ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/05/2020

By blogger on ಮಂಗಳವಾರ, ಮೇ 26, 2020                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/05/2020 
                                                                                                               
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 87/2020 ಕಲಂ 379 ಐಪಿಸಿ:- ಇಂದು ದಿನಾಂಕ 23.05.2020 ರಂದು ಸಮಯ ಬೆಳಗಿನ ಜಾವ 3:30 ಗಂಟೆಗೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ಕೆಂಪು ಬಣ್ಣದ ಮಹಿಂದ್ರ ಕಂಪನಿಯ ಟ್ರ್ಯಾಕ್ಟರ ಇಂಜಿನನ ಚಸ್ಸಿ ನಂಬರ    ಒಃಓಂಂಂಎಂಐಏಚಊ08909 ಮತ್ತು ಇಂಜಿನ ನಂಬರ   ಚಏಊ2ಏಂಂ6997 ನೇದ್ದಕ್ಕೆ ಅಳವಡಿಸಿದ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರನ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 87/2020 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ 174  ಸಿ.ಆರ್.ಪಿಸಿ:- ಮೃತ ಮಾರುತಿ ಈತನ ಹೆಸರಿನಲ್ಲಿ ಮಕ್ತಾಪುರ ಗ್ರಾಮದ ಸೀಮಾಂತರದಲ್ಲಿ 39 ಗುಂಟೆ ಹೊಲವಿದ್ದು ಸದರಿ ಹೊಲದಲ್ಲಿ ಹೋದ ವರ್ಷ ಹತ್ತಿ ಬೆಳೆ ಮಾಡಿದ್ದು ಬೆಳೆ ಸರಿಯಾಗಿ ಬಂದಿರುವದಿಲ್ಲ. ಹೊತಪೇಟ ಕನರ್ಾಟಕ ಬ್ಯಾಂಕನಲ್ಲಿ 2,13,000 ರೂ ಸಾಲ ಮಾಡಿದ್ದು ಖಾಸಗಿಯಾಗಿ 10 ಲಕ್ಷ ರೂ ಸಾಲ ಮಾಡಿಕೊಂಡಿದ್ದ. ಈ ವರ್ಷ ಸದರಿ ಹೊಲದಲ್ಲಿ ಹತ್ತಿ ಬೆಳೆ ಮಾಡಿದ್ದು ಮಳೆ ಸರಿಯಾಗಿ ಬಾರದೆ ಬೆಳೆ ಹಾಳಾಗಿದ್ದರಿಂದ ಸಾಲದ ಬಾದೆ ತಾಳಲಾರದೇ ಮಾರುತಿ ಈತನು ದಿನಾಂಕ 23/05/2020 ರಂದು 10 ಎ.ಎಮ್. ಸುಮಾರಿಗೆ ತನ್ನ ಮನೆಯಲ್ಲಿ ವಿಷ ಸೇವನೆ ಮಾಡಿದ್ದರಿಂದ ವೈದ್ಯಕೀಯ ಉಪಚಾರ ಕುರಿತು ಜಿಜಿಹೆಚ ಶಹಾಪುರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಜಿಜಿಹೆಚ ಕಲಬುರಗಿಗೆ ತೆಗೆದುಕೊಂಡು ಹೊರಟಾಗ 12.30 ಪಿ.ಎಮ್. ಸುಮಾರಿಗೆ ಮಾರ್ಗ ಮಧ್ಯದಲ್ಲಿ ಜೇವಗರ್ಿ ಹತ್ತಿರ ಮೃತಪಟ್ಟಿದ್ದು ಸದರಿಯವನ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ವಗೈರೆ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:04/2020 ಕಲಂ 174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 72/2020 ಕಲಂ 379 ಐಪಿಸಿ:-ದಿನಾಂಕ:11/05/2020 ರಂದು 11 ಎ.ಎಮ್. ದಿಂದ 1 ಪಿ.ಎಮ್. ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮುಡಬೂಳ ಸೀಮಾಂತರದಲ್ಲಿನ ಅಣಬಿ ರೋಡ ಪಕ್ಕದಲ್ಲಿ ಭೀಮಶ್ಯಾ ಹವಾಲ್ದಾರ ಇವರ ಹೊಲದ ಹತ್ತಿರ ನಿಲ್ಲಿಸಿದ ಫಿಯರ್ಾದಿಯ ಹೋಂಡಾ ಸಿಬಿ ಶೈನ್ ಮೋಟರ್ ಸೈಕಲ್ ನಂ:ಕೆಎ-33 ವಿ-0694 ಮೋಟರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಮೋಟಾರ ಸೈಕಲನ ಅಂದಾಜು ಕಿಮ್ಮತ್ತು 20,000-00 (ಇಪ್ಪತ್ತು ಸಾವಿರ) ರೂ ಆಗಬಹುದು. ಕಾರಣ ಕಳುವಾದ ಮೋಟರ್ ಸೈಕಲನ್ನು ಮತ್ತು ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಲಿಖಿತ ಫಿಯರ್ಾದಿ ಅಜರ್ಿ ಇರುತ್ತದೆ.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 78/2020 ಕಲಂ 379 ಐಪಿಸಿ ಮತ್ತು 21(3) 21(4), 22 ಎಮ್.ಎಮ್ ಆರ್.ಡಿ ಕಾಯ್ದೆ  :- ದಿನಾಂಕ: 23-05-2020 ರಂದು 06-00 ಪಿ.ಎಮ್ ಕ್ಕೆ  ಮಲ್ಲಕಾಜಪ್ಪ ತಂದೆ ಸುಭಾಸಚಂದ್ರ  ವ|| 39 ವರ್ಷ ಜಾ|| ಹಡಪದ ಸಾ|| ನರೆಗಲ್ ತಾ|| ರೋಣ ಜಿ|| ಗದಗ  ಕಂದಾಯ ನಿರೀಕ್ಷಕರು ಬಳಿಚಕ್ರ ಹೋಬಳಿ ಇವರು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ನಾನು ದಿನಾಂಕ: 23-05-2020 ರಂದು ಮದ್ಯಾಹ್ನ 02-30 ಗಂಟೆ ಸುಮಾರಿಗೆ ಲಿಂಗೇರಿ ಸ್ಟೇಶನ್ ಪ್ರಾಥಮಿಕ ಶಾಲೆಯಲ್ಲಿ ಕ್ವಾರೈನಟೈನದಲ್ಲಿರುವ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿರುವಾಗ ನನಗೆ ಮಾಹಿತಿ ಬಂದಿದ್ದೆನೆಂದರೆ ಸಾವೂರ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿ ರಾತ್ರಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಆಗ ನಾನು ಲಿಂಗೇರಿ ಸ್ಟೇಶನ ಶಾಲೆಯಿಂದ ಮಲ್ಹಾರ ಗ್ರಾಮಕ್ಕೆ ಬಂದು ಅಲ್ಲಿ ಸಾವೂರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾದ ಲಕ್ಷ್ಮೀ ಇವರನ್ನು ಕರೆದುಕೊಂಡು ಸಾವೂರ ಗ್ರಾಮಕ್ಕೆ ಮದ್ಯಾಹ್ನ 03-30 ಗಂಟೆಗೆ ಬಂದು ಸಾವೂರ ಗ್ರಾಮದ ಗ್ರಾಮ ಸಹಾಯಕನಾದ ಹಣಮಂತ ಇವರನ್ನು ಕರೆದುಕೊಂಡು ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಸ್ಥಳಕ್ಕೆ ಮದ್ಯಾಹ್ನ 03-45 ಗಂಟೆಗೆ ಹೋಗಿ ನೋಡಲಾಗಿ ಸಾವೂರ ಗ್ರಾಮದ ಹಳ್ಳದ ಹತ್ತಿರ ಸಾವೂರ ಗ್ರಾಮ ಸೀಮಾಂತರದ ಹೊಲ ಸವರ್ೆ ನಂಬರ 83 ರ ಲಕ್ಷ್ಮೀಕಾಂತ ತಂದೆ ಕೀಶನರಾವ್ ರವರ ಹೊಲದಲ್ಲಿ  ಸುಮಾರು 15 ಟಿಪ್ಪರಗಳಷ್ಟು ಅ|| ಕಿ|| 50000=00 ರಷ್ಟು ಮರಳನ್ನು ಜೆಸಿಬಿ ಮತ್ತು ಟಿಪ್ಪರಗಳಿಂದ ಸಂಗ್ರಹಣೆಯನ್ನು ಮಾಡಿರುತ್ತಾರೆ ಸಾವೂರ ಗ್ರಾಮದ ಗ್ರಾಮ ಸಹಾಯಕನಿಗೆ ಸದರಿ ಮರಳನ್ನು ಯಾರು ಸಂಗ್ರಹಣೆ ಮಾಡಿದ್ದಾರೆ ಅಂತಾ ವಿಚಾರಿಸಲಾಗಿ ಆತನು ಗೌಡಗೇರಾ ಗ್ರಾಮದ ರಘುಪತಿ ತಂದೆ ಯಂಕಣ್ಣ ಮತ್ತು ಸಾವೂರ ಗ್ರಾಮದ ಲಕ್ಷ್ಮೀಕಾಂತ ತಂದೆ ಕೀಶನರಾವ್ ಇವರು ಇಬ್ಬರೂ ಕೂಡಿ ಜೆಸಿಬಿ ಮತ್ತು ಟಿಪ್ಪರಗಳಿಂದ ಮರಳು ಸಂಗ್ರಹಣೆ ರಾತ್ರಿ ಕಳ್ಳತನದಿಂದ ಮಾರಾಟ ಮಾಡಲು ಟಿಪ್ಪರಗಳಲ್ಲಿ ತೆಗೆದುಕೊಂಡು ಹೋಗುತಿದ್ದಾರೆ ಅಂತಾ ತಿಳಿಸಿದ್ದು ಆಗ ಜಾಗದಲ್ಲಿ ಪರಿಶೀಲಿಸಿ ನೋಡಲಾಗಿ ಟಿಪ್ಪರ ಮತ್ತು ಜೆಸಿಬಿ ಇರಲಿಲ್ಲ. ಕಾರಣ ಮಾನ್ಯರವರು ಅಕ್ರಮವಾಗಿ ಮರಳು ಸಂಗ್ರಹಣೆ ಕಳ್ಳತನದಿಂದ ಮಾರಾಟ ಮಾಡಲು ತೆಗೆದುಕೊಂಡು ಹೋಗುವರಾದ ರಘುಪತಿ ತಂದೆ ಯಂಕಣ್ಣ ಸಾ|| ಗೌಡಗೇರಾ, ಮತ್ತು ಲಕ್ಷ್ಮೀಕಾಂತ ತಂದೆ ಕೀಶನರಾವ್ ಸಾ|| ಸಾವೂರ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ. ಅಂತಾ ಪಿಯರ್ಾಧಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ನರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 35/2020 ಕಲಂ: 279 304(ಎ), ಐಪಿಸಿ & 187 ಐ.ಎಂ.ವ್ಹಿ ಆಕ್ಟ:- ಇಂದು ದಿನಾಂಕ 23/05/2020 ರಂದು 8:30 ಪಿ.ಎಂ ಕ್ಕೆ ಪಿಯರ್ಾದಿ ಶ್ರೀ ಭೀಮಪ್ಪ ತಂದೆ ಹರಿಶ್ಚಂದ್ರ ಜಾದವ ವ:40 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಲಮಾಣಿ ಸಾ:ಗೊನವಾಟ್ಲಾ ತಾಂಡಾ ತಾ:ಲಿಂಗಸೂರ ಜಿ:ರಾಯಚೂರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಗಣಕಯಂತ್ರದಲ್ಲಿ ಟೈಪು ಮಾಡಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ನಾನು ದಿನಾಂಕ 21/05/2020 ರಂದು 10:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ಗೊತ್ತಾಗಿದ್ದೆನೆಂದರೆ ನಮ್ಮ ಚಿಕ್ಕಪ್ಪ ಹಾಗೂ ಅವರ ಮಗ ಸುರೇಶನು ಹೋಗುತ್ತಿದ್ದ ಮೋಟರ ಸೈಕಲ್ ಅಪಘಾತವಾಗಿದ್ದು ಅವರಿಗೆ ಉಪಚಾರ ಕುರಿತು ಲಿಂಗಸೂರ ಸರಕಾರಿ ಆಸ್ಪತ್ರೆಗೆ ತರುತ್ತಿದ್ದಾರೆ ಅಂತಾ ಗೊತ್ತಾಗಿದ್ದರಿಂದ ನಾನು 3:15 ಪಿ.