ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/05/2020
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 95/2020 ಕಲಂ ಅಗತ್ಯ ವಸ್ತುಗಳ ಅಧಿನಿಯಮ 3, 7 ಆಕ್ಟ್-1955 ಮತ್ತು ಕಲಂ ದ ಸಿಡ್ಸ ಕಂಟ್ರೂಲ್ ಆರಡರ್ ಆಕ್ಟ್ 3(1) 1983: ದಿನಾಂಕ 28.05.2020 ರಂದು ಸಮಯ ಸಾಯಂಕಾಲ 5.30 ಗಂಟೆ ಸುಮಾರಿಗೆ ಕೇಶ್ವಾರ ಗ್ರಾಮದಲ್ಲಿ ಆರೋಪಿತನು ದೃಡಿಕೃತವಲ್ಲದ 50 ಕೆ.ಜಿ ತೂಕದ ಸುಮಾರು 40 ಚೀಲ ಬೀಜೊಪಚಾರ ಮಾಡಿದ ಹತ್ತಿ ಬೀಜಗಳನ್ನು ದಾಸ್ತಾನು ಮಾಡಿದ ಬಗ್ಗೆ ಖಚಿತ ಭಾತ್ಮೀ ಮೇರೆಗೆ ಪಂಚರೊಂದಿಗೆ ದಾಳಿ ಮಾಡಿ ಸುಮಾರು 6 ಲಕ್ಷ ಮೌಲ್ಯದ ಹತ್ತಿ ಬೀಜಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು ಮೂಲ ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ದ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 90/2020 ಕಲಂ: 143, 147, 323, 498(ಎ), 504, 506, 149 ಐಪಿಸಿ & 3, 4 ಡಿಪಿ ಆಕ್ಟ: ಇಂದು ದಿನಾಂಕ 29/05/2020 ರಂದು 11.00 ಎ.ಎಮ್ ಕ್ಕೆ ಪಿರ್ಯಾದಿ ಶ್ರೀಮತಿ ಶೃತಿ ಗಂಡ ವಿಶ್ವನಾಥ ಹಿರೇಮಠ ವಯಾ|| 26 ವರ್ಷ ಉ||ಮನೆಗೆಲಸ ಜಾ|| ಜಂಗಮ ಸಾ|| ನಡಹಳ್ಳಿ ತಾ|| ತಾಳೀಕೋಟಿ [ಮೋ ನಂ:-8971107517] ರವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಅಜರ್ಿ ಸಾರಾಂಶವೆನೆಂದರೆ ನನ್ನ ತವರು ಮನೆ ಎಸ್ ಬಿ ಸಿ ಕ್ಯಾಂಪ ಕೆಂಭಾವಿ ಇದ್ದು ನಮ್ಮ ತಂದೆ ತಾಯಿಗೆ ನಾವು ಒಟ್ಟು ಮೂರು ಜನ ಹೆಣ್ಣು ಮಕ್ಕಳಿದ್ದು ಎಲ್ಲರದೂ ಮದುವೆಯಾಗಿದ್ದು ನನಗೆ 2014 ನೇ ಸಾಲಿನಲ್ಲಿ ತಾಳಿಕೋಟಿ ತಾಲೂಕಿನ ನಡಹಳ್ಳಿ ಗ್ರಾಮದ ವಿಶ್ವನಾಥ ತಂದೆ ಮಲ್ಲಯ್ಯ ಹಿರೇಮಠ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಾನು ನನ್ನ ಗಂಡ ಮದುವೆಯಾದ ಸುಮಾರು ಎರಡು ವರ್ಷಗಳವರೆಗೆ ಚೆನ್ನಗಿದ್ದೆವು. ಸದ್ಯ ನನಗೆ ದೀಕ್ಷಿತ್ ಎನ್ನುವ 5 ವರ್ಷದ ಮಗನಿರುತ್ತಾನೆ. ನನ್ನ ಮದುವೆಯ ಸಮಯದಲ್ಲಿ ನಮ್ಮ ತಂದೆ ತಾಯಿಯವರು ನನಗೆ ವರದಕ್ಷಿಣೆಯಾಗಿ 10 ತೊಲಿ ಬಂಗಾರ ಹಾಗು ಒಂದು ಲಕ್ಷ ರೂಪಾಯಿ ಹಣ ಹಾಗು ಇತರೆ ಸಾಮಾನುಗಳನ್ನು ಕೊಟ್ಟು ಮದುವೆಮಾಡಿದ್ದು ಇರುತ್ತದೆ. ಮದುವೆಯಾದ ಸುಮಾರು ಮೂರು ವರ್ಷಗಳ ನಂತರ ನನ್ನ ಗಂಡನಾದ ವಿಶ್ವನಾಥ ತಂದೆ ಮಲ್ಲಯ್ಯ ಹಿರೇಮಠ ಈತನು ತನ್ನ ತಾಯಿಯಾದ ಸರಸ್ವತಿ ಗಂಡ ಮಲ್ಲಯ್ಯ ಹಿರೇಮಠ ತಮ್ಮನಾದ ಸಿದ್ರಾಮ ತಂದೆ ಮಲ್ಲಯ್ಯ ಹಿರೇಮಠ ಹಾಗು ಅವರ ಚಿಕ್ಕಪ್ಪನಾದ ಪಂಚಾಕ್ಷರಿ ತಂದೆ ಸಿದ್ದರಾಮಯ್ಯ ಹಿರೇಮಠ ಸಾ|| ಎಲ್ಲರೂ ನಡಹಳ್ಳಿ ಈ ಎಲ್ಲಾ ಜನರ ಮಾತು ಕೇಳಿ ದಿನಾಲು ನನಗೆ ಮಾನಸಿಕ ಕಿರುಕುಳ ನೀಡುವದಲ್ಲದೇ ನೀನು ನಿನ್ನ ತವರು ಮನೆಯಿಂದ ಇನ್ನೂ ಒಂದು ಲಕ್ಷ ರೂಪಾಯಿ ಹಾಗು 5 ತೊಲಿ ಬಂಗಾರ ತೆಗೆದುಕೊಂಡು ಬಂದರೆ ಸರಿ ಇಲ್ಲದಿದ್ದರೆ ನಿನಗೆ ನಮ್ಮ ಮನೆಯಲ್ಲಿ ಜಾಗ ಇರುವದಿಲ್ಲ ಅಂತ ದಿನಾಲು ಮಾನಸಿಕ ಕಿರುಕುಳ ಕೊಡಲು ಪ್ರಾರಂಭಿಸಿದರು. ಸದರ ವಿಷಯವನ್ನು ನಾನು ನಮ್ಮ ತಂದೆಯವರ ಮುಂದೆ ತಿಳಿಸಿದಾಗ ಅವರ ನಾನು ಅಲ್ಲಿಗೆ ಬಂದು ನಿನ್ನ ಗಂಡ ಹಾಗು ಅತ್ತೆ ಮತ್ತು ಮೈದುನರಿಗೆ ತಿಳಿಸಿ ಹೇಳುತ್ತೇನೆ ಅಂತ ನನಗೆ ಸಮಾದಾನ ಮಾಡಿದ್ದರು. ಹೀಗಿದ್ದು ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡನಾದ 1] ವಿಶ್ವನಾಥ ತಂದೆ ಮಲ್ಲಯ್ಯ ಹಿರೇಮಠ ಅತ್ತೆಯಾದ 2] ಸರಸ್ವತಿ ಗಂಡ ಮಲ್ಲಯ್ಯ ಹಿರೇಮಠ ಹಾಗು ಮೈದುನನಾದ 3] ಸಿದ್ರಾಮ ತಂದೆ ಮಲ್ಲಯ್ಯ ಹಿರೇಮಠ 4] ಸುನಂದಾ ಗಂಡ ಸಕ್ಲೇಶ್ವರ ಹಿರೇಮಠ 5] ಸುನಿತಾ ಗಂಡ ಪಂಚಾಕ್ಷರಯ್ಯ ಹಿರೇಮಠ 6] ಕುಮಾರಸ್ವಾಮಿ ತಂದೆ ಪಂಚಾಕ್ಷರಯ್ಯ ಹಿರೇಮಠ ಮತ್ತು 7] ಪಂಚಾಕ್ಷರಯ್ಯ ತಂದೆ ಸಿದ್ರಾಮಯ್ಯ ಹಿರೇಮಠ ಈ ಏಳು ಜನರು ಸೇರಿ ನನಗೆ ನೀನು ನಿನ್ನ ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಂದರೆ ಸರಿ ಇಲ್ಲದಿದ್ದರೆ ನಮ್ಮ ಮನೆಯಲ್ಲಿ ಇರಬೇಡ ಅಂತ ನನಗೆ ದೈಹಿಕ ಹಾಗು ಮಾನಸಿಕ ಕಿರುಕುಳ ನೀಡಲಿಕ್ಕೆ ಹತ್ತಿದ್ದರಿಂದ ನಾನು ನನ್ನ ತಂದೆಗೆ ಪೋನ ಮಾಡಿ ಸದರ ವಿಷಯ ತಿಳಿಸಿದಾಗ ನಮ್ಮ ತಂದೆಯವರು ನನ್ನಲ್ಲಿಗೆ ಬಂದು ನನಗೆ ಹಾಗು ನನ್ನ ಮಗನಿಗೆ ನನ್ನ ತವರು ಮನೆಗೆ ಕರೆದುಕೊಂಡು ಬಂದಿರುತ್ತಾರೆ. ನಂತರ ದಿನಾಂಕ 06.04.2020 ರಂದು 12.30 ಪಿಎಮ್ ಕ್ಕೆ ನಾನು ನನ್ನ ತಂದೆ ತಾಯಿಯವರೊಂದಿಗೆ ಕೆಂಭಾವಿಯ ಎಸ್ ಬಿ ಸಿ ಕ್ಯಾಂಪಿನಲ್ಲಿರುವ ನಮ್ಮ ಮನೆಯಲ್ಲಿದ್ದಾಗ ಗಂಡನಾದ 1] ವಿಶ್ವನಾಥ ತಂದೆ ಮಲ್ಲಯ್ಯ ಹಿರೇಮಠ ಅತ್ತೆಯಾದ 2] ಸರಸ್ವತಿ ಗಂಡ ಮಲ್ಲಯ್ಯ ಹಿರೇಮಠ ಹಾಗು ಮೈದುನನಾದ 3] ಸಿದ್ರಾಮ ತಂದೆ ಮಲ್ಲಯ್ಯ ಹಿರೇಮಠ 4] ಸುನಂದಾ ಗಂಡ ಸಕ್ಲೇಶ್ವರ ಹಿರೇಮಠ 5] ಸುನಿತಾ ಗಂಡ ಪಂಚಾಕ್ಷರಯ್ಯ ಹಿರೇಮಠ 6] ಕುಮಾರಸ್ವಾಮಿ ತಂದೆ ಪಂಚಾಕ್ಷರಯ್ಯ ಹಿರೇಮಠ ಹಾಗು 7] ಪಂಚಾಕ್ಷರಯ್ಯ ತಂದೆ ಸಿದ್ರಾಮಯ್ಯ ಹಿರೇಮಠ ಈ ಏಳು ಜನರು ಬಂದವರೇ ಏನಲೇ ಸೂಳಿ ಶೃತಿ ನಿನ್ನ ತವರು ಮನೆಯಿಂದ ಹಣ, ಬಂಗಾರ ತೆಗೆದುಕೊಂಡು ಬಾ ಅಂದರೆ ಇಲ್ಲಿಯೇ ಬಂದು ಕುಳಿತಿಯಾ ಅಂತ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆಬಡೆ ಮಾಡಿ ನೀನು ನಿನ್ನ ಮನೆಯಿಂದ ಇನ್ನೂ ಹಣ, ಬಂಗಾರ ತೆಗೆದುಕೊಂಡು ಬಂದರೆ ಸರಿ ಇಲ್ಲದಿದ್ದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ. ಕಾರಣ ಈ ವಿಷಯವಾಗಿ ನಾನು ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಈ ಮೊದಲು ಮದುವೆಯಲ್ಲಿ ಹಣ, ಬಂಗಾರ ಕೊಟ್ಟರೂ ಮತ್ತೆ ಮತ್ತೆ ಹಣ, ಬಂಗಾರ ತೆಗೆದುಕೊಂಡು ಬಾ ಅಂತ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿ ಅವಚ್ಯವಾಗಿ ಬೈಯ್ದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ ಮೇಲ್ಕಾಣಿಸಿದ ಏಳು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಜರ್ಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 90/2020 ಕಲಂ 143.147.323.498(ಎ).504.506. ಸಂಡಗ 149 ಐಪಿಸಿ ಮತ್ತು 3 ಮತ್ತು 4 ಡಿ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ: 279,338, 304(ಎ) ಐಪಿಸಿ: ಇಂದು ದಿನಾಂಕ: 14/01/2020 ರಂದು 8-30 ಎಎಮ್ ಕ್ಕೆ ಶ್ರೀ ಬಾಷುಮಿಯಾ ತಂದೆ ಇಮಾಮಸಾಬ ಗುರುಸಣಗಿ, ವ:48, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಮನಗನಾಳ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮಣ್ಣ ಕಾಸಿಂಸಾಬ ತಂದೆ ದೌಲಸಾಬ ಗುರುಸಣಗಿ ಸಾ:ಮನಗನಾಳ ಈತನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ಹೀಗಿದ್ದು ದಿನಾಂಕ: 11/01/2020 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮೂರ ಯಂಕಪ್ಪ ತಂದೆ ಸಿದ್ದಪ್ಪ ಉಪ್ಪಾರ ಇಬ್ಬರೂ ನಮ್ಮೂರ ಹನುಮಾನ ದೇವರ ಗುಡಿ ಹತ್ತಿರ ಮಾತಾಡುತ್ತಾ ನಿಂತುಕೊಂಡಿದ್ದೇವು. ಅದೇ ವೇಳೆಗೆ ನಮ್ಮಣ್ಣನಾದ ಕಾಸಿಂಸಾಬ ತಂದೆ ದೌಲಸಾಬ ಗುರುಸಣಗಿ, ವ:60, ಸಾ:ಮನಗನಾಳ ಈತನು ಮನೆಯಿಂದ ಹನುಮಾನ ದೇವರ ಗುಡಿ ಕಡೆ ಯಾದಗಿರಿ-ಶಹಾಪೂರ ಮೇನ ರೋಡ ಮೇಲೆ ಗುಡಿ ಹತ್ತಿರ ರೋಡಿನ ಎಡಭಾಗಕ್ಕೆ ನಡೆದುಕೊಂಡು ಬರುತ್ತಿದ್ದನು. ಆಗ ಶಹಾಪೂರ ಕಡೆಯಿಂದ ಮೋಟರ್ ಸೈಕಲ್ ನಂ. ಕೆಎ 33 ಹೆಚ್ 7989 ನೇದ್ದರ ಸವಾರ ಭೀಮರಾಯ ತಂದೆ ಶಿವಪ್ಪ ನಾಟೇಕಾರ ಸಾ:ನಾಯ್ಕಲ್ ಈತನು ಮೋಟರ್ ಸೈಕಲ ಅನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನಮ್ಮಣ್ಣ ಕಾಸಿಂಸಾಬನಿಗೆ ಹಿಂದಿನಿಂದ ಡಿಕ್ಕಿಪಡಿಸಿ ಕೆಳಗೆ ಬಿಳಿಸಿದನು. ಆಗ ನಾವು ಓಡಿ ಹೋಗಿ ನಮ್ಮಣ್ಣನಿಗೆ ನೋಡಲಾಗಿ ನಮ್ಮಣ್ಣನ ತೆಲೆ ಹಿಂಭಾಗ ಭಾರಿ ರಕ್ತಗಾಯವಾಗಿತ್ತು ಮತ್ತು ಟೊಂಕಕ್ಕೆ ಒಳಪೆಟ್ಟಾಗಿತ್ತು. ಆಗ ನಾವು 108 ಅಂಬ್ಯುಲೇನ್ಸನ್ನು ಕರೆಸಿ, ಅದರಲ್ಲಿ ನಮ್ಮಣ್ಣನಿಗೆ ಹಾಕಿಕೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೇವು. ಇಲ್ಲಿನ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದರು. ಆಗ ವಡಗೇರಾ ಠಾಣೆಯ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ನಮ್ಮಣ್ಣನಿಗೆ ಭಾರಿ ಗಾಯಗಳಾಗಿದ್ದು, ಆತನಿಗೆ ಉಪಚಾರ ಮಾಡಿಸುವವರು ಸದ್ಯ ಯಾರು ಇಲ್ಲದ್ದರಿಂದ ಉಪಚಾರ ಮಾಡಿಸಿ, ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ನಮ್ಮಣ್ಣನಿಗೆ ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಉಪಚಾರ ಮಾಡಿಸಿ, ಕಲಬುರಗಿಯ ಚಿರಾಯು ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಇನ್ನು ಉಪಚಾರದಲ್ಲಿರುತ್ತಾನೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಮೋಟರ್ ಸೈಕಲ್ ನಂ. ಕೆಎ 33 ಹೆಚ್ 7989 ನೇದ್ದರ ಸವಾರ ಭೀಮರಾಯ ತಂದೆ ಶಿವಪ್ಪ ನಾಟೇಕಾರ ಸಾ:ನಾಯ್ಕಲ್ ಈತನು ತನ್ನ ಮೋಟರ್ ಸೈಕಲ್ ಅನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿಗೆ ನಡೆದುಕೊಂಡು ಹೊರಟಿದ್ದ ನಮ್ಮಣ್ಣ ಕಾಸಿಂಸಾಬನಿಗೆ ಹಿಂದಿನಿಂದ ಡಿಕ್ಕಿಪಡಿಸಿ ಭಾರಿ ಗಾಯಗೊಳಿಸಿರುತ್ತಾನೆ. ಅವನ ಮೇಲೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 04/2020 ಕಲಂ: 279,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಇಂದು ದಿನಾಂಕ:29/05/2020 ರಂದು ಬೆಳಗ್ಗೆ 10:00 ಗಂಟೆಗೆ ಪ್ರಕರಣದ ಫಿಯರ್ಾದಿದಾರರು ಹಾಜರಾಗಿ ಹೇಳಿಕೆ ನೀಡಿದ್ದೇನೆಂದರೆ, ಪ್ರಕರಣದ ಗಾಯಾಳು ಕಾಸಿಂಸಾಬ ತಂದೆ ದಾವಲಸಾಬ ಗುರುಸುಣಗಿ, ವಯ:60 ವರ್ಷ, ಜಾತಿ:ಮುಸ್ಲಿಂ, ಉ||ಒಕ್ಕಲುತನ, ಸಾ||ಮನಗನಾಳ ಈತನು ಅಪಘಾತದಲ್ಲಿ ಆದ ಗಾಯಗಳಿಂದ ಗುಣಮುಖನಾಗದೇ ನಿನ್ನೆ ದಿನಾಂಕ:28/05/2020 ರಂದು ರಾತ್ರಿ 8:45 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ನೀಡಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ: 304(ಎ) ಐ.ಪಿ.ಸಿ ಅಳವಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಅಂತಾ ವಿನಂತಿ.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 55/2020 143 323 324 504 ಸಂಗಡ 149 ಐಪಿಸಿ:ದಿನಾಂಕ:29/05//2020ರಂದು17.45ಗಂಟೆಗೆಶ್ರೀ ನೀಲಾನಾಯಕತಂದೆ ವೇಣಾನಾಯಕರಾಠೋಡ ಸಾ:ಹುಣಸಗಿತಾಂಡಾಇವರುಠಾಣೆಗೆ ಹಾಜರಾಗಿಒಂದುಟೈಪ್ ಮಾಡಿದದೂರುಹಾಜರಪಡಿಸಿದ್ದುಏನೆಂದರೆ, ದಿನಾಂಕ:26/05/2020 ರಂದು ಬೆಳಿಗ್ಗ 10.30 ಗಂಟೆಯ ಸುಮಾರಿಗೆ ನನ್ನ ಮಗನಾದತಿಪ್ಪಣ್ಣಈತನು ನಮ್ಮ ಮುಂದೆಇರುವರಾಜುತಂದೆ ಪೂಲಸಿಂಗ್ ರಾಠೋಡಇವರ ಮನೆಯ ಮುಂದೆಇರುವ ನಳದಲ್ಲಿ ಕುಡಿಯವ ನೀರನ್ನುತುಂಬುತ್ತಿರುವಾಗ, ಹುಣಸಗಿತಾಂಡಾದಕುಮಾರತಂದೆರಾಜುರಾಠೋಡಈತನು ಬಂದವನೇತಿಪ್ಪಣ್ಣನೊಂದಿಗೆಇಲ್ಲಿಯಾಕೆ ನೀರುತುಂಬುತ್ತಿ ಭೋಸಡಿ ಮಗನೆ ಅಂತಾ ಜಗಳವನ್ನು ತೆಗೆದು ಬೈಯುತ್ತಿರುವಾಗ, ಕುಮಾರನಕಡೆಯವರಾದ 1) ಲಕ್ಷ್ಮೀಬಾಯಿಗಂಡರಾಜುರಾಠೋಡ 2) ಮೋತಿಲಾಲ ತಂದೆ ಪೂಲಸಿಂಗ ರಾಠೋಡ 3) ರಾಜುತಂದೆ ಪೂಲಸಿಂಗ ರಾಠೋಡ 4) ನಾನು ತಂದೆ ಪೂಲಸಿಂಗ ರಾಠೋಡ 5) ಗುಂಡುತಂದೆ ಪೂಲಸಿಂಗ ರಾಠೋಡ 6) ಸಂಗೀತಾಗಂಡ ಮೋತಿಲಾಲ ರಾಠೋಡಎಲ್ಲರೂ ಸಾ:ಹುಣಸಗಿತಾಂಡಾಇವರುಎಲ್ಲರೂಕೂಡಿ ನನ್ನ ಮಗನಿಗೆ ಕೈಯಿಂದಾ ಮತ್ತುಕಟ್ಟಿಗೆಯಿಂದಾ ಹೊಡೆಬಡೆ ಮಾಡುವಗ ನಾನು ನಡುವೆ ಬಿಡಿಸಲು ಹೋದರೆ ನನಗೂ ಕೂಡಾದಬ್ಬಿಕೊಟ್ಟು ಬೈದಿದ್ದುಇರುತ್ತದೆ. ಈ ಬಗ್ಗೆ ತಾಂಡಾದಲ್ಲಿ ನ್ಯಾಯ ಮಾಡಬೇಕೆಂದುಕಾದುಇಂದುತಡವಾಗಿಠಾಣೆಗೆ ಬಂದುದೂರುಕೊಡುತ್ತಿದ್ದೇನೆಅಂತಾಇತ್ಯಾದಿ ದೂರಿನ ಮೇಲಿಂದಾಕ್ರಮಜರುಗಿಸಲಾಗಿದೆ.
ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 05/2020 ಕಲಂ 174 ಸಿ.ಆರ್.ಪಿಸಿ: ಮೃತನಿಗೆ ಕುಡಿಯುವ ಚಟವಿದ್ದು ದಿನಾಂಕ:27/05/2020 ರಂದು ಮದ್ಯಾಹ್ನ 1 ಗಂಟೆಯ ನಂತರ ಎಲ್ಲಿಯೋ ಹೋಗಿ ಕುಡಿದು ಬಂದು ನಿಶೆಯಾಗಿದ್ದರಿಂದ ಹುರಸಗುಂಡಗಿ ಹೊಸಗ್ರಾಮದ ಅಂಬ್ಲಪ್ಪ ಹೊಸಕೇರಿ ಇವರ ಪ್ಲಾಟ್ ಪಕ್ಕದಲ್ಲಿ ಮಲಗಿದ್ದು ಮಲಗಿದಲ್ಲಿಯೇ ಬಿಸಲಿನ ಝಳಕ್ಕೆ ನಿತ್ರಾಣ ಆಗಿ ನೀರಡಿಕೆ ಅಥವಾ ಹಸಿವಾಗಿ ಸೂಕ್ತ ಸಮಯದಲ್ಲಿ ಆಹಾರ ನೀರು ಸಿಗದೇ ದಿನಾಂಕ:27/05/2020 ರಂದು 1 ಪಿ.ಎಮ್. ದಿಂದ ದಿನಾಂಕ:28/05/2020 ರಂದು 7 ಪಿ.ಎಮ್. ಅವಧಿಯಲ್ಲಿ ಮೃತಪಟ್ಟಿರುತ್ತಾನೆ. ಮೃತನ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತ ವಗೈರೆ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:05/2020 ಕಲಂ 174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 155/2020.ಕಲಂ 87 ಆ್ಯಕ್ಟ:- ಇಂದು ದಿನಾಂಕ: 29/05/2020 ರಂದು 21-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ ಹನುಮರೆಡೆಪ್ಪ ಪಿ.ಐ. ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ 10 ಜನ ಆರೋಪಿತರು ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ದಿನಾಂಕ 29/05/2020 ರಂದು ಠಾಣೆಯಲ್ಲಿದ್ದಾಗ ಗುಂಡಗುತರ್ಿ ಗ್ರಾಮದ ಸರಕಾರಿ ಶಾಲೆಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಏಲೆಗಳ ಸಹಾಯದಿಂದ ಅಂದರ ಬಾಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಗುಂಡಗುತರ್ಿ ಗ್ರಾಮಕ್ಕೆ ಹೋಗಿ ದಾಳಿ ಮಾಡಿದ್ದು 10 ಜನ ಆರೋಪಿತರು ಸಿಕ್ಕಿದ್ದು ಅವರ ಹತ್ತಿರ ಮತ್ತು ಕಣದಲ್ಲಿ ಹಿಗೆ ಒಟ್ಟು 19800/- ರೂ ಹಾಗೂ 52 ಇಸ್ಪೇಟ ಏಲೆಗಳು ಸಿಕ್ಕಿದ್ದು ಮುದ್ದೆಮಾಲಗಳನ್ನು ದಿನಾಂಕ 29/05/2020 ರಂದು 19-30 ಗಂಟೆಯಿಂದ 19-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ ಆರೋಪಿತರ ವಿರುದ್ದ ಠಾಣೆ ಗುನ್ನೆ ನಂ 155/2020 ಕಲಂ 87 ಕೆ.ಪಿ.,ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 14/2020 ಕಲಂ. 174 (ಸಿ) ಸಿಆರ್ಪಿಸಿ: ಇಂದು ದಿನಾಂಕ:29/05/2020 ರಂದು 7 ಎ.ಎಮ್ ಕ್ಕೆ ಪಿಯರ್ಾಧಿದಾರರಾದ ಶ್ರೀಮತಿ ನಾಗಮ್ಮ ಗಂಡ ನಂದಪ್ಪ ಹಳಿಸಗರ ಸಾ:ವಡ್ಡರ ಓಣಿ ತಿಮ್ಮಾಪೂರ ಇವರ ಹೇಳಿಕೆ ಸಾರಾಂಶವೆನೆಂದರೆ ನನ್ನ ಗಂಡನ ಅಣ್ಣತಮ್ಮಂದಿರು 5 ಜನರಿದ್ದು ಅದರಲ್ಲಿ ಹಿರಿಯ ಅಣ್ಣ ತಿರಿಕೊಂಡಿರುತ್ತಾರೆ. 