ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/05/2020

By blogger on ಮಂಗಳವಾರ, ಮೇ 26, 2020

\

                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/05/2020 
                                                                                                               
ಕೋಡೆಕಲ್ ಪೊಲೀಸ ಠಾಣೆ ಗುನ್ನೆ ನಂ:- 46/2020 ಕಲಂ: 143, 147, 148,  341, 323,  324, 504, 506, ಸಂಗಡ 149 ಐಪಿಸಿ:- ಇಂದು ದಿನಾಂಕ:25.05.2020 ರಂದು ಸಾಯಂಕಾಲ 6:00 ಗಂಟೆಗೆ  ಪಿರ್ಯಾಧಿ ಠಾಣೆಗೆ ಹಾಜರಾಗಿ ತನ್ನ ಪಿಯರ್ಾದಿಯನ್ನು ಹೇಳಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೆಂದರೆ, ನಾವು ಐದು ಜನ ಅಣ್ಣ-ತಮ್ಮಂದಿರಿದ್ದು ಎಲ್ಲರೂ ಬೇರೆ ಬೇರೆಯಾಗಿ ಇರುತ್ತೇವೆ. ನಮ್ಮವು ಕಕ್ಕೇರಾ ಸೀಮಾಂತರದ ಬಂಗೇರದೊಡ್ಡಿಯ ಕೃಷ್ಣಾ ನದಿಯ ಹತ್ತಿರ ಸವರ್ೇ ನಂ:603 & 614 ರಲ್ಲಿ ಜಮೀನುಗಳು ಇರುತ್ತವೆ. ನಮ್ಮ ಜಮೀನು ಸವರ್ೇ ನಂ:603ರ ಮದ್ಯದಲ್ಲಿ ಬಂಗೇರದೊಡ್ಡಿ & ಗೊಲಪಲ್ಲೇರ ದೊಡ್ಡಿಗಳ ಕಡೆಯಿಂದ ಹೊಳೆಯ ಕಡೆಗೆ ಹೋಗುವ ದಾರಿ ಇರುತ್ತದೆ. ಸವರ್ೇ ನಂ:614 ನೇದ್ದರ ನಮ್ಮ ಜಮೀನಿನಲ್ಲಿ ಯಾವುದೇ ದಾರಿ ಇರುವುದಿಲ್ಲಾ. ನಾನು ಈಗ ಸದ್ಯ ಈ ಜಮೀನಿನಲ್ಲಿ ತೋಟ-ಪಟ್ಟಿ ಮಾಡಲು ಜಮೀನು ಹದ ಮಾಡಿದ್ದು ನಮ್ಮ ದೊಡ್ಡಿಯ ಹಣಮಂತ ತಂದೆ ನಂದಪ್ಪ ಹಾಗೂ ಗೊಲಪಲ್ಲೇರ ದೊಡ್ಡಿಯ ಮುತ್ತಣ್ಣ ತಂದೆ ಹಣಮಂತ ಗೊಲಪಲ್ಲೇರ ಇವರುಗಳು ತಮ್ಮ ಟ್ರ್ಯಾಕ್ಟರ್ಗಳನ್ನು ನಮ್ಮ ಈ ಹೊಲದಲ್ಲಿ ಅಡ್ಡಾ-ದಿಡ್ಡಿಯಾಗ ನಡೆಸಿಕೊಂಡು ಹೋಗುತ್ತಿದ್ದು, ಅದಕ್ಕೆ ನಾನು ಮತ್ತು ನನ್ನ ಅಣ್ಣಂದಿರು ಅವರಿಗೆ ದಾರಿ ಎಲ್ಲಿದೆ ಅಲ್ಲಿಂದ ತಿರುಗಾಡಿರಿ ನಮ್ಮ ಹೊಲದಲ್ಲಿ ದಾರಿ ಇರುವುದಿಲ್ಲಾ ಅಂತಾ ಹೇಳಿದ್ದಕ್ಕೆ ಇಂದು ದಿನಾಂಕ:25.05.2020 ರಂದು ನಾನು ನಮ್ಮ ಜಮೀನು ಸವರ್ೇ ನಂ:614ರಲ್ಲಿಯ ಹೊಲಕ್ಕೆ ಹೋಗಲು ಮುಂಜಾನೆ 08:30 ಗಂಟೆಯ ಸುಮಾರಿಗೆ ನಮ್ಮ ಮಾವನಾಗಬೇಕಾದ ಭೀಮಣ್ಣ ತಂದೆ ಬುಡ್ಡಯ್ಯ ಇವರ ಹೊಲದಲ್ಲಿಯ ದಾರಿಯ ಮೇಲಿಂದ ಹೋಗುತ್ತಿದ್ದಾಗ ಅದೇ ವೇಳೆಗೆ ಕೃಷ್ಣಾ ನದಿ ಕಡೆಯಿಂದ ಪೂಜಪ್ಪ ತಂದೆ ನಂದಪ್ಪ ಬಂಗೇರ, ಹಣಮಂತ ತಂದೆ ನಂದಪ್ಪ ಬಂಗೇರ, ಬಸಣ್ಣ ತಂದೆ ನಂದಪ್ಪ ಬಂಗೇರ, ಮುತ್ತಣ್ಣ ತಂದೆ ನಂದಪ್ಪ ಬಂಗೇರ, ಮುತ್ತಣ್ಣ ತಂದೆ ಹಣಮಂತ ಗೊಲಪಲ್ಲೇರ, ಆದಪ್ಪ ತಂದೆ ಹಣಮಂತ ಗೊಲಪಲ್ಲೇರ, ದುರಗಪ್ಪ ತಂದೆ ಅಮರಪ್ಪ ಗೊಲಪಲ್ಲೇರ ಇವರೆಲ್ಲರೂ ಬರುತ್ತಿದ್ದು, ನನಗೆ ನೋಡಿದವರೇ ಏ ಬೋಸುಡಿ ಮಗನೇ ಎಲ್ಲಿಗೆ ಹೋಗುತ್ತಿಯಲೇ ನಿಲ್ಲು ಅಂತಾ ತಡೆದು ನಿಲ್ಲಿಸಿ ಸೂಳೀ ಮಗನೇ ನಾವು ನಮ್ಮ ಟ್ರ್ಯಾಕ್ಟರ್ಗಳನ್ನು ನಿಮ್ಮ ಹೊಲದಲ್ಲಿಂದ ನಡೆಸಿಕೊಂಡು ಹೋದರೆ ನೀನು & ನಿಮ್ಮ ಅಣ್ಣಂದಿರು ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತೀರಿ, ಇವತ್ತು ನಿನಗೆ ಬಿಡುವುದಿಲ್ಲಾ ಸೂಳೀ ಮಗನೇ ಅಂತಾ ಬೈಯ್ದವರೇ ಅವರಲ್ಲಿಯ ಪೂಜಪ್ಪ ತಂದೆ ನಂದಪ್ಪ ಬಗೇರ & ಬಸಣ್ಣ ತಂದೆ ನಂದಪ್ಪ ಬಂಗೇರ ಇವರಿಬ್ಬರೂ ತಮ್ಮ ತೆಕ್ಕೆಯಲ್ಲಿ ನನಗೆ ಬಿಗಿಯಾಗಿ ಹಿಡಿದುಕೊಂಡಾಗ ಹಣಮಂತ ತಂದೆ ನಂದಪ್ಪ ಈತನು ನನ್ನ ಎದೆಯ ಮೇಲೆ ಎಡ ಬಾಜುವಿಗೆ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಗುದ್ದಿ ರಕ್ತಗಾಯ ಪಡಿಸಿದ್ದು, ಮುತ್ತಣ್ಣ ತಂದೆ ನಂದಪ್ಪ ಬಂಗೇರ ಈತನು ನನಗೆ ಎಡ ಕಪಾಳದ ಮೇಲೆ ಕೈಯಿಂದ ಜೋರಾಗಿ ಹೊಡೆದು ಗುಪ್ತಗಾಯಪಡಿಸಿದ್ದು, ಮುತ್ತಣ್ಣ ತಂದೆ ಹಣಮಂತ ಗೊಲಪಲ್ಲಿ ಈತನು ನನಗೆ ಕಲ್ಲಿನಿಂದ ಬಲಗಾಲ ಮೊಣಕಾಲ ಮೇಲೆ ಹೊಡೆದು ತರಚಿದ ನಮೂನೆಯ ರಕ್ತಗಾಯ ಪಡಿಸಿದ್ದು, ಆದಪ್ಪ ತಂದೆ ಹಣಮಂತ ಗೊಲಪಲ್ಲಿ & ದುರಗಪ್ಪ ತಂದೆ ಅಮರಪ್ಪ ಗೊಲಪಲ್ಲಿ ಇವರು ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ನನ್ನ ಮೈಮೇಲೆ ಅಲ್ಲಾ ತುಳಿದು ಒದ್ದು ಗುಪ್ತಗಾಯ ಪಡಿಸಿದ್ದು ಆಗ ನಾನು ನನಗೆ ಉಳಿಸಿರಪ್ಪೋ ಅಂತಾ ಚೀರಾಡಲು ಅಲ್ಲಿಯೇ ಹೊಲದಲ್ಲಿ ಕೆಲಸಮಾಡುತ್ತಿದ್ದ ನಂದಪ್ಪ ತಂದೆ ರಾತ್ರೆಪ್ಪ ಬಂಗೇರ, ಬಸಣ್ಣ ತಂದೆ ನಿಂಗಪ್ಪ ಬಂಗೇರ, ಭೀಮಣ್ಣ ತಂದೆ ನಿಂಗಪ್ಪ ಬಂಗೇರ ಇವರುಗಳು ಬಂದು ನೋಡಿ ಬಿಡಿಸಿದ್ದು ಇವರು ಬಂದು ಬಿಡಿಸಿದ್ದರೆ ಅವರೆಲ್ಲರೂ ನನಗೆ ಇನ್ನೂ ಹೊಡೆ-ಬಡೆ ಮಾಡುತ್ತಿದ್ದರು. ಹೋಗುವಾಗ ಅವರೆಲ್ಲರೂ ನನಗೆ ಬೋಸುಡಿ ಮಗನೇ ಇವತ್ತು ನಮ್ಮ ಕೈಯಲ್ಲಿ ಉಳಿದೀದಿ ಇನ್ನೊಂದು ಸಲ ಸಿಕ್ಕಾಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ನಂತರ ನಾನು ಮನೆಗೆ ಹೋಗಿ ನನ್ನ ಅಣ್ಣಂದಿರೊಂದಿಗೆ ಈ ಬಗ್ಗೆ ವಿಚಾರಿಸಿ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದು ನನಗೆ ಅವಾಚ್ಚ ಶಬ್ಧಗಳಿಂದ ಬೈದು, ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:46/2020 ಕಲಂ: 143, 147, 148, 341, 323,  324, 504, 506, ಖ/ಘ 149 ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.         