ಎಂ ಕ್ಕೆ ಲಿಂಗಸೂರ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಿದ್ದು ಆಸ್ಪತ್ರೆಯಲ್ಲಿ ನಮ್ಮ ಚಿಕ್ಕಪ್ಪ ಚಂದಪ್ಪ ಹಾಗೂ ಅವರ ಮಗ ಸುರೇಶ ರವರು ಇದ್ದು ನಮ್ಮ ಚಿಕ್ಕಪ್ಪ ಚಂದಪ್ಪ ರವರಿಗೆ ತಲೆಗೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅವರ ಪಕ್ಕದಲ್ಲಿ ಇದ್ದ ಸುರೇಶನಿಗೆ ಅಪಘಾತ ಹೇಗಾಯಿತು ಅಂತಾ ಕೇಳಲಾಗಿ ಸುರೇಶನು ತಿಳಿಸಿದ್ದೆನೆಂದರೆ ನಾನು ಹಾಗೂ ನಮ್ಮ ತಂದೆ ಚಂದಪ್ಪ ರವರು ದಿನಾಂಕ 21/05/2020 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನಮ್ಮ ಕೆಲಸದ ನಿಮಿತ್ಯ ನಮ್ಮ ಮೋಟರ ಸೈಕಲ್ ನಂ ಕೆ.ಎ. 36 ಇ.ಎಸ್. 9323 ನೇದ್ದರ ಮೇಲೆ ಜುಮಾಲಪೂರ ತಾಂಡಾಕ್ಕೆ ಹೋಗುತ್ತಿದ್ದೇವು. ನಾರಾಯಣಪೂರ ದಾಟಿ ಕೊಟೆಗುಡ್ಡ ಹತ್ತಿರ ನಾರಾಯಣಪೂರ - ಹುಣಸಗಿ ಮುಖ್ಯ ರಸ್ತೆಯ ಮೇಲೆ ಹೋಗುತ್ತಿದ್ದಾಗ ಕೊಟೆಗುಡ್ಡ ಸೀಮಾಂತರದ ಹೊಲದಲ್ಲಿಯ ಕಚ್ಚಾದಾರಿಯಿಂದ ಒಬ್ಬ  ಮೊಟರ ಸೈಕಲ್ ಸವಾರನು ತನ್ನ ಮೋಟರ ಸೈಕಲ್ಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾನು ಮತ್ತು ನಮ್ಮ ತಂದೆ ಹೋಗುತ್ತಿದ್ದ ಮೋಟರ ಸೈಕಲ್ಗೆ ಡಿಕ್ಕಿಪಡೆಯಿಸಿದನು. ಆಗ ನಾವು ಹೋಗುತ್ತಿದ್ದ ಮೋಟರ ಸೈಕಲ್ ಕೆಳಗೆ ಬಿದ್ದಿದ್ದು ಮೋಟರ ಸೈಕಲ್ ಮೇಲೆ ಹೋಗುತ್ತಿದ್ದ ನಾನು ಹಾಗೂ ನನ್ನ ತಂದೆ ಚಂದಪ್ಪ ಇಬ್ಬರು ಕೇಳಗೆ ಬಿದ್ದೇವು.  ನನಗೆ ಬಲಗಡೆ ತೊಡೆಗೆ ಒಳಪೆಟ್ಟಾಗಿದ್ದು ನಂತರ ನಾನು ಎದ್ದು ನಮ್ಮ ತಂದೆಯನ್ನು ನೋಡಲಾಗಿ ನಮ್ಮ ತಂದೆ ತಲೆಗೆ ಭಾರಿರಕ್ತಗಾಯವಾಗಿ ಕಿವಿಯಲ್ಲಿ ರಕ್ತ ಬರಹತ್ತಿತು,  ನಂತರ ನಾನು ನಮಗೆ ಮೋಟರ ಸೈಕಲ್ ಅಪಘಾತ ಪಡಿಸಿದ ಮೋಟರ ಸೈಕಲ್ ನಂ ನೋಡಲಾಗಿ  ಅದರ ನಂ ಕೆ.ಎ.28 ಇ.ಎಕ್ಸ-2930 ನೇದ್ದು ಇದ್ದು ನಮಗೆ ಮೋಟರ ಸೈಕಲ್ ಸವಾರನ ಹೆಸರು ಗೋತ್ತಾಗಿರುವದಿಲ್ಲ. ಅವನು ಮೋಟರ ಸೈಕಲ್ ಅಪಘಾತ ಪಡಿಸಿದ ಕೂಡಲೇ ತನ್ನ ಮೋಟರ ಸೈಕಲ್ಲನ್ನು ತಗೆದುಕೊಂಡು ಓಡಿಹೋಗಿರುತ್ತಾನೆ. ನಂತರ ನಾನು ನಮ್ಮ ತಂದೆ ಚಂದಪ್ಪ ರವರನ್ನು ಕರೆದುಕೊಂಡು ಲಿಂಗಸೂರ ಸರಕಾರಿ ಆಸ್ಪತ್ರೆಗೆ ಬಂದಿರುತ್ತೇನೆ ಅಂತಾ ತಿಳಿಸಿದನು.
