ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/06/2020

By blogger on ಬುಧವಾರ, ಜೂನ್ 3, 2020





                                     ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/06/2020 
                                                                                                               
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 96/2020 ಕಲಂ 279, 337, 338, 304(ಎ) ಐಪಿಸಿ:ನಿನ್ನೆ ದಿನಾಂಕ 01.06.2020 ರಂದು ಸಂಜೆ 05:30 ಗಂಟೆಗೆ ಫಿರ್ಯಾದಿ ಮತ್ತು ಮೃತ ಇಬ್ಬರು ಗುರುಮಠಕಲ ಪಟ್ಟಣದಲ್ಲಿ ಸಂತೆ ಮಾಡಿಕೊಂಡು ನಂತರ ನಡೆದುಕೊಂಡು ತಮ್ಮ ಊರಿಗೆ ಹೋಗಿತ್ತುದ್ದಾಗ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಸಂಖ್ಯೆ 16 ರ ಮೇಲೆ ಇಟಕಲ್ ಕ್ರಾಸ್ನಿಂದ 100 ಮೀಟರ ಮೊದಲೇ ಮೋಟಾರು ಸೈಕಲ್ ನಂಬರ ಕೆಎ-33-ವ್ಹಿ-1160 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತನಿಗೆ ಹಿಂದಿನಿಂದ ಡಿಕ್ಕಿಪಡಿಸಿ ಬಾರಿ ಸ್ವರೂಪದ ಗಾಯಗೊಳಿಸಿದ ನಂತರ ಫಿರ್ಯಾದಿ ಮತ್ತು ಆರೋಪಿ ಇಬ್ಬರು ಕೂಡಿ ಮೃಥನನ್ನು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನಂತರ ಅಲ್ಲಿಯ ವೈಧ್ಯರ ಸಲಹೆಯ ಮೇರೆಗೆ ಮೃತನ ಹೆಂಡತಿಯು ಮೃತನನ್ನು ಹೆಚ್ಚಿನ ಉಪಚಾರ ಕುರಿತು ರೀಮ್ಸ್ ಆಸ್ಪತ್ರೆ ರಾಯಚೂರಗೆ ಖಾಸಗಿ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ನಿನ್ನೆ ದಿನಾಂಕ 01.06.2020 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು ಆ ಬಗ್ಗೆ ಮೃತನ ಹೆಂಡತಿ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ನಿನ್ನ ದಿನಾಂಕ 01.06.2020 ರಂದು ಠಾಣೆ ಗುನ್ನೆ ನಂಬರ 96/2020 ಕಲಂ: 279, 337, 338 ಐಪಿಸಿ ಪ್ರಕರಣದಲ್ಲಿ ಇಂದು ದಿನಾಂಕ 02.06.2020 ರಂದು ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದ್ದು ಇರುತ್ತದೆ.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 156/2020. ಕಲಂ 78 (3) ಕೆ.ಪಿ.ಆಕ್ಟ: ಆರೋಪಿತರು ದಿನಾಂಕ: 01-06-2020 ರಂದು 10.50 ಪಿಎಂ ಕ್ಕೆ ಮಾನ್ಯ ಪಿಐ ಸಾಹೇಬರು ಬಾತ್ಮೀ ಮೇರೆಗೆ ದೋರನಳ್ಳಿ ಗ್ರಾಮದ ಹಳ್ಳೆರಾಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೊಗಿ ಬರುವ ಸಾರ್ವಜನಿಕರನ್ನು ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಆರೋಪಿತನಿಂದ ಒಟ್ಟು 650/- ರೂ. ನಗದು ಹಣ ಒಂದು ಬಾಲ್ ಪೆನ್. ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ ಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 156/2020 ಕಲಂ.78(3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 12/2020 ಕಲಂ: 174 ಸಿ.ಆರ್.ಪಿ.ಸಿ: ನಿನ್ನೆ ದಿನಾಂಕ 01.06.2020 ರಂದು ಅರಕೇರಾ(ಕೆ) ಗ್ರಾಮದ ನಿಂಗಮ್ಮ ಯಾದಗಿರಿ ಈಕೆಯ ಮನೆಯಲ್ಲಿ ಕರೆಂಟ ಬಾರದೇ ಇರುವುದರಿಂದ ಆಕೆ ರವಿಂದ್ರನ ಮಗನಾದ ಮಹಾಂತೇಶ ಈತನು ಊರಲ್ಲಿ ಸಣ್ಣ-ಪುಟ್ಟ ಕರೆಂಟ್ ರಿಪೇರಿ ಕೆಲಸ ಮಾಡುತಿದ್ದರಿಂದ ಅವರ ಮನೆಗೆ ಹೋಗಿ ಕರೆದಿದ್ದು. ದಿನಾಂಕ 01.06.2020 ರಿಂದ ಊರಲ್ಲಿ ವಿದ್ಯೂತ್ ಸಂಪರ್ಕವೇ ಇರಲಿಲ್ಲ. ಇಂದು ದಿನಾಂಕ 02.06.2020 ರಂದು ಸಂಜೆ 5:30 ಗಂಟೆಯ ಸುಮಾರಿಗೆ ಮಹಾಂತೇಶ ಈತನು ನಿಂಗಮ್ಮ ಯಾದಗಿರಿ ಇವರ ಮನೆಯ ಹತ್ತಿರ ಇದ್ದ ಕರೆಂಟ್ ಕಂಬಕ್ಕೆ ಹತ್ತಿ ರಿಪೇರಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯೂತ್ ಪ್ರವಾಹವಾಗಿ ವಿದ್ಯೂತ್ ಅವಘಡ ಸಂಭವಿಸಿದ್ದು ಅಲ್ಲಿಯೇ ವಿದ್ಯೂತ್ ಕಂಬದ ಮೇಲೆಯೇ ಮೃತಪಟ್ಟಿದ್ದು ಇರುತ್ತದೆ. ಆ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 12/2020 ಕಲಂಳ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!