ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/05/2020
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ 08/2020 ಕಲಂ 174 ಸಿಆರ್ಪಿಸಿ:- ಇಂದು ದಿನಾಂಕ; 17/05/2020 ರಂದು 12.30 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಗುರುನಾಥರೆಡ್ಡಿ ತಂದೆ ಬಸವರಾಜ ಬಸರೆಡ್ಡಿ ವಯಾ|| 30 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ನಗನೂರ ತಾ|| ಸುರಪೂರ ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ನಮ್ಮ ತಂದೆ ತಾಯಿಗೆ ನಾನು ಮತ್ತು ಅಣ್ಣನಾದ ಭೀಮರೆಡ್ಡಿ ಮತ್ತು ತಮ್ಮ ಸುಬಾಸರೆಡ್ಡಿ ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರೂ ಹೆಣ್ಣು ಮಕ್ಕಳು ಹೀಗೆ ಒಟ್ಟು ಐದು ಜನ ಮಕ್ಕಳಿದ್ದು ಎಲ್ಲರಿಗು ಮದುವೆಯಾಗಿದ್ದು ತಮ್ಮನಾದ ಸುಬಾಸರೆಡ್ಡಿ ಇತನಿಗೆ ಇನ್ನೂ ಮದುವೆಯಾಗಿರುವುದಿಲ್ಲ ಆತನಿಗೆ ಯಾವಾಗಲು ಹೊಟ್ಟೆ ನೋವಿನಿಂದ ಬಳಲುತ್ತಿದ್ದನು. ಹೀಗಿದ್ದು ಇಂದು ದಿನಾಂಕ 17/05/2020 ರಂದು ಬೆಳಿಗ್ಗೆ ಅಂದಾಜು 9.30 ಗಂಟೆ ಸುಮಾರಿಗೆ ನಾನು ಮತ್ತು ಅಪ್ಪ, ಅಮ್ಮ ಮತ್ತು ತಮ್ಮ ಸುಬಾಸರೆಡ್ಡಿ ಎಲ್ಲರೂ ಮನೆಯಲ್ಲಿದ್ದಾಗ ತಮ್ಮನಾದ ಸುಬಾಸರೆಡ್ಡಿ ಇತನು ನನಗೆ ಹೊಟ್ಟೆ ನೊವು ಜಾಸ್ತಿ ಆಗತಾ ಇದೆ ಅಂತಾ ಚಿರಾಡುತ್ತಿದ್ದಾಗ ನಾನು ಆಸ್ಪತ್ರೆಗೆ ಹೋಗೋಣ ಅಂತಾ ಅಂದಾಗ ತಮ್ಮನು ಯಾವಾಗಲೂ ಆಸ್ಪತ್ರೆಗೆ ಹೋಗುವದೆ ಆಯಿತು ಅಂತಾ ಮನನೊಂದು ಕಾಪಾಟಿನಲ್ಲಿದ್ದ ಕ್ರಿಮಿನಾಷಕ ಔಷದಿ ಸೇವಿಸಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ನಾನು ಮತ್ತು ತಂದೆ ಹೋಗಿ ತಮ್ಮನಿಗೆ ಏನಾಯಿತು ಅಂತಾ ಕೇಳಲಾಗಿ ಆತನು ನನಗೆ ಹೊಟ್ಟೆ ನೋವು ಜಾಸ್ತಿ ಆಗಿದ್ದು, ಹೊಟ್ಟೆ ನೋವು ತಾಳಲಾರದೇ ಕಪಾಟಿನಲ್ಲಿದ್ದ ಕ್ರಿಮಿನಾಷಕ ಔಷಸಿ ಸೇವನೆ ಮಾಡಿದ್ದೆನೆ ಅಂತಾ ಹೇಳಿದಾಗ ನಾನು, ತಂದೆ ಬಸವರಾಜ ಇಬ್ಬರೂ ಕೂಡಿ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಶಹಾಪೂರ ತಾಲೂಕ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಉಪಚಾರ ಪಡೆಯುತ್ತಾ, ಉಪಚಾರ ಫಲಕಾರಿಯಾಗದೆ ಇಂದು ಬೆಳಿಗ್ಗೆ 11.40 ಗಂಟೆಗೆ ಆಸ್ಪತ್ರೆಯಲ್ಲಿಯೇ ಸಾವನಪ್ಪಿರುತ್ತಾನೆ. ಕಾರಣ ಸದರಿಯವನ ಸಾವಿನಲ್ಲಿ ನಮಗೆ ಯಾವುದೇ ಸಂಶಯ ಇರುವುದಿಲ್ಲ ಕಾರಣ ತಾವು ಬಂದು ಮುಂದಿನ ಕ್ರಮ ಜರುಗಿಸಲು ಈ ವಿನಂತಿ ಅಜರ್ಿ ನೀಡಿದ ಸಾರಾಂಶ ಮೇಲಿಂದ ಠಾಣೆ ಯು.ಡಿ.ಆರ್ ನಂ 08/2020 ಕಲಂ 174 ಸಿಆರ್ಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 07/2020 174 ಸಿ.ಆರ್.ಪಿ.ಸಿ:- ಇಂದು ದಿನಾಂಕ: 17/05/2020 ರಂದು ರೀಮ್ಸ ಆಸ್ಪತ್ರೆಯಿಂದ ಡೆತ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಆಸ್ಪತ್ರೆಗೆ ಭೇಟಿ ನೀಡಿದಾಗ ಹಣಮಂತ್ರಾಯ ತಂದೆ ಭೀಮಶಪ್ಪ ಶಿವಣ್ಣನವರು ವ:52 ಜಾ:ಕುರುಬರ, ಉ:ಒಕ್ಕಲುತನ ಸಾ: ತೇಕರಾಳ ತಾ:ವಡಗೇರಾ ಇವರು ಹೇಳಿಕೆ ಫಿರ್ಯಾಧಿ ಕೊಟ್ಟಿದ್ದನಂದರೆ ನನಗೆ ಸಾಹೇಬಗೌಡ, ಅನಿಲ್ಕುಮಾರ ಮತ್ತು ಮಂಜುಳಾ ಹೀಗೆ ಎರಡು ಜನ ಗಂಡು ಮತ್ತು ಒಬ್ಬ ಹೆಣ್ಣು ಮಗಳಿರುತ್ತಾಳೆ. ಸಾಹೇಬಗೌಡನಿಗೆ ಬನ್ನಮ್ಮ ಇಳೊಂದಿಗೆ ಲಗ್ನ ಮಾಡಿರುತ್ತೇವೆ. ಅವರಿಗೆ 6 ತಿಂಗಳ ಭೋಜಲಿಂಗೆಶ್ವರ ಅಂತಾ ಗಂಡು ಮಗು ಇರುತ್ತದೆ. ಮಂಜುಳಾ ಇವಳಿಗೆ ಕೂಡಾ ಲಗ್ನ ಮಾಡಿಕೊಟ್ಟಿದ್ದು, ಬಾಣಂತನಕ್ಕೆ ನಮ್ಮ ಮನೆಗೆ ಬಂದಿರುತ್ತಾಳೆ. ಅನಿಲಕುಮಾರನಿಗೆ ಇನ್ನು ಲಗ್ನ ಆಗಿರುವುದಿಲ್ಲ. ಹೀಗಿದ್ದು ನಾವು, ಮಕ್ಕಳು ಮತ್ತು ಸೊಸೆಯಂದಿರು ಎಲ್ಲರೂ ಒಂದಲ್ಲೆ ವಾಸವಾಗಿರುತ್ತೇವೆ. ನಮ್ಮ ತೇಕರಾಳ ಸೀಮಾಂತರದಲ್ಲಿ ಸವರ್ೆ ನಂ. 45 ವಿಸ್ತೀರ್ಣ 1 ಎಕರೆ 32 ಗುಂಟೆ ಜಮೀನು ಇದ್ದು, ನನ್ನ ಹೆಸರಿನಲ್ಲಿ ಇರುತ್ತದೆ. ನನಗೆ ವಯಸ್ಸಾಗಿದ್ದರಿಂದ ನಮ್ಮ ಮನೆಯ ಸಂಪೂರ್ಣ ಸಂಸಾರದ ಕೊಡು ತಗೊಳ್ಳುವ ಜವಾಬ್ದಾರಿಯನ್ನು ನನ್ನ ಹಿರಿ ಮಗನಾದ ಸಾಹೇಬಗೌಡನಿಗೆ ವಹಿಸಿದ್ದು, ಆತನೆ ನಮ್ಮ ಮನೆಯ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದನು. ನಮ್ಮ ಮನೆ ಸಂಸಾರ, ಜಮೀನಿನಲ್ಲಿ ಬಿತ್ತಿ ಬೆಳೆಯುವ ಕುರಿತು ಹಣಕಾಸಿನ ಅಡಚಣೆಯಾಗಿರುವುದರಿಂದ ನಮ್ಮ ಮೇಲ್ಕಂಡ ಜಮೀನಿನ ಮೇಲೆ ಐಸಿಐಸಿಐ ಬ್ಯಾಂಕಿನಲ್ಲಿ ರೂ. 