ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/05/2020

By blogger on ಶನಿವಾರ, ಮೇ 16, 2020


                        ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/05/2020 
                                                                                                               
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 76/2020 ಕಲಂ. 279. 337.338. ಐಪಿಸಿ  :- ಇಂದು ದಿನಾಂಕ: 16-05-2020 ರಂದು ಬೆಳಿಗ್ಗೆ 09-15 ಗಂಟೆಗೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ ಪೊನ್ ಮೂಲಕ ಎಮ್ ಎಲ್ ಸಿ ಇದೆ ಅಂತಾ ತಿಳಿಸಿದ್ದರಿಂದ ಸೈದಾಪೂರ ಸರಕಾರಿ ಆಸ್ಪತ್ರೆ ಗೆ ಭೆಟಿ ನೀಡಿ ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳುಗಳನ್ನು ವಿಚಾರಿಸಿ ಅವರು ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಗಾಳುವಿನ ತಂದೆ ಹೇಳಿಕೆ ನೀಡಿದ್ದೆನೆಂದರೆ ನನ್ನ ಮಗ ಅಶೋಕ ಮತ್ತು ನನ್ನ ಅಳಿಯ ಯಮನಪ್ಪ ಇಬ್ಬರೂ ಕೂಡಿ ಮೋಟರ ಸೈಕಲ್ ನಂಬರ ಕೆಎ-33 ಯು-5485 ನೇದ್ದರ ಮೋಟರ ಸೈಕಲ್ ಮೇಲೆ ಬೆಳಿಗ್ಗೆ 08-15 ಗಂಟೆಗೆ ಸೈದಾಪೂರ- ನಾರಯಣಪೇಟ ಮುಖ್ಯ ರಸ್ತೆಯ ಮೇಲೆ ಕಣೆಕಲ್ ಕ್ರಾಸ ದಾಟಿ ನೀಲಹಳ್ಳಿ ಸಿದ್ದಪ್ಪ ಇವರ ಹೊಲದ ಹತ್ತಿರ ಸೈದಾಪೂರಕ್ಕೆ ಹೋಗುತ್ತಿರುವಾಗ ಎದರುಗಡೆಯಿಂದ ಮೋಟರ ಸೈಕಲ್ ನಂಬರ ಕೆಎ-33 ಎಕ್ಸ -7822 ಮೇದ್ದರ ಚಾಲಕನು ತನ್ನ ಪಲ್ಸರ ಮೋಟರ ಸೈಕಲ್ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮೋಟರ ಸೈಕಲ ನಿಯಂತ್ರಣ ಮಾಡದೆ ಅಪಘಾತಪಡಿಸಿದ್ದು ಇರುತ್ತದೆ ಅಂತಾ ಪಿಯರ್ಾಧಿ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 149/2020. ಕಲಂ 279,338 ಐ.ಪಿ.ಸಿ.:-  ದಿನಾಂಕ 10-05-2020 ರಂದು 1:30 ಪಿ.ಎಮ್.ಕ್ಕೆ ಶಹಾಪೂರ ದೇವದುರ್ಗ ರಸ್ತೆಯ ಏವದುರ್ಗ ಕ್ರಾಸ ಸಮೀಪ   ರಸ್ತೆಯ ಮೇಲೆ ಫಿಯರ್ಾದಿಯವರು  ದೇವದುರ್ಗ ದಿಂದ ಶಹಾಪುರಕ್ಕೆ ಆರೋಪಿತನ ಗೂಡ್ಸ ಆಟೋದಲ್ಲಿ ಕುಳಿತುಕೊಂಡು ಹೊರಟಿದ್ದು ಆರೋಪಿತನು ತನ್ನ ಆಟೋ ನಂ. ಕೆ.ಎ.36-ಬಿ-5833 ನೇದ್ದರ ಚಾಲನಾದ ಪರಶುರಾಮ ತಂದೆ ಯಲ್ಲಪ್ಪ  ವೇಷಾಗಾರ ಸಾ: ಹಾಲಗಡಲಿ ತಾ:ಶಹಾಪುರ ಈತನು ತನ್ನ ಅಟೋವನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕಕ್ಕೆ ಪಲ್ಟಿ ಮಾಡಿ  ಆಟೋದಲ್ಲಿದ್ದ ಫಿಯರ್ಾದಿಯವರಿಗೆ ಇವರಿಗೆ ಭಾರೀ ಗಾಯಮಾಡಿದ್ದು ಮತ್ತು ಫಿಯರ್ಾದಿಯ ಮಗಳಿಗೆ ಸಾದಾಗಾಯವಾಗಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಇತ್ಯಾದಿ ಇದ್ದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.149/2020 ಕಲಂ. 279,338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 34/2020 ಕಲಂ 143,147,323,354,504,506, ಸಂಗಡ 149 ಐಪಿಸಿ:- ಕೇಸಿನ ಸಂಕ್ಷಿಪ್ತ ಸಾರಾಂಶ:- ಇಂದು ದಿನಾಂಕ 16/05/2020 ರಂದು 1:30 ಪಿ.ಎಂಕ್ಕೆ ಶ್ರೀಮತಿ ಸುಶಲಮ್ಮ ಗಂಡ ಮಲ್ಲೇಶಯ್ಯ ಹಿರೇಮಠ ವ:65 ವರ್ಷ ಸಾ:ಜೊಗಂಡಬಾವಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪುಮಾಡಿಸಿದ ಪಿಯಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನಂದರೆ ನಾನು ಜೊಗಂಡಬಾವಿ ಗ್ರಾಮದ ಖಾಯಂ ನಿವಾಸಿಯಾಗಿದ್ದು ಜೊಗಂಡಬಾವಿ ಗ್ರಾಮದ ಸೀಮಾಂತರದ ಹೊಲ ಸವರ್ೆ ನಂ 5/2 ಕ್ಷೇತ್ರ 6 ಎಕೆರೆ 23 