ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/05/2020

By blogger on ಮಂಗಳವಾರ, ಮೇ 26, 2020






                          ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/05/2020 
                                                                                                               
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ 152/2020. ಕಲಂ 318 ಐ.ಪಿ.ಸಿ:- ಇಂದು ದಿನಾಂಕ: 22-05-2020 ರಂದು 9:30 ಎ.ಎಮ್.ಕ್ಕೆ ಫಿಯರ್ಾದಿ ಶ್ರೀ ಗುರುರಾಜ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿಗಳು ಶಹಾಪೂರ ಇವರು ಠಾಣೆಗೆ ಬಂದು  ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು  ಏನಂದರೆ ಇಂದು ದಿನಾಂಕ: 22-05-2020 ರಂದು ಮುಂಜಾನೆ ನಮ್ಮ ಇಲಾಖೆಯ ಶ್ರೀಮತಿ ತ್ರಿವೇಣಿ ಸುಪರವೈಜರ ಹತ್ತಿಗುಡೂರ ವೃತ್ತ ರವರು ನನಗೆ ದೂರವಾಣಿ ಮೂಲಕ ತಿಳಿಸಿದ್ದೇನಂದರೆ  ಕೊಂಗಂಡಿ ಗ್ರಾಮದ ಸುರಪೂರ ಮುಖ್ಯರ ರಸ್ತೆಯ  ಹಳ್ಳದ ಬ್ರಿಡ್ಜ ಮೇಲೆ ಯಾವುದೋ ಅಪರಿಚಿತ ನವಜಾತ ಹೆಣ್ಣು ಶಿಶು ಇದ್ದು ಅದು ಪೃತಪಟ್ಟಿದೆ ಅಂತಾ ಮಾಹಿತಿ ತಿಳಿದಿದ್ದು ಬಂದಿದೆ ಎಂದು ವಿಷಯ ತಿಳಿಸಿದರು. ನಾನು ತ್ರಿವೇಣಿ ಸುಪರವೈಜರ ರವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ನೋಡಲಾಗಿ ಶಹಾಪೂರ ಸುರಪೂರ ಮುಖ್ಯ ರಸ್ತೆಯ ಕೊಂಗಂಡಿ ಗ್ರಾಮದ ಹಳ್ಳದ ಬ್ರಿಡ್ಜ ಮೇಲೆ ಬಲಗಡೆ ಗೋಡೆಯ ಹತ್ತಿರ ಒಂದು ನವಜಾತ ಹೆಣ್ಣು ಶಿಶುವನ್ನು ಒಂದು ಪ್ಲಾಸ್ಟಿಕ ಚೀಲದಲ್ಲಿ ಹಾಕಿಇಟ್ಟಿದ್ದು ಅದು ಮೃತಪಟ್ಟಿದ್ದು ಇದ್ದು ಅದರ ವಯಸ್ಸು (0) ಇರುತ್ತದೆ ಸದರಿ ಶಿಶುವನ್ನು ಅದರ ತಾಯಿ ತಾನು ಜನ್ಮ ನೀಡಿದ ವಿಷಯವನ್ನು ಮುಚ್ಚಿಡುವ ಉದ್ದೇಶದಿಂದ ಸದರಿ ಶಿಶುವನ್ನು ಬಿಸಾಕಿ ಹೋಗಿದ್ದರಿಂದ ಸದರಿ ಶಿಶು ಮರಣ ಹೊಂದಿದ್ದು ಇರುತ್ತದೆೆ. ಸದರಿ ಘಟನೆಯು ಇಂದು ದಿನಾಂಕ:22-05-2020 ರಂದು ನಸುಕಿನ ಜಾವ 5:00 ಗಂಟೆಯಿಂದ 7:00 ಗಂಟೆಯ ಅವಧಿಯಲ್ಲಿ ಬಿಸಾಕಿ ಹೋಗಿರಬಹುದು. ಆದ್ದರಿಂದ ಯಾವುದೋ ಮಹಿಳೆ ತಾನು ಜನ್ಮನೀಡಿದ ವಿಷಯವನ್ನು ಮುಚ್ಚಿಡುವ ಉದ್ದೇಶದಿಂದ ತನ್ನ   ಜನ್ಮ ನೀಡಿದ ನವಜಾತ ಮೃತ ಹೆಣ್ಣು ಶಿಶುವನ್ನು ಬಿಸಾಕಿ ಹೋದ ಮಹಿಳೆಯನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ  ಅಂತಾ ಇದ್ದ ಫಿಯರ್ಾದಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ.152/2020 ಕಲಂ318, ಐ.ಪಿ.ಸಿ.ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.     


