ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/05/2020

By blogger on ಬುಧವಾರ, ಮೇ 20, 2020






                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/05/2020 
                                                                                                               
ಯದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 61/2020 ಕಲಂ 323, 354, 504, 506 ಸಂ 34 ಐಪಿಸಿ:-ದಿನಾಂಕ 17/05/2020 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾಧಿದಾರಳು ತಾನು ಪಾಲಿಗೆ ಮಾಡಿದ ತನ್ನ ತಮ್ಮನ ಹೊಲದಲ್ಲಿ ಗಳೆ ಹೊಡೆಯುವ ಸಂಬಂಧ ತಮ್ಮೂರಿನ ಟ್ರ್ಯಾಕ್ಟರ ತೆಗೆದುಕೊಂಡು ಹೋಗಿ ಗಳೆ ಹೊಡೆಸುತ್ತಿರುವಾಗ ಆರೋಪಿತರಿಬ್ಬರೂ ಬಂದು ಏ ಬೋಸಡಿ, ರಂಡಿ ನೀನು ನಮ್ಮಪ್ಪನ ರಂಡಿ ಮಗಳು ಇದ್ದಿದ್ದಿ, ನೀನು ಈ ಹೊಲದಲ್ಲಿ ಯಾಕೆ ಬಂದು ಹೊಡೆಸುತ್ತಿದ್ದಿ, ನಿನಗೆ ಬಹಳ ಸೊಕ್ಕುಯಿದೆ, ನನ್ನ ತಂದೆಯ ಆಸ್ತಿಯಲ್ಲಿ ನಿಮಗೆ ಪಾಲು ಬರುವದಿಲ್ಲ, ಇಲ್ಲಿಂದ ಹೋಗುತ್ತಿ ಇಲ್ಲಾ, ನಿನಗೆ ಇವತ್ತು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಡಲು ಪ್ರಯತ್ನಿಸಿ ಕೈಇಂದ ಹೊಡೆದು ಕಾಲಿನಿಂದ ಒದ್ದು ಕೂದಲು ಹಿಡಿದು ಎಳೆದಾಡಿ ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 138/2020 ಕಲಂ 379 ಐ.ಪಿ.ಸಿ.  ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994:- ಇಂದು ದಿನಾಂಕ:18-05-2020 ರಂದು 7:20 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸುರಪೂರ ಪೊಲೀಸ್ ಠಾಣೆ ಸಾಹೇಬರು ಎರಡು ಮರಳು ತುಂಬಿದ ಟ್ಯಾಕ್ಟರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ಸಾರಾಂಶವೆನೆಂದರೆ, ಇಂದು ದಿನಾಂಕ:18/05/2020 ರಂದು 4:30 ಎ.ಎಮ್ ಸುಮಾರಿಗೆ ನಾನು ಸಂಗಡ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮಂಜುನಾಥ ಸಿಪಿಸಿ-271, ಶ್ರೀ ಬಸಯ್ಯ ಸಿಪಿಸಿ-129 ರವರೊಂದಿಗೆ ಗಾಂದಿ ಚೌಕದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಇಬ್ಬರು ವ್ಯಕ್ತಿಗಳು ತಮ್ಮ ಟ್ರ್ಯಾಕ್ಟರದಲ್ಲಿ ಕನರ್ಾಳ ಸೀಮಾಂತರದ ಕೃಷ್ಣಾ ನದಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ರುಕ್ಮಾಪುರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಸಂಗಡ ಇದ್ದ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮಂಜುನಾಥ ಸಿಪಿಸಿ-271, ಶ್ರೀ ಬಸಯ್ಯ ಸಿಪಿಸಿ-129 ಹಾಗೂ ಜೀಪ ಚಾಲಕನಾದ ಶ್ರೀ ಮಾಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 50 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 52 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 05:00 ಗಂಟೆಗೆ ಗಾಂದಿ ಚೌಕ ಹತ್ತಿರ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಸಿಬ್ಬಂಧಿಯೊಂದಿಗೆ ನಮ್ಮ ಠಾಣೆಯ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 05:15 ಕ್ಕೆ ಗಾಂದಿಚೌಕದಿಂದ ಹೊರಟು ಬೆಳಿಗ್ಗೆ 05:30 ಗಂಟೆಗೆ ರುಕ್ಮಾಪುರ ಕ್ರಾಸ ಹತ್ತಿರ ಹೋಗಿ ನಮ್ಮ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಿಂತುಕೊಂಡೆವು. ಅಂದಾಜ ಬೆಳಿಗ್ಗೆ 05:45 ಗಂಟೆಗೆ ರುಕ್ಮಾಪುರ ಕಡೆಯಿಂದ ಎರಡು ಟ್ಯಾಕ್ಟರಗಳ ಚಾಲಕರು ತಮ್ಮ ಟ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಸಿಬ್ಬಂಧಿಯವರ ಸಹಾಯದಿಂದ ಸದರಿ ಟ್ಯಾಕ್ಟರಗಳ ಚಾಲಕರಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಎರಡು ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ತಮ್ಮ ಎರಡು ಟ್ಯಾಕ್ಟರಗಳನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದರು. ನಂತರ ನಾನು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ಪರೀಶಿಲಿಸಿ ನೋಡಲು. ಒಂದು ನೀಲಿ ಬಣ್ಣದ ಸ್ವರಾಜ ಕಂಪನಿ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ.39.1357/ಖಘಈ05786 ಚೆಸ್ಸಿ ನಂ.     ಘಙಖಿಈ28432127746 ಅಂತಾ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/-  ರೂಗಳು ಆಗುತ್ತದೆ. ಒಂದು ನೀಲಿ ಬಣ್ಣದ ಸ್ವರಾಜ ಕಂಪನಿ ಟ್ಯಾಕ್ಟರ ಇದ್ದು ಅದರ ನಂ. ಕೆಎ-33 ಟಿಎ-5216 ಅಂತಾ ಇದ್ದು ಟ್ರಾಲಿಗೆ ನಂಬರ ಇರುವದಿಲ್ಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/-  ರೂಗಳು ಆಗುತ್ತದೆ. ಹೀಗೆ ಒಟ್ಟು ಎರಡು ಟ್ಯಾಕ್ಟರದಲ್ಲಿಯ ಒಟ್ಟು 04 ಘನ ಮೀಟರ ಮರಳು ಇದ್ದು ಅದರ ಅ.ಕಿ 3200/- ರೂಗಳು ಆಗುತ್ತದೆ. ಮರಳು ತುಂಬಿದ ಎರಡು ಟ್ಯಾಕ್ಟರಗಳನ್ನು ಪಂಚರ ಸಮಕ್ಷಮ 05:50 ಎ.ಎಮ್ ದಿಂದ 06:50 ಎ.ಎಮ್.ದವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರಗಳನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಎರಡು ಟ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 3200/- ರೂ.ಗಳ ಕಿಮ್ಮತ್ತಿನ ಅಂದಾಜು 04 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಎರಡು ಮರಳು ತುಂಬಿದ ಟ್ಯಾಕ್ಟರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 07:20 ಎ.ಎಂ.ಕ್ಕೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ. 138/2020 ಕಲಂ: 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 21/2020 ಕಲಂ 107 ಸಿಆರ್ಪಿಸಿ  :- ಇಂದು ದಿನಾಂಕ: 18/05/2020 ರಂದು 6.00 ಪಿಎಂ ಕ್ಕೆ ಠಾಣೆಯ ಶ್ರೀ ಲಿಂಗನಗೌಡ ಪಿಸಿ 365 ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 18/05/2020 ರಂದು 5.00 ಪಿಎಮ್ ಸುಮಾರಿಗೆ ಬೀಟ ಮಾಹಿತಿ ಸಂಗ್ರಹ ಕುರಿತು ನನಗೆ ನೇಮಿಸಿದ ಬೀಟ ಗ್ರಾಮವಾದ ವಿಭೂತಿಹಳ್ಳಿ ಗ್ರಾಮಕ್ಕೆ ಹೋದಾಗ ಮಾಹಿತಿ ಬಂದಿದ್ದೇನೆಂದರೆ, ವಿಭೂತಿಹಳ್ಳಿ ಗ್ರಾಮದಲ್ಲಿ ಖಾಸ ಅಣ್ಣ ತಮ್ಮಂದಿರರ ಮಧ್ಯ 2 ಗುಂಪುಗಳಾಗಿ ಹೊಲದ ಹಂಚಿಕೆಯ ವಿಷಯದಲ್ಲಿ ತಕರಾರು ಉಂಟಾಗಿ ಹೊಲದಲ್ಲಿ ನಮಗೆ ಸರಿಯಾಗಿ ಪಾಲು ಆಗಿಲ್ಲ ಮತ್ತೊಮ್ಮೆ ಹಂಚಿಕೊಳ್ಳಬೇಕು ಅಂತಾ 1 ನೇ ಪಾಟರ್ಿಯ ಜನರು ಮತ್ತು 2ನೇ ಪಾಟರ್ಿಯವರು ತಕರಾರು ಮಾಡುತ್ತಿದ್ದುದು ಕಂಡು ಬಂದಿದ್ದು ಸದರಿ ಹೊಲದ ವಿಷಯದಲ್ಲಿ ಮತ್ತೆ ತಕರಾರು ಉಂಟಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 1ನೇ ಪಾಟರ್ಿಯವರಾದ 1) ಮಲ್ಲಪ್ಪ ತಂದೆ ಭೀಮಶಾ ಮಾಳಪ್ಪನವರ 2) ಆಂಜನೇಯ ತಂದೆ ಮಲ್ಲಪ್ಪ ಮಾಳಪ್ಪನವರ 3) ಶರಣಪ್ಪ ತಂದೆ ಮಲ್ಲಪ್ಪ ಮಾಳಪ್ಪನವರ ಸಾ|| ಎಲ್ಲರೂ ವಿಭೂತಿಹಳ್ಳಿ ತಾ|| ಶಹಾಪೂರ ರವರು ಹೊಲದ ಹಂಚಿಕೆಯ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 18/05/2020 ರಂದು 6.00 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 21/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 22/2020 ಕಲಂ 107 ಸಿಆರ್ಪಿಸಿ  :- ಇಂದು ದಿನಾಂಕ: 18/05/2020 ರಂದು 6.30 ಪಿಎಂ ಕ್ಕೆ ಠಾಣೆಯ ಶ್ರೀ ಲಿಂಗನಗೌಡ ಪಿಸಿ 365 ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 18/05/2020 ರಂದು 5.00 ಪಿಎಮ್ ಸುಮಾರಿಗೆ ಬೀಟ ಮಾಹಿತಿ ಸಂಗ್ರಹ ಕುರಿತು ನನಗೆ ನೇಮಿಸಿದ ಬೀಟ ಗ್ರಾಮವಾದ ವಿಭೂತಿಹಳ್ಳಿ ಗ್ರಾಮಕ್ಕೆ ಹೋದಾಗ ಮಾಹಿತಿ ಬಂದಿದ್ದೇನೆಂದರೆ, ವಿಭೂತಿಹಳ್ಳಿ ಗ್ರಾಮದಲ್ಲಿ ಖಾಸ ಅಣ್ಣ ತಮ್ಮಂದಿರರ ಮಧ್ಯ 2 ಗುಂಪುಗಳಾಗಿ ಹೊಲದ ಹಂಚಿಕೆಯ ವಿಷಯದಲ್ಲಿ ತಕರಾರು ಉಂಟಾಗಿ ಹೊಲದಲ್ಲಿ ನಮಗೆ ಸರಿಯಾಗಿ ಪಾಲು ಆಗಿಲ್ಲ ಮತ್ತೊಮ್ಮೆ ಹಂಚಿಕೊಳ್ಳಬೇಕು ಅಂತಾ 1 ನೇ ಪಾಟರ್ಿಯ ಜನರು ಮತ್ತು 2ನೇ ಪಾಟರ್ಿಯವರು ತಕರಾರು ಮಾಡುತ್ತಿದ್ದುದು ಕಂಡು ಬಂದಿದ್ದು ಸದರಿ ಹೊಲದ ವಿಷಯದಲ್ಲಿ ಮತ್ತೆ ತಕರಾರು ಉಂಟಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 1ನೇ ಪಾಟರ್ಿಯವರಾದ 1) ಅಮರಪ್ಪ ತಂದೆ ಭೀಮಶಾ ಮಾಳಪ್ಪನವರ 2) ನಿಂಗಪ್ಪ ತಂದೆ ಭೀಮಶಾ ಮಾಳಪ್ಪನವರ 3) ಬಸಲಿಂಗಪ್ಪ ತಂದೆ ಭೀಮಶಾ ಮಾಳಪ್ಪನವರ 4) ಮಹಾಂತೇಶ ತಂದೆ ಮಾನಪ್ಪ ಮಾಳಪ್ಪನವರ 5) ನಿಂಗಪ್ಪ ತಂದೆ ಬಸಲಿಂಗಪ್ಪ ಮಾಳಪ್ಪನವರ ಸಾ|| ಎಲ್ಲರೂ ವಿಭೂತಿಹಳ್ಳಿ ತಾ|| ಶಹಾಪೂರ ರವರು ಹೊಲದ ಹಂಚಿಕೆಯ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 18/05/2020 ರಂದು 6.30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 22/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ



ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 66/2020 ಕಲಂ: 87 ಕೆ.ಪಿ ಎಕ್ಟ್ :- ದಿನಾಂಕ: 18/05/2020 ರಂದು 6-30 ಪಿಎಮ್ ಕ್ಕೆ ಶ್ರೀ ಶರಣಗೌಡ ಎಮ್. ನ್ಯಾಮಣ್ಣವರ್ ಆರಕ್ಷಕ ವೃತ್ತ ನಿರೀಕ್ಷಕರು ರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ:18/05/2020 ರಂದು 4:00 ಪಿಎಂ ಸುಮಾರಿಗೆ ನಾನು ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ಉಳ್ಳೆಸೂಗೂರು ಗ್ರಾಮದ ಹೊರಗಡೆ ಟೇಕರಾಳ ರಸ್ತೆಯ ಪಕ್ಕದ ಜಾಲಿಗಿಡದ ಪಕ್ಕದ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ 1)ಸೈದಪ್ಪ ಹೆಚ್.ಸಿ 34, 2)ಪ್ರಕಾಶ ಹೆಚ್.ಸಿ-18(ಪಿ), 3)ನಾಗರಾಜ ಪಿ.ಸಿ-357, 4)ವಿಷ್ಣುವರ್ಧನ್ ಸಿ.ಪಿ.ಸಿ-128, 5)ರಾಘವೇಂದ್ರರೆಡ್ಡಿ ಸಿ.ಪಿ.ಸಿ-255 ಇವರೊಂದಿಗೆ ಹೊರಟು ಸಾಯಂಕಾಲ 5:00 ಗಂಟೆಗೆ ಉಳ್ಳೆಸೂಗೂರು ಗ್ರಾಮದ ಹೊರಗಡೆ ಟೇಕರಾಳ ರಸ್ತೆಯ ಪಕ್ಕದ ಜಾಲಿಗಿಡದ ಪಕ್ಕದ ಖಾಲಿ ಜಾಗದಲ್ಲಿ ದುಂಡಾಗಿ ಇಸ್ಪಿಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿ 5 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರು ಓಡಿಹೋಗಿರುತ್ತಾರೆ. ವಶಕ್ಕೆ ಪಡೆದುಕೊಂಡವರಿಗೆ ವಿಚಾರಿಸಲಾಗಿ ತಮ್ಮ ಹೆಸರು 1)ಖಾಸಿಂ ತಂದೆ ಹುಸೇನಸಾಬ ಮಾನಗಾರ್, ವಯ:32 ವರ್ಷ, ಜಾತಿ:ಮುಸ್ಲಿಂ, ಉ||ಒಕ್ಕಲುತನ, ಸಾ||ಉಳ್ಳೆಸೂಗೂರು ಅಂತಾ ತಿಳಿಸಿದ್ದು, ಈತನ ಹತ್ತಿರ ನಗದು ಹಣ ರೂ.1300/- ಮತ್ತು 9 ಇಸ್ಪೆಟ್ ಎಲೆಗಳು ಸಿಕ್ಕವು, 2)ರಫಿಕ್ ತಂದೆ ನಬಿಸಾಬ ಮಾನಗಾರ, ವಯ:40 ವರ್ಷ, ಜಾತಿ:ಮುಸ್ಲಿಂ, ಉ||ಒಕ್ಕಲುತನ, ಸಾ||ಉಳ್ಳೆಸೂಗೂರು ಅಂತಾ ತಿಳಿಸಿದ್ದು, ಈತನ ಹತ್ತಿರ ನಗದು ಹಣ ರೂ.800/- ಮತ್ತು 7 ಇಸ್ಪೆಟ್ ಎಲೆಗಳು ಸಿಕ್ಕವು, 3)ಮಲ್ಲಿಕಾಜರ್ುನ ತಂದೆ ಶರಭಣ್ಣ ಪಡಶೆಟ್ಟಿ, ವಯ:44 ವರ್ಷ, ಜಾತಿ:ಲಿಂಗಾಯತ, ಉ||ಒಕ್ಕಲುತನ, ಸಾ||ಉಳ್ಳೆಸೂಗೂರು ಅಂತಾ ತಿಳಿಸಿದ್ದು, ಈತನ ಹತ್ತಿರ ನಗದು ಹಣ ರೂ.1150/- ಮತ್ತು 9 ಇಸ್ಪೆಟ್ ಎಲೆಗಳು ಸಿಕ್ಕವು, 4)ಕೋಟರೆಡ್ಡಿ ತಂದೆ ರಾಘವರೆಡ್ಡಿ ಊರಗಂಟಿ, ವಯ:48 ವರ್ಷ, ಜಾತಿ:ರೆಡ್ಡಿ, ಉ||ಒಕ್ಕಲುತನ, ಸಾ||ಉಳ್ಳೆಸೂಗೂರು ಅಂತಾ ತಿಳಿಸಿದ್ದು, ಈತನ ಹತ್ತಿರ ನಗದು ಹಣ ರೂ.750/- ಮತ್ತು 7 ಇಸ್ಪೆಟ್ ಎಲೆಗಳು ಸಿಕ್ಕವು, 5)ಮಹಿಬೂಬ ತಂದೆ ಅಬ್ದುಲಸಾಬ ಹೊಸಮನಿ, ವಯ:40 ವರ್ಷ, ಜಾತಿ:ಮುಸ್ಲಿಂ, ಉ||ಒಕ್ಕಲುತನ, ಸಾ||ಉಳ್ಳೆಸೂಗೂರು ಅಂತಾ ತಿಳಿಸಿದ್ದು, ಈತನ ಹತ್ತಿರ ನಗದು ಹಣ ರೂ.350/- ಮತ್ತು 7 ಇಸ್ಪೆಟ್ ಎಲೆಗಳು ಸಿಕ್ಕವು, ಸ್ಥಳದಲ್ಲಿ ಪರಿಶೀಲಿಸಲು 13 ಇಸ್ಪಿಟ್ ಎಲೆಗಳು ಹೀಗೆ ಒಟ್ಟು 4350/- ರೂ. ಗಳು ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳು ದೊರೆತವು. ವಶಕ್ಕೆ ಪಡೆದುಕೊಂಡವರನ್ನು ಓಡಿಹೋದ ಇಬ್ಬರು ವ್ಯಕ್ತಿಗಳ ಬಗ್ಗೆ ವಿಚಾರಿಸಲಾಗಿ ಅವರ ಹೆಸರು 1)ಅಬ್ದುಲ ತಂದೆ ನಬಿಸಾಬ ಮಾನಗಾರ, ಸಾ||ಉಳ್ಳೆಸೂಗೂರು, 2)ಕರೀಮ ತಂದೆ ಚಾಂದಸಾಬ ಗುರಸುಣಗಿ ಸಾ||ಉಳ್ಳೆಸೂಗೂರು ಅಂತಾ ತಿಳಿಸಿದರು. ದಾಳಿಯ ಬಗ್ಗೆ ಸಾಯಂಕಾಲ 5:00 ಗಂಟೆಯಿಂದ 6:00 ಗಂಟೆಯವರೆಗೆ ಜಪ್ತಿಪಂಚನಾಮೆಯನ್ನು ಕೈಗೊಂಡು ಮೇಲ್ಕಂಡ ಆರೋಪಿತರನ್ನು ಮತ್ತು ಮುದ್ದೇಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 66/2020 ಕಲಂ: 87 ಕೆ.ಪಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 86/2020 ಕಲಂ:  143.147.323.324.504.506 ಐಪಿಸಿ ಸಂಗಡ 149 ಮತ್ತು  ಕಲಂ: 3(1)(ಡಿ)()  ಎಸ್ಸಿ.ಎಸ್ಟಿ ಪಿಎ ಆಕ್ಟ 1989:- ಇಂದು ದಿನಾಂಕ 18.05.2020 ರಂದು  11.30  ಪಿ.ಎಮ್ ಕ್ಕೆ ಪಿರ್ಯಾದಿ ಅಜರ್ಿದಾರರು ಶ್ರಿ ಜೆಟ್ಟೆಪ್ಪ ತಂದೆ ಮಾನಪ್ಪ ದೊಡಮನಿ ವ|| 19 ಜಾ|| ಮಾದರ ಉ|| ಕೂಲಿಕೆಲಸ ಸಾ: ಜೈನಾಪೂರ ತಾ: ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೆನೆಂದರೆ ನಾನು ನಿನ್ನೆ ದಿನಾಂಕ 17/05/2020 ರಂದು ನನ್ನ ವಯಕ್ತಿಕ ಕೆಲಸದ ನಿಮಿತ್ಯ ಕಿರದಳ್ಳಿ ಗ್ರಾಮಕ್ಕೆ ಹೋಗಿ ನನ್ನ ಕೆಲಸ ಮುಗಿದ ನಂತರ ಕಿರದಳ್ಳಿ ಕ್ರಾಸಿಗೆ ಹೋಗುವ ಕುರಿತು ನನ್ನ ಮೋಟಾರ ಸೈಕಲ್ ಮುಖಾಂತರ ಸಾಯಾಂಕಾಲ 6.00 ಗಂಟೆ ಸುಮಾರಿಗೆ ಕಿರದಳ್ಳಿ ಗ್ರಾಮದ ಸಂಗೊಳ್ಳಿ ರಾಯಣ್ಣನ ಕಟ್ಟೆಯ ಹತ್ತಿರ ಹೋಗುತ್ತಿದ್ದಾಗ ಕೆಲವು ಕುರುಬ ಜನಾಂಗದ ಹುಡುಗರು ರೋಡಿಗೆ ಅಡ್ಡ ನಿಂತಿದ್ದು ಅವರಿಗೆ ನಾನು ದಾರಿ ಬಿಟ್ಟು ನಿಂತುಕೊಳ್ಳಿ ಅಂತಾ ಅಂದಿದ್ದಕ್ಕೆ ಸದರಿಯವರು ನನ್ನೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆ ಬಡೆ ಮಾಡಿದ್ದು ನಂತರ ನಾನು ಮತ್ತೇ ಕಿರದಳ್ಳಿ ಗ್ರಾಮದ ನಮ್ಮ ಸಂಬಂದಿಕರಾದ ಯಮನಪ್ಪ ತಂದೆ ಭೀಮಣ್ಣ ಅಚ್ಚಿಕೇರಿ ಹಾಗೂ ಶಾಂತಪ್ಪ ತಂದೆ ತಿಪ್ಪಣ್ಣ ಅಚ್ಚಿಕೇರಿ ಇವರಿಗೆ ತಿಳಿಸಿದ್ದು ನಂತರ ನಾವು ಮೂರು ಜನರು ಕೂಡಿ ಸದರಿ ಸಂಗೊಳ್ಳಿ ರಾಯಣ್ಣನ ಕಟ್ಟೆಯ ಹತ್ತಿರ ಬಂದು ಅಲ್ಲಿಯೇ ಇದ್ದ 1) ಈರಣ್ಣ ತಂದೆ ಭೀಮಣ್ಣ ಸಗರ 2) ಸಿದ್ದಪ್ಪ ತಂದೆ ಭೀಮಣ್ಣ ಭಂಡಾರಿ 3) ಮಲ್ಲಪ್ಪ ತಂದೆ ಸಿದ್ದಪ್ಪ ಭಂಡಾರಿ 4) ಶಿವಪ್ಪ ತುಂಬಿಗಿ 5) ಮಾರ್ತಂಡ ತಂದೆ ಸಿದ್ದಪ್ಪ 6) ಭೀಮರಾಯ ತುಂಬಿಗಿ ಈ 6 ಜನರಿಗೆ ನಮಗೆ ಯಾವ ಕಾರಣಕ್ಕೆ ಹೊಡೆದಿದ್ದಿರಿ ಅಂತಾ ಕೇಳಿದಾಗ ಸದರಿ 6 ಜನರು ಸೇರಿ ಎನಲೇ ಮಾದಿಗ ಸೂಳೆ ಮಕ್ಕಳೆ ಮತ್ತೆ ನಮ್ಮ ಹತ್ತಿರ ಬಂದು ಏಕೆ ಹೊಡೆದಿರುವಿರಿ ಅಂತಾ ಕೇಳಲು ಬಂದುರುವಿರಾ ಸೂಳೆ ಮಕ್ಕಳೆ ಅಂತಾ ಜಾತಿ ನಿಂದನೆಯಿಂದ ಅವಾಚ್ಯವಾಗಿ ಬೈದು ಎಲ್ಲರೂ ಕೈಯಿಂದ ಹೊಡೆಯುತ್ತಾ ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯ ಸಿದ್ದಪ್ಪ ತಂದೆ ಭೀಮಣ್ಣ ಭಂಡಾರಿ ಈತನು ಅಲ್ಲಿಯೇ ಬಿದ್ದ ಕಟ್ಟಿಗೆಯಿಂದ ನನ್ನ ಬಲಗಾಲು ಮೊಳಕಾಲು ಕೆಳಗೆ ಹಾಗೂ ಎದೆಗೆ ಹೊಡೆದು ಗುಪ್ತಗಾಯಪಡಿಸಿದನು. ನನ್ನ ಜೊತೆಯಲ್ಲಿದ್ದ ಯಮನಪ್ಪ ಅಚ್ಚಿಕೆರಿ ಇತನಿಗೆ ಎಲ್ಲರು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಕೈಯಿಂದ ಹೊಡೆದಿದ್ದರಿಂದ ಎಡಮುಂಡಿಗೆ ಹಾಗು ಎಡಗಾಲು ತೊಡೆಗೆ ಗುಪ್ತಗಾವಾಗಿರುತ್ತದೆ. ಅಲ್ಲದೇ ಶಾಂತಪ್ಪ ಅಚ್ಚಿಕೇರಿ ಈತನಿಗೂ ಸಹ ಎಲ್ಲರೂ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಿದ್ದರಿಂದ ಬೆನ್ನಿಗೆ ಒಳಪೆಟ್ಟಾಗಿ ಎಡಕೈ ಮೊಳಕೈಗೆ ತರಚಿದ ಗಾಯವಾಗಿರುತ್ತದೆ. ನಂತರ ನಾವು 3 ಜನರು ನೆಲಕ್ಕೆ ಬಿದ್ದ ಚಿರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಮ್ಮ ಜನಾಂಗದ ಗೊಲ್ಲಾಳಪ್ಪ ತಂದೆ ಬೀಮಣ್ಣ ಅಚ್ಚಿಕೇರಿ ಹಾಗೂ ಚನ್ನಬಸು ತಂದೆ ತಿಪ್ಪಣ್ಣ ಅಚ್ಚಿಕೇರಿ ಮತ್ತು ನಿಂಗಪ್ಪ ತಂದೆ ಬಸನಿಂಗಪ್ಪ ದೊಡಮನಿ ಇವರು ಬಂದು ಸದರಿಯವರು ನಮಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರು ಮಕ್ಕಳೆ ಇನ್ನು ಮುಂದೆ ಊರಲ್ಲಿ ನಾವು ಹೇಳಿದಂತೆ ಕೇಳಿದರೆ ಸರಿ ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೋದರು. ನಂತರ ನಾವು ಉಪಚಾರ ಕುರಿತು ಕೆಂಭಾವಿ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಪಡೆದುಕೊಂಡು ಹೆಚ್ಚಿನ ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದು ಮರಳಿ ಕಿರದಳ್ಳಿ ಗ್ರಾಮಕ್ಕೆ ಬಂದಾಗ ತಿಳಿದು ಬಂದಿದ್ದೆನೆಂದರೆ ಇಂದು ದಿನಾಂಕ 18/05/2020 ರಂದು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ಮತ್ತೇ ಕಿರದಳ್ಳಿ ಗ್ರಾಮದ ಕುರುಬ ಜನಾಂಗದ ಹೆಣ್ಣು ಮಕ್ಕಳಾದ 1) ಬಸಮ್ಮ ಗಂಡ ಮಲ್ಲಪ್ಪ 2) ನಿಂಗಮ್ಮ 3) ಶಾಂತ್ರೆಮ್ಮ ಗಂಡ ಭೀಮರಾಯ 4) ಮಹಾದೇವಿ ಗಂಡ ನಿಂಗಪ್ಪ ಈ 4 ಜನರು ನಮ್ಮ ಜನಾಂಗದ ಯಮನಪ್ಪ ತಂದೆ ಭೀಮಣ್ಣ ಅಚ್ಚಿಕೇರಿ ಇವರ ಮನೆಗೆ ಬಂದು ಎಲೇ ಮಾದಿಗ ಸೂಳೆ ಮಕ್ಕಳೆ ನೀವು ಇನ್ನೂ ಮುಂದೆ ಹೇಗೆ ಸಂಸಾರ ಮಾಡುತ್ತಿರಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಹೋದ ಬಗ್ಗೆ ತಿಳಿಸಿದ್ದು, ಕಾರಣ ಈ ವಿಷಯದಲ್ಲಿ ಕಿರದಳ್ಳಿ ಗ್ರಾಮದ ನಮ್ಮ ಸಂಬಂದಿಕರಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಕಾರಣ ವಿನಾಕಾರಣವಾಗಿ ನಮ್ಮೊಂದಿಗೆ ಜಗಳ ತೆಗೆದು ಜಾತಿ ನಿಂದನೆಯಿಂದ ಬೈದು ಕೈಯಿಂದ ಹಾಗು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿ ಜೀವದ ಭಯ ಹಾಕಿದ  ಮೇಲ್ಕಾಣಿಸಿದ 10 ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತ ಕೊಟ್ಟ ಅಜರ್ಿ ಕೊಟ್ಟ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 86/2020 ಕಲಂ: 143,147,,323,324,504.506 ಐಪಿಸಿ ಸಂಗಡ 149 ಐಪಿಸಿ ಮತ್ತು  ಕಲಂ: 3(1)(ಡಿ)() ಎಸ್ಸಿ.ಎಸ್ಟಿ ಪಿಎ ಆಕ್ಟ 1989 ಪ್ರಕಾರ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!