3,00,000/- ಸಾಲ ಮಾಡಿ ಹೋದ ವರ್ಷ ಹತ್ತಿ ಬೆಳೆಯನ್ನು ಹಾಕಿದ್ದು, ಸದರಿ ಹತ್ತಿ ಬೆಳೆ ರೋಗಕ್ಕೆ ತುತ್ತಾಗಿ ಸರಿಯಾಗಿ ಕೈಗೆ ಬರದೆ ಇದ್ದುದ್ದರಿಂದ ಸಾಲ ತೀರಿಸಲು ಆಗಲಿಲ್ಲ. ಅಲ್ಲದೆ ಅದಕ್ಕೆ ಬೀಜ ಗೋಬ್ಬರಕ್ಕೆಂದು ಮತ್ತೆ ಅಲ್ಲಲ್ಲಿ ಖಾಸಗಿಯಾಗಿ ಸುಮಾರು 4,00,000/- ರೂ. ದಷ್ಟು ಸಾಲ ಮಾಡಿಕೊಂಡಿದ್ದನು. ಸದರಿ ಸಾಲ ಹೇಗೆ ತೀರಿಸುವುದು ಎಂದು ನನ್ನ ಹಿರಿ ಮಗ ಚಿಂತೆ ಮಾಡುತ್ತಿದ್ದನು. ಆಗ ನಾನು ಮತ್ತು ನನ್ನ ಹೆಂಡತಿ ಭೀಮಮ್ಮ ಹಾಗೂ ಮಕ್ಕಳು ಸೊಸೆಯಂದಿರು ಕೂಡಿ ಹೇಳಿದರು ಕೇಳದೆ ಅವನು ನನಗೆ ಬಹಳ ಸಾಲ ಆಗಿದೆ ಹೊಲದಲ್ಲಿ ಹಾಕಿದ ಹತ್ತಿ ಬೆಳೆ ಬೀಜ ಗೊಬ್ಬರದ ಖಚರ್ು ತೇಲಿಲ್ಲ. ನಾನು ಸಾಲ ಹೇಗೆ ತೀರಿಸಲು ನಾನು ಬದುಕಲ್ಲ ಸಾಯುತ್ತೇನೆ ಎಂದು ದಿನಂಪ್ರತಿ ತುಂಬಾ ಚಿಂತಾಕ್ರಾಂತನಾಗುತ್ತಿದ್ದನು. ಹೀಗಿದ್ದು ದಿನಾಂಕ: 14/05/2020 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಊರಲ್ಲಿ ಹೊರಗಡೆ ಹೋಗಿ ಮನೆಗೆ ಬರುವಷ್ಟರಲ್ಲಿ ನನ್ನ ಮಗಳಾದ ಮಂಜುಳಾ ಇವಳು ನನಗೆ ಅಪ್ಪಾ ಸಾಹೇಬಗೌಡ ಅಣ್ಣ ಮನೆಯಲ್ಲಿ ಕ್ರೀಮಿನಾಶಕ ಎಣ್ಣೆ ಕುಡಿದು ಒದ್ದಾಡುತ್ತಿದ್ದಾನೆ ಎಂದು ಅಳುತ್ತಾ ಹೇಳಿದಳು. ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಹೋಗಿ ನೋಡಿದಾಗ ನನ್ನ ಮಗ ಸಾಹೇಬಗೌಡನು ಕ್ರಿಮಿನಾಶಕ ಎಣ್ಣೆ ಕುಡಿದು ವಾಂತಿ ಮಾಡಿಕೊಳ್ಳುತ್ತಾ ಒದ್ದಾಡುತ್ತಿದ್ದನು. ಅವನಿಗೆ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಯಾದಗಿರಿ ಜಿಲ್ಲೆ ಸರಕಾರಿ ಆಸ್ಪತ್ರೆಗೆ ತಂದು ತೋರಿಸಿದಾಗ ಹೆಚ್ಚಿನ ಉಪಚಾರಕ್ಕಾಗಿ ರಾಯಚೂರಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ನನ್ನ ಮಗನಿಗೆ ರಾಯಚೂರು ರೀಮ್ಸ್ ಬೋಧಕ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ನನ್ನ ಮಗನಿಗೆ ಏಕೆ ಕ್ರಿಮಿನಾಶಕ ಎಣ್ಣೆ ಕುಡಿದಿ ಎಂದು ಕೇಳಿದಾಗ ಸಾಲ ಮಾಡಿಕೊಂಡಿದ್ದು, ಹತ್ತಿ ಬೆಳೆ ಕೂಡಾ ಸರಿಯಾಗಿ ಬಂದಿಲ್ಲ, ಇನ್ನು ಬೀಜ ಗೊಬ್ಬರಕ್ಕೆ ಮಾಡಿದ ಹೇಗೆ ತೀರಿಸಲಿ ಎಂದು