 ನಂತರ ಲಿಂಗಸೂರ ಆಸ್ಪತ್ರೆಯಿಂದ ನಮ್ಮ ಚಿಕ್ಕಪ್ಪ ಚಂದಪ್ಪನನ್ನು ಹೆಚ್ಚಿನ ಉಪಚಾರ ಕುರಿತು ಬಳ್ಳಾರಿಯ ವಿಮ್ಸ ಆಸ್ಪತ್ರೆಗೆ ಕಳುಹಿಸಿದ್ದರಿಂದ ನಮ್ಮ ಚಿಕ್ಕಪ್ಪನ ಮಗ ಸುರೇಶನು ನಮ್ಮ ಚಿಕ್ಕಪ್ಪ ಚಂದಪ್ಪನನ್ನು ಕರೆದುಕೊಂಡು ಬಳ್ಳಾರಿಯ ವಿಮ್ಸ ಆಸ್ಪತ್ರೆಗೆ ಹೋಗಿದ್ದು ಇರುತ್ತದೆ. ಇಂದು ಮದ್ಯಾಹ್ನ 3:15 ಪಿ.ಎಂ ಸುಮಾರಿಗೆ ನಮ್ಮ ಚಿಕ್ಕಪ್ಪನ ಮಗ ಸುರೇಶ ಈತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಮ್ಮ ತಂದೆ ಚಂದಪ್ಪ ವ:50 ವರ್ಷ ಉ:ಒಕ್ಕಲುತನ ಜಾ:ಲಂಬಾಣಿ ಸಾ:ಗೊನವಾಟ್ಲಾ ರವರು ಬಳ್ಳಾರಿಯ ವಿಮ್ಸ ಆಸ್ಪತ್ರೆಯಲ್ಲಿ ಮೋಟರ ಸೈಕಲ್ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಹೊಂದುತ್ತಿದ್ದಾಗ ಉಪಚಾರ ಫಲಸದೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾನೆ. ನಮ್ಮ ಚಿಕ್ಕಪ್ಪನು ಸಿರಿಯಸ್ ಇದ್ದ ಕಾರಣ ಅವರ ಮಗ ಸುರೇಶನು ಲಿಂಗಸೂರದಿಂದ ವಿಮ್ಸ ಆಸ್ಪತ್ರೆ ಬಳ್ಳಾರಿಗೆ ಕರೆದುಕೊಂಡು ಹೋಗಿದ್ದು ಮರಳಿ ಬಂದು ಪಿಯರ್ಾದಿಕೊಡಲು ಯಾವುದೆ ವಾಹನ ಸೌಕರ್ಯಇಲ್ಲದ ಕಾರಣ ಮರಳಿ ಬರಲು ಆಗಿರುವದಿಲ್ಲ ಇಂದು ನಮ್ಮ ಚಿಕ್ಕಪ್ಪನು ಮೃತಪಟ್ಟಿರುವದರಿಂದ ಅವರ ಮಗ ಸುರೇಶನು ನನಗೆ ಪಿಯರ್ಾದಿ ಕೊಡಲು ತಿಳಿಸಿದ್ದರಿಂದ ನಾನು ಇಂದು ತಡವಾಗಿ ಬಂದು ಪಿಯರ್ಾದಿಕೊಟ್ಟಿದ್ದು ಇರುತ್ತದೆ. ಆದ್ದರಿಂದ ಮೋಟರ ಸೈಕಲ್ ಅಪಘಾತ ಪಡಿಸಿದ ಮೋಟರ ಸೈಕಲ್ ನಂ ಕೆ.ಎ.28 ಇ.ಎಕ್ಸ-2930 ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 35/2020 ಕಲಂ 279,304(ಎ).ಐಪಿಸಿ ಸಂಗಡ 187 ಐ.ಎಂ.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 140/2020 ಕಲಂ. ಮನುಷ್ಯಕಾಣಿಯಾದ ಬಗ್ಗೆ  :- ಇಂದು ದಿನಾಂಕ:23-05-2020ರಂದು07:30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗಕುಮಾರಿ ಹಣಮಂತಿತಂದೆ ದಿ|| ಶೇಳ್ಳಿಗೆಪ್ಪ ಕೊಂಡಿಕಾರ ವಯಾ||40 ವರ್ಷ ಉ:ಕೂಲಿ ಕೆಲಸ ಜಾತಿ||ಬೇಡರ ಸಾ||ಶೆಳ್ಳಗಿ ತಾ||ಸುರಪೂರ ಇವಳು ಠಾಣೆಗೆ ಬಂದು ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ಪಿಯರ್ಾದಿ ಅಣ್ಣನಾದಚಂದಪ್ಪಈತನು ದಿನಾಂಕ:23-05-2020 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ  ಶೆಳ್ಳಗಿ ಸಿಮಾಂತರದ ಮಂಟಪ ಮಾರುತಿದೇವಸ್ಥಾನದಗುಡಿಯ ಹತ್ತಿರ ಕೃಷ್ಣಾ ನದಿಯಲ್ಲಿ ಈಸಲು ಹೋಗಿ ಆಕಸ್ಮೀಕವಾಗಿ ಕಾಲು ಜಾರಿ ನಿರೀನಲ್ಲಿ ಮುಳುಗಿರುತ್ತಾನೆ ಇಲ್ಲಿಯವರೆಗೆ ಪತ್ತೆಯಾಗಿರುವದಿಲ್ಲ ನಾವು ನಿನ್ನೆಇವತ್ತು ಹುಡುಕಾಡಿದರು ಸಿಕ್ಕಿರುವದಿಲ್ಲ ಕಾಣಿಯಾದ ಬಗ್ಗೆ ಪ್ರಕರಣ ದಾಖಲಿಸಿ ಪತ್ತೆ ಮಾಡಿಕೊಡಲು ವಿನಂತಿಅಂತಾಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಮಡುತನಿಖೆಕೈಕೊಂಡಿದ್ದುಇರುತ್ತದೆ. ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 63/2020 ಕಲಂ 323, 354, 504, 506 ಸಂ 34 ಐಪಿಸಿ :- ದಿನಾಂಕ 21/05/2020 ರಂದು ಬೆಳಿಗ್ಗೆ 10-30 ಗಂಟೆಗೆ  ಫಿರ್ಯಾಧಿದಾರಳು ಮತ್ತು ಅವಳ ಗಂಡ ಹಾಗೂ ತಾಂಡಾದವರು ಮಾಣಿಕ ರಾಠೋಡ ಇವನ ಹೊಲದ ಹತ್ತಿರ ಹೊಸ ರೋಡ ಮಾಡುವ ಸಂಬಂಧ ಗಲಾಟೆಯಾಗುವದನ್ನು ನೋಡುವಾಗ ಆರೋಪಿತರಿಬ್ಬರು ಕೂಡಿಕೊಂಡು ಬಂದು ಫಿರ್ಯಾಧಿದಾರಳ ಜೋತೆಗೆ ಜಗಳ ತೆಗೆದು ಈ ಹಿಂದೆ ನೀನು ರೋಡ ಮಾಡಿಸುವದನ್ನು ನಿಲ್ಲಿಸಿದ್ದಿ ನಿನಗೆ ಬಹಳ ಸೊಕ್ಕುಯಿದೆ ಬೋಸಡಿ ಅಮತಾ ಬೈದು, ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ, ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದು,  ಕೈಇಂದ ಹೊಡೆದು ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!