3 ಜನ ಹೆಣ್ಣು ಮಕ್ಕಳಿರುತ್ತಾರೆ. ನನ್ನ ಗಂಡನ ಊರು ಹಳಿ ಸಗರ ಇದ್ದು. ಅದರಲ್ಲಿ ಒಬ್ಬ ಮಾವ ಕೆಂಬಾವಿಯಲ್ಲಿ ಇರುತ್ತಾನೆ. ಒಬ್ಬ ಬೆಂಗಳೂರಿನಲ್ಲಿ ಕೂಲಿ ಕೆಲಸಕ್ಕೆಂದು ಹೋಗಿರುತ್ತಾನೆ. ಇನ್ನು ಇಬ್ಬರು ಊರಲ್ಲಿ ಇರುತ್ತಾರೆ. ನನ್ನ ಗಂಡ ನಂದಪ್ಪ ನಾನು ಸುಮಾರು 10 ವರ್ಷಗಳ ಹಿಂದೆ ನನ್ನ ತವರು ಮನೆಯಾದ ವಡ್ಡರ ಓಣಿ ತಿಮ್ಮಾಪೂರ ಸುರಪೂರದಲ್ಲಿ ಬಂದು ವಾಸವಾಗಿದ್ದು ಇರುತ್ತದೆ. ನನಗೆ ಇಬ್ಬರೂ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇರುತ್ತಾರೆ. ನನ್ನ ಗಂಡನು ದಿನಾಲು ಕುಡಿತದ ಚಟವುಳ್ಳವನಾಗಿದ್ದು ಅವನು ಕಲ್ಲು ವಡೆಯುವ ಕೆಲಸ ಮಾಡುತ್ತಿದ್ದು. ನಾವು ಇಲ್ಲೆ ಸ್ವಂತ ಮನೆ ಮಾಡಿಕೊಂಡಿರುತ್ತೆವೆ. ದಿನಾಲು ಕುಡಿದು ಬಂದು ಮನೆಯಲ್ಲಿ ಕಿರಿ ಕಿರಿ ಮಾಡುತ್ತಿದ್ದನು. ಅದಕ್ಕೆ ಎಲ್ಲರೂ ಬುದ್ದಿ ಮಾತು ಹೇಳಿದರು ಕೂಡಾ ಕುಡಿಯುವದು ಬಿಟ್ಟಿರಲಿಲ್ಲ. ನಿನ್ನೆ ದಿನಾಂಕ:28/05/2020 ರಂದು ಮುಂಜಾನೆಯಿಂದ ಕುಡಿದು ಬಂದು ಮನೆಯಲ್ಲಿ ಯಾವುದೋ ವಿಷಯ ಚಿಂತೆ ಮಾಡುತ್ತಾ ಕುಳಿತ್ತಿದ್ದನು. ಆಗ ನಾನು ಯಾಕೆ ಏನಾಗಿದೆ ಎಂದು ವಿಚಾರಿಸಿದಾಗ ಅದಕ್ಕೆ ಸಂಸಾರದ ಬಗ್ಗೆ ಚಿಂತೆಯಾಗುತ್ತದೆ. ಅಂತ ಅನ್ನುತಿದ್ದನು. ಚಿಂತೆ ಮಾಡಬೇಡ ಅಂತ ನಾನು ಕೂಡಾ ಬುದ್ದಿ ಮಾತು ಹೇಳಿರುತ್ತೆನೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಮನೆಯಿಂದ ಹೋಗಿರುತ್ತಾನೆ. ಇಂದು ಮುಂಜಾನೆ 5:30 ಗಂಟೆ ಸುಮಾರಿಗೆ ಸಂಸಾರ ವಿಷಯ ಮನಸ್ಸಿಗೆ ಹಚ್ಚಿಕೊಂಡು ಜೀಗುಪ್ಸೆಗೊಂಡು ಅವನ ಅಂಗಿಯಿಂದ ನಮ್ಮ ಓಣಿಯ ಖಾದಿ ಬಂಡಾರದ ಹಿಂದೆ ಗುಡ್ಡದಲ್ಲಿ ಬೆವಿನಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನಮ್ಮ ಓಣಿಯ ರಾಜು ತಂದೆ ರಾಮಣ್ಣ ಮತ್ತು ಕೃಷ್ಣಾ ತಂದೆ ಹಣಮಂತ ಇವರು ಸಂಡಾಸಕ್ಕೆಂದು ಖಾದಿ ಬಂಡಾರ ಹಿಂದೆ ಗುಡ್ಡದಲ್ಲಿ ಹೋದಾಗ ನೋಡಿ ಬಂದು ವಿಷಯ ತಿಳಿಸಿದಾಗ ನಾನು ಮತ್ತು ನಮ್ಮ ಓಣಿಯ ಜನರು ನಮ್ಮ ನಾದನಿ ಭೀಮವ್ವ ಮತ್ತು ಅಣ್ಣ ಮಲ್ಲೇಶಿ, ನಾಗರಾಜ ಎಲ್ಲರೂ ಹೋಗಿ ನೋಡಿ ಗುರುತ್ತಿಸಿ ನನ್ನ ಗಂಡ ನಂದಪ್ಪನ ಮೃತ ದೇಹವನ್ನು ಕೇಳಗೆ ಇಳಿಸಿರುತ್ತೆವೆ. ನನ್ನ ಗಂಡನ ಸಾವಿನಲ್ಲಿ ಸಂಶಯ ಇರುತ್ತದೆ. ಅಂತ ಮುಂದಿನ ಕಾನೂನು ಕ್ರಮ ಕುರಿತು ಸುರಪೂರ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿರುತ್ತೆನೆ. ಅಂತ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.14/2020 ಕಲಂ 174 (ಸಿ)ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 91/2020 ಕಲಂ: 143,147,148,448.427.323,324,326.307,504, ಸಂಗಡ 149 ಐಪಿಸಿ: ಇಂದು ದಿನಾಂಕ 29/05/2020 ರಂದು 10.30 