ಕೋಡೆಕಲ್ ಪೊಲೀಸ ಠಾಣೆ ಗುನ್ನೆ ನಂ:- 45/2020 ಕಲಂ: 143, 147, 148,  323,  324, 504, 506, ಸಂಗಡ 149 ಐಪಿಸಿ:- ಇಂದು ದಿನಾಂಕ:25.05.2020 ರಂದು ಮದ್ಯಾಹ್ನ 2:15 ಗಂಟೆಗೆ  ಪಿರ್ಯಾಧಿ ಠಾಣೆಗೆ ಹಾಜರಾಗಿ ತನ್ನ ಪಿಯರ್ಾದಿಯನ್ನು ಹೇಳಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೆಂದರೆ, ನಾನು ಕೂಲಿಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವಿಸುತ್ತಿದ್ದೇನೆ. ಹೀಗಿದ್ದು ಇಂದು ದಿನಾಂಕ:25.05.2020 ರಂದು ನಾನು ಕೂಲಿ ಕೆಲಸಕ್ಕೆಂದು ನಮ್ಮೂರ ಹಣಮಂತ ಗೊಲಪಲ್ಲಿ ಹಾಗೂ ಲಕ್ಷ್ಮಣ ಬಂಗೇರ ರವರ ಟ್ರ್ಯಾಕ್ಟರ್ಗಳಲ್ಲಿ ಕಲ್ಲು ತುಂಬಲೆಂದು ನಮ್ಮೂರ ಭೀಮಣ್ಣ, ತಿಮ್ಮಣ್ಣ, ಹಣಮಂತ, ಆದಪ್ಪ, ರವರೊಂದಿಗೆ ಟ್ರ್ಯಾಕ್ಟರ್ದಲ್ಲಿ ಕುಳಿತು ಕೃಷ್ಣಾ ನದಿಯ ಕಡೆಗೆ ಹೋಗುತ್ತಿರುವಾಗ ಹಾಳು ಬಿದ್ದ ಹಣಮಂತ ದೇವರ ಗುಡಿಯ ಹತ್ತಿರ ಜಟ್ಟೆಪ್ಪ ತಂದೆ ಬಸಪ್ಪ ಬಂಗೇರ ರವರ ಹೊಲದಲ್ಲಿಯ ದಾರಿಯಲ್ಲಿ ರಸ್ತೆಯ ಮೇಲೆ ಬೆಳಿಗ್ಗೆ 08:00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಅಲ್ಲಿ ದಾರಿಯ ಮೇಲೆ ಕಲ್ಲು ಮುಳ್ಳು ಹಾಕಿ ಯಾರೋ ರಸ್ತೆಯನ್ನು ಬಂದ್ ಮಾಡಿದ್ದು ಆಗ ನಾನು ಕುಳಿತ ಟ್ರ್ಯಾಕ್ಟರ್ ನಿಂತಿತು. ಆಗ ನಾನು ಟ್ರ್ಯಾಕ್ಟರ್ದಿಂದ ಕೆಳಗೆ ಇಳಿದು ದಾರಿಯ ಮೇಲೆ ಹಾಕಿದ ಕಲ್ಲು & ಮುಳ್ಳುಗಳನ್ನು ತೆಗೆಯುತ್ತಿರುವಾಗ ಅಲ್ಲಿಯೇ ಹೊಲದಲ್ಲಿ ಇದ್ದ ಬಂಗೇರದೊಡ್ಡಿಯ ಜಟ್ಟೆಪ್ಪ ತಂದೆ ಬಸಪ್ಪ ಬಂಗೇರ ಹಾಗೂ ಆತನ ಮಕ್ಕಳಾದ ಪರಸಪ್ಪ ಬಂಗೇರ, ಬಸಣ್ಣ ಬಂಗೇರ, ಬುಡ್ಡಪ್ಪ ಬಂಗೇರ, ಪೂಜಪ್ಪ ಬಂಗೇರ, ಹಣಮಂತ ಬಂಗೇರ ಹಾಗೂ ಅವರ ಸಂಬಂಧಿ ಮಾನಪ್ಪ ತಂದೆ ನಂದಪ್ಪ ಫೂಲಬಾಯಿ ಇವರೆಲ್ಲರೂ ಗುಂಪಾಗಿ ನನ್ನ ಹತ್ತಿರ ಬಂದವರೇ ಬೋಸುಡಿ ಮಗನೇ ನಾವು ಬೇಕಂತಲೇ ನಮ್ಮ ಹೊಲದಲ್ಲಿಯ ದಾರಿಯ ಮೇಲೆ ಕಲ್ಲು, ಮುಳ್ಳು ಹಾಕಿ ರಸ್ತೆಯನ್ನು ಬಂದ್ ಮಾಡಿದ್ದೇವೆ. ಈ ರಸ್ತೆ ನಮ್ಮ ಹೊಲದಲ್ಲಿದೆ ನಿಮಗೆ ದಾರಿ ಬಿಡಲ್ಲಾ ಯಾರಿಗೆ ಕೇಳಿ ಕಲ್ಲು, ಮುಳ್ಳು ತೆಗೆಯುತ್ತೀ ಬೋಸುಡಿ ಮಗನೇ ವಾಪಸ ಹೋಗಿರಿ ಅಂತಾ ಬೈದು ಅವರಲ್ಲಿಯ ಪರಸಪ್ಪ ತಂದೆ ಜಟ್ಟೆಪ್ಪ ಮತ್ತು ಬಸಣ್ಣ ತಂದೆ ಜಟ್ಟೆಪ್ಪ ಇವರಿಬ್ಬರೂ ನಮಗೆ ಎದುರು ವಾದಿಸುತ್ತೀಯೇನಲೇ ಸೂಳೇ ಮಗನೇ ಅಂತಾ ಬೈದು ನನ್ನನ್ನು ಬಿಗಿಯಾಗಿ ತೆಕ್ಕೆಯಲ್ಲಿ ಹಿಡಿದುಕೊಂಡಿದ್ದು ಆಗ ಬುಡ್ಡಪ್ಪ ತಂದೆ ಜಟ್ಟೆಪ್ಪ ಈತನು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಹಿಂಬಾಜುವಿಗೆ ಹೊಡೆದು ರಕ್ತಗಾಯ ಪಡಿಸಿದ್ದು ಪೂಜಪ್ಪ ತಂದೆ ಜಟ್ಟೆಪ್ಪ ಮತ್ತು ಹಣಮಂತ ತಂದೆ ಜಟ್ಟೆಪ್ಪ ರವರು ನನಗೆ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿದ್ದು ಆಗ ಮಾನಪ್ಪ ತಂದೆ ನಂದಪ್ಪ ಫೂಲಬಾಯಿ ಈತನು ನನ್ನ ಟೊಂಕದ ಮೇಲೆ & ಎಡ ಭುಜದ ಮೇಲೆ ಕಾಲಿನಿಂದ ಒದ್ದು, ತುಳಿದು ಗುಪ್ತಗಾಯ ಪಡಿಸಿದ್ದು, ಜಟ್ಟೆಪ್ಪ ತಂದೆ ಬಸಪ್ಪ ಬಂಗೇರ ಈತನು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಬಲಗಾಲ ಪಾದದ ಮೇಲೆ ಹೊಡೆದು ಒಳಪೆಟ್ಟುಮಾಡಿದ್ದು ಆಗ ನಾನು ಚೀರಾಡಲು ಅಲ್ಲಿಯೇ ಇದ್ದ ಪರಮಣ್ಣ ತಂದೆ ರಾಮಯ್ಯ ಅಡಿವೇರ ಸಾ:ಅಡಿವೇರ ದೊಡ್ಡಿ ಹಾಗೂ ಹಣಮಂತ ತಂದೆ ಬಸಪ್ಪ ಗೋನಾಟ್ಲ ಸಾ:ಗೊನಾಟ್ಲರ ದೊಡ್ಡಿ ಮತ್ತು ನನ್ನ ಜೊತೆಗೆ ಕೆಲಸಕ್ಕೆ ಬಂದಿದ್ದ ನಮ್ಮೂರ ಭೀಮಣ್ಣ, ತಿಮ್ಮಣ್ಣ, ಹಣಮಂತ, ಆದಪ್ಪ, ಇವರೆಲ್ಲರೂ ಬಂದು ನೋಡಿ ನನಗೆ ಹೊಡೆಯುವುದನ್ನು ಬಿಡಿಸಿದ್ದು ಹೋಗುವಾಗ ಅವರೆಲ್ಲರೂ ನನಗೆ ಸೂಳೀ ಮಗನೇ ಇವತ್ತು ನಮ್ಮ ಕೈಯಲ್ಲಿ ಉಳಿದೀದಿ ಇನ್ನೊಂದು ಸಲ ಸಿಕ್ಕಾಗ ಜೀವಂತ ಬಿಡುವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು ನನಗೆ ಅವಾಚ್ಚ ಶಬ್ಧಗಳಿಂದ ಬೈದು, ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:45/2020 ಕಲಂ: 143, 147, 148, 323, 324, 504, 506, ಖ/ಘ 149 ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 07/2020 ಕಲಂ. 