ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/05/2020

By blogger on ಮಂಗಳವಾರ, ಮೇ 26, 2020                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/05/2020 
                                                                                                               

ಕೋಡೆಕಲ್ ಪೊಲೀಸ ಠಾಣೆ ಗುನ್ನೆ ನಂ:- 44/2020 ಕಲಂ: 143 147 148 447 323  324 504 506 ಖ/ತಿ 149 ಐಪಿಸಿ:- ಕೇಸಿನ ಸಂಕ್ಷಿಪ್ತ ಸಾರಾಂಶ:- ಇಂದು ದಿನಾಂಕ:24.05.2020 ರಂದು ಸಾಯಂಕಾಲ 7:00 ಗಂಟೆಗೆ  ಪಿರ್ಯಾಧಿ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಠಾಣೆಯಲ್ಲಿ ತನ್ನ ಪಿಯರ್ಾದಿ ಹೇಳಿಕೆಯನ್ನು ಹೇಳಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೆಂದರೆ, ಪಿರ್ಯಾದಿಯ ತಂದೆ ತಾಯಿಗೆ ಬಸಣ್ಣ ಪೂಜಪ್ಪ ನಾನು ಮತ್ತು ರಮೇಶ ಅಂತಾ ನಾಲ್ಕು ಜನ ಗಂಡು ಮಕ್ಕಳೀದ್ದು ನಮ್ಮ ನಾಲ್ಕು ಜನರದ್ದು ಮದುವೆ ಯಾಗಿದ್ದು ಬೇರೆ ಬೇರೆ ಮನೆ ಮಾಡಿಕೊಂಡು ಇದ್ದು ಕಕ್ಕೆರಾ ಸಿಮಾಂತರದಲ್ಲಿ ಸವರ್ೆ ನಂ 689 ರಲ್ಲಿ ನಮ್ಮದು ಒಂದು ಜಮಿನು ಇದ್ದು ನಮ್ಮ ಹೋಲದ ಹೆಸರು "ಕೆಂದೊಡ್ಡ" ಹೋಲ ಅಂತಾ ಇದ್ದು ಈ ಜಮಿನಿನಲ್ಲಿಯೆ ನಾವು ಮನೆ ಕಟ್ಟಿಕೊಂಡು ಇದ್ದು ನಮ್ಮ ದೊಡ್ಡಿಗೆ ಬಂದೊಡ್ಡಿರವರ ದೊಡ್ಡಿ ಅಂತ ಕರೆಯುತ್ತಿದ್ದು, ಆರೋಪಿತರ ಹೊಲದಲ್ಲಯ ಲೈಟಿನ ಕಂಬಗಳ ತಂತಿಗೆ ಪಕ್ಕದ ಗೀಡಗಳ ಟೊಂಗೆಗಳು ತಾಗಿದ್ದು ಮಳೆಗಾಲ ಬಂದರೆ ತಂತಿಗಳಿಗೆ ಗೀಡದ ಟೊಂಗೆಗಳು ತಾಗಿ ಕರೆಂಟು ನೆಲದೊಳಗೆ ಬರಬಹುದು ಮಕ್ಕಳುಮರಿ ತಿರುಗಾಡುತ್ತವೆ ಮುಂದೆ ಯಾವುದೆ ಅಪಾಯವಾಗಬಾರದೆಂದು ಅವರು ನಮಗೆೆ ಲೈಟಿನ ಕಂಬಗಳ ಹತ್ತಿರ ಇರುವ ಗೀಡಗಳ ಟೊಂಗೆಗಳನ್ನು ಕಡೆದುಕೊಳ್ಳುವಂತೆ ಈಗ ಎರಡು ಮೂರು ದಿವಸಗಳ ಹಿಂದೆ ತಿಳಿಸಿದ್ದು ನಾವು ಅವರಿಗೆ ಆಯಿತು ಇನ್ನು ಎರಡು-ಮೂರು ದಿನಗಳಲ್ಲಿ ಕಡೆಯುತ್ತೆವೆ ಅಂತಾ ತಿಳಿಸಿದ್ದು ಇದ್ದು ಇಂದು ದಿನಾಂಕ 24.05.2020 ರಂದು ನಾನು ನಮ್ಮ ಹೋಲದಲ್ಲಿಯ ಕರೆಂಟ್ ಕಂಬಗಳ ಹತ್ತಿರದ ಗಿಡಗಳ ಟೊಂಗೆಗಳನ್ನು ಬೆಳಗ್ಗೆ 11:00 ಗಂಟೆಯ ಸುಮಾರಿಗೆ ಕಡೆಯುತ್ತಿದ್ದಾಗ ನಮಗೆ ಬಿಗರಾಗಬೇಕಾದ ಗುರಿಕಾರ ದೊಡ್ಡಿಯ ಭೀಮಣ್ಣ ತಂದೆ ಹಣಮಂತ್ರಾಯ ಗುರಿಕಾರ ಹಾಗೂ ಆರೋಪಿತರು ಇವರೆಲ್ಲರೂ ಗುಂಪಾಗಿ ನಮ್ಮ ಹೋಲದೋಳಗೆ ಅತೀ ಕ್ರಮ ಪ್ರವೇಶ ಮಾಡಿ ನಾನು ಗಿಡಕಡಿಯುವಲ್ಲಿಗೆ ಬಂದವರೆ ನನಗೆ ಸೂಳೆಮಗನೆ ನಮ್ಮ  ಹೊಲದಲ್ಲಿಯ ಲೈಟಿನ ಕಂಬಗಳ ಹತ್ತಿರದ ಗೀಡಗಳ ಟೊಂಗೆಗಳನ್ನು ಕಡಿದುಕೊಳ್ಳಿರಿ ಅಂತ ನಿಮಗೆ ಹೇಳಿದರೆ ನೀವು ನಿಮ್ಮ ಹೋಲದಲ್ಲಿಯ ಗಿಡಗಳ ಟೊಂಗೆ ಗಳನ್ನು ಕಡೆಯುತ್ತಿರಿ ಮಕ್ಕಳೆ ನಿಮ್ಮ ಸೊಕ್ಕು ಬಹಳ ಆಗಿದೆ ಇವತ್ತು ನಿಮಗೆ ಒಂದು ಗತಿ ಕಾಣಿಸುತ್ತೆವೆ ನಿನಗೆ ಬಿಡವದಿಲ್ಲ ಅಂತ ಬೈದವರೆ ಕಲ್ಲಿನಿಂದ ಹೋಡೆದು ಕಂದು ಗಟ್ಟಿದ ಘಾಯ ಪಡಿಸಿದ್ದು ಕುಡುಗೋಲಿನಿಂದ ನನ್ನ ತಲೆಯ ಹಿಂಬಾಜುವಿಗೆ ಹೊಡೆದು ರಕ್ತ ಘಾಯ ಪಡಿಸಿದ್ದು ಆಗ ನನಗೆ ಹೊಡೆಯುವದನ್ನು ನೋಡಿ ಅಲ್ಲಿಯೆ ಹೋಲದಲ್ಲಿದ್ದ ನನ್ನ ತಂದೆ ಚಂದಪ್ಪ ರವರು ಬಿಡಿಸಲು ಬಂದಾಗ ನನ್ನ ತಂದೆಗೆ ಹಣಮಂತ ಗುರಿಕಾರ ಈತನು ತೆಕ್ಕಿಗೆ ಬಿದ್ದು ನೇಲಕ್ಕೆ ಕೆಡವಿದ್ದು ನನ್ನ ತಂದೆಯು ನೆಲಕ್ಕೆ ಬಿದ್ದಾಗ ಹಣಮವ್ವ ಅಲ್ಲಿಯೆ ಬಿದ್ದಿದ್ದ ಕಲ್ಲನ್ನು ತಗೆದುಕೊಂಡು ಎದೆಯ ಮೇಲೆ ಗುದ್ದಿ ಒಳಪೆಟ್ಟು ಮಾಡಿದ್ದು ಆಗ ನಾನು ಮತ್ತು ನನ್ನ ತಂದೆ ನಮ್ಮನ್ನು ಉಳಿಸಿರಪ್ಪೊ ಅಂತಾ ಚಿರಾಡಲು ನಮ್ಮ ಹೋಲದ ಪಕ್ಕದ ಹೋಲಗಳಲ್ಲಿಯ ಇದ್ದ ಸೋಮಣ್ಣ ಹಣಮಂತ ಇವರುಗಳು ಬಂದು ನೋಡಿ ನಮಗೆ ಹೊಡಿಯುದನ್ನು ಬಿಡಿಸಿದ್ದು ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವದ ಬೇದರಿಕೆ ಹಾಕಿ ಹೊಗಿದ್ದು ಕಾರಣ ನನಗೆ ಮತ್ತು ನನ್ನತಂದೆಗೆ ಅವಾಚ್ಯ ಶಬ್ಧಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಆರೋಪಿತರ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:44/2020 ಕಲಂ: 143 147 148 447 323  324 504 506 ಖ/ಘ 149 ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು   


ಕೋಡೆಕಲ್ ಪೊಲೀಸ ಠಾಣೆ ಗುನ್ನೆ ನಂ:- 43/2020 ಕಲಂ: 143 147 148  323  324 504 506 ಖ/ತಿ 149 ಐಪಿಸಿ:-ಇಂದು ದಿನಾಂಕ:24.05.2020 ರಂದು ಮದ್ಯಾಹ್ನ 1:00 ಪಿಎಮ್ ಕ್ಕೆ  ಪಿರ್ಯಾಧಿ ಶ್ರೀ ಭೀಮಣ್ಣ ತಂದೆ ಹಣಮಂತ್ರಾಯ ಗುರಿಕಾರ ವ:65 ವರ್ಷ ಉ:ಒಕ್ಕಲುತನ ಜಾ:ಹಿಂದೂ ಬೇಡರ ಸಾ: ಅಂಬಾನಗರ ಹತ್ತಿರ ಗುರಿಕಾರದೊಡ್ಡಿ ಕಕ್ಕೆರಾ ತಾ:ಸುರಪುರ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಠಾಣೆಯಲ್ಲಿ ತನ್ನ ಪಿಯರ್ಾದಿ ಹೇಳಿಕೆಯನ್ನು ಹೇಳಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೆಂದರೆ, ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ, ಮಗ, ಸೊಸೆಯೊಂದಿಗೆ ಉಪಜೀವಿಸುತ್ತೇನೆ ಕಕ್ಕೆರಾ ಸಿಮಾಂತರದಲ್ಲಿ ಸವರ್ೆ ನಂ 687 ರಲ್ಲಿ ನನ್ನದು 4 ಎಕರೆ 15 ಗುಂಟೆ ಜಮಿನು ಇದ್ದು ಈ ಜಮಿನಿನಲ್ಲಿಯೆ ನಾನು ಮನೆ ಕಟ್ಟಿಕೊಂಡು ಇದ್ದು ನಮ್ಮ ದೊಡ್ಡಿಗೆ ಗುರಿಕಾರದೊಡ್ಡಿ ಅಂತ ಕರೆಯುತ್ತಿದ್ದು, ನಮ್ಮ ಈ ಹೊಲಕ್ಕೆ ಹೊಂದಿಯೇ ಪೂರ್ವಕ್ಕೆ ನಮಗೆ ಬೀಗರಾಗಬೇಕಾದ ಚಂದಪ್ಪ ತಂದೆ ರಾಮಯ್ಯ ಬಂದೊಡ್ಡಿ ರವರ  ಜಮಿನು ಇದ್ದು ಅವರು ಕೂಡ ತಮ್ಮ ಹೊಲದಲ್ಲಿಯೆ ಮನೆ ಮಾಡಿಕೊಂಡು ಇದ್ದು ಅವರ ದೊಡ್ಡಿಗೆ ಬಂದೊಡ್ಡಿರವರ ದೊಡ್ಡಿ ಅಂತ ಕರೆಯುತ್ತಿದ್ದು ನಮ್ಮ ಹೊಲದಲ್ಲಿಂದಲೆ ನಮ್ಮ ಬಿಗರಾಗಬೇಕಾದ ಚಂದಪ್ಪ ಬಂದೊಡ್ಡಿರವರ ಮನೆಗೆ ಲೈಟಿನ ಕಂಬ ಹಾಕಿ ಕರೆಂಟು ತೆಗೆದುಕೊಂಡಿದ್ದು ಇರುತ್ತದೆ. ನಮ್ಮ ಹೊಲದಲ್ಲಯ ಲೈಟಿನ ಕಂಬಗಳ ತಂತಿಗೆ ಪಕ್ಕದ ಗೀಡಗಳ ಟೊಂಗೆಗಳು ತಾಗಿದ್ದು ಮಳೆಗಾಲ ಬಂದರೆ ತಂತಿಗಳಿಗೆ ಗೀಡದ ಟೊಂಗೆಗಳು ತಾಗಿ ಕರೆಂಟು ನೆಲದೊಳಗೆ ಬರಬಹುದು ಮಕ್ಕಳುಮರಿ ತಿರುಗಾಡುತ್ತವೆ ಮುಂದೆ ಯಾವುದೆ ಅಪಾಯವಾಗಬಾರದೆಂದು ನಾನು ಚಂದಪ್ಪನಿಗೆ ಲೈಟಿನ ಕಂಬಗಳ ಹತ್ತಿರ ಇರುವ ಗೀಡಗಳ ಟೊಂಗೆಗಳನ್ನು ಕೆಇಬಿಯವರಿಗೆ ಹೇಳಿ ಕಡಿಸಿ ಅಥವಾ ನೀವೆ ಕಡೆದುಕೊಳ್ಳಿರಿ ಅಂತ ನಿನ್ನೆ ದಿನ ನಾನು ಹೇಳಿದ್ದೆನು. 
