ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/05/2020

By blogger on ಮಂಗಳವಾರ, ಮೇ 26, 2020






                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/05/2020 
                                                                                                               
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:-  65/2020 ಕಲಂ 279, 337, 338, 304(ಎ) ಐಪಿಸಿ:- ಇಂದು ದಿನಾಂಕ 26/05/2020 ರಂದು ಫಿರ್ಯಾಧಿದಾರನು ತನ್ನ ಅಜ್ಜಿಯಾದ ಸಿದ್ರಾಮವ್ವ ಗಂಡ ಸಿದ್ರಾಮಯ್ಯ ಸ್ವಾಮಿ ಇವಳಿಗೆ ಆರಾಮ ಇದ್ದಿರುವದಿಲ್ಲ, ಅವಳಿಗೆ ದವಾಖಾನೆಗೆ ತೋರಿಸಿಕೊಂಡು ಬರುವ ಕುರಿತು ತಾನು, ತನ್ನ ಸಂಬಂಧಿಕನಾದ ರಾಜಶೇಖರಯ್ಯ ತಂದೆ ಬಸಯ್ಯ ಸ್ವಾಮಿ, ತನ್ನ ಚಿಕ್ಕಮ್ಮಳಾದ ನೀಲಮ್ಮ ಗಂಡ ಪ್ರಭುಲಿಂಗಯ್ಯ ಸ್ವಾಮಿ ಎಲ್ಲರೂ ಕೂಡಿಕೊಂಡು ತನ್ನ ಅಜ್ಜಿಯನ್ನು ರಾಜಶೇಖರಯ್ಯ ಇತನ ವೀಟಾ ಬ್ರೀಜಾ ವಾಹನ ನಂ ಕೆ.ಎ-33-ಎಮ್-5562 ನೆದ್ದರಲ್ಲಿ ಕೂಡಿಸಿಕೊಂಡು ಯಾದಗಿರಿಯಿಂದ ರಾಯಚೂರಿಗೆ ಮಧ್ಯಾಹ್ನ 2-00 ಗಂಟೆಗೆ ಹೋಗುತ್ತಿದ್ದೆವು, ಮಾರ್ಗಮಧ್ಯ ರಾಮಸಮುದ್ರ ಗ್ರಾಮ ದಾಟಿದ ನಂತರ ಮೈಲಾಪೂರ-ಆರ್.ಹೊಸಳ್ಳಿ ರೋಡಿನ ಮೇಲೆ ರಾಜಶೇಖರಯ್ಯ ಇತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಹೋಗುವಾಗ ಎದುರುಗಡೆ ದನಗಳು ಬಂದಿದ್ದರಿಂದ ರಾಜಶೇಖರಯ್ಯ ಇತನು ಅಲಕ್ಷತನದಿಂದ ಒಮ್ಮೆಲೆ ಬ್ರೇಕ್ ಒತ್ತಿದ್ದರಿಂದ ನಾವು ಕುಳಿತುಕೊಂಡು ಹೋಗುತ್ತಿದ್ದ ವಾಹನ ಪಲ್ಟಿಯಾಗಿ ಅಪಘಾತವಾಯಿತು, ಈ ಅಪಘಾತದಲ್ಲಿ ಫಿರ್ಯಾಧಿದಾರನ ಗದ್ದಕ್ಕೆ ರಕ್ತಗಾಯ, ಎಡಪಕ್ಕೆಗೆ ಗುಪ್ತಗಾಯ ಮತ್ತು ಬಲಮುಂಡಿಗೆ ಭಾರಿ ಗುಪ್ತಗಾಯವಾಗಿರುತ್ತದೆ, ತನ್ನಂತೆಯೇ ಅವನ ಚಿಕ್ಕಮ್ಮ ನೀಲಮ್ಮ ಇವಳ ಬಲಸೊಂಟಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ, ವಾಹನ ಚಾಲಕ ರಾಜಶೇಖರಯ್ಯ ಇತನ ಬಲಗಣ್ಣಿನ ಹುಬ್ಬಿಗೆ, ತುಟಿಗೆ ಮತ್ತು ಎಡಗೈಗೆ ತರಚಿದ ರಕ್ತಗಾಯವಾಗಿರುತ್ತದೆ. ಅವನ ಅಜ್ಜಿ ಸಿದ್ರಾಮವ್ವ ಗಂಡ ಸಿದ್ರಾಮಯ್ಯ ಇವಳ ತಲೆಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತ ಬರುತ್ತಿತ್ತು, ಎಡ ಮತ್ತು ಬಲಕೈ ರಟ್ಟೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಬಲ ಮೊಣಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿ ಅವಳು ಸ್ಥಳದಲ್ಲಿಯೇ ಸತ್ತಿರುತ್ತಾಳೆ, ಈ ಅಪಘಾತವು ಇಂದು ದಿನಾಂಕ 26/05/2020 ರಂದು ಮಧ್ಯಾಹ್ನ 2-30 ಗಂಟೆಗೆ ಮೈಲಾಪೂರ-ಆರ್.ಹೊಸಳ್ಳಿ ರೋಡಿನ ಮೇಲೆ ಗೋವಿಂದಪ್ಪ ಕೊಂಕಲ ಇವರ ಹೊಲದ ಹತ್ತಿರ ನಡೆದಿರುತ್ತದೆ, ಅದೇ ಸಮಯದಲ್ಲಿ ನಮ್ಮ ಹಿಂದುಗಡೆ ಬರುತ್ತಿದ್ದ ನಮ್ಮೂರಿನ ಪಾಂಡುರಂಗ ತಂದೆ ದೇವಿಂದ್ರಪ್ಪ ಪಾಂಚಾಳ ಮತ್ತು ಮಲ್ಲಿನಾಥ ತಂದೆ ಸುಭಾಸ ಆಯರಕರ ಇವರು ಅಪಘಾತವಾಗಿದ್ದನ್ನು ನೋಡಿ ನಮ್ಮನ್ನು ತಮ್ಮ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ, ಈ ಅಪಘಾತವು ರಾಜಶೇಖರಯ್ಯ ಇತನ ನಿರ್ಲಕ್ಷತನದಿಂದ ನಡೆದಿರುತ್ತದೆ, ಅವನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 65/2020 ಕಲಂ 279, 337, 338, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.        

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 85/2020 ಕಲಂ 279, 337, 338, 304(ಎ) ಐಪಿಸಿ:-ನಿನ್ನೆ ದಿನಾಂಕ 25.05.2020 ರಂದು ಸಂಜೆ ರೀಮ್ಸ್ ರಾಯಚೂರಿನಿಂದ ಎಂ.ಎಲ್.ಸಿ ಮಾಹಿತಿ ಮೇರೆಗೆ ನಾನು ಹಫೀಜ್ ಹೆಚ್.ಸಿ-31 ಇಂದು ದಿನಾಂಕ 26.05.2020 ರಂದು ಬೆಳಿಗ್ಗೆ 7.00 ಗಂಟೆಗೆ ಆಸ್ಪತ್ರೆಗೆ ಬೇಟಿ ನೀಡಿ ಮೃತನ ಹೆಂಡತಿ ಪಿರ್ಯಾಧಿ ಶ್ರೀಮತಿ ಚಾಂದಬಿ ಬೇಗ ಇವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ದಿನಾಂಕ 21.05.2020 ರಂದು ಸಾಯಂಕಾಲ ಪಿರ್ಯಾಧಿ ಗಂಡ ಘಿಐ-100 ನೇದ್ದರ ಮೋಟಾರು ಸೈಕಲ್ ನಂಬರ  ಟಿ.ಎಸ್.-06-ಇ.ಟಿ-5911 ನೆದ್ದು ತೆಗೆದುಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಕೇಶ್ವಾರ ಕಡೆಗೆ ಹೋಗುತ್ತಿದ್ದಾಗ ಎದರುಗಡೆಯಿಂದ ಒಬ್ಬ ಮೋಟರ ನಂಬರ ಎಮ್.ಹೆಚ್.-01-ಡಿ.ಜಿ-6690 ನೇದ್ದರ ಚಾಲಕನು ಸಹ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದು ಇಬ್ಬರೂ ಚಾಲಕರ ನಿರ್ಲಕ್ಷತನದಿಂದ ಸಮಯ ಸಂಜೆ 5.00 ಗಂಟೆ ಸುಮಾರಿಗೆ ಎರಡು ಮೋಟರ ಸೈಕಲ ಮುಖಾಮುಖಿ ಡಿಕ್ಕಿಕೊಟ್ಟು ಅಪಘಾತಪಡಿಸಿದ್ದರಿಂದ ಸದರಿ ಅಪಘಾತದಲ್ಲಿ ಪಿರ್ಯಾಧಿ ಗಂಡ ಬಸೀರ ಅಹ್ಮದ ಈತನಿಗೆ ಎಡಕಿವಿಯಿಂದ, ಬಾಯಿಯಿಂದ ರಕ್ತಸೋರುತ್ತಿದ್ದು, ಬೆನ್ನಿಗೆ, ಎರಡು ಕಾಲುಗಳ ಹಿಮ್ಮಡಿ ಹತ್ತಿರ ರಕ್ತಗಾಯವಾಗಿದ್ದು ಉಪಚಾರ ಕುರಿತು ಗುರುಮಠಕಲ ಆಸ್ಪತ್ರೆಗೆ ಸೇರಿಕೆಯಾಗಿ ನಂತರ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ರೀಮ್ಸ್ ಆಸ್ಪತ್ರೆಗೆ ಸೇರಿಕೆಯಾಗಿ ಚಿಕಿತ್ಸೆ ಫಲಿಸದೆ ಅಪಘಾತದಲ್ಲಿ ಆದ ಗಾಯಗಳಿಂದ ನಿನ್ನೆ ದಿನಾಂಕ 25.05.2020 ರಂದು ಸಂಜೆ 5.14 ಪಿ.ಎಂ ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ ಪಿರ್ಯಾಧಿ ನೀಡಿದ್ದು ಸದರಿಯವರ ಹೇಳಿಕೆ ಪಡೆದುಕೊಂಡು ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಇರುತ್ತದೆ.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 90/2020 ಕಲಂ 302, 201 ಐಪಿಸಿ:-ದಿನಾಂಕ: 26.05.2020 ರಂದು ಠಾಣೆಗೆ ಹಾಜರಾಗಿ ನರಸಮ್ಮ ಗಂಡ ಹುಲಿಗೆಪ್ಪ ಸಮನೋಳ, ಈ ಮೂಲಕ ದೂರು ಕೊಡುವದೇನೆಂದರೆ ನನ್ನ ಮಗ ಭೀಮಪ್ಪ ತಂದೆ ಹುಲಿಗೆಪ್ಪ ಸಮನೋಳ, ಆಡು ಕಾಯುವ ಕೆಲಸ ಮಾಡುತ್ತಿದ್ದನು. ಎಂದಿನಂತೆ ನನ್ನಮಗ ನಿನ್ನೆ ಸಾಯಂಕಾಲ ಆಡಿನಿಂದ ಮನೆಗೆ ಬಂದು ಹೊರಗಡೆ ಹೋಗಿದ್ದ. ತಿರುಗಿ ಸಾಯಂಕಾಲ 7.30 ಗಂಟೆ ಸುಮಾರಿಗೆ ಮನೆಗೆ ಬಂದು ಊಟಮಾಡಿ ಹೊರಗಡೆ ಹೋದ ನನ್ನಮಗ ಎಂದಿನಂತೆ ಆಡಿನ ದೊಡ್ಡಿಯತ್ತಿರ ಮಲಗಿರಬಹುದಂತಾ ತಿಳಿದೆವು.ಹೀಗಿದ್ದು ಇಂದು ದಿನಾಂಕ 26.05.2020 ರಂದು ಬೆಳಿಗ್ಗೆ 6.30 ಗಂಟೆ ಸುಮಾರಿಗೆ ನಾವು ಮನೆಯಲ್ಲಿದ್ದಾಗ ಕಾಳೆ ಕಾಶಪ್ಪನ ಮಗ ಭೀಮು ಎಂಬ ಹುಡುಗ ನಿನ್ನ ಮಗ ಕೆರೆ ದಂಡಿಗೆ ರಸ್ತೆಯಲ್ಲಿ ಬಿದ್ದಿದ್ದಾನೆ ನಾನು ನೋಡಲಾಗಿ ನನ್ನಮಗ ಭೀಮಪ್ಪ ಹೆಣವಾಗಿ ಬಿದ್ದಿದ್ದ. ಅವನ ಕುತ್ತಿಗೆ ಹಿಂಭಾಗದಲ್ಲಿ ಅರ್ಧಇಂಚ್ ಅಗಲದಷ್ಟು ಕಂದುಗಟ್ಟಿದ ಗಾಯವಾಗಿ ಮೂಗಿನಿಂದ ರಕ್ತ ಸೋರಿದೆ.  ದಿನಾಂಕ 25.05.2020 ರಂದು ಸಾಯಂಕಾಲ 7.30 ಗಂಟೆಯಿಂದ ದಿನಾಂಕ 26.05.2020 ರಂದು ಬೆಳಿಗ್ಗೆ 6.30 ಗಂಟೆಯ ಮಧ್ಯದ ಸಮಯದಲ್ಲಿ ನನ್ನಮಗ ಭೀಮಪ್ಪನಿಗೆ ಯಾರೋ ದುಷ್ರ್ಕಮಿಗಳು ಯಾವುದೋ ದುರುದ್ದೇಶದಿಂದ ಕುತ್ತಿಗೆಗೆ ಉರ್ಲು ಬಿಗಿದು ಅಥವಾ ಏನೋಮಾಡಿ ಎಲ್ಲೋ ಕೊಲೆ ಮಾಡಿರುತ್ತಾರೆ. ನಂತರ ಯಾರಿಗೆ ಗೊತ್ತಾಗಬಾರದೆಂದು ನನ್ನ ಮಗನ ಹೆಣ ನಮ್ಮೂರು ದೊಡ್ಡಕೆರೆಯ ಕಟ್ಟೆಯ ಅಂಚಿಗೆ ಬಿಸಾಡಿರುತ್ತಾರೆ. ನನ್ನ ಮಗನನ್ನು ಕೊಲೆ ಮಾಡಿದ ಕೊಲೆಗಾರರನ್ನು ಪತ್ತೆಹಚ್ಚಿ ಅವರ ವಿರುದ್ದ ಕಾನೂನಿನ ಕ್ರಮ ಜರುಗಿಸಲು ಕೊಟ್ಟ ದೂರಿನ ಆಧಾರದ ಮೇಲೆ ನಾನು ಪಿ.ಎಸ್.ಐ ಗುರುಮಠಕಲ್ ಠಾಣೆ ಗುನ್ನೆ ನಂಬರ 90/2020 ಕಲಂ 302, 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದೆ.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 91/2020 ಕಲಂ 143, 147, 323, 324, 355, 504, 506 ಸಂ. 149 ಐಪಿಸಿ:-ದಿನಾಂಕ 24.05.2020 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ಪಿರ್ಯಾಧಿ ಮಗ ಬಸವರಾಜ 10 ವರ್ಷ ಮತ್ತು ಆರೋಪಿ ಅನಂತಮ್ಮಳ ಮಗ ಕಾಂತ 11 ವರ್ಷ ಇಬ್ಬರೂ ಬಾಲಕರು ಕೂಡಿ ಆಟ ಆಡುತ್ತ ಜಗಳ ಮಾಡಿಕೊಂಡಿದ್ದರಿಂದ ಪಿರ್ಯಾಧಿ ಮಕ್ಕಳಿಗೆ ಬುದ್ದಿ ಮಾತಿನಿಂದ ಬೈದಿದ್ದಕ್ಕೆ ಆರೋಪಿತರು ಎಲ್ಲರೂ ಗುಂಪು ಬಂದು ಪಿರ್ಯಾಧಿ ಮತ್ತು ಆಕೆಯ ಅತ್ತೆಗೆ ಮೈದುನನಿಗೆ ಅವಾಚ್ಯವಾಗಿ ಬೈದು ಕೈಯಿಂದ, ಕಲ್ಲಿನಿಂದ , ಚಪ್ಪಲಿಯಿಂದ ಹೊಡೆಬಡಿ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾಧಿ


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 08/2020 ಕಲಂ. 174 ಸಿ.ಆರ್.ಪಿ.ಸಿ  :-        ಇಂದು ದಿನಾಂಕ: 26.05.2020 ರಂದು ಬೆಳಿಗ್ಗೆ 7.00 ಗಂಟೆಗೆ  ಫಿಯರ್ಾದಿ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಹೇಳಿಕೆ  ನೀಡಿದ್ದು ಸಾರಾಂಶವೇನೆಂದರೆ ನಿನ್ನೆ ದಿನಾಂಕ 25.05.2020 ರಂದು ಬಾಲಛೇಡ ಗ್ರಾಮದಲ್ಲಿ ನಮ್ಮ ಸಂಬಂಧಿಕರ ಮನೆಯಲ್ಲ್ಲಿ ಕಾರ್ಯಕ್ರಮ ಇದ್ದ ಕಾರಣ ನಾನು ಬಾಲಛೇಡದಲ್ಲಿದ್ದಾಗ ನನ್ನ ತಮ್ಮ ನಾಗೇಶ ನನಗೆ ಫೋನ ಮುಖಾಂತರ  ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನನ್ನ ತಮ್ಮ ಮಾದೇವಪ್ಪ ಈತನು ನಮ್ಮೂರಿನ ತಿಪ್ಪಯ್ಯ ಮಾದರ ಇವರ ದೊಡ್ಡಿಯಲ್ಲಿ ಕ್ರಿಮಿನಾಶಕ ಔಷಧ ಸೇವಿಸಿ ಒದ್ದಾಡುತ್ತಿದ್ದಾನೆ. ಮೂಗು ಮತ್ತು ಬಾಯಿಯಲ್ಲಿ ಬುರುಗು ಬಂದಿದೆ ಅಂತ ತಿಳಿಸಿ, ನಾನು ಮಾದೇವಪ್ಪ ಅಣ್ಣನಿಗೆ ರಾಯಚೂರ ರಿಮ್ಸ್ ಆಸ್ಪತ್ರೆಗೆ ಒಂದು ಖಾಸಗಿ ಜೀಪನಲ್ಲಿ ಉಪಚಾರ ಕುರಿತು ಕರೆದುಕೊಂಡು ಹೋಗುತ್ತಿದ್ದೇನೆ. ನೀನು ರಾಯಚೂರಗೆ ಬೇಗ ಬಾ ಅಂತ  ತಿಳಿಸಿದ ಮೇರೆಗೆ ನಾನು ರಾಯಚೂರ ರಿಮ್ಸ್ ಆಸ್ಪತ್ರೆಗೆ ಹೋಗಿ ನೋಡಿ ನನ್ನ ತಮ್ಮ ಮಾದೇವಪ್ಪ ಈತನಿಗೆ ಏನಾಯಿತು ಅಂತ ವಿಚಾರಿಸಲಾಗಿ ನನ್ನ ತಮ್ಮ ಮಾದೇವಪ್ಪ ಈತನು ನನಗೆ ತಿಳಿಸಿದ್ದೇನೆಂದರೆ, ನನಗೆ ಇವತ್ತು ಹೊಟ್ಟೆನೋವು ಜಾಸ್ತಿ ಆಗಿದ್ದು ಹೊರಗಡೆ ಬಂದು ತಿಪ್ಪಯ್ಯ ಮಾದರ ಇವರ ದೊಡ್ಡಿಯಲ್ಲಿ ಮದ್ಯಪಾನ ಮಾಡುತ್ತಿದ್ದೇ ನಿಶೆಯಲ್ಲಿ ಭತ್ತಕ್ಕೆ ಹೊಡೆಯುವ ಕ್ರಿಮಿನಾಶಕ ಎಣ್ಣೆ ಸೇವಿಸಿರುತ್ತೇನೆ ಅಂತ ತಿಳಿಸಿದನು. ಸದರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಇಂದು ದಿನಾಂಕ. 26.05.2020 ರಂದು ರಾತ್ರಿ 2-30 ಗಂಟೆಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾನೆ. ಸಾವಿನಲ್ಲಿ ಯಾರ ಮೇಲೆ ಯಾವುದೇ ದೂರು, ಸಂಶಯ ಇರುವದಿಲ್ಲ ಮುಂದಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ್ದು ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿನಿಂದ ಸೈದಾಪೂರ ಠಾಣೆ ಯು.ಡಿ.ಆರ್. ನಂ. 8/2020 ಕಲಂ. 174 ಸಿ.ಆರ್.ಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 143/2020 ಕಲಂ: 323,324,504,506 ಸಂಗಡ 34 ಐ.ಪಿಸಿ:- ಇಂದು ದಿನಾಂಕಃ 26/05/2020 ರಂದು 12-30 ಪಿ.ಎಮ್ ಕ್ಕೆ ಶ್ರೀ ಅಬ್ದುಲ್ ರಹೀಮ್ ತಂದೆ ಮಹ್ಮದ ಯುಸೂಫ್ ಮನಸೂರ ಸಾ: ಬೀಚಮೊಹಲ್ಲಾ ರಂಗಂಪೇಟ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಹಿರಿಯ ಮಗನಾದ ಮಹ್ಮದ್ ಆಸೀಫ್ ಇತನು ಕಳೆದ 6 ತಿಂಗಳಿನಿಂದ ನನಗೆ ಮನೆಯಲ್ಲಿ ಪಾಲು ಮಾಡಿಕೊಡುವಂತೆ ಕೇಳುತ್ತ ಬಂದಿದ್ದು ನಾನು ಆತನಿಗೆ ವಯಸ್ಸಾದ ತಂದೆ-ತಾಯಿಗೆ ನೀವು ಸರಿಯಾಗಿ ನೋಡಿಕೊಳ್ಳುತ್ತೀಲ್ಲಾ. ಆದ್ದರಿಂದ ನಾವಿಬ್ಬರೂ ಗಂಡ-ಹೆಂಡತಿ ಜೀವಂತ ಇರುವ ವರೆಗೆ ಮನೆ ನಮಗೆ ವಾಸ ಮಾಡಲಿಕ್ಕೆ ಇರಲಿ, ನಾವು ಸತ್ತ ಬಳಿಕ ಮನಿ ನಿಮಗೆ ಬರುತ್ತದೆ. ಈಗಲೆ ಮನೆ ಕೊಡುವದಿಲ್ಲ ಅಂತ ಹೇಳಿದ್ದಕ್ಕೆ ಆತನು ನೀನು ನನಗೆ ಮನೆ ಕೊಡುತ್ತೀಲ್ಲಾ ಅಂತ ನನ್ನೊಂದಿಗೆ ತಕರಾರು ಮಾಡುತ್ತ ಬಂದಿರುತ್ತಾನೆ. ನಿನ್ನೆ ದಿನಾಂಕಃ 25/05/2020 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನನ್ನ ಮಗನಾದ ಮಹ್ಮದ್ ಆಸೀಫ್ ಇತನು ನಮ್ಮ ಮನೆಯ ಹತ್ತಿರ ಬಂದವನೇ ನನಗೆ ಏನಲೇ ಮಕ್ಕಳು ಹುಟ್ಟಿಸಲು ಬರುತ್ತದೆ, ಆಸ್ತಿ ಪಾಲು ಮಾಡಿಕೊಡಲು ಬರುವದಿಲ್ಲ, ಇವತ್ತು ನಿನಗೆ ಬಿಡುವದಿಲ್ಲ ಎಂದವನೇ ಅಂಗಳದಲ್ಲಿ ಬಿದ್ದಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ಬಲಗೈ ಹೆಬ್ಬರಳಿಗೆ ಹೊಡೆದಿದ್ದರಿಂದ ರಕ್ತಗಾಯವಾಗಿದ್ದು, ನಂತರ ಕೈ ಮುಷ್ಟಿ ಮಾಡಿ ನನ್ನ ಬಾಯಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ಬಳಿಕ ಬಿಡಿಸಲು ಬಂದ ನನ್ನ ಹೆಂಡತಿಗೆ ಕೈಯಿಂದ ಬಾಯಿಗೆ ಹಾಗು ಎಡಕಪಾಳಕ್ಕೆ ಹೊಡೆದಿರುತ್ತಾನೆ. ಹಾಗು ನನ್ನ ಅಳಿಯನಾದ ಮಹ್ಮದ ಅಬ್ದುಲ್ ಸುಭಾನ್ ಇತನಿಗೆ ಕೈಯಿಂದ ತಲೆಗೆ, ಎರಡು ಕಪಾಳಕ್ಕೆ ಹಾಗು ಬೆನ್ನಿಗೆ ಹೊಡೆದಿದ್ದು ನಮಗೆ ಹೊಡೆಯುವದನ್ನು ನೋಡಿ ನನ್ನ ಮಗಳಾದ ಜರಿನಾಬೇಗಂ ಹಾಗು ಇಮ್ತಿಯಾಜ್ ಅಹ್ಮದ್ ಇಬ್ಬರೂ ಬಿಡಿಸಿದ್ದು, ಆಗ ಮಹ್ಮದ್ ಆಸೀಪ್ ಇತನು ಮಗನೇ ನನ್ನ ಪಾಲಿನ ಮನೆ ನನಗೆ ಕೊಡದಿದ್ದರೇ ಖಲಾಸ ಮಾಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ. ನಮಗೆ ಹೊಡೆಯುವದಕ್ಕೆ ನನ್ನ ಮಗನ ಮಾವನಾದ ಹಬೀಬಜಾನಿ ಸೈಯ್ಯದ್ ಸಾ: ಹೈದ್ರಾಬಾದ ಹಾ.ವಃ ರಂಗಂಪೇಟ್ ಇತನು ಪ್ರಚೋದನೆ ನೀಡಿರುತ್ತಾನೆ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 143/2020 ಕಲಂ. 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 36/2020 ಕಲಂ: 143, 147, 323, 354, 354(ಎ), 504, 506, ಸಂಗಡ 149 ಐಪಿಸಿ:- ಇಂದು ದಿನಾಂಕ 26/05/2020 ರಂದು 3:45 ಪಿ.ಎಂ ಕ್ಕೆ ಲಿಂಗಸೂರ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ಶ್ರೀಮತಿ ಗದ್ದೆಮ್ಮ ಗಂಡ ಅಮಾತೆಪ್ಪ ಮಾವಿನಬಾವಿ ಜಾ:ಕಬ್ಬಲಿಗ ಸಾ:ಜಂಗಿನಗಡ್ಡಿ ರವರಿಗೆ ವಿಚಾರಿಸಿದ್ದು ಸದರಿಯವಳು ತಾನು ಘಟನೆಯ ಬಗ್ಗೆ ಅಜರ್ಿನೀಡುವದಾಗಿ ಹೇಳಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪುಮಾಡಿಸಿದ ಪಿಯರ್ಾದಿ ಅಜರ್ಿಯನ್ನು 3:56 ಪಿ.ಎಂ ಕ್ಕೆ ಲಿಂಗಸೂರ ಸರಕಾರಿ ಆಸ್ಪತ್ರೆಯಲ್ಲಿ ಹಾಜರುಪಡಿಸಿದ್ದನ್ನು ಸ್ವಿಕರಿಸಿಕೊಂಡು 5:00 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದಿದ್ದು ಪಿಯರ್ಾದಿ ಅಜಿಯ ಸಾರಾಂಶವೆನೆಂದರೆ  ನಾನು ಗದ್ದೆಮ್ಮ ಗಂಡ ಅಮಾತೆಪ್ಪ ಮಾವಿನಬಾವಿ ಜಾ:ಕಬ್ಬಲಿಗ ಸಾ:ಜಂಗಿನಗಡ್ಡಿ ಗ್ರಾಮದವರಾಗಿದ್ದು ದಿನಾಂಕ 22/05/2020 ರ ರಾತ್ರಿ 10:00 ಗಂಟೆಯ ಸುಮಾರಿಗೆ ನಮ್ಮ ಮನೆಯ ಮುಂದೆ ಟಾಟಾ ಎ.