ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/05/2020

By blogger on ಗುರುವಾರ, ಮೇ 21, 2020







                                     ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/05/2020 
                                                                                                              
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 62/2020 ಕಲಂ 323, 324, 326, 504, 506 ಸಂ 34 ಐಪಿಸಿ:-ದಿನಾಂಕ 21/05/2020 ರಂದು ಬೆಳಿಗ್ಗೆ 6-00 ಗಂಟೆಗೆ ಫಿರ್ಯಾಧಿದಾರನು ಮತ್ತು ಅವನ ಮಗ ಇಬ್ಬರೂ ತಮ್ಮ ಹೊಲದಲ್ಲಿ ಗಳೆ ಹೊಡೆಯುವಾಗ ಆರೋಪಿತರೆಲ್ಲರೂ ಫಿರ್ಯಾಧಿ ಹೊಲದಲ್ಲಿ ಬಂದು ಏ ಬೋಸಡಿ ಮಕ್ಕಲೆ ಈ ಹಿಂದೆನು ನೀವು ಹೊಲ್ದ ಡ್ವಾಣದ ಸಂಬಂಧ ತಕರಾರು ಮಡುತತಾ ಬಂದಿದ್ದಿರಿ ಈಗ ನೀವು ನಮಗೆ ಹೇಳದೇ ಕೇಳದೇ ನಿಮ್ಮ ಮಗನ ಮದುವೆ ಮಾಡಿದ್ದಿರಿ ನಿಮಗೆ ಬಹಳ ಸೊಕ್ಕುಯಿದೆ, ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಕಟ್ಟಿಗೆಗಳಿಂಗ ಮತ್ತು ಕೊಡಲಿಗಳಿಂದ  ಫಿರ್ಯಾಧಿಗೆ ಮತ್ತು ಅವನ ಮಗನಿಗೆ ಹೊಡೆಬಡೆ ಮಡಿ ಭಾರಿ ರಕ್ತಗಾಯ, ಗುಪ್ತಗಾಯಗಳು ಮಾಡಿದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.



ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 84/2020 ಕಲಂ: 279, 304(ಎ) ಐಪಿಸಿ:- ಇಂದು ದಿನಾಂಕ 21.05.2020 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಪಿರ್ಯಾಧಿ ಗಂಡ ಜಗದೀಶ ಈತನು ತನ್ನ ಭಾಮೈದುನನ ಮೋಟರ ಸೈಕಲ ನಂ. ಟಿ.ಎಸ್-06-ಇಎಸ್-3851 ನೆದ್ದರ ಮೇಲೆ ಕೆಲಸದ ನಿಮೀತ್ಯ ಹೋಗಿ ಮರಳಿ ಗುರುಮಠಕಲಗೆ ಬರುವಾಗ ಮಧ್ಯಾಹ್ನ 1.00 ಗಂಟೆಯಿಂದ 2.30 ಗಂಟೆ ಅವಧಿಯಲ್ಲಿ ಚಿನ್ನಕಾರ ಗೇಟ ಸಮೀಪ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ  ವಾಹನ ನಿಯಂತ್ರಿಸದೆ ರೊಡಿನ ಪಕ್ಕದಲ್ಲಿ ಮೋಟರ ಸೈಕಲ ಇಳಿಸಿದ್ದರಿಂದ ಅಪಘಾತವಾಗಿ ಹಣೆಗೆ, ಮುಖಕ್ಕೆ, ಕೈಕಾಲುಗಳಿಗೆ ಪೆಟ್ಟಾಗಿ ಅಲ್ಲದೆ ಮೂಗಿನಿಂದ, ಬಾಯಿಯಿಂದ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟ ಬಗ್ಗೆ ಪಿರ್ಯಾಧಿ ಇರುತ್ತದೆ.


ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 85/2020 ಕಲಂ 279, 337, 338 ಐಪಿಸಿ:- ಇಂದು ದಿನಾಂಕ 21.05.2020 ರಂದು ಸಂಜೆ 04:00 ಗಂಟೆಗೆ ಫಿರ್ಯಾದಿಯು ತನ್ನ ಮನೆಯಲ್ಲಿದ್ದಾಗ ಆರೋಪಿ ಚಂದ್ರಕಾಂತ ಈತನು ಫಿರ್ಯಾದಿಯಲ್ಲಿ ಹೋಗಿ ಆತನನ್ನು ಕರೆದುಕೊಂಡು ಮದ್ದುರನಲ್ಲಿ ತನ್ನ ಸಂಬಂಧಿಕರು ತೀರಿಕೊಂಡಿದ್ದರಿಂದ ಮೋಟಾರು ಸೈಕಲ್ ನಂಬರ ಎಮ್.ಹೆಚ್.-01-ಡಿ.ಜಿ-6690 ನೇದ್ದರ ಮೇಲೆ ಕುಳಿತು ಕೇಶ್ವಾರ ಮಾರ್ಗವಾಗಿ ಮದ್ದೂರ ಕಡೆಗೆ ಹೋಗುತ್ತಿದ್ದ ಸದರಿ ಆರೋಪಿ ಚಂದ್ರಕಾಂತ ಈತನು ಸದರಿ ಮೋಟಾರು ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು ಅದೇ ರೀತಿ ಪುಟಪಾಕ ಕಡೆಯಿಂದ ಬರುತ್ತಿದ್ದ ಘಿಐ-100 ನೇದ್ದರ ಮೋಟಾರು ಸೈಕಲ್ ನಂಬರ  ಟಿ.ಎಸ್.-06-ಇ.ಟಿ-5911 ನೇದ್ದರ ಚಾಲಕನು ಕೂಡ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದು ಪರಸ್ಪರರು ತಮ್ಮ ವಾಹನಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಪರಸ್ಪರ ಮುಖಾ-ಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ಸಾಧಾ ಹಾಗೂ ಬಾರಿ ಸ್ವರೂಪದ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 85/2020 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 151/2020. ಕಲಂ. 279.338 ಐ.ಪಿ.ಸಿ. & 187 ಐಎಂವಿ ಯಾಕ್ಟ:- ಇಂದು ದಿನಾಂಕ: 21/05/2020 ರಂದು ಬೆಳಿಗ್ಗೆ 7-05 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ. ಇದೆ ಅಂತ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ 7-15 ಗಂಟೆಗೆ ಹೋಗಿ ಉಪಚಾರ ಪಡೆಯುತ್ತಿದ್ದ ಗಾಯಾಳುದಾರನಾದ ಶ್ರೀ  ಪ್ರಮೊದ ತಂದೆ ಸಂಪತಕುಮಾರ ವ|| 22 ಜಾ|| ಆದಿಕನರ್ಾಟಕ (ಎಸ್.ಸಿ) ಉ|| ಚಾಲಕ ಸಾ|| ಶೇಟ್ಟಳ್ಳಿ ಚೆನ್ನಪಟ್ಟಣ ಜಿ|| ರಾಮನಗರ ಇವರ ಹೇಳಿಕೆಯನ್ನು 7-20 ಗಂಟೆಯಿಂದ 8-20 ಗಂಟೆಯ ವರೆಗೆ ಪಡೆದುಕೊಂಡು ಮರಳಿ ಠಾಣೆಗೆ 8-45 ಗಂಟೆಗೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 20/05/2020 ರಂದು ರಾತ್ರಿ 9-00 ಗಂಟೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಿಂದ ಮೃತ ರಾಮು ತಂದೆ ತಿಮ್ಮಣ್ಣ ರಾಂಪೂರ ಸಾ|| ರಾವೂರ ಈತನು ಹೃದಯಾಗಾತದಿಂದ ಮೃತಪಟ್ಟ ಡೆಡ್ ಬಾಡಿಯನ್ನು ತೆಗೆದುಕೊಂಡು ಸದರಿ ಮೃತ ರಾಮುನ ಹೆಂಡತಿಯಾದ ಅನೀತಾ ಗಂಡ ರಾಮು ರಾಂಪೂರ, ತಿಮ್ಮಣ್ಣ ತಂದೆ ತಿಮ್ಮಣ್ಣ ರಾಂಪೂರ. ಲಕ್ಷ್ಮೀ ಗಂಡ ತಿಮ್ಮಣ್ಣ ರಾಂಪೂರ. ಸುಜಾತ ತಂದೆ ರಾಮು ರಾಂಪೂರ, ವೆಂಕಟೇಶ ತಂದೆ ರಾಮು ರಾಂಪೂರ, ಬಸವರಾಜ ತಂದೆ ರಾಮು ರಾಂಪೂರ, ಸಾ|| ಎಲ್ಲರು ರಾವೂರ ಇವರೆಲ್ಲರು ಕೂಡಿಕೊಂಡು ಮೃತ ರಾಮು ತಂದೆ ತಿಮ್ಮಣ್ಣ ಈತನ ಬಾಡಿಯನ್ನು ನನ್ನ ಅಂಬುಲೇನ್ಸ ನಂ ಕೆಎ-50-2105 ನೇದ್ದರಲ್ಲಿ ಹಾಕಿಕೊಂಡು ಜೈದೇವ ಆಸ್ಪತ್ರೆ ಬೆಂಗಳೂರಿನಿಂದ ಹೋರಟು ನಾನು ನನ್ನ ಅಂಬುಲೇನ್ಸ ಚಲಾಯಿಸುತ್ತ ರಾವೂರಕ್ಕೆ ಹೋಗುತ್ತಿರುವಾಗ ಇಂದು ದಿನಾಂಕ 21/05/2020 ರಂದು ಬೆಳಿಗ್ಗೆ 6-00 ಗಂಟೆಗೆ ಸುರಪೂರ-ಶಹಾಪೂರ ಮುಖ್ಯರಸ್ತೆಯ ಮೇಲೆ ದೇವದುಗರ್ಾ ಕ್ರಾಸ್ ದಾಟಿ ಅಂದಾಜು 500 ಮೀಟರ್ ಅಂತರದಲ್ಲಿ ನನ್ನ ಅಂಬುಲೇನ್ಸನ್ನು ನಿದಾನವಾಗಿ ಚಲಾಯಿಸುತ್ತ ಎಡಗಡೆ ಸೈಡಿಗೆ ಹೋಗುತ್ತಿರುವಾಗ ಎದರುಗಡೆಯಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಾಲಯಿಸಿಕೊಂಡು ಬಂದು ನನ್ನ ಅಂಬುಲೇನ್ಸಕ್ಕೆ ಡಿಕ್ಕಿಪಡಿಸಿ ಅಪಘಾತಮಾಡಿದ್ದು ಟ್ರ್ಯಾಕ್ಟರ್ ಪಲ್ಟಿಯಾಗಿದ್ದು ಸದರಿ ಅಪಘಾತದಲ್ಲಿ ನನಗೆ ಬಲಗೈ ಮುರಿದು ಭಾರಿ ರಕ್ತಗಾಯ, ತುಟಿಗೆ ರಕ್ತಗಾಯವಾಗಿದ್ದು. ಸದರಿ ಟ್ರ್ಯಾಕ್ಟರ ಇಂಜಿನಲ್ಲಿ ಕುಳಿತ್ತಿದ್ದವನಿಗೆ ನೋಡಿ ವಿಚಾರಿಸಲಾಗಿ ನಿಜಾಮುದ್ದಿನ ತಂದೆ ಮಹ್ಮದಸಾಬ ಮಳ್ಳಿ ಸಾ|| ಶಿರಿವಾಳ ಅಂತ ತಿಳಿಸಿದನು ನಿಜಾಮುದ್ದಿನಗೆ ಮುಖದ ಗದ್ದಕ್ಕೆ ರಕ್ತಗಾಯ, ಬಲಕಣ್ಣಿಗೆ ರಕ್ತಗಾಯ, ತಲೆಯ ಬಲಬಾಗಕ್ಕೆ ಭಾರಿ ರಕ್ತಗಾಯ, ಬಲಗಾಲ ಮೋಳಕಾಲಿಗೆ ತರಚಿದ ರಕ್ತಗಾಯ ವಾಗಿರುತ್ತದೆ. ಸದರಿ ಅಂಬುಲೇನ್ಸದಲ್ಲಿದ್ದ ಅನೀತಾ ಗಂಡ ರಾಮು ಇವರಿಗೆ ಎರಡು ಕಾಲಿಗೆ ಸಣ್ಣ ಪುಟ್ಟ ಗುಪ್ತಗಾಯ ವಾಗಿದ್ದು. ತಿಮ್ಮಣ್ಣ, ಲಕ್ಷ್ಮೀ, ಸುಜಾತ, ವೆಂಕಟೇಶ, ಬಸವರಾಜ ಇವರಿಗೆ ಯಾವದೆ ಗಾಯವಾಗಿರುವದಿಲ್ಲಾ ಸದರಿ ಅಪಘಾತ ಮಾಡಿದ ಟ್ರ್ಯಾಕ್ಟರ್ ನಂ ಕೆಎ-33ಟಿಎ-9161 ನೇದ್ದರ ಚೆಸ್ಸಿ ನಂ ಎಂಇಎ908ಎ5ಎಫ್ಹೆಚ್2143584. ಇದ್ದು ಅದರ ಚಾಲಕನಿಗೆ ನೋಡಿ ವಿಚಾರಿಸಲಾಗಿ ಬಸವರಾಜ ತಂದೆ ಸಿದ್ದಪ್ಪ ಮಡ್ನಾಳ ಸಾ|| ಶಿರವಾಳ ಅಂತ ತಿಳಿಸಿ ಜನಸೇರುವದನ್ನು ನೋಡಿ ಟ್ರ್ಯಾಕ್ಟರ ಬಿಟ್ಟು ಓಡಿ ಹೋದನು. ಸದರಿ ಅಪಘಾತದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಟ್ರ್ಯಾಕ್ಟರ್ನಲ್ಲಿರುವ ಕಲ್ಲುಗಳು ಕೆಳಗೆ ಬಿದ್ದಿರುತ್ತದೆ. ಮತ್ತು ನನ್ನ ಅಂಬುಲೇನ್ಸ ಜಕಂಗೊಂಡಿರುತ್ತದೆ. ಸದರಿ ಅಪಘಾತವು ಬೆಳಿಗ್ಗೆ 6-00 ಗಂಟೆಗೆ ದೇವದುಗರ್ಾ ಕ್ರಾಸ್ ದಾಟಿ ಅಂದಾಜು 500 ಮೀಟರ್ ಅಂತರದಲ್ಲಿ ಹತ್ತಿಗುಡೂರ ಕಡೆಗೆ ಜರುಗಿರುತ್ತದೆ. ಆಗ ನಾನು 108 ಅಂಬುಲೇನ್ಸಕ್ಕೆ ಪೋನ ಮಾಡಿದೆನು ಅಂಬುಲೇನ್ಸ ಬಂದನಂತರ ಅದರಲ್ಲಿ ನಾನು ಮತ್ತು ನಿಜಾಮುದ್ದಿನ್ ಇಬ್ಬರು ಅಂಬುಲೇನ್ಸದಲ್ಲಿ ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿದ್ದು ಇರುತ್ತದೆ ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 151/2020 ಕಲಂ: 279,338, ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.    


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 139/2020 ಕಲಂ: 78 () ಕೆ.ಪಿ. ಕಾಯ್ದೆ:- ಇಂದು ದಿನಾಂಕ: 21/05/2020 ರಂದು 01:35 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ್ ಪಿಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:21/05/2020 ರಂದು 11 ಎ.ಎಮ್. ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಹೇಮನೂರ ಗ್ರಾಮದ ವಾಲ್ಮೀಕಿ ಚೌಕ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ  ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ನಿಂಗಪ್ಪ ಹೆಚ್.ಸಿ-118  3) ಶ್ರೀ ಪರಮೇಶ ಸಿಪಿಸಿ-142 4) ಶ್ರೀ ಮಲ್ಲಯ್ಯ ಸಿಪಿಸಿ-51 ಹಾಗೂ ಜೀಪ್ ಚಾಲಕ 5) ಶ್ರೀ ಮಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ರವಿಕುಮಾರ ತಂದೆ ವೆಂಕೋಬ ಲಕ್ಷ್ಮೀ ವಯಾ:27 ವರ್ಷ ಜಾ:ಬೇಡರ ಉ:ಕೂಲಿ ಸಾ:ಹೇಮನೂರ ತಾ:ಸುರಪೂರ 2) ಶ್ರೀ ಸೋಪಿ ತಂದೆ ಬಾಸುಮಿಯಾ ನಾಯ್ಕೋಡಿ ವಯಾ:28 ವರ್ಷ ಜಾ:ಮುಸ್ಲಿಂ ಉ:ಕೂಲಿ ಕೆಲಸ ಸಾ:ಹೇಮನೂರ ಇವರನ್ನು 11:15 ಎ,ಎಂ,ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 11:30 ಎ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 12 ಪಿ.ಎಮ್ ಕ್ಕೆ ಹೇಮನೂರ ಗ್ರಾಮದ ವಾಲ್ಮೀಕಿ ಚೌಕ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ವಾಲ್ಮೀಕಿ ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12:05 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶರಣಪ್ಪ ತಂದೆ ಮಲ್ಲಯ್ಯ ಪೂಜಾರಿ ವಯಾ:53 ವರ್ಷ ಜಾ:ಗೋರವರ ಉ:ಕೂಲಿ ಕೆಲಸ ಸಾ:ಹೇಮನೂರ ತಾ: ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 910=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 12:05 ಪಿ.ಎಮ್ ದಿಂದ 01:05 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ  ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!