ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/05/2020

By blogger on ಗುರುವಾರ, ಮೇ 7, 2020







                                    ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/05/2020 
                                                                                                               

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 43/2020 ಕಲಂ 379 ಐಪಿಸಿ:-ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಕಪ್ಪು ಬಣ್ಣದ ಹೊಂಡಾ ಶೈನ್ ಮೋಟರ್ ಸೈಕಲ್ ನಂ ಏಂ 33, ಕಿ 9420 ಅಂತಾ ಇದ್ದು, ಅದರ ಇಟಿರಟಿಜ ಓಠ-ಎಅ36ಇಖಿ7062775, ಅಚಿ ಓಠ-ಒಇ4ಎಅ36ಎಆಇಖಿ037942, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 20,000/ ರೂಪಾಯಿಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು, ದಿನಾಂಕ 16/04/2020 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ ನಾನು ನನ್ನ ಮೋಟರ್ ಸೈಕಲ್ ಲಾಕ್ ಮಾಡಿ ನಮ್ಮ ಮನೆಯ ಹತ್ತಿರ ನಿಲ್ಲಿಸಿ, ಮನೆಯಲ್ಲಿ ಇದ್ದೆನು. ದಿನಾಂಕ 17/04/2020 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ನಾನು ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ಈ ವಿಷಯವನ್ನು ನಮ್ಮ ಮನೆಯ ಪಕ್ಕದಲ್ಲಿ ಇರುವ ಶಾಂತಗೌಡ ತಂದೆ ಶರಣಪ್ಪಗೌಡ ಪಾಟೀಲ್ ಹಾಗೂ ಬಂದಯ್ಯಸ್ವಾಮಿ ತಂದೆ ಬಸ್ಸಯ್ಯಸ್ವಾಮಿ ಹಿರೇಮಠ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದರು. ಎಲ್ಲರು ಕೂಡಿ ಅಲ್ಲಿ ಅಕ್ಕ ಪಕ್ಕದಲ್ಲಿ ಮತ್ತು ವಿವಿಧ ಕಡೆಗಳಲ್ಲಿ ನೋಡಿದರೂ ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋದಂತೆ ಕಂಡು ಬಂದಿರುತ್ತದೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ಮೋಟರ್ ಸೈಕಲ್ ಪತ್ತೆಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 43/2020 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 73/2020 ಕಲಂ.143,147,148,.323,324,354,504,506, ಸಂಗಡ 149ಐಪಿಸಿ ಮತ್ತು 3(1) ಆರ್.ಎಸ್. ಡಬ್ಲೂ.. 3(2)ವಿಎ ಎಸ್ಸಿ.