ಗುಂಟೆ ಜಮೀನು ಇರುತ್ತದೆ. ನಮ್ಮ ಜಮೀನಿದ ಪಶ್ಚಿಮ ದಿಕ್ಕಿಗೆ ಹೊಂದಿ ಚಂದಪ್ಪ ತಂದೆ ಚಿದಾನಂದಪ್ಪ ಕಪನೂರ ಸಾ:ಜೊಗಂಡಬಾವಿ ಇವರ ಜಮೀನು ಇದ್ದು ಚಿದಾನಂದಪ್ಪ ರವರ ಜಮೀನಿಗೆ ನಮ್ಮ ಜಮೀನಲ್ಲಿ ಯಾವುದೆ ದಾರಿ ಇರುವದಿಲ್ಲ ದಿನಾಂಕ 12/05/2020 ರಂದು ಸಮಯ 12:00 ಗಂಟೆಗೆ 1)ಚಂದಪ್ಪ ಹಾಗೂ ಅವರ ಮನೆಯವರಾದ 2) ಚಂದ್ರಗಿರಿ ಕಪನೂರ 3)ಈರಮ್ಮ ಗಂಡ ಚಂದ್ರಗಿರಿ 4) ಶರಣಪ್ಪ ತಂದೆ ಚಂದ್ರಗಿರಿ 5) ದೇವಮ್ಮ ಗಂಡ ಭೀಮರಾಯ ದೇವತಕಲ್ಲ 6) ಭೀಮರಾಯ ದೇವತಕಲ್ಲ 7) ಮಲ್ಲಿಕಾಜರ್ುನ ಕಪನೂರ 8) ಗುಂಡಪ್ಪ ಚಂದಪ್ಪ ಕಪನೂರ 9) ರೇಣುಕಾ ದೇವತಕಲ್ 10) ಸಿದ್ದಮ್ಮ ಗಂಡ ಚಂದಪ್ಪ 11) ಈರಪ್ಪ ವಡಗೇರಿ 12) ದ್ಯಾಮಣ್ಣ ಹುಲಗಪ್ಪ ಗಡ್ಡಿ 13) ನಿರುಪಾದಿ ಹುಲಗಪ್ಪ ಗಡ್ಡಿ 14) ಶಿವಬಾಯಿ ಕಪನೂರ 15) ಜಗದೇವಿ ದೇವತಕಲ್ 16) ಶಿವಯೋಗಿ ಜೈನಾಪೂರ 17) ಈರಪ್ಪ ತಂದೆ ಬೀರಪ್ಪ ಸೋಬಾನ 18) ಯಲ್ಲಪ್ಪ  ತಂದೆ ಬಸಲಿಂಗಪ್ಪ ಖಿಲಾರಟ್ಟಿ ರವರು ಸೇರಿಕೊಂಡು ನಮ್ಮ ಜಮೀನಿನಲ್ಲಿಯ ಪೂರ್ವ ದಿಕ್ಕಿಗೆ ಇರುವ ದೊಡ್ಡಕಲ್ಲು ಹೊಡ್ಡನ್ನು ತಗೆದು ತಮ್ಮ ಜಮೀನಿಗೆ ಹಾಯ್ದು ಹೊಗಲು ದಾರಿಮಾಡಿಕೊಳ್ಳುತ್ತಿದ್ದಾಗ ನಾನು ಅವರಿಗೆ ನಿಮಗೆ ಇಲ್ಲಿ ದಾರಿ ಇರುವದಿಲ್ಲ ಇಲ್ಲಿ ಯಾಕೆ ದಾರಿಮಾಡುತ್ತಿದ್ದಿರಿ ಅಂತಾ ಕೇಳಿದಾಗ ಎಲ್ಲರೂ ಸೇರಿ ನನಗೆ ಬೋಸುಡಿ ರಂಡಿ ನಮಗೆ ಇಲ್ಲಿ ದಾರಿ ಇಲ್ಲ ಅಂತಾ ಅಂತಿಯ ಸೂಳಿ ಅಂತಾ ಅವಾಚ್ಯವಾಗಿ ಬೈಯಹತ್ತಿದರು. ನಾನು ಅವರಿಗೆ ಯಾಕೆ ಬೈಯುತ್ತಿರಿ ಅಂತಾ ಕೇಳಿದಾಗ ಅವರಲ್ಲಿಯ ಚಂದಪ್ಪ ತಂದೆ ಚಿದಾನಂದಪ್ಪ ಈತನು ನನ್ನ ಹತ್ತಿರ ಬಂದು ಬೋಸುಡಿ ಸೂಳಿ ನಮ್ಮ ಹೊಲಕ್ಕೆ ದಾರಿಮಾಡಕೊಂಡರ ಬ್ಯಾಡ ಅಂತಿಯಾ ಅಂತಾ ತನ್ನ ಕೈಯಿಂದ ನನ್ನ ಕಪಾಳಕ್ಕೆ ಹೊಡೆದು ನನ್ನ ಸಿರೇಹಿಡಿದು ಎಳದಾಡಿ ನನಗೆ ಅವಮಾನ ಮಾಡಿದನು ಉಳಿದವರು ಈ ಸೂಳಿದು ಸೊಕ್ಕು ಬಹಳ ಆಗ್ಯಾದ ನಮ್ಮ ಹೊಲಕ್ಕ ದಾರಿಕೊಡು ಅಂದರಾ ಕೊಡವಲ್ಲಾಗ್ಯಾಳ ಈಕಿನ ಹೊಡೆದು ಖಲಾಸ ಮಾಡಬಿಡರಿ ಅಂತಾ ನನಗೆ ಜೀವದ ಬೆದರಿಕೆ ಹಾಕಿದ್ದು ಆಗ ನಾನು ಚೀರಾಡ ಹತ್ತಿದಾಗ ಮನೆಯಲ್ಲಿ ಇದ್ದ ನನ್ನ ಮಗ ಕಂಠಯ್ಯ ತಂದೆ ಮಲ್ಲಶಯ್ಯ ಹಿರೇಮಠ ರವರು ನನಗೆ ಬಿಡಿಸಿಕೊಳ್ಳಲು ಬಂದಾಗ ನನ್ನ ಮಗ ಕಂಠಯ್ಯನಿಗೆ ಅವರಲ್ಲಿಯ ಚಂದ್ರಗೀರಿ ಕಪನೂರ ಈತನು ನಿಮ್ಮ ತಾಯಿಯನ್ನು ಬಿಡಿಸಿಕೊಳ್ಳಲು ಬಂದಿದ್ದಿಯಾ ಸೂಳಿ ಮಗನೆ ಅಂತಾ ಅವಾಚ್ಯವಾಗಿ ಬೈದು ನನ್ನ ಮಗನ ಕಪಾಳಕ್ಕೆ ಕೈಯಿಂದ ಹೊಡೆದಿದ್ದು ಆಗ ನಾನು ಮತ್ತು ನನ್ನ ಮಗ ಚೀರಾಡಲು ಅಲ್ಲಿಯೆ ದಾರಿಯ ಮೇಲಿಂದ ಹೊಗುತ್ತಿದ್ದ ನಮ್ಮ ಊರ ನಾಗಯ್ಯ ತಂದೆ ರುದ್ರಸ್ವಾಮಿ ಹಿರೇಮಠ ಮತ್ತು ಹಣಮಪ್ಪ ತಂದೆ ದಂಡಪ್ಪ ಗುರಿಕಾರ ಇವರು ಬಂದು ಜಗಳ ಬಿಡಿಸಿದ್ದು ನಮಗೆ ಜಗಳದಲ್ಲಿ ಅಷ್ಟೇನು ಪೆಟ್ಟಾಗಿರುವದಿಲ್ಲ ನಾನು ಮತ್ತು ನನ್ನ ಮಗ ಇಬ್ಬರು ಆಸ್ಪತ್ರೆಗೆ ಹೋಗುವುದಿಲ್ಲ ನಾನು ನಮ್ಮ ತಮ್ಮ ವೀರಭದ್ರಯ್ಯ ಎಮ್ ಹಿರೆಮಠ ಹಾಗೂ ನಮ್ಮ ಮನೆಯವರೊಂದಿಗೆ ವಿಚಾರಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಇರುತ್ತದೆ. ಕಾರಣ ನನಗೆ ಹಾಗೂ ನನ್ನ ಮಗನ ಮೇಲೆ ಹಲ್ಲೆಮಾಡಿ ನನ್ನ ಸಿರೇಹಿಡಿದು ಎಳದಾಡಿ ಅವಮಾನ ಮಾಡಿ ನಮಗೆ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 18 ಜನರ ಮೇಲೆ ಕೇಸು ಮಾಡಬೇಕು ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 34/2020 ಕಲಂ 143, 147, 323, 354, 504, 506  ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 51/2020 447, 504 506 ಐಪಿಸಿ:-ದಿನಾಂಕ:16/05/2020 ರಂದು20.25 ಪಿ.