ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/05/2020

By blogger on ಭಾನುವಾರ, ಮೇ 10, 2020







                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/05/2020 
                                                                                                            
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 63/2020 279, 304(ಎ) ಐಪಿಸಿ  ಸಂ: 187 ಐಎಂವಿ ಯಾಕ್ಟ:- ಇಂದು ದಿನಾಂಕ: 10/05/2020 ರಂದು 07.30 ಎಎಮ್ ಕ್ಕೆ ಅಜರ್ಿದಾರರಾದ ಶ್ರೀಮತಿ ಕಾಂತಮ್ಮ ಗಂಡ ದೇವಿಂದ್ರಪ್ಪ ಬಾವೂರ ವಯಾ:33 ವರ್ಷ ಉ: ಮನೆಗೆಲಸ ಜಾ: ಕುರುಬರ ಸಾ: ಗುಂಡಾಪೂರ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ ಸುಮಾರು 14 ವರ್ಷ ಗಳ ಹಿಂದೆ ದೇವಿಂದ್ರಪ್ಪ ತಂದೆ ಹಣಮಂತಪ್ಪ ಬಾವೂರ ವಯಾ: 34 ವರ್ಷ ಜಾ: ಕುರುಬರ ಉ: ಡ್ರೈವರ ಸಾ: ಗುಂಡಾಪೂರ ತಾ: ಶಹಾಪೂರ ಇವರೊಂದಿಗೆ ಮದುವೆ ಆಗಿದ್ದು, ಪ್ರಕಾಶ ಅಂತಾ 13 ವರ್ಷದ ಒಬ್ಬ ಗಂಡು ಮಗ ಇದ್ದು, ಸದ್ಯ ನಾನು ಗಭರ್ೀಣಿ ಇದ್ದುದರಿಂದ ನಾನು ಸುಮಾರು 15 ದಿನಗಳಿಂದ ಹೆರಿಗೆಗೆ ಅಂತಾ ನನ್ನ ತವರೂರಾದ ಅರಳಳ್ಳಿ ಗ್ರಾಮಕ್ಕೆ ಹೋಗಿದ್ದೇನು. ನನ್ನ ಗಂಡನಾದ ದೇವಿಂದ್ರಪ್ಪ ಈತನು ಒಂದು ಟಂಟಂ ಅಟೋ ನಂ: ಕೆಎ-33-ಬಿ-0266 ನೇದ್ದನ್ನು ಖರೀಸಿದ್ದು, ಅದಕ್ಕೆ ನಮ್ಮ ಸಂಬಂದಿಕರಲ್ಲಿ ಬಸವರಾಜ ತಂದೆ ಮಲ್ಲಪ್ಪ ಬೊಮ್ಮನಳ್ಳಿ ವಯಾ:31 ವರ್ಷ ಉ: ಡ್ರೈವರ ಸಾ: ಅಗಸ್ತಾಳ ತಾ: ಶಹಾಪೂರ ಹಾ:ವ: ಚಾಮುಂಡೆಶ್ವರಿ ನಗರ ಶಹಾಪೂರ ಇವನಿಗೆ ಡ್ರೈವರ ಅಂತಾ ನೇಮಿಸಿಕೊಂಡು ಉಪಜೀವಿಸುತ್ತಿದ್ದು, ಸದರಿ ಅಟೋದಲ್ಲಿಯೇ ಗುಂಡಾಪೂರ ದಿಂದ ಆಗಾಗ ನನ್ನ ಹತ್ತಿರ ಅರಳಳ್ಳಿಗೆ ಬಂದು ಹೋಗುವದು ಮಾಡುತ್ತಿದ್ದನು.
     ಹೀಗಿದ್ದು, ನಿನ್ನೆ ದಿನಾಂಕ:09/05/2020 ರಂದು ರಾತ್ರಿ 08.30 ಪಿಎಂ ಸುಮಾರಿಗೆ ನನ್ನ ಗಂಡನಾದ ದೇವಿಂದ್ರಪ್ಪ ತಂದೆ ಹಣಮಂತಪ್ಪ ಬಾವೂರ ಈತನು ಗುಂಡಾಪೂರ ದಿಂದ ನಮ್ಮ ಟಂಟಂ ಅಟೋ ನಂ: ಕೆಎ-33-ಬಿ-0266 ನೇದ್ದರಲ್ಲಿ, ಚಾಲಕನಾದ ಬಸವರಾಜ ತಂದೆ ಮಲ್ಲಪ್ಪ ಬೊಮ್ಮನಳ್ಳಿ ಈತನಿಗೆ ಅರಳಳ್ಳಿಗೆ ಬಿಟ್ಟು ಶಹಾಪೂರಕ್ಕೆ ಹೋಗು ಅಂತಾ ಹೇಳಿ, ಸದರಿ ನಮ್ಮ ಟಂಟಂ ದಲ್ಲಿ ಗುಂಡಾಪೂರದಿಂದ ಅರಳಳ್ಳಿಗೆ ಬರುತ್ತಿರುವದಾಗಿ ತಿಳಿಸಿ, ಅರಳಳ್ಳಿಗೆ ಬರುತ್ತಾದ್ದಾಗ, ಗೋಗಿ-ಬೀ.ಗುಡಿ ಮುಖ್ಯ ರಸ್ತೆಯ ಎಸ್.ಬಿ.ಸಿ ಮೇನ್ ಕೆನಾಲ ದಿಂದ ಪೂರ್ವಕ್ಕೆ ಅಂದಾಜು 50 ಮೀಟರ ಅಂತರದಲ್ಲಿ ರೋಡಿನ ಮೇಲೆ ಬರುವಾಗ, ಅಂದಾಜು 09.00 ಪಿಎಂ ಸುಮಾರಿಗೆ ನಮ್ಮ ಟಂಟಂ ಅಟೋ ಚಾಲಕನಾದ ಬಸವರಾಜ ತಂದೆ ಮಲ್ಲಪ್ಪ ಬೊಮ್ಮನಳ್ಳಿ ಈತನು ಸದರಿ ಟಂ.ಟಂ ಅನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಟಂಟಂ ಅಟೋ ಪಲ್ಟಿ ಮಾಡಿದ್ದು, ಪಲ್ಟಿ ಆಗಿದ್ದರಿಂದ ನನ್ನ ಗಂಡನಾದ ದೇವಿಂದ್ರಪ್ಪ ಈತನು ಕೆಳಗೆ ಬಿದ್ದಿದ್ದು, ಅವನ ಮೇಲೆ ಟಂಟಂ ಅಟೋ ಬಿದ್ದುದ್ದರಿಂದ ನನ್ನ ಗಂಡನ ಮೆಲಕಿಗೆ ಮತ್ತು ತಲೆಗೆ, ಬೆನ್ನಿಗೆ ಭಾರಿ ಗುಪ್ತ ಗಾಯ ಪೆಟ್ಟುಗಳಾಗಿ, ಟೊಂಕಕ್ಕೆ ಮತ್ತು ಮೈ ಕೈಗೆ ಅಲ್ಲಲ್ಲಿ ರಕ್ತಕಂದುಗಟ್ಟಿದ ಗಾಯಗಳು ಆಗಿದ್ದರಿಂದ ನನ್ನ ಗಂಡನು ಸ್ಥಳದಲ್ಲಿಯೇ ಮೃತಪಟ್ಟಿದ್ದಾಗಿ, ಮತ್ತು ಚಾಲಕನಾದ ಬಸವರಾಜ ತಂದೆ ಮಲ್ಲಪ್ಪ ಬೊಮ್ಮನಳ್ಳಿ ಈತನಿಗೆ ಯಾವುದೆ ಗಾಯಗಳು ಆಗಿರುವದಿಲ್ಲ, ಸದರಿಯವನು ಸ್ವಲ್ಪ ಸಮಯ ಇದ್ದು, ನಂತರ ಸ್ಥಳದಿಂದ ಓಡಿ ಹೋಗಿದ್ದಾನೆ ಅಂತಾ ಘಟನೆ ಸ್ಥಳದಿಂದ ಸ್ವಲ್ಪ ದೂರದಲ್ಲಿ ಶಹಾಪೂರ ದಿಂದ ಗುಂಡಾಪೂರ ಕಡೆಗೆ ಬರುತ್ತಿದ್ದ ಮಲ್ಲಿಕಾಜರ್ುನ ತಂದೆ ಬಸವರಾಜ ಗಚ್ಚಿನಮನಿ, ಮತ್ತು ದೇವಿಂದ್ರಪ್ಪ ತಂದೆ ಮಾಳಪ್ಪ ಅಳ್ಳಿ ಸಾ: ಗುಂಡಾಪೂರ ಇವರು ನೋಡಿ ನನ್ನ ಭಾವನಾದ ಮಲ್ಲಿಕಾಜರ್ುನ ತಂದೆ ಹಣಮಂತ್ರಾಯ ಇವರಿಗೆ ತಿಳಿಸಿದ್ದು, ನಮ್ಮ ಭಾವನವರಾದ ಮಲ್ಲಿಕಾಜರ್ುನ ಮತ್ತು ಇತರರು ಸ್ಥಳಕ್ಕೆ ಬಂದು ನೊಡಿ ನನ್ನ ಗಂಡನ ಶವವನ್ನು ಶಹಾಪೂರ ಸರಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋಗಿದ್ದಾಗಿ ನಮ್ಮ ಭಾವ ಮಲ್ಲಿಕಾಜರ್ುನ ಇವರಿಂದ ಘಟನೆಯ ವಿಷಯ ತಿಳಿದು ನಾನು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು, 
ಶವವನ್ನು ನೋಡಿರುತ್ತೇನೆ. ನನ್ನ ಗಂಡನಿಗೆ ಅಪಘಾತದಿಂದ ಮೆಲಕಿಗೆ ಮತ್ತು ತಲೆಗೆ, ಬೆನ್ನಿಗೆ ಭಾರಿ ಗುಪ್ತ ಗಾಯ ಪೆಟ್ಟುಗಳಾಗಿ, ಟೊಂಕಕ್ಕೆ ಮತ್ತು ಮೈ ಕೈಗೆ ಅಲ್ಲಲ್ಲಿ ರಕ್ತ ಕಂದುಗಟ್ಟಿದ ಗಾಯಗಳು ಆಗಿದ್ದರಿಂದ ಮೃತಪಟ್ಟಿರುತ್ತಾನೆ. ನಾನು ನಮ್ಮ ತವರೂರಿನಿಂದ ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ನೋಡಿ, ತಡವಾಗಿ ಇಂದು ದಿನಾಂಕ:10/05/2020 ರಂದು 07.30 ಎಎಂ ಕ್ಕೆ ಬಂದು ಈ ಅಜರ್ಿ ನೀಡಿದ್ದು ಇರುತ್ತದೆ.

      ನಮ್ಮ ಟಂಟಂ ಅಟೋ ನಂ: ಕೆಎ-33-ಬಿ-0266 ನೆದ್ದರ ಚಾಲಕನಾದ ಬಸವರಾಜ ತಂದೆ ಮಲ್ಲಪ್ಪ ಬೊಮ್ಮನಳ್ಳಿ ವಯಾ:31 ವರ್ಷ ಉ: ಡ್ರೈವರ ಸಾ: ಅಗಸ್ತಾಳ ತಾ: ಶಹಾಪೂರ ಹಾ:ವ: ಚಾಮುಂಡೆಶ್ವರಿ ನಗರ ಶಹಾಪೂರ ಈತನು ನನ್ನ ಗಂಡನಿಗೆ ನನ್ನ ಹತ್ತಿರ ಅರಳಳ್ಳಿಗೆ ಕರೆದುಕೊಂಡು ಬರುವಾಗ ಟಂಟಂ ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಟಂಟಂ ಪಲ್ಟಿ ಮಾಡಿ ನನ್ನ ಗಂಡನ ಸಾವಿಗೆ ಕಾರಣನಾಗಿದ್ದು ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಜರ್ಿ ಮೇಲಿಂದ ಠಾಣೆ ಗುನ್ನೆ ನಂ: 63/2020 ಕಲಂ, 279, 304(ಎ) ಐಪಿಸಿ ಸಂ: 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 77/2020 ಕಲಂ 143, 147, 148, 341, 323, 324, 504, 506   ಸಂಗಡ 149 ಐಪಿಸಿ:-ದಿನಾಂಕ 10.05.2020 ರಂದು ಸಂಜೆ 6:00 ಗಂಟೆಗೆ ಫಿರ್ಯಾದಿ ಮತ್ತು ಆಕೆಯ ಗಂಡ ಇಬ್ಬರು ಸೇರಿ ತಮ್ಮ ಮಗನಾದ ನವೀನಕುಮಾರಿಗೆ ತೋರಿಸಿಕೊಂಡು ಮರಳಿ ಮನೆಗೆ ತಮ್ಮ ಆರೋಪಿತರ ಮನೆಯ ಮುಂದಿನಿಂದ ಹೋಗುತ್ತಿದ್ದಾಗ ಆರೋಪಿತರು ಅವರನ್ನು ಲೇ ಸೂಳೆ ಮಗನೆ ಸಾಬಪ್ಪ ನಿದ್ರಲೇ ನಿನಗೆ ನೋಡಿಕೊಳ್ಳುತ್ತೇನೆ ಇವತ್ತು ಅಂತಾ ಹೇಳಿ ನಮಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ತಮ್ಮ ಮ್ಯಾಳಿಗೆ ಮೇಲಿಂದ ಇಟ್ಟಂಗಿ ಎಳ್ಳೆಯಿಂದ ಹೊಡೆ-ಬಡೆ ಮಾಡಿ ಫಿರ್ಯಾಧಿಯ ಮಗನಿಗೆ ರಕ್ತಗಾಯ ಮಾಡಿದ್ದು, ಫಿರ್ಯಾಧಿಯು ಮ್ಯಾಳಿಗೆ ಮೇಲಿದ್ದ ಆರೋಪಿ ಉಷಪ್ಪನಿಗೆ ಕೆಳಗೆ ಕರೆದುಕೊಂಡು ಬಂದಾಗ ಉಳಿದ ಆರೋಪಿತರೆಲ್ಲಾರು ಕೂಡಿ ಅಕ್ರಮ ಕೂಟ ರಚಿಸಿಕೊಂಡು, ಏಕೊದ್ದೇಶದಿಂದ ಬಂದು ಕೈಯಿಂದ ಮತ್ತು ಅಲ್ಲಿದ್ದ ಇಟ್ಟಂಗಿ ಎಳ್ಳೆಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದು ಹಾಗೂ ಫಿರ್ಯಾಧಿಯ ಹೆಂಡತಿಯು ಬಿಡಿಸಲು ಬಂದಾಗ ಆಕೆಗೆ ನೂಕಿ ಕೊಟ್ಟಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿಯು ಮನೆಯಲ್ಲಿ ವಿಚಾರ ಮಾಡಿದ ನಂತರ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಸದರಿ ಫಿರ್ಯಾದಿಯ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 77/2020 ಕಲಂ 143, 147, 148, 341, 323, 324, 504, 506 ಸಂಗಡ 149 ಐಪಿಸಿಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.



ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 78/2020 ಕಲಂ 448, 323, 324, 504, 506 ಸಂಗಡ 34 ಐಪಿಸಿ :- ಪಿರ್ಯಾದಿದಾರರ ಪಾಲಿಗೆ ಬಂದ ಜಮೀನು ಸವರ್ೆ ನಂ. 28 ರಲ್ಲಿ ಸುಮಾರು 1 ತಿಂಗಳು ಹಿಂದೆ ಟ್ರ್ಯಾಕ್ಟರದಿಂದ ಟಿಲ್ಲರ್ ಹೊಡೆದಿದ್ದು, ಸದರಿ ಸವರ್ೆ ನಂ. 28 ರಲ್ಲಿ ಆರೋಪಿತರ ಪಾಲಿಗೆ ಬಂದ 10 ಗುಂಟೆ ಜಮೀನಿನ ಡೋಣ ಟಿಲ್ಲರ ಹೊಡೆದು ಕೆಡಿಸಿದ್ದಿರಿ ಅಂತಾ ಈ ಹಿಂದೆ ಬಾಯಿ ಮಾತಿ ತಕರಾರು ಆಗಿತ್ತು. ಅದೇ ವಿಷಯಕ್ಕೆ ದಿನಾಂಕ 09.05.2020 ರಂದು ಸಂಜೆ 6.00 ಗಂಟೆ ಸುಮಾರಿಗೆ ಪಿರ್ಯಾಧಿ ತನ್ನ ಮನೆ ಮೇಲೆ ಕುಳಿತಾಗ ಆರೋಪಿತು ಪಿರ್ಯಾಧಿ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ನಮ್ಮ ಹೊಲದ ಡ್ವಾಣ ನೀವೆ ಕೆಡಿಸಿರಿ ಬೋಸಡಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಇಟ್ಟಂಗಿಯಿಂದ ಪಿರ್ಯಾಧಿಗೆ ಹೊಡೆದು ಗುಪ್ತಪೆಟ್ಟು ಮಾಡಿ ಕೈ ಉಗುರಿನಿಂದ ಕುತ್ತಿಗೆ ಚೂರಿ ತರಚಿದ ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 66/2020 ಕಲಂ 323, 325, 354, 504, 506 ಸಂಗಡ 34 ಐಪಿಸಿ:- ಈಗ ಸುಮಾರು ಒಂದು ವರ್ಷದ ಹಿಂದೆ ಬೇರೆಯಾಗುವ ಮತ್ತು ಸಂಸಾರಿಕೆ ವಿಷಯದಲ್ಲಿ ಫಿಯರ್ಾದಿ ಮತ್ತು ಆರೋಪಿತರ ನಡುವೆ ತಕರಾರು ಆದಾಗಿನಿಂದ ಆರೋಪಿತರು ಊರು ಬಿಟ್ಟು ಹೋಗಿದ್ದು ದಿನಾಂಕ:06/05/2020 ರಂದು 6.30 ಗಂಟೆ ಸುಮಾರಿಗೆ ಆರೋಪಿತರು ಮರಳಿ ಊರಿಗೆ ಬಂದಾಗ ಫಿಯರ್ಾದಿಯು ಕೇಳಿದ್ದಕ್ಕೆ ಒಂದು ವರ್ಷದ ಹಿಂದಿನ ವೈಷಮ್ಯದಿಂದ ಆರೋಪಿತರು ಫಿಯರ್ಾದಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈತಿರುವಿ ಕೈಯಿಂದ ಹೊಡೆಬಡೆ ಮಾಡಿ ಬಲಗೈಗೆ ಭಾರಿ ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಲಿಖಿತ ಫಿಯರ್ಾದಿ ಇರುತ್ತದೆ.



ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ,ಆರ್ ನಂ: 04/2020 ಕಲಂ 174 ಸಿ ಆರ್ ಪಿ ಸಿ:- ಇಂದು ನಾನು ಡೆಥ್ ಎಮ್ಎಲ್ಸಿ ಕುರಿತು ದಿನಾಂಕ 09.05.2020 ರಂದು 7:30 ಪಿ.ಎಮ್ ಕ್ಕೆ ಠಾಣೆಯಿಂದ ಹೊರಟು ತಾಲೂಕ ಸರಕಾರಿ ಆಸ್ಪತ್ರೆ ಸುರಪೂರಕ್ಕೆ ದಿನಾಂಕ10.05.2020 ರಂದು 12:30 ಎ.ಎಮ್ಕ್ಕೆ ಬೇಟಿ ನೀಡಿದ್ದು ಡೇತ್ ಎಮ.ಎಲ್.ಸಿ  ಪಡೆದುಕೊಂಡು ಸರಕಾರಿ ಆಸ್ಪತ್ರೆಯಲ್ಲಿ ಮೃತನ ತಾಯಿಯಾದ ಗದ್ದೆಮ್ಮ ಗಂಡ ಬೂರೆಣ್ಣೆಪ್ಪ @ ಗುರುನಾಥ ಬಿರಾದಾರ ವ:60 ವರ್ಷ ಜಾ:ಬೇಡರ್ ಉ:ಮನೆಕೆಲಸ ಸಾ:ಚವನಬಾವಿ ತಾ:ಮುದ್ದೆಬಿಹಾಳ ಜಿ:ವಿಜಯಪೂರ ಇದ್ದು. ವಿಚಾರಣೆ ಮಾಡಿ ಸದರಿಯವರ ಹೇಳಿಕೆಯನ್ನು 1:00 ಎ.ಎಮ್. ದಿಂದ 1:45 ಗಂಟೆಯವರೆಗೆ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 2:45 ಎ.ಎಮ್ ಕ್ಕೆ ಬಂದಿದ್ದು ಸದರಿ ಡೇತ್ ಎಮ.ಎಲ್.ಸಿ ಹೇಳಿಕೆಯ ಸಾರಾಂಶವೆನೆಂದರೆ ನಾನು ಈ ಮೇಲ್ಕಾಣಿಸಿದ ಹೆಸರು ಮತ್ತು ವಿಳಾಸದವಳಿದ್ದು ನನಗೆ ದುರ್ಗಪ್ಪ @ ದುಗರ್ೇಶ ಮತ್ತು ನಿರುಪಾದ ಅಂತಾ ಇಬ್ಬರು ಗಂಡು ಮಕ್ಕಳಿದ್ದು ಹಿರಿಯ ಮಗನಾದ ದುರ್ಗಪ್ಪ @ ದುಗರ್ೆಶ ಇವನಿಗೆ ರಾಜವಳ ಗ್ರಾಮದ ತಿರುಪತಿ ತಂದೆ ಲಕ್ಷ್ಮಣ ಅಪ್ಲಿ ಇವರ ಮಗಳಾದ ದೇವಮ್ಮಳೊಂದಿಗೆ ಸುಮಾರು 6 ವರ್ಷಗಳ ಹಿಂದೆ ಮದುವೆ ಮಾಡಿದ್ದು ಅವರಿಗೆ ಬಸವರಾಜ, ಗದ್ದೆಮ್ಮ ಅಂತಾ ಇಬ್ಬರು ಮಕ್ಕಳಿದ್ದು ನನ್ನ ಮಗನಾದ ದುರ್ಗಪ್ಪನು ತನ್ನ ಹೆಂಡತಿಯ ಊರಾದ ರಾವಾಳ ಗ್ರಾಮದಲ್ಲಿ ಅವಳ ಮನೆಯಲ್ಲಿಯೆ ಇದ್ದು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ನನ್ನ ಮಗನು ಆಗೊಮ್ಮೆ ಹಿಗೊಮ್ಮೆ ನಮ್ಮೂರಿಗೆ ಬರುತ್ತಿದ್ದು ಇರುತ್ತದೆ ಈಗಿದ್ದು ನಿನ್ನೆ ದಿನಾಂಕ 09.05.2020 ರಂದು 7:30 ಗಂಟೆ ಪಿ.ಎಮ್. ಸುಮಾರಿಗೆ ನಾನು ನನ್ನ ಮನೆಯಲ್ಲಿದ್ದಾಗ ನನಗೆ ಅಳಿಯನಾಗಬೇಕಾದ ನಮ್ಮೂರಿನ ಯಮನಪ್ಪ ತಂದೆ ಗದ್ದೆಪ್ಪ ಇತನು ನನಗೆ ಬಂದು ತಿಳಿಸಿದ್ದೆನೆಂದರೆ ಈಗ ಸ್ವಲ್ಪ ಹೊತ್ತಿನ ಹಿಂದೆ ರಾಜವಾಳ ಗ್ರಾಮದ ನಿಮ್ಮ ಬೀಗನಾದ ತಿರುಪತಿ ತಂದೆ ಲಕ್ಷ್ಮಣ ಅಪ್ಲಿ ಇತನು ನನಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ ನಿನ್ನ ಮಗನಾದ ದುರ್ಗಪ್ಪನು ಇತ್ತಿಚಿಗೆ ಕುಡಿಯುವ ಚಟಕ್ಕೆ ಬಲಿಯಾಗಿದ್ದು ದುಡಿಯಲು ಹೋಗದೆ ಮನೆಯಲ್ಲಿದ್ದು ತನ್ನ ಮನಸಿಗೆ ಬೇಸರ ಮಾಡಿಕೊಂಡು ಗಂಗಪ್ಪ ತಂದೆ ಲಕ್ಷ್ಮನ ಅಪ್ಲಿ ಇವರ ಹೊಲದ ಹಳ್ಳದ ದಂಡೆಯಲ್ಲಿ ಬೆಳೆಗಳಿಗೆ ಹೋಡೆಯುವ ಕ್ರಿಮಿನಾಶಕ ಔಷದ ಸೇವಿಸಿ ಒದ್ದಾಡುತ್ತಿರುವುದನ್ನು ನೋಡಿ ನಿಮ್ಮ ಬೀಗನಾದ ತಿರುಪತಿ,ವೆಂಕಟೇಶ  ಹಾಗೂ ಹುಲಗಪ್ಪ ಇತರರು ಕೂಡಿ ರಾಜನಕೊಳೂರ ಆಸ್ಪತ್ರೆಗೆ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಸುರಪೂರ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಸುರಪೂರ ಆಸ್ಪತ್ರೆಯಲ್ಲಿ ಉಪಚಾರ ಪಲಿಸದೆ 6:50 ಪಿ.ಎಮ್ ಸುಮಾರಿಗೆ ಮೃತಪಟ್ಟಿದ್ದಾಗಿ ತಿಳಿಸಿದ್ದು ನಾನು ಗಾಬರಿಯಾಗಿ ಕಾಶಿಬಾಯಿ ಗಂಡ ಲಕ್ಷ್ಮಣ ಕೊಡೆಕಲ್, ಚೆನ್ನಪ್ಪಗೌಡ ತಂದೆ ಹಣಮಪ್ಪಗೌಡ ಬಿರಾದರ, ದ್ಯಾಮಣ್ಣ ತಂದೆ ಗದ್ದೆಪ್ಪ ಹೆಜ್ಜೆಕಾರ ಇವರನ್ನು ಕರೆದುಕೊಂಡು 10:30 ಪಿ.ಎಮ್ಕ್ಕೆ  ಈ ಆಸ್ಪತ್ರೆಗೆ ಬಂದಿದ್ದು ನನ್ನ ಮಗನನ್ನು ನೋಡಿದ್ದು ನನ್ನ ಮಗ ಸತ್ತಿದ್ದು ನಿಜವಿದ್ದು ಆಸ್ಪತ್ರೆಯಲ್ಲಿದ್ದ ತಿರುಪತಿಯವರಿಗೆ ವಿಚಾಸಿಲಾಗಿ ದುರ್ಗಪ್ಪ @ ದುಗರ್ೆಶ  ವ:35 ವರ್ಷ ಇತನು ನಿನ್ನೆ ದಿನ 2:30 ಪಿ.ಎಮ್ ಸುಮಾರಿಗೆ ಗಂಗಪ್ಪ ತಂದೆ ಲಕ್ಷ್ಮಣ್ಣ ಇವರ ಹೊಲದ ಹಳ್ಳದ ದಂಡೆಯಲ್ಲಿ ಕ್ರಿಮಿನಾಶಕ ಔಷದ ಸೇವಿಸಿ ನಮ್ಮ ಮನೆಗೆ ಬಂದು ಒದ್ದಾಡುತ್ತಿರುವಾಗ ಉಪಚಾರಕ್ಕಾಗಿ ಇಲ್ಲಿಗೆ ತಂದು ಸೇರಿಕೆ ಮಾಡಿದಾಗ ಉಪಚಾರ ಪಲಿಸದ ಕಾರಣ ನಿನ್ನ ಮಗನಾದ ದುರ್ಗಪ್ಪ @ ದುಗರ್ೆಶ ಇತನು ದುಡಿಯದೆ ಹಾಗೆ ತಿರುಗಾಡುತ್ತಾ ವಿಪರಿತವಾದ ಸಾರಾಯಿ ಕುಡಿಯುವ ಚಟಕ್ಕೆ ಬಲಿಯಾಗಿದ್ದು ತನ್ನ ಮನಸಿಗೆ ಬೇಸರ ಮಾಡಿಕೊಂಡಿದ್ದು ಬೆಳೆಗಳಿಗೆ ಹೊಡೆಯುವ ಕ್ರಿಮಿನಾಶಕ ಔಷದವನ್ನು ಸೇವನೆ ಮಾಡಿ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆಯಾದ ಆಸ್ಪತ್ರೆಯಲ್ಲಿ ಉಪಚಾರ ಪಲಿಸದೆ ಮೃತಪಟ್ಟಿದ್ದು ಈ ನನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾವುದೆ ಸಂಶವಿರುವುದಿಲ್ಲಾ ಸದರಿ ಆಸ್ಪತ್ರೆಯಲ್ಲಿ ನನ್ನ ಮಗನ ಹೆಂಡತಿಯ ಊರಿನವರಾದ ಗಂಗಪ್ಪ ತಂದೆ ಲಕ್ಷ್ಮಣ್ಣ ಅಪ್ಲಿ, ಹಲವಪ್ಪ ತಂದೆ ಹಣಮಂತ್ರಾಯ ಅಪ್ಲಿ ಮತ್ತು ನಮ್ಮ ಬಿಗರಾದ ತಿರುಪತಿ ಅವನ ಮಗ ವೆಂಕಟೇಶ ಇತರರು ಇದ್ದು ತಾವೂ ಮುಂದಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ಪಿರ್ಯಾಧಿ ಸಾರಾಂಶದ ಮೇಲಿಂದ ಠಾಣೆಯ ಯುಡಿಆರ್ ನಂ:04/2020 ಕಲಂ 174 ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 38/2020 ಕಲಂ: 32, 34 ಕೆ.