ಸಿ ಕೆ..ಎ 36 ಆರ್-8075 ಗಾಡಿ ನಿಲ್ಲಿಸಿ ಅಸಯ್ಯಕರ ಜಾನಪದಗಳನ್ನು ಜೋರಾಗಿ ಒದರಿಸುತ್ತಿದ್ದರು ನಿನಗೇನು ಬಂಗಾರ ಹಚ್ಚೇನು. ನಿನ್ನೆಂದು ಬಂಗಾರ ಐತೇನು ಎಂಬ ಸಾಂಗನ್ನು ಹಚ್ಚಿ ಮುಚಕರ ತರುವಂತೆ ಮಾಡಿ ಗಾಡಿಯಲ್ಲಿ ನಮ್ಮ ಮನೆ ಕಡೆ ಕೈಮಾಡಿ ಡ್ಯಾನ್ಸ ಮಾಡುತ್ತಿದ್ದರು ನಮ್ಮ ಮನೆಯವರಾದ ಅಮಾತೆಪ್ಪ ನೆಲ್ಲರಾಶಿಕಾಯಲು ಹೋಗಿದ್ದು ಅವರು ಊಟಕ್ಕೆ ಅದೇ ಸಮಯದಲ್ಲಿ ಬಂದರು ನಾನು ಅವರಿಗೆ ಎಷ್ಟೊತ್ತಿನಿಂದ ಅವರು ನಮ್ಮ ಮನೆಯ ಮುಂದೆ ಗಾಡಿ ನಿಲ್ಲಿಸಿ ಅಸಯ್ಯ ಅಸಯ್ಯ ಸಾಂಗಗಳನ್ನು ಹಾಕು ಕುಣಿಯುತ್ತಿದ್ದಾರೆ ನಮ್ಮ ಮನೆಯ ಕಡೆ ಕೈ ಮಾಡುತ್ತಾರೆ ಎಂದು ತಿಳಿಸಿದೆ ನಮ್ಮ ಮನೆಯವರು ಯಾಕಪ್ಪ ಈ ರೀತಿ ಮಾಡುತ್ತಿರಾ ಅಂತಾ ಕೆಳಿದ್ದಕ್ಕೆ ಗಾಡಿಯಿಂದ ಇಳಿದು ಬಂದ ಶರಣಪ್ಪ ತಂದೆ ಶಾಂತಪ್ಪ ನೆರಬೆಂಚಿಯು ಲೇ ಸುಳಿಮಗನೇ ಅಮಾತೆ ನಮ್ಮ ಸಾಂಗ ಹಚ್ಚಬ್ಯಾಡ ಅಂತಿಯಾ ಎಷ್ಟಲೇ ಸೊಕ್ಕು ನಿಂದು ಬೋಸುಡಿ ಮಗನೇ ಎಂದು ಹಲಕಟ್ಟ ಶಬ್ದಗಳನ್ನು ಬೈಯುತ್ತಾ ಹೊಡೆಯಲು ಸುರುಮಾಡಿದ ಈ ಸೂಳಿಮಗಂದು ಬಹಳ ಆಗ್ಯಾದ ಇವತ್ತು ಮುಗಿಸಿಬಿಡೋಣಾ ಅಂತಾ ತಮ್ಮ ತಮ್ಮನನ್ನು ಕರೆದು ಇಬ್ಬರು ಸೇರಿ ಮನಬಂದಂತೆ ಬಡೆಯಲು ಆರಂಬಿಸದರು ನನ್ನ ಗಂಡನ ಬಡಿಬ್ಯಾಡ್ರಪ್ಪ ಎಂದು ಬಿಡಸಲು ಹೊದೆ ಆಗ ಶರಣಪ್ಪ ಲೇ ಸೂಳಿ ನಿಂದು ಬಹಳ ಆಗ್ಯಾದ ನಾವ ಹೇಳಿದ್ದನ್ನು ನಿನ್ನ ಗಂಡನಿಗೆ ಹೇಳುತ್ತಿಯಾ ನಿನ್ನ ಗಂಡ ನಮ್ಮದೇನ ಹರಕಾಂತನ ನೋಡು ನಿನ್ನ ಇಲ್ಲೆ ಕೆಡುವಿ ಹಾಕಿ ಹಟ್ಟರು ಅವನಿಂದ ಏನು ಹರಕ್ಕೋಳಗಾವುದಿಲ್ಲ ಎಂದು ನನ್ನ ಸೆರಗನ್ನು ಜೆಗ್ಗಿದನು ಆಗ ನಾನು ಕೊಸರಿಕೊಂಡು ಬಿಡಿಸಿಕೊಳ್ಳುವ ಪ್ರಯತ್ನಪಟ್ಟೆ ಆಗ ಶರಣಪ್ಪನು ನನ್ನ ಹೊಟ್ಟೆಗೆ ಜೋರಾಗಿ ಒದ್ದು ಕೆಳಗೆ ಕೆಡುವಿದನು ಸೂಳೆ ನಮ್ಮಿಂದಿ ತಪ್ಪಿಸಿಕೊಳ್ಳುತ್ತಿಯಾ ಎಂದು ಶರಣಪ್ಪ ನನ್ನ ಗುಪ್ತಾಂಗಕ್ಕೆ ಒದ್ದು ನನ್ನ ಮೇಲೆ ಎರಗಿದನು ನಾನು ಕೊಸರಿಕೊಂಡೆ ಅದೆ ಸಮಯದಲ್ಲಿ ಓಡಿ ಬಂದ ಗೌಡಪ್ಪ ತಂದೆ ಶಾಂತಪ್ಪ ನೆರಬೆಂಚಿ ಕೂಡಾ ನನ್ನ ಗಂಡನಿಗೆ ಮನಬಂದತೆ ಬಡಿಯಲು ಆರಂಬಿಸಿದರು ಮತ್ತು ಇಬ್ಬರು ಮುಖಕ್ಕೆ ಮುಸುಕು ಧರಿಸಿದ ವೆಕ್ತಿಗಳು ಬಂದು ನನ್ನನ್ನು ಎಳೆದು ನನ್ನ ಮೇಲೆ ಹಲ್ಲೆ ಮಾಡಿದರು ನನ್ನ ರವಿಕೆಗೆ ಕೈಯಾಕಿದರು ಆಗ ಮಂಜಪ್ಪ ಈತನು ಆ ಸೂಳಿನ ಬಿಡಬ್ಯಾಡರಿ ಕೆಡವಿ ಅಡರಿ ನಮ್ಮನ್ನು ಕಾಪಡರಿ ಎಂದು ನನ್ನ ಗಂಡನು ಕೂಗಿದನು ಸೂಳಿಮಗನಾ ಎಷ್ಟು ಕೂಗಿದರು ಯಾರು ಬರಲ್ಲ ಬಂದರ ಅವರನ್ನು ಸಣ್ಣಗ ಕಡಿತಿವಿ ಎಂದು ಮಂಜ ನನ್ನಗಂಡನ ಎದೆಗೆ ಒದ್ದನು ಆ ಸಮಯದಲ್ಲಿ ಬಂದ ಹನಮಂತ ತಂದೆ ಹಣಮಂತ ಮಾದರ ಶರಣಪ್ಪಣ್ಣ ಅವರನ್ನ ಬಡಿಬ್ಯಾಡ ಬಿಡರಿ ಎಂದು ಹೇಳಿದ. ಹಣಮಂತನಿಗೆ ಮಾದಿಗ ಸೂಳಿಮಗನಾ ನಮಗೆ ಹೇಳುವಷ್ಟು ದೊಡ್ಡವನಾದಿಯಾ ಮಗನೆ ನಿನ್ನ ಸಣ್ಣಗ ಕಡಿತಿವಿ ಎಂದು ಹಲಕಾ ಶಬ್ದ ಬೈದರು ಶರಣಪ್ಪ, ಮಂಜಪ್ಪ, ಗೌಡಪ್ಪ ಮುಖಕ್ಕೆ ಮುಸುಕು ಧರಿಸಿದ ಇಬ್ಬರು ಒಟ್ಟು ಸೇರಿ ನಮ್ಮನ್ನು ಮನಬಂದಂತೆ ಬಡಿದು ಸುಳಿಮಕ್ಕಳೆ ನಮಗೆನಾದರು ಹೇಳುವ ಪ್ರಯತ್ನ ಮಾಡಿದರ ನಿಮ್ಮ ಜೀವ ಸಹಿತ ಬಿಡುವದಿಲ್ಲ ನಮ್ಮದು ಯಾರು ಹರಕ್ಕೊಳಗಾಗುವದಿಲ್ಲ ಅಂತಾ ಕೂಗಾತ್ತಾ ಹೋದರು ಅಲ್ಲಿಯೇ ಇದ್ದ ಹಣಮಂತ ತಂದೆ ಹಣಮಂತ ಮಾದರ ಮತ್ತು ಅಮರೇಶ ತಂದೆ ನಿಂಗಪ್ಪ ನಮಗೆ ಸುದಾರಿಸಿಕೊಳ್ಳಲು ನೀರುತಂದು ಕೊಟ್ಟು ದವಾಖಾನೆಗೆ ಕಳುಹಿಸಿದರು ಅಂತಾ ನೀಡಿದ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 36/2020 ಕಲಂ 143,147,323,354,354(ಎ),504,506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 53/2020 323 324 307 354 504 506 ಐಪಿಸಿ:-26/05/2020ರಂದು 20.25.10 ಗಂಟೆಯ ಸುಮಾರಿಗೆ ಪಿಯರ್ಾದಿ ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರುಕೊಟ್ಟಿದ್ದು ಏನೆಂದರೆ, ಇಂದು ದಿನಾಂಕ:26/05/2020 ರಂದು ಮದ್ಯಾಹ್ನ 12.00  ಗಂಟೆಯ ಸುಮಾರಿಗೆ, ನಾನು ನಮ್ಮ ಮನೆಯ ಮುಂದೆ ನೀರನ್ನು ತುಂಬುವಾಗ, ನಮ್ಮ ತಾಂಡಾದ ತಿಪ್ಪಣ್ಣ ತಂದೆ ನೀಲಾನಾಯಕ ರಾಠೋಡ ಈತನು ಬಂದು ಏ ರಂಡಿ ಲಕ್ಷ್ಮೀ ನೀನು ಬಹಳ ಸಾವಕಾರತಿ ಆಗಿ ನಿಮ್ಮ ಮನೆಗೆ ನಳ ತೆಗೆದುಕೊಂಡು ನೀರು ತುಂಬುತ್ತಿ, ಅಂತಾ ಜಗಳವನ್ನು ತೆಗೆದು ನನ್ನ ಕೈಯಿಂದಾ ಹೊಡೆಬಡೆ ಮಾಡಿ ತೆಲೆಯಲ್ಲಿ ಕೂದಲು ಹಿಡಿದು ಎಳದಾಡಿ ನೆಲಕ್ಕೆ ಒಗದನು, ಅದೇ ಸಮಯಕ್ಕೆ, ಅಲ್ಲಿಯೇ ಇದ್ದ ನನ್ನ ಕುಮಾರ ಈತನು ಬಂದು ಬಿಡಿಸಿಕೊಂಡಾಗ, ತಿಪ್ಪಣ್ಣನು  ಏ ರಂಡಿ ಮಗನಾ ಕುಮಾರ್ಯಾ ನಿಂದು ತಿಂಡಿ ಬಹಳಾಗಿದೆ ಅಂತಾ ಎತ್ತಿ ನೆಲಕ್ಕೆ ಒಗೆದು, ನಿನ್ನ ಇವತ್ತು ಕೊಂದೇ ಬಿಡುತ್ತೇನೆ ಮಗೆನೇ ಅಂತಾ ಕೊಲೆ ಮಾಡುವ ಉದ್ದೇಶದಿಂದಾ ಒಂದು ದೊಡ್ಡಕಲ್ಲನ್ನು ಎತ್ತಿ ನನ್ನ ಮಗ ಕುಮಾರನ ಮೇಲೆ ಹಾಕಿದನು, ಆಗ ನನ್ನ ಮಗನು ಕಲ್ಲಿನಿಂದಾ ತಪ್ಪಿಸಿಕೊಂಡನು ಆದರು  ಕಲ್ಲಿನ ಏಟು ಕುಮಾರನ ಸೊಂಟಕ್ಕೆ ಬಡಿದು ಒಳಪೆಟ್ಟು ಆಗಿದ್ದು ಇರುತ್ತದೆ. ಈ ಬಗ್ಗೆ ತಾಂಡಾದಲ್ಲಿ ನ್ಯಾಯಮಾಡಬೇಕೆಂದು ಕಾದು ಸಾಯಂಕಾಲ ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಇರುತ್ತದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 154/2020 /2020  ಕಲಂ 3 & 7 ಇ.ಸಿ.ಯಾಕ್ಟ ಮತ್ತು 3(1) ಸೀಡ್ಸ ರೂಲ್:- ಇಂದು ದಿನಾಂಕ 26/05/2020 ರಂದು 20-00 ಪಿ.ಎಂಕ್ಕೆ ಪಿಯರ್ಾದಿ ಶ್ರೀ ಕು. ಭಾರತಿ ತಂದೆ ದುಲಪ್ಪ  ವ||25 ಉ|| ಕೃಷಿ ಅಧಿಕಾರಿಗಳು ದೋರನಳ್ಳಿ ಸಾ|| ಹೋತಪೆಟ ಇವರು ಠಾಣೆಗೆ ಹಾಜರಾಗಿ ಒಂದು ಗಣಕಿಕರಣ ಮಾಡಿದ ಅಜರ್ಿ ಮತ್ತು 2 ಆರೋಪಿತರು ಮುದ್ದೆಮಾಲುಗಳು  ಜಪ್ತಿ ಪಂಚನಾಮೇ ಹಾಜರ ಪಡಿಸಿ ಒಂದು ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಸ ಈ ಕೆಳಗಿನಂತೆ ಇದೆ ದಿನಾಂಕ 26/05/2020 ರಂದು 4.30 ಪಿ.ಎಂಕ್ಕೆ ದೋರನಳ್ಳಿ ಗ್ರಾಮದಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಚಟ್ನಳ್ಳಿ ಗ್ರಾಮದ ವೆಂಕಟೇಶ್ವರ ಗುಡಿಯ ಮುಂದೆ ಇಬ್ಬರು ವ್ಯಕ್ತಿಗಳು ಯಾವುದೇ ಪರವಾನಿಗೆ ಇಲ್ಲದೇ ಮುಖಾಂತರ ಇಬ್ಬರು ಪಂಚರಾದ 1)ಶ್ರೀ ಯಂಕಪ್ಪ ತಂದೆ ಭೀಮರಾಯ ಬಾವೂರ ವ|| 40ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಚಟ್ನಳ್ಳಿ ತಾ|| ಶಹಾಪೂರ 2) ಶ್ರೀ ಜಿಂದಾವಲಿ ತಂದೆ ನಬಿಸಾಬ ಪಠಾಣ ವ|| 26ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಚಟ್ನಳ್ಳಿ ತಾ|| ಶಹಾಪೂರ ಇವರಿಗೆ 5.00 ಪಿ.ಎಂಕ್ಕೆ ಚಟ್ನಳ್ಳಿ ಗ್ರಾಮದ ಹನುಮಾನ ಗುಡಿಯ ಹತ್ತಿರ ಭೇಟಿಯಾಗಿ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ನಂತರ ಹತ್ತಿ ಬೀಜ ಮಾರುತ್ತಿದ್ದವರ ಮೇಲೆ ದಾಳಿ ಮಾಡಲು ನಾನು, ಪಂಚರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಕೂಡಿಕೊಂಡು ನಮ್ಮ ಕೃಷಿ ಇಲಾಖೆಯ ಜೀಪ ನಂ ಕೆಎ-33ಜಿ-0131 ನೇದ್ದರಲ್ಲಿ ಕುಳಿತುಕೊಂಡು ಚಟ್ನಳ್ಳಿ ಗ್ರಾಮದ ವೆಂಕಟೇಶ್ವರ ಗುಡಿಯ ಹತ್ತಿರ ಹೋಗಿ ಜೀಪಿನಿಂದ ಎಲ್ಲರೂ ಕೆಳಗೆ ಇಳಿದು ನೋಡಲಾಗಿ ವೆಕಟೇಶ್ವರ ಗುಡಿಯ ಮುಂದೆ ಒಂದು ಮಹಿಂದ್ರಾ ಬೊಲೆರೋ ಪಿಕಪ್ ವಾಹನ ನಿಂತಿದ್ದು ವಾಹನದಲ್ಲಿ ಇಟ್ಟಿದ್ದ ಹತ್ತಿ ಬೀಜದ ಪಾಕೀಟಗಳು ರೈತರಿಗೆ ಒಂದೊಂದಾಗಿ ಮಾರಾಟ ಮಾಡುತ್ತಿದ್ದುದು ಖಚಿತಪಡಿಸಿಕೊಂಡು ಹತ್ತಿ ಬೀಜ ಮಾರುತ್ತಿದ್ದವರ ಮೇಲೆ ದಾಳಿ ಮಾಡಿ ಹಿಡಿದು ಹತ್ತಿ ಬೀಜ ಮಾರಾಟ ಮಾಡಲು ಲೈಸೆನ್ಸ್ ಇದ್ದರೆ ತೋರಿಸಿರಿ ಅಂದಾಗ ಅವರು ಯಾವುದೇ ಲೈಸೆನ್ಸ್ ಇಲ್ಲದೇ ಮಾರಾಟ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದು ಅಲ್ಲದೇ ಹತ್ತಿ ಬೀಜ ಮಾರಾಟ ಮಾಡಲು ಪರವಾನಿಗೆ ಮತ್ತು ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಬೇಕಿರುವ ಪಮರ್ಿಟ್ ನೀಡುವಂತೆ ನಾವು ಕೇಳಿದಾಗ ಹತ್ತಿ ಬೀಜ ಮಾರುತ್ತಿದ್ದ ವ್ಯಕ್ತಿಗಳು ಆಂಧ್ರ ರಾಜ್ಯದ ಅಧೋನಿ ಜಿಲ್ಲೆಯಲ್ಲಿ ಮಾರಾಟ ಮಾಡಲು ಪರವಾನಿಗೆ ಪಡೆದುಕೊಂಡಿದ್ದು ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಾರಾಟ ಮಾಡಲು ಪರವಾನಿಗೆ ಪಡೆದಿಲ್ಲ ಅಂತಾ ತಿಳಿಸಿದ್ದರಿಂದ ಮತ್ತು ರೈತರಿಗೆ ಅವಶ್ಯಕವಿರುವ ಬೀಜಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಅಂತಾ ತಿಳಿದು ಬಂದಿದ್ದು ಸದರಿ ವ್ಯಕ್ತಿಗಳು ಯಾವುದೇ ಪರವಾನಿಗೆ ಇಲ್ಲದೇ ಹತ್ತಿ ಬೀಜ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತವಾಗಿದ್ದರಿಂದ ಅವರ ಹತ್ತಿರ ಮಾರಾಟ ಮಾಡುತ್ತಿದ್ದ ಹತ್ತಿ ಬೀಜದ ಪಾಕೀಟಗಳನ್ನು ಪರಿಶೀಲಿಸಿ ನೋಡಲಾಗಿ ಅವು ಕೃಷಿಧನ ಸೀಡ್ಸ ಪೈವೇಟ ಲಿಮಿಟೆಡ್ ಕಂಪನಿಯ ಶ್ರೀ ಭಾರತಿ ಬೋಲ್ಗಾರ್ಡ 2 ಮಾದರಿಯ ಹತ್ತಿ ಬೀಜದ ಪಾಕೀಟಗಳು ಇದ್ದು ಅವರಲ್ಲಿ ಮಾರಾಟಕ್ಕೆಂದು ತಂದಿದ್ದ ಒಟ್ಟು 450 ಗ್ರಾಂ ತೂಕವುಳ್ಳ 324 ಪಾಕೀಟಗಳು ದೊರೆತಿದ್ದು ಅವುಗಳ ಅಂದಾಜು ಕಿಮ್ಮತ್ತು 2.36,520/- ರೂ ಆಗುತ್ತಿದ್ದು ಕೃಷಿ ಅಧಿಕಾರಿಗಳು 324 ಬೀಜದ ಪಾಕೀಟಗಳು ಮತ್ತು ಅವುಗಳನ್ನು ಸಾಗಿಸುತ್ತಿದ್ದ ಮಹಿಂದ್ರಾ ಬೊಲೆರೋ ಪಿಕಪ್ ವಾಹನ ಸಂ ಎಪಿ 21 ಟಿಡಬ್ಲ್ಯೂ 6131 ನೇದ್ದವುಗಳನ್ನು ನಾವು ಜಪ್ತಿಪಡಿಸಿಕೊಂಡಿದ್ದು ನಂತರ ಸದರಿ ಹತ್ತಿ ಬೀಜ ಮಾರುತ್ತಿದ್ದ ವ್ಯಕ್ತಿಗಳನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಕೆ.ಗೋಪಾಲ ತಂದೆ ವೆಂಕಟರಮಣ ವ|| 35ವರ್ಷ ಜಾ|| ಕುರುಬರ ಉ|| ಜೀಪ ಚಾಲಕ ಸಾ|| ಬಸವಗುಡಿ ಎಲ್.ಬಿ ಸೀಡ್ಸ್ ಆಧೋನಿ ಜಿ|| ಕನರ್ೂಲ್(ಆಂಧ್ರ ಪ್ರದೇಶ) 2) ಬಿ.ರಾಮಮೋಹನ ತಂದೆ ಬಿ.ಈರಣ್ಣ ವ|| 50ವರ್ಷ ಜಾ|| ಶೆಟ್ಟಿ ಬಲಿಜಾ ಉ|| ವ್ಯಾಪಾರ ಸಾ|| 15/83ಎಲ್.ಬಿ ಸ್ಟ್ರೀಟ ಲಂಗಡಭಾವಿ ಆಧೋನಿ(ಆಂಧ್ರ ಪ್ರದೇಶ) ಅಂತಾ ತಿಳಿಸಿದ್ದು ಸದರಿಯವರು ಯಾವುದೇ ಲೈಸೆನ್ಸೆ ಇಲ್ಲದೇ ರೈತರಿಗೆ ನಿಗದಿತ ಬೆಲೆಗಿಂತ ದುಬಾರು ಬೆಲೆಗೆ ಮಾರಾಟ ಮಾಡುತ್ತಿದ್ದುದು ಖಚಿತವಾಗಿದ್ದರಿಂದ ಪಂಚರ ಸಮಕ್ಷಮ 5.30 ಪಿಎಂ ದಿಂದ 6.30 ಪಿಎಂ ಜಪಿ ಪಂಚನಾಮೆ ಮಾಡಿ ಆ ಇಬ್ಬರು ವ್ಯಕ್ತಿಗಳನ್ನು ಹಿಡಿದುಕೊಂಡು ಬಂದು ಶಹಾಪೂರ ಪೊಲೀಸ್ ಠಾಣೆಗೆ ಒಪ್ಪಿಸಿದ್ದು ಕಾರಣ ಸದರಿ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಈ ಅಜರ್ಿಯ ಮೂಲಕ ವಿನಂತಿಸಿಕೊಂಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 154/2020 ಕಲಂ 3(1) ಸಿಡ್ಸ ಕೂಲ್ ಮತ್ತು 3&7 ಇ.ಸಿ.ಯಾಕ್ಟ ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು. 



ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 54/2020 279 304(ಎ) ಐಪಿಸಿ:-ದಿನಾಂಕ: 26/05/2020 ರಂದು 21.30 ಗಂಟೆಯ ಸುಮಾರಿಗೆ ಪಿಯರ್ಾದಿ ಠಾಣೆಗೆ ಬಂದು ಒಂದು ಕನ್ನಡದಲ್ಲಿ ಹೇಳಿಕೆ ಕೊಟ್ಟಿದ್ದು ಏನೆಂದರೆ, ಇಂದು ದಿನಾಂಕ:26/05/2020 ರಂದು ನಾನು ಮತ್ತು ನಮ್ಮ ಮನೆಯವರು ತಿಪ್ಪನಟಗಿಯಲ್ಲಿ ನಮ್ಮ ಅಣ್ಣತಮ್ಮಕಿಯವರು ದೇವರು ಮಾಡಿದ್ದರಿಂದಾ, ಆ ಕಾರ್ಯಕ್ರಮಕ್ಕೆ ನಾನು ನಮ್ಮೂರಿನ ಬೇರೆಯವರ ಮೋಟಾರ್ ಸೈಕಲ್ ಮೇಲೆ ಹೋಗಿದ್ದು, ನನ್ನಂತೆ ನನ್ನ ಮಗನಾದ ಯಂಕಪ್ಪ ತಿಪ್ಪನಟಗಿ ಈತನು ಇನ್ನೊಬ್ಬ ಅಣ್ಣತಮ್ಮಕಿಯ ಶಾಂತಪ್ಪ ತಂದೆ ಜೆಟ್ಟಪ್ಪ ಬಾಕಲಿ ಇಬ್ಬರೂ ಕೂಡಿ ಒಂದು ಮೋಟಾರ್ ಸೈಕಲ ಮೇಲೆ ತಿಪ್ಪನಟಗಿಗೆ ಬಂದಿದ್ದರು, ತಿಪ್ಪನಟಗಿಯಲ್ಲಿ ದೇವರ ಕಾರ್ಯಕ್ರಮ ಮುಗಿಸಿಕೊಂಡು, ನಾನು ಮುಂದೆ ಬಂದಿದ್ದು, ಮಗ ಯಂಕಪ್ಪ ಹಾಗೂ ಶಾಂತಪ್ಪ ನಾವು ಹಿಂದೆ ಬರುತ್ತೇವೆ ನಡೆ ಅಂತಾ ನನಗೆ ಹೇಳಿದ್ದರು. ನಾನು ಬೇರೆಯವರ ಮೋಟಾರ್ ಸೈಕಲ ಮೇಲೆ ಹುಣಸಗಿಗೆ ಬಂದು ಮನೆಯಲ್ಲಿದ್ದಾಗ ರಾತ್ರಿ 8.00 ಗಂಟೆಯ ಸುಮಾರಿಗೆ ನನ್ನ ಮಗ ಯಂಕಪ್ಪನ ಪೋನದಿಂದಾ ಇಸ್ಲಾಂಪುರದಿಂದಾ ಒಬ್ಬ ವ್ಯಕ್ತಿ ನನಗೆ ಪೋನ ಮಾಡಿ ನಿಮ್ಮವರು ಇಸ್ಲಾಂಪುರ ಕ್ರಾಸ್ ಸಮೀಪ್ ಕೆಂಭಾವಿ ರೋಡಿಗೆ, ಕೆನಾಲಗೆ ಹೊಸದಾಗಿ ಕಟ್ಟುತ್ತಿರುವ ಬ್ರೀಡ್ಜ್ದಲ್ಲಿ ಬಿದ್ದು ಅಪಘಾತವಾಗಿ ಬಿದ್ದು ಮೃತಪಟ್ಟಿರುತಾರೆ ಎಂದು, ಹೇಳಿದಾಗ ನಾನು ಸ್ಥಳಕ್ಕೆ ಹೋಗಿ ನೋಡಲುನನ್ನ ಮಗನಾದ ಯಂಕಪ್ಪ ಮತ್ತು ಶಾಂತಪ್ಪ ಬಾಕಲಿ ಇವರು ರೋಡಿಗೆ ಹೊಸದಾಗಿ ಕಟ್ಟುತ್ತಿರುವ ಕೆನಾಲ ಬ್ರೀಡ್ಜ್ ಒಳಗಡೆ ಬಿದ್ದು ಮೃತಪಟ್ಟಿದ್ದು, ಯಂಕಪ್ಪನಿಗೆ ಎಡಕಿನ ಕಿವಿಯ ಮೇಲೆ ತೆಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು, ಶಾಂತಪ್ಪನಿಗೆ, ತೆಲೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ನಮಗೆ ಅಪಘಾತದ ಬಗ್ಗೆ ಪೋನ ಮಾಡಿದ ವ್ಯಕ್ತಿ ಸ್ಥಳದಲ್ಲಿದ್ದು, ಸದರಿಯವನಿಗೆ ಅಪಘಾತದ ಬಗ್ಗೆ ವಿಚಾರಿಸಲು ಈಗ ಸಾಯಂಕಾಲ 7.30 ಗಂಟೆಯ ಸುಮಾರಿಗೆ ಕೆಂಭಾವಿ ಕಡೆಯಿಂದಾ, ಮೃತ ಶಾಂತಪ್ಪ ಬಾಕಲಿ ಈತನು ತಾನು ನಡೆಯಿಸು ಮೋಟಾರ್ ಸೈಕಲ್ ನಂ.ಕೆಎ-33 ಕೆ-9964 ನೇದ್ದನ್ನು ರೋಡಿನ ಮೇಲೆ ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು, ರೋಡಿಗೆ ಹೊಸದಾಗಿ ಕಟ್ಟುತ್ತಿರುವ ಕೆನಾಲ್ ಬ್ರೀಡ್ಜ್ದಲ್ಲಿ ಬಿದ್ದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರ ಶಾಂತಪ್ಪ ಬಾಕಲಿ ಮತ್ತು ಹಿಂದೆ ಕುಳಿತ ಯಂಕಪ್ಪ ತಿಪ್ಪನಟಗಿ ಇಬ್ಬರೂ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ ಅಂತಾ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!