      ಹೀಗಿದ್ದು ಇಂದು ದಿನಾಂಕ 24.05.2020 ರಂದು ನಾನು ನನ್ನ ಮಗ ಹಣಮಂತ ತಂದೆ ಭೀಮಣ್ಣ ಗುರಿಕಾರ ಇತನೊಂದಿಗೆ ನಮ್ಮ  ಹೊಲದಲ್ಲಿ ಬದುವಿನ ಮೇಲಿನ ಮುಳ್ಳುಕಂಟಿ ಕಡಿಯುತ್ತಿರುವಾಗ ಬೆಳಿಗ್ಗೆ 10:30 ಗಂಟೆ ಸುಮಾರಿಗೆ ನನಗೆ ಬೀಗರಾಗಬೇಕಾದ ಚಂದಪ್ಪ ತಂದೆ ರಾಮಯ್ಯ ಬಂದೊಡ್ಡಿ ಮತ್ತು ಆತನ ಹೆಂಡತಿ ಪರಮವ್ವ ಗಂಡ ಚಂದಪ್ಪ ಬಂದೊಡ್ಡಿ ಮಗಳಾದ ಶಾಂತಮ್ಮ ಗಂಡ ಹಣಮಂತ ಸಾ.ಹುಡಾ ಮಗನಾದ ಹಣಮಂತ ತಂದೆ ಚಂದಪ್ಪ ಬಂದೊಡ್ಡಿ ಹಾಗೂ ಅವರ ಅಳಿಯನಾದ ಹಣಮಂತ ತಂದೆ ದುರ್ಗಪ್ಪ ಸಾ.ಹುಡಾ ಇವರೊಂದಿಗೆ ಗುಂಪಾಗಿ ಅಕ್ರಮವಾಗಿ ನಮ್ಮ ಹೊಲದೊಳಗೆ ಬಂದವರೆ ನಮ್ಮ ಹತ್ತಿರ ಬಂದು ನನಗೆ ಮತ್ತು ನನ್ನ ಮಗ ಹಣಮಂತನಿಗೆ ಬೊಸಡಿ ಮಕ್ಕಳೆ ನಮಗೆ ನಿಮ್ಮ ಹೊಲದಲ್ಲಿಯ ಲೈಟಿನ ಕಂಬಗಳ ಹತ್ತಿರದ ಗೀಡಗಳ ಟೊಂಗೆಗಳನ್ನು ಕಡಿದುಕೊಳ್ಳಿರಿ ಅಂತ ನಮಗೆ ಹೇಳುತ್ತಿರಿ ಸೂಳೆ ಮಕ್ಕಳೆ ನಿಮ್ಮ ಹೊಲದಲ್ಲಿಯ ಗೀಡಗಳ ಟೊಂಗೆಗಳನ್ನು ನೀವು ಕಡಿದುಕೊಳ್ಳಿರಿ ನಾವ್ಯಾಕೆ ಕಡಿದು ಕೊಳ್ಳೊಣ ಮಕ್ಕಳೆ ನಿಮ್ಮ ಸೊಕ್ಕು ಬಹಳ ಆಗಿದೆ ಇವತ್ತು ನಿಮಗೆ ಒಂದು ಗತಿ ಕಾಣಿಸುತ್ತೆವೆ ಅಂತ ಬೈದವರೆ ಅವರಲ್ಲಿಯ ಶಾಂತಮ್ಮ ಗಂಡ ಹಣಮಂತ ಮತ್ತು ಆಕೆಯ ಗಂಡ ಹಣಮಂತ ತಂದೆ ದುರ್ಗಪ್ಪ ಇವರು ನನ್ನ ಮಗ  ಹಣಮಂತನ ತೆಕ್ಕೆಗೆ ಬಿದ್ದು ನೆಲಕ್ಕೆ ಕೇಡಿವಿದ್ದು ಆಗ ನನ್ನ ಮಗನು ನೆಲಕ್ಕೆ ಬಿದ್ದಾಗ ಹಣಮಂತ ತಂದೆ ಚಂದಪ್ಪ ಇತನು ನನ್ನ ಮಗನ ಎದೆಯ ಮೇಲೆ ಎಡಗಡೆ ಪಕ್ಕಡಿ ಮೇಲೆ ಎಡಗೈ ಮೇಲೆ ಕಾಲಿನಿಂದ ಒದ್ದು ತುಳಿದು ಗುಪ್ತ ಗಾಯ ಪಡಿಸಿದ್ದು ಆಗ ನಾನು ಬಿಡಿಸಲು ಹೊದಾಗ ಚಂದಪ್ಪ ತಂದೆ ರಾಮಯ್ಯ ಇತನು ತನ್ನ ಕೈಯಲ್ಲಿಯ ಕೊಡಲಿ ಇಂದ ನನ್ನ ತಲೆಯ ಮೇಲ್ಬಾಗದಲ್ಲಿ ಬಲಬಾಜುವಿಗೆ ಹಾಗೂ ನನ್ನ ಬಲಗೈ ಮೊಳಕೈ ಕೆಳಗೆ ಹೊಡೆದು ರಕ್ತ ಗಾಯ ಪಡಿಸಿದ್ದು ಪರಮವ್ವ ಗಂಡ ಚಂದಪ್ಪ ಇವರು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಬೆನ್ನ ಮೇಲೆ ಹೊಡೆದು ಕಂದು ಗಟ್ಟಿದ ಗಾಯ ಪಡಿಸಿದ್ದು ಆಗ ನಾನು ಮತ್ತು ನನ್ನಮಗ ಚಿರಾಡಲು ನಮ್ಮ ಹೊಲದ ಸಮೀಪದಲ್ಲಿಯ ತಮ್ಮ ಹೊಲದಲ್ಲಿದ್ದ ಹಣಮಂತ ತಂದೆ ನಂದಪ್ಪ ಗುರಿಕಾರ ಹಾಗೂ ನಂದಪ್ಪ ತಂದೆ ಸೊಮಣ್ಣ ಗುರಿಕಾರ ಮಾನಪ್ಪ ತಂದೆ ಬಸಣ್ಣ ವಾಗಣಗೇರಿ ಇವರುಗಳು ಬಂದು ನೋಡಿ ನಮಗೆ ಹೊಡಿಯುದನ್ನು ಬಿಡಿಸಿದ್ದು ಇವರು ಬಂದು ಬಿಡಿಸದಿದ್ದರೆ ಅವರೆಲ್ಲರೂ ನಮಗೆ ಇನ್ನು ಹೊಡೆಯುತ್ತಿದ್ದರು ಹೋಗುವಾಗ ಅವರೇಲ್ಲರು ನಮಗೆ ಸೂಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿದ್ದಿರಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವದ ಬೇದರಿಕೆ ಹಾಕಿ ಹೊಗಿದ್ದು ಕಾರಣ ನನಗೆ ಮತ್ತು ನನ್ನಮಗನಿಗೆ ಅವಾಚ್ಯ ಶಬ್ಧಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ನಮೂದಿಸಿದ ಐದು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:43/2020 ಕಲಂ: 143 147 148  323  324 504 506 ಖ/ಘ 149 ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 73/2020 ಕಲಂ 323,324, 504, 506 ಸಂ.34 ಐಪಿಸಿ:-ದಿನಾಂಕ:23/05/2020 ರಂದು 4.00 ಪಿಎಮ್ ಗಂಟೆ ಸುಮಾರಿಗೆ ಫಿಯರ್ಾದಿ ಹೊಲದಲ್ಲಿದ್ದಾಗ ಹೊಲ ಹಂಚಿಕೆ ವಿಷಯದಲ್ಲಿ ಫಿಯರ್ಾದಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬಡಿಗೆಯಿಂದ ಹೊಡೆದು ಫಿಯರ್ಾದಿಯ ತಲೆಗೆ ಹೊಡೆದು ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿದ್ದು ಫಿಯರ್ಾದಿಯು ಠಾಣೆಗೆ ಬಂದು ಆರೋಪಿತನ ವಿರುಧ್ಧ ದೂರು ನೀಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 11/2020 ಕಲಂ. 174 (ಸಿ) ಸಿಆರ್ಪಿಸಿ:-ಇಂದು ದಿನಾಂಕ:24/05/2020 ರಂದು 8:20 ಎ.ಎಮ್ ಕ್ಕೆ ಪಿಯರ್ಾಧಿದಾರರಾದ ಕು. ಹಣಮಂತಿ ತಂದೆ ಶೇಳ್ಳಿಗಪ್ಪ ಕೊಂಡಿಕಾರ ಸಾ:ಶೇಳ್ಳಿಗಿ ಇವರ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಗೆ ನಾವು 3 ಜನ ಹೆಣ್ಣು ಮಕ್ಕಳಿದ್ದು ಇಬ್ಬರೂ ಗಂಡು ಮಕ್ಕಳಿರುತ್ತಾರೆ. ನಮ್ಮ ತಂದೆ ತಾಯಿಗಳು ಇಬ್ಬರೂ ಮೃತಪಟ್ಟಿರುತ್ತಾರೆ. ಹಾಗೂ ನಮ್ಮ ಹಿರಿಯ ಅಣ್ಣ ಕೂಡಾ ಮೃತಪಟ್ಟಿರುತ್ತಾರೆ. ನನಗೆ ಇನ್ನು ಮದುವೆ ಆಗಿರುವದಿಲ್ಲ. ಆದ್ದರಿಂದ ನಾನು ನಮ್ಮ ಎರಡನೇ ಅಣ್ಣನಾದ ಚಂದಪ್ಪ ಈತನ ಮನೆಯಲ್ಲಿ ಇರುತ್ತಿದ್ದು. ನಮ್ಮ ಅಣ್ಣನ ಎರಡನೇ ಹೆಂಡತಿಯು ಸುಮಾರು 6 ವರ್ಷಗಳ ಹಿಂದೆ ಕಾಯಿಲೆಯಿಂದ ಮೃತಪಟ್ಟಿರುತ್ತಾಳೆ. ಅವರ ಮಗ ಮಹೇಶ ಅಂತ ಇರುತ್ತಾನೆ. ನಮ್ಮ ಅಣ್ಣನು ದಿನಾಂಕ:22/05/2020 ರಂದು 1 ಗಂಟೆ ಸುಮಾರಿಗೆ ಮನೆಯಿಂದ ಅವರ ಗೆಳೆಯರಾದ ಅಮ್ಮಣ್ಣ ತಂದೆ ಬಾಲಪ್ಪ ಕವಲಿ ಮತ್ತು ಶೇಖಪ್ಪ ತಂದೆ ಅಂಬ್ರಪ್ಪ ಹಡಪದ ಇವರ ಸಂಗಡ ಶ್ರಳ್ಳಗಿ ಗ್ರಾಮದ ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಬರುತ್ತೆನೆ ಅಂತ ಹೇಳಿ ಹೋಗಿರುತ್ತಾನೆ. ಆಗ ನಂತರ 1:30 ಗಂಟೆ ಸುಮಾರಿಗೆ ನಮ್ಮ ಮನೆಗೆ ಅಣ್ಣನ ಗೆಳೆಯನಾದ ಅಮ್ಮಣ್ಣ ಈತನು ಬಂದು ನಿಮ್ಮ ಅಣ್ಣ ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳಗಿರುತ್ತಾನೆ. ಎಲ್ಲಾ ಕಡೆ ಹುಡುಕಿದರು ಸಿಕ್ಕಿರುವದಿಲ್ಲ. ಅಂತ ವಿಷಯ ತಿಳಿಸಿದರು ಆಗ ನಾವು ಗಾಬರಿಯಾಗಿ ಕೃಷ್ಣಾ ನದಿಗೆ ಹೋಗಿ ನೋಡಿ ಹುಡುಕಿದರು ಸಿಕ್ಕಿರುವದಿಲ್ಲ. ದಿನಾಂಕ:23/05/2020 ರಂದು ಸುರಪೂರ ಪೊಲೀಸ್ ಠಾಣೆಗೆ ಹೋಗಿ ನಮ್ಮ ಅಣ್ಣ ಕಾಣೆಯಾದ ಬಗ್ಗೆ ದೂರು ನೀಡಿರುತ್ತೆವೆ. ಠಾಣಾ ಗುನ್ನೆ ನಂ. 140/2020 ನೇದ್ದರಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲು ಮಾಡಿರುತ್ತಾರೆ. ಮತ್ತೆ ನದಿಗೆ ಹೋಗಿ ಹುಡುಕಿರುತ್ತೆವೆ ಆದರೂ ಸಿಕ್ಕಿರುವದಿಲ್ಲ. ಇಂದು ದಿನಾಂಕ:24/05/2020 ರಂದು ನದಿಯ ದಂಡೆಯಲ್ಲಿ ನಮ್ಮ ಸಂಬಂದಿ ಚಂದಪ್ಪ ತಂದೆ ರಂಗಪ್ಪ ಕವಲಿ ಮತ್ತು ಹಣಮಂತ ತಂದೆ ಅಯ್ಯಪ್ಪ ಕೊಂಡಿಕಾರ  ಇವರು ಹುಡುಕುತ್ತಿರುವಾಗ ಬೆಳಿಗ್ಗೆ 7:30 ಗಂಟೆ ಸುಮಾರಿಗೆ ಅಣ್ಣನ ಮೃತ ದೇಹ ನದಿ ನೀರಿನಲ್ಲಿ ಬಾರಲಾಗಿ ತೆಲುತ್ತಿರುವ ಬಗ್ಗೆ ನಮಗೆ ಬಂದು ವಿಷಯ ತಿಳಿಸಿದಾಗ ನಾವು ಅಲ್ಲಿಗೆ ನೋಡಿ ನಂತರ ಸುರಪೂರ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿರುತ್ತೆನೆ. ನಮ್ಮ ಅಣ್ಣ ಕೃಷ್ಣಾ ನದಿ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾನೆ. ನಮ್ಮ ಅಣ್ಣನ ಸಾವಿನಲ್ಲಿ ನಮಗೆ ಸಂಶಯ ಇರುತ್ತದೆ. ಅಂತ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.11/2020 ಕಲಂ 174 (ಸಿ)ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು


ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 46/2020 ಕಲಂ 379 ಐಪಿಸಿ:-ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಹೀರೋ ಪ್ಯಾಶನ್ ಎಕ್ಸ್ ಪ್ರೋ ಮೋಟರ್ ಸೈಕಲ್ ನಂ ಏಂ 33, ಖ 6966 ಅಂತಾ ಇದ್ದು, ಅದರ ಇಟಿರಟಿಜ ಓಠ-ಎಂ12ಂಃಈಉಎ03192, ಅಚಿ ಓಠ-ಒಃಐಎಂ12ಂಅಈಉಎ02271, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 30,000/ ರೂಪಾಯಿಗಳು. ಈ ಮೋಟರ್ ಸೈಕಲ್ ನಾನೇ ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು, ದಿನಾಂಕ 21/05/2020 ರಂದು ಮಧ್ಯಾಹ್ನ 03-15 ಗಂಟೆಯ ಸುಮಾರಿಗೆ ನಾನು ಮನೆಗೆ ಬಂದು, ನಮ್ಮ ಮನೆಯ ಕಾಂಪ್ಲೆಕ್ಸ್ ದ ಪಾಕರ್ಿಂಗ್ ಜಾಗದಲ್ಲಿ ನಿಲ್ಲಿಸಿ ನಾನು ಮನೆಯಲ್ಲಿ ಉಳಿದುಕೊಂಡೆನು. ನಂತರ ದಿನಾಂಕ 22/05/2020 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ವರದಿ ಮಾಡಲು ಹೋದರಾಯಿತು ಅಂತಾ ನೋಡಿದಾಗ ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟರ್ ಸೈಕಲ್ ಇರಲಿಲ್ಲ. ಕಾಂಪ್ಲೆಕ್ಸ್ ಸುತ್ತ ಮುತ್ತ ನೋಡಿದರೂ ಮೋಟರ್ ಸೈಕಲ್ ಕಾಣಲಿಲ್ಲ. ನಂತರ ನಾನು ಈ ವಿಷಯವನ್ನು ಕಾಂಪ್ಲೆಕ್ಸ್ ಮಾಲಿಕ ರಾಜುಗೌಡ ತಂದೆ ಶರಣಗೌಡ ಉಳ್ಳೆಸುಗೂರ ಇವರಿಗೆ ಹಾಗೂ ಕಾವಲುಗಾರ ಹಣಮಂತ ತಂದೆ ಸಾಬಣ್ಣ ಹಳ್ಳೇರ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದರು, ಯಾರೋ ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋದಂತೆ ಕಂಡು ಬಂದಿರುತ್ತದೆ.  ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ನನ್ನ ಮೋಟರ್ ಸೈಕಲ್ ಪತ್ತೆಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 46/2020 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 88/2020 ಕಲಂ. ಮಹಿಳೆ ಕಾಣೆಯಾದ ಬಗ್ಗೆ.:- ಪಿರ್ಯಾಧಿ ಮೊಮ್ಮಕ್ಕಳಾದ ಪಾರ್ವತಿ ಮತ್ತು ಮಹಾದೇವಿ ಕೂಡಿ ದಿನಾಂಕ 22.05.2020 ರಂದು ಮದ್ಯಾಹ್ನ ಸುಮಾರಿಗೆ ತಮ್ಮ ತಾಯಿ ತವರು ಮನೆಯಾದ ಪಸಪೂಲ ಗ್ರಾಮಕ್ಕೆ ಹೋಗಿದ್ದರು. ನಂತರ ಪಾರ್ವತಿ ಇವಳು ದಿನಾಂಕ 23.05.2020 ರಂದು ಮಾದ್ಯಾಹ್ನ 12.30 ಗಂಟೆ ಸುಮಾರಿಗೆ ಕಿರಾಣಿ ಸಾಮಾನಿ ತರುತ್ತೇನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ ಪಸಪೂಲ ಗ್ರಾಮದಿಂದ ಕಾಣೆಯಾದ ನನ್ನ ಮೊಮ್ಮಗಳು ಪಾರ್ವತಿ ಬಾವೂರ ಇವಳನ್ನು ಹುಡುಕಿಕೋಡಬೇಕು ಅಂತಾ ಪಾಲಕರಲ್ಲಿ ವಿಚಾರಿಸಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 141/2020 ಕಲಂ: 279,304(ಎ) ಐಪಿಸಿ ಮತ್ತು ಕಲಂ. 187 ಐ.ಎಮ್.ವಿ ಆಕ್ಟ್:- ಇಂದು ದಿನಾಂಕಃ 24/05/2020 ರಂದು 8-15 ಎ.ಎಮ್ ಕ್ಕೆ ಶ್ರೀ ಬೀರಲಿಂಗೇಶ ತಂದೆ ಸಿದ್ದಪ್ಪ ಮಗ್ಗದ ಸಾ: ಬಾದ್ಯಾಪೂರ ತಾಃ ಸುರಪೂರ, ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾಧಿ ನೀಡಿದ್ದರ ಸಾರಾಂಶವೆನೆಂದರೆ, ನಾವು ನಮ್ಮೂರಲ್ಲಿ ಮನೆ ಕಟ್ಟಿಸುತ್ತಿದ್ದು, ಮನೆ ಕಟ್ಟಿಸಲು ಸಿಮೇಂಟ ಅವಶ್ಯಕತೆ ಬಿದ್ದಿದ್ದರಿಂದ ನಿನ್ನೆ ದಿನಾಂಕಃ 23/05/2020 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಂದೆಯಾದ ಸಿದ್ದಪ್ಪ ತಂದೆ ಮಲ್ಲಪ್ಪ ಮಗ್ಗದ ಇಬ್ಬರೂ ನಮ್ಮ ಮೋ. ಸೈಕಲ್ ಮೇಲೆ ಸಿಮೆಂಟ ಖರೀದಿಗಾಗಿ ಸುರಪೂರಕ್ಕೆ ಬಂದಿದ್ದೇವು. ನಾವು ಸುರಪೂರದಲ್ಲಿ ಸಿಮೇಂಟ ಖರೀದಿ ಮಾಡಿದ ಬಳಿಕ ಬೋಲೆರೋ ಮ್ಯಾಕ್ಸಿ ಟ್ರಕ್ ಗೂಡ್ಸ್ ವಾಹನ ಸಂಖ್ಯೆ ಕೆ.ಎ 33 ಎ 9944 ನೇದ್ದರ ಚಾಲಕನಿಗೆ ಸಿಮೇಂಟ ಚೀಲಗಳನ್ನು ಬಾದ್ಯಾಪೂರಕ್ಕೆ ಇಳಿಸಿ ಬರುವಂತೆ ಬಾಡಿಗೆ ಮಾತಾಡಿ ಬಳಿಕ ಸದರಿ ವಾಹನದಲ್ಲಿ ಸಿಮೇಂಟ ಚೀಲಗಳನ್ನು ಲೋಡ ಮಾಡಿಕೊಂಡೇವು. ನಂತರ ನಮ್ಮ ಅಣ್ಣ-ತಮ್ಮಕೀಯ ಮಾರ್ತಂಡರಾಯ ತಂದೆ ನಿಂಗಣ್ಣ ಮಗ್ಗದ ಇವರು ಭೇಟಿಯಾಗಿದ್ದು, ಆತನು ನಮ್ಮೊಂದಿಗೆ ಬಾದ್ಯಾಪೂರಕ್ಕೆ ಬರುತ್ತೇನೆ ಅಂತ ಕೇಳಿಕೊಂಡಿದ್ದರಿಂದ ನಮ್ಮ ತಂದೆಯವರು ಗೂಡ್ಸ್ ವಾಹನದಲ್ಲಿ ಸಿಮೇಂಟ ಲೋಡಿನ ಮೇಲೆ ಕುಳಿತುಕೊಂಡಿದ್ದು, ಮೊ.ಸೈಕಲ್ ಮೇಲೆ ನನ್ನ ಜೊತೆ ಮಾರ್ತಂಡರಾಯನಿಗೆ ಕೂಡಿಸಿಕೊಂಡೇನು. ಸಾಯಂಕಾಲ ನಾವು ಸುರಪೂರದಿಂದ ಬಾದ್ಯಾಪೂರ ಗ್ರಾಮಕ್ಕೆ ಹೊರಟಿದ್ದು, ಗೂಡ್ಸ್ ವಾಹನ ಮುಂದೆ ಹೊರಟಾಗ ನಾನು ಮೋ.