ಇ ಆಕ್ಟ್:- ಇಂದು ದಿನಾಂಕ: 10.05.2020 ರಂದು 6:20 ಪಿ.ಎಮ್ ಗಂಟೆಗೆ ಪಿಎಸ್ಐ ಸಾಹೇಬರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಮತ್ತು ಮುದ್ದೇಮಾಲನ್ನು ಹಾಜರುಪಡಿಸಿದ್ದು, ಪಿಎಸ್ಐ ರವರು ಹಾಜರಪಡಿಸಿದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಸಾರಾಂಶವೆನೆಂದರೆ, ಇಂದು ದಿನಾಂಕ:10.05.2020 ರಂದು 3:00 ಪಿ.ಎಮ್ ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಮಂಜಲಾಪೂರ ಗ್ರಾಮದ ಮಹಾದೇವಪ್ಪ ತಂದೆ ಅಯ್ಯಾಳಪ್ಪ ಅಸ್ಕಿ ರವರ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಅನಧಿಕೃತವಾಗಿ ಯಾವುದೇ ದಾಖಲಾತಿ ಇಲ್ಲದೇ ಮತ್ತು ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯ ಮಾರಾಟ ಮಾಡುತ್ತಿರುವದಾಗಿ ಖಚಿತ ಬಾತ್ಮಿ ಬಂದಿದ್ದು. ಈ ವಿಷಯವನ್ನು ಠಾಣೆಯಲ್ಲಿದ್ದ ಪಿಸಿ-132 ವೆಂಕಟೇಶ, ಪಿಸಿ-114 ನಿಂಗಪ್ಪ, ಪಿಸಿ-70 ವಿನಾಯಕ  ಕರೆದುಕೊಂಡು ಒಂದು ಖಾಸಗಿ ವಾಹನದಲ್ಲಿ 3:10 ಪಿಎಮ್ ಠಾಣೆಯಿಂದ  ಬಿಡುವಾಗ ಉಪ ಠಾಣೆಯಲ್ಲಿರುವ ಪಿಸಿ-210 ಸಿದ್ರಾಮಪ್ಪ ರವರಿಗೆ ಈ ವಿಷಯ ತಿಳಿಸಿ ಇಬ್ಬರೂ ಪಂಚರನ್ನು ಕರೆದುಕೊಂಡು ಉಪ ಠಾಣೆಯಲ್ಲಿರುವಂತೆ ತಿಳಿಸಿದ್ದು. ಉಪ ಠಾಣೆ ಕಕ್ಕೇರಾಕ್ಕೆ 3:40ಕ್ಕೆ ತಲುಪಿದ್ದು. ಪಿಸಿ-210 ರವರು ನನ್ನ  ಮುಂದೆ ಪಂಚರನ್ನಾಗಿ ಪರಶುರಾಮ ತಂದೆ ಸಂಗಪ್ಪ ಹೊಸಮನಿ, ಸೋಮಣ್ಣ ತಂದೆ ಅಯ್ಯಪ್ಪ ಪೂಜಾರಿ ಸಾ: ಇಬ್ಬರೂ ಮಂಜಲಾಪೂರ ರವರನ್ನು ಹಾಜರ ಪಡಿಸಿದ್ದು. ಸದರಿ  ಪಂಚರಿಗೆ ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡು ಸದರಿ ಪಂಚರು ಒಪ್ಪಿಕೊಂಡ ಮೇರೆಗೆ ನಾನು, ಪಂಚರು ಮತ್ತು ಸಿಬ್ಬಂದಿಯವರಾದ ಪ್ರಭುಗೌಡ ಹೆಚ್ಸಿ-120, ಸಿದ್ರಾಮಪ್ಪ ಪಿಸಿ-210, ವೆಂಕಟೇಶ ಪಿಸಿ-132, ನಿಂಗಪ್ಪ ಪಿಸಿ-114 ವಿನಾಯಕ ಪಿಸಿ-70 ರವರನ್ನು ಕರೆದುಕೊಂಡು ಉಪ ಠಾಣೆಯಿಂದ ಅದೇ ಖಾಸಗಿ ವಾಹನದಲ್ಲಿ  3:50 ಪಿಎಮ್ ಕ್ಕೆ  ಬಿಟ್ಟು, ಬಾತ್ಮಿ ಬಂದು ಸ್ಥಳಕ್ಕೆ 4:20 ಪಿಎಮ್ ಕ್ಕೆ ತಲುಪಿ ಮಂಜಲಾಪೂರ ಗ್ರಾಮದ ಮಹಾದೇವಪ್ಪ ತಂದೆ ಅಯ್ಯಾಳಪ್ಪ ಅಸ್ಕಿ ರವರ ಕಿರಾಣಿ ಅಂಗಡಿಯ ಹತ್ತಿರ ಸ್ವಲ್ಪ ದೂರದಲ್ಲಿ  ವಾಹನವನ್ನು ಮರೆಯಾಗಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಆಕ್ರಮ ಮದ್ಯ ಮಾರಾಟ ಮಾಡುವದು ಖಾತ್ರಿಯಾದ ಮೇಲೆ 4:30 ಪಿಎಮ್ ಕ್ಕೆ ದಾಳಿ ಮಾಡಲಾಗಿ ನಮ್ಮನ್ನು  ನೋಡಿ ಮದ್ಯ ಮಾರಾಟ ಮಾಡುತ್ತಿರುವನು ಓಡಿ ಹೋಗಿದ್ದು ನಾನು ಮತ್ತು ಸಿಬ್ಬಂದಿಯವರು ಬೆನ್ನು ಹತ್ತಿದರು ಸಿಗಲಿಲ್ಲ ಓಡಿ ಹೋದವನ ಬಗ್ಗೆ ಅಲ್ಲಿಯೆ ಇದ್ದ ಯಂಕಪ್ಪ ತಂದೆ ಅಮರಪ್ಪ ಜುಟ್ಲರ್ ಹಣಮಂತ ತಂದೆ ಸೋಮಣ್ಣ ಹಿರೆಮನಿ ಸಾ: ಇಬ್ಬರೂ ಮಂಜಲಾಪೂರ ರವರಿಗೆ ವಿಚಾರಿಸಿ ಕೇಳಲಾಗಿ ಓಡಿ ಹೋದವನ ಹೆಸರು ಸೋಮನಾಥ ತಂದೆ ಚಕ್ರೆಪ್ಪ ಹಿರೇಮನಿ ವ;45 ವರ್ಷ ಜಾ: ಹಿಂದು ಕುರುಬರ ಉ: ಒಕ್ಕುತನ ಸಾ: ಮಂಜಲಾಪೂರ ಅಂತಾ ತಿಳಿಸಿದ್ದು. ಸದರಿಯವರು ಹೋಗುವಾಗ ಮಾರಾಟ ಮಾಡುತ್ತಿದ್ದ ಮದ್ಯ ಪೌಚಗಳಿದ್ದ ರಟ್ಟಿನ ಬಾಕ್ಸ್ನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಮದ್ಯದ ಪೌಚ್ಗಳಿದ್ದ ರಟ್ಟಿನ ಬಾಕ್ಸನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲಾಗಿ ಃಚಿರಠಿಠಿಜಡಿ  ತಿಞಥಿ 90 ಟಟ ನ 56.21 ಬೆಲೆಯುಳ್ಳ ಹಳದಿ ಮತ್ತು ಕಪ್ಪು ಮಿಶ್ರಿತ ಬಣ್ಣದ ಮಧ್ಯದ ತುಂಬಿದ 80 ಪೌಚುಗಳು ಇವುಗಳ ಒಟ್ಟು ಕಿಮ್ಮತು 4,496.8/- ರೂಪಾಯಿಗಳು, ಒಟ್ಟು ಮಧ್ಯ 7,200 ರೂಪಾಯಿಗಳು ಆಗುತ್ತಿದ್ದು. ಎಲ್ಲಾ 80 ಮಧ್ಯ ತುಂಬಿದ ಪೌಚಗಳನ್ನು ಒಂದು ರಟ್ಟಿನ ಡಬ್ಬಿಯಲ್ಲಿ ಹಾಕಿ ಈ ರಟ್ಟಿನ ಡಬ್ಬಿಯನ್ನು  ಬಿಳಿಯ ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಿ ದಾರದಿಂದ  ಹೊಲೆದುಈ ಡಬ್ಬಿಗೆಎಡಿಬಿ ಅಂತಾ ಇಂಗ್ಲೀಷ ಅಕ್ಷರದಿಂದ ಶಿಲ್ ಮಾಡಿ ಅವುಗಳಿಗೆ ನನ್ನ ಮತ್ತು ಪಂಚರ ಸಹಿ ನಿಶಾನೆ ಚೀಟಿ ಅಂಟಿಸಿ ಜಪ್ತುಮಾಡಿದ್ದು ಸದರಿ ಜಪ್ತಿ ಪಂಚನಾಮೆಯನ್ನು 4:30 ಪಿಎಮ್ ದಿಂದ 5:30 ಪಿಎಮ್ ದವರೆಗೆ ಸ್ಥಳದಲ್ಲಿಯೇ ಕುಳಿತು ಪೂರೈಸಿದ್ದು. ಮುದ್ದೆ ಮಾಲಿನೊಂದಿಗೆ 6:20 ಪಿಎಮ್ಕ್ಕೆ ಠಾಣೆಗೆ ಬಂದು ಸದರಿ ಆರೋಪಿತನ ಮೇಲೆ ಕ್ರಮ ಜರುಗಿಸಲು ಈ ಜ್ಞಾಪನ ಪತ್ರದೊಂದಿಗೆ ಸೂಚಿಸಿದ್ದು. ಪಿ.ಎಸ್.ಐ ಸಾಹೇಬರು ರವರು ಹಾಜರು ಪಡಿಸಿದ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 38/2020 ಕಲಂ: 32, 34 ಕೆ.ಇ ಎಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು 



ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 147/2020 ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 10/05/2020  ರಂದು ಸಾಯಂಕಾಲ 19-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ರವರು, 13 ಜನ ಆಪಾದಿತರು ಹಾಗೂ ಮುದ್ದೆಮಾಲು ಮತ್ತು ಮೂಲ ಜಪ್ತಿ ಪಂಚನಾಮೆ ಹಾಜರ ಪಡಿಸಿ  ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ 10/05/2020  ರಂದು ಮದ್ಯಾಹ್ನ 15-00 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಗರ(ಬಿ) ಸೀಮಾಂತರದ ದೋರಿ ಗುಡ್ಡದ ಪಕ್ಕದಲ್ಲಿರುವ ಕೇನಾಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು  ಹುಂಜಗಳಿಗೆ ಸ್ಪದರ್ೆಗೆ ಇಳಿಸಿ ಹುಂಜಗಳ ಮೇಲೆ ಹಣ ಪಣಕ್ಕಿಟ್ಟು ಜೂಜಾಟ ಆಡುತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳುವ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಸಾಯಂಕಲ 16-00 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡ ನಂತರ ಫಿಯರ್ಾದಿಯವರು ಠಾಣೆಯ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಸಾಯಂಕಾಲ 16-45 ಗಂಟೆಗೆ ಪಂಚರ  ಸಮಕ್ಷಮದಲ್ಲಿ ದಾಳಿ ಮಾಡಿ 13 ಜನ ಆರೋಪಿತರುನ್ನು ಹಿಡಿದು ಅವರಿಂದ ನಗದು ಹಣ 14950=00 ರೂಪಾಯಿ ಮತ್ತು 4 ಹುಂಜಗಳು ಅಂ.ಕಿ 1600=00 ರೂಪಾಯಿ ಕಿಮ್ಮತ್ತಿನವುಗಳು ಸಾಯಂಕಾಲ 16-50 ಗಂಟೆಯಿಂದ  17-50 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಫಿರ್ಯಾದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ 147/2020 ಕಲಂ 87 ಕೆ.ಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 133/2020 ಕಲಂ: 323, 324, 354, 504, 506 ಸಂ. 