ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/05/2020

By blogger on ಶನಿವಾರ, ಮೇ 9, 2020


                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/05/2020 
                                                                                                               
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 57/2020 ಕಲಂ 143, 147, 148, 323, 324, 354, 504, 506 ಸಂ 149 ಐಪಿಸಿ:-ದಿನಾಂಕ 07/05/2020 ರಂದು ರಾತ್ರಿ 8-00 ಗಂಟೆಗೆ ಫಿರ್ಯಾಧಿ ಮತ್ತು ಅವನ ಮನೆಯವರೆಲ್ಲರೂ ತಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆಯನ್ನು ಹಿಡಿದುಕೊಂಡು ಬಂದು ಏ ಬೋಸಡಿ ಮಗನೇ ನೀನು ಮೋಟಾರ ಸೈಕಲ್ ರಿಪೇರಿ ಮಾಡಿ ಹಣ ಕೊಡು ಅಂತಾ ಕೇಳತಿ ನಿನಗೆ ಬಹಳ ಸೊಕ್ಕುಯಿದೆ ಅಂತಾ ಫಿರ್ಯಾಧಿ ಮಗನ ಜೋತೆಗೆ ಮತ್ತು ಅವನ ಮನೆಯವರ ಜೋತೆಗೆ ಜಗಳ ತೆಗೆದು ಹೊಡೆದು ಗುಪ್ತಗಾಯ ಮಾಡಿ ಫಿರ್ಯಾಧೀಯ ಸೀರೆ ಎಳೆದು ಮಾನಭಮಘ ಮಾಡಲು ಪ್ರಯತ್ನ ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 61/2020 ಕಲಂ: 379 ಐಪಿಸಿ ಇಂದು ದಿನಾಂಕ: 08/05/2020 ರಂದು 5-30 ಪಿಎಮ್ಕ್ಕೆ ಶ್ರೀಚಂದ್ರಯ್ಯ ತಂದೆ ಪ್ರಭಯ್ಯ ಸಾಲಿಮಠ, ವ:48, ಜಾ:ಜಂಗಮ, ಉ: ಲೈನಮೆನ್ಕೆಲಸ ಸಾ:ಬೆಂಡಬೆಂಬಳ್ಳಿ ತಾ:ವಡಗೇರಾ ಇದ್ದು, ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೇನಂದರೆ ನಾನು ಬೆಂಡಬೆಂಬಳ್ಳಿ ಶಾಖೆಯ ಲೈನಮೆನ್ ಎಂದೂ ಕೆಲಸ ಮಾಡಿಕೊಂಡಿರುತ್ತೇನೆ. ನಾನು ಸುಮಾರು 2018 ನೇ ಸಾಲಿನಲ್ಲಿ ಹೊಂಡಾ ಶೈನ್ ಮೋಟರ್ ಸೈಕಲ್ ಖರೀದಿ ಮಾಡಿದ್ದು, ನನ್ನ ಹೆಸರಿನಲ್ಲಿ ನೊಂದಣಿ ಆಗಿರುತ್ತದೆ. ಮೋಟರ್ ಸೈಕಲ್ನೊಂದಣಿ ಸಂ. ಕೆಎ 33 ಡಬ್ಲೂ 8864 ಇದ್ದು, ಚೆಸ್ಸಿ ನಂ. ಒಇ4ಎಅ65ಂಊಎ7166812 ಮತ್ತು ಇಂಜನ ನಂ. ಎಅ65ಇ72259344 ಇರುತ್ತದೆ. ಹೀಗಿದ್ದು ದಿನಾಂಕ: 02/05/2020 ರಂದು ಗೋನಾಲ್ ಎನ್.ಜೆ.ವೈ.ಲೈನ್ ಫಾಲ್ಟ್ ಚೆಕ್ಕೆ ಮಾಡಿಕೊಂಡು ರಾತ್ರಿ 9-30 ಗಂಟೆ ಸುಮಾರಿಗೆ ಕದರಾಪೂರ ಗ್ರಾಮದ ನಮ್ಮ 33/11 ಕೆ,ವ್ಹಿ.