174 ಸಿ.ಆರ್.ಪಿ.ಸಿ:- ಇಂದು ದಿನಾಂಕ: 25-05-2020 ರಂದು 03-00 ಪಿಎಂ ಕ್ಕೆ ಫಿಯರ್ಾದಿ ಇವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಫಿಯರ್ಾದಿಯನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು. ಡಿ.ಪಿ ಜೈನ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ ಆಗಿ ಕೆಲಸ ಮಾಡಿಕೊಂಡಿರುತ್ತೇನೆ ಈಗ ಸದ್ಯ ಡಿ.ಪಿ ಜೈನ್ ಕಂಪನಿಯರು ಮುಂಡರಗಿಯಿಂದ-ಕಡೆಚೂರ ವರೆಗೆ ರಸ್ತೆ ಕಾಮಗಾರಿ ನಡೆದಿದ್ದು ನಾನು ಅದನ್ನು ದಿನಾಲೂ ನೋಡಿಕೊಳ್ಳುತ್ತ ನಾನು ಸೈದಾಪೂರದಲ್ಲಿ ಹರಿಶೇಟ ಮನೆಯಲ್ಲಿ ಬಾಡಿಗೆ ಇದ್ದೆನು ನನ್ನ ಜೊತೆ ಪ್ರಸಾದರಾವ್, ಮಾನಸರಂಜನಪಾಂಡ ತಂದೆ ಜಗನಾಥಪಾಂಡ ಇದ್ದೆವು ಅಡುಗೆ ಮಾಡಲು ಈಗ ಸುಮಾರು 2 ವರ್ಷಗಳಿಂದ ಶರತಸಾವೂ ತಂದೆ ಜಗಬಂದುಸಾವೂ ವ|| 55 ವರ್ಷ ಜಾ|| ಕೀಸನ ಸಾ|| ವಿದ್ಯಾದರಪೂರ ಜಿ|| ಡೆನಕೊನಲ್ ರಾಜ್ಯ ಓಡಿಸಾ ಇತನು ನಮ್ಮ ಮನೆಯಲ್ಲಿಯೆ ಇದ್ದನು ಈತನು ಡಿ.ಪಿ ಜೈನ್ ಕಂಪನಿಯಲ್ಲಿ 3 ವರ್ಷಗಳಿಂದ ಕೆಲಸ ಮಾಡುತಿದ್ದನು. ನಮಗೆ ದಿನಾಲೂ ಅಡುಗೆ ಮಾಡುತಿದ್ದನು. ಈಗ ಸುಮಾರು 06 ತಿಂಗಳುಗಳಿಂದ ಶರತಸಾವೂ ಈತನ ಅಣ್ಣ ಮೃತಪಟ್ಟಿದ್ದರಿಂದ ತಮ್ಮೂರಿಗೆ ಹೋಗಿ ಮತ್ತೆ ಬಂದಿದ್ದನು ಶರತಸಾವೂ ಈತನಿಗೆ ಮದುವೆಯಾಗಿದ್ದು ಆದರೆ ಮಕ್ಕಳಾಗಿರುವದಿಲ್ಲ ಅಂತಾ ನಮಗೆ ಹೇಳುತಿದ್ದನು. ನಮ್ಮ ಅಣ್ಣ ಸತ್ತ ನನಗೆ ಮಕ್ಕಳಾಗಿಲ್ಲ ಅಂತಾ ಆಗಾಗ ಚಿಂತೆ ಮಾಡುತಿದ್ದನು. ಆಗ ನಾವು ಇರಲಿ ಬಿಡಪ್ಪಾ ನಮ್ಮ ಜೊತೆ ಆರಾಮಾಗಿರು ಅಂತಾ ಹೇಳುತಿದ್ದವು ಅದರಿಂದ ಆತನು ನಮ್ಮ ಜೊತೆ ಆರಾಮಾಗಿದ್ದನು.   ದಿನಾಂಕ: 24-05-2020 ರಂದು ನಾನು ಬೆಳಿಗ್ಗೆ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದು ಭಾನುವಾರ ಇದ್ದ ಕಾರಣ ಮದ್ಯಾಹ್ನ 02-50 ಗಂಟೆಗೆ ಮನೆಗೆ ಬಂದಾಗ ಶರತಸಾವೂ ಇತನು ನಮಗೆ ಅಡುಗೆ ಮಾಡಿರಲಿಲ್ಲ ಯಾಕೆ ಅಂತಾ ಕೇಳಿದಾಗ ನನಗೆ ಆರಾಮ ಇಲ್ಲ ಅಂತಾ ಹೇಳಿ ಮಲಗಿಕೊಂಡನು ಇರಲಿ ಬಿಡು ಅಂತಾ ಬೆಳಿಗ್ಗೆ  ಮಾಡಿದ ಊಟವನ್ನು ರಾತ್ರಿ ನಾವು ಬಿಸಿ ಮಾಡಿಕೊಂಡು ಊಟ ಮಾಡಿ ಮಲಗಿಕೊಂಡಿರುತ್ತೇವೆ ದಿನಾಂಕ: 25-05-2020 ರಂದು ಬೆಳಿಗ್ಗೆ 06-00 ಗಂಟೆಗೆ ನಾನು ಎದ್ದು ಮನೆಯಿಂದ ಹೊರಗೆ ಬರಬೇಕೆಂದರೆ ಮನೆಯ ಹೊರಗಿನ ಬಾಗಿಲು ಕೊಂಡಿ ಹಾಕಿದ್ದು ಆಗ ನಾನು ನಮ್ಮ ಮೇಲಿನ ಮಹಡಿಯಲ್ಲಿ ಇರುವ ರಾಯುಡು ಈತನಿಗೆ ಪೊನ್ ಮಾಡಿದಾಗ ಈತನು ಬಂದು ಮನೆಯ ಕೊಂಡಿಯನ್ನು ತೆರೆದನು ಆಗ ನಾನು ಹೊರಗೆ ಬಂದು ನೋಡಲಾಗಿ ಮನೆಯ ಮುಂದಿನ ಕಬ್ಬಿಣದ ಪೈಪಿಗೆ ಶರತಸಾವೂ ಈತನು ಯಾವಾಗಲೂ ತಾನು ಕೈ ಕಾಲು ಮುಖ ಒರೆಸಿಕೊಳ್ಳಲು ಬಳಸುವ ಟಾವೆಲ ಸುತ್ತಿಕೊಂಡು ಅದನ್ನು ಕಬ್ಬಿಣದ ಪೈಪಿಗೆ ಕಟ್ಟಿಕೊಂಡು ನೇಣು ಹಾಕಿಕೊಂಡು ಮೃತಪಟ್ಟಿದ್ದನು, ಈತನು ನೇಣನ್ನು ಬೆಳಿಗ್ಗೆ 05-00 ಗಂಟೆ ಅವಧಿಯಿಂದ 06-00 ಗಂಟೆ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವದು ಸಿಸಿ ಕ್ಯಾಮರದಲ್ಲಿ ನೋಡಿದ ನಂತರ ನನಗೆ ಗೊತ್ತಾಗಿರುತ್ತದೆ.  
      ಕಾರಣ ಶರತಸಾವೂ ಈತನು ತನ್ನ ಅಣ್ಣನ ಸಾವಿನ ಚಿಂತೆಯಲ್ಲಿ ಮತ್ತು ತನಗೆ ಮಕ್ಕಳಾಗದಿರುವದಿಲ್ಲ ಅಂತಾ ಮಾನಸಿಕವಾಗಿ ನೊಂದು ತನ್ನ ಟಾವೆಲದಿಂದ ಕುತ್ತಿಗೆ ಬಿಗಿದುಕೊಂಡು ನೇಣು ಹಾಕಿಕೊಂಡು ಮೃತಪಟ್ಟಿದ್ದು ಸದರಿಯವನ ಸಾವಿನಲ್ಲಿ ಯಾರ ಮೇಲೆ ಯಾವುದೇ, ಸಂಶಯ ಇರುವದಿಲ್ಲ ತಾವು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಅಂತ ಹೇಳಿಕೆ ನೀಡಿದ್ದು ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿನಿಂದ ಸೈದಾಪೂರ ಠಾಣೆ ಯು.ಡಿ.ಆರ್. ನಂ. 5/2020 ಕಲಂ. 174 ಸಿ.ಆರ್.ಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 142/2020 ಕಲಂ 279,337,338  ಐಪಿಸಿ ಸಂ.187 ಐ.ಎಂ.ವಿ ಕಾಯ್ದೆ:- ಇಂದು ದಿನಾಂಕ:25/05/2020 ರಂದು 4 ಪಿ.ಎಂ. ಕ್ಕೆ ಠಾಣೆಯಎಸ್ಹೆಚ್ಡಿಕರ್ಥವ್ಯದಲ್ಲಿರುವಾಗ ಶ್ರೀ ಶ್ರೀ ಮರೆಪ್ಪತಂದೆ ಸೋಪಣ್ಣ ಬನ್ನೆಟ್ಟಿ ವಯಾ:55 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಬೈರಿಮಡ್ಡಿಇವರುಠಾಣೆಗೆ ಹಾಜರಾಗಿಒಂದುಗಣಕಯಂತ್ರದಲ್ಲಿಟೈಪ  ಮಾಡಿಸಿದ ದೂರುಅಜರ್ಿ ನಿಡಿದ್ದು ಸಾರಾಂಶವೆನೆಂದರೆಮೊನ್ನೆ ದಿನಾಂಕ:23-05-2020 ರಂದು ನಮ್ಮ ಮಾವನಾದ ಸಿದ್ದಪ್ಪ ತಂದೆ ಮಲ್ಲಪ್ಪ ಮಗ್ಗದವರಈತನುಅಪಘಾತದಲ್ಲಿಗಾಯಹೊಂದಿ ಸರಕಾರಿಆಸ್ಪತ್ರೆ ಸುರಪೂರದಲ್ಲಿಉಪಚಾರ ಪಡೆಯುತ್ತಿದ್ದು, ನಾನು ಅವನಿಗೆ ಮಾತನಾಡಿಸಲು ಸುರಪೂರ ಸರಕಾರಿಆಸ್ಪತ್ರೆಗೆ ಬಂದುಆಸ್ಪತ್ರೆಯಲ್ಲಿದ್ದೆನು. ಅಂದೆ ಸಾಯಂಕಾಲ ಅಂದಾಜು 07-45 ಗಂಟೆ ಸುಮಾರಿಗೆಆಸ್ಪತ್ರೆಯಲ್ಲಿರುವಾಗ ನಮ್ಮೂರ ಹೊನ್ನಪ್ಪತಂದೆ ಬೀಮಪ್ಪ ಸವಳಪಟ್ಟಿ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಿಮ್ಮ ಮಗನಾದ ಪರಶುರಾಮ ಹಾಗೂ ನಿಮ್ಮ ಅಳಿಯ ಮಲ್ಲಪ್ಪತಂದೆ ನಿಂಗಪ್ಪ ಗೋಸಿ ಇವರು ಮೊಟಾರ ಸೈಕಲ್ ನಂಬರ ಕೆಎ-04 ಹೆಚ್ಆರ್-3219 ನೇದ್ದರ ಮೇಲೆ ಸಾಯಂಕಾಲ 07-30 ಗಂಟೆ ಸುಮಾರಿಗೆ ಸುರಪೂರಕಡೆಗೆ ಬರುತ್ತಿರುವಾಗ ಬೈರಿಮಡ್ಡಿಕ್ರಾಸದ ನಾಗಪ್ಪ ಮಾಸ್ತರಇವರ ಹೊಲದ ಹತ್ತಿರರೋಡಿನಲ್ಲಿಟ್ಯಾಕ್ಟರ ನಂಬರ ಕೆಎ-33 ಟಿ-4244 ನೇದ್ದರಚಾಲಕನಾದದೇವಪ್ಪತಂದೆ ಬಗವಂತಪ್ಪ ಬನ್ನೆಟ್ಟಿಈತನುತನ್ನಟ್ಯಾಕ್ಟರಇಂಜಿನದ ಹಿಂದುಗಡೆ ಹೊಲ ಲೇವಲ್ ಮಾಡುವ ಬ್ಲೆಡ್ ಹಾಕಿಕೊಂಡುಟ್ಯಾಕ್ಟರನನುಅತೀ ವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಎದುರಿನಿಂದ ಬಂದವನೆ ನಿಮ್ಮ ಮಗನ ಮೊಟಾರ ಸೈಕಲ್ಗೆಡಿಕ್ಕಿ ಪಡಿಸಿದಾಗ ಮೊಟಾರ ಸೈಕಲ್ ಸಮೇತ ನಿನ್ನ ಮಗ ಮತ್ತು ಅಳಿಯ ರಸ್ತೆಯ ಮೇಲೆ ಬಿದ್ದಿದ್ದು, ಅದೇ ಸಮಯಕ್ಕೆಅಲ್ಲೆ ಹೋಗುತ್ತಿದ್ದ ನಾನು ಘಟನೆಯನ್ನು ನೋಡಿಇಬ್ಬರನ್ನು ಎಬ್ಬಿಸಿ ನೋಡಲು ಮೊಟಾರ ಸೈಕಲ್ ಹಿಂದುಗಡೆ ಕುಳಿತಿದ್ದ ನಿಮ್ಮ ಮಗ ಪರಶುರಾಮಈತನಿಗೆಬಲಗಾಲ ತೊಡೆಯ ಹತ್ತಿರ ಹಾಗೂ ಮೊಳಕಾಲ ಕೆಳಗಡೆ ಮುರಿದಂತಾಗಿ ಭಾವು ಬಂದಿದ್ದು ಮೊಟಾರ ಸೈಕಲ್ಚಲಾಯಿಸುತ್ತಿದ್ದ ನಿಮ್ಮ ಅಳಿಯ ಮಲ್ಲಪ್ಪತಂದೆ ನಿಂಗಪ್ಪ ಗೋಸಿ ಈತನ ಬಲಗಾಲ ಮೊಳಕಾಲ ಕೆಳಗಡೆ ಮತ್ತು ಪಾದದ ಹತ್ತಿರ ಎಲುಬು ಮುರಿದಂತಾಗಿ ಬಾವು ಬಂದಿದ್ದು ಮೂಗು ಬಾಯಿ ಹತ್ತಿರತೆರಚಿದರಕ್ತಗಾಯ ವಾಗಿದ್ದುಟ್ಯಾಕ್ಟರಚಾಲಕನಾದದೇವಪ್ಪಈತನುತನ್ನಟ್ಯಾಕ್ಟರನ್ನುತಗೆದುಕೊಂಡು ಹೋಗಿದ್ದು ಬೇಗ ಬನ್ನಿರಿಅಂತಾ ಪೋನ ಮಾಡಿ ವಿಷಯ ತಿಳಿಸಿದಾಗ ನಾನು ನಮ್ಮಅಣ್ಣನ ಮಗನಾದ ಬಲಬೀಮ ತಂದೆ ಬಸಣ್ಣ ಬೊಮ್ಮನಳ್ಳಿ, ಗ್ರಾಮದ ಅಶೋಕ ತಂದೆ ಮಲ್ಲಿಕಾಜರ್ುನ ಕೊಳ್ಳುರ, ಮಲ್ಲಿಕಾಜರ್ುನತಂದೆಚಿನ್ನಪ್ಪಕುರಿ, ಎಲ್ಲರೂಕೂಡಿಘಟನಾ ಸ್ಥಳಕ್ಕೆ ಹೋಗಿ ನೋಡಲು ಮೊಟಾರ ಸೈಕಲ್ಜಖಂಗೊಂಡಿದ್ದು, ಮಗನಾದ ಪರಶುರಾಮ ಮತ್ತು ಅಳಿಯನಾದ ಮಲ್ಲಪ್ಪಇಬ್ಬರಿಗೂ ನೋಡಲು ಮೇಲೆ ಹೇಳಿದಂತೆ ಗಾಯಗಳಾಗಿದ್ದವು, ನಂತರಗಾಯಗೊಂಡ ಮಗ ಮತ್ತು ಅಳಿಯ ಇಬ್ಬರನ್ನು 108 ಅಂಬುಲೇನ್ಸ ವಾಹನಕ್ಕೆ ಪೋನ ಮಾಡಿ ಸ್ಥಳಕ್ಕೆ ಕರೆಯಿಸಿ ಉಪಚಾರಕುರಿತು ಸರಕಾರಿಆಸ್ಪತ್ರೆ ಸುರಪೂರದಲ್ಲಿ ಸೇರಿಕೆ ಮಾಡಿಉಪಚಾರ ಮಾಡಿಸಿ ವೈಧ್ಯಾಧಿಕಾರಿಗಳ ಸಲಹೇ ಮೇರೆಗೆ ಹೆಚ್ಚಿನಉಪಚಾರಕುರಿತು ಶಹಾಪೂರದ ಸ್ಪಂದನಾ ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿಇಂದುಠಾಣೆಗೆತಡವಾಗಿ ಬಂದು ಪಿಯರ್ಾಧಿ ನಿಡಿದ್ದುಇರುತ್ತದೆ. ಸದರಿಘಟನೆಯುಟ್ಯಾಕ್ಟರಚಾಲಕನಾದದೇವಪ್ಪಈತನುತನ್ನಟ್ಯಾಕ್ಟರನ್ನುಅತೀ ವೇಗ ಮತ್ತುಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಅಳಿಯ ಕುಳಿತುಕೊಂಡು ಹೊರಟಿದ್ದ ಮೋಟಾರ ಸೈಕಲ್ಗೆಎದುರಿನಿಂದಡಿಕ್ಕಿ ಪಡಿಸಿದ್ದರಿಂದ ಸಂಬವಿಸಿದ್ದು, ಟ್ಯಾಕ್ಟರಚಾಲಕನಾದದೇವಪ್ಪ ಬನ್ನೆಟ್ಟಿಈತನ ಮೇಲೆ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡಲು ವಿನಂತಿಅಂತಾಅಜರ್ಿ ಸಾರಾಂಶದ ಮೇಲಿಂದಠಾಣಾಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 12/2020 ಕಲಂ. 174  ಸಿಆರ್ಪಿಸಿ:-      ಇಂದು ದಿನಾಂಕ:25/05/2020 ರಂದು 10:40 ಎ.ಎಮ್ ಕ್ಕೆ ಪಿಯರ್ಾಧಿದಾರಳಾದ ಶ್ರೀಮತಿ ಭೀಮವ್ವ ಗಂಡ ನಂದಪ್ಪ  ಸಾ:ಹುಣಸಿಹೊಳೆ ಇವರ ಹೇಳಿಕೆಯ ಸಾರಾಂಶವೆನೆಂದರೆ ನಮಗೆ 4 ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿದ್ದು ಅದರಲ್ಲಿ ಇಬ್ಬರು ಗಂಡು ಮಕ್ಕಳಿಗೆ ಮದುವೆ ಮಾಡಿರುತ್ತೆವೆ. ಹೆಣ್ಣು ಮಗಳಿಗೆ ಮಲ್ಕಾಪೂರಕ್ಕೆ ಕೊಟ್ಟು ಮದುವೆ ಮಾಡಿರುತ್ತೆವೆ. ನಾಲ್ಕನೇ ಮಗನಾದ ಪರಶುರಾಮ ಈತನು ಹೊಲಮನೆ ಕೆಲಸ ಅವನೆ ಮಾಡಿಕೊಂಡು ಹೋಗುತ್ತಿದ್ದನು. ಈಗ ಬೆಸಿಗೆಯಿದ್ದ ಕಾರಣ ಎಲ್ಲಾ ಹೊಲಗಳನ್ನು ಮಡಕಿ ಮತ್ತು ನೆಗಲಿ ಹೊಡೆಯುತ್ತಿದ್ದನು. ಅದರಂತೆ ಇಂದು ಮುಂಜಾನೆ ಅವರ ತಂದೆಯೊಂದಿಗೆ ಪಾಳಿಗೆ ಮಾಡಿದ ಹೊಲ ಸವರ್ೆ ನಂ. 