ಎಸ್ಟಿ ಕಾಯ್ದೆ  :- ದಿನಾಂಕ: 07-05-2020 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನಾನು ಈ ಮೇಲಿನ ಹೆಸರು ವಿಳಾಸದ ನಿವಾಸಿತಳಿದ್ದು ಹೊಲಮನೆ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವನ ಮಾಡಿಕೊಂಡಿರುತ್ತೇನೆ, ನಾನು ಸುಮಾರು 1995 ರಲ್ಲಿ ಹೊನ್ನಪ್ಪ ಕುರಬರ ಇವರ ಕಡೆಯಿಂದ ನಮ್ಮೂರಿನ ಬಳಿಚಕ್ರ ಗ್ರಾಮ ಸಿಮಾಂತರದ ಹೊಲ ಸವರ್ೆ ನಂಬರ 210 ರಲ್ಲಿ 6 ಪ್ಲಾಟಗಳನ್ನು ಖರೀದಿ ಮಾಡಿ ಛಾಪಾ ಕಾಗದದ ಮೇಲೆ ಬರೆಸಿಕೊಂಡಿದ್ದು ಇರುತ್ತದೆ. ಆ ಜಾಗದಲ್ಲಿ ಮನೆ ಕಟ್ಟಲು 60 ಗಾಡಿ ಕಲ್ಲನ್ನು ಹೊಡೆಸಿದ್ದು ಲಾಕ್ ಡೌನ್ ಇರುವದರಿಂದ ನಾವು ಸುಮ್ಮನಿದ್ದೆವು. ದಿನಾಂಕ: 01-05-2020 ರಂದು ಬೆಳಿಗ್ಗೆ 09-00 ಗಂಟೆಗೆ ಹೊಲಕ್ಕೆ ಹೋಗಿದ್ದು ಹೊಲದ ಕೆಲಸ ಮುಗಿಸಿಕೊಂಡು ಮದ್ಯಾಹ್ನ ಸುಮಾರಿಗೆ ಮನೆಗೆ ಬಂದೆನು ಮನೆಗೆ ಬಂದ ನಂತರ ನಮ್ಮ ಪ್ಲಾಟುಗಳಲ್ಲಿ ಮಲ್ಲಮ್ಮ ಗಂಡ ಹೊನ್ನಪ್ಪ ನಾಯ್ಕಲ್ ಇವರು ಮನೆ ಕಟ್ಟುತಿದ್ದಾರೆ ಅಂತಾ ವಿಷಯ ತಿಳಿದು ನಾನು ಮದ್ಯಾಹ್ನ 12-00 ಗಂಟೆ  ಸುಮಾರಿಗೆ ನಾನು ನಮ್ಮ ಜಾಗಕ್ಕೆ ಹೊದಾಗ ನಮ್ಮ ಜಾಗದಲ್ಲಿ ನಮ್ಮ ಕಲ್ಲುಗಳನ್ನು ತೆಗೆದುಕೊಂಡು 3 ತರ ಗೋಡೆಯನ್ನು ಕಟ್ಟಿದ್ದು 4 ನೇ ತರ ಗೋಡೆಯನ್ನು ನಮ್ಮೂರಿನ 1) ಮಲ್ಲಮ್ಮ ಗಂಡ ಹೊನ್ನಪ್ಪ ನಾಯ್ಕಲ್ 2) ಮಲ್ಲಮ್ಮ ಗಂಡ ಹೊನ್ನಪ್ಪ ಗೌಡಗೇರಾ 3) ಶಿವಪ್ಪ ತಂದೆ ಹೊನ್ನಪ್ಪ ನಾಯ್ಕಲ್ 4) ಶರಣಪ್ಪ ತಂದೆ ಹೊನ್ನಪ್ಪ ನಾಯ್ಕಲ್ 5) ರವಿ ತಂದೆ ಮಲ್ಲಪ್ಪ ಗಾಡಿ 6) ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಗೌಡಗೇರಾ 7) ಸಿದ್ದಪ್ಪ ತಂದೆ ಹೊನ್ನಪ್ಪ ಗೌಡಗೇರಾ  8) ಕರೆಪ್ಪ ತಂದೆ ಹೊನ್ನಪ್ಪ ಗೌಡಗೇರ 9) ಬಸ್ಯಾ ತಂದೆ ಕಾಸಗೀರ 10) ನಿಂಗಪ್ಪ ತಂದೆ ಆದಪ್ಪ ಇವರೆಲ್ಲರು ಸೇರಿ ನಮ್ಮ ಪ್ಲಾಟುಗಳಲ್ಲಿ ಮನೆ ಕಟ್ಟುತ್ತಿರುವಾಗ ನಾನು ಅವರಿಗೆ ಏನು ಮಾಡುತಿದ್ದರಿ ಎಂದು ಕೇಳಿದಾಗ ಮಲ್ಲಮ್ಮ ಗಂಡ ಹೊನ್ನಪ್ಪ ನಾಯ್ಕಲ್ ಮತ್ತು ಮಲ್ಲಮ್ಮ ಗಂಡ ಹೊನ್ನಪ್ಪ ಗೌಡಗೇರಾ ಇವರು ನನಗೆ ಮಾದರ ಜಾತಿ ಸೂಳೆ ನೀನು ಇಲ್ಲಿಗೆ ಯಾಕೆ ಬಂದಿದಿಯಾ ಎಂದು ಸೀರೆಯನ್ನು ಎಳೆದು ನನ್ನ ಕೈಯನ್ನು ಹಿಡಿದು ನೆಲಕ್ಕೆ ದಬ್ಬಿದರು ಆಗ ಶಿವಪ್ಪ ತಂದೆ ಹೊನ್ನಪ್ಪ ನಾಯ್ಕಲ್, ಶರಣಪ್ಪ ತಂದೆ ಹೊನ್ನಪ್ಪ ನಾಯ್ಕಲ್, ರವಿ ತಂದೆ ಮಲ್ಲಪ್ಪ ಗಾಡಿ ಇವರು ನನಗೆ ಆ ಮಾದರ ಸೂಳೆಯನ್ನು ಹೊಡೆದು ಸಾಯಿಸಿರಿ ಅವಳನ್ನು ಬಿಟ್ಟರೆ ಕೇಸು ಮಾಡಲು ಹೋಗುತ್ತಾಳೆ ಅಂದವರೆ ಶಿವಪ್ಪ ತಂದೆ ಹೊನ್ನಪ್ಪ ನಾಯ್ಕಲ್ ಇತನು ನನಗೆ  ಕೈಯಿಂದ ಹೊಟ್ಟೆಗೆ ಹೊಡೆದು ಕುತ್ತಿಗೆಯನ್ನು ಹಿಸುಗುತಿದ್ದನು ಆಗ ಶರಣಪ್ಪ ತಂದೆ ಹೊನ್ನಪ್ಪ ನಾಯ್ಕಲ್ ಇತನು ಕಟ್ಟಿಗೆಯನ್ನು ತೆಗೆದುಕೊಂಡು ಬಲಗೈಗೆ ಹೊಡೆದು ರಕ್ತಗಾಯ ಮಾಡಿ ನಿನ್ನನ್ನು ಸಾಯಿಸಿ ಬಿಡುತ್ತೇವೆ ಅಂತಾ ಅಂದರು ಆಗ ನಾನು ಹೋಗುತ್ತಿರುವಾಗ ರವಿ ತಂದೆ ಮಲ್ಲಪ್ಪ ಗಾಡಿ ಈತನು ಲೇ ಮಾದರ ಜಾತಿ ಸೂಳೆ ನಿಂದು ಕಥೆ ಮುಗಿತು ಎನ್ನುತ್ತ ನನ್ನ ಎದೆಗೆ ಗುದ್ದಿ ಬೇವಿನ ಮರದ ಕೆಳಗೆ ಎತ್ತಿ ಹಾಕಿದನು ಆಗ ನನಗೆ ಮೈಗೆ ಪಟ್ಟಾಯಿತು ಆಗ ನನ್ನ ಮಗ ಜಗಳದ ವಿಷಯ ತಿಳಿದು ಶ್ರವಣಕುಮಾರ ಇತನು ಜಾಗಕ್ಕೆ ಬಂದು ರವಿ ತಂದೆ ಮಲ್ಲಪ್ಪ ಗಾಡಿ ಇತನಿಗೆ ನನ್ನ ತಾಯಿಗೆ ಯಾಕೆ ಹೊಡೆಯುತಿದ್ದರಿ ಎಂದು ಕೆಳುತ್ತಿರುವಾಗ ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಗೌಡಗೇರಿ ಈತನು ನನ್ನ ಮಗನಿಗೆ ಈ ಮಾದರ ಸೂಳೆ ಮಗನನ್ನು ಸಾಯಿಸಿರಿ ಅಂತಾ ಬೈಯುತ್ತ ಆತನ ಕುತ್ತಿಗೆಯನ್ನು ಹಿಡಿದು ನೆಲಕ್ಕೆ ದಬ್ಬಿದನು ನೆಲಕ್ಕೆ ಬಿದ್ದಾಗ ಸಿದ್ದಪ್ಪ ತಂದೆ ಹೊನ್ನಪ್ಪ ಗೌಡಗೇರಿ ಈತನು ಕಾಲಿನಿಂದ  ಒದ್ದನು ಆಗ ಕರೆಪ್ಪ ತಂದೆ ಹೊನ್ನಪ್ಪ ಗೌಡಗೇರಿ ಈತನು ನನ್ನ ಮಗನ ಅಂಗಿಯನ್ನು ಹಿಡಿದು ಮೇಲೆಕ್ಕೆ ಎತ್ತಿ ಕಪಾಳಕ್ಕೆ ಹೊಡೆದನು ಆಗ ಬಸ್ಯಾ ತಂದೆ ಕಾಸಗೀರ ಈತನು  ಎಲೇ ಕೀಳು ಜಾತಿ ಸೂಳೆ ಮಗನೆ ಇಲ್ಲಿಗೆ ಯಾಕೆ ಬಂದಿದಿಯಾ ನಿನ್ನನ್ನು ಸಾಯಿಸಿ ಬಿಡುತ್ತೇವೆ ಎಂದು ದೊಡ್ಡಕಲ್ಲನ್ನು ತೆಗೆದುಕೊಂಡು ತಲೆಗೆ ಎಸೆದನು ಆಗ ನನ್ನ ಮಗ  ತಪ್ಪಿಸಿಕೊಂಡೆನು ಆಗ ನಿಂಗಪ್ಪ ತಂದೆ ಆದಪ್ಪ ಎಲೇ ಮಾದಿಗ ನಿನ್ನದು ಬಹಳ ಆಗ್ಯಾದ ಅಂದು ಪಕ್ಕಿಗೆ ಒದ್ದನು ಮತ್ತು  ಕುತ್ತಿಗೆಯನ್ನು ಹಿಡಿದು ದಬ್ಬಿದನು ನಾನು ನನ್ನ ಮಗ ಅಳುತಿದ್ದೆವು ಆಗ ನಿಂಗಪ್ಪ ತಂದೆ ಆದಪ್ಪ ಈತನು ಕೇಸು ಮಾಡಿದರೆ ನಿಮ್ಮ ಇಬ್ಬರನ್ನು ಸಾಯಿಸಿ ಬಿಡುತ್ತೇವೆ ಎಂದು ಅಲ್ಲಿಂದ ಹೋದರು. ಆಗ ನನ್ನ ಮಗ 108 ಅಂಬುಲೆನ್ಸಗೆ ಪೊನ್ ಮಾಡಿದನು ನಂತರ ಅಂಬುಲೆನ್ಸ ಬಂದು ನಮ್ಮನ್ನು ಸರಕಾರಿ ಆಸ್ಪತ್ರೆ ಯಾದಗಿರಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದರು ನಾವು ಆಸ್ಪತ್ರೆಯಲ್ಲಿ ಇರುವಾಗ ಸೈದಾಪೂರ ಪೊಲೀಸರು ಬಂದು ನಮಗೆ ಯಾರಮೇಲಾದರೂ ದೂರು ಕೊಡುತ್ತಿರೆನು ಅಂತಾ ವಿಚಾರಿಸಿದ್ದು ಆಗ ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿಕೊಂಡು ದೂರು ಕೊಡುತ್ತೇನೆ ಅಂತಾ ಹೇಳಿದ್ದೆನು, ಈಗ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ ಕಾರಣ ನಮಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಸಿರೆ ಹಿಡಿದು ಎಳದಾಡಿ ಅವಮಾನ ಮಾಡಿ ಜಾತಿ ನಿಂದನೆ ಮಾಡಿ ಜೀವದ ಬೇದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ತೆಗದುಕೊಳ್ಳಬೇಕಂತ ಪಿಯರ್ಾಧಿ ಇರುತ್ತದ