ಸ್ಟೇಷನ್ ಮರಳಿ ಬಂದಿದ್ದು ಅಂದು ರಾತ್ರಿ ಮಳೆ ಬಂದ ಕಾರಣ ಕೆಸರಾಗಿದ್ದರಿಂದ  ಮೋಟರ್ ಸೈಕಲ್ ನಮ್ಮ ಸ್ಟೇಷನ್ ಒಳಗಡೆ  ಹೋಗದ ಕಾರಣ ಸ್ಟೇಷನ್ ಪಕ್ಕದಲ್ಲಿರುವ ಆಂಧ್ರದವರ ಸೆಡ್ಡಿನ ಮುಂದೆ ನನ್ನ ಮೇಲ್ಕಂಡ ಮೋಟರ್ ಸೈಕಲ್  ನಿಲ್ಲಿಸಿ ನಮ್ಮ 33/11 ಕೆ.ವ್ಹಿ ಸ್ಟೇಷನ್ ಒಳಗಡೆ ಹೋಗಿ ರಾತ್ರಿ ಕರ್ತವ್ಯ ನಿರ್ವಹಿಸಿ ದಿನಾಂಕ 03/05/2020 ರಂದು ಬೆಳ್ಳಗೆ 6 ಗಂಟೆಗೆ ಸುಮಾರಿಗೆ ನಾನು ಮೋಟರ್ ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ್ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ ಆಗ ಗಾಬರಿಯಾದ ನಾನು  ಮತ್ತು ಲೈನಮೇನ್ ಶಿವರಾಜ ಪೂಜಾರಿ ಇಬ್ಬರೂ ಕೂಡಿ ಇಟಗಿ, ಕದರಪೂರ, ಗೂಗಲ್ ಮುಂತಾದ ಕಡೆ ನಮ್ಮ ಕಳುವಾದ ಮೋಟರ್ ಸೈಕಲ್ನ್ನು ಹುಡುಕಾಡಲಾಗಿ ಎಲ್ಲಿಯು ಸಿಗಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ನಂ. ಕೆಎ 33 ಡಬ್ಲೂ 8864  ಅ:ಕಿ: 48,000=00 ರೂ.ನೇದ್ದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ಶಿವರಾಜ ಪೂಜಾರಿ ಹಾಗೂ ಇತರರು ಕೂಡಿ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ.  ಕಾರಣ ಕಾನೂನು ಕ್ರಮ ಜರುಗಿಸಿ ನಮ್ಮ ಕಳುವಾದ ಮೋಟರ್ ಸೈಕಲ್ಗಳು ಪತ್ತೆ ಹಚ್ಚಬೇಕಾಗಿ  ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.61/2020 ಕಲಂ. 379 ಐಪಿಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 20/2020 ಕಲಂ 110(ಇ&ಜಿ) ಸಿಆರ್ಪಿಸಿ :- ಇಂದು ದಿನಾಂಕ 08/05/2020 ರಂದು 3.00 ಪಿಎಂ ಕ್ಕೆ ಠಾಣೆಯ ಶ್ರೀ ಬಾಬು ಹೆಚ್.ಸಿ 162 ರವರು ಠಾಣೆಗೆ ಬಂದು ಒಬ್ಬ ಆರೋಪಿ ಮತ್ತು ಒಂದು ವರದಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ನಾನು ಬಾಬು ಹೆಚ್.ಸಿ 162 ಶಹಾಪೂರ ಪೊಲೀಸ್ ಠಾಣೆ ಇಂದು ದಿನಾಂಕ: 08/05/2020 ರಂದು 2.00 ಪಿ.