ಚಿಂತೆ ಮಾಡಿ ಎಣ್ಣೆ ಕುಡಿದಿರುತ್ತೇನೆ ಎಂದು ಹೇಳಿದನು. ರೀಮ್ಸ್ ಬೋಧಕ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ನನ್ನ ಮಗನು ಇಂದು ದಿನಾಂಕ: 17/05/2020 ರಂದು 12-14 ಪಿಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಾರಣ ನನ್ನ ಮಗ ಸಾಹೇಬಗೌಡ ಈತನು ಮನೆಯ ಸಂಸಾರದ ಪೂತರ್ಿ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತಿದ್ದು, ಜಮೀನಿನಲ್ಲಿ ಬೆಳೆಯುವ ಕುರಿತು ಬೀಜ ಗೊಬ್ಬರಕ್ಕೆ ಅಂತಾ ಮಾಡಿದ ಸಾಲ ಮತ್ತು ಈ ವರ್ಷ ಹೊಲದಲ್ಲಿ ಹಾಕಿದ ಹತ್ತಿ ಬೆಳೆ ರೋಗಕ್ಕೆ ತುತ್ತಾಗಿದ್ದರಿಂದ ಸಾಲ ಹೇಗೆ ತೀರಿಸುವುದು ಎಂದು ಚಿಂತೆ ಮಾಡಿ ಕ್ರಿಮಿನಾಶಕ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ-ಫಿರ್ಯಾಧಿ ವೈಗೆರೆ ಇರುವುದಿಲ್ಲ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 07/2020 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 67/2020 ಕಲಂ, 87 ಕೆ.ಪಿ ಆ್ಯಕ್ಟ್:- ಇಂದು ದಿನಾಂಕ:17/05/2020 ರಂದು 01.20 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಬಂದು, ಜಪ್ತಿ ಪಂಚನಾಮೆ, ಆರೋಪಿತರು ಮತ್ತು ಮುದ್ದೇಮಾಲು ಜೋತೆಗೆ ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ ಕಕ್ಕಸಗೇರಾ ರೋಡಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 07 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 92230=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 11.45 ಎಎಮ್ ದಿಂದ 12.45 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 01.20 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 67/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 68/2020 447, 323, 326 504, 506 ಸಂ: 34 ಐಪಿಸಿ ಮತ್ತು ಕಲಂ: 3(1)(ಆರ್), 3(1)(ಎಸ್), 3(1)(ಗಿ) ಎಸ್.ಸಿ./ಎಸ್.