ಸೈಕಲ್ ಹಿಂದೆ ನಡೆಸಿಕೊಂಡು ಹೊರಟಿದ್ದೇನು. ಸಿದ್ದಾಪೂರ ಗ್ರಾಮ ದಾಟಿದ ಬಳಿಕ ಬೋಲೆರೋ ಮ್ಯಾಕ್ಸಿ ಟ್ರಕ್ ಗೂಡ್ಸ್ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸಾಯಂಕಾಲ 6-45 ಗಂಟೆಯ ಸುಮಾರಿಗೆ ಭೈರಿಮಡ್ಡಿ ಕ್ರಾಸ್ ಹತ್ತಿರ ರಸ್ತೆಯಲ್ಲಿರುವ ಸಣ್ಣ ತಗ್ಗು ತಪ್ಪಿಸಲು ಒಮ್ಮೆಲೆ ಎಡಕ್ಕೆ ತಿರುಗಿಸಿದರಿಂದ ಟಾರ್ ರಸ್ತೆಯ ಪಕ್ಕ ಸಣ್ಣ ತಗ್ಗಿನಲ್ಲಿ ವಾಹನದ ಗಾಲಿಗಳು ಇಳಿದು ಮುಂದೆ ಅದೇ ವೇಗದಲ್ಲಿ ವಾಹನ ಹೋಗಿದ್ದರಿಂದ ಜಂಪಿನಲ್ಲಿ ನಮ್ಮ ತಂದೆಯವರು ಸಿಮೇಂಟ ಚೀಲಗಳ ಮೇಲಿಂದ ಪುಟಿದು ರಸ್ತೆಯ ಮೇಲೆ ಬಿದ್ದ ಪರಿಣಾಮ ತಲೆಯ ಹಿಂಭಾಗ ಭಾರಿ ರಕ್ತಗಾಯವಾಗಿ ಬಾಯಿ, ಮೂಗು ಹಾಗು ಕಿವಿಗಳಿಂದ ರಕ್ತಸ್ರಾವ ಆಗಿ ಪ್ರಜ್ಞೆ ತಪ್ಪಿದ್ದನು. ಆಗ ನಾವು ಅಟೋರಿಕ್ಷಾದಲ್ಲಿ ನಮ್ಮ ತಂದೆಯವರಿಗೆ ಹಾಕಿಕೊಂಡು ಚಿಕಿತ್ಸೆಗಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಪ್ರಥಮೋಪಚಾರ ಮಾಡಿಸಿಕೊಂಡು ಇಲ್ಲಿಂದ ರಾಯಚೂರ ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೇವು. ಅಲ್ಲಿ ವೈದ್ಯಾಧಿಕಾರಿಗಳು ನಮ್ಮ ತಂದೆಯವರಿಗೆ ಚಿಕಿತ್ಸೆ ಮಾಡಿ ಪುನಃ ಹೆಚ್ಚಿನ ಉಪಚಾರಕ್ಕಾಗಿ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದರಿಂದ ರಿಮ್ಸ್ ಆಸ್ಪತ್ರೆಯಿಂದ ನಮ್ಮ ತಂದೆಯವರಿಗೆ ಅಂಬ್ಯೂಲೇನ್ಸ್ ನಲ್ಲಿ ಹಾಕಿಕೊಂಡು ಸೋಲಾಪೂರಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗಮದ್ಯೆ ಲಕ್ಷ್ಮೀಪೂರ ಕ್ರಾಸ್ ಹತ್ತಿರ 6-00 ಎ.ಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಹಾಗು ನಿನ್ನೆ ಅಪಘಾತವಾದ ಬಳಿಕ ಗೂಡ್ಸ್ ವಾಹನ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿದ್ದು ಆತನ ಹೆಸರು, ವಿಳಾಸ ಗೊತ್ತಿರುವದಿಲ್ಲ. ಸದರಿಯವನಿಗೆ ಮುಂದೆ ನೋಡಿದ್ದಲ್ಲಿ ಗುರುತಿಸುತ್ತೇನೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 141/2020 ಕಲಂ. 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು. 


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 153/2020 /2020  ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 24/05/2020 ರಂದು ರಾತ್ರಿ 21-15 ಗಂಟೆಗೆ  ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, 07 ಜನ ಆಪಾಧಿತರು ಹಾಗೂ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ,  ಫಿರ್ಯಾದಿಯವರು ಇಂದು ದಿನಾಂಕ 24/05/2020 ರಂದು ಸಾಯಂಕಾಲ 18-00 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ಪಟ್ಟಣ್ಣದ  ಕನ್ಯಾಕೊಳ್ಳುರ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ, ಠಾಣೆಯ ಎನ್.ಸಿ ನಂ 44/2020 ನೇದ್ದನ್ನು ನೋಂದಣಿಮಾಡಿಕೊಂಡು, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು, ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ಮತ್ತು ಪಿ.ಐ ಡಿ.ಸಿ.ಐ.ಬಿ ಘಟಕ ಯಾದಗಿರಿ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ಸಾಯಂಕಾಲ 19-25 ಗಂಟೆಗೆ ದಾಳಿ ಮಾಡಿ 07  ಜನ ಜೂಜಾಟ ಆಡುತಿದ್ದವರನ್ನು ಹಿಡಿದು ಅವರಿಂದ ನಗದು ಹಣ 26,110=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಸಾಯಂಕಾಲ 19-30 ಗಂಟೆಯಿಂದ 20-30 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ  ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 153/2020 /2020  ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                                                                                          