72 ನೇದ್ದನ್ನು ರಾಮಪ್ಪ ತಂದೆ ನಡುಗೆರಪ್ಪ ಕಟ್ಟಿಮನಿ ಸಾ:ಹುಣಸಿಹೊಳೆ ಇವರ ಹೊಲಕ್ಕೆ ಟ್ರ್ಯಾಕ್ಟರ ತೆಗೆದುಕೊಂಡು ಸಂಗಡ ನಿಂಗಣ್ಣ ಹಂಗರಸಿ ಸಾ:ಹುಣಸಿಹೊಳೆ ಇವರನ್ನು ಕರೆದುಕೊಂಡು ಬೆಳಿಗ್ಗೆ 6 ಗಂಟೆ ಸುಮಾರಿಗೆ ಹೋಗಿರುತ್ತಾರೆ. ಟ್ರ್ಯಕ್ಟರನಿಂದ ನೆಗಲಿ ಹೊಲ ತುಂಬಾ ಹೊಡೆದು ದಂತೆಯಲ್ಲಿ ಹೊಡೆಯುವಾಗ ಸವರ್ೆ ನಂ. 72/3 ರ ಹೊಲಕ್ಕೆ ಬೋರವೆಲ ಮೋಟರ ಸಲುವಾಗಿ ಪರಮಣ್ಣ ತಂದೆ ಶಿವಲಿಂಗಪ್ಪ ಮುರಡಿಗುರು ಇವರು ಕರೆಂಟ ಸವರ್ಿಸ್ ವೈರ ತೆಗೆದುಕೊಂಡಿರುತ್ತಾರೆ. ಸದರಿ ಸವರ್ಿಸ್ ವೈರನ್ನು ಬೆಳಿಗ್ಗೆ 9:30 ಗಂಟೆ ಸುಮಾರಿಗೆ ಬಾರಿ ಗಾಳಿ ಬಿಸಿದ್ದರಿಂದ ಗಾಳಿಗೆ ಸವರ್ಿಸ್ ವೈರ್ ಹರಿದು ಆಕಸ್ಮಿಕವಾಗಿ ಟ್ರ್ಯಾಕ್ಟರ ಮೇಲೆ ಬಿದ್ದಿರುತ್ತದೆ. ಆದ್ದರಿಂದ ಟ್ರ್ಯಾಕ್ಟರ ನಡೆಸುತ್ತಿದ್ದ ಪರಶುರಾಮ ಈತನು ಕರೆಂಟ ಶಾಖ ಹೊಡೆದ ಪರಿಣಾಮದಿಂದ ಮೃತ ಪಟ್ಟಿರುತ್ತಾನೆ. ನನ್ನ ಮಗನ ಸಾವಿನಲ್ಲಿ ಯಾರ ಮೇಲೆ ಸಂಶಯ ವಗೈರೆ ಇರುವದಿಲ್ಲ ಅಂತ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.12/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 64/2020 ಕಲಂ 341, 323, 504, 506 ಸಂ 34 ಐಪಿಸಿ:-ದಿನಾಂಕ 25/05/2020 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾಧಿದಾರನು ಮತ್ತು ಅವನ ತಮ್ಮ ಇಬ್ಬರೂ ಹಾಗೂ ತಾಂಡಾದವರು ಮಾಣಿಕ ರಾಠೋಡ ಇವನ ಹೊಲದ ಹತ್ತಿರ ಹೊಸ ರೋಡ ಮಾಡುವ ಸಂಬಂಧ ಗಲಾಟೆಯಾಗುವದನ್ನು ನೋಡುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಫಿರ್ಯಾಧಿದಾರನ ಜೋತೆಗೆ ಜಗಳ ತೆಗೆದು ಈ ಹಿಂದೆ ನಾನು ರೋಡ ಮಾಡಿಸುವದನ್ನು ಹೇಗೆ ನಿಲ್ಲಿಸಿದ್ದೆನೆ, ನೀವು ಮಾಡಿದ್ದಿರಿ ನನಗೆ ಏ ಚೋದು ಸೂಳೇ ಮಗನೇ ಅಂತಾ ಅವಾಚ್ಯವಾಗಿ ಬೈದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಒದ್ದು ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 89/2020 ಕಲಂ: 188,353,323,504,506  ಸಂ 34 ಐಪಿಸಿ:- ಇಂದು ದಿನಾಂಕ 25/05/2020 ರಂದು 10.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಶರಣಗೌಡ ತಂದೆ ಬಸನಗೌಡ ಉಳ್ಳೆಸುಗೂರ ವಯಸ್ಸು||39 ಜಾ|| ಹಿಂದೂ ರಡ್ಡಿ ಉ|| ಮುದನೂರ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಸದ್ಯ ಕೋವಿಡ್ -19 ನಿಮಿತ್ಯ ಮುದನೂರ[ಕೆ] ಗ್ರಾಮದ ಸರಕಾರಿ ಪ್ರೌಢ ಶಾಲೆಯ ಕ್ವಾರಂಟೈನ  ಪ್ರಭಾರಿ ಸಾ|| ರಾಜನಕೋಳೂರ ತಾ|| ಹುಣಸಗಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನೆಂದರೆ, ನಾನು ದಿನಾಂಕ 17.05.2020 ರಂದು ಪ್ರಾರಂಭವಾದ ಮುದನೂರ [ಕೆ] ಗ್ರಾಮದ ಕ್ವಾರೈಂಟನ್ ಪ್ರಭಾರಿಯಾಗಿ ಕರ್ತವ್ಯ  ನಿರ್ವಹಿಸಿಕೊಂಡು ಬರುತ್ತಿದ್ದೇನೆ. ನಾನು ನನ್ನ ಕರ್ತವ್ಯದಲ್ಲಿದ್ದಾಗ ಮುದನೂರ ಗ್ರಾಮದ 1] ಅಜಯಕುಮಾರ ತಂದೆ ರಾಜುಗೌಡ ಪಾಟೀಲ 2] ಶರಣು ತಂದೆ ಮಹಾದೇವಪ್ಪ ಯಾಳಗಿ ಈ ಎರಡು ಜನರು ದಿನಾಲು ನಮ್ಮ ಕ್ವಾರಂಟೈನ್ ಕೇಂದ್ರಕ್ಕೆ ಬರುವದು ಹಾಗು ಎಲ್ಲರೂ ಮಲಗಿಕೊಂಡಾಗ ಜನರ ಫೊಟೋ ತೆಗೆದು ನಮ್ಮ ಮೇಲಾಧಿಕಾರಿಗಳಿಗೆ ಕಳುಹಿಸುವದು ಮಾಡುತ್ತಿದ್ದು ನಾನು ಸದರಿಯವರಿಗೆ ಕರೆದು ಈ ರೀತಿ ಮಾಡುವದು ಸರಿ ಅಲ್ಲ ಏನಾದರೂ ಇದ್ದರೆ ನನಗೆ ತಿಳಿಸಿರಿ ಅಂತ ಅಂದಾಗ ಸದರಿ ಎರಡು ಜನರು ನಿನಗೆ ಬಿಡುವದಿಲ್ಲ ಅಂತ ನನ್ನೊಂದಿಗೆ ತಕರಾರು ಮಾಡಿ ಹೋಗಿರುತ್ತಾರೆ ನಾನು ಈ ವಿಷಯವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ: 25/05/2020 ರಂದು ಮುಂಜಾನೆ 10.30 ಗಂಟೆಗೆ ನಾನು ನನ್ನ ಕರ್ತವ್ಯದ ಮೇಲೆ ಮುದನೂರ ಕ್ವಾರಂಟೈನದಲ್ಲಿದ್ದಾಗ ಮುದನೂರ ಗ್ರಾಮದ 1] ಅಜಯಕುಮಾರ ತಂದೆ ರಾಜುಗೌಡ ಪಾಟೀಲ 2] ಶರಣು ತಂದೆ ಮಹಾದೇವಪ್ಪ ಯಾಳಗಿ ಈ ಎರಡು ಜನರು ನಮ್ಮ ಕ್ವಾರಂಟೈನಗೆ ಬಂದು ಏನಲೇ ಬೋಸಡಿ ಮಗನೇ ನೀನು ಜನರಿಗೆ ಸರಿಯಾದ ಊಟ ಕೊಡುವದಿಲ್ಲ ನಿನಗೆ ತಿಳಿದ ಹಾಗೆ ನೌಕರಿ ಮಾಡುತ್ತೀಯಾ ಅಂತ ಅನ್ನುತ್ತಿದ್ದಾಗ ನನಗೆ ಕೇಳುವರು ನೀವು ಯಾರು ನಿಮಗೆ ಏನಾದರೂ ಬೇಕಾದರೆ ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಅಂತ ಅಂದಾಗ ಸದರಿ ಎರಡು ಜನರು ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯ್ದು ಮಗನೇ ಮುಂದೆ ನಮ್ಮ ಊರಲ್ಲಿ ನೀನು ಹೇಗೆ ನೌಕರಿ ಮಾಡುತ್ತೀ ನೋಡೋಣ ಅಂತ ಅನ್ನುತ್ತಾ ಇಬ್ಬರೂ ನನಗೆ ದಬ್ಬಾಡಿ ನನ್ನ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದು ಆಗ ಅಲ್ಲಿಯೇ ನನ್ನ ಜೊತೆ ಕರ್ತವ್ಯದಲ್ಲಿದ್ದ  ನಮ್ಮ ಸಿಬ್ಬಂದಿಯವರಾದ ಮಲ್ಲಿಕಾಜರ್ುನ ಬಿಲ್ ಕಲೆಕ್ಟರ್ ಹಾಗು ಬೈಲಪ್ಪ ಬಿಲ್ ಕಲೆಕ್ಟರ್ ಮತ್ತು ಕಾಶಿನಾಥ ಪಂಪ ಆಫರೇಟರ್ ಇವರು ಬಂದು ಸದರಿಯವರಿಗೆ ತಿಳಿಸಿ ಕಳುಹಿಸಿಕೊಟ್ಟಿರುತ್ತಾರೆ. ನಂತರ ಸದರ ಎರಡು ಜನರು ಮಗನೇ ಊರಲ್ಲಿ ನೀನು ಹೇಗೆ ನೌಕರಿ ಮಾಡುತ್ತೀ ನಾವು ನೋಡುತ್ತೇವೆ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾನು ಸದರ ವಿಷಯವನ್ನು ಮಾನ್ಯ ತಹಸೀಲ್ದಾರರು ಹುಣಸಗಿ ರವರಲ್ಲಿ ತಿಳಿಸಿ ತಡವಾಗಿ ಬಂದು ಈ ದೂರ ಅಜರ್ಿ ನೀಡಿದ್ದು ಕಾರಣ ನನ್ನ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿ ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದ ಮೇಲ್ಕಾಣಿಸಿದ ಎರಡು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 89/2020 ಕಲಂ 188,353,323,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!