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 74/2020, ಕಲಂ, 341, 323,354, 355, 504, 506 ಸಂಗಡ 34 ಐ ಪಿ ಸಿ ಇಂದು ದಿನಾಂಕ 07.05.2020 ರಂದು ರಾತ್ರಿ 8.00 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ ಸಾರಂಶವೆನೆಂದರೆ, ಸದ್ಯ ನಾವಿರುವ ಬಳಿಚಕ್ರ ಗ್ರಾಮದಲ್ಲಿನ ಪ್ಲಾಟ್ ಜಾಗವನ್ನು ತಾವು ಖರೀದಿ ಮಾಡಿದ್ದೇವೆ ಅಂತ ನಮ್ಮೂರಿನ ಶ್ರವಣಕುಮಾರ ತಂದೆ ಲಕ್ಷ್ಮಣ ಈತನು ಜಗಳ ತೆಗೆದು, ದಿನಾಂಕ. 01.05.2020 ರಂದು ಮಧ್ಯಾಹ್ನ 12.00 ಗಂಟೆಗೆ ನಾವು ಕಟ್ಟುತ್ತಿದ್ದ ಹೊಸಮನೆಯ ಕಟ್ಟಡದ ಬಾಗಿಲನ್ನು ಮರಿಯಲು ಬಂದಾಗ ನಾವು ಯಾಕೆ ನಮ್ಮೊಂದಿಗೆ ಜಗಳಕ್ಕೆ ಬರುತ್ತೀರಿ ಕೋರ್ಟನಲ್ಲಿ ಜಾಗ ನಮ್ಮಂತೆ ಆಗಿದೆ ಅಂತ ಅಂದಿದ್ದಕ್ಕೆ ನನಗೆ ಶ್ರವಣಕುಮಾರ ಈತನು ಏ ರಂಡೀ, ಸೂಳೇ ನಿಂದು ಸೊಕ್ಕು ಬಹಳ ಇದೆ ಅಂತ ಕೈಹಿಡಿದು ಎಳೆದಾಡಿ ಜೋರಾಗಿ ನೆಲಕ್ಕೆ ಕೆಡವಿ ನನಗೆ ಕಾಲಿನಿಂದ ಒದ್ದು ಅವಮಾನ ಮಾಡಿದನು. ನನಗೆ ಹೊಡೆಯುವದನ್ನು ಬಿಡಿಸಲು ಬಂದ ನನ್ನ ಮಗ ಶರಣಪ್ಪನಿಗೆ ಮರೆಮ್ಮ ಇವಳು ಅಡ್ಡಗಟ್ಟಿ ನಿಂತು ಬಿಗಿಯಾಗಿ ಎದೆಮೇಲಿನ ಅಂಗಿ ಹಿಡಿದುಕೊಂಡಿದ್ದು, ಬನ್ನಮ್ಮ ಇವಳು ಕಾಲಲ್ಲಿಯ ಚಪ್ಪಲಿಯಿಂದ ನನ್ನ ಮಗನ ತಲೆಗೆ ಹೊಡೆದಳು.  ಎಲ್ಲರೂ ಅಲ್ಲಿಂದ ಹೋಗುವಾಗ ಇವತ್ತು ನೀವು ನಮ್ಮ ಕೈಯಲ್ಲಿ ಉಳಿದುಕೊಂಡೀದ್ದಿರಿ ಮತ್ತೊಮ್ಮೆ ಮನೆ ಕಟ್ಟಡ ಮಾಡಲು ಬಂದರೆ ನಿಮ್ಮ ಜೀವ ಸಹಿತ ಉಳಿಸುವದಿಲ್ಲ ಅಂತ ಜೀವಬೆದರಿಕೆ ಹಾಕಿ ಹೋದರು.ಅಂತಾ ಪಿಯರ್ಾದಿ ಇರುತ್ತದೆ.




ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.08/2020 ಕಲಂ: 174 ಸಿ.ಆರ್.ಪಿ.ಸಿ:- ದಿನಾಂಕ 04.05.2020 ರಂದು ಮೃತ ಮತ್ತು ಆತನ ತಮ್ಮ ಅಮೀನರಡ್ಡಿ ಇಬ್ಬರು ಕೂಡಿ ತಮ್ಮ ನಾಗಲಕುಂಟಿ ಹೊಲದಲ್ಲಿ ಟ್ರ್ಯಾಕ್ಟರದಿಂದ ನೇಗಿಲು ಹೊಡೆಯಲು ಹೋಗಿ ನಂತರ ರಾತ್ರಿ 8:00 ಗಂಟೆಯ ಸುಮಾರಿಗೆ ಮರಳಿ ಗಾಜರಕೊಟ್ ಗ್ರಾಮಕ್ಕೆ ಬರುತಿದ್ದಾಗ ಹೊಲದಲ್ಲಿ ಮೃತನ ಬಲಗಾಲಿನ ಕೀಲಿನಲ್ಲಿ ಹಾವು ಕಡಿದಿದ್ದರಿಂದ ಚಿಕಿತ್ಸೆ ಕುರಿತು ಗುರುಮಠಕಲ್ ಸರಕಾರಿ ದವಾಖಾನಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ನಂತರ ಅಲ್ಲಿಯ ವೈದ್ಯರ ಸಲಹೇಯ ಮೇರೆಗೆ ಹೆಚ್ಚಿನ  ಉಪಚಾರಕ್ಕಾಗಿ ರೀಮ್ಸ್ ಆಸ್ಪತ್ರೆ ರಾಯಚೂರಗೆ ಕರೆದುಕೊಂಡ ಹೋಗಿ ಸೇರಿಕೆ  ಮಾಡಿದ್ದು ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 06.05.2020 ರಂದು ರಾತ್ರಿ 11:44 ಗಂಟೆಗೆ ಮೃತಪಟ್ಟಿದ್ದು ಆ ಬಗ್ಗೆ ಫಿರ್ಯಾದಿದಾರಳು ಇಂದು ದಿನಾಂಕ 07.05.2020 ರಂದು ಬೆಳಿಗ್ಗೆ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್. ನಂಬರ 08/2020 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.



ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 59/2020 ಕಲಂ: 188,269,270 ಸಂ 149 ಐಪಿಸಿ:- ಇಂದು ದಿನಾಂಕ: 07/05/2020 ರಂದು 5-15 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಠಾಣೆಗೆ ಬಂದು ಸರಕಾರಿ ತಫರ್ೆಯಿಂದ ಫಿರ್ಯಾಧಿ ಸಲ್ಲಿಸಿದ್ದೇನಂದರೆ ನಿನ್ನೆ ದಿನಾಂಕ: 07/05/2020 ರಂದು 8-15 ಪಿಎಮ್ ಕ್ಕೆ ಮನಗನಾಳ ಗ್ರಾಮದ ಶ್ರೀಮತಿ ಶಾಂತಮ್ಮ ಗಂಡ ಬೂದೆಪ್ಪಗೌಡ ದಳಪತಿ, ವ:75, ಜಾ:ಲಿಂಗಾಯತ, ಉ:ಮನೆಕೆಲಸ ಸಾ:ಮನಗನಾಳ ತಾ:ಶಹಾಪೂರ ಇವರ ಫಿರ್ಯಾಧಿ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 58/2020 ಕಲಂ: 143,147,504,448,324,354,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಾನು ಸಂಗಡ ಪ್ರಕಾಶ ಹೆಚ್.ಸಿ 18 ರವರೊಂದಿಗೆ ಸಾಯಂಕಾಲ 3 ಗಂಟೆ ಸುಮಾರಿಗೆ ಮನಗನಾಳ ಗ್ರಾಮಕ್ಕೆ ಭೇಟಿ ನೀಡಿ ಹೊಸ ಬೀಟ್ ಸದಸ್ಯರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಿದಾಗ ತಿಳಿದುಬಂದಿದ್ದೇನಂದರೆ ಈಗ ನಮ್ಮ ರಾಜ್ಯದಲ್ಲಿ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಭಯಂಕರ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಮಾನ್ಯ ಘನ ಕನರ್ಾಟಕ ಸರಕಾರವು ಸಾರ್ವಜನಿಕ ಸಭೆ ಸಮಾರಂಭಗಳಾದ ಜಾತ್ರೆ, ಸಂತೆ, ಮದುವೆ ಮುಂತಾದವುಗಳನ್ನು ನಿರ್ಬಂಧಿಸಿ ಸಂಪೂರ್ಣ ಲಾಕಡೌನ ಆದೇಶ ಹೊರಡಿಸಿರುತ್ತಾರೆ. ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೂಡಾ ಲಾಕಡೌನ ಮಾಡಿ ಯಾವುದೇ ಜಾತ್ರೆ ಸಮಾರಂಭ ಮಾಡದಂತೆ ಹಾಗೂ ಅನವ್ಯಶಕವಾಗಿ ಜನರು ಒಂದೆಡೆ ಸೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದು ಇರುತ್ತದೆ. ಹೀಗಿದ್ದರು ಕೂಡಾ ಮನಗನಾಳ ಗ್ರಾಮದ ಮೊದಲನೇ ಪಾಟರ್ಿಯವರಾದ ಉಪ್ಪಾರ ಸಮುದಾಯದ 1) ಈಶಪ್ಪ ತಂದೆ ಗಂಗಪ್ಪ ಉಪ್ಪಾರ, 2) ಅಮಾತೆಪ್ಪ ತಂದೆ ಗಂಗಪ್ಪ, 3) ಸುಭಾಶ ತಂದೆ ಶರಣಪ್ಪ, 4) ಸಣ್ಣ ಭೀಮಪ್ಪ ತಂದೆ ಸಣ್ಣ ತಿಮ್ಮಣ್ಣ, 5) ಭದ್ರಪ್ಪ ತಂದೆ ಅಮಲಪ್ಪ, 6) ನಾಗಪ್ಪ ತಂದೆ ಬಾಲಣ್ಣ, 7) ಭೀಮಪ್ಪ ತಂದೆ ಗಂಗಪ್ಪ ಉಪ್ಪಾರ ಇವರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಮನೆಯಿಂದ ಹೊರಗಡೆ ಬಂದು 2 ನೇ ಪಾಟರ್ಿಯ ಅಮರೇಶ ತಂದೆ ಆದೆಪ್ಪಗೌಡ ಸಾ: ಮನಗನಾಳ ಈತನೊಂದಿಗೆ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಮನೆ ಮುಂದಿನಿಂದ ದಾರಿ ಸಂಬಂಧ ಜಗಳ ತೆಗೆದು ಶಾಂತಿಬಾಯಿ ಇವಳೊಂದಿಗೆ ಸೀರೆ ಸೆರಗು ಹಿಡಿದು ಜಗ್ಗಾಡಿ, ಕಟ್ಟಿಗೆ ಮತ್ತು ಕಲ್ಲಿನಿಂದ ಹಲ್ಲೆ ಮಾಡಿ ತೆಲೆ ಹಿಂಭಾಗ ರಕ್ತಗಾಯ ಮಾಡಿದ್ದು, ಬಿಡಿಸಲು ಬಂದ ಮೊಮ್ಮಗ ಅಮರೇಶನಿಗೆ ಕೂಡಾ ಕಟ್ಟಿಗೆ ಮತ್ತು ಕಲ್ಲಿನಿಂದ ಹಲ್ಲೆ ಮಾಡಿರುತ್ತಾರೆ. ಅದೇ ರೀತಿಯಾಗಿ 2 ನೇ ಪಾಟರ್ಿಯ ಈತನು ಅಮರೇಶ ತಂದೆ ಆದೆಪ್ಪಗೌಡ ಕೂಡಾ ಮನೆಯಿಂದ ಹೊರಗಡೆ ಬಂದು ಜಗಳ ಮಾಡಿಕೊಂಡು ಸರಕಾರದ ಲಾಕಡೌನ ಆದೇಶ ಉಲ್ಲೇಂಘನೆ ಮಾಡಿರುತ್ತಾರೆ. ಕಾರಣ ಎಲ್ಲರೂ ಒಂದು ಕಡೆ ಸೇರಿದರೆ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಸಾಂಕ್ರಾಮಿಕ ರೋಗ ಹರಡುತ್ತದೆ ಅಂತಾ ಗೊತ್ತಿದ್ದರು, ಕೂಡಾ ಉದ್ದೇಶ ಪೂರ್ವಕವಾಗಿ ಒಂದು ಕಡೆ ಸೇರಿ ಜಗಳ ಮಾಡಿ ಸದರಿ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅಪಾಯಕಾರಿ ಸೊಂಕು ಹರಡುವ ನಿರ್ಲಕ್ಷತನವನ್ನು ತೋರಿಸಿರುತ್ತಾರೆ. ಕಾರಣ ಸದರಿಯವರು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅಪಾಯಕಾರಿ ಸೊಂಕು ಹರಡುವ ನಿರ್ಲಕ್ಷತನವನ್ನು ತೋರಿಸಿರುವುದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಮೂಲಕ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 59/2020 ಕಲಂ: 188,269,270 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.




ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 60/2020 ಕಲಂ: 279,337,338 ಐಪಿಸಿ:- ಇಂದು ದಿನಾಂಕ: 07/05/2020 ರಂದು 7-15 ಪಿಎಮ್ ಕ್ಕೆ ಶ್ರೀಮತಿ ಮಮ್ತಾಜ ಗಂಡ ಮೌಲಾಸಾಬ ಮುಲ್ಲಾನೋರ ಸಾ:ತುಮಕೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ದೂರು ಕೊಟ್ಟಿದ್ದರ ಸಾರಾಂಶವೇನಂದರೆ ನಾನು ಗಭರ್ೀಣಿ ಇರುತ್ತೇನೆ. ಹೀಗಿದ್ದು ದಿನಾಂಕ: 06/05/2020 ರಂದು ರಾತ್ರಿ 1 ಗಂಟೆ ಸುಮಾರಿಗೆ ನನಗೆ ಸ್ವಲ್ಪ ಹೊಟ್ಟೆನೋವು ಆಗಲಾರಂಭಿಸಿದ್ದರಿಂದ ನಮ್ಮ ತಾಯಿ ಅಬ್ದುಲ್ ಬೀ ಗಂಡ ಅಬ್ದುಲಸಾಬ ಮತ್ತು ನಮ್ಮ ಬಾಜುದವರಾದ ಗೌರಮ್ಮ ಗಂಡ ಸೈದಪ್ಪ ಕಂಟೆಕಾಯಿ ಇಬ್ಬರೂ ಕೂಡಿ ನನಗೆ ವಡಗೇರಾ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರೋಣ ಎಂದು ನಮ್ಮೂರ ಖದೀರ ತಂದೆ ಮಹಿಬೂಬ ಆಲಂ ಈತನ ಕಾರ ನಂ. ಕೆಎ 33 ಎಮ್ 7381 ನೇದ್ದರಲ್ಲಿ ಕರೆದುಕೊಂಡು ವಡಗೇರಾಕ್ಕೆ ಬಂದು ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿದರು. ತೋರಿಸಿಕೊಂಡ ನಂತರ ಅದೇ ಕಾರಿನಲ್ಲಿ ಮರಳಿ ಊರಿಗೆ ಹೊರಟೇವು. ಸದರಿ ಕಾರನ್ನು ಖದೀರ ಈತನು ಚಲಾಯಿಸುತ್ತಿದ್ದು, ವಡಗೇರಾ-ತುಮಕೂರು ಮೇನ ರೋಡ ಮೊರಾಜರ್ಿ ವಸತಿ ಶಾಲೆ ಹತ್ತಿರ ಹೋಗುತ್ತಿದ್ದಾಗ ರಾತ್ರಿ 2-30 ಗಂಟೆ ಸುಮಾರಿಗೆ ಕಾರಿನ ಚಾಲಕ ಖದೀರ ಈತನು ಕಾರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ, ಒಮ್ಮಲೇ ಎಡಕ್ಕೆ ಕಟ್ ಹೊಡೆದಿದ್ದರಿಂದ ಕಾರ ಅವನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದುಬಿಟ್ಟಿತ್ತು. ಅಪಘಾತದಲ್ಲಿ ನನ್ನ ಹಣೆ ಮತ್ತು ಮೂಗಿ ರಕ್ತ ಹಾಗೂ ಗುಪ್ತ ಗಾಯಗಳಾಗಿದ್ದವು. ನನ್ನ ತಾಯಿಗೆ ನೋಡಲಾಗಿ ಹಣೆಗೆ, ಎದೆಗೆ ಬೆನ್ನಿಗೆ ಒಳಪೆಟ್ಟಾಗಿದ್ದು, ಎಡಕಾಲಿಗೆ ಭಾರಿ ಗುಪ್ತಗಾಯವಾಗಿತ್ತು. ಗಂಗಮ್ಮ ಇವಳಿಗೆ ಎಡಗಡೆ ಹಣೆಗೆ ರಕ್ತಗಾಯ ಮತ್ತು ಎಡ ಗಲ್ಲಕ್ಕೆ ಒಳಪೆಟ್ಟಾಗಿತ್ತು. ನಾವು ಅಲ್ಲಿಂದ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ, ಕಾರಣ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆಯ ಪೊಲೀಸರು ಎಮ್.ಎಲ್.ಸಿ ವಿಚಾರಣೆಗೆ ಬಂದಾಗ ನಾವು ನಮ್ಮ ಹಿರಿಯರಿಗೆ ವಿಚಾರ ಮಾಡಿ ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಬಂದು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರಣೆ ಮಾಡಿದ್ದು, ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿರಿ ಎಂದು ಹೇಳಿದ್ದರಿಂದ ಇಂದು ದಿನಾಂಕ:07/05/2020 ರಂದು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೆವೆ. ಕಾರಣ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ, ಪಲ್ಟಿ ಮಾಡಿ ನಮಗೆ ಭಾರಿ ಮತ್ತು ಸಾದಾಗಾಯಪಡಿಸಿರುವ ಖದೀರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 60/2020 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.




ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 62/2020 ಕಲಂ, 87 ಕೆ.ಪಿ ಆ್ಯಕ್ಟ್:- ಇಂದು ದಿನಾಂಕ 07/05/2020 ರಂದು 11.50 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಬಂದು, ಜಪ್ತಿ ಪಂಚನಾಮೆ, ಆರೋಪಿತರು ಮತ್ತು ಮುದ್ದೇಮಾಲು ಹಾಜರ ಪಡಿಸಿ ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ  ಚಂದಾಪೂರ ಕೆಳಗಿನ ತಾಂಡಾದ ರೋಡಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 04 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 26370=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 10.10 ಪಿಎಮ್ ದಿಂದ 11.10 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 11.50 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 62/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 131/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ: 07/05/2020 ರಂದು 8:30 ಪಿ.ಎಮ್. ಕ್ಕೆ ನಾನು ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸು-1) ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು 13 ಜನ ಆರೋಪಿತರೊಂದಿಗೆ ಠಾಣೆಗೆ ಬಂದು, ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ಸಾರಾಂಶವೆನಂದರೆ ಇಂದು ದಿನಾಂಕ:07/05/2020 ರಂದು 4 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಪುರ ಸಿಮಾಂತರದ ನಾಗಪ್ಪ ದಿಕ್ಕಾರ ಇವರ ಹೊಲದ ಹತ್ತಿರ ದುರ್ಗಮ್ಮ ದೇವಿ ಕಟ್ಟೆಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವುಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೊಹರ ಹೆಚ್ಸಿ-105 3) ಶ್ರೀ ನಿಂಗಪ್ಪ ಹೆಚ್ಸಿ-118 4) ಶ್ರೀ ಶರಣಗೌಡ ಸಿಪಿಸಿ-218 5) ಶ್ರೀ ಪರಮೇಶ ಸಿಪಿಸಿ-142 6) ದೇವಿಂದ್ರಪ್ಪ ಸಿಪಿಸಿ-184 7) ಶ್ರೀ ಮಂಜುನಾಥ ಸಿಪಿಸಿ-271 8) ಜಗದಿಶ ಸಿಪಿಸಿ-335 9) ಶ್ರೀ ಬಸಪ್ಪ ಸಿಪಿಸಿ-393 10) ಶ್ರೀ ದಯಾನಂದ ಸಿಪಿಸಿ-337 11) ಶ್ರೀ ಮಾನಯ್ಯ ಸಿಪಿಸಿ-372 12) ಶ್ರೀ ಮಲ್ಲಯ್ಯ ಸಿಪಿಸಿ-51 13) ಶ್ರೀ ರವಿಕುಮಾರ-376 14) ಶರಣಪ್ಪ ಸಿಪಿಸಿ-224 ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಭೀಮನಗೌಡ ತಂದೆ ಬಸನಗೌಡ ಪೊಲೀಸ್ ಪಾಟೀಲ್ ವ|| 36 ವರ್ಷ ಜಾ|| ಬೆಡರು ಉ|| ಒಕ್ಕಲುತನ ಸಾ|| ಲಿಂಗದಳ್ಳಿ ಎಸ್.ಕೆ 2) ಶ್ರೀ ಲಕ್ಷ್ಮಣ ತಂದೆ ಸಂಜೀವಪ್ಪ ನವದಗಿ ವ|| 35 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ದೇವತ್ಕಲ್ ಇವರನ್ನು 5 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5:15 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿ ಠಾಣೆಯಿಂದ ಹೊರಟು 5:55 ಪಿ.ಎಂ ಕ್ಕೆ ಶಾಂತಪುರ ಸಿಮಾಂತರದ ನಾಗಪ್ಪ ದಿಕ್ಕರ ಇವರ ಹೊಲದ ದುರ್ಗಮ್ಮ ದೇವಿ ಕಟ್ಟೆಯ ಹತ್ತಿರ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ದುರ್ಗಮ್ಮದೇವಿ ಕಟ್ಟೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 6 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 13 ಜನರು ಸಿಕ್ಕಿದ್ದು ಅವರ ಅವರ ಹೆಸರು, ವಿಳಾಸ ವಿಚಾರಿಸಿದ್ದು 1) ಮಲ್ಲಪ್ಪ ತಂದೆ ನಿಂಗಪ್ಪ ಮೇಟಿ ವ|| 38 ವರ್ಷ ಜಾ|| ಕುರುಬ ಉ|| ಒಕ್ಕಲುತನ ಸಾ|| ಹಳ್ಳಿ ತಾ|| ಹೂಣಸಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 2500/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಹಂಪಣ್ಣ ತಂದೆ ಈರಣ್ಣ ಅಂಗಡಿ ವ|| 40 ವರ್ಷ ಜಾ|| ಲಿಂಗಾಯತ ಉ|| ಕಿರಾಣಿ ವ್ಯಾಪಾರ ಸಾ|| ತಿಂಥಣಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1500/- ರೂಗಳು ವಶಪಡಿಸಿಕೊಳ್ಳಲಾಯಿತು. 