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಶಾಂತಗೌಡ ತಂದೆ ಭೀಮನಗೌಡ ಚೌದ್ರಿ ವಯಾ|| 58 ಜಾ|| ಲಿಂಗಾಯತ ರಡ್ಡಿ ಉ|| ಒಕ್ಕಲುತನ ಸಾ|| ಅಮಲಿಹಾಳ ತಾ|| ಸುರಪುರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ ನಮ್ಮ ಹುಡುಗರು ಹಾಗೂ ನಮ್ಮೂರ ಸುಬೆದಾರ ಕುಟುಂಬದ ಹುಡುಗರು ಸುಮಾರು 15 ದಿನಗಳ ಹಿಂದೆ ಬಾಯಿ ಮಾತಿನಿಂದ ತಕರಾರು ಮಾಡಿಕೊಂಡಿದ್ದು ಅದೇ ವೈಷಮ್ಯದಿಂದ ಸುಬೆದಾರ ಕುಟುಂಬದವರು ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದರು. ಹೀಗಿದ್ದು ಇಂದು ದಿನಾಂಕ 29/05/2020 ರಂದು ಸಾಯಾಂಕಾಲ 7.00 ಗಂಟೆ ಸುಮಾರಿಗೆ ನಾನು ಹಾಗೂ ಮಕ್ಕಳಾದ ರಮೇಶ, ನಾಗರಾಜ, ಸುರೇಶ, ಹೆಂಡತಿ ಸಿದ್ದಮ್ಮ, ಅಳಿಯ ಬಾಪುಗೌಡ ಮತ್ತು ತಮ್ಮನ ಮಕ್ಕಳಾದ ಸಾಹೇಬಗೌಡ, ಗುರುನಾಥ ಎಲ್ಲರೂ ನಮ್ಮ ಮನೆಯಲ್ಲಿ ಮಾತನಾಡುತ್ತಾ ಕುಳಿತಾಗ ನಮ್ಮೂರ ನಮ್ಮ ಜನಾಂಗದ ಸುಬೆದಾರ ಕುಟುಂಬದವರಾದ 1) ಶೇಖರಗೌಡ ತಂದೆ ಸಿದ್ದನಗೌಡ ಸುಬೆದಾರ 2) ಮಹಾಂತಗೌಡ ತಂದೆ ಸಿದ್ದನಗೌಡ ಸುಬೆದಾರ 3) ರಾಜುಗೌಡ ತಂದೆ ಮಹಾಂತಗೌಡ ಸುಬೆದಾರ 4) ಪ್ರಬುಗೌಡ ತಂದೆ ಬಸನಗೌಡ ಸುಬೆದಾರ 5) ಸಾಹೇಬಗೌಡ ತಂದೆ ಸಿದ್ದನಗೌಡ ಸುಬೆದಾರ 6) ಸಂತೋಷಗೌಡ ತಂದೆ ಶೇಖರಗೌಡ ಸುಬೆದಾರ 7) ಸೋಮನಗೌಡ ತಂದೆ ಶಂಕರಗೌಡ ಸುಬೆದಾರ 8) ಮಲ್ಲನಗೌಡ ತಂದೆ ಅಮರಪ್ಪ ಅಡಿಗಿಮನಿ 9) ಬಸನಗೌಡ ತಂದೆ ಸಿದ್ದನಗೌಡ ಸುಬೆದಾರ 10) ಸಿದ್ದನಗೌಡ ತಂದೆ ಸಾಹೇಬಗೌಡ ಸುಬೆದಾರ 11) ಸಂಗನಗೌಡ ತಂದೆ ಸಾಹೇಬಗೌಡ ಸುಬೆದಾರ ಎಲ್ಲರೂ ಸಾ: ಅಮಲಿಹಾಳ ಹಾಗೂ 12) ಮಲ್ಲನಗೌಡ ತಂದೆ ಗುರಣ್ಣಗೌಡ ಸಿದ್ದಾಗೋಳ ಸಾ: ಪೀರಾಪೂರ 13) ಅಪ್ಪುಗೌಡ ತಂದೆ ಗುರಣ್ಣಗೌಡ ಸಿದ್ದಗೋಳ ಸಾ: ಪೀರಾಪೂರ ಈ ಎಲ್ಲಾ ಜನರು ನಮಗೆ ಕೊಲೆ ಮಾಡುವ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಮತ್ತು ಕಬ್ಬಿಣದ ರಾಡು ಹಿಡಿದುಕೊಂಡು ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಏನಲೇ ಚೌದ್ರಿ ಸೂಳೆ ಮಕ್ಕಳೆ ನಮಗೆ ಹೊಡೆಯುವಷ್ಟು ಸೊಕ್ಕು ಬಂದಿದಿಯಾ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಶೇಖರಗೌಡ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಹಾಗೂ ಬೆನ್ನಿಗೆ, ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸುತ್ತಿದ್ದಾಗ, ನಾನು ನೆಲಕ್ಕೆ ಬಿದ್ದು ಚೀರಾಡುವಾಗ ಅಲ್ಲಿಯೇ ಇದ್ದ ಮಗ ರಮೇಶ, ನಾಗರಾಜ, ಸುರೇಶ, ಹಾಗೂ ಅಳಿಯ ಬಾಪುಗೌಡ, ಹೆಂಡತಿ ಸಿದ್ದಮ್ಮ. ಹಾಗೂ ತಮ್ಮನ ಮಕ್ಕಳಾದ ಸಾಹೇಬಗೌಡ, ಗುರುನಾಥ ಎಲ್ಲರು ಬಿಡಿಸಿಕೊಳ್ಳಲು ಬಂದಾಗ ನಮ್ಮಲ್ಲರಿಗೂ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಾ, ರಮೇಶನಿಗೆ ಮಹಾಂತಗೌಡ ಸುಬೆದಾರ ಈತನು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಭಾರೀ ರಕ್ತಗಾಯ ಪಡಿಸಿ, ಮುಂದಿನ ಹಲ್ಲಿಗೆ ಹೊಡೆದಿದ್ದು ಹಲ್ಲು ಮುರಿದಂತಾಗಿರುತ್ತದೆ. ನಾಗರಾಜನಿಗೆ ರಾಜುಗೌಡ ಸುಬೆದಾರ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಎಡಗಣ್ಣಿನ ಹತ್ತಿರ ಹೊಡೆದು ರಕ್ತಗಾಯ ಪಡಿಸಿದನು. ಸುರೇಶನಿಗೆ ಪ್ರಬುಗೌಡ ಹಾಗೂ ಸಾಹೇಬಗೌಡ ಇವರು ಕಲ್ಲಿನಿಂದ ತಲೆಗೆ. ಬಲಕಾಲು ಮೊಳಕಾಲು ಕೆಳಗೆ ಹೊಡೆದು ರಕ್ತಗಾಯ ಪಡಿಸಿದಲ್ಲದೇ ಎಡಕೈ ಮೊಳಕೈ ಹತ್ತಿರ ಹಾಗೂ ಎದೆಗೆ ಹೊಡೆದು ಗುಪ್ತಗಾಯ ಪಡಿಸಿದರು. ಅಳಿಯ ಬಾಪುಗೌಡ ಇವರಿಗೆ ಸಂತೋಷಗೌಡ ಸುಬೆದಾರ ಹಾಗೂ ಸೊಮನಗೌಡ ಸುಬೆದಾರ ಈ ಎರಡು ಜನರು ಕೈಯಿಂದ ಬೆನ್ನಿಗೆ ಬಲವಾಗಿ ಗುದ್ದಿ ಸಂತೋಷಗೌಡ ಈತನು ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ಎಡ ಕಪಾಳಕ್ಕೆ ಹಾಗೂ ಹಣೆಗೆ ಹೊಡೆದು ರಕ್ತಗಾಯ ಪಡಿಸಿದನು. ತಮ್ಮನ ಮಕ್ಕಳಾದ ಸಾಹೇಬಗೌಡನಿಗೆ ಮಲ್ಲನಗೌಡ ಹಾಗೂ ಬಸನಗೌಡ ಇವರು ಕೈಯಿಂದ ಬೆನ್ನಿಗೆ ಹೊಟ್ಟೆಗೆ ಗುದ್ದಿ, ಗುಪ್ತಗಾಯ ಪಡಿಸಿದಲ್ಲದೇ ಬಸನಗೌಡ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಗುರುನಾಥನಿಗೆ ಸಿದ್ದನಗೌಡ ಹಾಗೂ ಸಂಗನಗೌಡ ಇವರು ನೆಲಕ್ಕೆ ಕೆಡವಿ ಎಳೆದಾಡಿ ಎಡಕಾಲು ಮೊಳಕಾಲಿಗೆ ರಕ್ತಗಾಯ ಪಡಿಸಿದರು. ಹಾಗೂ ಹೆಂಡತಿ ಸಿದ್ದಮ್ಮ ಇವಳಿಗೆ ಶೇಖರಗೌಡನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ. ಆಗ ನಾವೆಲ್ಲರೂ ಚೀರಾಡುತ್ತಿರುವಾಗ ಶೇಖರಗೌಡ ತಂದೆ ಭೀಮನಗೌಡ ಚೌದ್ರಿ, ಗುರಣಗೌಡ ತಂದೆ ಸಾಹೇಬಗೌಡ ಸುಬೆದಾರ, ರುದ್ರಗೌಡ ತಂದೆ ಬಸನಗೌಡ ಬಿರಾದಾರ ಇವರೆಲ್ಲರೂ ಬಂದು ನಮಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡರು. ಸದರಿಯವರೆಲ್ಲರೂ ನಮಗೆ ಕೊಲೆ ಮಾಡುವ ಉದ್ದೇಶದಿಂದ ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಕೈಯಿಂದ, ಕಲ್ಲಿನಿಂದ, ಕಬ್ಬಿಣದ ರಾಡಿನಿಂದ ಹಾಗೂ ಬಡಿಗೆಯಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಅಲ್ಲದೇ ನಮ್ಮ ಮನೆಯ ಮುಂದೆ ನಿಲ್ಲಿಸಿದ ಬುಲೆರೋ ಜೀಪ ನಂಬರ ಕೆಎ.28/ಬಿ-9966 ನೇದ್ದಕ್ಕೆ ಸಹ ಎಲ್ಲರು ಕಲ್ಲಿನಿಂದ ಮತ್ತು ಬಡಿಗೆಯಿಂದ ಹಿಂದಿನ ಗ್ಲಾಸಿಗೆ ಹೊಡೆದು ಜಕಮ್ಗೊಳಿಸಿರುತ್ತಾರೆ. ಕಾರಣ ಹಳೇ ವೈಷಮ್ಯದಿಂದ ಮೇಲ್ಕಾಣಿಸಿದ 13 ಜನರು ಕೊಲೆ ಮಾಡುವ ಉದ್ದೇಶದಿಂದ ಕಲ್ಲು, ಕಟ್ಟಿಗೆ ಹಾಗು ಕಬ್ಬಿಣದ ರಾಡಿನಿಂದ ನಮಗೆ ಹೊಡೆಬಡೆ ಮಾಡಿ ರಕ್ತಗಾಯ ಹಾಗು ಗುಪ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 91/2020 ಕಲಂ 143,147,148,448.427.323,324,326.307,504, ಸಂಗಡ 149 ಐಪಿಸಿಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using