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 88/2020 ಕಲಂ: 87 ಕೆಪಿ ಯಾಕ್ಟ:- ಇಂದು ದಿ : 24/05/2020 ರಂದು 17.00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ದಿನಾಂಕ:24.05.2020 ರಂದು 1530 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಜೈನಾಪೂರ ಗ್ರಾಮದ ಕಡೆಗೆ ಕರೋನಾ ಮಹಮಾರಿ ನಿಮಿತ್ಯವಾಗಿ ಪೆಟ್ರೋಲಿಂಗ ಕುರಿತು ಹೋದಾಗ ಸದರ ಗ್ರಾಮದ ನೀರಿನ ಟ್ಯಾಂಕಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 05-06 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 1540 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 1600 ಗಂಟೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ  ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 1700 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 88/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ಪಿರ್ಯಾದಿದಾರರು ದಾಳಿ ಕೈಕೊಂಡಿದ್ದು ದಾಳಿಯಲ್ಲಿ 06 ಜನ ಆರೋಪಿತರಿಗೆ ದಸ್ತಗಿರಿ ಮಾಡಿದ್ದು ಎರಡು ಜನರು ಓಡಿಹೋಗಿದ್ದು ಕಣದಲ್ಲಿ ಸಿಕ್ಕ 12320/- ರೂಪಾಯಿ ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಹಾಗು 1 ಬಿಳಿ ಬರಕಾವನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 89/2020 ಕಲಂ 302,307,504 ಐಪಿಸಿ:- ಇಂದು ದಿನಾಂಕ 24.05.2020 ರಂದು ಸಾಯಂಕಾಲ 7.45 ಗಂಟೆಗೆ ಗುರುಮಠಕಲ್ ಸಕರ್ಾರಿ ಆಸ್ಪೆತ್ರೆಯಿಂದ ಎಂ.ಎಲ್.ಸಿ ಅಂತಾ ಕರೆ ಬಂದ ಮೇರೆಗೆ ನಾನು ಆಸ್ಪತ್ರೆಗೆ ಬೇಟಿ ನೀಡಿದೆ. ಗಾಯಾಳು ಜನರಿಗೆ ವಿಚಾರಿಸಿದ ನಂತರ ಗಾಯಾಳು ಜನರಿಗೆ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ರಾಯಚೂರಿಗೆ ಕಳುಹಿಸಿದರು. ಮೃತಳ ತಮ್ಮನಾದ ಬಸವರಾಜ ತಂದೆ ಬಾಲಪ್ಪ ಪ್ಯಾಟಿ ಈತನು ಗಣಕಿಕೃತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ನಾನು ಬಸವರಾಜ ತಂದೆ ಬಾಲಪ್ಪ ಪ್ಯಾಟ ವಯಾಃ 32 ವರ್ಷ ಜಾತಿಃ ಕಬ್ಬಲಿಗ ಉಃ ಒಕ್ಕಲುತನ ಸಾಃ ದಂತಾಪೂರ ಗ್ರಾಮ ತಾಃ ಗುರುಮಠಕಲ ಜಿಃ ಯಾದಗಿರಿ ಇದ್ದು, ಈ ಮೇಲ್ಕಂಡ ವಿಷಯದಲ್ಲಿ ದೂರು ಸಲ್ಲಿಸುವದೆನೆಂದರೆ ನನ್ನ ಸ್ವಂತ ಅಕ್ಕಳಾದ ಭಾಗ್ಯಮ್ಮ ಇವಳಿಗೆ ಚಂಡರಕಿ ಗ್ರಾಮದ ಚಿನ್ನ ಗೋಪಾಲ ಎಂಬುವವರಿಗೆ ನಮ್ಮ ತಂದೆ-ತಾಯಿ ಕಳೆದ ಸುಮಾರು 20 ವರ್ಷಗಳ ಕೆಳಗೆ  ಮದುವೆ ಮಡಿಕೊಟ್ಟಿರುತ್ತಾರೆ. ಅವರಿಗೆ ನವೀತಾ ಮತ್ತು ಸವಿತಾ ಅಂತಾ ಇಬ್ಬರೂ ಹೆಣ್ಣು ಮಕ್ಕಳು ಇರುತ್ತಾರೆ. ನಮ್ಮ ಅಕ್ಕಳಿಗೆ ಗಂಡು ಸಂತಾನ ಇಲ್ಲದ ಕಾರಣ ನನ್ನ ತಮ್ಮನಾದ ಹಣಮಂತನಿಗೆ ಮನೆ ಅಳಿತನಕ್ಕೆ ತೆಗೆದುಕೊಂಡು ದೊಡ್ಡ ಮಗಳಾದ ನವೀತಾಳಿಗೆ ನನ್ನ ತಮ್ಮನಿಗೆ ಕೊಟ್ಟು ಮದುವೆ ಮಾಡಿರುತ್ತಾಳೆ. ನನ್ನ ಭಾವ ಚಿನ್ನಗೋಪಾಲ ಈತನು ಇತ್ತಿಚ್ಚಿನ ಸುಮಾರು ವರ್ಷಗಳಿಂದ ಕುಡಿತ ಚಟಕ್ಕೆ ಬಿದ್ದು ತನ್ನ ಮನಸ್ಸಿಗೆ ಬಂದಲ್ಲಿ ಇರುತ್ತಾನೆ. ಈ ಮಧ್ಯೆ ನಮ್ಮ ಅಕ್ಕಳ ಸಂಬಂಧಿಕರಾದ ಭೀಮಪ್ಪ ತಂದೆ ಲಕ್ಷ್ಮಪ್ಪ ಇಂಟೆನಕಿ ಈತನು ನಮ್ಮ ಅಕ್ಕಳ ಮನೆಗೆ ಹೋಗಿ ಬರುವದು ಮಾಡಿದ್ದು ಕಳೆದ ವರ್ಷ ಏಪ್ರೀಲ್ ಮಾಹೆಯಲ್ಲಿ ಭೀಮಪ್ಪ ಕುಡಿದ ನಶೆಯಲ್ಲಿ ನಮ್ಮ ಅಕ್ಕಳ ಮನೆಗೆ ಹೋಗಿದ್ದ ಕಾರಣ ನಮ್ಮ ಅಕ್ಕ ಭೀಮಪ್ಪನ ತಂದೆಗೆ ತನ್ನ ಮಗನ ವಿಷಯ ಹೇಳಿರುತ್ತಾಳೆ. ಅದಕ್ಕೆ ಭೀಮಪ್ಪ ನಮ್ಮ ಅಕ್ಕಳಿಗೆ, ನನ್ನ ಸೊಸೆ ನವೀತಾಳಿಗೆ ಹೊಡೆದಿರುತ್ತಾನೆ. ಈ ಸಂಬಂಧ ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     ಹೀಗಿದ್ದು ಇಂದು ದಿನಾಂಕ 24.05.2020 ರಂದು ಸಾಯಂಕಾಲ 5.30 ಗಂಟೆ ಸುಮಾರಿಗೆ ನಾನು ಊರಲ್ಲಿದ್ದಾಗ ನಮ್ಮೂರಿನ ರಾಮು ತಂದೆ ಚಂದ್ರಪ್ಪ ಯಲ್ಲೊಳ ಈತನು ನನಗೆ ಪೋನ ಮಾಡಿ ನಮ್ಮ ಅಕ್ಕ ಭಾಗ್ಯಮ್ಮ, ತಮ್ಮ ಹಣಮಂತ, ಸೊಸೆ ನವೀತಾ ಇವರಿಗೆ ಭೀಮಪ್ಪ ಇಂಟೆನಕಿ ಈತನು ಜೀಪನಿಂದ ಹಾಯಿಸಿ ಸಾಯಿಸಲು ಪ್ರಯತ್ನ ಮಾಡಿರುತ್ತಾನೆ ನಿಮ್ಮವರಿಗೆ ಬಹಳ ಪೆಟ್ಟುಗಳು ಆಗಿವೆ ಅಂತಾ ತಿಳಿಸಿದನು. ನಾನು ಗುರುಮಠಕಲ್ ಸಮೀಪ ಬಂದು ನನ್ನ ತಮ್ಮ ಹಣಮಂತನಿಗೆ ಪೋನ ಮಾಡಿ ಏನು ವಿಷಯ ಅಂತಾ ಕೇಳಿದೆ. ನೀನು ಗುರುಮಠಕಲ ದವಖಾನೆ ಹತ್ತಿರ ಬಾ ನಾನು ಹೇಳುತ್ತೇನೆ ಅಂತಾ ಅಳುತ್ತ ಪೋನ ಕಟ್ ಮಾಡಿದ. ನಾನು ಗುರುಮಠಕಲ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಿದಾಗ ನಮ್ಮ ಅಕ್ಕ ಭಾಗ್ಯಮ್ಮಳಿಗೆ ಟೊಂಕ, ಬಲಗಾಲು, ಎಡಗಾಲು ಹಿಮ್ಮಡಿ ಹತ್ತಿರ ದೊಡ್ಡ ರಕ್ತ, ಗುಪ್ತಗಾಯಗಳಾಗಿ ಬೇವಸ್ಸಾಗಿದ್ದಳು. ನನ್ನ ಸೊಸೆ ನವೀತಾಳಿಗೆ ಮುಖಕ್ಕೆ, ಬಲಗಾಲಿಗೆ ಭಾರಿ ಪೆಟ್ಟುಗಳು ಆಗಿವೆ ನನ್ನ ತಮ್ಮ ಹಣಮಂತನಿಗೆ ತೆಲೆಗೆ ಪೆಟ್ಟಾಗಿದೆ. ಯಾತಕ್ಕಾಗಿ ಜಗಳ ಆಗಿದೆ ಅಂತಾ ನನ್ನ ತಮ್ಮನಿಗೆ ವಿಚಾರಿಸಿದಾಗ ಸಾಯಂಕಾಲ 4.30 ಗಂಟೆ ಸುಮಾರಿಗೆ ತಾನು ಹೊಲದ ಹತ್ತಿರ ಹೋದಾಗ ಭೀಮಪ್ಪ ಈತನು ಅಕ್ಕ, ಸೊಸೆ ಜೊತೆಗೆ ಜಗಳಕ್ಕೆ ನಿಂತು ಬೈದಾಡುತ್ತಿದ್ದ ನಾನು ಅವನಿಗೆ ಇಲ್ಲಿ ಯಾಕ ಬಂದಿಲೇ ನೀ ಅಂತಾ ಕೇಳಿದಾಗ ನಿಮ್ಮಕ್ಕಳ ಹತ್ತಿರ ಕೆಲಸವಿದೆ ಬಂದಿದ್ದಿಲೇ ನೀ ಯಾವ ನನಗ ಕೇಳವ ಅಂತಾ ಅಂದ ಅದಕ್ಕೆ ನಾನು ನಡಿ ಇಲ್ಲಿಂತ ಅಂತಾ ಹೇಳಿ ಅವನ ಕೈ ಹಿಡಿದು ದೊಬ್ಬುವ ಕಾಲಕ್ಕೆ ನನಗೆ ಕಲ್ಲಿನಿಂದ ತೆಲೆಗೆ ಹೊಡೆದ ನನಗೆ ಸಿಟ್ಟು ಬಂದು ನಾನು ಸಹ ಒಂದರೆಡೆಟು ಹೊಡೆದೆ ನಂತರ ನಾವು ಮೂರು ಜನರು ಕಲಿತು ರೋಡಿಗೆ ಹಚ್ಚಿದ ನಮ್ಮ ಮೋಟರ ಸೈಕಲ ಹತ್ತಿರ ಬಂದು ಮೋಟರ ಸೈಕಲ ಚಾಲು ಮಾಡಲು ಹೋದೆ ಬೀಗ ಕೈ ಜೇಬಲ್ಲಿ ಇಲ್ಲದ ಕಾರಣ ಹೊಲದಲ್ಲಿ ಬಿದ್ದಿರಬಹುದು ಅಂತಾ ನಾನು ಎರಡೆಜ್ಜೆ ಮುಂದೆ ಹೋಗುವಷ್ಟರಲ್ಲಿ ಭೀಮಪ್ಪ ನಮ್ಮ ಬೆನ್ನಿಂದಲೇ ಗುರುಮಠಕಲ-ಚಂಡರಕಿ ರೋಡಿಗೆ ಬಂದು ರೋಡಿಗೆ ಹಚ್ಚಿದ ತನ್ನ ಜೀಪನ್ನು ಚಾಲು ಮಾಡಿಕೊಂಡು ಸಾಯಂಕಾಲ 5.00 ಗಂಟೆ ಸುಮಾರಿಗೆ ಚಂಡರಕಿ ಸೀಮೆಯ ಚೆನ್ನಪ್ಪ ಹಳ್ಳ ಗಡ್ಡೆ ಸಮೀಪ ನನ್ನ ಮೋಟರ ಸೈಕಲ ಹತ್ತಿರ ನಿಂತ ಅಕ್ಕ ಭಾಗ್ಯಮ್ಮ, ಸೊಸೆ ನವೀತಾಳಿಗೆ ಜೀಪ ಹಾಯಿಸಿಬಿಟ್ಟು ತಿರುಗಿಸಿಕೊಂಡು ಊರ ಕಡೆಗೆ ಹೋದ ಅಂತಾ ತಿಳಿಸಿದನು. ಇಂದು ಸಾಯಂಕಾಲ 7.30 ಗಂಟೆ ಸುಮಾರಿಗೆ ನಮ್ಮ ಅಕ್ಕ ಗುರುಮಠಕಲ ಸಕರ್ಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತ ಸತ್ತೊದಳು. ಭೀಮಪ್ಪ ತಂದೆ ಲಕ್ಷ್ಮಪ್ಪ ಇಂಟೆನಕಿ ಈತನು ಸುಮಾರು ವರ್ಷಗಳಿಂದ ನಮ್ಮ ಅಕ್ಕಳ ಜೊತೆಗೆ ಸಲುಗೆಯಿಂದ ಇರುತ್ತಿದ್ದು ಮಕ್ಕಳು ದೊಡ್ಡವರಾದ ಕಾರಣ ಮನೆಗೆ ಬರಬೇಡ ಅಂತಾ ನಮ್ಮಕ್ಕ ಹೇಳಿದ್ದಕ್ಕೆ ಕಳೆದ ವರ್ಷದಿಂದ ನಮ್ಮ ಅಕ್ಕಳ ಜೊತೆ ತಕರಾರು ಮಾಡುತ್ತ ಬಂದಿರುತ್ತಾನೆ. ಇಂದು ಹೊಲದಲ್ಲಿ ಕೆಲಸ ಮಾಡಲು ಹೋದ ನಮ್ಮಕ್ಕ, ಸೊಸೆ ಸಂಗಡ ಭೀಮಪ್ಪ ಜಗಳ ತೆಗೆದಿರುತ್ತಾನೆ. ನಮ್ಮ ತಮ್ಮ ನೋಡಿ ಅವನಿಗೆ ತಾಕಿತ್ತು ಮಾಡಿದ್ದರಿಂದ ನಮ್ಮವರೆಲ್ಲರನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ತನ್ನ ಜೀಪನಿಂದ ಹಾಯಿಸಿರುತ್ತಾನೆ. ನಮ್ಮ ಅಕ್ಕ ಭಾಗ್ಯಮ್ಮಳ ಕೊಲೆಗೆ ಕಾರಣಿಭೂತನಾದ ಮತ್ತು ಸೊಸೆ ನವೀತಾ, ನನ್ನ ತಮ್ಮ ಹಣಮಂತನ ಕೊಲೆ ಮಾಡಲು ಪ್ರಯತ್ನಪಟ್ಟ ಭೀಮಪ್ಪ ಇಂಟೆನಕಿ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರು ಅಜರ್ಿಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು ದೂರಿನ ಸಾರಾಂಶದ ಮೇಲಿಂದ ನಾನು ಪಿ.ಎಸ್.ಐ ಗುರುಮಠಕಲ ಠಾಣೆ ಗುನ್ನೆ ನಂಬರ 89/2020 ಕಲಂ 302, 307, 504 ಐಪಿಸಿ ಅಡಿಯಲ್ಲಿ ರಾತ್ರಿ 9.30 ಗಂಟೆಯಿಂದ 10.30 ಗಂಟೆಯವರೆಗೆ ಪ್ರಕರಣ ದಾಖಲಿಸಿಕೊಂಡೆನು.
ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!