3) ವೆಂಕಟೇಶ ತಂದೆ ಬಸವಂತ್ರಾಯ ಕರಡಿಗುಡ್ಡ ವ|| 39 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ದೇವತ್ಕಲ್ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 4000/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಹಸೇನ್ ಪಟೇಲ್ ತಂದೆ ಹುಸೇನ್ ಸಾಬ ಮುಲ್ಲಾ ವ|| 38 ವರ್ಷ ಜಾ|| ಮುಸ್ಲಿಂ ಉ|| ಟೇಲರ್ ಸಾ|| ಲಿಂಗದಳ್ಳಿ ಎಸ್.ಕೆ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 3500/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಹಣಮಂತ್ರಾಯ ತಂದೆ ಭೀಮರಾಯ ಭೊವೇರ ವ|| 52 ವರ್ಷ ಜಾ|| ಕುರಬ ಉ|| ಒಕ್ಕಲುತನ ಸಾ|| ಹೂಣಸಿಹೋಳೆ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 4500/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಸೋಮಣ್ಣ ತಂದೆ ಹಣಮಂತ ಗೊಂವಿದರ ವ|| 53 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕಕ್ಕೆರಾ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 2000/- ರೂಗಳು ವಶಪಡಿಸಿಕೊಳ್ಳಲಾಯಿತು. 7) ರಂಜಾನ್ ತಂದೆ ರಹೆಮಾನ ದಖನಿ ವ|| 45 ವರ್ಷ ಜಾ|| ಮುಸ್ಲಿಂ ಉ|| ಹೊಟೇಲ್ ವ್ಯಾಪಾರ ಸಾ|| ಕಕ್ಕೆರಾ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 5500/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಮಾನಪ್ಪ ತಂದೆ ಹಣಮಂತ ದಿವಾನ ವ|| 45 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಹುಣಸಿಹೊಳೆ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1500/- ರೂಗಳು ವಶಪಡಿಸಿಕೊಳ್ಳಲಾಯಿತು. 9) ಮಹೇಶ ತಂದೆ ಮಾಹಂತೇಶ ಹುಗಾರ ವ|| 32 ವರ್ಷ ಜಾ|| ಹುಗಾರ ಉ|| ವ್ಯಾಪಾರ ಸಾ|| ಶಾಂತಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 2000/- ರೂಗಳು ವಶಪಡಿಸಿಕೊಳ್ಳಲಾಯಿತು. 10) ಈರಣ್ಣ ತಂದೆ ಬಸಣ್ಣ ಕುಂಬಾರ ವ|| 50 ವರ್ಷ ಜಾ|| ಕುಂಬಾರ ಉ||ವ್ಯಾಪಾರ ಸಾ|| ಕಕ್ಕೆರಾ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 3000/- ರೂಗಳು ವಶಪಡಿಸಿಕೊಳ್ಳಲಾಯಿತು. 11) ಸೋಮಣ್ಣ ತಂದೆ ನಂದಣ್ಣ ಪುಜಾರಿ ವ|| 40 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಕಕ್ಕೆರಾ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 2500/- ರೂಗಳು ವಶಪಡಿಸಿಕೊಳ್ಳಲಾಯಿತು. 12) ಮಲ್ಕಪ್ಪ ತಂದೆ ಹುಲಗಪ್ಪ ಹುಡೆದಾರ ವ|| 43 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಲಿಂಗದಳ್ಳಿ ಎಸ್.ಕೆ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 2000/- ರೂಗಳು ವಶಪಡಿಸಿಕೊಳ್ಳಲಾಯಿತು. 13) ಇಮಾಮಸಾಬ ತಂದೆ ದವಲಸಾನ ಹವಲ್ದಾರ ವ|| 60 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ತಿಂಥಣಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1500/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 26,120/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 62,120/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 6  ಪಿ.ಎಮ್ ದಿಂದ 7 ಪಿ.ಎಮ್ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದು ಇರುತ್ತದೆ. ನಂತರ 13 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ರಾತ್ರಿ 7:40 ಗಂಟೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!