34 ಐಪಿಸಿ:- ಇಂದು ದಿನಾಂಕ10/05/2020 ರಂದು 2:10 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ಡಿ ಕರ್ತವ್ಯದಲ್ಲಿರುವಾಗ ಶಿವಪುತ್ರ ತಂದೆ ಶ್ರೀನಿವಾಸ ಜೋಡಬಡಿಗಿ ವ|| 32 ವರ್ಷ ಜಾ|| ಯಾದವ ಉ|| ಒಕ್ಕಲುತನ ಸಾ|| ಪೇಠಅಮ್ಮಾಪುರ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಮ್ಮದ್ದು ವಾಗಣಗೇರಿ ಸೀಮಾಂತರದ ಸವರ್ೆ ನಂ. 94 ನೇದ್ದರಲ್ಲಿ ನಮ್ಮದು 1 ಎಕರೆ 33 ಗುಂಟೆ ಜಮೀನು ಇದ್ದು, ಸದರಿ ಜಮೀನಿನಲ್ಲಿಯೇ ನಾವು ಮನೆ ಕಟ್ಟಿಕೊಂಡು ಕುಟುಂಬ ಸಮೇತವಾಗಿ ವಾಸವಾಗಿರುತ್ತೇವೆ. ನಮ್ಮ ಜಮೀನಿಗೆ ಹೊಂದಿಕೊಂಡು ನಮ್ಮ ಅಣ್ಣ ತಮ್ಮಕಿಯಾದ ಸಾಬಣ್ಣ ತಂದೆ ಹಣಮಂತ ಜೊಡಬಡಿಗಿ ಇವರ ಜಮೀನು ಇದ್ದು, ನಮ್ಮ ಹಾಗೂ ಅವರ ನಡುವೆ ಆಗಾಗ ಹೊಲದ ಬದುವಿನ ಸಂಬಂದವಾಗಿ ನಮ್ಮೊಂದಿಗೆ ಸಾಬಣ್ಣ ಇತನು ತಂಟೆ ತಕಾರಾರು ಮಾಡುತ್ತಾ ಬಂದಿದ್ದನು. ಹಿಗಿದ್ದು ದಿನಾಂಕ: 06/05/2020 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಶ್ರೀನಿವಾಸ, ತಾಯಿ ಭೀಮವ್ವ, ನನ್ನ ತಮ್ಮನಾದ ಯಂಕಪ್ಪ ನಾಲ್ಕು ಜನರು ಹೊಲದಲ್ಲಿರುವ ಮನೆಯ ಮುಂದಿನ ಅಂಗಳದಲ್ಲಿ ಮಾತಾನಾಡುತ್ತಾ ಕುಳಿತ್ತಿರುವಾಗ ಅದೇ ಸಮಯಕ್ಕೆ ನಮ್ಮ ಅಣ್ಣ-ತಮ್ಮಕಿಯಾದ ಸಾಬಣ್ಣ ತಂದೆ ಹಣಮಂತ ಜೋಡಬಡಿಗಿ, ಅವರ ಅಣ್ಣಂದಿರಾದ ಯಂಕಪ್ಪ ತಂದೆ ಹಣಮಂತ ಜೋಡಬಡಿಗಿ, ಕೃಷ್ಣಪ್ಪ ತಂದೆ ಹಣಮಂತ ಜೋಡಬಡಿಗಿ, ಅನೀಲ್ ತಂದೆ ಹಣಮಂತ ಜೋಡಬಡಿಗಿ, ಇವರೆಲ್ಲರೂ ಗುಂಪುಕಟ್ಟಿಕೊಂಡು ಬಂದವರೇ ಎಲೇ ಶಿವಪುತ್ರ ಸೂಳೇ ಮಗನೆ ಜಮೀನಿನ ಬದುವು ನಮಗೆ ಬರುತ್ತದೆ ಅಂತಾ ಹೇಳುತ್ತಿ ನಿನ್ನದು ಬಹಳ ಆಗಿದೆ ಇವತ್ತು ಒಂದು ಕೈ ನೊಡೆ ಬಿಡುತ್ತೆವೆ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಾನು ಅವರಿಗೆ ಯಾಕೇ ಅವಾಚ್ಯ ಬೈಯುತ್ತಿ ಅಂತಾ ಕೇಳಿದಕ್ಕೆ ಅವರಲ್ಲಿಯ ಸಾಬಣ್ಣ, ಯಂಕಪ್ಪ ಇಬ್ಬರು ಕೂಡಿ ನನ್ನ ಎದೆಯ ಮೇಲೆ ಅಂಗಿ ಹಿಡಿದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದವರೆ ಸಾಬಣ್ಣ ಈತನು ಅಲ್ಲೆ ಬಿದ್ದ  ಒಂದು ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ಜಗಳ ಬಿಡಿಸಲು ಬಂದ ನನ್ನ ತಾಯಿ ಬಿಮವ್ವ ಇವಳಿಗೆ ಸಾಯಬಣ್ಣನು ಸೀರೆ ಹಿಡಿದು ಎಳೆದು ಜಗ್ಗಾಡಿ ಅವಮಾನ ಮಾಡಿದವನೆ ಅದೆ ಬಡಿಗೆಯಿಂದ ಎಡಗೈ ಬೆರಳಿಗೆ ಹೊಡೆದು ರಕ್ತಗಾಯ ಸೊಂಟಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ನನ್ನ ತಂದೆ ಶ್ರೀನಿವಾಸ ಈತನಿಗೆ ಕೃಷ್ಣಪ್ಪನು ಒಂದು ಬಡಿಗೆಯಿಂದ ಪಕ್ಕಡಿ ಹತ್ತಿರ ಗುಪ್ತಗಾಯ ಪಡಿಸಿದನು. ನನ್ನ ತಂದೆ ಯಂಕಪ್ಪನಿಗೆ ಅನೀಲ ಈತನು ನುಗಿಸಿಕೊಟ್ಟು ನಮ್ಮೆಲ್ಲರಿಗೂ ಆ ನಾಲ್ಕೂ ಜನರು ಹೊಡೆ ಬಡೆ ಮಾಡುತ್ತಿರುವಾಗ ನಾವು ಚಿರಾಡುವ ಶಬ್ದ ಕೇಳಿ ಪಕ್ಕದ ಹೊಲದವರಾದ ಯಂಕಪ್ಪ ತಂದೆ ನಿಂಗಪ್ಪ ಮಂಗಳೂರ, ಸಂತೋಷ ತಂದೆ ಯಂಕಪ್ಪ ಮಂಗಳೂರ ಇವರು ಬಂದು ಜಗಳ ಬಿಡಿಸಿದರು ಆಗ ಅವರು ಇವತ್ತು ಉಳದಿರಿ ಮಕ್ಕಳೆ ಇನ್ನೊಮ್ಮೆ ಹೊಲದ ಬದುವಿನ ವಿಚಾರವಾಗಿ ಮಾತನಾಡಿದರೆ ನಿಮಗೆ ಖಲಾಸ ಮಾಡದೆ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ನಂತರ ಗಾಯಗೊಂಡ ನಾನು ನನ್ನ ತಾಯಿ ಬೀಮವ್ವ ನನ್ನ ತಂದೆ ಶ್ರೀನಿವಾಸ ಮೂವರು ಅಂದೆ ಸರಕಾರಿ ಆಸ್ಪತ್ರೆ ಸುರಪೂರಕ್ಕೆ ಬಂದು ಸೇರಿಕೆಯಾಗಿ ಉಪಚಾರ ಪಡೆದು ಅಲ್ಲಿಂದ ವೈಧ್ಯಾಧಿಕಾರಿಗಳ ಸಲಹೇ ಕಲಬುರಗಿ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದುಕೊಂಡಿದ್ದು, ನನಗೂ ನನ್ನ ತಾಯಿ ಬೀಮವ್ವ ಇಬ್ಬರು ಗುಣಮುಖವಾಗಿದ್ದು ನನ್ನ ತಂದೆ ಶ್ರೀನಿವಾಸ ಇನ್ನು ಉಪಚಾರ ಪಡೆಯುತ್ತಿದ್ದಾರೆ. ನಮ್ಮ ತಂದೆ ಉಪಚಾರ ಪಡೆಯುತ್ತಿದ್ದ ಕಾರಣ ನಾವು ಆಸ್ಪತ್ರೆಯಲ್ಲಿಯೆ ಇದ್ದು ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ನಮಗೆ ನ್ಯಾಯವದಿಗಿಸಿಕೊಡಲು ವಿನಂತಿ ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 83/2020 ಕಲಂ: 279,338 ಐ.