ಎಂ ಕ್ಕೆ ನನಗೆ ನೇಮಿಸಿದ ಬೀಟ ಏರಿಯಾವಾಗಿರುವ ಶಹಾಪೂರ ನಗರದ ಚಾಮುಂಡೇಶ್ವರಿ ಕಾಲೋನಿಗೆ ಹೋದಾಗ ಚಾಮುಂಡೇಶ್ವರಿ ಕಾಲೋನಿಯ ಬಸಯ್ಯ ಮುತ್ಯಾನ ದೇವಸ್ಥಾನದ ಹತ್ತಿರ ಅಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯುತ್ತ ರೌಡಿ ವರ್ತನೆ ಪ್ರದಶರ್ಿಸುತ್ತಿದ್ದ ಬಗ್ಗೆ ಕಂಡು ಬಂದಿದ್ದು ಆಗ ನಾನು ಸದರಿ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲಪ್ಪ ತಂದೆ ಮಹಾದೇವಪ್ಪ ನಾಶಿ ವ|| 30 ಜಾ|| ಕುರುಬರ ಉ|| ಕೂಲಿ ಸಾ|| ಚಾಮುಂಡೇಶ್ವರಿ ನಗರ ಶಹಾಪೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ಆತನನ್ನು ಹೀಗೆಯೇ ಬಿಟ್ಟಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವ ಸಂಭವ ಕಂಡು ಬಂದಿದ್ದರಿಂದ ಸದರಿ ವ್ಯಕ್ತಿಗೆ ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ಕರೆದುಕೊಂಡು ಬಂದಿದ್ದು ಸದರಿ ವ್ಯಕ್ತಿಯ ಮೇಲೆ ಮುಂಜಾಗೃತ ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 20/2020 ಕಲಂ 110(ಇ & ಜಿ) ಸಿಆರ್ ಪಿಸಿ ನೇದ್ದರಲ್ಲಿ ಮುಂಜಾಗ್ರತಾ ಕ್ರಮ ವರದಿ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 61/2020 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994:- ಇಂದು ದಿನಾಂಕ: 08/05/2020 ರಂದು 5.15 ಎಎಮ್ ಕ್ಕೆ ಮಾನ್ಯ ಸಿಪಿಐ ಶಹಾಪೂರ ರವರು ರಾತ್ರಿ ಗಸ್ತು ಚೆಕಿಂಗ್ ಮುಗಿಸಿಕೊಂಡು ಮರಳಿ ಹೋಗುವಾಗ ಬಾತ್ಮಿ ಬಂದಿದ್ದೇನೆಂದರೆ ದೋರನಳ್ಳಿ ಹಳ್ಳದಿಂದ ಒಂದು ಟ್ರ್ಯಾಕ್ಟರ್ದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ಶಿರವಾಳ ಕಡೆಗೆ ಸಾಗಿಸುತ್ತಿದ್ದಾರೆ ಅಂತ ಬಾತ್ಮಿ ಬಂದಿದ್ದು, ಮಾನ್ಯ ಸಿಪಿಐ ಸಾಹೇಬರು ಸಿಬ್ಬಂದಿ ಹಾಗು ಪಂಚರೊಂದಿಗೆ ಶಿರವಾಳ ಸೀಮಾಂತರ ಮಡ್ನಾಳ ಕ್ಯಾಂಪ್ ಹತ್ತಿರ ನಿಂತಾಗ ಮಡ್ನಾಳ ಕಡೆಯಿಂದ ಆರೋಪಿ ಭೀಮರಾಯ ಈತನು ಟ್ರ್ಯಾಕ್ಟರ್ದಲ್ಲಿ ಅಂದಾಜು 2000/- ರೂ ಕಿಮ್ಮತ್ತಿನ ಮರಳನ್ನು ತುಂಬಿಕೊಂಡು ಬಂದಾಗ 6.15 ಎಎಮ್ ಕ್ಕೆ ಸಿಪಿಐ ರವರು ಸದರಿ ಮರಳಿನ ಬಗ್ಗೆ ವಿಚಾರಿಸಲಾಗಿ, ಟ್ರ್ಯಾಕ್ಟರ್ ಮಾಲೀಕ ಗೋವಿಂದಪ್ಪ ಚಟ್ನಳ್ಳಿ ಈತನು ದೋರನಳ್ಳಿ ಹಳ್ಳದಿಂದ ಮರಳನ್ನು ತುಂಬಿಸಿ ಕಳುಹಿಸಿದ್ದು ಯಾವುದೇ ರಾಯಲ್ಟಿ ಇರುವುದಿಲ್ಲ ಅಕ್ರಮವಾಗಿ ಕಳ್ಳತನದಿಂದ ಮರಳು ಲೋಡ ಮಾಡಿಕೊಂಡು ಬಂದಿದ್ದು ಇರುತ್ತದೆ. ಅಂತ ತಿಳಿಸಿದ್ದರಿಂದ ಸಿಪಿಐ ರವರು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಕೈಕೊಂಡು ಮರಳು ಸಮೇತ ಟ್ರಾಕ್ಟರ್ನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಭೀ.ಗುಡಿ ಠಾಣೆ ಗುನ್ನೆ ನಂ:61/2020 ಕಲಂ 379 ಐಪಿಸಿ & 44(1) ಕೆ.ಎಮ್.ಎಮ್.ಸಿ ರೂಲ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 62/2020 ಕಲಂ 323, 324, 504, 506 ಸಂಗಡ 34 ಐಪಿಸಿ:-ಫಿಯರ್ಾದಿದಾರನು 2-3 ವರ್ಷಗಳ ಹಿಂದೆ ಎಲ್ಲ ಕಡೆ ತಿರುಗಾಡಿ ಕಾಗದ ಪತ್ರಗಳನ್ನು ತಯಾರಿಸಿ ಆರೋಪಿ ಶರಣಪ್ಪ ಈತನಿಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ಕಾರ ಕೊಡಿಸಿದ್ದು, ಕಾರ ಬಂದ ನಂತರ ಶರಣಪ್ಪ ಈತನು ಫಿಯರ್ಾದಿಗೆ ಮಾತನಾಡಿಸದೆ ಆತನೊಂದಿಗೆ ವೈರತ್ವ ಬೆಳೆಸಿಕೊಂಡಿದ್ದು, ದಿನಾಂಕ 27/04/2020 ರಂದು 11 ಎಎಮ್ ಕ್ಕೆ ಫಿಯರ್ಾದಿ ಮುಡಬೂಳ ಕ್ರಾಸ ಹತ್ತಿರ ನಿಂತಾಗ ಆರೋಪಿತರು ಬಂದು ಲೇ ಶಾಂತ್ಯಾ ಕಾರಿನ ವಿಷಯದಲ್ಲಿ ನೀನು ನಮಗೆ ಬಹಳ ಜೀವ ತಿನ್ನುತ್ತಿದ್ದಿ, ನಿನ್ನ ಸೊಕ್ಕು ಬಹಾಳ ಆಗಿದೆ ಸೂಳೇ ಮಗನೆ ಅಂತ ಅಂದು ಕೈಯಿಂದ ಮುಖಕ್ಕೆ ಹಾಗು ಬೆನ್ನಿಗೆ ಹೊಡೆ ಬಡೆ ಮಾಡಿದ್ದು, ಅಲ್ಲದೆ ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ಬಲಗೈ ಮುಂಗೈ ಹತ್ತಿರ ಹೊಡೆದು ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಇರುತ್ತದೆ.ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 63/2020 87 ಕೆ.ಪಿ.ಆ್ಯಕ್ಟ್ ಮತ್ತು ಕಲಂ: 11 ಪ್ರಿವೆನ್ಷನ್ ಆಪ್ ಕ್ರುವಾಲಿಟಿ ಟು ಎನಿಮಲ್ ಯಾಕ್ಟ:- ಇಂದು ದಿನಾಂಕ: 08/05/2020 ರಂದು 01.15 ಪಿಎಮ್ ಕ್ಕೆ ಪಿಎಸ್ಐ ರವರಿಗೆ ಮುಡಬೂಳ ಸೀಮಾಂತರ ನಿಷ್ಠಿ ಇವರ ನೀಲಗಿರಿ ಗಿಡಗಳ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದಿಂದ ಪ್ರ.ವ.ವರದಿ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಪರವಾನಿಗೆ ಪಡೆದುಕೊಂಡು, ಮಾನ್ಯ ಡಿ.ಸ್.ಪಿ ಸಾಹೇಬರು ಸುರಪೂರ ಮತ್ತು ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಕೋಳೀ ಪಂದ್ಯವಾಡುತ್ತಿದ್ದವರ ಮೇಲೆ 3.30 ಪಿಎಮ್ ಕ್ಕೆ ದಾಳಿ ಮಾಡಿದ್ದು,  ದಾಳಿಯಲ್ಲಿ  06 ಜನ ಆರೋಪಿತರು ಸಿಕ್ಕಿದ್ದು ಆರೋಪಿತರಿಂದನಗದು ಹಣ 2450/-ರೂ ಹಾಗು 02 ಹುಂಜಗಳು ಅ.ಕಿ: 400/- ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಅದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 64/2020 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ:- ಇಂದು ದಿನಾಂಕ: 08/05/2020 ರಂದು 8.30 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಹೋತಪೇಟ ಹಳ್ಳದಿಂದ ಒಂದು ಟ್ರ್ಯಾಕ್ಟರ್ದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ಭೀ.ಗುಡಿ ಕಡೆಗೆ ಸಾಗಿಸುತ್ತಿದ್ದಾರೆ ಅಂತ ಬಾತ್ಮಿ ಬಂದಿದ್ದು, ಮಾನ್ಯ ಪಿ.ಎಸ್.ಐ ಸಾಹೇಬರು ಸಿಬ್ಬಂದಿ ಹಾಗು ಪಂಚರೊಂದಿಗೆ ಭೀ.ಗುಡಿಯ ಜ್ಯೋತಿ ಧಾಬಾದ ಹತ್ತಿರ ನಿಂತಾಗ ಹೋತಪೇಟ್ ಕಡೆಯಿಂದ ಆರೋಪಿ ಹಣಮಂತ ತಂದೆ ಧರ್ಮಣ್ಣ ರಾಯಲದಾರ ಸಾ:ಹೋತಪೇಟ ಈತನು ಟ್ರ್ಯಾಕ್ಟರ್ ನಂ ಕೆಎ: 33 ಟಿಎ: 4427 ನೇದ್ದರಲ್ಲಿ  ಅಂದಾಜು 2000/- ರೂ ಕಿಮ್ಮತ್ತಿನ ಮರಳನ್ನು ತುಂಬಿಕೊಂಡು ಬಂದಾಗ 9.15 ಪಿಎಮ್ ಕ್ಕೆ ತಡೆದು ಸದರಿ ಮರಳಿನ ಬಗ್ಗೆ ಅದರ ಚಾಲಕನಿಗೆ ವಿಚಾರಿಸಲಾಗಿ, ಟ್ರ್ಯಾಕ್ಟರ್ ಮಾಲೀಕ ತಾನೇ ಇದ್ದು ಹೋತಪೇಟ ಹಳ್ಳದಿಂದ ಮರಳನ್ನು ತುಂಬಿಕೊಂಡು ಭೀ.ಗುಡಿ ಕಡೆಗೆ ಹೋಗುತ್ತಿರುವದಾಗಿ ತಿಳಿಸಿದ್ದು, ಮರಳಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಯಾವುದೇ ರಾಯಲ್ಟಿ ಕಟ್ಟಿರುವುದಿಲ್ಲ ಅಕ್ರಮವಾಗಿ ಕಳ್ಳತನದಿಂದ ಮರಳು ಲೋಡ ಮಾಡಿಕೊಂಡು ಬಂದಿದ್ದು ಇರುತ್ತದೆ. ಅಂತ ತಿಳಿಸಿದ್ದರಿಂದ ಪಿ.ಎಸ್.ಐ ರವರು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಕೈಕೊಂಡು ಮರಳು ಸಮೇತ ಟ್ರಾಕ್ಟರ್ನ್ನು ಜಪ್ತಿ ಮಾಡಿಕೊಂಡು 10.30 ಪಿಎಮ್ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಭೀ.ಗುಡಿ ಠಾಣೆ ಗುನ್ನೆ ನಂ:64/2020 ಕಲಂ 379 ಐಪಿಸಿ & 44(1) ಕೆ.ಎಮ್.ಎಮ್.