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 63/2020 ಕಲಂ 323, 354, 504, 506 ಸಂ 34 ಐಪಿಸಿ :- ದಿನಾಂಕ 21/05/2020 ರಂದು ಬೆಳಿಗ್ಗೆ 10-30 ಗಂಟೆಗೆ  ಫಿರ್ಯಾಧಿದಾರಳು ಮತ್ತು ಅವಳ ಗಂಡ ಹಾಗೂ ತಾಂಡಾದವರು ಮಾಣಿಕ ರಾಠೋಡ ಇವನ ಹೊಲದ ಹತ್ತಿರ ಹೊಸ ರೋಡ ಮಾಡುವ ಸಂಬಂಧ ಗಲಾಟೆಯಾಗುವದನ್ನು ನೋಡುವಾಗ ಆರೋಪಿತರಿಬ್ಬರು ಕೂಡಿಕೊಂಡು ಬಂದು ಫಿರ್ಯಾಧಿದಾರಳ ಜೋತೆಗೆ ಜಗಳ ತೆಗೆದು ಈ ಹಿಂದೆ ನೀನು ರೋಡ ಮಾಡಿಸುವದನ್ನು ನಿಲ್ಲಿಸಿದ್ದಿ ನಿನಗೆ ಬಹಳ ಸೊಕ್ಕುಯಿದೆ ಬೋಸಡಿ ಅಮತಾ ಬೈದು, ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ, ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದು,  ಕೈಇಂದ ಹೊಡೆದು ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಹುಣಸಗಿ  ಪೊಲೀಸ ಠಾಣೆ ಗುನ್ನೆ ನಂ:- 06/2020 174 ಸಿ.ಆರ್.ಪಿ.ಸಿ:- 22/05/2020 ರಂದು 01.30ಎ.ಎಂ ಗಂಟೆಗೆ ಪೋನ್ ಮುಖಾಂತರ ವಿಜಯಪೂರ ಬಿ.ಎಲ್.ಡಿ.ಇ ಆಸ್ಪತ್ರೆಯ ಓ.ಪಿ ಪೊಲೀಸ್ ಠಾಣೆಯಿಂದ ಡೆತ್ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ಕೊಟ್ಟು, ಮೃತನ ಹೆಂಡತಿಯಾದ ಶಾರದಾಬಾಯಿ ರಾಠೋಡ ಇವರಿಗೆ ವಿಚಾರಣೆ ಮಾಡಲು ಒಂದು ಟೈಪ್ ಮಾಡಿದ ದೂರು ಹಾಜರಪಡಿಸಿದ್ದೆನೆಂದರೆ, ನನ್ನ ಗಂಡನಾದ ಅಂಬ್ರೇಶ ಈತನು ಗೌಂಡಿ ಕೆಲಸ ಮಾಡಿಕೊಂಡಿದ್ದು, ಸದರಿಯವನಿಗೆ ಸುಮಾರು ದಿನಗಳಿಂದಾ ಹೊಟ್ಟೆಯ ನೋವಿದ್ದು, ಸಾಕಷ್ಟು ಕಡೆಗೆ ಖಾಸಗಿಯಾಗಿ ತೋರಿಸಿದರು ಕಡಿಮೆಯಾಗಿರಲಿಲ್ಲಾ, ದಿನಾಂಕ:21/05/2020 ರಂದು ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ಒಮ್ಮೇಲೆ ಹೊಟ್ಟೆಯ ನೋವು ಪ್ರಾರಂಭವಾದಗ ಮನೆಯಲ್ಲಿದ್ದ ಕ್ರೀಮಿನಾಶಕವನ್ನು ಔಷದಿ ಅಂತಾ ಹೊಟ್ಟೆಯ ನೋವಿನ ಬಾಧೆಯಲ್ಲಿ ಅಕಸ್ಮಿಕವಾಗಿ ಸೇವೆನೆ ಮಾಡಿದ್ದು, ನಂತರ ಉಪಚಾರಕ್ಕೆಂದು ಹುಣಸಗಿ ಸರಕಾರಿ ಬಂದು ಸೇರಿಕೆಯಾಗಿ, ಅಲ್ಲಿಂದಾ ಹೆಚ್ಚಿನ ಉಪಚಾರಕ್ಕೆಂದು ವಿಜಯಪುರ ಬಿ.ಎಲ್.ಡಿ.ಇ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆಯುತ್ತಾ ದಿ:22/05/2020 ರಂದು ಬೆಳಿಗ್ಗೆ 00.30 ಗಂಟೆಗೆ ವಿಜಯಪೂರದಲ್ಲಿ ಮೃತಪಟ್ಟಿದ್ದು ಅಂತಾ ಇತ್ಯಾದಿ ದೂರನ್ನು ಪಡೆದುಕೊಂಡು ಮೃತನ ಶವ ಪಂಚನಾಮೆಯನ್ನ ಹೆಚ್.ಸಿ-130 ರವರು ಮಾಡಿ ಕೊಂಡು ಮರಳಿ ಠಾಣೆಗೆ ಬಂದು ಮೃತನ ಹೆಂಡತಿ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 86/2020 ಕಲಂ: 279, 337, 338 ಐಪಿಸಿ:- ಇಂದು ದಿನಾಂಕ 22.05.2020 ರಂದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಪಿರ್ಯಾಧಿ ಮತ್ತು ಗಾಯಳು ವಿಷ್ಣು ಹಾಗೂ ಇನ್ನೊಬ್ಬ ಸಾಕ್ಷಿ ವಿನೋದ ಮೂರು ಜನರು ಕೂಡಿ ವಿನೋದ ಈತನಿಗೆ ದವಖಾನೆಗೆ ತೋರಿಸುವ ಕುರಿತು ಗುರುಮಠಕಲಗೆ ಬಂದು ನಂತರ ವಾಪಸ್ಸು ಮೋಟರ ಸೈಕಲ ನಂ. ಕೆಎ-33-ಯು-0090 ನೆದ್ದರ ಮೇಲೆ ಚಂಡರಕಿ ಗ್ರಾಮಕ್ಕೆ ಹೋಗುತ್ತಿದ್ದಾಗ ಸಮಯ ಮಧ್ಯಾಹ್ನ 1.30 ಗಂಟೆ ಸುಮಾರಿಗೆ ಗುರುಮಠಕಲ-ಚಂಡರಕಿ ರೋಡಿನ ಮೇಲೆ ಅಲವಿ ಹೊಲದ ರಸ್ತೆ ತಿರುವಿನಲ್ಲಿ ಚಂಡರಕಿ ಗ್ರಾಮದ ಕಡೆಯಿಂದ ಅಟೋ ನಂ. ಕೆಎ-33-ಎ-2144 ನೆದ್ದರ ಚಾಲಕ ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿ ಹೋಗುತ್ತಿದ್ದ ಮೋಟರ ಸೈಕಲಗೆ ಡಿಕ್ಕೊಟ್ಟು ಅಪಘಾತಪಡಿಸಿದ್ದರಿಂದ ಪಿರ್ಯಾಧಿ ತರಚಿದಗಾಯಗಳಾಗಿದ್ದು ವಿಷ್ಣು ಈತನ ತೊಡೆಗೆ ಮುರಿದಂತಾಗಿ ರಕ್ತಗಾಯವಾಗಿದ್ದ ಬಗ್ಗೆ ಪಿರ್ಯಾದಿ ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 09/2020 174 ಸಿ.ಆರ್.ಪಿ.ಸಿ:- ಇಂದು ದಿನಾಂಕ: 22/05/2020 ರಂದು 06.30 ಪಿಎಮ್ ಕ್ಕೆ ಅಜರ್ಿದಾರನಾದ ಶ್ರೀಮತಿ. ಜಮನಾಬಾಯಿ ಗಂಡ ಶಂಕರ ಚವ್ಹಾಣ ವಯಾ:48 ಉ: ಕೂಲಿ ಜಾ: ಲಂಬಾಣಿ ಸಾ: ನಡಿಹಾಲ ನೀಲುನಾಯಕ ತಾಂಡಾ ತಾ: ಶಹಾಪೂರ. ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ನಾನು ಜಮನಾಬಾಯಿ ಗಂಡ ಶಂಕರ ಚವ್ಹಾಣ ವಯಾ:48 ಉ: ಕೂಲಿ ಜಾ: ಲಂಬಾಣಿ ಸಾ: ನಡಿಹಾಳ ನೀಲುನಾಯಕ ತಾಂಡಾ ತಾ: ಶಹಾಪೂರ. ಇದ್ದು, ಈ ಮೂಲಕ ಅಜರ್ಿ ನೀಡುವದೇನಂದರೆ, ನಮಗೆ 04 ಜನ ಗಂಡು ಮಕ್ಕಳು ಇದ್ದು, ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ, ನನ್ನ ಒಬ್ಬ ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದು, ಉಳಿದವರು ನಮ್ಮ ಜೋತೆಯಲ್ಲಿಯೇ ಇರುತ್ತಾರೆ. 
             ಹೀಗಿದ್ದು ಇಂದು ದಿನಾಂಕ: 22/05/2020 ರಂದು ನಾನು, ನನ್ನ ಮಗಳಾದ ಕವಿತಾ ಇಬ್ಬರು ನಮ್ಮ ಚಾಮನಾಳ ತಾಂಡದಲ್ಲಿನ ಹೊಲಕ್ಕೆ ಹೊಗಿದ್ದೇವು, ನನ್ನ ಗಂಡ ಶಂಕರ ಮತ್ತು ನನ್ನ ಮಗ ಜಗದೀಶ ಇಬ್ಬರು ನಮ್ಮ ಮನೆಯ ಹಿಂದಿನ ಹೊಲದಲ್ಲಿ ನಮ್ಮ ಕುರಿಗಳನ್ನು ಮೇಯಿಸುತ್ತಾ ಇದ್ದರು, ಉಳಿದ ನನ್ನ ಮಕ್ಕಳು ಕೂಲಿ ಕೆಲಸಕ್ಕೆ ಹೋಗಿದ್ದರು, ನಂತರ ಅಂದಾಜು 03.10 ಪಿಎಂ ಸುಮಾರಿಗೆ ನಾನು, ನನ್ನ ಮಗಳು ಕವಿತಾ ಹೊಲದಲ್ಲಿ ಇದ್ದಾಗ ನಮ್ಮ ಸಣ್ಣ ಮಗನಾದ ಜಗದೀಶ ಈತನು ಪೋನ ಮಾಡಿ ವಿಷಯ ತಿಳಿಸಿದ್ದೇನಂದರೆ, ನನ್ನ ತಂದೆಯಾದ ಶಂಕರ ತಂದೆ ಭೀಮಲು ಚವ್ಹಾಣ ವಯಾ: 52 ಈತನು ಅಂದಾಜು 03.00 ಪಿಎಂ ಸುಮಾರಿಗೆ, ಕುರಿ ಮೇಯಿಸುತ್ತಾ ಇದ್ದಾಗಿ ತಾಂಡಾದ ಹತ್ತಿರ ಹೊಲದಲ್ಲಿ ಸಂಡಾಸಕ್ಕೆ ಹೋಗಿದ್ದನು, ಆಗ ಆಕಸ್ಮಿಕವಾಗಿ ಆತನ ಕುಂಡಿ ದಡಕ್ಕೆ ಹಾವು ಕಡೆದಿದ್ದು, ಅದರಿಂದ ಹೆದರಿ ಚಿರುತ್ತಾ ಬಂದನು ಆಗ ಇಬ್ಬರು ಮನೆಗೆ ಬಂದೆವು, ನನ್ನ ತಂದೆಯು ತನಗೆ ಕುಂಡಿ ದಡಕ್ಕೆ ಹಾವು ಕಡೆದಿದೆ ಅಂತಾ ಹೇಳಿ ಚಕ್ರ ಬಂದು ಬಿದ್ದಿರುತ್ತಾನೆ. ಅದಕ್ಕೆ ಆಂಬ್ಯೂಲೆನ್ಸ ವಾಹನಕ್ಕೆ ಪೋನ ಮಾಡಿದ್ದಾಗಿ ತಿಳಿಸಿದನು. ಆಗ ನಾನು ಮತ್ತು ನನ್ನ ಮಗಳು ಕವಿತಾ ಇಬ್ಬರು ಮನೆಗೆ ಬಂದು ನೋಡಲಾಗಿ ನನ್ನ ಗಂಡನು ಬೇಹೊಸ್ ಆಗಿ ಬಿದ್ದಿದ್ದನು. ನಮ್ಮ ತಾಂಡಾದ ಅಜರ್ುನ ತಂದೆ ಗೋಪುನಾಯ್ಕ, ಅರುಣಕುಮಾರ ತಂದೆ ರೇವುನಾಯಕ ಚವ್ಹಾಣ ಮತ್ತು ನನ್ನ ಮಕ್ಕಳಾದ ಶಿವುಕುಮಾರ, ಅನೀಲಕುಮಾರ ಎಲ್ಲರೂ ಮನೆಗೆ ಬಂದು ನೋಡಿದರು, ಅಷ್ಟರಲ್ಲಿ ಆಂಬ್ಯೂಲೆನ್ಸ ವಾಹನದವರು ಬಂದು ನೋಡಿ ನನ್ನ ಗಂಡ ಶಂಕರ ಚವ್ಹಾಣ ಈತನು ಮೃತಪಟ್ಟಿದ್ದಾಗಿ ತಿಳಿಸಿದರು, ಆಗ ಅಂದಾಜು ಸಮಯ 04.00 ಪಿಎಂ ಆಗಿತ್ತು,      
       ನನ್ನ ಗಂಡನಾದ ಶಂಕರ ತಂದೆ ಭೀಮಲು ಚವ್ಹಾಣ ವಯಾ:52 ಉ: ಒಕ್ಕಲುತನ ಜಾ: ಲಂಬಾಣಿ ಸಾ: ನಡಿಹಾಳ ನೀಲುನಾಯಕ ತಾಂಡಾ ತಾ: ಶಹಾಪೂರ ಈತನು ಇಂದು ದಿನಾಂಕ: 22/05/2020 ರಂದು 03.00 ಪಿಎಂ ಸುಮಾರಿಗೆ ಹೊಲದಲ್ಲಿ ಕುರಿ ಮೇಯಿಸುತ್ತಾ ಇರುವಾಗ ಸಂಡಾಸಕ್ಕೆ ಹೋಗಿದ್ದು, ಆಗ ಆಕಸ್ಮಿಕವಾಗಿ ಹಾವು ಕಡಿದು ಮೃತಪಟ್ಟಿರುತ್ತಾನೆ. ನನ್ನ ಗಂಡನ ಸಾವಿನ ವಿಷಯದಲ್ಲಿ ಯಾರ ಮೇಲು ಯಾವುದೆ ರೀತಿಯ ಸಂಶಯ ವಗೈರೆ ಇರುವದಿಲ್ಲ ಮಾನ್ಯರವರು ಮುಂದಿನ ಕ್ರಮ ಜರುಗಿಸಬೇಕು ಅಂತಾ ವಿನಂತಿ ಅಜರ್ಿಯ ಮೇಲಿಂದ ಠಾಣೆ ಯು.ಡಿ.ಆರ್ ನಂ: 09/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!