ಪಿ.ಸಿ ಸಂಗಡ 187 ಐ ಎಮ್ ವಿ ಆಕ್ಟ್ :- ಇಂದು ದಿನಾಂಕ 10.05.2020 ರಂದು 10.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಲಕ್ಷ್ಮಣ ತಂದೆ ಪೀರು ರಾಠೋಡ ವ|| 38 ಜಾ|| ಲಮಾಣಿ ಉ|| ಕೂಲಿಕೆಲಸ ಸಾ|| ಯಾಳಗಿ ತಾಂಡಾ ತಾ|| ಸುರಪೂರ ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನನಗೆ ಮೂರು ಜನ ಹೆಣ್ಣು ಮಕ್ಕಳು ಹಾಗು ಎರಡು ಜನ ಗಂಡು ಮಕ್ಕಳಿರುತ್ತಾರೆ. ಗಂಡು ಮಕ್ಕಳಲ್ಲಿ ಆಕಾಶ ವ|| 16 ವರ್ಷ ಈತನು ಹಿರಿಯವನಾಗಿದ್ದು ಸದ್ಯ 10 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿರುತ್ತಾನೆ. ಹೀಗಿದ್ದು ಇಂದು ದಿನಾಂಕ 10/05/2020 ರಂದು ಬೆಳಿಗ್ಗೆ 9 ಗಂಟೆಗೆ ನಾನು ಕೆಂಭಾವಿಯಿಂದ ಯಾಳಗಿ ಗ್ರಾಮಕ್ಕೆ ಬರುವ ರೋಡಿನ ಪಕ್ಕದಲ್ಲಿ ಹೊಸದಾಗಿ ಮನೆ ಕಟ್ಟುವ ನಮ್ಮ ತಾಂಡಾದ ಕಿಶನ್ ತಂದೆ ನಂದಪ್ಪ ರಾಠೋಡ ಇವರ ಮನೆಯ ಕೂಲಿ ಕೆಲಸಕ್ಕೆ ಹೋಗಿದ್ದೆನು. ನಾನು ಸದರ ಮನೆಯ ಕೂಲಿ ಕೆಲಸದಲ್ಲಿದ್ದಾಗ ಮದ್ಯಾಹ್ನ 1.40 ಗಂಟೆಗೆ ನನ್ನ ಮಗನಾದ ಆಕಾಶ ಈತನು ನನಗೆ ಬುತ್ತಿ ತೆಗೆದುಕೊಂಡು ಬಂದು ರೋಡ ದಾಟುತ್ತಿದ್ದಾಗ ಕೆಂಭಾವಿ ಕಡೆಯಿಂದ ಒಂದು ಕಾರ ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ರೋಡ ದಾಟುತ್ತಿದ್ದ ನನ್ನ ಮಗನಿಗೆ ಬಲವಾಗಿ ಡಿಕ್ಕಿಪಡಿಸಿದ್ದು ಕೂಡಲೇ ಅಲ್ಲಿಯೇ ಕೆಲಸ ಮಾಡುತ್ತಿದ್ದ ನಾನು ನೋಡಿ ಓಡಿ ಹೋಗಿ ನನ್ನ ಮಗನಿಗೆ ನೋಡಲು ನನ್ನ ಮಗನು ರೋಡಿನ ಮಗ್ಗಲಿನ ಕಲ್ಲಲ್ಲಿ ಬಿದ್ದಿದ್ದು ಆತನಿಗೆ ನೋಡಲಾಗಿ ಎಡಗಡೆ ತಲೆಗೆ ಭಾರೀ ರಕ್ತಗಾಯವಾಗಿ ಕತ್ತರಿಸಿದಂತಾಗಿ ಭಾರೀ ರಕ್ತಸ್ರಾವವಾಗಿ ಮಾತನಾಡುತ್ತಿರಲಿಲ್ಲ ಅಷ್ಟರಲ್ಲಿ ನಮ್ಮ ತಾಂಡಾದಿಂದ ನನ್ನ ಅಣ್ಣನಾದ ಶಂಕರ ತಂದೆ ಪೀರು ರಾಠೋಡ ಇವರು ಬಂದಿದ್ದು ಕೂಡಲೇ ಸದರ ನನ್ನ ಮಗನನ್ನು ಉಪಚಾರ ಕುರಿತು ಒಂದು ಅಂಬ್ಯುಲೆನ್ಸದಲ್ಲಿ ನನ್ನ ಅಣ್ಣನ ಜೊತೆಯಲ್ಲಿ ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತೇನೆ.  ನನ್ನ ಮಗನಿಗೆ ಅಪಘಾತ ಪಡಿಸಿದ ಚಾಲಕನು ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಸದರಿಯವನನ್ನು ನಾನು ನೋಡಿದಲ್ಲಿ ಗುರುತಿಸುತ್ತೇನೆ. ನಂತರ ನಾನು ಸದರ ಕಾರ ನಂಬರ ನೋಡಲಾಗಿ ಕೆಎ-33 ಎಮ್-4321 ಅಂತ ಇದ್ದು ಓಡಿ ಹೋದ ಅದರ ಚಾಲಕನ ಬಗ್ಗೆ ವಿಚಾರಿಸಿ ತಿಳಿಯಲಾಗಿ ಪಿಂಟುರಾವ ತಂದೆ ಗುಂಡುರಾವ ಸಾ|| ಕಲಬುಗರ್ಿ ಅಂತ ತಿಳಿದು ಬಂದಿದ್ದು ಕಾರಣ ನನ್ನ ಮಗ ಆಕಾಶ ಈತನಿಗೆ ಅಪಘಾತ ಪಡಿಸಿದ ಕಾರ ನಂಬರ ಕೆಎ-33 ಎಮ್-4321 ನೇದ್ದರ ಚಾಲಕ ಪಿಂಟುರಾವ ತಂದೆ ಗುಂಡುರಾವ ಸಾ|| ಕಲಬುಗರ್ಿ  ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 83/2020 ಕಲಂ 279 338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!