ಸಿ ರೂಲ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ 82/2020 ಕಲಂ: 87 ಕೆಪಿ ಯಾಕ್ಟ :- ?????? 08/05/2020 ???? 18.00 ?????? ???? ವೆಂಕಟೇಶ ಡಿವೈಎಸ್ಪಿ ಸುರಪೂರ ಉಪ ವಿಭಾಗ ???? ?????? ??????? ??????? ???? ????? ???????????ದರೆ ಇಂದು ದಿನಾಂಕ: 08/05/2020 ರಂದು 1600 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಮಾಲಗತ್ತಿ ಗ್ರಾಮದ ಕಡೆಗೆ ಪೆಟ್ರೋಲಿಂಗ ಕುರಿತು ಹೋದಾಗ ಮಾಲಗತ್ತಿ ಸೀಮಾಂತರದ ಮಕನದಾರ ಇವರ ಹೊಲದ ಹತ್ತಿರ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಕೋಳಿ ಪಂದ್ಯದ ಸಹಾಯದಿಂದ ಜೂಜಾಟ ಆಡುತ್ತಿದ್ದ ಬಗ್ಗೆ 1600 ಗಂಟೆಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 10-15 ಜನರು ಕೂಡಿಕೊಂಡು ಹಣವನ್ನು ಪಣಕ್ಕೆ ಹಚ್ಚಿ ಕೋಳಿ ಕಾಳಗ ಎಂಬ ಜೂಜಾಟ ಆಡುತ್ತಿದ್ದ ಬಗ್ಗೆ 1630 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 1700 ಗಂಟೆಗೆ ಬಂದು ಮಾನ್ಯ ಹಿರಿಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 1800 ಗಂಟೆಗೆ ಅನುಮತಿ ನೀಡಿದ್ದರಿಂದ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 11 ಜನರನ್ನು ಹಿಡಿದು ಕಣದಲ್ಲಿದ್ದ 19,150/- ರೂಪಾಯಿ ನಗದು ಹಣ ಹಾಗು ಕಾಳಗಕ್ಕೆ ಬಳಸಿದ 05 ಹುಂಜಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 37/2020 ಕಲಂ: 279, 304(ಎ), 337, 338, 427 ಐಪಿಸಿ & 187 ಐಎಮ್ವ್ಹಿ ಆಕ್ಟ್:- ಇಂದು ದಿನಾಂಕ:08.05.2020 ರಂದು 3:30 ಪಿಎಮ್ ಸುಮಾರಿಗೆ ಪಿಯರ್ಾದಿಯ ತಾಯಿಯಾದ ಮೃತಳು & ಗಾಯಾಳುಗಳಾದ ಇತರರು ಗೆದ್ದಲಮರಿ ತಾಂಡಾದ ಶ್ರೀ ಸೇವಾಲಾಲ ವೃತ್ತದ ಹತ್ತಿರ ಇರುವ ಬೋರ್ ವೆಲ್ಗೆ ನೀರು ತರಲು ಬಂದಾಗ ಬೂದಿ ಟ್ಯಾಂಕರ್ ನಂ:ಕೆಎ-32 ಡಿ-5156 ನೇದ್ದರ ಚಾಲಕನು ತನ್ನ ಬೂದಿ ಟ್ಯಾಂಕರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಬಲಶೆಟ್ಟಿಹಾಳ ಕಡೆಯಿಂದ ನಮ್ಮ ತಾಂಡಾದೊಳಗೆ ಚಲಾಯಿಸಿಕೊಂಡು ಬಂದು ತಾಂಡಾದಲ್ಲಿನ ಸೇವಾಲಾಲ ಚೌಕ ಹತ್ತಿರ ಇರುವ ರಸ್ತೆಯ ತಿರುವಿನಲ್ಲಿ ಒಮ್ಮಿಂದೊಮ್ಮೆಲೆ ಟ್ಯಾಂಕರನ್ನು ಕಟ್ಮಾಡಿ ರೋಡಿನ ಪಕ್ಕದಲ್ಲಿರುವ ನೀರಿನ ಬೋರ್ ವೆಲ್ಗೆ ನೀರು ತರಲು ಬಂದಿದ್ದ ಮೃತಳಿಗೆ ಮತ್ತು ಇತರರಿಗೆ ಹಾಗೂ ಬೋರ್ ವೆಲ್ಗೆ ಗುದ್ದಿ ಅಪಘಾತಪಡಿಸಿ ಚಾಲಕನು ಬೂದಿ ಟ್ಯಾಂಕರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಲ್ಲಿ ಮೃತಳಿಗೆ ಎಡಗಾಲ ತೊಡೆಯ ಹತ್ತಿರ ಭಾರೀ ರಕ್ತಗಾಯವಾಗಿ, ಎಡಗಾಲ ಪಾದಕ್ಕೆ ರಕ್ತಗಾಯ, ತಲೆಯ ಹಿಂಬಾಗಕ್ಕೆ ಭಾರೀ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇತರರಿಗೂ ಸಹ ಅಲ್ಲಲ್ಲಿ ಸಣ್ಣ ಪುಟ್ಟ ಗಾಯ ಪೆಟ್ಟುಗಳಾಗಿದ್ದು ಇರುತ್ತದೆ. ಅಶೋಕ ಲೈಲ್ಯಾಂಡ ಕಂಪನಿಯ ಬೂದಿ ಟ್ಯಾಂಕರ್ ನಂ:ಕೆಎ-32 ಡಿ-5156 ನೇದ್ದರ ಚಾಲಕನಾದ ರಮೇಶ ತಂದೆ ಕಸ್ತೂರಪ್ಪ ಜಾಧವ ಸಾ:ಗೆದ್ದಲಮರಿ ತಾಂಡಾ ಈತನು ಬೂದಿ ಟ್ಯಾಂಕರನ್ನು ಅತೀ ವೇಗ & ಅಲಕ್ಷತನದಿಂದ ಚಲಾಯಿಸಿಕೊಂಡಿದ್ದರಿಂದ ಅಪಘಾತ ಸಂಭವಿಸಿದ್ದು ಕಾರಣ ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:37/2020 ಕಲಂ: 279, 304(ಎ), 337, 338, 427 ಐಪಿಸಿ & 187 ಐಎಮ್ವ್ಹಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಮಹಿಳಾ  ಪೊಲೀಸ ಠಾಣೆ ಗುನ್ನೆ ನಂ:- 15/2020 ಕಲಂ: 143, 147, 148, 498(ಎ), 323, 324, 114 504, 506, ಸಹ ಕಲಂ: 149 ಐ.ಪಿ.ಸಿ: ಇಂದು ದಿನಾಂಕ: 08.05.2020 ರಂದು ರಾತ್ರಿ 7.30  ಪಿ.ಎಂಕ್ಕೆ ಪಿರ್ಯಾಧಿ ಶ್ರೀಮತಿ ಶ ಅಶ್ವಿನಿ ಗಂಡ ಮುನೇಶ ಅವಂಟಿ ವಯಾ-33 ಉ- ಮನೆಕೆಲಸ ಜಾತಿ- ಲಿಂಗಾಯತ್  ಸಾ|| ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಏನೆಂದರೆ 8 ವರ್ಷಗಳ ಹಿಂದೆ ಮುನೇಶ ತಂದೆ ಶಾಂತವೀರಪ್ಪ ಅವಂಟಿ ಈತನೊಂದಿಗೆ ಮದುವೆಯಾಗಿದ್ದು 2 ಜನ ಗಂಡು ಮಕ್ಕಳಿರುತ್ತಾರೆ. ಮದುವೆಯಾದ ಮೇಲೆ 1 ವರ್ಷ ಚೆನ್ನಾಗಿ ನೋಡಿಕೊಂಡು ನಂತರದ ದಿನಗಳಲ್ಲಿ ನನ್ನ ಗಂಡ , ಅತ್ತೆ , ಮಾವ ಮೈದುನ , ಹಾಗೂ ನೆಗೆಣಿ ನನಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದು ರಂಡಿ, ಚಿನಾಲಿ ಸೂಳಿ ಅಂತ ಅವ್ಯಾಚವಾಗಿ ಬೈದು  ಹೊಡೆಬಡೆ ಮಾಡುತ್ತಾ ಬಂದಿರುತ್ತಾರೆ. 

