ಉ|| ವಿದ್ಯಾಥರ್ಿ ಸಾ|| ಎಂ ಕೊಳ್ಳುರು ಇವಳು ರಾತ್ರಿ ಸಮಯದಲ್ಲಿ ಊಟಾ ಮಾಡಿ ಮಲಗಿದಾಗ ಯಾವೋದೊ ಒಂದು ವಿಷ ಪೂರಿತ ಹಾವೂ ಅವಳ ಬಲಗಾಲ ತೋಡೆಯ ಹತ್ತಿರ ಕಚ್ಚಿದ್ದರಿಂದ ಉಪಚಾರ ಫಲಕಾರಿಯಾಗದೆ ಮೃತಪಟ್ಟಿದ್ದು, ಯಾರ ಮೇಲ ಯಾವೂದೆ ರೀತಿಯಾ ಸಂಸಾಯ ವಗೇರಾ ಇರುವದಿಲ್ಲಾ ಅಂತಾ ನಮ್ಮ ದೋಡ್ಡಪ್ಪನ ಮಗ ಸಲಿಂ ಇವರ ಕೈಯಿಂದ ಹೇಳಿ ಬರೆಯಿಸಿದ ಅಜರ್ಿ ನಿಜವಿರುತ್ತದೆ. ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-13/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ,ಆರ್ ನಂ: 05/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ:03.06.2020 ರಂದು 10:30 ಎಎಮ್ ಕ್ಕೆ ಪಿರ್ಯಾಧಿ ಶ್ರೀ. ನಿಂಗಪ್ಪ ತಂದೆ ಬಸಪ್ಪ ಸಜ್ಜನ್ ವ:62 ವರ್ಷ ಜಾ: ಗಾಣಗೇರ್ ಉ:ಒಕ್ಕಲುತನ ಸಾ: ರಾಜನಕೊಳೂರು ತಾ: ಹುಣಸಗಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆಯ ಸಾರಾಂಶವೆನೆಂದರೆ ನನಗೆ ದೇವಮ್ಮ, ವಿರೇಶ, ಶರಣು ಅಂತ ಮೂರು ಮಕ್ಕಳಿದ್ದು. ಎಲ್ಲರದು ಮದುವೆ ಮಾಡಿದ್ದು. ನನ್ನ 2 ನೇ ಮಗನಾದ ವಿರೇಶನಿಗೆ ಸದ್ಯ 34 ವರ್ಷ ವಯಸ್ಸು ಇದ್ದು. ಇತನಿಗೆ ಜೇವಗರ್ಿಯ ಭೀಮಾಶಂಕರ ಸಜ್ಜನ್ ರವರ ಮಗಳಾದ ನಾಗರತ್ನ ಇವಳೊಂದಿಗೆ 5-6 ವರ್ಷಗಳ ಹಿಂದೆ ಮದುವೆ ಮಾಡಿದ್ದು. ನನ್ನ ಮಗನಿಗೆ ಮೂರು ವರ್ಷದ ಒಂದು ಹೆಣ್ಣು ಮಗು ಮತ್ತು 1 ವರ್ಷದ ಒಂದು ಗಂಡು ಮಗುವಿದ್ದು. ನನ್ನ ಮಗನು ಈಗ ಸುಮಾರು ದಿವಸಗಳಿಂದ ವಿಪರೀತವಾಗಿ ಸರಾಯಿ ಕುಡಿಯುವ ಚಟಕ್ಕೆ ಬಲಿಯಾಗಿದ್ದು. ಇದರಿಂದ ದುಡಿಯದೇ ಇದ್ದ ಕಾರಣ ನನ್ನ ಸೊಸೆ ನಾಗರತ್ನ ಇವಳು ತನ್ನ ತವರು ಮನೆಗೆ ಹೋಗಿ ತನ್ನ ತಂದೆಯ ಮನೆಯಲ್ಲಿಯೇ ಇದ್ದು ನನ್ನ ಮಗನು ಆಗಾಗ ಹೋಗಿ ಬರುವದು ಮಾಡುತ್ತಿದ್ದು ಮತ್ತು ನನ್ನ ಸೋಸೆಯು ಕೂಡಾ ಆಗಾಗ್ಗೆ ಇಲ್ಲಿಗೆ ಬಂದು ಹೋಗುವದು ಮಾಡುತ್ತಿದ್ದು ನಾನು ಮತ್ತು ನನ್ನ ಹೆಂಡತಿ ಹಾಗೂ ಮಗ ಶರಣು ರವರು ನನ್ನ ಮಗನಿಗೆ ಸರಾಯಿ ಕುಡಿಯುವದು ಬಿಡು ನಿನ್ನ ಹೆಂಡತಿ ಮಕ್ಕಳಿಗೆ ಕರೆದುಕೊಂಡು ಬಂದು ಒಳ್ಳೆಯ ರೀತಿಯಿಂದ ಸಂಸಾರ ಮಾಡು ಅಂತ ಹಲವಾರು ಬಾರಿ ಹೇಳಿದರೂ ಕೂಡಾ ನನ್ನ ಮಗ ವಿರೇಶನು ಸೆರೆ ಕುಡಿಯುವದನ್ನು ಬಿಡದೇ ಹೊರಗಡೆ ಕುಡಿದುಕೊಂಡು ಬರುವದು ಮತ್ತು ಮನೆಗೆ ಸರಾಯಿ ತಂದು ಕುಡಿಯುವದು ಮಾಡುತ್ತಿದ್ದನು. ಹೀಗಿರುವಾಗ ನಿನ್ನ ದಿನಾಂಕ:02.06.2020 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ಮಾಹಾದೇವಿ ರವರು ನಮ್ಮ ಮನೆಯಲ್ಲಿ ಮುಂದುಗಡೆ ಹೊರಗಡೆ ಕುಳಿತ್ತಿದ್ದಾಗ ನನ್ನ ಮಗನು ಸರಾಯಿ ಕುಡಿದು ಮನೆಗೆ ಬಂದು ಮನೆಯ ಒಳಗೆ ಹೋಗಿದ್ದು. ನಾವು ಮನೆಯೊಳಗೆ ಮಲಗಿರಬಹುದು ಅಂತ ತಿಳಿದುಕೊಂಡಿದ್ದು. ಸ್ವಲ್ಪ ಹೊತ್ತಿನ ನಂತರ 6:30 ಪಿಎಮ್ ಕ್ಕೆ ತಮ್ಮ ಅಣ್ಣತಮ್ಮಕೀಯ ತಮ್ಮನಾದ ಗುರಲಿಂಗಪ್ಪ ತಂದೆ ಶಿವಪ್ಪ ಸಜ್ಜನ್ ಇತನು
ಗಾಬರಿಯಾಗಿ ನಮ್ಮ ಮನೆಗೆ ಬಂದಿದ್ದು ನಾವು ಯಾಕೆ ಬಂದಿದ್ದು ಅಂತ ಕೇಳಲಾಗಿ ನನಗೆ ನಿಮ್ಮ ಮಗನು ಸರಾಯಿ ಕುಡಿದ ನೆಸೆಯಲ್ಲಿ ಮತ್ತೆ ಮನೆಯಲ್ಲಿ ಹೊರಗಿನಿಂದ ತಂದ ಸರಾಯಿಯನ್ನು ಕುಡಿಯಬೇಕು ಅಂತ ಹೋದಾಗ ಸರಾಯಿ ಬದಲು ಸರಾಯಿ ಬಾಟಲಿ ಅಂತ ಮನೆಯಲ್ಲಿಟ್ಟಿದ್ದ ಸಾನಿಟೈಜರ್ನ್ನು ಕುಡಿದಿರುವದಾಗಿ ಪೋನ್ ಮಾಡಿ ತಿಳಿಸಿದ್ದು ಇದರಿಂದಾಗಿ ನಾನು ಬಂದಿದ್ದಾಗಿ ತಿಳಿಸಿದ್ದು ನಂತರ ನಾನು ಮತ್ತು ನನ್ನ ಹೆಂಡತಿ ಮಹಾದೇವಿ ಹಾಗೂ ಅಣ್ಣತಮ್ಮಕೀಯ ತಮ್ಮ ಗುರುಲಿಂಗಪ್ಪ ತಂದೆ ಶಿವಪ್ಪ ಸಜ್ಜನ್ ಎಲ್ಲರೂ ಕೂಡಿ ನಮ್ಮ ಮನೆಯ ಒಳಗೆ ಹೋಗಿ ನೋಡಲಾಗಿ ನನ್ನ ಮಗನು ಪಡಸಾಲಿಯ ಹಿಂದನ ಕೋಣೆಯಲ್ಲಿ ಮಲಗಿಕೊಂಡಿದ್ದು. ನೋಡಲಾಗಿ ಅವನ ಬಾಯಿಯಿಂದ ವಿಪರೀತವಾಗಿ ಸರಾಯಿ ಕುಡಿದ ವಾಸನೆ ಬರುತ್ತಿದ್ದು ನಾವು ಅವನಿಗೆ ವಿಚಾರಿಸಲಾಗಿ ತಾನು ಈ ಮೊದಲು ಸರಾಯಿ ಕುಡಿದುಕೊಂಡು ಮನಗೆ ಬಂದಿದ್ದು ಮನೆಗೆ ಬಂದು ಹೊರಗಡೆಯಿಂದ ತಂದಿದ್ದ ಸರಾಯಿ ಬಾಟಲಿಯಿಂದ ಸರಾಯಿ ಹಾಕಿಕೊಂಡು ಕುಡಿಯುವಾಗ ಸರಾಯಿ ಬಾಟಲಿ ಬದಲು ಮನೆಯಲ್ಲಿ ಕೈ ತೊಳೆಯಲು ತಂದಿಟ್ಟಿದ್ದ ಸಾನಿಟೈಜರ್ ಬಾಟಲಿಯಲ್ಲಿಯ ಸಾನಿಟೈಜರ್ನ್ನು ಸರಾಯಿ ಅಂತ ತಿಳಿದು 6:15 ಗಂಟೆಯ ಸುಮಾರಿಗೆ ಕುಡಿದಿದ್ದಾಗಿ ತಿಳಿಸಿದ್ದು ನಂತರ ನಾನು ಮತ್ತು ನನ್ನ ಹೆಂಡತಿ ಅಣ್ಣತಮ್ಮಕೀಯ ಗುರಲಿಂಗಪ್ಪ ರವರು ನನ್ನ ಮಗನಿಗೆ ಉಪಚಾರಕ್ಕಾಗಿ ರಾಜನಕೊಳುರು ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ರಾಜನಕೊಳೂರು ಆಸ್ಪತ್ರೆಯ ವೈದ್ಯರು ಉಪಚಾರ ಮಾಡಿ ಹೆಚ್ಚಿನ ಉಪಚಾಕ್ಕಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ರಾತ್ರಿ 11:00 ಗಂಟೆಯ ಸುಮಾರಿಗೆ ತಿಳಿಸಿದ್ದು. ನಂತರ ನನ್ನ ಹೆಂಡತಿ ಮಾಹಾದೇವಿ ಹಾಗೂ ಸುದ್ದಿ ತಿಳಿದ್ದು ಆಸ್ಪತ್ರೆಗೆ ಬಂದಿದ್ದ. ನಮ್ಮ ಅಣ್ಣ ತಮ್ಮಕೀಯ ಸೂಗಪ್ಪ ತಂದೆ ನಾಗಪ್ಪ ಸಜ್ಜನ್, ಬಸವರಾಜ ತಂದೆ ಬುಸೆಟ್ಟೆಪ್ಪ ಸಜ್ಜನ್ ರವರು ನನ್ನ ಮಗನಿಗೆ ಹೆಚ್ಚಿನ ಉಪಚಾರಕ್ಕಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ನಂತರ ನನ್ನ ಮಗನಿಗೆ ಸುರಪೂರ ಆಸ್ಪತ್ರೆಯ ವೈದ್ಯರು ಉಪಚರಿಸಿ ಹೆಚ್ಚಿನ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು ನಂತರ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಯಾದಗಿರಿ ಆಸ್ಪತ್ರೆಯ ವೈದ್ಯರು ನನ್ನ ಮಗನಿಗೆ ಹೆಚ್ಚಿನ ಉಪಚಾರಕ್ಕಾಗಿ ರಾಯಚುರು ರೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಹೆಂಡತಿ ಮತ್ತು ನಮ್ಮ ಸಂಬಂಧಿಕರಾದ ಸೂಗಪ್ಪ, ಬಸವರಾಜ ರವರು ಈ ದಿವಸ ಮುಂಜಾನೆ ರೀಮ್ಸ್ ಆಸ್ಪತ್ರೆ ರಾಯಚೂರಕ್ಕೆ ಕರೆದುಕೊಂಡು ಹೋಗಿ ಉಪಚಾರಕ್ಕಾಗಿ ಸೇರಿಕೆ ಮಾಡಿದ ವಿಷಯ ನನಗೆ ಪೋನಿನಲ್ಲಿ ತಿಳಿಸಿದ್ದು ಇದ್ದು. ನಾನು ಈ ದಿವಸ ಮುಂಜಾನೆ 9:45 ಗಂಟೆಗೆ ಮನೆಯಲ್ಲಿದ್ದಾಗ ನನ್ನ ಮಗನಿಗೆ ಉಪಚಾರಕ್ಕಾಗಿ ಕರೆದುಕೊಂಡು ಹೋದ ಸೂಗಪ್ಪ ಸಜ್ಜನ್ ರವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ಅಣ್ಣ ವಿರೇಶನು ಈಗ ಸ್ವಲ್ಪ ಹೊತ್ತಿನ ಹಿಂದೆ 9:15 ಗಂಟೆಯ ಸುಮಾರಿಗೆ ಉಪಚಾರ ಫಲಿಸದೇ ಆಸ್ಪತ್ರೆಯಲ್ಲಿ ಸತ್ತಿರುವದಾಗಿ ತಿಳಿಸಿದ್ದು. ನಾನು ಈಗ ಬಂದು ದೂರು ಕೊಡುತ್ತಿದ್ದು ನನ್ನ ಮಗನು ವಿಪರೀತವಾಗಿ ಸೆರೆ ಕುಡಿದು ಸೆರೆ ಕುಡಿದ ನೆಶೆಯಲ್ಲಿ ಮನೆಯಲ್ಲಿ ಕೈ ತೊಳೆಯಲು ತಂದಿಟ್ಟಿದ್ದ ಸಾನಿಟೈಜರ್ನ್ನು ಕುಡಿದಿದ್ದು ಉಪಚಾರಕ್ಕಾಗಿ ಸೇರಿಕೆ ಮಾಡಿದಾಗ ಉಪಚಾರ ಫಲಿಸದೇ ಸತ್ತಿದ್ದು ನನ್ನ ಮಗನ ಮರಣದಲ್ಲಿ ಯಾರ ಮೇಲು ಯಾವುದೇ ಸಂಶಯವಿರುವದಿಲ್ಲಾ. ನನ್ನ ಮಗನ ಶವವು ರಾಯಚೂರು ರೀಮ್ಸ್ ಆಸ್ಪತ್ರೆಯಲ್ಲಿದ್ದು ತಾವು ಮುಂದಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ಪಿರ್ಯಾಧಿ ಸಾರಾಂಶದ ಮೇಲಿಂದ ಠಾಣೆಯ ಯುಡಿಆರ್ ನಂ:05/2020 ಕಲಂ 174 ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
Hello There!If you like this article Share with your friend using