ಟಿ ಯಾಕ್ಟ:- ಇಂದು ದಿನಾಂಕ: 17/05/2020 ರಂದು 05.10 ಪಿಎಂ ಕ್ಕೆ ಕ್ಕೆ ಪಿಯರ್ಾದಿ ಹಣಮಂತ ತಂದೆ ಭೀಮಣ್ಣ ವಡ್ಡರ ವಯಾ:50 ಉ: ಒಕ್ಕಲುತನ ಜಾ: ವಡ್ಡರ ಸಾ: ಕಕ್ಕಸಗೇರಾ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ನಮ್ಮ ಹೊಲ ಮತ್ತು ಬೂದನೂರ ಗ್ರಾಮದ ದೇವಣ್ಣ ತಂದೆ ಶರಣಪ್ಪ ಸಾಹೂಕಾರ ಇವರ ಹೊಲಗಳು ಅಕ್ಕ-ಪಕ್ಕದಲ್ಲಿ ಇರುತ್ತವೆ. ನಿನ್ನೆ ದಿನಾಂಕ: 15/05/2020 ರಂದು ನಾನು ಮತ್ತು ನಮ್ಮೂರಿನ ಭೀಮಣ್ಣ ತಂದೆ ಹಣಮಂತ ಕದ್ದಡ್ಡಿ, ಶಂಕ್ರೆಪ್ಪ ತಂದೆ ಶೆಟ್ಟೆಪ್ಪ ನಗನೂರ ಎಲ್ಲರೂ ನಮ್ಮ ಹೊಲದಲ್ಲಿ ಕಸ ಆಯುತ್ತಿದ್ದೇವು. ನಮ್ಮ ತಮ್ಮನಾದ ನಿಂಗಪ್ಪ ತಂದೆ ಭೀಮಣ್ಣ ವಡ್ಡರ ವಯಾ:40 ಈತನು ನಮ್ಮ ಹೊಲದ ಬಾಂದಾರಿಗೆ ಎತ್ತು ಮೇಯಿಸುತ್ತಾ ಇದ್ದಾಗ ನೀರಡಿಕೆ ಆಗಿದ್ದರಿಂದ ಅಲ್ಲೆ ಗಿಡದ ಹತ್ತಿರ ಇದ್ದ ನೀರು ಕುಡಿಯಲು ಹೊಗಿದ್ದನು. ಅದೆ ಸಮಯಕ್ಕೆ ನಮ್ಮ ಎತ್ತುಗಳು ನಮ್ಮ ಪಕ್ಕದ ಹೊಲದವರಾದ ದೇವಣ್ಣ ಸಾಹುಕಾರ ಇವರ ಹೊಲದಲ್ಲಿ ಹೋಗಿ ಅವರ ಎತ್ತುಗಳಿಗೆ ಈರೀದು ಕಾದಾಡತೊಡಗಿದವು, ಆಗ ನಮ್ಮ ತಮ್ಮನಾದ ನಿಂಗಪ್ಪ ಈತನು ಓಡಿ ಹೋಗಿ ನಮ್ಮ ಎತ್ತುಗಳಿಗೆ ಹೊಡೆದುಕೊಂಡು ಬಂದನು, ಅದನ್ನು ನೋಡಿದ ದೇವಣ್ಣ ತಂದೆ ಶರಣಪ್ಪ ಸಾಹುಕಾರ ಜಾ: ಲಿಂಗಾಯತ ಸಾ: ಬೂದನೂರ ಮತ್ತು ಅವರ ಜೋತೆಯಲ್ಲಿ ಸತೀಶ ರಡ್ಡಿ ತಂದೆ ಬಸ್ಸಣ್ಣ ಗುಬ್ಬೆವಾಡ ಸಾ: ಬೂದನೂರ ಇಬ್ಬರು ಕೂಡಿ ಆಗ ಅಂದಾಜು 03.00 ಪಿಎಂ ಸುಮಾರಿಗೆ ನಮ್ಮ ಹೊಲದಲ್ಲಿ ಬಂದು ನಮ್ಮ ಎತ್ತಿಗೆ ಹೊಡೆಯತೊಡಗಿದರು, ಆಗ ನಾನು ಮತ್ತು ನಮ್ಮ ನಮ್ಮ ತಮ್ಮ ಇಬ್ಬರು ಹೊಡೆಯಲಿ ಬಿಡು ಅಂತಾ ಸುಮ್ಮನಾದೆವು, ಆಗ ಒಮ್ಮೆಲೆ ದೇವಣ್ಣ ಸಾಹುಕಾರ ಈತನು ಈ ವಡ್ಡ ಸೂಳೆ ಮಗ ಹೆಂಗ ನಿಂತಾನ ನೋಡು ಕಳ್ಳ ಬೆಕ್ಕಿನಂಗೆ ಇವರ ಹಾವಳಿ ಬಾಳಾತು ಈ ವಡ್ಡ ಸೂಳೆ ಮಗನಿಗೆ ಹೊಡಿ ಮೊದಲು ಅಂತಾ ನಮ್ಮ ತಮ್ಮನಿಗೆ ಅವಾಶ್ಚವಾಗಿ ಬೈಯುತ್ತ ಸತೀಶ ರಡ್ಡಿಗೆ ಹೇಳಿದನು, ಆಗ ದೇವಣ್ಣ ಸಾಹುಕಾರನ ಜೋತೆಯಲ್ಲಿ ಬಂದಿದ್ದ ಸತೀಶ ರಡ್ಡಿ ಈತನು ತನ್ನ ಕೈಯಲ್ಲಿಯ ಒಂದು ಕೊಡಲಿಯ ತುಂಬಿನಿಂದ ನನ್ನ ತಮ್ಮನ ಎಡಗೈ ತೊಳಿಗೆ ಹೊಡೆದನು ಆಗ ನನ್ನ ತಮ್ಮನ ಎಡಗೈ ತೋಳಿಗೆ ಭಾರಿ ರಕ್ತಗಾಯ ಆಗಿ ಎಲಬು ಮುರಿದು ರಕ್ತಸ್ರಾವ ಆಗತೊಡಗಿತು, ಅಷ್ಟರಲ್ಲಿ ನಮ್ಮ ಹೊಲದಲ್ಲಿ ಕಸ ಆಯುತ್ತಿದ್ದ ನಾನು ಮತ್ತು ಭೀಮಣ್ಣ ತಂದೆ ಹಣಮಂತ ಕದ್ದಡ್ಡಿ, ಶಂಕ್ರೆಪ್ಪ ತಂದೆ ಶೆಟ್ಟೆಪ್ಪ ನಗನೂರ ಇಬ್ಬರು ಸಾ; ಕಕ್ಕಸಗೇರಾ ಎಲ್ಲರೂ ಕೂಡಿ ನಮ್ಮ ತಮ್ಮನಿಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡೆವು. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ಆಗ ದೇವಣ್ಣ ಸಾಹುಕಾರ ಈತನು ಎಲೆ ಸಣ್ಣ ಜಾತಿ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ಹೊಲದಲ್ಲಿ ನೀನಾಗಲಿ ನಿನ್ನ ಎತ್ತು, ದನಗಳಾಗಲಿ ಬಂದರೆ ಹಂಗೆ ಖಡಿದು ಖಲಾಸ್ ಮಾಡಿ ಕೆನಾಲಕ್ಕೆ ಹಾಕುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನನ್ನ ತಮ್ಮನಿಗೆ ರಕ್ತ ಸ್ರಾವ ಆಗುತ್ತಿದ್ದರಿಂದ ನೇರವಾಗಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಸಿಕೊಂಡು ನಂತರ ಮೀರಜ ಆಸ್ಪತ್ರೆಗೆ ಹೆಚ್ಚಿನ ಉಪಚಾರಕ್ಕೆ ಕಳುಹಿಸಿ ನಾನು ನಮ್ಮ ಅಳಿಯ ಶರಣಪ್ಪ ವಡ್ಡರ, ಮತ್ತು ನಮ್ಮ ಸಮಾಜದವರಾದ ಪರಶುರಾಮ ವಡ್ಡರ ಇಬ್ಬರು ಸಾ: ಕಕ್ಕಸಗೇರಾ ಇವರೊಂದಿಗೆ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:17/05/2020 ರಂದು 05.10 ಪಿಎಂ ಕ್ಕೆ ಠಾಣೆಗೆ ಬಂದು ಹೇಳಿಕೆ ನಿಡಿರುತ್ತೇನೆ.
ಕಾರಣ ನಮ್ಮ ಎತ್ತುಗಳು ಕಾದಾಡಿದ ವಿಷಯದಲ್ಲಿ ನಮ್ಮ ತಮ್ಮನಿಗೆ ಜಾತಿ ಎತ್ತಿ ಅವಾಶ್ಚವಾಗಿ ಬೈಯ್ದು, ಕೊಡಲಿಯ ತುಂಬಿನಿಂದ ಹೊಡೆದು ಭಾರಿ ರಕ್ತಗಾಯ ಮಾಡಿ, ಜೀವದ ಬೆದರಿಕೆ ಹಾಕಿದ ದೇವಣ್ಣ ತಂದೆ ಶರಣಪ್ಪ ಸಾಹುಕಾರ ಜಾ:ಲಿಂಗಾಯತ ಸಾ: ಬೂದನೂರ ಮತ್ತು ಸತೀಶ ರಡ್ಡಿ ತಂದೆ ಬಸ್ಸಣ್ಣ ಗುಬ್ಬೆವಾಡ ಸಾ: ಬೂದನೂರ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 68/2020 ಕಲಂ: 447, 323, 326 504, 506 ಸಂ: 34 ಐಪಿಸಿ ಮತ್ತು ಕಲಂ: 3(1)(ಆರ್), 3(1)(ಎಸ್), 3(1)(ಗಿ) ಎಸ್.ಸಿ. ಎಸ್.ಟಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using