          ದಿನಾಂಕ: 07.05.2020 ರಂದು ರಾತ್ರಿ 11 ಪಿ.ಎಂಕ್ಕೆ  ನಾನು ಊಟ ಮಾಡಿ ಮನೆಯಲ್ಲಿ ಮಲಗಿದ್ದಾಗ ನನ್ನ ಗಂಡ  ಎ-1 ಮುನೇಶ ತಂದೆ ಶಾಂತವೀರಪ್ಪ ಅವಂಟಿ ಎ-2 ಚಂದ್ರಕಲಾ ಗಂಡ ಶಾಂತವೀರಪ್ಪ , ಎ-3 ಶಾಂತವೀರಪ್ಪ ತಂದೆ ಮಲ್ಲಿಕಾಜರ್ುನ ಎ-4-ಶ್ರೀನಾಥ ತಂದೆ ಶಾಂತವೀರಪ್ಪ ಎ-5 ನಿಖೀತಾ ಗಂಡ ಶ್ರೀನಾಥ ಇವರೇಲ್ಲರೂ ಏಕದ್ದೋಶದಿಂದ ಅಕ್ರಮ ಕೂಟ ರಚಿಸಿಕೊಂಡು ನಾನು ಮಲಗಿದ್ದ ರೂಮಿಗೆ ಬಂದು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು ಜಗಳ ಮಾಡಿ ನನ್ನ ಕೂದಲು ಹಿಡಿದು ಜಗ್ಗಾಡಿ ಹೊಡಬಡೆ ಮಾಡಿದ್ದು ನನ್ನ ಅತ್ತೆ ಹಾಗೂ ನೆಗೆಣಿ ಕೂಡಿ  ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ನನ್ನ ಗಂಡ ಸೊಂಟಕ್ಕೆ ಹಾಕಿದ ಬೇಲ್ಟನಿಂದ ಬಲಗೈಗೆ , ಮುಖಕ್ಕೆ, ತೆಲೆಗೆ , ಮೂಗಿಗೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಅವ್ಯಾಚವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ. ನನ್ನ ಗಂಡನಿಗೆ ಹೊಡೆಯಲು ನನ್ನ ಅತ್ತೆ ಮಾವ ಇವರು ಕುಮ್ಮಕ್ಕು ನೀಡಿರುತ್ತಾರೆ. ಆದ್ದರಿಂದ  ಸದರಿಯವರ ಮೇಲೆ ಕ್ರಮ ಜರುಗಿಸಬೇಕು ಅಂತ ಕೊಟ್ಟ ದೂರಿನ ಮೇಲಿಂದ ಮಹಿಳಾ ಠಾಣೆಯಲ್ಲಿ ಗುನ್ನೆ ನಂ: 15/2020 ಕಲಂ: 143, 147, 148, 498(ಎ), 323, 324 504, 506, 114 ಸಹ ಕಲಂ: 149 ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!