ಎಂಗಂಟೆಗೆ ಶ್ರೀ ಬಸವರಾಜತಂದೆ ಮಹಾದೇವಪ್ಪ ಬಳಿ ವಯ:52 ವರ್ಷಜಾ:ಲಿಂಗಾಯತ ಉ:ವ್ಯಾಪಾರ ಸಾ: ಹುಣಸಗಿತಾ:ಹುಣಸಗಿ ಜಿ:ಯಾದಗಿರ ಇವರುಠಾಣೆಗೆ ಬಂದುಒಂದುಕನ್ನಡದಲ್ಲಿಟೈಪ್ ಮಾಡಿದದೂರುಕೊಟ್ಟಿದ್ದುಏನೆಂದರೆ, ಹುಣಸಗಿ ಸೀಮಾಂತರದ ಹೊಲ ಸವರ್ೆ ನಂ.51 ರಲ್ಲಿ 10 ಎಕರೆಜಮೀನವನ್ನುಆರೋಪಿತನಿಗೆ ಲೀಜಗೆಕೊಟ್ಟಿದ್ದುಇರುತ್ತದೆ. ಲೀಜಗೆಕೊಟ್ಟ ಕವಳಿಯನ್ನು ಕೊಡದೇಇದ್ದುದ್ದಕ್ಕೆಅಜರ್ಿಯನ್ನುಕೊಟ್ಟಿದ್ದಕ್ಕೆ ನ್ಯಾಯವಾಗಿ ಸುಮಾರು 15-20 ದಿನಗಳ ನಂತರಕೊಡುತ್ತೇನೆಅಂತಾ ಹೇಳಿ ಆರೋಪಿ ಒಪ್ಪಿಕೊಂಡು ಹೋಗಿದ್ದು, ನಂತರ ಪಿಯರ್ಾದಿ ಲೀಜ ಕೇಳಿದರೆ ಕೊಡುವದಿಲ್ಲಾಅಂತಾಆರೋಪಿತನುಅವಾಚ್ಯವಾಗಿ ಬೈದಿದ್ದುಇರುತ್ತದೆ. ನಂತರ ದಿನಾಂಕ:10/05/2020 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಪಿಯರ್ಾದಿ ತನ್ನ ಹೊಲ ಸವರ್ೆ ನಂ.51 ರಲ್ಲಿ ಹೋದಾಗಆರೋಪಿತನು ಹೊಲದಲ್ಲಿ ಕವಳಿಯ ಹುಲ್ಲನ್ನು ಸುಡುತ್ತಿದ್ದುಕಂಡುಯಾಕೆ ನಮ್ಮ ಹೊಲದಲ್ಲಿ ಹುಲ್ಲು ಸುಡುತ್ತಿ ನಿನಗೆ ಹೊಲ ಲೀಜಕೊಡುವದಿಲ್ಲಾಅಂತಾಅಂದಿದ್ದಕ್ಕೆಆರೋಪಿತನು ನಾನೇ ಹೊಲ ಲೀಜ ಮಾಡುತ್ತೇನೆ, ಲೀಜಕೊಡುವದಿಲ್ಲಾ ಏನು ಮಾಡುತ್ತಿ ಮಾಡಿಕೊ, ಇನ್ನೊಂದು ಸಲ ನನ್ನ ಹತ್ತಿರ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲಾಎಂದುಜೀವದ ಬೆದರಿಕೆಯನ್ನು ಹಾಕಿದ್ದು, ಆಗ ಪಿರ್ಯದಿಯೊಂದಿಗೆಇದ್ದಅಂಬ್ರೇಶತಂದೆ ಮಹಾಂತಯ್ಯ ಹಿರೇಮಠ ಸಾ:ಹುಣಸಗಿಇವರು ನೋಡಿರುತ್ತಾರೆ. ಕಾರಣ ನಮ್ಮ ಹೊಲದಲ್ಲಿಅಕ್ರಮ ಪ್ರವೇಶ ಮಾಡಿಅವಾಚ್ಯ ಶಬ್ದಗಳಿಂದಾ ಬೈದುಜೀವದ ಬೆದರಿಕೆಯನ್ನು ಹಾಕಿದಆರೋಪಿತನ ವಿರುದ್ದ ಸೂಕ್ತ ಕಾನೂನ ಕ್ರಮಜರುಗಿಸಬೇಕೆಂದುಕೊಟ್ಟದೂರಿನ ಮೇಲಿಂದಾಕ್ರಮ ಜರುಗಿಸಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!